ಕನ್ನಡ ವ್ಯಾಕರಣ #Kannada Vyakarana

Kannada Vyakarana
Kannada Vyakarana

Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ‌.ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. 

ಭಾಷೆ

ಇಬ್ಬರು ವ್ಯಕ್ತಿಗಳು ಸಂವಹನ ನಡೆಸಲು ಅಥವಾ ಮಾಹಿತಿ ಹಂಚಿಕೊಳ್ಳಲು ಬಳಸುವ ಮಾಧ್ಯಮವೇ ಭಾಷೆ. ಈ ಭಾಷೆಯು ವ್ಯಾಕರಣ ಮತ್ತು ಶಬ್ದಕೋಶಗಳನ್ನು ಹೊಂದಿರುವ ಒಂದು ರಚನಾತ್ಮಕ ವ್ಯವಸ್ಥೆಯಾಗಿದೆ. ಇದರೊಂದಿಗೆ ಮಾತನಾಡಲು ಮತ್ತು ಬರೆಯಲು ಬಳಸುವ ಪ್ರಾಥಮಿಕ ಸಾಧನವಾಗಿ ಭಾಷೆ ಕಂಡುಬರುತ್ತದೆ. ಭಾಷೆ ಯಾಧೃಚ್ಛಿಕ ಧ್ವನಿ ಸಂಕೇತಗಳಿಂದ ಕೂಡಿರುವುದಾಗಿದೆ. ಭಾಷೆ ಎಂಬುದು ಒಂದು ದೇಶ, ರಾಜ್ಯ, ಜಿಲ್ಲೆ, ಸಂಸ್ಕ್ರತಿ, ಸಾಂಸ್ಕ್ರತಿಕತೆಯ ಪ್ರತಿನಿಧಿಯಾಗಿರುತ್ತದೆ. ಇಲ್ಲಿ ಭಾಷೆಗಳು ಲಿಪಿಯನ್ನು ಹೊಂದಿರುವ ಭಾಷೆಗಳು ಇವೆ, ಲಿಪಿಯನ್ನು ಹೊಂದಿಲ್ಲದಿರುವ ಭಾಷೆಗಳು ಇವೆ.

ಕನ್ನಡ 

ಇದೊಂದು ಭಾಷೆಯಾಗಿದ್ದು, ಕರ್ನಾಟಕದಲ್ಲಿ ಈ ಭಾಷೆಯನ್ನು ಮಾತನಾಡುವ ಜನರು  ಇದ್ದಾರೆ. ಕನ್ನಡಕ್ಕೆ ಸರಿಸುಮಾರು 2000 ವರ್ಷಗಳ ಸುದೀರ್ಘವಾದ ಇತಿಹಾಸವನ್ನು ಹೊಂದಿದೆ. ಹಾಗೆಯೇ ಲಿಪಿಯನ್ನು ಹೊಂದಿರುವ ಭಾಷೆಯಲ್ಲಿ ಇದು ಕೂಡ ಒಂದು ಹಾಗೆಯೇ ಶ್ರೀಮಂತಿಕೆಯನ್ನು ಹೊಂದಿರುವ ಭಾಷೆಯೂ ಆಗಿದೆ. ಕನ್ನಡ ಭಾಷೆಯು ದ್ರಾವಿಡ ಭಾಷಾ ಗುಂಪಿನಲ್ಲಿ ಬರುತ್ತದೆ. ಜೊತೆಗೆ ಭಾರತ ಸಂವಿದಾನದ ಅನುಸೂಚಿ 8ರಲ್ಲಿಯೂ ಬರುವುದರ ಜೊತೆಗೆ ಕರ್ನಾಟಕ ರಾಜ್ಯದ ರಾಜ್ಯ ಭಾಷೆಯಾಗಿ ಮತ್ತು ಪ್ರಮಾಣೀಕೃತ ಭಾಷೆಯಾಗಿದೆ.

