ಇರುವುದೊಂದು ಪ್ರಪಂಚದಲ್ಲಿ ಎಲ್ಲರನ್ನು ಒಂದು ಕಡೆಗೆ ತಂದಿರುವುದು ಸಂವಹನ. ಸಂವಹನವನ್ನು ಎರಡು ರೀತಿಯಲ್ಲಿ ಮಾಡಬಹುದು. 1. ಆಂಗಿಕ ಸಂವಹನ 2. ಭಾಷಿಕ ಸಂವಹನ. ಆಂಗಿಕವಾಗಿ ಎಂದರೆ ದೇಹ ತನ್ನ ಸನ್ನೆಗಳ ಮೂಲಕ ಪರಸ್ಪರರ ಎದುರು ಅಭಿನಯಿಸುವ ಮೂಲಕ ಸಂವಹಾನಿಸುತ್ತೇವೆ. ಇದರಲ್ಲಿ ದೇಹದ ಭಾಗಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಭಾಷಿಕ ಸಂವಹನ ಎಂದರೆ ಇಲ್ಲಿ ಭಾಷೆಗಳನ್ನು ಬಳಸುವ ಮೂಲಕ ಸಂವಹಾನಿಸುತ್ತೇವೆ. ಇದು ಪರಿಣಾಮಕಾರಿಯಾದ ಮಾರ್ಗವು ಹೌದು ಹಾಗೆ ನಾವು ಭಾಷಿಕ ಸಂವಹನ ನಡೆಸುವುದು ಕನ್ನಡದ ಮೂಲಕ.
ಕನ್ನಡ ಭಾಷೆಯ ಸ್ವಲ್ಪ ತಿಳಿಯೋಣ.
ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂದು ನಾವು ತಿಳಿದಿದ್ದೇವೆ. ಆದರೆ ಇತಿಹಾಸ ನಿಜವಾಗಬೇಕಾದರೆ ಅದಕ್ಕೆ ಬೇಕಾದ ಸಾಕ್ಷಿಗಳನ್ನು ತಲುಪಿಸಬೇಕಾದ್ದು ಮುಖ್ಯವಾಗುತ್ತದೆ. ಇದನ್ನು ನೋಡಬೇಕಾದರೆ ಕ್ರಿಸ್ತಪೂರ್ವ ಎರಡನೇ ಶತಮಾನಕ್ಕೆ ಹೋಗಬೇಕಾಗುತ್ತದೆ. ಮೌರ್ಯರ ಕಾಲದಲ್ಲಿ ಅಶೋಕನ ಕಾಲಕ್ಕೆ ಹೋಗಬೇಕಾಗುತ್ತದೆ. ಅಶೋಕನನ್ನು ಶಿಲಾ ಶಾಸನಗಳ ಪಿತಾಮಹ ಎಂದು ಕರೆಯುತ್ತಾರೆ. ಅವನೇ ಕೆತ್ತಿಸಿದ ಬ್ರಹ್ಮಗಿರಿ ಶಾಸನ. ಇದು ಚಿತ್ರದುರ್ಗ ಜಿಲ್ಲೆಯಲ್ಲಿ ಬರುತ್ತದೆ. ಈ ಶಾಸನದಲ್ಲಿ ಇಸಿಲ ಪದ ಕನ್ನಡದ್ದು ಎಂದು ಡಿಎಲ್ ನರಸಿಂಹಾಚಾರ್ ಹೇಳಿದ್ದಾರೆ ಇದನ್ನು ಒಪ್ಪಿದ್ದಾರೆ ಕ್ರಿಸ್ತಪೂರ್ವ ಮೂರನೇ ಶತಮಾನಕ್ಕೆ ನಮ್ಮ ಕನ್ನಡದ ಪ್ರಾಚೀನತೆ ಹೋಗತ್ತೆ ಎಂದರ್ಥವಾಗಿದೆ. ಇಸಿಲ ಎಂದರೆ ಕೋಟೆ ಎಂಬ ಅರ್ಥ ಬರುತ್ತದೆ. ಇಲ್ಲಿ ತಮಿಳುನಾ ಪ್ರಸಿದ್ಧ ಶಾಸನ ಶಾಸ್ತ್ರಜ್ಞರಾದ ಡಾ. ಐರಾವತಂ ಮಹಾದೇವನ್ ಮಾತು ಮುಖ್ಯವಾಗುತ್ತದೆ ಅವರ Early Tamil Epigraphy ಎಂಬ ಗ್ರಂಥದಲ್ಲಿ ಇಲ್ಲಿ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಲಿಖಿತ ದಾಖಲೆಗಳು ಬರುವುದಕ್ಕಿಂತ ಎಷ್ಟೋ ವರ್ಷಗಳ ಹಿಂದೆ ಮೌಕಿಕ ಪರಂಪರೆಯಲ್ಲಿತ್ತು. ಅಶೋಕನ ಬಂಡೆಗಲ್ಲು ಶಾಸನಗಳು ಪ್ರಾಕೃತದಲ್ಲಿದ್ದರು ಆ ಪ್ರದೇಶದ ಜನರ ಆಡು ಮಾತು ಕನ್ನಡವೇ ಆಗಿತ್ತು ಎಂದಿದ್ದಾರೆ.
