ಸಿದ್ದಲಿಂಗಯ್ಯ: ಅಂಬೇಡ್ಕರ್ Ambedkar
ಸಿದ್ದಲಿಂಗಯ್ಯನವರು ರಾಮನಗರಜಿಲ್ಲೆಯ ಮಾಗಡಿತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆದೇವಯ್ಯ, ತಾಯಿ ಶ್ರೀಮತಿ ವೆಂಕಯ್ಯ.ಮಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ವೇಳೆಗಾಗಲೇ ಕವಿತೆ ಬರೆವಅಭ್ಯಾಸಇವರಿಗಿತ್ತು. ವಿದ್ಯಾರ್ಥಿದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು. ಸಿದ್ದಲಿಂಗಯ್ಯನವರಿಗೆ ಹಾಸ್ಯ ಪ್ರಜ್ಞೆಇತ್ತು. ‘ಗ್ರಾಮ ದೇವತೆಗಳು ಅವರಪಿಎಚ್.ಡಿ. ಮಹಾಪ್ರಬಂಧ. ‘ಊರುಕೇರಿ ‘ಅವರ ಆತ್ಮಕತೆ. “ಇಕ್ರಲಾವದೀರ್ಲಾ”, “ದಲಿತರುಬರುವರುದಾರಿಬಿಡಿ” ಮುಂತಾದಹೋರಾಟದ ಗೀತೆಗಳಲ್ಲದೆ “ಆ ಬೆಟ್ಟದಲ್ಲಿಬೆಳದಿಂಗಳಲ್ಲಿ” ಅಂತಹಭಾವಗೀತೆಗಳನ್ನೂ, “ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ” ಅಂತಹ ಚಿತ್ರಗೀತೆಗಳನ್ನೂ ಬರೆದಿದ್ದಾರೆ. ಸಿದ್ದಲಿಂಗಯ್ಯನವರು ಎರಡು ಬಾರಿಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದುದಲ್ಲದೆ. ಕನ್ನಡಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಅಂಬೇಡ್ಕರ್ ಮಹಾನ್ ಶಿಕ್ಷಣಪ್ರೇಮಿ, ರಾಜಕೀಯ ಚಿಂತಕ, ಸಮಾಜ ಸುಧಾರಕ ಎಂತಲೂ ಕರೆಸಿಕೊಳ್ಳುವ ಮಹಾನಾಯಕರಾಗಿದ್ದಾರೆ. ಅಂತಹ ನಾಯಕರ ಬಗೆಗೆ ಡಾ. ಸಿದ್ಧಲಿಂಗಯ್ಯನವರು ಕವಿತೆಯನ್ನು ರಚಿಸಿದ್ದಾರೆ.
ಸಾರಾಂಶ
ನಾಡನಡುವಿನಿಂದ ಸಿಡಿದ
ನೋವಿನ ಕೂಗೇ
ಆಕಾಶದ ಅಗಲಕ್ಕೂ
ನಿಂತ ಆಲವೆ.
ಶತಶತಮಾನಗಳಿಂದ ನೋವು, ಕಷ್ಟ, ಅಸಮಾನತೆಗಳಿಂದ ನಲುಗಿದ್ದವರ ನಾಡಿನಿಂದಲೇ[9/23, ಅವರ ಕೂಗಿಗೆ ಒಂದು ಧ್ವನಿಯಾಗಿ ಅವರ ಪರವಾಗಿ ಅವರಿಗೆ ಆಸರೆಯಾಗಿ ಆಕಾಶದಷ್ಟು ವಿಸ್ತಾರವಾಗಿ ನಿಂತಿದ್ದಾರೆ.
Men Shoe; https://amzn.to/3XB8Rej
ಕೋಟಿಕೋಟಿಕಪ್ಪುಜನರ
ಮೊಟ್ಟ ಮೊದಲ ಮಾತೇ
ನೀರಿನಾಚೆ ಮೋಡದಾಚೆ
ಮೊಳಗಿದಂಥ ಘೋಷವೆ.
ಅಂಧಕಾರದ ಕೂಪದಲ್ಲಿ ಬಿದ್ದಿದ್ದ ಜನರಿಗೆ ಜ್ಞಾನದ ಮಾತಾಗಿ ಘೋಷವಾಕ್ಯದಂತೆ ಅವರ ಪರವಾಗಿ ನಿಂತಿದ್ದಾರೆ.
ಬಾಳಿನಲ್ಲಿ ಕಂಡುಕೊಂಡೆ
ಹೋರಾಟದದಾರಿಯ
ಕರೆದುಕರೆದು ತೋರಿಸಿದೆ
ಮಹಾಮನೆಯ ಬಿರುಕನು.
ಅಸಮಾನತೆಯ ಸಮಾಜದಲ್ಲಿ ಸಮಾನತೆಯನು ತರಲು ತನ್ನ ಜೀವನದ ಮೂಲಕವೇ ತಿಳಿದು ಹೋರಾಟದ ಹಾದಿಯನು ಹಿಡಿಯುವ ಮೂಲಕ ದೇಶದೊಳಗಿನ ಅಸಮಾನತೆಯ ಬಿರುಕನುಎಲ್ಲರಿಗೂ ಮೂಲಕ ಒತ್ತಿ ಹೇಳಿದರು.
ಜಾತಿಯನ್ನು ಹೂತುಬಿಡಲು
ಲಕ್ಷ ಲಕ್ಷಜನರನು
ಕಟ್ಟಿ ಕ್ರಿಯಾರಂಗಕಿಳಿದ
ಸ್ವಾಭಿಮಾನ ಸಮುದ್ರ.