ವ್ಯಾಕರಣ  Kannada Vyakarana

ಯಾವುದೇ ಒಂದು ಲಿಪಿ ಹೊಂದಿದ ಭಾಷೆ ಸರಿಯಾದ ಕ್ರಮದಲ್ಲಿದೆ, ಬಳಕೆಯಲ್ಲಿದೆ ಎಂಬುದನ್ನು ಆ ಭಾಷೆಯ ವ್ಯಾಕರಣದ ಮೂಲಕ ತಿಳಿಯುತ್ತೇವೆ. ಹಾಗೆಯೇ ಇಲ್ಲಿ ವ್ಯಾಕರಣ ಎಂದರೇನು? ಎಂಬ ಪ್ರಶ್ನೆ ನಮ್ಮ ಎದುರಿಗೆ ಬರುತ್ತದೆ. ಹಾಗೆಂದರೆ ಒಂದು ಭಾಷೆಯನ್ನು ಸರಿಯಾದ ವಿಧಾನದಲ್ಲಿ ಬಳಸಲು, ಬರೆಯಲು, ಮಾತನಾಡಲು, ಸಾರ್ವತ್ರಿಕಗೊಳಿಸಲು ಇರುವ ಮಾರ್ಗದರ್ಶಿಯೇ ವ್ಯಾಕರಣ.

 ಮೊದಲು ವ್ಯಾಕರಣ ಎಂಬುದು 6 ವೇದಾಂಗಗಳಲ್ಲಿ ಇದು ಕೂಡ ಒಂದು. ನಮಗೆ ವ್ಯಾರಕಣಕ್ಕೆ ಸಂಬಂಧಿಸಿದಂತೆ ಲಭ್ಯವಾಗಿರುವ ಗ್ರಂಥ ಪಾಣಿನಿಯ ಅಷ್ಟಧ್ಯಾಯಿನಿ*. ಇದಕ್ಕೂ ಮೊದಲು ವ್ಯಾಕರಣಕ್ಕೆ ಸಂಬಂದಿಸಿದ ಗ್ರಂಥಗಳಾವುವು ಇರಲಿಲ್ಲವೇ ಎಂಬ ವಿಷಯಕ್ಕೆ ಸಂಬಂಧಿಸೆದಂತೆ ನೋಡಿದರೆ ಐಂದ್ರ, ಸಾಕತಾಯಣ, ಎಪಿಸಾಲಿ, ಸೌಕಲ್ಯ, ಯಾಸ್ಕ, ನಿರುಕ್ತ ಇವರುಗಳ ಉಲ್ಲೇಖವಿದೆ. ಆದರೆ ಇವರ ಬಗೆಗಿನ ದಾಖಲೆಗಳು ಲಭ್ಯವಿಲ್ಲದ್ದರಿಂದ ನಮಗೆ ಪಾಣಿನಿಯೇ ಮೊದಲು ಸಂಸ್ಕ್ರತದ ಮೂಲಕ ಕಾಣಿಸಿಕೊಳ್ಳುತ್ತಾನೆ. ಕನ್ನಡದಲ್ಲಿ ವ್ಯಾಕರಣ ಎಂದಾಗ ನೆನಪಾಗುವ ಕೃತಿ ಕೇಶಿರಾಜನ ಶಬ್ದಮಣಿದರ್ಪಣ. ಹಾಗೆಯೇ ಕನ್ನಡ ವ್ಯಾಕರಣವು ಇದೇ ಕೃತಿಯನ್ನು ಆಧರಿಸಿದೆ. ಇದಲ್ಲದೆ ಮತ್ತಿತರ ಕೃತಿಗಳು ವ್ಯಾಕರಣದ ಬಗೆಗೆ ಮಾತನಾಡುತ್ತವೆ. 9ನೇ ಶತಮಾನದಲ್ಲಿ ಕವಿರಾಜಮಾರ್ಗ, ೨ನೇ ನಾಗವರ್ಮನ – ಕಾವ್ಯಾವಲೋಕನ ಮತ್ತು ಕರ್ನಾಟಕ ಭಾಷಾಭೂಷಣಗಳಲ್ಲಿ ವ್ಯಾಕರಣದ ಉಲ್ಲೇಖವಿದೆ‌.

