Kadambaru – ಕದಂಬರು – ಕರ್ನಾಟಕ ಇತಿಹಾಸ-

ಕದಂಬರು - Kadambaru
ಕದಂಬರು – Kadambaru

Kadambaru ಕದಂಬರು ಶಾತವಾಹನರ ನಂತರ ಕರ್ನಾಟಕವನ್ನು ಆಳಿದ ಮಹತ್ವದ ರಾಜವಂಶಗಳಲ್ಲಿ ಕದಂಬರದು ಬಹುಮುಖ್ಯ ಸ್ಥಾನವಿದೆ ಕರ್ನಾಟಕದ ಬಹು ಭಾಗದ ಮೇಲೆ ಇವರ ಹಿಡಿತವಿತ್ತು ಎಂಬುದನ್ನು ತಿಳಿಯಬಹುದು.

* ಕದಂಬರು ನಾಲ್ಕನೇ ಶತಮಾನದಿಂದ 6ನೇ ಶತಮಾನದ ವರೆಗೆ ಸ್ವತಂತ್ರವಾಗಿರುವ ಆಳ್ವಿಕೆಯನ್ನು ಮಾಡಿದರು.

* ಇವರ ರಾಜಧಾನಿ ಬನವಾಸಿಯಾಗಿತ್ತು.

* ಸಿಂಹ ಮತ್ತು ವಾನರ ಇವರ ದ್ವಜಗಳಾಗಿದ್ದವು.

* ಶಿವಮೊಗ್ಗ,ಧಾರವಾಡ,  ಮತ್ತು ಉತ್ತರ ಕನ್ನಡ ಪ್ರದೇಶಗಳನ್ನು ಒಳಗೊಂಡ ಕರ್ನಾಟಕದ ಉತ್ತರ ಭಾಗ ಸಂಪೂರ್ಣ ಆಳ್ವಿಕೆಯಲ್ಲಿತ್ತು.

Map of Kadambas
Map of Kadambas

See the video: Shatavahanas: https://youtu.be/KK2IzyrK_p4?si=LGMlwJxaHn8CleR1

Kadambaru – ಕದಂಬರ ಮೂಲದ ಆಧಾರಗಳು

* ಪುರಾತನ ಆಧಾರಗಳು

೧. ರಾಮಾಯಣ ಕಾಲದಲ್ಲಿ ಇವರನ್ನು ಕುಂತಳದವರು ಎಂದು ಹೇಳಲಾಗಿದೆ. ೨.ಮಹಾಭಾರತದ ಕಾಲದಲ್ಲಿ ವೈಜಯಂತಿ ಎಂದು ಕರೆಯಲಾಗಿದೆ.

೩. ಟಾಲೆಮಿ ತನ್ನ ಭೂಗೋಳ ಶಾಸ್ತ್ರ ಕೃತಿಯಲ್ಲಿ ಬೈಜಾಂಟಿಯನ್ ಎಂದು ಬನವಾಸಿಯನ್ನು ಗುರುತಿಸಿದ್ದಾನೆ.

* ಶಾಸನಾಧಾರಗಳು

೧. ಚಂದ್ರವಳ್ಳಿ ಶಾಸನ ಪ್ರಾಕೃತ ಭಾಷೆಯಲ್ಲಿದೆ ಮಯೂರ ವರ್ಮನು ಇದನ್ನು ಕೆತ್ತಿಸಿದ್ದು ಇದು ಮಯೂರವರ್ಮನ ಬಗೆಗೆ ಹೇಳುವ ಒಂದು ಶಾಸನವಾಗಿದೆ.

೨. ತಾಳಗುಂದ ಶಾಸನ –  ಕಾಕುತ್ಸವರ್ಮನಿಂದ ಕೆತ್ತಿಸಲ್ಪಟ್ಟಿದೆ. ಇದರಲ್ಲಿ ಇವರನ್ನು ಹಾರತೀಪುತ್ರರು ಎಂದು ಕರೆಯಲಾಗಿದೆ. ಇವರ ಮನೆಯ ಮುಂದೆ ಕದಂಬ ವೃಕ್ಷ ಇದ್ದುದರಿಂದ ಕದಂಬರಾದರು ಎಂದು ಹೇಳಿದೆ. ಮಯೂರ ಶರ್ಮನು ಮಯೂರವರ್ಮನಾಗಿ ಪರಿವರ್ತನೆಗೊಂಡಿದ್ದನ್ನು ಇದರಲ್ಲಿ ಹೇಳಿದೆ. ಅದರ ಜೊತೆಗೆ ಕದಂಬ ರಾಜ್ಯದ ಸ್ಥಾಪನೆಯ ಬಗೆಗೂ ಇದು ಹೇಳುತ್ತದೆ.

