ಕನ್ನಡ ಸಾಹಿತ್ಯ ಚರಿತ್ರೆ – Kannada Sahitya Charitre

ಕನ್ನಡ ಸಾಹಿತ್ಯ ಚರಿತ್ರೆ Kannada Sahitya charitre
ಕನ್ನಡ ಸಾಹಿತ್ಯ ಚರಿತ್ರೆ Kannada Sahitya charitre

ಕನ್ನಡ ಸಾಹಿತ್ಯ ಚರಿತ್ರೆ

ಕನ್ನಡ ಸಾಹಿತ್ಯ ಚರಿತ್ರೆ – Kannada Sahitya Charitre- ಸಾಹಿತ್ಯ ಎಂಬುದು ಒಂದು ಸಂಸ್ಕ್ರತಿಯ ವಾಹಕವೂ ಹೌದು. ಹಾಗೆಯೇ ಕಲೆ, ಶಾಸ್ತ್ರಗಳನ್ನು ಹೊಂದಿದ್ದು  ಭಾಷಾ ಮಾದ್ಯಮವಾಗಿ ರಚನೆಯಾಗಿರುವ ಕಲಾಕೃತಿಯೂ ಸಾಹಿತ್ಯವೇ ಆಗಿದೆ. ಇದರೊಳಗೆ ಶುದ್ಧ ಸಾಹಿತ್ಯ ಮತ್ತು ಶಾಸ್ತ್ರ ಸಾಹಿತ್ಯ ಎಂಬ ವಿಧಗಳನ್ನು ಮಾಡಿಕೊಳ್ಳಲಾಗಿರುತ್ತದೆ. ಶುದ್ಧ ಸಾಹಿತ್ಯ ಎಂದರೆ ಸೃಜನಶೀಲ ಸಾಹಿತ್ಯವಾಗಿದೆ. ಜೊತೆಗೆ ಇದೊಂದು ಕಲೆ ಮತ್ತು ಶಾಸ್ತ್ರ ಸಾಹಿತ್ಯ ಎಂದರೆ ವಿಜ್ಞಾನದ ರೀತಿಯಲ್ಲೇ ಇರುತ್ತದೆ. ಇಲ್ಲಿ ಮುಖ್ಯವಾಗಿ ಸಾಹಿತ್ಯ ಚರಿತ್ರೆ ಎಂದರೇನು? ಒಂದು ಗ್ರಂಥ ಸಮುದಾಯದ ವ್ಯವಸ್ಥಿತವಾಗಿ ಅಧ್ಯಯನ ಮಾಡುವುದನ್ನೇ ಸಾಹಿತ್ಯ ಚರಿತ್ರೆ ಎನ್ನುವರು. 

ನಮ್ಮ ಸಾಹಿತ್ಯ ಚರಿತ್ರೆಯನ್ನು ಗುರುತಿಸಲು ಇರುವ ಆಧಾರಗಳು

1. ಶಾಸನಗಳು

ರಾಜನು ತಮ್ಮ ಮಾಹಿತಿ ಅಥವಾ ಸಂದೇಶಗಳನ್ನು ಸಾರಲು ಕಲ್ಲಿನ ಮೇಲೆ ಕೆತ್ತಿಸುತ್ತಿದ್ದನ್ನು ಶಾಸನಗಳು ಎನ್ನುವರು. ಇದರ ಮೂಲಕ ರಾಜನ ಆಳ್ವಿಕೆಗೆ ಒಳಪಟ್ಟ ರಾಜ್ಯಗಳು ಮುಖ್ಯವಾಗಿ ಗಡಿಭಾಗಗಳು , ಭಾಷೆ, ಅವರ ಆರಾಧನಾ ಸಂಸ್ಕ್ರತಿಗಳು, ಸಂಪತ್ತು ಮುಂತಾದವನ್ನು ಶಾಸನಗಳ ಮೂಲಕ ತಿಳಿಯಬಹುದಾಗಿದೆ. ಹೀಗೆಯೇ ಕನ್ನಡ ಭಾಷೆಯ ಪ್ರಾಚೀನತೆ ಮತ್ತು ಅದರ ಸಾಹಿತ್ಯವನ್ನು ತಿಳಿಯಲು ಇದು ಪ್ರಮುಖ ಸಾಧನಗಳಾಗಿವೆ.