See this : https://amzn.to/3TGqMzR

ಭಾಷೆಯಲ್ಲಿ 2 ರೂಪಗಳಿವೆ

1. ಶ್ರಾವಣ – ಎಂದರೆ ಧ್ವನಿಯ ಮೂಲಕ ಕಿವಿಗೆ ಕೇಳಿಸುವುದು ಅಂದರೆ ಮಾತಿನ ಮೂಲಕ ಕೇಳುದುದಾಗಿದೆ.

2. ಚಾಕ್ಷುಷ – ಬರಹದ ರೂಪದಲ್ಲಿರುವುದು. ಹೀಗಿರುವುದರಿಂದ ಕನ್ನಡ ಲಿಪಿಯನ್ನು ತಿಳಿಯಬೇಕಾದರೆ ಲಿಪಿಯಲ್ಲಿರುವ ವರ್ಣ ಅಥವಾ ಅಕ್ಷರಗಳನ್ನು ತಿಳಿಯಬೇಕಿದೆ.

ವರ್ಣ/ಅಕ್ಷರಮಾಲೆ

ಅಕ್ಷರ ಎಂದರೆ ಒಂದು ಭಾಷೆಯನ್ನು ಬರೆಯುವಾಗ ಉಪಯೋಗಿಸುವ ಅಕ್ಷರಗಳ ಸರಣಿಯೇ ಅಕ್ಷರಮಾಲೆ. ಭಾರತದಲ್ಲಿ ದೇವನಾಗರಿ ಲಿಪಿಯ ಅಕ್ಷರಮಾಲೆಯೇ ಅತ್ಯಂತ ಹಳೆಯದು. ಕನ್ನಡದಲ್ಲಿ ಕೇಶಿರಾಜ ಅಕ್ಷರಗಳನ್ನು ಶುದ್ಧಗೆ ಎಂದು ಕರೆದಿದ್ದಾನೆ. 

ಕನ್ನಡ ಅಕ್ಷರಮಾಲೆ

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ

ಕನ್ನಡ ವರ್ಣಮಾಲೆಯ ವಿಧಗಳು 

1. ಸ್ವರಗಳು

2. ವ್ಯಂಜನಗಳು

3. ಯೋಗವಾಹಕಗಳು

ಸ್ವರಗಳು

ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳೆಂದು ಕರೆಯುವರು. ಅವು – 

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಸ್ವರಗಳ ವಿಧಗಳು 

1. ಹ್ರಸ್ವಸ್ವರ – ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹ್ರಸ್ವಸ್ವರಗಳೆನ್ನುವರು. ಅವು – ಅ ಇ ಉ ಋ ಎ ಒ. ಒಟ್ಟು 6 ಅಕ್ಷರಗಳನ್ನು ಹೊಂದಿದೆ. 

2. ದೀರ್ಘಸ್ವರ – ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ದೀರ್ಘಸ್ವರಗಳೆನ್ನುವರು. ಅವು – ಆ ಈ ಊ ಏ ಐ ಓ ಔ.  ಒಟ್ಟು 7 ಅಕ್ಷರಗಳಿವೆ. 

ಸಂಧ್ಯಾಕ್ಷರಗಳು

ಇಲ್ಲಿ ಐ ಮತ್ತು ಔ ಗಳನ್ನು ಸಂಧ್ಯಾಕ್ಷರ ಎಂದು ಕರೆಯಲಾಗುತ್ತದೆ. ಏಕೆಂದರೆ 

ಐ = ಅ+ಎ ಅಕ್ಷರಗಳ ಸಂಧಿಕಾರ್ಯದಿಂದಾಗಿದೆ. 

ಔ = ಅ+ಒ ಅಕ್ಷರಗಳ ಸಂಧಿಕಾರ್ಯದಿಂದಾಗಿದೆ.

