ಗಜಕೇಸರಿ – #ಅರ್ಜುನ #Arjuna

           ಕರ್ನಾಟಕ ಸಾಂಸ್ಕ್ರತಿಕ, ಭೌಗೋಳಿಕ, ಶೈಕ್ಷಣಿಕ ಆರ್ಥಿಕ ಸಾಮಾಜಿಕ ಮೊದಲಾದ ವಿಚಾರಗಳಿಗೆ ಹೆಸರುವಾಸಿಯಾಗಿದೆ. ಸಾಂಸ್ಕೃತಿಕ ವಿಚಾರಗಳಲ್ಲಿ ನಾಡ ದೇವಿಯ ಆರಾಧನೆಯೂ ಒಂದು. ಇದು ಕರ್ನಾಟಕದಲ್ಲಿ ಕಾಣುವ ಬಹು ಮುಖ್ಯ ಹಬ್ಬ ಮತ್ತು ಸಂಗತಿಗಳಲ್ಲೊಂದು. ಏಕೆಂದರೆ ಮೈಸೂರು ರಾಜ ಪರಂಪರೆಯ ಹಿನ್ನೆಲೆಯಲ್ಲಿ ಬೆಳೆದು ಬಂದ ನಗರ, ಅದರ ಜೊತೆಗೆ ಅರಸೊತ್ತಿಗೆಯನ್ನು ನಡೆಸಿಕೊಂಡು ಬಂದಿದೆ. ಅರಸೊತ್ತಿಗೆಯ ಒಂದು ಕಾರ್ಯಕ್ರಮವಾಗಿ ಆನೆಯ ಮೇಲೆ ಚಿನ್ನದ ಅಂಬಾರಿ  ಇಟ್ಟು ರಾಜ ಅದರೊಳಗೆ ಕೂತು ಅಂದು ಎಲ್ಲರಿಗೂ ದರ್ಶನ ನೀಡುತ್ತಿದ್ದ. 
            ಭಾರತದಲ್ಲಿ ಅರಸೊತ್ತಿಗೆ ಕೊನೆಯಾದ ಮೇಲೆ ರಾಜನ ಸ್ಥಾನದಲ್ಲಿ ಚಾಮುಂಡಿ ದೇವಿಯನ್ನು ಕೂರಿಸಿ ಅರಮನೆಯಿಂದ  ಬನ್ನಿಮಂಟಪದವರೆಗೆ  ಚಿನ್ನದ ಅಂಬಾರಿಯನ್ನು ಆನೆಯು ಹೊತ್ತು ಸಾಗಬೇಕು. ಇದು ವಿಶ್ವದ ಖ್ಯಾತಿಯನ್ನು ಪಡೆದು “ವಿಶ್ವವಿಖ್ಯಾತ ಮೈಸೂರು ದಸರಾ” ಎಂದು ನಾಮಕರಣಗೊಂಡಿದೆ. ಅಂಬಾರಿಯು 750Kg ತೂಕವಿದ್ದು, ಇದನ್ನು ಯಾವುದಾದರು ಉಪಕರಣಗಳ ಮೇಲಿಟ್ಟು ಮೆರವಣಿಗೆ ಮಾಡಿದ್ದರೆ ವಿಶ್ವಖ್ಯಾತಿ ಗಳಿಸುತ್ತಿರಲಿಲ್ಲ. ಅಲ್ಲಿ ಖ್ಯಾತಿ ಗಳಿಸಲು ಮುಖ್ಯವಾದ ಕಾರಣ ಅಂಬಾರಿ – ಚಾಮುಂಡಿ ದೇವಿಯನ್ನು ಹೊತ್ತು ಸಾಗುವ ಆನೆ ಪ್ರಮುಖ ಕೇಂದ್ರಬಿಂದು.