ಇದಾದ ನಂತರ ನಾವು ನೋಡುವ ಮತ್ತೊಂದು ಉಲ್ಲೇಖ ಈಜಿಪ್ಟಿನ ಆಕ್ಸಿರೈಂಚಸ್ ಪಪೈರಸ್ ನಲ್ಲಿ ದೊರೆತಿರುವ ಪ್ರಹಸನದ ಒಂದು ಭಾಗ. ಇದರಲ್ಲಿ ಕನ್ನಡದ ಪದಗಳಿವೆ ಎಂದು ಗೋವಿಂದ ಪೈ ಹೇಳಿದ್ದಾರೆ. ಇದು ಟೊಲೆಮಿಕ್ ಮತ್ತು ಈಜಿಪ್ಟಿನ ಇತಿಹಾಸದ ರೋಮನ್ ಅವಧಿಗಳ ಚರಿತ್ರೆಯನ್ನು ವಿವರಿಸುತ್ತವೆ. ಇಂತಹ ಒಂದು ಪ್ರಹಸನದ ಭಾಗದಲ್ಲಿ ಪಶ್ಚಿಮದ ಕರಾವಳಿಗೆ ಸಂಬಂಧಿಸಿದ ಕನ್ನಡ ಪದಗಳಿವೆ ಎಂಬುದಾಗಿದೆ. ಆ ಪದಗಳು ಮಲ್ಪಿ ನಾಯಕ ಕರೆವನೊ, ಲಲ್ಲೆ ಕೊಡಗುಸು ಅಲ್ಲಮ್ಮಕ್ಕ.
ಹಾಲ ರಾಜನ ಗಾಥಸಪ್ತಶತಿ
ಶಾತವಾಹನರ ರಾಜನಾದ ಹಾಲನು ಗಾಥಸಪ್ತಶತಿ ಎಂಬ ಕೃತಿಯನ್ನು 140 ಕ್ರಿ.ಶ ದಲ್ಲಿ ರಚಿಸುತ್ತಾನೆ. ಇದರಲ್ಲಿ ಕನ್ನಡದ ತೀರ್, ತುಪ್ಪ, ಪೆಟ್ಟು, ಪೊಟ್ಟು ಎಂಬ ಮುಂತಾಗಿ ಕೆಲವು ಪದಗಳು ಬರುತ್ತವೆ ಇವನ್ನು ಕನ್ನಡದ ಪದಗಳೆಂದು ಹೇಳಲಾಗುತ್ತಿದೆ.
ನಂತರ ಕನ್ನಡ ಸಾಹಿತ್ಯವನ್ನು ಹಲವು ಗಟ್ಟಗಳಾಗಿ ವಿಂಗಡಿಸಿಕೊಳ್ಳುತ್ತೇವೆ ಅವು
ಪೂರ್ವದ ಹಳೆಗನ್ನಡ
ಹಳಗನ್ನಡ
ನಡುಗನ್ನಡ
ಹೊಸಗನ್ನಡ
ಪೂರ್ವದ ಹಳೆಗನ್ನಡ ಕಾಲವನ್ನು ಪಂಪನ ಪೂರ್ವದ ಕಾಲ ಎಂದು ನಮ್ಮ ಅಧ್ಯಯನಕ್ಕೆ ಸುಲಭವಾಗಲ ಎಂದು ಗುರುತಿಸಿಕೊಂಡಿದ್ದೇವೆ. ಇಲ್ಲಿ ಗುಣನಂದಿ, ಅಸಗ ಎಂಬ ಮುಂತಾದ ಕವಿಗಳನ್ನು ಗುರುತಿಸಲಾಗುತ್ತದೆ. ಇವರ ಕನ್ನಡ ಹಳಗನ್ನಡಕ್ಕಿಂತ ಪೂರ್ವದ್ದಾಗಿತ್ತು.