೩. ಗುಡ್ನಾಪುರ ಶಾಸನ ಇದರಲ್ಲಿ ಮಯೂರವರ ಮನ ತಂದೆ ಬಂದು ಶೇಣ ತಾತ ವೀರ ಶರ್ಮ ಎಂಬುದರ ಉಲ್ಲೇಖವನ್ನು ಇದು ಒಳಗೊಂಡಿದೆ. 

೪.ಹಲಸಿ ಶಾಸನ –  ಕಾಕುತ್ಸವರ್ಮನಿಂದ ಕೆತ್ತಿಸಲ್ಪಟ್ಟಿದೆ.

೫.ಹಲ್ಮಿಡಿ ಶಾಸನ – ಇದು ಸಂಸ್ಕೃತದಲ್ಲಿ ರಚನೆಯಾದರೂ ಕನ್ನಡದ 20 ಇದರಲ್ಲಿವೆ. ಇದರ ನಿರ್ಮಾತೃ ಕಾಕುತ್ಸವರ್ಮ.  ಇದು ಕನ್ನಡದ ಮೊದಲ ಶಾಸನವೂ ಕೂಡ ಆಗಿದೆ.

೧. ಮಯೂರವರ್ಮ

* ಕನ್ನಡ ಮೂಲದ ಪ್ರಥಮ ರಾಜ ಮಯೂರ ವರ್ಮನಾಗಿದ್ದಾನೆ.

* ಕಂಚಿಕ ವಿದ್ಯಾಭ್ಯಾಸಕ್ಕೆ ಎಂದು ತೆರಳಿದಾಗ ಅಲ್ಲಿ ಪಲ್ಲವರಿಂದ ಅವಮಾನಿತನಾಗಿ ಅವರ ವಿರುದ್ಧ ಹೋರಾಟ ಮಾಡಲು ಶ್ರೀಶೈಲದ ಪರ್ವತ ಪ್ರದೇಶದಲ್ಲಿ ಸೇರಿ ಅಲ್ಲಿದ್ದ ಜನರನ್ನು ಒಗ್ಗೂಡಿಸಿ ಚಿಕ್ಕ ಗುಂಪು ಮಾಡಿಕೊಂಡರು. 

* ಈ ಚಿಕ್ಕ ಸೈನ್ಯದ ಮೂಲಕ ಪಲ್ಲವರ ಗಡಿ ನಂತರ ಪೊನ್ನಟ ಚಂದ್ರಕ ಬಾಣವರನ್ನು ಸೋಲಿಸಿದ ಅವರಿಂದ ಕಪ್ಪ ಕಾಣಿಕೆಗಳನ್ನು ಕೂಡ ಪಡೆದುಕೊಂಡನು. 

* ಪಲ್ಲವರು ಪಶ್ಚಿಮ ತೀರದಿಂದ ತುಂಗಭದ್ರಾ ನದಿಯ ವರೆಗಿನ ಪ್ರದೇಶಗಳನ್ನು ಮಯೂರವರ್ಮನೆಗೆ ಬಿಟ್ಟುಕೊಟ್ಟರು. 

* ಇವನು ಬನವಾಸಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು.

*  ನೀರಾವರಿಗಾಗಿ ಚಂದ್ರವಳ್ಳಿ ಕೆರೆಯನ್ನು ನಿರ್ಮಿಸಿದನು.

೨. ಕಂಗ ವರ್ಮ

* ಮಯೂರವರ್ಮನ ಮಗ.

*  ತಂದೆಯಿಂದ ಸೋತಿದ್ದ ಸಾಮಂತರು ಧಂಗೆ ಎದ್ದರೂ ಆ ಧಂಗೆಯನ್ನು ಇವನು ಅಡಗಿಸಿದನು.