I. ಬ್ರಹ್ಮಗಿರಿ ಶಾಸನ

ಅಶೋಕನ ಬ್ರಹ್ಮಗಿರಿ ಶಾಸನ. ಇದು ಕ್ರಿ. ಪೂ. 3ನೇ ಶತಮಾನಕ್ಕೆ ಸೇರಿದುದಾಗಿದೆ. ಇದರಲ್ಲಿ “ಇಸಿಲ” ಎಂಬ ಪದವಿದೆ. ಇದು ತಮಿಳಿನ “ಎಯಿಲ್” ಪದಕ್ಕೆ ಸಂವಾದಿಯಾಗಿದ್ದು‌. ಇದರ ಅರ್ಥ ಕೋಟೆ ಎಂಬ ಅರ್ಥ ನೀಡುತ್ತದೆ. ಎಂದು D.L.ನರಸಿಂಹಚಾರ್ ಅವರು ತಿಳಿಸಿಕೊಟ್ಟಿದ್ದಾರೆ. ಇದರ ಮೂಲಕ ಕನ್ನಡ ಚರಿತ್ರೆಯ ಕಾಲಾವಧಿ 2000 ವರ್ಷಕ್ಕಿಂತ ಹಿಂದೆ ಎಂದು ಹೇಳಬಹುದು.

II. ಹಲ್ಮಿಡಿ ಶಾಸನ

ಇದು ಕ್ರಿ.ಶ 450ಕ್ಕೆ ಸೇರಿದ್ದಾಗಿದೆ.

ಸಂಸ್ಕ್ರತದಲ್ಲಿ ರಚನೆಯಾಗಿದ್ದರುಊ 20 ಶಬ್ದಗಳು ಕನ್ನಡದ್ದವು. ಹಾಗೆಯೇ 16ಸಾಲಿನಿಂದ ನಿರ್ಮಾಣಗೊಂಡಿದೆ. ಇದೊಂದು ದಾನ ಶಾಸನವಾಗಿದೆ. ಇದು ಕದಂಬರ ಕಾಲದ ಕಾಕುಸ್ಥವರ್ಮನ ಕಾಲಕ್ಕೆ ಸೇರಿದುದಾಗಿದೆ. ಇದನ್ನು M. H. ಕೃಷ್ಣ ಅವರು ಸಂಶೋಧಿಸಿದರು ಮತ್ತು ಇದರ ಪಠ್ಯವನ್ನು ವಿಶ್ಲೇಷಿಸಿದ್ದಾರೆ.

ವಸ್ತು – ಪಲ್ಲವರೊಡನೆ ಯುದ್ಧದಲ್ಲಿ ಹೋರಾಡಿ ಗೆದ್ದ ವಿಜಾರಸ ಎಂಬುವನಿಗೆ ಕದಂಬರ ರಾಜರಾದ ಮೃಗೇಶ ಮತ್ತು ನಾಗೇಶ ಎಂಬುವರು “ಬಾಳ್ಗಚ್ಚು”ಕೊಟ್ಟರು ಎಂಬುದಾಗಿದೆ. ಇದರಲ್ಲಿ ಪೆತ್ತಜಯನ್ ಎಂಬ ಸಮಾಸ ಪದ ಮತ್ತು ಪೊಗಳೆಪಟ್ಟಣ ಎಂಬ ಕರ್ಮಣಿ ಪ್ರಯೋಗವನ್ನು ಕಾಣಬಹುದಾಗಿದೆ.

See this: https://youtu.be/ggXUBqK_RQE?si=1dqrlZsXLX7okqao

III. ಬಾದಾಮಿ ಶಾಸನ 

ಇದೊಂದು ಬಂಡೆಗಲ್ಲು ಶಾಸನವಾಗಿದ್ದು ಬಾದಾಮಿ ಚಾಲುಕ್ಯರಿಗೆ ಸೇರಿದ ಶಾಸನವಾಗಿದೆ. ಕನ್ನಡ ಸಾಹಿತ್ಯಕ್ಕೆ ಚಾರಿತ್ರಿಕವಾದ ಹಿನ್ನೆಲೆಯನ್ನು ಒದಗಿಸಿಕೊಟ್ಟ ಶಾಸನವಾಗಿದೆ. ಇಲ್ಲಿ ಕನ್ನಡ ಛಂದಸ್ಸು ಅಥವಾ ಕನ್ನಡ ಸಾಹಿತ್ಯದ ಗಾಯಿತ್ರಿ ಎಂದು ಕರೆಸಿಕೊಳ್ಳುವ “ತ್ರಿಪದಿ” ಛಂದೋಪ್ರಕಾರ ಮೊದಲ ಬಾರಿಗೆ ಇಲ್ಲಿ ನಮಗೆ ದೊರೆಯುತ್ತದೆ. ಇದರಲ್ಲಿ ಒಬ್ಬ ವ್ಯಕ್ತಿ ಅಂದರೆ ಕಪ್ಪೆ ಅರಭಟ್ಟನು ಎಂಬ ವ್ಯಕ್ತಿಯ ವರ್ಣನೆ ಇದೆ. 