ಹಲ್ಮಿಡಿ ಶಾಸನ
ಕ್ರಿಸ್ತಶಕ 450ರಲ್ಲಿ ನಾವು ನೇರವಾಗಿ ದಾಖಲೆ ಎಂದು ಬಿಂಬಿಸುವ ಪ್ರಮುಖ ಅಂಶ. ಕನ್ನಡದ ಮೊದಲ ಶಾಸನವಾಗಿದೆ. ಇದು 16 ಲೈನ್ ಗಳಿರುವ ಸಂಸ್ಕೃತ ತ ಕನ್ನಡ ಇಲ್ಲಿ 25 ಪದಗಳನ್ನು ಕನ್ನಡ ಪದಗಳು ಎಂದು ಗುರುತಿಸಿದ್ದಾರೆ.
ಕಪ್ಪೆ ಅರಭಟ್ಟನ ಶಾಸನ
ತ್ರಿಪದಿಯ ಕನ್ನಡ ವೃತ್ತಗಳ ಗಾಯಿತ್ರಿ ಎಂದು ದ.ರಾ ಬೇಂದ್ರೆಯವರು ಹೇಳಿದ್ದಾರೆ. ಕ್ರಿಸ್ತಶಕ 750 ರಲ್ಲಿ ಬಾದಾಮಿ ಚಾಲುಕ್ಯರ ಸಂದರ್ಭದಲ್ಲಿನ ಶಾಸನವಾಗಿದೆ. ಇಲ್ಲಿ ಕನ್ನಡ ಛಂದಸ್ಸಿನ ತಾಯಿಬೇರು ಅಂತ ಕರೆಯುವ ತ್ರಿಪದಿ ಚಂದೋರೂಪದಲ್ಲಿ ದೊರೆತಿದೆ. ಕನ್ನಡ ವೀರನ ಆವೇಶ ಯುತವಾದ ಸ್ವಭಾವ ಚಿತ್ರ ಲ್ಲಿದೆ
ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ
ಬಾಧಿಪ್ಪ ಕಲಿಗೆ|ಕಲಿಯುಗವಿಪರೀತನ್
ಮಾದವನೀತಂ ಪೆರನಲ್ಲ
ಕವಿರಾಜಮಾರ್ಗ
ಕನ್ನಡದ ಮೊದಲ ಕೃತಿ. ಕನ್ನಡದ ಮೊದಲ ಲಾಕ್ಷಣಿಕ ಕೃತಿ ಎಂದು ಕರೆಯಲಾಗುತ್ತದೆ. ಹಾಗೆಯೇ ಕವಿರಾಜಮಾರ್ಗವನ್ನು ಕವಿಗಳಿಗೆ ರಾಜಮಾರ್ಗ ತೋರಿಸುವ ಕೃತಿ ಎಂದು ಹೇಳಲಾಗುತ್ತದೆ. ಜೊತೆಗೆ ಜಗತ್ತಿನ ಪ್ರಮುಖ ರಾಜಕೀಯ ಚಿಂತನೆಯನ್ನು ಒಳಗೊಂಡ ಕೃತಿಗಳಲ್ಲೊಂದು ಎಂಬ ಶ್ರೇಷ್ಠತೆಯನ್ನು ಪಡೆದಿದೆ. ಕೆ ವಿ ಸುಬ್ಬಣ್ಣನವರು ಹೇಳುವಂತೆ ಕೌಟಿಲ್ಯನು ರಚಿಸಿದ ಮಂತ್ರಿ-ಪ್ರಭು-ವೀರಶಕ್ತಿ ಎಂಬ ರಾಜ್ಯಸೂತ್ರಕ್ಕೆ ಪರ್ಯಾಯವಾಗಿ ಕವಿರಾಜಮಾರ್ಗ ಭಾಷಾ ಶಕ್ತಿ-ಜನಶಕ್ತಿ-ರಾಜಶಕ್ತಿ ಎಂಬ ಹೊಸ ರಾಜ್ಯ ಸೂತ್ರವನ್ನು ಮಂಡಿಸುತ್ತದೆ. ಜೊತೆಗೆ ಪರಾಕ್ರಮ ರಾಜಕಾರಣಕ್ಕೆ ಬದಲಾಗಿ ಒಂದು ಭಾಷಾ ಚಹರೆಯುಳ್ಳ ಜನಪದವೇ ಕೇಂದ್ರವಾಗಿರುವ ಸಂಯಮ ರಾಜಕಾರಣದ ಭಾಷಾ ರಾಜ್ಯವನ್ನು ಇದು ಪ್ರತಿಪಾದಿಸುತ್ತದೆ ಎಂದಿದ್ದಾರೆ.
