ಭಾರತ ದೇಶವು ಮಾನ್ಸೂನ್ ವಾಯುಗುಣ ಹೊಂದಿದ್ದು, ಉತ್ತರ ಭಾರತದಲ್ಲಿ ಕೃಷಿಗೆ ಮಾಳಯಾಶ್ರಿತ ಮತ್ತು ವರ್ಷಪೂರ್ತಿ ಹರಿಯುವ ನದಿಗಳನ್ನು ಹೊಂದಿರುವುದರಿಂದ ಕೃಷಿ ಸಾಧ್ಯತೆ ಹೆಚ್ಚಿದೆ. ಆದರೆ ಅದಕ್ಕೆ ವಿರುದ್ಧವಾಗಿ ದಕ್ಷಿಣ ಭಾರತವಿದೆ. ಇಲ್ಲಿ ಮಳೆಯಾಶ್ರತವೇ ಅತಿ ಹೆಚ್ಚು ಮತ್ತು ಋತುಮಾನಿಕವಾಗಿ ಹಿಯುವ ನದಿಗಳಿವೆ. ಇದರಿಂದ ಮಳೆಯ ಮೇಲಿನ ಅವಲಂಬನೆ ಹೆಚ್ಚು. ಮಳೆ ಚೆನ್ನಾಗಾದರೆ ಬೆಳೆ ಇಳುವರಿ ಚೆನ್ನಾಗಿ ಬರುತ್ತದೆ. ಮಳೆ ಇಲ್ಲವೆಂದರೆ ಬರಗಾಲದ ಪರಿಸ್ಥತಿ ಎಂದು ಘೋಷಿಸಬೇಕಾಗುತ್ತದೆ. ಇದರಿಂದ ನಮಗೆ ನೆನಪಾಗುವ ಒಂದು ಮಾತೆಂದರೆ ಭಾರತದ ಕೃಷಿ ಮಳೆಯೊಡನೆ ಆಡುವ ಜೂಜಾಟ”. ಇದು ಅಕ್ಷರಶಃ ನಿಜ. ಈಗ ಕರ್ನಾಟಕದಲ್ಲೂ ಇಂತಹ ಪರಿಸ್ಥಿತಿಯನ್ನು ಕಾಣಬಹುದು. ಈಗ ರಾಜ್ಯವು ಬರದ ಸ್ಥಿತಿಯಲ್ಲಿದೆ. ಅದಕ್ಕಾಗಿ ಕೃಷಿ ಭಾಗ್ಯ ಯೋಜನೆಯನ್ನು ಮರುಜಾರಿಗೆ ತರಲು ಸರ್ಕಾರ ಮುಂದಾಗಿದೆ. 2013 ರಿಂದ 2018ರವರೆಗೆ ಈ ಯೋಜನೆ ಜಾರಿಯಲ್ಲಿತ್ತು.
ಏನಿದು ಯೋಜನೆ
ಮಳೆಯಾಶ್ರಿತ ಕೃಷಿ ನೀತಿ 2014ರ ಪ್ರಕಾರ ಕೃಷಿ ಭಾಗ್ಯ ಯೋಜನೆಯಲ್ಲಿ 2023-2024ನೇ ಸಾಲಿನಲ್ಲಿ 24ಜಿಲ್ಲೆಗಳ 106ತಾಲ್ಲೂಕುಗಳಲ್ಲಿ 100ಕೋಟಿ ರೂಪಾಯಿ ಅನುದಾನದಲ್ಲಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಉದ್ದೇಶಗಳು
* ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯಾಗಿ ಮಾಡುವುದು
* ಮಳೆ ನೀರಿನ ಪರಿಣಾಮಕಾರಿ ಸಂಗ್ರಹಣೆ ಮತ್ತು ಬಳಕೆಯ ಮೂಲಕ ಉತ್ಪಾದಕತೆ ಹೆಚ್ಚಿಸುವುದು.