                ಇಂತಹ ಅಂಬಾರಿಯನ್ನು 8 ಬಾರಿ ಹೊತ್ತಿದ್ದ ‘ದಸರಾ ಹೆಮ್ಮೆ’ಯಾದ ‘ಅರ್ಜುನ’ ಆನೆಯು ಕಾಡಾನೆಯನ್ನು ಸೆರೆ ಹಿಡಿಯುವ ಕಾರ್ಯದಲ್ಲಿ ಭಾಗಿಯಾಗಿದ್ದಾಗ ಕಾಡಾನೆಯ ತಿವಿತಕ್ಕೆ ಸಿಲುಕಿ ಅರ್ಜುನ ಆನೆಯು ಮರಣವನ್ನಪ್ಪಿದೆ. ಇದು ನಾಡಿನ ಜನತೆಗೆ ನೋವು ತರಿಸಿರುವ ದೊಡ್ಡ ವಿಷಯಗಳಲ್ಲೊಂದು. ಟಿವಿ, ಮೊಬೈಲ್, ಕಂಪ್ಯೂಟರ್ ಎಲ್ಲಿಯೇ ಈ ವಿಷಯವನ್ನು ಯಾರೇ ನೋಡಿದರು ಅವರ ಕಣ್ಣಾಲಿಗಳು ತೇವವಾಗದೆ ಇರುವುದಿಲ್ಲ. ಏಕೆಂದರೆ ನಾಡ ದೇವತೆಯನ್ನು ಹೊತ್ತು ಸಾಗಿದ್ದ ಅರ್ಜುನನ ಸಾವು ಇಂತಹ ರೀತಿಯಲ್ಲಿ ಆಗಿದ್ದನ್ನು ಯಾರು ಸಹಿಸಿಕೊಳ್ಳಲಿಕ್ಕೆ ಸಾಧ್ಯವಾಗುತ್ತಿಲ್ಲ. ಜೊತೆಗೆ ನಾಡಿನ ಜನತೆಗೆ ದಸರಾ ಅಂಬಾರಿಯನ್ನು ಹೊರುವ ಎಲ್ಲ ಆನೆಗಳು ಭಾವನಾತ್ಮಕವಾಗಿ ನಮ್ಮವಾಗಿಬಿಟ್ಟಿರುವುದರಿಂದ ನಮ್ಮ ಮನೆಯ ಸದಸ್ಯನೆ ತೀರಿಕೊಂಡನೇನೋ ಎಂಬ ಭಾವ ಮೂಡುತ್ತದೆ ಮುಖ್ಯವಾಗಿ ಹೆಚ್ಚು ನೋವು ಮೈಸೂರಿಗರಿಗೆ ಆಗಿರುತ್ತದೆ.

ಸಾವು ಹೇಗಾಯಿತು?