ವಡ್ಡಾರಾಧನೆ
ಕನ್ನಡದ ಮೊದಲ ಮೊದಲ ಗದ್ಯಕೃತಿ. ಇದನ್ನು ರಚಿಸಿದವರು ಶಿವಕೋಟ್ಯಾಚಾರ್ಯ. ಇದು 19 ಮಹಾತ್ಮರ ಜೀವನ ಕಥೆಗಳಾಗಿವೆ 19 ಕೆವಲಿಗಳ ಕಥೆ ಎಂದು ಕರೆಯುವುದು. ಪೂರ್ವದ ಹಳೆಗನ್ನಡ ಭಾಷೆಯಿಂದ ಕೂಡಿದ್ದರು ಹಳಗನ್ನಡ ಭಾಷೆಯನ್ನು ಬಳಸಿಕೊಂಡು ರಚನೆಯಾಗಿದೆ. ಜೈನ ಸಿದ್ಧಾಂತದ ದೃಷ್ಟಿಯಿಂದ ಸಮ್ಯಕ್ ಜ್ಞಾನ, ಸಮ್ಯಾಕ್ ದರ್ಶನ, ಸಮ್ಯಕ್ ಚಾರಿತ್ರ, ಸಮ್ಯಕ್ ತಪಸ್ಸು ನಾಲ್ಕು ಆರಾಧನೆಗಳನ್ನು ಸಾಧಿಸುವವರು ಅಂತಹ ಸಫಲವಾದ ಆರಾಧನೆಗಳೇ ಇಲ್ಲಿನ ಕಥೆಗಳಲ್ಲಿ ಸಾರವಾಗಿ ಬಂದಿದೆ.
ಪಂಪ ಯುಗ
ಪಂಪ
ವಡ್ಡಾರಾಧನೆ ಕೃತಿಯಲ್ಲಿ ಪೂರ್ವದ ಹಳೆಗನ್ನಡದಿಂದ ಹಳೆಗನ್ನಡದ ಕಡೆಗೆ ಬದಲಾವಣೆ ಕಾಣಬಹುದು. ಇದು ನೈಜವಾಗಿ ಪಂಪನಲ್ಲಿ ಕಂಡುಬರುತ್ತದೆ. ಕನ್ನಡ ಸಾಹಿತ್ಯದಲ್ಲಿ ಪಂಪನನ್ನು ಯುಗದ ಕವಿ ಯುಗ ಪ್ರವರ್ತಕ ಎಂದು ಕರೆಯಲಾಗುತ್ತದೆ. ಇದರಿಂದ ಈ ಕಾಲವನ್ನು ಪಂಪ ಯುಗ ಎಂದು ಕರೆಯಲಾಗಿದೆ. ಚಂಪೂ ಚಂದೋರೂಪವನ್ನು ಹೆಚ್ಚಾಗಿ ಕಾಣಬಹುದು. ಪಂಪನ ರಚಿಸಿದ ಎರಡು ಕಾವ್ಯಗಳು ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ.