* ಕೃಷಿ ಆದಾಯ ಹೆಚ್ಚಿಸುವುದು
* ಮಳೆ ನೀರು ಪೊಲಾಗದಂತೆ ಕೃಷಿ ಹೊಂಡ ನಿರ್ಮಾಣ
ವೈಶಿಷ್ಟ್ಯಗಳು
450 ರಿಂದ 850ಮಿ.ಮೀ ನಡುವೆ ಸರಾಸರಿ ವಾರ್ಷಿಕ ಮಳೆ ಮಡೆಯುವ 5 ಕೃಷಿ ಒಣಹವೆ ಹವಾಮಾನ ವಲಯಗಳಲ್ಲಿ ಜಾರಿಗೆ ತರಲು ಮತ್ತು ವರ್ಷಕ್ಕೆ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ ಜಾರಿಗೆ ಬರಲಿದೆ. ಇದರ ಮೂಲಕ ಮಳೆ ನೀರು ಸಂಗ್ರಹಣೆ, ಕೃಷಿ ಹೊಂಡ ನಿರ್ಅಣ, ಕೃಷಿ ಹೊಂಡದಲ್ಲಿ ನೀರು ನಿಲ್ಲಲು ಪಾಲಿಥಿನ್ಕವರ್, ನೀರು ಮೇಲೆತ್ತಲು ಲಿಫ್ಟ್ ಪಂಪ್, ಡಿಸೇಲ್ ಆಧಾರಿತ ಮೋಟಾರ್ ಮತ್ತು ನೀರು ಹಾಯಿಸಲು ಪೈಪ್ ಖರೀಧಿಗೆ ಅನುದಾನ ನೀಡಲಾಗುತ್ತದೆ.
ಸಂಪುಟ ಸಭೆಯಲ್ಲಿ ಚರ್ಚಿಸಿದಂತೆ ರಾಜ್ಯದ ೫ ಒಣಹವೆ ವಲಯಗಳಲ್ಲಿ ತಾಲೂಕುವಾರು 152 ಕೃಷಿ ಹೊಂಡ ನಿರ್ಮಾಣ, ಪ್ರತಿ ತಾಲೂಕಿಗೆ 1.85 ಕೋಟಿ ರೂ, 106 ತಾಲೂಕುಗಳಲ್ಲಿ 16062 ಕೃಷಿ ಹೊಂಡ ನಿರ್ಮಾಣ ಮಾಡಲಾಗುತ್ತದೆ. ಜೊತೆಗೆ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಿ ಹಂತ ಹಂತವಾಗಿ 300ಹೈಟೆಕ್ ಹಾರ್ವೆಸ್ಟರ್ ಹಬ್ ಗಳಾಗಿ ಪರಿವರ್ತಿಸಲಾಗುವುದು ಎಂದು ಹೇಳಿದ್ದಾರೆ.
ಹಾರ್ವೆಸ್ಟರ್ ಹಬ್
ಹೈಟೆಕ್ ಕೃಷಿ ಸಲಕರಣೆಗಳನ್ನು ಆಯಾಯ ಪ್ರದೇಶಕ್ಕನುಗುಣವಾಗಿ ಸಂಗ್ರಹಿಸಿ ಬಾಡಿಗೆ ಆಧಾರದ ಮೇಲೆ ಅಗತ್ಯವಿರುವ ರೈತರಿಗೆ ಹಣದ ವೆಚ್ಚ ಕಡಿಮೆಯಾಗುತ್ತದೆ. ಇದರಲ್ಲಿ ಬಹು ಬೆಳೆ ಕಟಾವು, ಒಕ್ಕಣೆ ಯಂತ್ರ, ಕಬ್ಬು ಕಟಾವು ಯಂತ್ರ, ಟ್ರಾಕ್ಟರ್ ಚಾಲಿತ ಬಾರು ಬೆಳೆಗಳನ್ನು ಒಕ್ಕಣೆ ಮಾಡುವ ಯಂತ್ರ ಮುಂದಾದವು