ಸಾಧುಗೆ ಸಾಧು ಮಾರ್ಧುಯಂಗೆ ಮಾಧುರ್ಯಂ

ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್

ಮಾಧವನೀತನ್ ಪೆರನಲ್ಲ

ಈ ಶಾಸನವು ಪೂರ್ವದ ಹಳಗನ್ನಡಕ್ಕೆ ಸೇರಿದ್ದು, ಹಳಗನ್ನಡಕ್ಕೆ ವಾಲುತ್ತಿರುವುದನ್ನು ಇದರಲ್ಲಿ ಕಾಣಬಹುದು.

IV. ಶ್ರವಣಬೆಳಗೊಳ ಶಾಸನ

ಇದು ಶಾಸನಗಳ ಗುಂಪು ಶ್ರವಣಬೆಳಗೊಳದಲ್ಲಿ ದೊರೆಯುತ್ತದೆ. ಇದನ್ನು ಬಿ.ಎಲ್‌ ರೈಸ್ ರವರು ಮೊದಲು ಓದಿದವರು. ಇಲ್ಲಿ ಧರ್ಮ ಸಮಸ್ವಯತೆಯನ್ನು ಕಾಣಬಹುದು. ಅದರಲ್ಲಿ ಬರುವ ಸಾಲು

” ಸುರಚಾಪಂಬೊಲೆ ವಿದ್ಯುಲ್ಲತೆಗಳ ತೆರವೊಲ್ಮಂಜುವೊಲ್ತುಳು ಬೇಗಂ” ….ಇದು ಕನ್ನಡ ಶಾಸನ ಪರಂಪರೆಯಲ್ಲಿ ಉನ್ನತ ಸ್ಥಾನವನ್ನು ಇದು ಪಡೆದಿದೆ. 

V. ಸಿರಗುಂದದ ಶಾಸನ

ರಾಯಿಸರ ಇದನ್ನು ವರ್ಣಿಸಿದ್ದಾರೆ‌ ನಿವ್ವನೀತ ಎಂದು ಹೆಸರಾದ ದುರ್ವಿನೀತನ ಚರಿತ್ರೆಯನ್ನು ಒಳಗೊಂಡಿದೆ. ಪೂರ್ವದ ಹಳಗನ್ನಡ ಭಾಷೆಯಲ್ಲಿದೆ‌

2. ಗ್ರಂಥಗಳು

A. ಅನ್ಯ ಭಾಷಾ ಗ್ರಂಥಗಳು

I. ಸಂಸ್ಕ್ರತದ ಮಹಾಭಾರತ

ಇದು ಭಾರತೀಯ ಮಹಾಕಾವ್ಯಗಳಲ್ಲೊಂದು. ಇಲದರಲ್ಲಿ ಕನ್ನಡ ನಾಡನ್ನು ಕುಂತಳ ದೇಶ ಎಂದೂ ಕರೆದಿದ್ದಾರೆ. ಕರ್ನಾಟಕದ ಪ್ರಾಚೀನತೆಯು ಮಹಾಭಾರತದ ಕಾಲಕ್ಕೆ ಹೋಗುತ್ತದೆ. ಕರ್ನಾಟಕ ಎಂಬ ಪದ ಮೊದಲಿಗೆ ಬಳಕೆಯಾಗಿರುವುದು ಇಲ್ಲಿಯೇ. ಮಹಾಭಾರತದ ಭೀಷ್ಮ ಮತ್ತು ಸಭಾ ಪರ್ವದಲ್ಲಿ ಕಾಣಲಾಗುತ್ತದೆ. 

