ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು #National parks in Karnataka


             ಕರ್ನಾಟಕ ಭಾರತದ ಬಹು ಮುಖ್ಯ ರಾಜ್ಯಗಳಲ್ಲೊಂದು. ದೇಶದ ಜಿಡಿಪಿಗೆ ತಾನು ನೀಡುತ್ತಿರುವ ಪಾಲಿನಂತೆ ದೇಶದ ವನ್ಯಜೀವಿ ಸಂಪತ್ತಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳು ಹರಿದುಹೋಗಿರುವುದರಿಂದ ನಿತ್ಯ ಹರಿದ್ವರ್ಣ ಕಾಡುಗಳನ್ನು ಕಾಣಬಹುದು. ಹಾಗೆಯೇ ವೈವಿಧ್ಯಮಯವಾದ ಸಸ್ಯಸಂಪತ್ತು, ಪ್ರಾಣಿ ಸಂಪತ್ತು, ಪಕ್ಷಿ ಸಂಪತ್ತನ್ನು ಕರ್ನಾಟಕ ಒಳಗೊಂಡಿದೆ. ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಆವಾಸವನ್ನು ಒದಗಿಸುವ ಮೂಲಕ ಸಂರಕ್ಷಣೆಯನ್ನು ಮಾಡುವ ಹೊಣೆಗಾರಿಕೆಯನ್ನು ಹೊತ್ತಿದೆ ಹಾಗೆಯೇ ಇಂತಹ ಸಂರಕ್ಷಣೆಗಾಗಿ ರಾಜ್ಯದಲ್ಲಿ ಐದು ರಾಷ್ಟ್ರೀಯ ಉದ್ಯಾನವನಗಳು ಸೃಷ್ಟಿಯಾಗಿವೆ.

ರಾಷ್ಟ್ರೀಯ ಉದ್ಯಾನವನ
ಇದೊಂದು ನೈಸರ್ಗಿಕ ಉದ್ಯಾನವನವಾಗಿದ್ದು, ಕೇಂದ್ರ ಸರ್ಕಾರದ ಮೂಲಕ ರಚನೆಯಾಗಿದೆ ಮತ್ತು ರಕ್ಷಿಸಲ್ಪಟ್ಟಿದೆ, ಜೊತೆಗೆ ಸಂರಕ್ಷಣೆಯ ಮೂಲ ಉದ್ದೇಶವನ್ನು ಹೊಂದಿದೆ ಆದಾಗಿಯೂ ಕೆಲವೊಂದು ದೇಶಗಳು ತಮ್ಮ ಸ್ವಂತ ರಾಷ್ಟ್ರೀಯ ಉದ್ಯಾನವನಗಳನ್ನು “ಸಮೃದ್ಧಿಗಾಗಿ ವನ್ಯ ಸಂಪತ್ತಿನ ಸಂರಕ್ಷಣೆ ಮತ್ತು ದೇಶದ ಹೆಮ್ಮೆಯ ಸಂಕೇತ ಎಂದು ಬಿಂಬಿಸುತ್ತವೆ”.
ಕರ್ನಾಟಕದಲ್ಲಿನ ಐದು ರಾಷ್ಟ್ರೀಯ ಉದ್ಯಾನವನಗಳು

1. ಬಂಡಿಪುರ ರಾಷ್ಟ್ರೀಯ ಉದ್ಯಾನವನ 

        ಬಂಡೀಪುರ ರಾಷ್ಟ್ರೀಯ ಉದ್ಯಾನವನ 1974ರಲ್ಲಿ ಹುಲಿ ಮೀಸಲು ಪ್ರದೇಶವಾಗಿ ಸ್ಥಾಪಿಸಲ್ಪಟ್ಟಿತು. ಇದು ಕರ್ನಾಟಕದ ಚಾಮರಾಜನಗರ ಜಿಲ್ಲೆಗೆ ಒಳಪಟ್ಟಿದ್ದು, ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ಕೇರಳದ ವೈನಾಡ್ ವನ್ಯಜೀವಿಧಾಮದೊಂದಿಗೆ ಹೊಂದಿಕೊಂಡಿದೆ. ಇದು ಒಟ್ಟು 874 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಇದರೊಂದಿಗೆ ನೀಲಗಿರಿ ಬಯೋಸ್ಪಿಯರ್ ನಲ್ಲಿ ಬರುವ ಪ್ರಮುಖ ರಾಷ್ಟ್ರೀಯ ಉದ್ಯಾನವನ ಜೊತೆಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಆವಾಸಸ್ಥಾನವು ಆಗಿದೆ. ಇದು ಭಾರತದ ಎರಡನೇ ಅತಿ ದೊಡ್ಡ ಹುಲಿ ಮೀಸಲು ಪ್ರದೇಶವಾಗಿದೆ ಹಾಗೆಯೇ ಕಾಡಿನ ಆನೆಗಳ ಆವಾಸದಲ್ಲಿ ದಕ್ಷಿಣ ಏಷ್ಯಾದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ಇಲ್ಲಿ ಕಂಡುಬರುವ ಪ್ರಾಣಿಗಳೆಂದರೆ ಹುಲಿ, ಕಾಡು ನಾಯಿಗಳು, ಕಾಡು ಹಂದಿ, ಕರಡಿಗಳು, ಚಿರತೆ, ಜಿಂಕೆ, ಕಾಡೆಮ್ಮೆ ಮೊದಲಾದ ಪ್ರಾಣಿಗಳು ಕಂಡುಬರುತ್ತವೆ. ಈ ಉದ್ಯಾನವನದ ಉತ್ತರದಲ್ಲಿ ಕಬಿನಿ ನದಿ ಮತ್ತು ದಕ್ಷಿಣದಲ್ಲಿ ಮೋಯರ್ ನದಿಯಿಂದ ಸುತ್ತುವರಿದಿದೆ.
2. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ


