Summary of ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು – Nambi Kettavarillavo Mannannu

ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು - Nambi Kettavarillavo Mannannu
ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು – Nambi Kettavarillavo Mannannu

ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು – Nambi Kettavarillavo Mannannu –

ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು – Nambi Kettavarillavo Mannannu – ಹಿಂದೆ ಭೂದೇವಿ ಹಿರಣ್ಯಾಕ್ಷನ ಭಯದಿಂದ ನಾರಾಯಣನ ಮೊರೆ ಹೋಗುತ್ತಾಳೆ. ಅವಳ ಭಯ ಪರಿಹಾರ ಮಾಡುತ್ತಾನೆ. ಅಂದಿನಿಂದ ಇಂದಿನವರೆಗೆ ಭೂ ವಿಚಾರಗಳು ಸುಸೂತ್ರವಾಗಿ ನಡೆದಿರುವ ಸಂದರ್ಭಗಳೇ ಇಲ್ಲವೇನೋ ಅಂತಹ ವಿಷಯಗಳನ್ನು ಅಕ್ಕರಗಳ ಮೂಲಕ, ದೃಶ್ಯ ಕಾವ್ಯಗಳ ಮೂಲಕ ವಸ್ತುವಾಗಿ ತೋರಿಸಲಾಗಿದೆ. ಹಾಗೆಯೇ ಕನ್ನಡ ಚಲನಚಿತ್ರ ರಂಗವು ಮಣ್ಣು, ಭೂಮಿ ವಿಷಯಗಳನ್ನು ವಸ್ತುಗಳಾಗಿ ತೆಗೆದುಕೊಂಡು ನೋಡುಗರ ಮುಂದೆ ತೋರಿಸಿವೆ. 

ನಮ್ಮ ಜೀವನದ ಎಲ್ಲಾ ಆಗು-ಹೋಗುಗಳಿಗೂ ಮಣ್ಣೇ ಮೂಲ. ಈ ಮಣ್ಣನ್ನು ದೂರ ಮಾಡಿದರೆ ನಾವೇ ದೂರವಾದಂತೆ ಅಂದರೆ ನಮ್ಮ ನಶ್ವರತೆಯೇ ಎಂಬಂತೆ. ಹೀಗಿರುವುದರಿಂದ ಮಣ್ಣು ನಮ್ಮ ಜೀವನದ ಪ್ರಾರಂಭ ಮತ್ತು ಅಂತ್ಯ ಎರಡನ್ನು ಇದರ ಮೇಲೆಯೇ ಪಡೆಯುತ್ತೇವೆ. ಇದೇ ರೀತಿಯಲ್ಲಿ ಬೇಂದ್ರೆಯವರು ತಮ್ಮ ಸ್ನೇಹಿತರಾದ  ಮಧುರ ಚೆನ್ನರನ್ನು ಗುಂಡಿಯಲ್ಲಿ ಇಳಿಸಿದಾಗ “ನಾವು ಚಿನ್ನಮಲ್ಲಪ್ಪನನ್ನು ಹುಗಿದಿಲ್ಲ, ಬಿತ್ತಿದ್ದೇವೆ” ಎಂಬ ಮಾತು ಮಣ್ಣು ನಮಗೆ ತಾಯಿ ಸ್ವರೂಪದಂತಿದೆ ಎಂದು ತಿಳಿಯಬಹುದು. 