* ರಾಜ್ಯಕ್ಕೆ ಒದಗಿದ ಅಪಾಯವನ್ನು ನಿವಾರಿಸಿದ್ದರಿಂದ “ಧರ್ಮ ಮಹಾರಾಜಾದಿರಾಜ” ಎಂಬ ಬಿರುದನ್ನು ಪಡೆದನು.

*  ವಾಕಟಕರ ರಾಜ ಪೃಥ್ವಿ ಸೇನಾ ಅಥವಾ ವಿಂಧ್ಯ ಸೇನಾ ಈತನನ್ನು ಸೋಲಿಸಿದನು.

೩.ಭಗೀರಥ ವರ್ಮ 

*ತಂದೆಯ ಕಾಲದಲ್ಲಿ ಕಳೆದುಕೊಂಡಿದ್ದ ಪ್ರದೇಶಗಳೆಲ್ಲವನ್ನು ಪುನಹ ಜಯಿಸಿದವನು.

೪ ರಘುಪತಿ ವರ್ಮ

* ಈತನು ಕೂಡ ತಂದೆಯಂತೆ ಯಾವಾಗಲೂ ಯುದ್ಧದಲ್ಲಿಯೇ ತಲ್ಲಿನ ನಾಗಿ ಮಡಿದ.

೫. ಕಾಕುತ್ಸವರ್ಮ 

* ಕದಂಬರ ಅರಸರಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದ ದೊರೆಯಾಗಿದ್ದನು.

* ತಾಳಗುಂದ ಶಾಸನವು ಕಾಕುತ್ಸವರ್ಮಾನನ್ನು “ಕದಂಬ ಕುಲ ಶಿರೋಮಣಿ”  “ಕೀರ್ತಿ ಸೂರ್ಯ” ಎಂದು ಉಲ್ಲೇಖಿಸಿದೆ.

* ತನ್ನ ಸಾಮ್ರಾಜ್ಯ ನಿರ್ವಹಣೆ ಮಾಡುವ ಸಲುವಾಗಿ ಬೇರೆ ಬೇರೆ ದೇಶದ ರಾಜಕುಮಾರರ ಜೊತೆ ವೈವಾಹಿಕ ಸಂಬಂಧವನ್ನು ಬೆಳೆಸಿದನು. ಉದಾಹರಣೆಗೆ 

೧.ಗುಪ್ತರ ಕುಮಾರ ಗುಪ್ತನೊಂದಿಗೆ ತನ್ನ ಮಗಳನ್ನು ನೀಡಿದ.

೨.ವಾಕಟಕರ ನರೇಂದ್ರ ಸೇನ

೩. ಅಳುಪರ ಪಶುಪತಿಗೆ

೪. ಗಂಗದೊರೆ ಎರಡನೇ ಮಾದವನಿಗೆ ತನ್ನ ಮಕ್ಕಳನ್ನು ನೀಡುವ ಮೂಲಕವಾಗಿ ಈ ಸಂಬಂಧವನ್ನು ಬೆಳೆಸುವ ಮೂಲಕ ತನ್ನ ಶತ್ರು ರಾಜರೊಂದಿಗೆ ಕೂಡ ಒಳ್ಳೆಯ ಸ್ನೇಹ ಬಾಂಧವ್ಯವನ್ನು ಬೆಳೆಸಿದ.

*  ರಾಜ್ಯದ ಜನರ ಮೇಲೆ ಹೆಚ್ಚಿನ ತೆರಿಗೆ ಏರಿರಲಿಲ್ಲ ಇದರಿಂದ ಹಲಸಿ ಶಾಸನವು ಇವನನ್ನು ಕದಂಬ ಕುಲದ ಅತ್ಯಂತ ಭವ್ಯ ವ್ಯಕ್ತಿ ಎಂದು ವರ್ಣಿಸಿದೆ.

*ಇವನಿಗಿದ್ದ ಬಿರುದುಗಳು ಧರ್ಮರಾಜ ಧರ್ಮ ಮಹಾರಾಜ.

೬. ಶಾಂತಿವರ್ಮ

ಪಟ್ಟಕ್ಕೆ ಬಂದರು ಅಕಾಲಿಕವಾಗಿ ಮರಣವನ್ನು ಹೊಂದಿದ.