ಸ್ತೋತ್ರ

ಅಥಾಪರೇ ಜನಪದಃ ದಕ್ಷಿಣಾ ಭರತರ್ಷಭ

ದ್ರಾವಿಡಃ ಕೇರಲಾಃ ಪ್ರಾಚ್ಯ ಮೂಷಿಕ ವನವಾಸಿಕಾ

ಕರ್ನಾಟಕ ಮಹಿಷಕ ವಿಕಲ್ಒ ಮೂಷಕಸ್ತಥಾ

ಝಿಲ್ಲಿಕಾ ಕುಂತಲಾಶ್ಬೃವಸೌ ಹೃದಾ ನಭ ಕಾನನಾಃ.  ಇಲ್ಲಿ ಬಂದಿರುವಕರ್ನಾಟಕ, ಮಹಿಷಕ ಮತ್ತು ಕುಂತಲಗಳು ಎಂಬವು ಕರ್ನಾಟಕದ ಪ್ರದೇಶಗಳನ್ನೇ ಸೂಚಿಸುತ್ತಿವೆ.

Read this:https://rvwritting.com/kas-2024-kpsc/

II. ಕ್ರಿ.ಶ 150ರಲ್ಲಿ ಗ್ರೀಕ್ ಪ್ರವಾಸಿಗ ಅಥವಾ ಬರಹಗಾರ. ಟಾಲೆಮಿ ಭಾರತಕ್ಕೆ ಭೇಟಿ ನೀಡಿದ್ದ. ಇವನೊಬ್ಬ ಭೂಗೋಳ ಶಾಸ್ತ್ರಜ್ಞನಾಗಿದ್ದು. ತನ್ನ ಕೃತಿಯಲ್ಲಿ ಕರ್ನಾಟಕದ ಕೆಲವೊಂದು ಸ್ಥಳಗಳನ್ನು ಗುರುತಿಸಿದ್ದಾನೆ. ಬಡಿಯಮೊಯ್(ಬಾದಾಮಿ), ಇಂಡೆ(ಇಂಡಿ), ಪೆಟ್ರಿಗಾಲ(ಪಟ್ಟದಕಲ್ಲು), ಕಲಿಗೇರಿಸ್(ಕಲ್ಕೇರಿ), ತಬಾಸೊ(ತವಸಿ), ಮೊದುಗಲ್ಲ(ಮುದ್ಗಲ್), ಸಬಥ(ಸವದಿ), ಬನೌಸಿ(ಬನವಾಸಿ), ಮುಂತಾದ ಹೆಸರುಗಳನ್ನು ತನ್ನ ಗ್ರಂಥದಲ್ಲಿ ಬಳಸಿದ್ದಾನೆ. 

III. ತಮಿಳಿನ ಕಾವ್ಯವಾದ ಶಿಲಪ್ಪದಿಗಾರಂ ನಲ್ಲಿ ಕನ್ನಡ ನಾಡನ್ನು ಕರುನಾಡರ್ ಎಂದು ಹೇಳಲಾಗಿದೆ. 

IV. ಒಂದು ಮತ್ತು ಎರಡನೇ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಶಾತವಾಹನರಲ್ಲಿನ ಹಾಲ ಎಂಬ ರಾಜನು ‘ಗಾಥಾಸಪ್ತಶತಿ’ ಎಂಬ ಕಾವ್ಯವನ್ನು ರಚಿಸಿದ್ದಾನೆ. ಇದು ಪ್ರಾಕೃತ ಭಾಷೆಯಲ್ಲಿದೆ. ಇವನು ಕುಂತಲ ಜನಪದೇಶ್ವರ ಎಂದು ತನ್ನನ್ನು ಕರೆದುಕೊಂಡಿದ್ದಾನೆ. ಇಲ್ಲಿ ಪೊಟ್ಟ(ಹೊಟ್ಟೆ) ನಾಮಪದವಾಗಿದ್ದು, ಪೆಟ್ಟು(ಹೊಡೆ), ತೀರ್(ಶಕ್ಯವಾಗು) ಎಂಬ ಧಾತುಗಳನ್ನು ಬಳಸಿಕೊಂಡಿರುವುದರಿಂದ ಪ್ರಾಕೃತ ಭಾಷೆಗಿಂತ ಹಿಂದಿನ ಭಾಷೆಯ ಸಾಹಿತ್ಯದಿಂದಲೇ ಇವು ಬಂದಿರಬಹುದು ಎಂದು ಊಹಿಸಲು ಸಾಧ್ಯವಿದೆ.