ಪ್ಲುತಾಕ್ಷರಗಳು

ಎರಡು ಮಾತ್ರೆಗಿಂತ ಹೆಚ್ಚು ಕಾಲದಲ್ಲಿ ಉಚ್ಛರಿಸುವ ಅಕ್ಷರಗಳಾಗಿವೆ. ಉದಾಹರಣೆಗೆ ರಾಮಾss

ವ್ಯಂಜನಾಕ್ಷರಗಳು 

ಸ್ವರಗಳ ಸಹಾಯದಿಂದ ಮಾತ್ರ ಉಚ್ಛರಿಸಲ್ಪಡುವ ಅರ್ಧ ಅಕ್ಷರಗಳಿಗೆ ವ್ಯಂಜನಾಕ್ಷರಗಳೆನ್ನುವರು. ಅವು 

ಕ್ ಖ್ ಗ್ ಘ್ ಙ್

ಚ್ ಛ್ ಜ್ ಝ್ ಞ್

ಟ್ ಠ್ ಡ್ ಢ್ ಣ್

ತ್ ಥ್ ದ್ ಧ್ ನ್

ಪ್ ಫ್ ಬ್ ಭ್ ಮ್ 

ಯ್ ರ್ ಲ್ ವ್ ಶ್ ಷ್ ಸ್ ಹ್ ಳ್

ಇದರಲ್ಲಿ 2 ವಿಧ

1. ವರ್ಗೀಯ ವ್ಯಂಜನಗಳು

2. ಅವರ್ಗೀಯ ವ್ಯಂಜನಗಳು 

ವರ್ಗೀಯ ವ್ಯಂಜನಗಳು

ಐದೈದು ಅಕ್ಷರಗಳಂತೆ ಜೋಡಿಸಲ್ಪಟ್ಟಿರುವ ಅಕ್ಷರಗಳನ್ನು ವರ್ಗೀಯ ವ್ಯಂಜನಗಳೆನ್ನುವರು. ಇವನ್ನು ವರ್ಗಾಕ್ಷರಗಳು ಎಂದು ಕರೆಯಲಾಗುತ್ತದೆ. ವರ್ಗಾಕ್ಷರಗಳೆಂದರೆ – ಪ್ರತಿ ವರ್ಗದ ಅಕ್ಷರಗಳು ಬಾಯಲ್ಲಿ ಹುಟ್ಟುವ ಸ್ಥಳಗಳನ್ನು ಆಧಾರಿಸಿ ವಿಶಿಷ್ಟವಾದ ಹೆಸರಿನಿಂದ ಕರೆಯಲಾಗುತ್ತದೆ.  ಇಲ್ಲಿ 25 ಅಕ್ಷರಗಳಿಂದ ಕೂಡಿದೆ. ಅವು

ಕ್ ಖ್ ಗ್ ಘ್ ಙ್

ಚ್ ಛ್ ಜ್ ಝ್ ಞ್

ಟ್ ಠ್ ಡ್ ಢ್ ಣ್

ತ್ ಥ್ ದ್ ಧ್ ನ್

ಪ್ ಫ್ ಬ್ ಭ್ ಮ್ 

ವರ್ಗಗಳು 

  1. ಕ ವರ್ಗ – ಕಂಠ್ಯಾಕ್ಷರಗಳು –  ಕಂಠದಿಂದ ಹುಟ್ಟುವ ಅಕ್ಷರಗಳನ್ನು ಕಂಠ್ಯಾಕ್ಷರಗಳೆನ್ನುವರು 

2. ಚ ವರ್ಗ – ತಾಲವ್ಯಾಕ್ಷರಗಳು – ಗಂಟಲಿನ ಮುಂಭಾಗದಲ್ಲಿರುವ ತಾಲುವಿನ ಭಾಗದ ಸಹಾಯದಿಂದ ಹುಟ್ಟುವ ಅಕ್ಷರಗಳನ್ನು ತಾಲವ್ಯಾಕ್ಷರಗಳೆನ್ನುವರು.