*  ಇವನ ಕಾಲದಲ್ಲಿ ಕದಂಬರು ಎರಡು ಶಾಖೆಗಳಾಗಿ ವಿಂಗಡಣೆಯಾಗುತ್ತಾರೆ.

೧. ಮೊದಲ ಶಾಖೆ – ಪರ್ವತ ಶಾಖೆ – ಒಂದನೇ ಕೃಷ್ಣವರ್ಮ ಅದನ್ನು ಮುನ್ನಡೆಸುತ್ತಾನೆ.

೨. ಉಚ್ಚಂಗಿ ಶಾಖೆ -ಕುಮಾರ ವರ್ಮ ಮುನ್ನಡೆಸುತ್ತಾನೆ.

೭. ಮೃಗೇಶ ವರ್ಮ *ಗಂಗರ ಅರಸವಿಷ್ಣುಗೋಪನನ್ನು ಸೋಲಿಸಿದ.

* ಇವನ ಕಾಲದಲ್ಲಿ ಗಂಗರು ಕೋಲಾರದಲ್ಲಿದ್ದ ತನ್ನ ರಾಜಧಾನಿಯನ್ನು ತಲಕಾಡಿಗೆ ಬದಲಿಸಿಕೊಂಡರು.

* ಪಲ್ಲವರನ್ನು ಸೋಲಿಸಿದನು.

* ಹಲಸಿಯಲ್ಲಿ ದೇವಾಲಯ ಕಟ್ಟಿಸಿದ.

* ಪರಮ ಬ್ರಾಹ್ಮಣನೆಂದು ಶಾಸನವೂ ಹೇಳಿದ.

೮. ರವಿವರ್ಮ

ಗುಡ್ನಾಪುರ ಶಾಸನವನ್ನು ಈತನೇ ಕೆತ್ತಿಸಿದ್ದು.

* ಪಲ್ಲವರ ಚಂಡದಂಡ ಉಚ್ಚಂಗಿ ಶಾಖೆಯನ್ನು ಪದಚಿತಗೊಳಿಸಿ ತನ್ನ ರಾಜ್ಯವನ್ನು ನರ್ಮದಾನದಿವರೆಗೆ ವಿಸ್ತರಿಸಿದೆ.

೯. ಹರಿ ವರ್ಮ 

*ವಾಕಟಕರ ರಾಜ ಹರೀಷೇಣನಿಂದ ಸೋಲಲ್ಪಟ್ಟನು.

* ಉಚ್ಚಂಗಿ ಶಾಖೆಯ 2ನೇ ಕೃಷ್ಣವರ್ಮ ಇವನನ್ನು ಸೋಲಿಸುವ ಮೂಲಕ ವಂಶವನ್ನು ಸ್ಥಾಪಿಸಿದ

* ಎರಡನೇ ಕೃಷ್ಣನನ್ನು ಸೋಲಿಸಿದ. 

ಇದಾದ ನಂತರ ಪ್ರವರ್ಧಮಾನಕ್ಕೆ ಬಂದ ಚಾಲುಕ್ಯರ ಒಂದನೇ ಪುಲಕೇಶಿ ಇವರನ್ನು ಸೋಲಿಸಿ ತನ್ನ ಮಾಂಡಲೀಕರನ್ನಾಗಿ ಮಾಡಿಕೊಂಡ.  ನಂತರ ಇವರು ಮತ್ತೆ ಸ್ವತಂತ್ರರಾಗಲೇ ಇಲ್ಲ. ಇದರಿಂದ ಕ್ರಿಸ್ತ ಶಕ 6ನೇ ಶತಮಾನಕ್ಕೆ ಕದಂಬರ ಸ್ವತಂತ್ರ ಆಡಳಿತ ಕೊನೆಯಾಯಿತು. ನಂತರ ಹಾನಗಲ್ ಕದಂಬರು, ಗೋವಾದ ಕದಂಬರು ಚೆಂದಾವರ ಕದಂಬರು ಎಂಬ ಮೂರು ಉಪಶಖೆಗಳಾಗಿ 11ನೇ ಶತಮಾನದವರೆಗೆ ಅಸ್ತಿತ್ವದಲ್ಲಿದ್ದರು.