V. ಈಜಿಪ್ಟ್ ನಲ್ಲಿ ದೊರೆತಿರುವ ಗ್ರೀಕ್ ಪ್ರಹಸನ “ಆಕ್ಸಿರೆಂಚಿಸ್ ಪಾಪಿರೈ” ನಲ್ಲಿ ಕೆಲವೊಂದು ಪದಗಳಿವೆ ಎಂಬ ವಾದವನ್ನು ಪೈರವರು ಮಾಡುತ್ತಾರೆ. ಅಲ್ಲಿ ಸಿಕ್ಕಿರುವ ಪದಗಳು ಕರಾವಳಿ ಭಾಗಕ್ಕೆ ಸಂಬಂಧಿಸಿರುವಂತದ್ದು ಎಂದು ಹೇಳಲಾಗಿದೆ.

B. ಕನ್ನಡದ ಗ್ರಂಥಗಳು

I. ಕವಿರಾಜಮಾರ್ಗ

ಕನ್ನಡದ ಮೊದಲ ಉಪಲಬ್ದ ಲಾಕ್ಷಣಿಕ ಕೃತಿಯಾಗಿದೆ. ಲಾಕ್ಷಣಿಕ ಎಂದರೆ ಕಾವ್ಯದ ರಚನೆಗೆ ಬೇಕಾದ ನಿಯಮಗಳನ್ನು ಹೇಳುವ ಕೃತಿಯಾಗಿದೆ. ಇದು ದಂಡಿಯ ಕಾವ್ಯಾದರ್ಶ ಕೃತಿಯನ್ನು ಆಕಾರವಾಗಿಟ್ಟು ರಚನೆಯಾಗಿದೆ. ಇದೊಂದು ಅನುವಾದ ಕೃತಿಯಲ್ಲ.  ಇದರ ಕರ್ತೃ ಶ್ರೀ ವಿಜಯ. ರಾಷ್ಟ್ರಕೂಟರ ಕಾಲದ ಅಮೋಘ ವರ್ಷ ನೃಪತುಂಗನ ಕಾಲದಲ್ಲಿದ್ದ ಕವಿಯಾಗಿದ್ದಾನೆ. * ಕವಿರಾಜಮಾರ್ಗದಲ್ಲಿ ಮೂರು ಪರಿಚ್ಛೇದಗಳಿವೆ

೧. ದೋಷಾನುದೋಷ ನಿರ್ಣಯ

೨. ಶಬ್ದಾಲಂಕಾರ ವರ್ಣನ ನಿರ್ಣಯ

೩. ಅರ್ಥಾಲಂಕಾರ ವರ್ಣನ ನಿರ್ಣಯ

ವೈಶಿಷ್ಟ್ಯಗಳು

೧. ಕನ್ನಡ ಗಬ್ಬಂಗಳೊಳ್ – ಎಂಬ ಗದ್ಯಕತೆ ಎಂಬ ಪ್ರಕಾರದ ಉಲ್ಲೇಖವಿರಬಹುದು.

೨. ನುಡಿಗೆಲ್ಲ ಸಲ್ಲದ ಕನ್ನಡದೊಳ್ – ಇಲ್ಲಿ ಚೆತ್ತಾಣ, ಬೆದಂಡೆ ಎಂಬ ಕಾವ್ಯ ಪ್ರಕಾರಗಳನ್ನು ತಿಳಿಸಿದೆ. 

೩. ಈ ಕಾಲದಲ್ಲಿ ಪಳಗನ್ನಡ ಸ್ವರೂಪ ಕನ್ನಡ ಭಾಷೆಗೆ ಬಂದಿದ್ದೆದು ತಿಳಿಸಿದೆ. .

೪. ಕನ್ನಡ ನಾಡಿನ ವಿಸ್ತಾರ, ತಿರುಳ್ಗನ್ನಡದ ಸೀಮೆ ಎಂಬ ಉಲ್ಲೇಖ

ಕಾವೇರಿಯಿಂದ ಮಾ ಗೋದಾ

ವರಿವರಮಿರ್ದನಾಡದಾ ಕನ್ನಡದೊಳ್

ಭಾವಿಸಿದ ಜನಪದಂ ವಸುಧಾ

ವಲಯವಿಲೀನ ವಿಶದ ವಿಷಯ ವಿಶೇಷ್ಂ. 

೫. ಕವಿರಾಜ ಮರ್ಗಾಕಾರ ಪದ್ಯ ಮತ್ತು ಗದ್ಯಕವಿಗಳನ್ನು ಹೆಸರಿಸಿದ್ದಾನೆ. 