                 ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಯಳಸೂರು ಅರಣ್ಯ ವಲಯದ ಬಾಳೆಕೆರೆಯಲ್ಲಿ ಒಂಟಿ ಸಲಗ ಹಿಡಿಯೋ ಕಾರ್ಯಾಚರಣೆ ನಡೆಯುತ್ತಿತ್ತು. ಇಲ್ಲಿ ಸ್ಥಳಿಯರಿಗೆ ಕಾಡಾನೆಯಿಂದ ಭೀತಿ ಉಂಟಾಗಿತ್ತು ಕಾಡಾನೆ ಹಾವಳಿ ಪುನಃ ಪುನಹ ಪುನಹ  ನಡೆಯುತ್ತಿದ್ದುದರಿಂದ ಅರಣ್ಯ ಇಲಾಖೆಗೆ ದೂರುಗಳು ಬಂದಿದ್ದವು ದೂರಿನ ಅನ್ವಯ ಕಾಡಾನೆ ಹಿಡಿಯುವ ಕಾರ್ಯಾಚರಣೆಗೆ ದಸರಾ ಆನೆ ಅರ್ಜುನ ಸೇರಿ ಇತರ ನಾಲ್ಕು ಆನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮುಂದಾಗಿದ್ದರು. ಇಲ್ಲಿ ಕಾಡಾನೆಗೆ ಮದ ಹತ್ತಿತ್ತು. ಮದವೇರಿದ ಆನೆಯ ಎದುರಿಗೆ ಅರ್ಜುನ ಆನೆ ಬಂದು ಎರಡು ಆನೆಗಳ ನಡುವೆ ಕಾದಾಟ ಜೋರಾಗಿಯೇ ನಡೆಯುತ್ತಿರುವಾಗ ಜೊತೆಯಲ್ಲಿ ಬಂದಿದ್ದ ಆನೆಗಳು ಮತ್ತು ಅರ್ಜುನನ ಮಾವುತ ಓಡಿ ಹೋದರು. 
               ಅರ್ಜುನ, ಕಾಡಾನೆ ಜೊತೆ ಕಾಳಗ ನಡೆಸುವಾಗ ಅರ್ಜುನನ ಅನುಭವ, ಕಾಡಾನೆಗಳ ಸೆರೆಹಿಡಿದ ಅನುಭವ ಹೆಚ್ಚಿದ್ದು, ಇದು ಕೂಡ ತನ್ನ ರಕ್ಷಣೆಗೆ ಬರಲಿಲ್ಲವೇನೊ ಅಷ್ಟರಲ್ಲಾಗಲೇ ಅದರ ವಯಸ್ಸು 63 ವರ್ಷವೂ ಆಗಿತ್ತು. ಇನ್ನು ಕಾಡಾನೆ ಯವ್ವನದ ಹಂತದಲ್ಲಿದ್ದು, ಜೊತೆಗೆ ಮಧ ಏರಿದ್ದರಿಂದ ಅರ್ಜುನ ಕಾಡಾನೆ ತಿವಿತಕ್ಕೆ ಒಳಗಾಗಿ ತನ್ನ ಸಾವನ್ನು ತಂದುಕೊಳ್ಳಬೇಕಾಯಿತು ಮದುವೇರಿದ ಆನೆಯ ಎದುರಿಗೆ ಅರ್ಜುನ ಬರಲಿಲ್ಲದಿದ್ದರೆ ಇನ್ನಷ್ಟು ಅನಾಹುತಗಳು ಕೂಡ ಕಾಡಾನೆಯಿಂದ ಸಂಭವಿಸಬಹುದಿದ್ದವು. ಇಲ್ಲಿ ಅರ್ಜುನನ ಸಾವಿಗೆ ಆಡಳಿತಾತ್ಮಕ ಮತ್ತು ಮನುಷ್ಯ ಸಂಬಂಧಿ ಕಾರಣಗಳಿವೆ ಎಂದು ಹೇಳಲಾಗುತ್ತಿದೆ. ಇದು ತನಿಖೆಯಿಂದ ಸತ್ಯ ಹೊರಬರಬೇಕಿದೆ. ಇಂತಹ ಸಾವುಗಳು ಕೊನೆಯಾಗಬೇಕು.
ಅರ್ಜುನ ಸಿಕ್ಕಿದ್ದು