Read the story of shatavahanas:https://rvwritting.com/history-of-karnataka-%e0%b2%b6%e0%b2%be%e0%b2%a4%e0%b2%b5%e0%b2%be%e0%b2%b9%e0%b2%a8%e0%b2%b0%e0%b3%81/

ಕದಂಬರ ಆಡಳಿತ 

*ಕದಂಬರು ಶಾತವಾಹನರ ಆಡಳಿತವನ್ನೇ ಅನುಸರಿಸಿದ್ದರು.

*ರಾಜ ಆಡಳಿತದ ಅನುಕೂಲಕ್ಕಾಗಿ ಮಂತ್ರಿಮಂಡಲ, ದಂಡನಾಯಕರು, ಅಧಿಕಾರಿಗಳ ನೇಮಕವನ್ನು ಮಾಡಿದನು.

* ಬನವಾಸಿ 12,000 ನಾಡು ಎಂಬುದಾಗಿ ಕರೆಯಲಾಗಿದೆ.

 ಆಡಳಿತ ವಿಭಾಗ 

*ರಾಜ್ಯ – ರಾಜ 

*ಮಂಡಲ ಅಥವಾ ದೇಶ – ರಾಜಕುಮಾರ

* ವಿಷಯಗಳು 

* ಗ್ರಾಮ ಎಂಬುದಾಗಿ ವಿಭಾಗವನ್ನು ಮಾಡಿಕೊಂಡು ಆಡಳಿತವನ್ನು ನಡೆಸುತ್ತಿದ್ದರು.

 ಇವರ ಮಂತ್ರಿ ಮಂಡಲವು ಐದು ವಿಭಾಗಗಳಾಗಿತ್ತು.

* ಪ್ರಧಾನ- ಕೋಶಾಧಿಕಾರಿ

* ತಂತ್ರ ಪಾಲ – ವಿದೇಶಾಂಗ ಮಂತ್ರಿ

* ತಾಂಬೂಲ ಪಾರುಪತ್ಯಗಾರ – – ಆಸ್ಥಾನ ವ್ಯವಹಾರದ ಮೇಲ್ವಿಚಾರಣಾ ಅಧಿಕಾರಿ

* ಪಾರುಪತ್ಯಗಾರ –  -ಅರಮನೆಯ ಆದಾಯ ವೆಚ್ಚ ನೋಡಿಕೊಳ್ಳುವವರು

* ಸಭಾ ಕಾರ್ಯ ಸಚಿವ –  ಕಾರ್ಯದರ್ಶಿ. 

ರಾಜನೇ ರಾಜ ಆಡಳಿತದ ಮುಖ್ಯಸ್ಥ ಮತ್ತು ರಾಜ್ಯದ ಪ್ರಮುಖ ನ್ಯಾಯಾಧೀಶನಾಗಿದ್ದನು ಹಾಗೆಯೇ ಸೈನ್ಯದ ಮಹಾದಂಡ ನಾಯಕನಾಗಿಯೂ ನಿರ್ವಹಿಸುತ್ತಿದ್ದನು. ಹಾಗೆಯೇ ಕೂಟ ನೀತಿ ಅಥವಾ ಗೆರಿಲ್ಲಾ ಯುದ್ಧ ತಂತ್ರಗಳನ್ನು ಸೈನಿಕರಿಗೆ ತರಬೇತಿ ನೀಡಲಾಗುತ್ತಿತ್ತು.

ಕದಂಬರ ಆರ್ಥಿಕ ಪರಿಸ್ಥಿತಿ

 * ವ್ಯವಸಾಯ ಮುಖ್ಯ ಕಸುಬಾಗಿತ್ತು.

*ಭೂ ಕಂದಾಯ ರಾಜ್ಯದ ಮುಖ್ಯ ವರಮಾನವಾಗಿತ್ತು.

* ಮೂರು ರೀತಿಯ ತೆರಿಗೆಗಳನ್ನು ಜನಸಾಮಾನ್ಯರ ಮೇಲೆ ಹಾಕುತಿದ್ದರು.

೧ ಪೆರ್ಜಂಕ – ಹೊರೆಗಳ ತೆರಿಗೆ.

೨. ಬಿಲ್  ಕೊಡೆ – ವ್ಯಾಪಾರ ತೆರಿಗೆ 

೩.ಕಿರುಕುಳ – ಸಾಗಾಣಿಕ ತೆರಿಗೆ * ಇಲ್ಲೂ ಕೂಡ ವೃತ್ತಿಗನುಗುಣವಾದ ವೃತ್ತಿ ಸಂಘಗಳಿದ್ದವು.