3. ಟ ವರ್ಗ – ಮೂರ್ಧನ್ಯ – ತಾಲುವಿನ ಮೇಲ್ಭಾಗದ ಸಹಾಯದಿಂದ ಹುಟ್ಟುವ ಅಕ್ಷರಗಳನ್ನು ಮೂರ್ಧನ್ಯಾಕ್ಷರಗಳೆನ್ನುವರು. 

4. ತ ವರ್ಗ – ದಂತ್ಯಾಕ್ಷರಗಳು – ಹಲ್ಲಿನ ಸಹಾಯದಿಂದ ಹುಟ್ಟುವ ಅಕ್ಷರಗಳನ್ನು ದಂತ್ಯಾಕ್ಷರಗಳೆನ್ನುವರು. 

5. ಪ ವರ್ಗ – ಓಷ್ಠ್ಯಾಕ್ಷರಗಳು – ತುಟಿಯ ಮೂಲಕ ಹುಟ್ಟುವ ಅಕ್ಷರಗಳನ್ನು ಓಷ್ಠ್ಯಾಕ್ಷರಗಳೆನ್ನುವರು.

ಇದರಲ್ಲಿ ೩ ವಿಧ

1. ಅಲ್ಪಪ್ರಾಣ – ಇವು ಕಡಿಮೆ ಉಸಿರನ್ನು ಬಳಸಿಕೊಳ್ಳುವ ಮೂಲಕ ಉಚ್ಛರಿಸುವ ಅಕ್ಷರಗಳನ್ನು ಅಲ್ಪಪ್ರಾಣಾಕ್ಷರಗಳೆನ್ನುವರು. 

ಇವು ಪ್ರತಿ ವರ್ಗದ ಒಂದನೇ ಮತ್ತು ಮೂರನೇ ಸಾಲಿನಲ್ಲಿರುವ ಅಕ್ಷರಗಳು ಅಲ್ಪಪ್ರಾಣಾಕ್ಷರಗಳಾಗುತ್ತವೆ.

ಅವು – ಕ್ ಗ್

ಚ್ ಜ್

ಟ್ ಡ್

ತ್ ದ್ 

ಪ್ ಬ್ . ಒಟ್ಟು 10 ಅಕ್ಷರಗಳಿವೆ.

2. ಮಹಾಪ್ರಾಣ – ಇವು ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ಅಕ್ಷರಗಳಾಗಿವೆ. ಪ್ರತಿ ವರ್ಗದ ಎರಡನೇ ಮತ್ತು ನಾಲ್ಕನೇ ಅಕ್ಷರಗಳನ್ನು ಮಹಾಪ್ರಾಣಾಕ್ಷರಗಳೆನ್ನುತ್ತಾರೆ.

ಅವು ಖ್ ಘ್

ಛ್ ಝ್

ಠ್ ಢ್ 

ಥ್ ಧ್ 

ಫ್ ಭ್. ಒಟ್ಟು 10 ಅಕ್ಷರಗಳಾಗಿವೆ. 

3. ಅನುನಾಸಿಕಗಳು – ಇವನ್ನು ಮೂಗಿನ ಸಹಾಯದ ಮೂಲಕ ವಾಗಿ ಉಚ್ಛರಿಸುವ ಅಕ್ಷರಗಳಾಗಿವೆ. ಪ್ರತಿ ವರ್ಗದ ಐದನೇ ಸಾಲಿನ ಅಕ್ಷರಗಳಾಗಿವೆ. ಅವು – ಙ್ ಞ್ ಣ್ ನ್ ಮ್. ಒಟ್ಟು 5 ಅಕ್ಷರಗಳಿವೆ.

ಅವರ್ಗೀಯ ವ್ಯಂಜನಗಳು 

ವರ್ಗದಲ್ಲಿ ಜೋಡಿಸದೇ ಇರುವ ಅಕ್ಷರಗಳನ್ನು ಅವರ್ಗೀಯ ಅಕ್ಷರಗಳೆನ್ನುವರು. 

ಅವು ಯ್ ರ್ ಲ್ ವ್ ಶ್ ಷ್ ಸ್ ಹ್ ಳ್. ಒಟ್ಟು 9 ಅಕ್ಷರಗಳಿವೆ.

