ಗಿಡುಗ ಮತ್ತು ಎರೆಹುಳ
ಕವಿ ಪರಿಚಯ
ಗಿಡುಗ ಮತ್ತು ಎರೆಹುಳ – Giduga mattu Erehula – ಎಸ್. ಜಿ ಸಿದ್ದರಾಮಯ್ಯ ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರು. ಅವರು 19-11-1946ರಲ್ಲಿ ಗುರುಸಿದ್ದಯ್ಯ ಮತ್ತು ರೇವಕ್ಕನವರ ಮಗನಾಗಿ ಜನಿಸಿದರು. ಪದವಿಯನ್ನು ತುಮಕೂರಿನಲ್ಲೂ, ಎಂ,ಎ ಪದವಿಯನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಮುಗಿಸಿದರು. ನಂತರ ವೃತ್ತಿಯಲ್ಲಿ ಅಧ್ಯಾಪಕರಾಗಿ , ಪ್ರಾಂಶುಪಾಲರಾಗಿ, ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ಜೊತೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ 2005 – 08ರವರೆಗೆ ಸೇವೆ ಸಲ್ಲಿಸಿದರು.
ಕೃತಿಗಳು
ಕಾವ್ಯ – ಗಾಲ್ಫ್ ಉಬ್ಬಿನ ಮೇಲೆ
ಕಾಡುವ ಬೇಲಿ ಹೂ, ಉರಿವ ಬತ್ತಿ ತೈಲ, ಅರಿವು ನಾಚಿತ್ತು.
ಸಾಹಿತ್ಯ ವಿಮರ್ಶೆ – ಅಂಬಿಗರ ಚೌಡಯ್ಯ, ಕೇಡಿಲ್ಲವಾಗಿ
ನಾಟಕ – ದಂಡೆ, ನೆತ್ತಮನಾಡಿ, ಅನ್ನದಾತ, ದಾಳ.
ಪ್ರಶಸ್ತಿಗಳು – ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿ.ಎಸ್.ಎಸ್ ಪ್ರಶಸ್ತಿ, ಪುತಿನ ಪ್ರಶಸ್ತಿ.
ಗಿಡುಗ ಮತ್ತು ಎರೆಹುಳ ಎಂಬುದನ್ನು ಕವಿ ಇಲ್ಲಿ ರೂಪಕವಾಗಿ ತೆಗೆದುಕೊಂಡಿದ್ದಾರೆ. ಗಿಡುಗ ಎಂದರೆ ಪ್ರಾಣಿಗಳನ್ನು ಕಿತ್ತು ತಿನ್ನುವ ಹದ್ದು ಅಥವಾ ಪಕ್ಷಿ ಜೊತೆಗೆ ಜಾಗತೀಕರಣ
Read this: https://rvwrittingblog.blogspot.com/2024/01/blog-post_20.html
ಪಾಶ್ಚಾತ್ಯೀಕರಣ ಎಂಬುದನ್ನು ಪ್ರತಿನಿಧಿಸುತ್ತದೆ. ಎರೆಹುಳ ಎಂಬುದು ಭೂಮಿಗೆ ಫಲವತ್ತತೆಯನ್ನು ನೀಡುವ ಒಂದು ಪ್ರಾಣಿ ಅಥವಾ ಜೀವಿ ಜೊತೆಗೆ ದೇಸಿಯತೆ, ಪೌರ್ವಾತ್ಯ ದೇಶಗಳನ್ನು ಪ್ರತಿನಿಧಿಸುತ್ತದೆ. ಅಂದರೆ ಈ ಪದ್ಯದಲ್ಲಿ ಪಾಶ್ಚಾತ್ಯೀಕರಣವು ಹೇಗೆ ಪೌರ್ವಾತ್ಯ ದೇಶಗಳನ್ನು ನಾಶ ಮಾಡುತ್ತಿದೆ ಅಥವಾ ಪೌರ್ವಾತ್ಯ ದೇಶಗಳು ಜಾಗತೀಕರಣವನ್ನು ಅನುಕರಿಸುವ ಮೂಲಕ ಹೇಗೆ ತಮ್ಮ ನಾಶ ಕಾಣುತ್ತಿವೆ ಎಂಬುದನ್ನು ಈ ಕವಿತೆಯಲ್ಲಿ ಕಾಣಬಹುದಾಗಿದೆ.