*ವ್ಯಾಪಾರ ನಡೆಸಲು ಬಳಕೆಯಾಗುತ್ತಿದ್ದ ಬಂದರುಗಳು – ಗೋವಾ, ಅಂಕೋಲ, ಹೊನ್ನಾವರ, ಭಟ್ಕಳ, ಮಂಗಳೂರು.

* ವ್ಯಾಪಾರ ಕೇಂದ್ರಗಳು ಬೆಳಗಾವಿ, ಬನವಾಸಿ, ಗೋವಕಪುರಿ, ತಾಳಗುಂದ.

* ಇವರ ನಾಣ್ಯಗಳು – ಪದ್ಮಟಂಕ – ಇದು ಚಿನ್ನದ ನಾಣ್ಯವಾಗಿತ್ತು.

 ಗದ್ಯಾಣ.

ಕದಂಬರ ಕಾಲದ ಸಾಮಾಜಿಕ ವ್ಯವಸ್ಥೆ 

*ಇಲ್ಲಿ ಚಾತುರ್ವರ್ಣದ ಆಧಾರದ ಮೇಲೆ ಇವರ ಸಮಾಜ-ರೂಪಿತವಾಗಿತ್ತು.

*ಪಿತೃ ಪ್ರಧಾನ ವ್ಯವಸ್ತೆಯ ಅವಿಭಕ್ತ ಕುಟುಂಬ ಜಾರಿಯಲ್ಲಿತ್ತು.

* ಸ್ತ್ರೀಯರು ಸಂಪೂರ್ಣ ಸ್ವಾತಂತ್ರ ಹೊಂದಿದ್ದರು.

ಕದಂಬರ ಕಾಲದ ಧರ್ಮ

* ಕದಂಬರು ವೈದಿಕ ಧರ್ಮದವರಾಗಿದ್ದರು.

* ಕೆಲವು ಕಡೆ ಇವರನ್ನು ಶೈವರು ಎಂದು ಶಾಸನಗಳು ಹೇಳಿವೆ ಅದಕ್ಕೆ ಸಾಕ್ಷಿಯಾಗಿ ಬನವಾಸಿಯ ಮಧುಕೇಶ್ವರ ಇವರ ಆರಾಧ್ಯದೈವ ವಾಗಿತ್ತು ಎಂಬುದನ್ನು ತಿಳಿಯಬಹುದು.

* ಜೈನ ಧರ್ಮಕ್ಕೂ ಇವರು ಪ್ರೋತ್ಸಾಹ ನೀಡಿದ್ದರು. ಉದಾಹರಣೆಗೆ ಹರಿವರ್ಮ ಹಲಸಿಯಲ್ಲಿ ಜೈನಬಸದಿ ನಿರ್ಮಾಣ ಮಾಡಿಸಿದ.

* ಬೌದ್ಧ ಧರ್ಮಕ್ಕೂ ಪ್ರೋತ್ಸಾಹವಿತ್ತು, ಆದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು ಅಷ್ಟು ಲಭ್ಯವಿಲ್ಲ.

ಹ್ಯುನೆನ್ ತ್ಸಾಂಗ್ – ಬನವಾಸಿಗೆ ಏಳನೇ ಶತಮಾನದಲ್ಲಿ ಭೇಟಿ ನೀಡಿದ್ದಾಗ, ತನ್ನ ಗ್ರಂಥದಲ್ಲಿ ಬೌದ್ಧ ಧರ್ಮ ಇಲ್ಲಿ ಪ್ರಚಲಿತದಲ್ಲಿತ್ತು ಎಂದು ಉಲ್ಲೇಖಿಸಿದ್ದಾನೆ.

ಕದಂಬರ ಸಾಂಸ್ಕೃತಿಕ ಸಾಧನೆಗಳು

೧.ಭಾಷೆ ಮತ್ತು ಸಾಹಿತ್ಯ

* ಕದಂಬರ ಕಾಲದಲ್ಲಿ ಪ್ರಾಕೃತ, ಸಂಸ್ಕೃತ, ಕನ್ನಡ ಬೆಳವಣಿಗೆಗೊಂಡವು.