ಚಂದವಳ್ಳಿ ತೋಟ, ಬೆಟ್ಟದ ಜೀವ ಇವೆರೆಡೂ ಕನ್ನಡ ಕಾದಂಬರಿಗಳು. ತ.ರಾ.ಸು ಮತ್ತು ಶಿವರಾಮಕಾರಂತರ ಕೃತಿಗಳಾಗಿವೆ. ಇದೇ ಹೆಸರಿನಲ್ಲಿ ಚಿತ್ರಗಳಾಗಿವೆ. ಚಂದವಳ್ಳಿಯ ತೋಟ – ಹಾಳಾದ ಕೊಂಪೆಯನ್ನು ನಂದನವನ್ನಾಗಿ ಮಾಡುವ ಶಿವನಂಜೇಗೌಡ ತದನಂತರದಲ್ಲಿ ಇದು ಸ್ವಾರ್ಥಿಗಳ ಪಾಲಾಗುವುದನ್ನು ಚಂದವಳ್ಳಿತೋಟದಲ್ಲಿ ಕಾಣಬಹುದು. ಹಾಗೆಯೇ ಗೋಪಾಲಯ್ಯ ಬೆಂಗಾಡಾಗಿದ್ದ ಕಾಟುಮೂಲೆಯನ್ನು ಸ್ವರ್ಗದ ತುಣುಕಿನಂತೆ ರೂಪಾಂತರಿಸುತ್ತಾನೆ‌. ಮುಂದೆ ಕಾಟುಮೂಲೆ ರೆಸಾರ್ಟ್ ಆಗಿ ಗೋಪಾಲಯ್ಯನ ಆಶಯಗಳು ಮಣ್ಣು ಪಾಲಾಗುತ್ತವೆ. 

See the Video: https://youtu.be/ns3YfthV2c0?si=lxAW5uBnVnXOLWN6

ಶಿವರಾಮ ಕಾರಂತರ ಮತ್ತೊಂದು ಕೃತಿ – ಚೋಮನದುಡಿ”. ಇದು ಅಂದಿನ ಕಾಲದ ದಲಿತರ ಜೀವನ ಚಿತ್ರಣ ಸ್ಥಿತಿಯನ್ನು ಸಮಾಜದ ಮುಖ್ಯವಾಹಿನಿಗೆ ತಂದು ತೋರಿಸಿತು. ಇದನ್ನು ಬಿ.ವಿ. ಕಾರಂತರು ದೈಶ್ಯ ರೂಪಕ್ಕೆ ತಂದರು. ಇದರಿಂದ ಚೋಮ ಅಥವಾ ಒಬ್ಬ ದಲಿತ ವ್ಯಕ್ತಿ ಉಳುಮೆ ಮಾಡುವ ಸ್ವಾತಂತ್ರ ಪಡೆದಿರಲಿಲ್ಲ. ಅಂದಿನ ಸಮಾಜ ಅದಕ್ಕೆ ಒಪ್ಪಿಗೆಯನ್ನೂ ನೀಡಿಲ್ಲದಿರುವುದರಿಂದ ಜೊತೆಗೆ ಹೀನಾಯ ಸ್ಥಿತಿಯನ್ನು ತಿಳಿದು ದುಡಿ ಬಡಿಯುವುದನ್ನು, ಅವನೇ ನಿಲ್ಲಿಸುವವರೆಗೆ ಬಡಿಯುತ್ತಾನೆ. ಅದರೊಂದಿಗೆ ತನ್ನ ಸಾವನ್ನು ಕಾಣುತ್ತಾನೆ. ಇಲ್ಲಿ ಚೋಮನ ಭೂಮಿ ಉಳುವ ಆಸೆ ಈಡೇರಲಿಲ್ಲ. ಹಾಗೆಯೇ ವಿನೋಬಾ ಭಾವೆಯವರ ಭೂದಾನ ಚಳುವಳಿಯ ಹಿನ್ನೆಲೆಯಲ್ಲಿ ಬಂದ ಭೂದಾನ ಚಲನಚಿತ್ರವು ಇಲ್ಲಿರುವ ದಲಿತನಾದ ದಾಸಣ್ಣನಿಗೆ ಭೂಮಿಯನ್ನು ನೀಡುವ ಮೂಲಕ ಅವನ ಭೂಮಿ ಉಳುವ ಆಸೆ ಈಡೇರುತ್ತದೆ. ನಂತರ ಇವರ ಕೈಯಿಂದ ಭೂಮಿಯು ತಪ್ಪಿಹೋಗುತ್ತದೆ. ಇಲ್ಲಿ ಭೂಮಿಯು ನಮಗೆ ಸ್ವಾವಲಂಬನೆ, ಆತ್ಮಶಕ್ತಿಯಂತೆ ಕಂಡಿದೆ. ಹಾಗೆಯೇ ಅಧಿಕಾರ ಅಥವಾ ಪ್ರಭುತ್ವದ ರೀತಿಯಲ್ಲೂ ಭೂಮಿ ಕಂಡುಬರುತ್ತದೆ. ಅಲೆಕ್ಸಾಂಡರ್ ಇಡೀ ಭೂಮಂಡಲವನ್ನು  ಗೆಲ್ಲಬೇಕೆಂಬ ಅವನ ಆಸೆ ಈಡೇರುವುದೇ ಇಲ್ಲ.