ಜಾತಿ ಅಸಮಾನತೆಯನ್ನು ಹೋಗಲಾಡಿಸಲು ದೇಶದ ಜನರಲ್ಲಿ ಸ್ವಾಭಿಮಾನ ತುಂಬುವ ಮೂಲಕ ಲಕ್ಷ ಲಕ್ಷ ಜನರಿಗೆ ಅರಿವು ಮೂಡಿಸಿ ಒಗ್ಗೂಡಿಸಿದ ಸಮುದ್ರವಾಗಿದ್ದಾರೆ.
ಮಹರಾಷ್ಟ್ರದ ಮಣ್ಣಿನಲ್ಲಿ
ಮೂಡಿಬಂದ ಗುಡುಗುಸಿಡಿಲೆ
ಮಳೆಯನೇಕೆ ತಾರಲಿಲ್ಲ
ಮಿಂಚು ಮಾಯಅಷ್ಟೆಯೆ?
ಮಹಾರಾಷ್ಟ್ರದ ಮಣ್ಣಿನಲ್ಲಿ ಅಂದರೆ ಸಮಾಜ ಸುಧಾರಕರು ಅಥವಾ ಸಂತರು ಹುಟ್ಟಿದ ಮಣ್ಣಿನಲ್ಲಿ ಹುಟ್ಟಿಬಂದವರಾಗಿ ಗುಡುಗು, ಸಿಡಿಲು, ಮಿಂಚು ಇವೆಲ್ಲ ತರಿಸಿದರು ಅಸಮಾನತೆ ಹೋಗಲಾಡಿಸಲು ಆದರೆ ಮಳೆಯನ್ನೇ ತರಲಿಲ್ಲವೇಕೆ? ಅಂದರೆ ಜಾತಿ ಅಸಮಾನತೆಯನ್ನು ಹೋಗಲಾಡಿಸಲಿಲ್ಲವೇಕೆ?
ಅಭಿಮಾನದ ನೇಗಿಲಿಂದ
ಬಂಜರು ನೆಲ ಉತ್ತವನೆ
ಪಾತಿಮಾಡಿ ನಾಟಹಾಕಿ
ಬೆಳೆಯ ಕಾಣದೋದವನೆ.
ಜಾತಿ, ವರ್ಣ ಮುಂತಾದ ಅಸಮಾನತೆ ಇವೆಲ್ಲವನ್ನು ಹೋಗಲಾಡಿಸಲು ಬಂಜರು ನೆಲದಂತಿದ್ದ ಜನರಲ್ಲಿ ಸ್ವಾಭಿಮಾನ ತುಂಬಿ, ನಾವು ಹೋರಾಡಬೇಕು, ಒಗ್ಗಟ್ಟಾಗಬೇಕು ಎಂಬ ಅಭಿಮಾನದ ನೇಗಿಲನ್ನು ಬಳಸಿ ಅದನ್ನು ಬೆಳೆಸಲು ನೀರನ್ನು ಹಾಕಿ ಬೆಳೆಸಿ ಅದರ ಫಲ ಬರುವಾಗ ನೋಡಲಾಗದೆ ನಮ್ಮಿಂದ ದೂರವಾಗಿ ಹೋದರೆ.
ಕಪ್ಪುಕ್ಕಿನ ಕೋಳಗಳನ್ನು
ಕಡಿದುಎಸೆದ ವಜ್ರವೆ
ಬಂಗಾರದ ಕೋಳವೊಕ್ಕ
ಮಹಾಬೌದ್ಧ ಭಿಕ್ಷುವೆ
ಅಜ್ಞಾನದ ಸಂಕೋಲೆಯೊಳಗೆ ಬಂಧಿಯಾಗಿದ್ದವರನು ಬಂಧನದಿಂದ ಬಿಡಿಸದವನೇ, ಜ್ಞಾನದ ಸಮಾನತೆಯ, ಸ್ವಾತಂತ್ರದ ಹಿಂದೆ ಹೋದ ಮಹಾ ಬೌದ್ಧ ಭಿಕ್ಷುವೇ ನೀವಾಗಿದ್ದೀರಿ.
ಮಲಗಿದ್ದವರ ಕೂರಿಸಿದೆ
ನಿಲಿಸುವವರುಯಾರೋ?
ಭಲದಜೊತೆಗೆ ಬಲದ
ಪಾಠ ಕಲಿಸುವವರು
ಶತಶತಮಾನಗಳಿಂದ ಮೇಲಕ್ಕೆ ಹೇಳದ ಸ್ಥಿತಿಯಲ್ಲಿದ್ದ ನಮ್ಮನ್ನು ತಮ್ಮ ಸ್ಥಿತಿಯ ಬಗೆಗೆ ತಿಳಿಸಿ ಅರಿವು ಮೂಡಿಸಿದಿರಿ ಆದರೆ ಸಮಾನರಾಗಿ ನಿಲ್ಲಿಸುವಂತೆ ಮಾಡುವವರಾರೋ? ಮುಂದೆ ಬರಲು ಒತ್ತಾಸೆಯಾಗಿ ನಿಂತು ನಮಗೆ ಬಲ ತುಂಬಿದವರಾಗಿ ನಮಗೆ ಮಾರ್ಗದರ್ಶಿಸುವವರು ಯಾರೋ?
ಈ ಮೇಲಿನ ಪದ್ಯವು ಅಂಬೇಡ್ಕರ್ ಅಸಮಾನತೆಯ ಕೂಪದಿಂದ ಸಮಾನತೆಯ ಬೆಳಕಿನಡೆಗೆ ಮರಳುವಂತೆ ಮಾಡುವ ನಾಯಕನನ್ನಾಗಿ ತೋರಲಾಗಿದೆ.