* ಇವರ ಆರಂಭಕಾಲದಲ್ಲಿ ಪ್ರಾಕೃತವು ಹೆಚ್ಚು ಶಾಸನಗಳಲ್ಲಿ ಕಂಡುಬರುತ್ತದೆ.

* ನಂತರ ಸಂಸ್ಕೃತವು ಕೂಡ ಅದೇ ಮಟ್ಟಕ್ಕೆ ಬೆಳೆಯುತ್ತದೆ.

* ಹಾಗೆಯೇ ಕನ್ನಡವು ಅಭಿವೃದ್ಧಿ ಹೊಂದುತ್ತಿರುವುದನ್ನು ಕಾಣಬಹುದು.

* ಕನ್ನಡದ ಮೊದಲ ಶಾಸನವಾದ ಹಲ್ಮಿಡಿ ಶಾಸನವು ಇವರ ಕಾಲದಲ್ಲಿ ದೊರೆತಿದ್ದು.

೨. ವಿದ್ಯಾಭ್ಯಾಸ

ಇವರ ಕಾಲದಲ್ಲಿ ವಿದ್ಯಾಭ್ಯಾಸಕ್ಕೆ ಮಹತ್ವವನ್ನು ನೀಡಿದರು. ಗುರುಕುಲ ಶಿಕ್ಷಣ ಪದ್ಧತಿ ಇಲ್ಲಿ ಪ್ರಚಲಿತದಲ್ಲಿತ್ತು ಇಲ್ಲಿನ ವಿದ್ಯಾರ್ಥಿಯ ಕೇಂದ್ರಗಳು ದೇವಾಲಯಗಳು ಮಟ್ಟಗಳು ಅಗ್ರಹಾರಗಳು ಜೈನ ಮತ್ತು ಬೌದ್ಧ ಮಠಗಳು ಜ್ಞಾನಾರ್ಜನೆಯ ಕೇಂದ್ರಗಳಾಗಿದ್ದವು. ಶಿಕ್ಷಣವು ಅಗ್ರಹಾರ ಬ್ರಹ್ಮಪುರಿ ಘಟಿಕ ಸ್ಥಾನಗಳಲ್ಲಿ ನಡೆಯುತ್ತಿತ್ತು.

೧. ಅಗ್ರಹಾರಗಳು

ಬ್ರಾಹ್ಮಣರ ಪ್ರತ್ಯೇಕವಾದ ಒಂದು ಗ್ರಾಮ ಅಥವಾ ಊರಾಗಿತ್ತು. ಮುಖ್ಯವಾದ ಅಗ್ರಹಾರಗಳು –  ಬಳ್ಳಿಗಾವಿ, ತಾಳಗುಂದ, ಬನವಾಸಿ,

೨. ಬ್ರಹ್ಮಪುರಿಗಳು

– ಊರಿನ ಅಥವಾ ಪಟ್ಟಣದ ಭಾಗವಾಗಿದ್ದು, ಅಲ್ಲಿ ವಿದ್ಯಾರ್ಜನೆ ನಡೆಯುತ್ತಿತ್ತು. ಉದಾಹರಣೆಗೆ ಸೂಡಿ, ತಲಕಾಡು, ವಿಕ್ರಮಪುರ, ಮಾನ್ಯಪುರ.

೩. ಘಟಿಕಗಳು – ಧಾರ್ಮಿಕ ವಿಚಾರಗಳನ್ನು ಚರ್ಚಿಸುವ ಕೇಂದ್ರಗಳಾಗಿದ್ದವು. 

* ಇಲ್ಲಿ ಎಲ್ಲಾ ರೀತಿಯ ಶಿಕ್ಷಣವನ್ನು ಹೇಳಿಕೊಡಲಾಗುತ್ತಿತ್ತು ಉದಾಹರಣೆಗೆ ವೇದಾಂತಗಳು, ಪುರಾಣಗಳು , ಸಂಗೀತ, ಶಿಲ್ಪ ವಿದ್ಯಾ, ಸಾಹಿತ್ಯ, ಭಾಷೆ ಮುಂತಾದವು.

* ಮುಖ್ಯವಾದ ಮಠಗಳು ಬಳ್ಳಿಗಾವಿ, ಕುಪ್ಪತೂರು, ಬಾಂಡವಪುರ.