ಹಾಗೆಯೇ ಟಾಲ್ಸ್ ಟಾಯ್ ಒಬ್ಬನಿಗೆ ಎಷ್ಟು ಭೂಮಿ ಬೇಕು ಎಂಬ ಕಥೆ ಆದರಿಸಿರುವುದಾಗಿದೆ. ಕೊನೆಯಲ್ಲಿ ಆ ವ್ಯಕ್ತಿಗೆ ಭೂಮಿ ಎಂಬುದು ಮರೀಚಿಕೆಯಾಗಿಯೇ ಉಳಿಯುತ್ತದೆ. ಇದನ್ನೇ ಕನ್ನಡದ ಟೋನಿ ಚಿತ್ರದಲ್ಲೂ ಬಳಸಿರುವುದು. ಇಲ್ಲಿರುವ ನಾಯಕ ಶ್ರೀಮಂತನನ್ನು ವಿರೋಧಿಸಿದಾಗ ಅವನು ಬೆಳಗ್ಗೆಯಿಂದ ಸೂರ್ಯ ಮುಳುಗುವುದರೊಳಗೆ ಇದೇ ಪಾಯಿಂಟ್ ಬಳಿ ಬಂದರೆ ನೀನು ಎಷ್ಟು ಬೇಕು ಎಂದು ಹೋಗಿ ಬರುತ್ತಿಯೋ ಅಷ್ಟು ನಿನ್ನದಾಗುತ್ತೆ ಅಂತ ಹೇಳಿದರೂ ಸಂಜೆ ಬರಲಿಕ್ಕಾಗದೇ ಕೊನೆಗೆ 6 ಅಡಿ ಗಟ್ಟಿಯಾಯಿತು. 

Read this one:https://rvwritting.com/summary-of-rashoman/

ಕೋಡಿಬೆಟ್ಟು ರಾಜಲಕ್ಷ್ಮಿ ಅವರ “ಮರಳಿ ಮಣ್ಣಿಗೆ ಚೋಮ” ಇದು ಆಧುನಿಕ ಸಂದರ್ಭದ ಭೂ ಪರಭಾರೆ ಅಥವಾ ಭೂ ಸ್ವಾದೀನದ ವಿಷಯದ ಮೇಲಿದೆ. ಇಲ್ಲಿ ದೈವಕ್ಕೆ ನಾನು ಮಾತು ಕೊಟ್ಟಿದ್ದೇನೆ ನನ್ನ ಭೂಮಿಯನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ ಎಂದು ಹಾಗೆಯೇ ಅವರು  ಬ್ಯಾಂಕಿನ ಖಾತೆಗೆ ಭೂಮಿಗೆ ಸಂಬಂಧಿಸಿದ ಹಣವನ್ನು ಹಾಕಿದರೂ ತಮ್ಮ ಕಣ್ಣಿನ ಶಸ್ತ್ರಚಿಕಿತ್ಸೆ ಸಂದರ್ಭದಲ್ಲೂ ಬಳಸದಿರುವ ಅವರ ನೈತಿಕ ಸ್ಥೈರ್ಯ ಅಪೂರ್ವವಾದುದು. ಕಾರಂತರ ಚೋಮನಿಗೆ ಭೂಮಿ ಪಡೆಯಬೇಕೆಂದು ಆದರೆ ಇಲ್ಲಿನ ಚೋಮನಿಗೆ ಇರುವ ಭೂಮಿ ಕಾಪಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. 