            ಪಶ್ಚಿಮ ಘಟ್ಟಗಳ ನಾಗರಹೊಳೆ ಅರಣ್ಯಕ್ಕೆ ಸಂಬಂಧಿಸಿದ ಕಾಕನಕೋಟೆ ಕಾಡಿನಲ್ಲಿ ಖೆಡ್ಡ ಕಾರ್ಯಾಚರಣೆಯಲ್ಲಿ ಅರ್ಜುನನನ್ನು ಸೆರೆಹಿಡಿಯಲಾಗಿತ್ತು. ನಂತರದಲ್ಲಿ ಖೆಡ್ಡದಲ್ಲಿ ಆನೆಯನ್ನು ಪಳಗಿಸಲಾಯಿತು. 1990ರ ನಂತರ ದಸರಾ ಉತ್ಸವದ ಮೆರವಣಿಗೆಗಳಲ್ಲಿ ಮತ್ತು ಶಿಬಿರಗಳಲ್ಲಿ ಪಾಲ್ಗೊಳ್ಳಲು ಅರ್ಜುನನಿಗೂ ಅವಕಾಶ ಕಲ್ಪಿಸಲಾಯಿತು. ಹಾಗೆ ನಿಶಾನೆಯಾಗಿಯೂ ತನ್ನ ಕಾರ್ಯವನ್ನು ಮಾಡಿತು. ದ್ರೋಣ ಮತ್ತು ಬಲರಾಮ ಆನೆಗಳ ಉತ್ತರಾಧಿಕಾರಿಯಾಗಿ 2012ರಿಂದ ಚಾಮುಂಡೇಶ್ವರಿ ದೇವಿ ಆಸೀನರಾಗಿ ಕುಳಿತ ಚಿನ್ನದ ಅಂಬಾರಿಯನ್ನು ಎಂಟು ಬಾರಿ ಹೊತ್ತು, ನಾಡಿನ ಜನತೆಯ ಮುಂದೆ ಮೆರೆಸಿ 2019 ರಲ್ಲಿ ಅಂಬಾರಿ ಹೊರುವ ಕೆಲಸದಿಂದ ನಿವೃತ್ತಿ ಪಡೆದು ಕಾಡಲ್ಲಿ ಮತ್ತು ಶಿಬಿರಗಳಲ್ಲಿ ವಾಸಮಾಡಿಕೊಂಡಿದ್ದ. ಇವನ ಉತ್ತರಾಧಿಕಾರಿಯಾಗಿ ಅಭಿಮನ್ಯು 2020 ರಿಂದ ಅಂಬಾರಿ ಹೊತ್ತು ದೇವಿಯನ್ನು ಮೆರೆಸುತ್ತಿದ್ದಾನೆ.
ಖೆಡ್ಡಾ ಎಂದರೇನು?
            ಈ ಖೆಡ್ಡಾ ಪದ್ಧತಿ ಎಂಬುದು ಗ್ರೀಕ್ನ ಮೆಗಸ್ತನಿಸ್ ಬರವಣಿಗೆಗಳಲ್ಲೂ ಕಾಣಬಹುದು. ಈ ಪದ್ಧತಿಯನ್ನು ಮೈಸೂರಿನಲ್ಲಿ G.P Anderson 1873-74 ರಲ್ಲಿ ಪರಿಚಯಿಸಿದ ಖೆಡ್ಡ ಎಂದರೆ ಆನೆಗಳ ಹಿಂಡನ್ನು ಸೆರೆ ಹಿಡಿಯಲು ಮಾಡಿರುವ ದಾಸ್ತಾನಿನಂತಿರುವ ಬಲೆಯಾಗಿರುತ್ತದೆ. ಇದನ್ನು ಭಾರತದಲ್ಲೂ ಬಳಸಲಾಗುತ್ತದೆ. ಇದನ್ನು ಬಿಟ್ಟು ಬೇರೆ ರೀತಿಯಲ್ಲಿ ಆನೆಗಳನ್ನು ಹಿಡಿಯುವ ಪದ್ಧತಿಗಳನ್ನು ಬಳಸಲಾಗುತ್ತದೆ.
ಪಿಟ್ ಸಿಸ್ಟಮ್ 


