ಲಿಂಗತ್ವ ಅಲ್ಪಸಂಖ್ಯಾತರ ಬಗೆಗೆ ಆಗಾಗ ಹಲವು ರೀರಿಯಲ್ಲಿ ಮಾತಾಡಿಕೊಳ್ಳುತ್ತಿರುತ್ತೇವೆ. ಎಲ್ಲೆಂದರಲ್ಲಿ ಶುಭ ಕಾರ್ಯಕ್ರಮಗಳು ನಡೆಯುವಲ್ಲಿ ಬಂದು ದುಡ್ಡು ಕೇಳುತ್ತಾರೆ, ಟ್ರಾಫಿಕ್ ಸಿಗ್ನಲ್ನಲ್ಲಿ ಬಂದು ದುಡ್ಡು ಕೇಳುತ್ತಾರೆ. ಹೀಗೆ ಇನ್ನು ಹಲವು ರೀತಿಯಲ್ಲಿ ಅವರ ಬಗೆಗೆ ಮಾತಾಡಿಕೊಳ್ಳುತ್ತೇವೆ. ಹಾಗೆಯೇ ಅವರನ್ನು ದೈಹಿಕವಾಗಿ ಬಳಸಿಕೊಳ್ಳುವುದೇ ಹೆಚ್ಚು ಅಂತಹವರಿಗೆ ಇವೆಲ್ಲ ಯಾಕೆ ಇವನು ಬಿಟ್ಟು ಬೇರೆ ಏನಾದರೂ ಮಾಡಬಹುದಲ್ಲ ಎಂದರೆ ನಮಗೆ ಯಾರು ಕೆಲಸ ಕೊಡ್ತಾರೆ? ನಮ್ಮನ್ನ ನಿಮ್ಮಂತೆ ಯಾರು ನೋಡ್ತಾರೆ? ನಮ್ಮಿಂದ ಮುಖ್ಯವಾಗಿ ಬಯಸುವುದೇ ದೇಹವನ್ನು, ಅದಕ್ಕಾಗಿ ನಾವು ನಮ್ಮ ಹೊಟ್ಟೆ ಹೊರೆಯಲಿಕ್ಕೆ ದೇಹ ಮಾರಿಕೊಂಡು ಜೊತೆಗೆ ಭಿಕ್ಷೆ ಬೇಡಿ ಜೀವನ ನಿರ್ವಹಿಸುವ ಪರಿಸ್ಥಿತಿಯಲ್ಲಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.
ಇದಕ್ಕೆ ಅಪವಾದವಾಗಿ ಕೇರಳದಲ್ಲಿ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತೆಯಾದ ವಿಭಾ ಎಂಬುವವರು MBBS ಅನ್ನು ಮುಗಿಸಿ ಡಾ. ವಿಭಾ ಆಗಿ ಬದಲಾಗಿದ್ದಾರೆ. ಇದರಿಂದ ಕೇರಳದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಇಂತಹ ಸಮುದಾಯದವರ ಉಪಸ್ಥಿತಿ ಆದಂತಾಗಿದೆ. ಇವರ ಪೂರ್ಣ ಹೆಸರು ವಿಭಾ ಉಷಾರಾಧಕೃಷ್ಣನ್, ಕೊಯಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿMBBS ಪದವಿ ಪೂರೈಸಿದ್ದಾರೆ.