೩. ಕದಂಬರ ಕಾಲದ ಕಲೆ ಮತ್ತು ವಾಸ್ತು ಶಿಲ್ಪ

* ಕದಂಬರ ಕಾಲದಲ್ಲಿ ಧರ್ಮ, ಶಿಕ್ಷಣ, ಸಾಹಿತ್ಯ ಬೆಳೆದಂತೆ ವಾಸ್ತುಶಿಲ್ಪವೂ ಬೆಳದಿದೆ.

* ಅದರಲ್ಲಿ ಕೆಲವೊಂದು ದೇವಾಲಯ ಅಥವಾ ಸ್ಮಾರಕಗಳನ್ನು ಗುರುತಿಸಬಹುದು.

 ಅವುಗಳಲ್ಲಿ 

ಪ್ರಣವೇಶ್ವರ ದೇವಾಲಯ, ಹಲಸಿಯ ಕಲ್ಲೇಶ್ವರ ದೇವಾಲಯ, ಜೈನ ಬಸದಿಗಳು.

* ಇವರ ವಾಸ್ತುಶಿಲ್ಪಗಳು ಇನ್ನೂ ಆರಂಭಿಕ ಹಂತದಲ್ಲಿದ್ದವು ಉದಾಹರಣೆಗೆ ದೇವಾಲಯಗಳು ಸರಳ ರಚನೆಗಳಿಂದ ಕೂಡಿದ್ದು, ಗರ್ಭಗೃಹ ಮತ್ತು ಅದರ ಮುಂದೆ ಮೊಗಸಾಲೆ ಇದಿಷ್ಟೇ ಅವರ ಕಲಾವಂತಿಕೆಯ ದೇವಾಲಯದ ಲಕ್ಷಣಗಳು.

 * ಕದಂಬರ ಅತಿ ಮುಖ್ಯವಾಗಿರುವಂತದ್ದು –  “ವಿಮಾನ” ಇದು ಇವರಬಹು ಮುಖ್ಯವಾದ ಕೊಡುಗೆಯಾಗಿದೆ.

* ತಾಳಗುಂದದ ಪ್ರಣವೇಶ್ವರ ದೇವಾಲಯ – 

Praveshwara Temple
Praveshwara Temple

ದಕ್ಷಿಣ ಭಾರತದ ಪ್ರಾಚೀನ ದೇವಾಲಯಗಳಲ್ಲೊಂದು.

* ಹಲಸಿಯ ಕಲ್ಲೇಶ್ವರ ದೇವಾಲಯ –

Kalleshwara temple
Kalleshwara temple

ಈ ದೇವಾಲಯದ ತಳವಿನ್ಯಾಸ ತ್ರಿಕೂಟ ಶೈಲಿಯಲ್ಲಿದೆ.

* ಗರ್ಭಗೃಹ ಸುಖನಾಸಿ, ಮಂಟಪ ಹೊಂದಿದೆ. 

*  ಹಟ್ಟಿಕೇಶ್ವರ, ಸುವರ್ಣೇಶ್ವರ ದೇವಾಲಯಗಳು ಕೂಡ ಇವೆ.

* ಹಲಸಿನ ಜೈನಬಸದಿ –  ಮೃಗೇಶ್ವರ್ಮನಿಂದ ನಿರ್ಮಾಣ.

Jain Basadi
Jain Basadi

 ಇದರೊಂದಿಗೆ ಕದಂಬರು ಮೂರ್ತಿಶಿಲ್ಪ, ಗೋಪುರಗಳನ್ನು ನಿರ್ಮಿಸಿರುವರು. ಕರ್ನಾಟಕ ವಾಸ್ತುಶಿಲ್ಪ ಕಲೆಗೆ ಪ್ರಥಮ ತಳಹದಿಯನ್ನು ಹಾಕಿದವರು ಕದಂಬರು ಎಂದು ಹೇಳಬಹುದು.

70 thoughts on “Kadambaru – ಕದಂಬರು – ಕರ್ನಾಟಕ ಇತಿಹಾಸ-”

  1. Pingback: Talakadina Gangaru - ತಲಕಾಡಿನ ಗಂಗರು - History of Karnataka part - 3 Must read for upcoming exams - rvwritting

Leave a Comment

Your email address will not be published. Required fields are marked *

Scroll to Top