        ಆನೆಗಳು ಓಡಾಡುವ ಜಾಗವನ್ನು ನೋಡಿಕೊಂಡು ಓಡಾಡುವ ಜಾಗದಲ್ಲಿ ದೊಡ್ಡದಾದ ಗುಂಡಿ ತೆಗೆದು ಅದರ ಮೇಲೆ ಕಡ್ಡಿ ಹಾಕಿ ಎಲೆ ಮುಚ್ಚಿ ಬಿಡುತ್ತಿದ್ದರು. ಆನೆಗಳು ನಡೆದು ಬರುವಾಗ ಅದರೊಳಗೆ ಬೀಳುತ್ತಿದ್ದವು. ನಂತರ ಅವುಗಳನ್ನು ಮೇಲೆತ್ತಿ ಪಳಗಿಸುತ್ತಿದ್ದರು. ಈ ಪದ್ಧತಿಯಲ್ಲಿ ಆನೆಗಳಿಗೆ ಹೆಚ್ಚಿನದಾದ ಅನಾಹುತಗಳು ಉಂಟಾಗುತ್ತಿತ್ತು. ಮೇಲಿಂದ ಕೆಳಗೆ ಬಿದ್ದಾಗ ಆನೆಯ ಕಾಲಗಳು ಮುರಿಯುತ್ತಿದ್ದವು, ಬೇರೆ ಭಾಗಗಳ ಮೂಳೆಗಳು ಮುರಿಯುತ್ತಿದ್ದವು, ಕೆಲವು ಆನೆಗಳು ಸಾವನ್ನಪ್ಪಿದ್ದರಿಂದ ಈ ಪದ್ಧತಿ ಆನೆಗಳ ಜೀವಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತಿದೆ ಎಂದು ತಿಳಿದು ಕೈ ಬಿಡಲಾಯಿತು. ಇದರ ನಂತರ ಆಯ್ದುಕೊಂಡ ಪದ್ಧತಿ  ಖೆಡ್ಡಾ ಪದ್ಧತಿ.