ಇಲ್ಲಿ ಅಚ್ಚರಿಯ ವಿಷಯವೇನೆಂದರೆ ಲಿಂಗತ್ವ ಅಲ್ಪಸಂಖ್ಯಾತ ಎಂದು ಗುರುತಿಸಿಕೊಳ್ಳುವ ಜೊತೆಗೆ ಕುಟುಂಬದ ಪೂರ್ಣ ಸಹಕಾರ ದೊರೆತಿರುವುದು ವಿಶೇಷ. ಇವರು ಎಂಬಿಬಿಎಸ್ ಓದುತ್ತಿರುವಾಗಲೇ ಹುಡುಗನಾಗಿದ್ದ ಇವರು ಸ್ನೇಹಿತರ ಬಳಿ ತನ್ನಲ್ಲಿ ಉಂಟಾಗುತ್ತಿದ್ದ ಸ್ತ್ರೀ ಭಾವನೆಗಳನ್ನು ಹೇಳಿಕೊಂಡು, ತದನಂತರ ತನ್ನ ತಾಯಿಗೆ ಹೇಳಿಕೊಳ್ಳುವ ಮೂಲಕ ಶಿಕ್ಷಕಿಯಾದ ತಾಯಿ ಅದರ ಬಗ್ಗೆ ಕೂಲಂಕುಶವಾಗಿ ಯೋಚಿಸಿ ಅವನ ನಿರ್ಧಾರಕ್ಕೆ ಸ್ಪೂರ್ತಿಯಾಗುತ್ತಾರೆ ನಂತರ ತಂದೆ ಬೇಗ ಒಪ್ಪಲಿಲ್ಲವಾದರೂ ನಿಧಾನವಾಗಿ ಒಪ್ಪುತ್ತಾರೆ.
ಈ ರೀತಿಯಾಗಿ ತಂದೆ ತಾಯಿ ಒಪ್ಪಿಕೊಂಡರೆ ಇಡೀ ಸಮಾಜವೇ ಒಪ್ಪಿಕೊಂಡು ಅವರನ್ನು ಗಂಡು ಹೆಣ್ಣಿನ ರೀತಿಯಲ್ಲಿ ನೋಡಲಿಕ್ಕೆ ಸಾಧ್ಯವಾಗುತ್ತದೆ. ಈಗ ವಿಭಾ ಅವರು ಮನೋವಿಜ್ಞಾನ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗವನ್ನು ವಿದೇಶದಲ್ಲಿ ಮುಂದುವರಿಸಲು ಇಚ್ಚಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರಿಗೆ ಪೂರಕವಾಗಿ ಇರಬೇಕಾಗಿರುವವರು
* ತಂದೆ – ತಾಯಿ:
ಮೊದಲಿಗೆ ಇಂತಹವರಿಗೆ ಬಹಳ ದೊಡ್ಡ ಬ್ಯಾಕಪ್ ಎಂದರೆ ತಂದೆ ತಾಯಿ. ಇವರ ಬಳಿ ಮೊದಲಿಗೆ ಅವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ ಅವರ ಮೇಲೆ ಕೋಪ ದರ್ಪ ತೋರಿಸದೆ ಸಮಾಜದಲ್ಲಿ ಅಥವಾ ಕುಟುಂಬಸ್ಥರ ನಡುವೆ ತಮ್ಮ ಮರ್ಯಾದೆ ಹೋಗುತ್ತೆ ಎಂದು ಅರ್ಥೈಸಿಕೊಳ್ಳುವುದಕ್ಕಿಂತ ಒಮ್ಮೆ ಇಂತಹ ಸ್ಥಿತಿಯಲ್ಲಿರುವವರ ಸ್ಥಾನದಲ್ಲಿ ನಿಂತು ಅವರ ಬಗೆಗೆ ಅರ್ಥೈಸಿಕೊಂಡರೆ ಅವರ ಮಾನಸಿಕ ವೇದನೆ ತಿಳಿಯುತ್ತದೆ ಮಕ್ಕಳನ್ನು ಪೋಷಿಸುವ ಪೋಷಕರೇ ಅವರ ವಿರುದ್ಧ ತಿರುಗಿ ಬೀಳುವುದಕ್ಕಿಂತ ಅವರ ಸ್ಥಿತಿ ತಿಳಿದು ತಮ್ಮ ನೋವನ್ನು ಸಹಿಸಿಕೊಂಡು ಅವರ ಇಚ್ಛೆಯಂತೆ ನಡೆದರೆ ಒಳಿತು. ಇಲ್ಲವಾದರೆ ಆ ಹುಡುಗ ಅಥವಾ ಹುಡುಗಿ ಡ್ಯುಯಲ್ ಕ್ಯಾರೆಕ್ಟರ್ ನ ಪ್ಲೇ ಮಾಡಬೇಕಾಗುತ್ತದೆ ಹೇಗೆಂದರೆ ಆಂತರಿಕವಾಗಿ ಹೆಣ್ಣಾಗಿ ಬಾಹ್ಯವಾಗಿ ಗಂಡಾಗಿ ವರ್ತಿಸುತ್ತಿರುತ್ತಾನೆ. ಇದರಿಂದ ಅವನ ಮಾನಸಿಕ ತೊಳಲಾಟ ಹೆಚ್ಚಾಗಿ ಇತ್ತ ಬದುಕಲು ಆಗದೆ ಸಾಯಲು ಆಗದೆ ಒದ್ದಾಡುವ ಸ್ಥಿತಿಗೆ ತಲುಪುತ್ತಾರೆ. ಇಂತಹ ಸಂಧಿಗ್ದ ಸ್ಥಿತಿಗೆ ತಲುಪದಂತೆ ಮಾಡುವ ಹೊಣೆ ತಂದೆ, ತಾಯಿಯರ ಕೈಯಲ್ಲಿ ಇರುತ್ತದೆ.