ಗಿರೀಶ್ ಕಾಸರವಳ್ಳಿಯವರ ಕನಸೆಂಬೋ ಕುದುರೆಯನೇರಿ ನಲ್ಲಿ ಬರುವ ಈರ್ಯನ ಪಾತ್ರಕ್ಕೆ ಎಲ್ಲವೂ ಕನಸುಗಳಂತೆಯೇ – ಕನಸು ಸುಳ್ಳಾದರೆ ಚುಕ್ಕಿಗಳು ಬೀಳುತ್ತವೆ ಎಂದು ನಂಬಿದ್ದವ. ಆದರೆ ಈತನಿಗೆ ಭೂಮಿ ಇರಲಿಲ್ಲ ಬದಲಿಗೆ ಭೂಮಿ ಅಗೆಯುವ, ನೇಗಿಲು ಹಿಡಿಯುವ ಕನಸು ಶುರುವಾಗಿ ರೈತನಾಗುವ ಕ್ರಿಯೆಯ ಸ್ವಾವಲಂಬನೆಯ ರೂಪಕವಾಗಿ ಬಿಂಬಿತಬಾಗಿದೆ. 

ಪುಟ್ಟಕ್ಕನ ಹೈವೇ – ಇವಳ ತುಂಡು ಭೂಮಿಯ. ಮೇಲೆ ಹೆದ್ದಾರಿ ಹಾದು ಹೋಗಿದೆ. ಇದು ಅಭಿವೃದ್ಧಿ ಸಂಕೇತವಾಗಿ ಕಂಡರೂ ಅವಳ ಗಂಡನ ಪ್ರೀತಿ, ಪ್ರೇಮ ಮರೆಯಾಗುವುದರೊಂದಿಗೆ ಮೇಲುಸೇತುವೆಯ ಕೆಳಗೆ ಅವಳ ಮಗಳ ಧಂದೆಯು ಹಲವು ರೂಪಗಳನ್ನು ಭೂಮಿ ವಿಚಾರ ಇಲ್ಲಿ ಬಿಂಬಿತವಾಗಿದೆ.  ಕಾಮನಬಿಲ್ಲು ಚಿತ್ರವು ಪ್ರೀತಿ – ಅಂತರ್ಜಾತಿ ವಿವಾಹ, ಕೃಷಿ ಇದರ ಮೇಲೆ ಚಿತ್ರಿತವಾಗಿದೆ. ಕುವೆಂಪುರ ರೈತಗೀತೆ ಇದರಿಂದ ಹೆಚ್ಚು ಜನಪ್ರಿಯತೆ ಪಡೆಯಿತು. ಮಾತಾಡ್ ಮಾತಾಡು ಮಲ್ಲಿಗೆ ಚಿತ್ರದಲ್ಲೂ ಕೃಷಿ ಸಮಸ್ಯೆಗಳೇ ಬಂದಿವೆ‌. ಅವು ಕಾಮನಬಿಲ್ಲು ಬಂದಾಗಿನ ಸಮಸ್ಯೆಗಳಿಗಿಂತ ಮುಂದುವರೆದ ಸಮಸ್ಯೆಗಳಾಗಿದ್ದವು.

ಹಿಂದಿಯ ಪಿಪ್ಲಿ ಫೈವ್ ಸಿನೆಮಾ ರೈತನ ಬವಣೆಯ ವಿಷಯವನ್ನು ಎತ್ತಿ ತೋರಿಸುತ್ತದೆ. ಬ್ಯಾಂಕ್ ಸಾಲದ ಸುಳಿಯಲ್ಲಿ ನನ್ನ ಭೂಮಿ ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡರೆ ಭೂಮಿ ಉಳಿಯುತ್ತದೆ ಎಂದು ತಿಳಿದು ಅದಕ್ಕೆ ಮುಂದಾಗುವಾಗ ವಿಷಯ ಪ್ರಚಾರ ಪಡೆದು ರಾಜಕೀಕರಣಗೊಂಡು ಅವನನ್ನೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಡ ಹೇರುವ ಸ್ಥಿತಿಯೂ ಇದರಲ್ಲಿ ಕಾಣುತ್ತದೆ‌. ಇಲ್ಲಿ ಸಿನೆಮಾ ರೈತನ ಬಗ್ಗೆ ಮಾತಾಡಿದರೂ ಮಾಧ್ಯಮಗಳ ನೈತಿಕತೆಯನ್ನು ಪ್ರಶ್ನಿಸುವಂತಿದೆ ಚಿತ್ರ. ಇದರಿಂದ ನಮ್ಮ ಆಧುನಿಕ ಸಿನೆಮಾ ಜಗತ್ತು ಕೃಷಿಕನನ್ನು ಚಿತ್ರಿಸುವಲ್ಲಿ ಹಿಂದೆ ಬಿದ್ದಿವೆ‌. ಹಾಗೆಯೇ ಎಲ್ಲಾ ಭಾಷೆಗಳಲ್ಲೂ ಹೀಗೆ ಕಂಡು ಬರುತ್ತಿರುವುದು.  ರೈತ ಅಲ್ಲಿ ಗೈರು, ವೈಭವೀಕರಣ ಹೆಚ್ಚಾಗಿದೆ. ಅದರಲ್ಲಿ ಭೂಮಿತಾಯಿಯ ಚೊಚ್ಚಿಲ ಮಗ, ಚಿಗುರಿದ ಕನಸು ಇವು ಹಳ್ಳಿಗಾಡಿಗೆ ಯುವಕರು ಬಂದು ಕೃಷಿಕನಾಗುವ ಕಥೆಯಾಗಿದೆ. 