ಜಾಗತೀಕರಣ ಎಂಬುದು 1991 ರ ನಂತರ ನಮಗೆ ಪರಿಚಿತವಾಗಿರುವ ಒಂದು ಶಬ್ದ. ಈ ಶಬ್ದದ ಮೂಲಕ ಥೀಯೋಡರ್ ಲೆನಿನ್ ಎಂಬ ವ್ಯಕ್ತಿ ಮೊದಲಿಗೆ ಬಳಸುತ್ತಾನೆ. ತದನಂತರ ಭಾರತದಲ್ಲಿ ಹೊಸ ಆರ್ಥಿಕ ನೀತಿ (New Economic Policy) 1991ರನ್ನು ಬಜೆಟ್ ಮಂಡನೆಯಲ್ಲಿ ತರುತ್ತಾರೆ. ಅದರಲ್ಲಿ LPG ಎಂಬ ಹೊಸ ಅಂಶವು ಇದೆ.
ಇಲ್ಲಿ
L ಎಂದರೆ ಉದಾರೀಕರಣ – Liberalisation
P ಎಂದರೆ ಖಾಸಗೀಕರಣ – Privatisation
G ಎಂದರೆ ಜಾಗತೀಕರಣ – Globalisation.
ಜಾಗತೀಕರಣ ಎಂದರೆ ದೇಶೀಯ ಮಾರುಕಟ್ಟೆಯನ್ನು ವಿಶ್ವಮಾರುಕಟ್ಟೆಯೊಡನೆ ಸೇರಿಸುವುದಾಗಿದೆ. ಇದು ಬಂದ ನಂತರ ದೇಶದ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಹಾಗೆಯೇ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿಯೂ ಬದಲಾವಣೆಯನ್ನು ಕಾಣಬಹುದು ಎಂದು ನಂಬಲಾಗಿತ್ತು ಇದರ ಜೊತೆ ಕೊಳ್ಳುಬಾಕತನವು ಇದರೊಂದಿಗೆ ಸೇರಿಕೊಂಡು ಬಂದಿತು.
Part – 2 Giduga mattu erehula – https://youtu.be/9ExgN9W6TQI?si=3Q41oCqHnp-B2y2E
ಸಾರಾಂಶ
ಪಶ್ಚಿಮದ ಕಡೆಯಿಂದ ಜಾಗತೀಕರಣ ಅಥವಾ ಪಾಶ್ಚಾತ್ಯೀಕರಣ ಎಂಬುದು ಐದು ಬಣ್ಣಗಳಿಂದ ಕೂಡಿರುವಂತಹ ಗಿಳಿಯ ರೀತಿಯಲ್ಲಿನ ಗಿಡುಗ ಪೂರ್ವದ ಕಡೆಗೆ ತನ್ನ ಜಾಗತೀಕರಣ, ಕೊಳ್ಳುಬಾಕತನವನ್ನು ವಿಸ್ತರಿಸಲು ವೇಗವಾಗಿ ಬಂದಿತು. ಅದು ಬಂದಾಗ ಹೇಗಿತ್ತೆಂದರೆ ಅದರ ವೈವಿಧ್ಯಮಯವಾದ ಬಣ್ಣ ಅಂದರೆ ಜಾಗತೀಕರಣವು ಹಲವು ರೂಪಗಳಲ್ಲಿ ಅಂದರೆ ಕೈಗಾರಿಕೆ, ಕೊಳ್ಳುಬಾಕತನ, ವ್ಯಾಪಾರೀಕರಣ, ವಸ್ತ್ರ ವಿನ್ಯಾಸ, ಆಹಾರ ಪದ್ಧತಿ ಮೊದಲಾದ ರೂಪಗಳಿಂದ ಬೆರಗಿನಿಂದ ಕೂಡಿದ್ದು, ಅದು ಒಳಗೊಂಡಿದ್ದ ಕಣ್ಣಿನ ಬೆಡಗಿಗೆ ಪೂರ್ವದಲ್ಲಿದ್ದ ಜನರು, ಪ್ರಾಣಿಗಳೆಲ್ಲವೂ ಅದು ತೋರುತ್ತಾ ಬರುತ್ತಿದ್ದ ವೈವಿಧ್ಯಮಯತೆಯನ್ನು ನೋಡಿ ಮಾತನ್ನು ಕಳೆದುಕೊಂಡಿದ್ದವು.