*ಸಂಬಂಧಿಕರು:
ತಂದೆ ತಾಯಿಯರ ಮನಸ್ಥಿತಿ ಬದಲಾಗುವಲ್ಲಿನ ಪ್ರಮುಖ ಕಾರಣೀಕರ್ತೃಗಳು. ಇವರು ಅಂತಹ ಹುಡುಗ ಹುಡುಗಿಯ ಬಗ್ಗೆ ಅವಹೇಳನವಾಗಿ ಮಾತನಾಡುವುದನ್ನು ಬಿಟ್ಟರೆ ಇದಕ್ಕೆ ಪರಿಹಾರ ಸಿಕ್ಕಂತಾಗುತ್ತದೆ ಹಾಗೆಯೇ ಅವರನ್ನು ನಮ್ಮ ಮಕ್ಕಳಂತೆ ನಡೆಸಿಕೊಂಡರೆ ಅವರಲ್ಲೂ ತೃಪ್ತ ಭಾವನೆ ಬೆಳೆಯುತ್ತದೆ
* ಶಾಲೆ ಕಾಲೇಜು ಸ್ನೇಹಿತರು:
ಶಾಲೆ ಕಾಲೇಜಿನಲ್ಲಿ ಇರುವ ಶಿಕ್ಷಕರ ಪಾತ್ರವೂ ಬಹಳ ಮುಖ್ಯ ಇವರು ಇನ್ನಿತರ ವಿದ್ಯಾರ್ಥಿಗಳೊಂದಿಗೆ ವ್ಯತ್ಯಾಸವನ್ನುಂಟು ಮಾಡಿದರೆ ಅದೇ ಮುಂದೆ ಬೆಳೆದು ಹೆಮ್ಮರವಾಗುತ್ತದೆ ಇಲ್ಲಿ ಇವರ ಕೆಲಸ ಎಲ್ಲರನ್ನೂ ಸಮಾನವಾಗಿ ಕಾಣುವುದು. ಹಾಗೆಯೇ ಅವರಿಗೂ ತಮ್ಮ ಮನದಲ್ಲಿರುವ ಅಂಜಿಕೆಯ ಭಾವ ಬರದಂತೆ ಮಾಡುವ ದೊಡ್ಡ ಕೆಲಸ ಇವರ ಮೇಲಿದೆ ಸ್ನೇಹಿತರು ಕೂಡ ಅವರನ್ನು ತಮ್ಮಂತೆ ನೋಡುವ ದೃಷ್ಟಿಕೋನವನ್ನು ಬೆಳೆಸಿಕೊಂಡಾಗ ಅವರಲ್ಲಿ ಉಂಟಾಗುವ ವ್ಯತಿರಿಕ್ತ ಭಾವನೆಗಳು ಬೆಳೆಯದೆ ಹಾಗೆಯೇ ಇರುತ್ತದೆ.
* ಸಮಾಜ:
ನಮ್ಮ ಕಣ್ಣೆದುರಿರುವ ಜನ ಸಮೂಹವೇ ಸಮಾಜ ಸಮಾಜವೂ ಕೂಡ ಇವರನ್ನು ಒಪ್ಪಬೇಕಿದೆ ಒಪ್ಪಿದರೆ ಅವರಿಗೂ ಒಂದು ಘನವಾದ ಬದುಕು ದೊರೆತಂತಾಗುತ್ತದೆ
ReplyForwardAdd reaction |