ಕನ್ನಡದ ಡಾ. ರಾಜಕುಮಾರ್, ರೈತ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದಾರೆ. ಅವು ಚಂದವಳ್ಳಿಯ ತೋಟ, ಭೂದಾನ, ಕಾಮನಬಿಲ್ಲು, ಮಣ್ಣಿನಮಗ, ಬಂಗಾರದ ಮನುಷ್ಯ, ಒಡಹುಟ್ಟಿದವರು ಹೀಗೆ ಹೆಚ್ಚಿನ ಚಿತ್ರಗಳಲ್ಲಿ ಮಣ್ಣಿನಮಗನಾಗಿ ನಟಿಸಿದ್ದಾರೆ. ಮಣ್ಣಿನಮಗದಲ್ಲಿ ಬಂಜರು ಭೂಮಿಯಲ್ಲಿ ಕೃಷಿ ಮಾಡಿ ಯಶಸ್ವಿಯಾಗುವ ಕಥೆ ಹೊಂದಿದ್ದು, ಬೆಳುವಲದ ಮಡಿಲಲ್ಲಿ – ಇಲ್ಲಿ ದಂಪತಿಗಳು ಬಂಜರಭೂಮಿಯನ್ನು ಉಳುಮೆ ಮಾಡಿ ನಂದನವನವನ್ನಾಗಿಸುವ ವಸ್ತುವಿದೆ. ಮಣ್ಣಿನ ಮಗಳು ಇಲ್ಲಿ ಗಂಡನ ಸಾವಿನ ನಂತರ ಸಂಸಾರದ ಜವಾಬ್ದಾರಿ ಹೊತ್ತು ಕೃಷಿ ಮಾಡಿ ಮುಂದೆ ಬರುತ್ತಾಳೆ. ಇದರೊಂದಿಗೆ ಭೂಮಿಯೊಂದಿಗಿನ ಹೆಣ್ಣಿನ ನಂಟನ್ನು ಚಿತ್ರ ತೋರಿಸುತ್ತದೆ. 

ಸಿದ್ದಲಿಂಗಯ್ಯ ರೂಪಿಸಿದ ‘ಬಂಗಾರದ ಮನುಷ್ಯ’ ಇದರಲ್ಲಿ ರಾಜೀವನ ಪಾತ್ರ ವಿದ್ಯಾವಂತನಾಗಿ ಮನೆಯ ಜವಾಬ್ದಾರಿ ಹೋರುವ ಸಲುವಾಗಿ ಕೃಷಿಯತ್ತ ಮುಖ ಮಾಡಿ ಸಂಸಾರವನ್ನು ಸುಭದ್ರ ಸ್ಥಿತಿಗೆ ತರುವ ಕಥೆ ಇಲ್ಲಿನ ದುಡಿಮೆಯ ನಂಬಿ ಬದುಕು ಅದರಲ್ಲಿ ದೇವರ ಹುಡುಕು ಎನ್ನುವ ದುಡಿಮೆಯ ನೆಚ್ಚಿನ ಸ್ಫೂರ್ತಿಯಂತಿದೆ ಇದೇ ಚಿತ್ರದಲ್ಲಿ ನಾಯಕ ಎರಡು ಬಾರಿ ಮಣ್ಣನ್ನು ಬೊಗಸೆಯಲ್ಲಿ ಹಿಡಿದು ಭೂಮಿತಾಯಿಯನ್ನು ಬೇಡುವುದು ಮುರಿದ ಸಂಸಾರ ಮೇಲೆತ್ತುವ ಸಲುವಾಗಿ ನಿನ್ನ ನಂಬಿ ಕೈ ಹಾಕುತ್ತಿದ್ದೇನೆ. ಇನ್ನೊಂದು ಸಂಸಾರ ಮೇಲೆತ್ತುವಾಗ ಅನ್ನ ನೀಡಿ ಕಾಪಾಡಿದ ಇನ್ನು ಮುಂದೆಯೂ ಹೀಗೆ ಅನುಗ್ರಹಿಸು ಎಂದು ಕೇಳುವಾಗ ಭಕ್ತಿ ನಂಬಿಕೆ ಮುಖ್ಯವಾಗುತ್ತದೆ. 