ಪಂಚರಂಗಿ ಗಿಡುಗ ಪಶ್ಚಿಮದ ಸಂಸ್ಕ್ರತಿಯ ಆಧುನಿಕತೆಯ ಹೊಸ ವಿನ್ಯಾಸ, ಲಾಭಗಳನ್ನು ಹೊತ್ತು ತಂದಿತು ಆದರೆ ಅದು ಬೆರಗಿಗೆ ಮಾತ್ರ ಸೀಮಿತಬಾಗಿತ್ತೇ ಹೋರತು ನಮ್ಮ ಪೂರ್ವ ದೇಶಗಳ ಏಳ್ಗೆಗೆ ಸಾಧ್ಯವಾಗದೆ ಇಲ್ಲಿನ ದೇಶಗಳು ಅದರ ವ್ಯಾಪಾರೀಕರಣದಿಂದ ತಮ್ಮದೆಲ್ಲವನ್ನು ಕಳೆದುಕೊಂಡು ನಾಶವಾಗುತ್ತಾ ಬಂದಿವೆ.
ಪಶ್ಚಿಮದ ಸಂಸ್ಕ್ರತಿಯ ಗಿಡುಗ ತನ್ನ ಜಾಗತೀಕರಣದಿಂದ ಅಖಂಡವಾಗಿದ್ದ ಭೂಮಂಡಲವನ್ನು ಶ್ರೀಮಂತದೇಶ, ಬಡ ದೇಶ, ಅಭಿವೃದ್ಧಿಶೀಲ ದೇಸ ಎಂದು ಮುಂತಾಗಿ ವಿಭಾಗ ಮಾಡುವ ಮೂಲಕ ತನ್ನ ಮಾತೇ ಕೊನೆ, ತನ್ನ ನಿಯಮವೇ ಪಾಲನೆಯಾಗಬೇಕು ಎಂದು ಹೇಳುವ ಮೂಲಕ ಈ ಮಣ್ಣಿನಲ್ಲಿ ಹುಟ್ಟಿರುವ ಜೀವಜಾತಗಳಿಗೆ ಇದರಿಂದ ಏನೂ ಸಿಗದೆ ಹೊಟ್ಟೆಹೊರೆಯುವಂತಾಗಿ ಕಣ್ಣೀರಿನ ಬಟ್ಟೆಯನ್ನು ಕಟ್ಟಿಕೊಳ್ಳುವಂತಾಗಿದೆ.