            ಕಾಡಿನಲ್ಲಿರುವ ಕಾಡಾನೆಗಳಲ್ಲಿ ಜನರಿಗೆ ಭೀತಿ ಉಂಟು ಮಾಡಿರುವ ಅಥವಾ ಆನೆಗಳ ಅವಶ್ಯಕತೆ ಇದೆ ಎಂದು ತಿಳಿದಾಗ ಆನೆಯ ಗುಂಪುಗಳು ಕಂಡಾಗ ಆನೆಯನ್ನು ಗುಂಪಿನಿಂದ ಬೇರ್ಪಡಿಸಲಾಗುತ್ತದೆ. ಇತರ ಸಾಕಿರುವ ಹಾನಿಗಳನ್ನು ಬಳಸಿಕೊಳ್ಳುವ ಮೂಲಕ ಸಾಕಿರುವ ಆನೆಗಳು ಅದನ್ನು ಸುತ್ತುವರೆದು ಅತ್ತ ಇತ್ತ ಚಲಿಸದಂತೆ ಸರ್ಪಗಾವಲು ಹಾಕಿ ಆನೆಯ ಕತ್ತು ಕಾಲಿಗೆ ಹಗ್ಗ ಕಟ್ಟಲಾಗುತ್ತೆ. ಸಾಕಿರುವ ಆನೆಗಳು ಮುಂದೆ ಹೋದಂತೆ ಈ ಆನೆಯು  ಅದರ ಹಿಂದೆ ಹೋಗಿ ಆನೆಗಾಗಿಯೇ ತೆಗೆದಿರುವ ಮರದ ದಿಮ್ಮಿಗಳಿಂದ ನಿರ್ಮಿಸಿರುವ Stockade ಒಳಗೆ ಆನೆಯನ್ನು ಎಳೆದು ಬಿಡಲಾಗುತ್ತದೆ. 
                        ನಂತರ ಅದರ ಪ್ರವೇಶವನ್ನು ಮುಚ್ಚಿ ಅದರೊಳಗೆ ಅದರೊಳಗೆ ಆನೆಯನ್ನು ಬಿಟ್ಟು ಅದನ್ನು ನೋಡಿಕೊಳ್ಳಲು ಮತ್ತು ಪಳಗಿಸಲು ಒಂದಿಬ್ಬರನ್ನು ನೇಮಿಸಲಾಗುತ್ತದೆ. ಇವರು ದಿನದ 24 ಗಂಟೆಯೂ ಆನೆಯ ಬಳಿಯೇ ಇದ್ದು ಅದರ ಆಗೂ ಹೋಗುಗಳನ್ನು ನೋಡಿಕೊಳ್ಳಬೇಕು. ಇದರಿಂದ ಆನೆ ಮತ್ತು ಆ ವ್ಯಕ್ತಿಗಳ ನಡುವೆ (ಮಾವುತ) ಒಂದು ರೀತಿಯ ಸಂಬಂಧ ಬೆಳೆದು ನಂತರ ಆ ವ್ಯಕ್ತಿ ಹೇಳಿದಂತೆ ಆನೆ ಕೇಳುವ ಮಟ್ಟಕ್ಕೆ ಬದಲಾಗಿಬಿಡುತ್ತದೆ. ನಂತರ ಆನೆ ಮಾವುತನ ಆಜ್ಞೆಗಳನ್ನು ಪಾಲಿಸುತ್ತಾ ನಡೆಯುತ್ತದೆ. ಇದರಲ್ಲೂ ಆನೆಗಳನ್ನು ಹಿಡಿಯುವ ಸಂದರ್ಭದಲ್ಲಿ ಅಪಾಯಗಳು ಉಂಟಾಗುವ ಸಂಭವವಿದೆ. 
                ಖೆಡ್ಡಾ ಪದ್ಧತಿಯನ್ನು ಈಶಾನ್ಯ ರಾಜ್ಯಗಳಲ್ಲಿ ಪ್ರಮುಖವಾಗಿ ಅಸ್ಸಾಂನಲ್ಲಿ ಪಾಲನೆಯಲ್ಲಿದ್ದು, ಹಾಗೆ ದಕ್ಷಿಣದಲ್ಲಿ ಪ್ರಮುಖವಾಗಿ ಮೈಸೂರು ಸಂಸ್ಥಾನದಲ್ಲಿ ಆನೆಗಳ ಖೆಡ್ಡಾ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. ಅತಿ ಹೆಚ್ಚಿನ ಖೆಡ್ಡಾವನ್ನು ನಾಗರಹೊಳೆ ಅರಣ್ಯ ವ್ಯಾಪ್ತಿಯ ಕಾಕನಕೋಟೆಯಲ್ಲಿ  ಮಾಡಲಾಗಿದೆ. 1972 Wildlife Conservation Act  ಬಂದ ನಂತರ ಅದರ Schedule 1 ಅಡಿಯಲ್ಲಿ ಕಾನೂನು ಜಾರಿ ಮಾಡಿ 1973ರ ನಂತರ ಆನೆಯನ್ನು ಬಲಗೆ ಬೀಳಿಸುವ, ಖೆಡ್ಡಾ ಅಭ್ಯಾಸ ಪಾಲಿಸುವ, ಪ್ರಾಣಿಗಳಿಗೆ ಹಿಂಸೆ ನೀಡುವ ಪದ್ಧತಿಯನ್ನು ನಿಲ್ಲಿಸಲಾಯಿತು. ಅಲ್ಲಿಂದ ಮುಂದೆ ನಾಡಿಗೆ ಬಂದ, ಕೃಷಿಗೆ ತೊಂದರೆ ನೀಡುವ  ಮುಂತಾದವನ್ನು ಮಾಡುತ್ತಿದ್ದರೆ  ಆನೆಗಳನ್ನು ಸೆರೆ ಹಿಡಿಯಲು ಅವಕಾಶವಿದೆ. ಈಗ ಆನೆಗಳನ್ನು  ಹಿಡಿಯಬೇಕಾದರೆ ಅರವಳಿಕೆ ನೀಡಿ ಹಿಡಿದು ಪಳಗಿಸುವ ಅಭ್ಯಾಸ ಬಂದಿದೆ‌.

ReplyForward

Leave a Comment

Your email address will not be published. Required fields are marked *

Scroll to Top