     ಇದು ಕರ್ನಾಟಕದ ಮೈಸೂರು ಕೊಡಗು ಜಿಲ್ಲೆಯಲ್ಲಿದೆ ಇದು ನೀಲಗಿರಿ ಬಯೋಸ್ಪಿಯರ್ ಭಾಗವಾಗಿದ್ದು 1999 ರಲ್ಲಿ 37ನೇ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲ್ಪಟ್ಟಿದೆ. ಕಬಿನಿ ನದಿಯು ಬಂಡಿಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನನ್ನು ಪ್ರತ್ಯೇಕಿಸುತ್ತದೆ. ಇದರ ಒಟ್ಟು ವಿಸ್ತೀರ್ಣ 643.39 ಚದರ ಕಿಲೋ ಮೀಟರ್ ಇದನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದು ಕರೆಯುತ್ತಾರೆ. 1955 ರಲ್ಲಿ ಅಭಯಾರಣ್ಯವನ್ನಾಗಿ ಮಾಡಿ 1988 ರಲ್ಲಿ ರಾಷ್ಟ್ರೀಯ ಉದ್ಯಾನವನವನ್ನಾಗಿ ಮಾರ್ಪಾಡು ಮಾಡಲಾಯಿತು. ಇಲ್ಲಿ ಬಂಗಾಳದ ಹುಲಿ, ಚಿರತೆ, ಧೋಲೆ, ಕರಡಿ, ಕಿರುಬ, ಜಿಂಕೆ, ಕಾಡು ಹಂದಿ ಜೊತೆಗೆ 250 ಹೆಚ್ಚು ಜಾತಿಯ ಪಕ್ಷಿಗಳು ಇವೆ. ಈ ಉದ್ಯಾನವನ ಜೇನುಕುರುಬರು, ಬೆಟ್ಟ ಕುರುಬರು,  ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗಗಳ ನೆಲೆಬೀಡಾಗಿದೆ.

3. ಕುದುರೆಮುಖ ರಾಷ್ಟ್ರೀಯ ಉದ್ಯಾನವನ

        ಕುದುರೆಮುಖ ರಾಷ್ಟ್ರೀಯ ಉದ್ಯಾನವನವು 600 ಚದುರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದು, ಉಡುಪಿ ದಕ್ಷಿಣ ಕನ್ನಡ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಬ್ಬಿದೆ. ಇದು ಸಮುದ್ರಮಟ್ಟದಿಂದ 1892 ಮೀಟರ್ ಎತ್ತರದಲ್ಲಿದೆ ಹಾಗೆಯೇ ರಾಜ್ಯದ ಎರಡನೇ ಅತಿ ದೊಡ್ಡ ಪರ್ವತವೂ ಆಗಿದೆ. 1987ರಲ್ಲಿ ರಾಷ್ಟ್ರೀಯ ಉದ್ಯಾನವನವನ್ನಾಗಿ ಮಾಡಲಾಯಿತು. ಇದರೊಳಗೆ ತುಂಗಾ ಮತ್ತು ಭದ್ರಾ ನದಿಗಳು ಸುಗಮವಾಗಿ ಹರಿಯುತ್ತವೆ ಹಾಗೆ ಇದನ್ನು ಸಂಸೇಪರ್ವತ ಎಂದು ಕರೆಯಲಾಗುವುದರ ಜೊತೆಗೆ ಮುಖ್ಯವಾಗಿ ಇದು ಕಬ್ಬಿಣದ ಅದಿರು ಗಣಿಗಾರಿಕೆಯ ಪಟ್ಟಣವಾಗಿದೆ. ಇದನ್ನು ತುಂಗಾ, ಭದ್ರಾ, ನೇತ್ರಾವತಿಯ ಉಗಮ ಸ್ಥಾನವೆಂದು ಹೇಳಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಜಾಗತಿಕ ಹುಲಿ ಸಂರಕ್ಷಣಾ ಆದ್ಯತೆ 1ರಲ್ಲಿ ಬರುತ್ತದೆ. ಇಲ್ಲಿ ಹುಲಿ, ಚಿರತೆ, ಕಾಡು ನಾಯಿ, ಮಲಬಾರ್ ದೈತ್ಯ ಅಳಿಲುಗಳು, ಲಂಗುರುಗಳು, ಮಲಬಾರ್ ಟ್ರೋಜನ್, ಮಲಬಾರ್ ವಿಸ್ಲಿಂಗ್  ಥ್ರಷ್,   ಹಾರ್ನ್ ಬಿಲ್ ಮುಂತಾದ ಪ್ರಾಣಿ ಪಕ್ಷಿಗಳ ಜೊತೆಗೆ ಜಲಪಾತಗಳನ್ನು ಒಳಗೊಂಡಿದೆ

4. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

        ಇದು ಬೆಂಗಳೂರಿನಿಂದ 22 ಕಿಲೋಮೀಟರ್ ದೂರದಲ್ಲಿದೆ. 1974ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಗಿದೆ. ಪ್ರಾಣಿ ಶಾಸ್ತ್ರದ ಅಧ್ಯಯನಕ್ಕಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನಾಗಿ ಮಾಡಲಾಯಿತು. ಇದು 104.27 ಚತುರ್ ಕಿಲೋಮೀಟರ ವಿಸ್ತೀರ್ಣವನ್ನು ಹೊಂದಿದೆ. ಇದು ಆನೆಗಳ ಕಾರಿಡಾರ್ ಭಾಗವಾಗಿದ್ದು,  B.R ಹಿಲ್ಸ್ ಮತ್ತು ಸತ್ಯಮಂಗಲಮ್ ಅರಣ್ಯವನ್ನು ಸಂಪರ್ಕಿಸುತ್ತದೆ.  ಇಲ್ಲಿ ಹುಲಿ, ಸಿಂಹ, ಥಮಿನ್ ಜಿಂಕೆಗಳು ಹಾಗೂ ಜಿಂಕೆಗಳು ಹಿಮಾಲಯನ್ ಕಪ್ಪು ಕರಡಿ, ಮಲಬಾರ್ ದೈತ್ಯ ಅಳಿಲುಗಳು ಕಂಡುಬರುತ್ತವೆ. ಪಕ್ಷಿಗಳಲ್ಲಿ ಹೆರಾನ್, ಬಾಲದಂಡ, ಕಾಮನ್ಗ್ರೆ ಹಾರ್ನ್ ಬಿಲ್, ಬ್ರೌನ್ ಗೂಬೆ ಮುಂತಾದವು ಕಂಡು ಬರುತ್ತದೆ.

ಬಟರ್ಫ್ಲೈ ಪಾರ್ಕ್ 

2006 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ರಚನೆಯಾದ ಬಟರ್ಫ್ಲೈ ಪಾರ್ಕ್ ಇದು 7.5 ಎಕರೆ ವಿಸ್ತೀರ್ಣದಲ್ಲಿ ಹರಡಿದ್ದು 48 ವಿವಿಧ ಜಾತಿಯ ಚಿಟ್ಟೆಗಳನ್ನು ಒಳಗೊಂಡಿದೆ.

5. ಅಣಶಿ ರಾಷ್ಟ್ರೀಯ ಉದ್ಯಾನವನ


                ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ಬಳಿ ಇರುವ ರಾಷ್ಟ್ರೀಯ ಉದ್ಯಾನವನವಾಗಿದೆ. ಇದನ್ನು ಕಾಳಿ ಹುಲಿ ಮೀಸಲು ಪ್ರದೇಶ ಎಂದು ಮರುನಾಮಕರಣ ಮಾಡಲಾಗಿದೆ.  ಕಾಳಿ ನದಿಯ ಸುತ್ತಲಿನ ಪ್ರದೇಶ ಇದರ ವ್ಯಾಪ್ತಿಗೆ ಬರುತ್ತದೆ. ಇದು ಗೋವಾ ರಾಜ್ಯದ ನೇತ್ರಾವಳಿ ಮತ್ತು ಭಗವಾನ್ ಮಹಾವೀರ್ ವನ್ಯಜೀವಿಯು ಅಭಯಾರಣ್ಯಗಳೊಂದಿಗೆ ಹೊಂದಿಕೊಂಡಿದೆ. ಇಲ್ಲಿ ಬ್ಲಾಕ್ ಪ್ಯಾಂಥರ್ ಕಪ್ಪು ಚಿರತೆ ನೈಸರ್ಗಿಕವಾಗಿ ಕಂಡುಬರುವ ಏಷ್ಯಾದ ಏಕೈಕ ಉದ್ಯಾನವನವಾಗಿದೆ. ಇದು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವುದರಿಂದ ಇಲ್ಲಿ ಮಳೆ ಕಾಡನ್ನು ಕಾಣಬಹುದು. ಇಲ್ಲಿ ಹುಲಿ, ಜಿಂಕೆ, ಕಾಡು ಹಂದಿ ಜೊತೆಗೆ 197ಕ್ಕೂ ಅಧಿಕ ಪಕ್ಷಿ ಪ್ರಭೇದಗಳನ್ನು ಕಾಣಬಹುದು

ReplyForward

Leave a Comment

Your email address will not be published. Required fields are marked *

Scroll to Top