ಗುಣಿತಾಕ್ಷರಗಳು 

ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿ ಆಗುವ  ಪೂರ್ಣಾಕ್ಷರಕ್ಕೆ ಗುಣಿತಾಕ್ಷರ ಎಂದು ಕರೆಯುತ್ತಾರೆ. 

ಉದಾ – ಕ್+ಅ= ಕ ಇದೇ ಮಾದರಿಯಲ್ಲಿ ಒಟ್ಟು 34 ಅಕ್ಷರಗಳಿವೆ ಇವಕ್ಕೆ ಸ್ವರಗಳನ್ನು ಸೇರಿಸಿದಾಗ ಒಟ್ಟು 34×13= 442 ಗುಣಿತಾಕ್ಷರಗಳು ಉಂಟಾಗುತ್ತವೆ.

ಸಂಯುಕ್ತಾಕ್ಷರಗಳು

ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ವ್ಯಂಜನಗಳಿದ್ದು ಅದಕ್ಕೆ ಒಂದು ಸ್ವರ ಸೇರುವ ಮೂಲಕ ಆಗುವ ಅಕ್ಷರಗಳನ್ನು ಸಂಯುಕ್ತಾಕ್ಷರಗಳೆನ್ನುವರು. ಇವನ್ನು ದ್ವಿತ್ವ ಮತ್ತು ಒತ್ತಾಕ್ಷರ ಎಂತಲೂ ಕರೆಯಲಾಗುತ್ತದೆ. 

ಇದರಲ್ಲಿ 2 ವಿಧಗಳು

1. ಸಜಾತಿಯ ಸಂಯುಕ್ತಾಕ್ಷರಗಳು – ಇಲ್ಲಿ ಒಂದೇ ಜಾತಿಯ 2 ವ್ಯಂಜನಗಳು ಒಂದು ಸ್ವರದೊಂದಿಗೆ ಸೇರಿ ಆಗುವ ಅಕ್ಷರಗಳಿಗೆ ಸಜಾತಿಯ ಸಂಯುಕ್ತಾಕ್ಷರಗಳು ಎಂದು ಕರೆಯಲಾಗುತ್ತದೆ. 

ಉದಾ – ತ್ತ = ತ್+ತ್+ಅ

             ಪ್ಪೆ = ಪ್+ಪ್+ಎ. 

2. ವಿಜಾತಿಯ ಸಂಯುಕ್ತಾಕ್ಷರಗಳು – ಬೇರೆ ಬೇರೆ ಜಾತಿಯ 2 ವ್ಯಂಜನಗಳು ಒಂದು ಸ್ವರದ ಜೊತೆ ಸೇರಿ ಆಗುವ ಅಕ್ಷರಗಳಿಗೆ ವಿಜಾತಿಯ ಸಂಯುಕ್ತಾಕ್ಷರಗಳು ಎಂದು ಕರೆಯುತ್ತಾರೆ. 

ಉದಾ – ಪ್ವು = ಪ್+ವ+ಉ

    ಅಡ್ಕೆ = ಡ್+ಕ್+ಎ.

3 thoughts on “ಕನ್ನಡ ವ್ಯಾಕರಣ #Kannada Vyakarana”

  1. ಬಿಎ ಪ್ರಕಾಶ್

    ತಲಸ್ಪರ್ಶಿಯಾದ ಮಾಹಿತಿ ಪೂರ್ಣ ವಿವರಣೆ .ಪ್ರಾಥಮಿಕ

    ಅಭ್ಯಾಸಿಗಳಿಗೆ ತುಂಬಾ ಉಪಯುಕ್ತವಾಗಿದೆ ನಿಮ್ಮ ಶ್ರಮಕ್ಕೆ ಅಭಿನಂದನೆಗಳು.

  2. Pingback: Kattuvevu Navu ಕಟ್ಟುವೆವು ನಾವು - rvwritting

Leave a Comment

Your email address will not be published. Required fields are marked *

Scroll to Top