ವಿಮಳೋದಯ, ನಾಗಾರ್ಜುನ ಜಯಬಂಧು, ದುರ್ವಿನೀತಾದಿಗಳ್ ಈ ಕ್ರಮದೊಳ್ ನೆಗಮ್ಚಿ ಗದ್ಯಾಶ್ರಮ ಪದಗುರುತಾಪ್ರತೀತಿಯಂ ಕೆಯ್ ಕೊಂಡರ್

೬. ಪದ್ಯಕಾರರು

ಪರಮ ಶ್ರೀವಿಜಯ, ಕವೀಶ್ವರ, ಪಂಡಿತ ಚಂದ್ರ, ಲೋಕಪಾಲರನ್ನು ಶ್ರೀ ವಿಜಯನು ಕವಿರಾಜಮಾರ್ಗದಲ್ಲಿ ಉಲ್ಲೇಖಿಸಲಾಗಿದೆ. 

* ಕನ್ನಡಿಗರ ಉದಾರತೆ

ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮಂ ಧರ್ಮಮಂ – ಇದು ನಮ್ಮ ನಡುವಿನ ಸಹಬಾಳ್ವೆ ಮತ್ತು ಸಹಿಷ್ಣುತೆ ಬಗೆಗೆ ತಿಳಿಸುತ್ತದೆ.

೬. ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ – ಅಕ್ಷರ ತಿಳಿದಿಲ್ಲವಾದರೂ ಜನರು ಸಾಹಿತ್ಯದ ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ತಿಳಿಸುತ್ತದೆ. 

* ಕಾವ್ಯ ಕುರಿತು ಪದ್ಯಂ ಸಮಸ್ತ ಜನ ಹೃದ್ಯಂ ಎಂದು ಹೇಳಲಾಗಿದೆ. 

* ಅಲಂಕಾರಗಳ ಬಗೆಗೆ ಮೊದಲಿಗೆ ಪ್ರಾಸ್ತಾಪ 

* ಚೆತ್ತಾಣ, ಬೆದಂಡೆ , ಪಗರಣಗಳೆಂಬ ಸಾಹಿತ್ಯ ಪ್ರಕಾರಗಳ ಉಲ್ಲೇಖ.

ಪಳಗನ್ನಡ ಎಂಬ ಪದ ಮೊದಲ ಬಾರಿಗೆ ಉಲ್ಲೇಖ

II. ಸೈಗೊಟ್ಟ ಶಿವಮಾರ (ಸು.800)

ಇವನು ಗಂಗರ ರಾಜ ಗಜ ಶಾಸ್ತ್ರದ ಮೇಲೆ ಅಷ್ಟಕ ಬರೆದಿದ್ದಾನೆ ಇದು ಓವನಿಗೆ ಒನಕೆವಾಡುವಾಗಿ ಜನಪ್ರಿಯವಾಯಿತು. ಇದು ಕನ್ನಡದ ಮೊದಲ ಅಷ್ಟಕ ಕೃತಿ, ಒನಕೆವಾಡು -ಕುಟ್ಟುವ ಹಾಡು

ಓವನಿಗೆ – ಬೀಸುವ ಹಾಡು

III. ವಡ್ಡಾರಾಧನೆ –

ಇದರ ಆಕರ ಗ್ರಂಥ ಹರೀಶೇಣನ ಬೃಹತ್ ಕಥೆ

ಇದರಲ್ಲಿ 19 ಕಥೆಗಳನ್ನು ಒಳಗೊಂಡಿದೆ ಇದನ್ನು ಶಿವಕೋಟ್ಯಾಚಾರ್ಯರು ರಚಿಸಿದ್ದಾರೆ. ಇದಕ್ಕೆಉಪಸರ್ಗ ಕೇ ಬಲಿಗಳ ಕಥೆಯೆಂದು ಮತ್ತೊಂದು ಹೆಸರಿದೆ. ಭಗವತೀ ಆರಾಧನೆಯಲ್ಲಿರುವ ಕಥೆಗಳೇ ಎಂದು ಹೇಳಲಾಗುತ್ತದೆ.

2 thoughts on “ಕನ್ನಡ ಸಾಹಿತ್ಯ ಚರಿತ್ರೆ – Kannada Sahitya Charitre”

  1. Pingback: Kannada Sahitya Charitre Part - 2. ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮ & ಪಂಪ ಪೂರ್ವ ಯುಗ - rvwritting

Leave a Comment

Your email address will not be published. Required fields are marked *

Scroll to Top