ನಮಗೆ ಜಾಗತೀಕರಣ ಒಳ್ಳೆಯದನ್ನೇ ಮಾಡುತ್ತೆ ಎಂದು ನಂಬಿದ್ದ ಪೌರ್ವಾತ್ಯ ದೇಶಗಳಿಗೆ ಈ ಪಂಚರಂಗಿ ಗಿಡುಗ ಪೂರ್ವದವರು ತನ್ನ ವಿರುದ್ಧ ಮಾತನಾಡುವ ಮಾತನ್ನು, ವಿರೋಧಿಸುವ ನೋಟವನ್ನು, ಕೊಳ್ಳುಬಾಕತನವನ್ನು, ವ್ಯಾಪಾರೀಕರಣವನ್ನು ವಿರೋಧಿಸಲು ಮುಂದಾಗದಿರುವಂತೆ ನೋಡಿಕೊಳ್ಳುವ ಮೂಲಕ ನಮ್ಮ ಅಸ್ತಿತ್ವದ ಬಗ್ಗೆಯೇ ಭಯ ಮೂಡಿಸಿರುವ ಬಣ್ಣವಾಗಿ ಮಾರ್ಪಾಡಾಗಿದೆ.
ಪೂರ್ವ ದೇಶವೆಂಬ ಕಡವೆ ಅಥವಾ ಜಿಂಕೆ ಪಶ್ಚಿಮ ಸಂಸ್ಕ್ರತಿಯ ವಂಚನೆಯ ರೂಪ ತಿಳಿದು ಅದರ ಬೆಡಗು, ಬೆರಗಿನ ಬಣ್ಣ ಕದರುವ ಮೂಲಕ ಅದರ ಭಯದಿಂದ ಕೂಡಿ ಕಪ್ಪು ಸರಳುಗಳಲ್ಲಿ ಬಂಧಿಯಾಗಿದೆ. ಇದರಿಂದ ಪಶ್ಚಿಮದ ಗಿಡುಗ ನಡೆಯಲ್ಲಿಯಾಗಲಿ, ನುಡಿಯಲ್ಲಾಗಲಿ, ಮಾತಿನ ರೂಪದಲ್ಲಾಗಲಿ ನೋವು ತುಂಬಿದೆ ಎಂಬುದನ್ನು ಮಾತು ಮೀರಿದ ಭಾವನೆಗಳಲ್ಲಿ ಹೇಳುತ್ತಿದ್ದಾರೆ ಆದರೆ ಅದನ್ನು ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲದಂತಾಗಿದೆ.
ಪೂರ್ವದ ದೇಶದಲ್ಲಿನ ಭೂಮಿಯ ಯಾವುದೋ ಹಳೆಬೇಲಿಯ ನಡುವೆ ತೇವಾಂಶ ಹೊಂದಿರುವ ಜಾಗದಲ್ಲಿ ಎರೆಹುಳ ನಿಧಾನವಾಗಿ ಪಿಸುಗುಟ್ಟುತ್ತಿದೆ. ಯಾಕೆ ಪಾಶ್ಚಾತ್ಯೀಕರಣ? ಜಾಗತೀಕರಣ ಏಕೆ? ನಮ್ಮ ಸ್ವಂತಿಕೆಯ ಮೇಲೆ ನಿಲ್ಲುವ ಮೂಲಕ ಪಾಶ್ಚಿಮಾತ್ಯ ಸಂಸ್ಕ್ರತಿಯನ್ನು ವಿರೋಧಿಸಲು ಒಂದು ಚಿಕ್ಕ ಜೀವಿಗೂ ಸಾಧ್ಯವಿದೆ ಎಂದು ತೋರಿಸುವ ಮೂಲಕ ಯಾಕೆ ಹೀಗೆ? ಎಂದು ಗಿಡುಗಕ್ಕೆ ಎದುರಾಗಿ ಈ ನೆಲದ ವಾರಸು ಯಾರು? ಎಂದು ಕೇಳುವ ಮೂಲಕ ಪೌರ್ವಾತ್ಯ ಸಮೂಹಕ್ಕೆ ಸೇರಿದೆಯೇ ಹೊರತು ನಿಮಗಲ್ಲ ಎಂದಿದೆ.
See this video- Part – 1 – ಗಿಡುಗ ಮತ್ತು ಎರೆಹುಳ https://youtu.be/R8h8dUCTvXQ?si=2nS1RZ7_0-LiYF5E
Pingback: ಮಣಿಮಂಜರಿ . #Manimanjari - rvwritting