Arigeaarilla Apatkaladolage keerthane explanation. ಆರಿಗಾರಿಲ್ಲ‌ ಆಪತ್ಕಾಲದೊಳಗೆ ಕೀರ್ತನೆಯ ವಿಶ್ಲೇಷಣೆ

ಮನುಷ್ಯನು ತನ್ನ ಲೌಕಿಕ ಬದುಕಿಗಾಗಿ ಹಲವಾರು ಜಂಜಾಟಗಳಿಗೆ ಒಳಗಾಗುತ್ತಾನೆ ಇಂತಹ ಸಂದರ್ಭದಲ್ಲಿ ಯಾವ ಸಂಬಂಧಿಕರು ಆತ್ಮೀಯರು ಸ್ನೇಹಿತರು ಯಾರೂ ಕೂಡ ನಮ್ಮ ಜಂಜಾಟಗಳು ಸಂಕಷ್ಟಗಳಿಗೆ ಬೆಂಬಲವಾಗಿ ನಿಲ್ಲುವುದಿಲ್ಲ ಅಂತಹ ಸಂದರ್ಭದಲ್ಲಿ ದೇವರು ಅಥವಾ ವಿಷ್ಣುವನ್ನ ನೆನೆಯಬೇಕೆಂದು ಕೀರ್ತನಾಕಾರರಾದ ಕನಕದಾಸರು ಈ ಕೀರ್ತನೆಯಲ್ಲಿ ಹೇಳಿದ್ದಾರೆ.

ಯಾರಿಗೆ ಯಾರು ನಮ್ಮ ಸಂಕಷ್ಟ ಕಷ್ಟದ ಸಮಯದಲ್ಲಿ ಆಗುವುದಿಲ್ಲ ಅಂತಹ ಸಮಯದಲ್ಲಿ ವಿಷ್ಣುವಿನ ನಾಮವನ್ನು ಮನದಲ್ಲಿ ನೆನೆದರೆ ನಮ್ಮ ಆಪತ್ಕಾಲಕಾಗುತ್ತಾನೆ.

ನಾವು ಆಹಾರ ಸೇವಿಸದೆ ಹಸಿವಿನಿಂದ ನರಳುತ್ತಿರುವಾಗ ನಮ್ಮ ಶತ್ರು ಅಥವಾ ನಮ್ಮ ವೈರಿ ಎದುರಿಗೆ ಬಂದಾಗ ಮನಸ್ಸಿನಲ್ಲಿ ಉಂಟಾಗುವ ಗೊಂದಲಗಳಿಂದ ದಿಕ್ಕೆ ತೋಚದಂತಾದಾಗ, ದೇಹದಲ್ಲಿ ತೀವ್ರವಾಗಿ ಬಾಧಿಸಿರುವ ರೋಗವಿರುವಾಗ ಇತರರಿಗಿಂತ ಬೇರೆಯವರ ಮುಂದೆ ನಾವು ಕೀಳು ಎಂದು ಅನಿಸಿದಾಗ ಯಾವುದೇ ವಿಚಾರ ವಿಷಯಕ್ಕೆ ಅತಿಯಾಗಿರುವ ಭಯಕ್ಕೆ ಒಳಗಾದಾಗ ತಾವರೆ ಹೂವನ್ನು ಒಕ್ಕಳಲ್ಲಿ ಹೊಂದಿರುವವನ ನಾಮವನ್ನು ಮನದಲ್ಲಿ ನೆನೆಸಿಕೊಂಡರೆ ಆಪತ್ತೆಲ್ಲವೂ ದೂರಾಗುತ್ತದೆ.

ಸಾಲವನ್ನು ಮಾಡಿ ಸಾಲ ತೀರಿಸದೇ ಆಗದಿದ್ದಾಗ ಸಾಲದವರು ಬಂದು ನಮ್ಮನ್ನು ಹೀಯಾಳಿಸುವಾಗ ಬೇರೆಯವರ ಮಾತನ್ನು ಕೇಳಿ ಕೋಪವನ್ನು ಹೊರ ಹಾಕುವ ರಾಜನಿದ್ದಾಗ ಸಜ್ಜನ ಒಳ್ಳೆಯ ವ್ಯಕ್ತಿತ್ವ ಹೊಂದಿರುವವನಿಗೆ ತನಗೆ ಅರಿಯದೆಯೇ ಬೇರೆಯವರಿಂದ ದೂಷಣಗೆ ಒಳಗಾಗಿದ್ದಾಗ ಅಂತಹ ಸಂದರ್ಭದಲ್ಲಿ ವಿಷ್ಣುವಿನ ನಾಮವನ್ನು ಮನದಲ್ಲಿ ನೆನೆದರೆ ಇಂತಹ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

ಯಾವುದಾದರೂ ಸ್ಪರ್ಧೆಯಲ್ಲಿ ಭಾಗಿಯಾಗಿರುವಾಗ ನಮಗೆ ಸಿಕ್ಕ ಬೇಕಾಗಿದ್ದ ಗೌರವಗಳು ಸ್ಥಾನಮಾನ ಅಧಿಕಾರ ಪದವಿಗಳು ದೊರೆಯದಿದ್ದಾಗ ಮದವೇರಿದ ಆನೆಯು ನಮ್ಮನ್ನು ಅಟ್ಟಿಸಿಕೊಂಡು ಬರುವಾಗ ಮನ್ಮಥನ ತಂದೆಯಾದ ಮಹಾವಿಷ್ಣು ಕಾಗಿನೆಲೆ ಆದಿ ಕೇಶವನನ್ನು ನಿನ್ನ ಮನದಲ್ಲಿ ನೆನೆದರೆ ಸಾಕು ಎಲ್ಲಾ ಸಮಸ್ಯೆ ಸಂಕಷ್ಟಗಳು ನಿನ್ನಿಂದ ದೂರ ಆಗುತ್ತದೆ ಎಂಬುದನ್ನು ತಿಳಿಸುತ್ತದೆ.

ಮೇಲಿನ ಕೀರ್ತನೆಯು ಯಾವ ಸಂದರ್ಭದಲ್ಲಿ ನಮಗೆ ಯಾರು ಆಗುವುದಿಲ್ಲವೋ‌ ಅಂತಹ ಸಂದರ್ಭದಲ್ಲಿ ನಮ್ಮನ್ನು ಕಾಯುವ ಮಹಾಶಕ್ತಿಯೊಂದಿರುತ್ತದೆ ಅದರಿಂದ ನಮ್ಮ ಸಂಕಷ್ಟಗಳು ದೂರಾಗಬೇಕಾಗದರೆ ಅವರನ್ನು ನೆನೆಯಬೇಕು ಎಂದು ಹೇಳಿದ

Leave a Comment

Your email address will not be published. Required fields are marked *

Scroll to Top