ಆದಿಪುರಾಣ ಮೊದಲ ಕನ್ನಡ ಕಾವ್ಯ ವಾಗಿದ್ದು, ಸಂಸ್ಕೃತದ ಪೂರ್ವ ಪುರಾಣವನ್ನು ಆಕರವಾಗಿಟ್ಟುಕೊಂಡು ರಚನೆಯಾಗಿದೆ. ಚಂಪೂ ಬಳಕೆ. ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಅದು ಒಳಗೊಂಡು ರಚನೆಯಾಗಿದೆ. ವಿಕ್ರಮಾರ್ಜುನ ವಿಜಯ ಪಂಪ ಎರಡು ಮಾದರಿಗಳನ್ನು ನಿರ್ಮಾಣ ಮಾಡಿದ್ದ 1. ಆಗಮಿಕ 2.ಲೌಕಿಕ ಎಂದು. ಈ ಕೃತಿಯನ್ನು ಲೌಕಿಕ ಮಾರ್ಗದಲ್ಲಿ ಬರೆಯುವ ಮೂಲಕ ಅರಿಕೇಸರಿ ಮತ್ತು ಅರ್ಜುನನ ನಡುವೆ ಅಭೇದ ಕಲ್ಪಿಸಿ ರಚಿಸಿದ್ದಾನೆ. ಎರಡು ಕಾವ್ಯಗಳು ಹಳಗನ್ನಡದಲ್ಲಿ ರಚನೆಯಾಗಿವೆ. ಇಲ್ಲಿ ಪೊನ್ನ, ರನ್ನ, ನಾಗವರ್ಮ ಮುಂತಾದವರು ಹಳೆಗನ್ನಡದಲ್ಲಿ ತಮ್ಮ ಕಾವ್ಯಗಳನ್ನು ರಚಿಸಿದರು ತದನಂತರದಲ್ಲಿ ಹಳಗನ್ನಡ ನಡುಗನ್ನಡಕ್ಕೆ ಬದಲಾಗುವುದು. ಬದಲಾವಣೆಗೊಂಡದ್ದನ್ನು ನೇರವಾಗಿ ವಚನ ಸಾಹಿತ್ಯದಲ್ಲಿ ಗುರುತಿಸಬಹುದು.
ವಚನ ಸಾಹಿತ್ಯ
ಇಲ್ಲಿ ಪಂಡಿತರಿಂದ ವಿದ್ವಾಂಸರಿಂದ ಕೂಡಿದ ಹಳಗನ್ನಡ ನಂತರದಲ್ಲಿ ಶ್ರೀಸಾಮಾನ್ಯರು ಬಳಸುವ ಭಾಷೆಯ ಬಳಕೆ ಉಂಟಾಯಿತು. ಇದನ್ನು ಸಾಧಿಸಿದ್ದು ವಚನ ಸಾಹಿತ್ಯ. ಇದನ್ನು ಜಗತ್ತಿನ ಸಾಹಿತ್ಯದಲ್ಲಿ ವಿಶಿಷ್ಟವೆಂದು ಹಾಗೆಯೇ ನಾವು ಆರಾಧಿಸುವ ದೈವವನ್ನು ಕನ್ನಡದಲ್ಲಿ ಆರಾಧಿಸಬಹುದೆಂದು ತೋರಿಸಿಕೊಟ್ಟವರು. ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಸಾಮಾಜಿಕ ಮೌಲ್ಯಗಳನ್ನು ಧಾರ್ಮಿಕ ಮೌಲ್ಯಗಳನ್ನಾಗಿ ಮಾರ್ಪಡಿಸಿ, ದಯೆ ಧರ್ಮದ ಮೂಲವಯ್ಯ ಎಂದು ಧರ್ಮವನ್ನು ಅತಿ ಸರಳೀಕರಿಸಿದ ಹಂತವಿದು. ಭಾಷೆ ವೈಯಕ್ತಿಕ ನೆಲೆಯಲ್ಲಿ ಬೆಳೆಯಿತು ಎನ್ನಬಹುದು. ಇಲ್ಲಿಂದ ಭಾಷೆಯು ದೇಸಿಯತೆ, ಸಂಸ್ಕೃತಿಯ ದೇಶಿಯತೆ ಭಾಷೆಯೊಳಗೆ ಸೇರಿ ಬೆಳಯತೊಡಗಿತು. ನಂತರದಲ್ಲಿ ವಚನಕಾರರು ಹರಿಹರ, ರಾಘವಾಂಕ, ಕುಮಾರವ್ಯಾಸರ ಮೂಲಕ ಕನ್ನಡ ಬೆಳೆಯುತ್ತದೆ. ಅಸಮಾನತೆಗಳ ಬಗೆಗೆ ಬೆಳಕು ಚೆಲ್ಲುವ ಮೂಲಕ ಭಾಷೆಗೆ ಅತಿಯಾದ ಕೊಡುಗೆಯನ್ನು ನೀಡಿತು. 19ನೇ ಶತಮಾನ ಮುದ್ದಣನ ನಂತರದಿಂದ ಹೊಸಗನ್ನಡ ಅಂದ್ರೆ ಇಂದಿನ ಕನ್ನಡ ಶುರುವಾಗತ್ತ ಬರುತ್ತದೆ
|
ReplyForward
|