ಶಿವರಾಜ್ ಕುಮಾರ್ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಕೃಷಿ ಸಂಸ್ಕೃತಿಯ ನಾಡಿಮಿಡಿತವನ್ನು ತೋರಿಸಿದರು ವಾಸ್ತವ ಅಂಶಗಳಿಗೆ ಇದು ಧಕ್ಕುವುದೇ ಇಲ್ಲ.  ನಂತರ ಪೃಥ್ವಿ ಸಿನಿಮಾ ಗಣಿಗಾರಿಕೆ ವಿರೋಧಿಸುವ ಚಿತ್ರ. ಇದು ಸಮಾಜದ ಮೌಲ್ಯ ವ್ಯವಸ್ಥೆಯನ್ನು ಪಲ್ಲಟ ಮಾಡಿಸಿದ್ದಾಗಿದೆ. ಬಹುತೇಕ ಚಿತ್ರಗಳ ಕೇಂದ್ರ ಅದರ ಜೊತೆಗೆ ಸಮಾಜದ ಇನ್ನಿತರ ಜಾತಿಯ ಕಟ್ಟು ಪಾಡುಗಳ ನಿವಾರಣೆ ಕೌಟುಂಬಿಕ ಮೌಲ್ಯಗಳು ಮಾನವೀಯತೆ ಪ್ರತಿಪಾದನೆ ಇಂಥ ಎಲ್ಲಾ ವಿಷಯಗಳನ್ನು ಆಶಯವಾಗಿಟ್ಟುಕೊಂಡು ಸಮಾಜದ ವಿಮರ್ಶೆಗೆ ವೇದಿಕೆ ನೀಡಿದೆ. ಭೂಮಿ ಬಂಡವಾಳವಾಗಿ ಬದಲಾಗಿರುವುದರಿಂದ ಅದರ ಸುಧಾರಣೆ, ಸುಸ್ಥಿತಿ ಮರೆಯಾಗುತ್ತಿದೆ. ಇದು ಹೀಗೆ ಮುಂದುವರೆದರೆ ಅನ್ನದ ಬದಲಿಗೆ ಹಣವನ್ನು ತಿನ್ನುವ ಸಮಯವು ನಮ್ಮೆದುರಿಗೆ ಬರುತ್ತದೆ.

2 thoughts on “Summary of ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು – Nambi Kettavarillavo Mannannu”

  1. Wassup? rvwritting.com

    Did you know that it is possible to send message wholly legitimate way? We рroffer a unique way of sending appeals through contact forms.
    Messages that are sent with the help of Feedback Forms are not viewed as spam since they are seen as important.
    You can use our service with no cost to you.
    We can deliver a maximum of 50,000 messages for you.

    The cost of sending one million messages is $59.

    This letter is automatically generated.

    We only use chat for communication.

    Contact us.
    Telegram – https://t.me/FeedbackFormEU
    Skype live:contactform_18
    WhatsApp – +375259112693
    WhatsApp https://wa.me/+375259112693

  2. Pingback: Summary of ಉತ್ತರಕುಮಾರ - Uttarakumara - rvwritting

Leave a Comment

Your email address will not be published. Required fields are marked *

Scroll to Top