ನನ್ನ ತಾಯಿ ಕರುನಾಡು

  ಓ ನಲ್ಮೆಯ ವಿಶ್ವ ಬಂಧುವೇ ಹೇಳು

ಕನ್ನಡ ತಾಯಿಗೆ ಜಯ ಹೇ

             ಜ್ವಾಜಲ್ಯಮಾನದಿಂ ಹಾರಿದ ಕೀರುತಿ

            ಸಾಗುತಿ ಗಾಳಿಯಲಿ ಅಂಕೆಯಿಲ್ಲದ ಆರತಿ

             ಪರರಿಂದಂ ಪಡೆದ ಎರವಲಿನಲಿ

             ಮಿನುಗುತಿದೆ ಸ್ವಂತಿಕೆಯ ಸ್ತುತಿಯಲಿ

ಕದಂಬ ಗಂಗ ರಾಷ್ಟ್ರಕೂಟ ಮಾರ್ಗ

ಚಾಲುಕ್ಯ ಹೊಯ್ಸಳರ ವಿನೂತನಗರದಲಿ

ಮಯೂರ ದಡಿಗನ ಅಮೋಘವೀ

ರಾಯ ಚೆನ್ನವ್ವನ ಮಡಿಲಲಿ ಮನ್ನಿಸಿದವಳೇ

            ಅಸಗನಾದಿ ಪಂಪ ರನ್ನ ಅಣ್ಣನಲಿ

            ಅಕ್ಕನ ಮುಡಿಯಿಂದಂ, ಗುರು ವಿದ್ಯಾ

             ರಣ್ಯ ವ್ಯಾಸಪುಂಗವರಡಿಯಲಿ

             ಕಟ್ಟಿದಕ್ಕರದಲಿ ಜ್ವಲಿಸುವವಳೇ

ತುಂಗೆ ಶರಾವತಿ ಕೃಷ್ಣೆ ಕಾವೇರಿಯರಿವಿನಲಿ

ಜೋಗ ಗೋಕಾಕ ಜಲಪಾತಗಳೇ

ಸರೋವರದ ಸ್ವಪ್ನ ಸುಂದರಿ

ನಮ್ಮ ಮನದೊಡತಿಯೇ ನೀನಾಗಿರುವಿ

              ತ್ಯಾಗ ಬಲಿದಾನಗಳ ಮುಡಿಯಲಿ

               ನೆತ್ತರ ಮಡುವಿನ ಹೂರಣದಲಿ

               ಕಾಯಕವೇ ಕೈಲಾಸದಾಕೃತಿಯಲಿ

               ದಿಗಂತದಿಂ ಧರೆಗೆ ಬಂದವಳೀಗೆ..

ಬಡಗ ತೆಂಕಣದ ಬೇಧವ ಮರೆತು

ವರ್ಣ ವರ್ಗದ ಬಟ್ಟೆಯಿಂ ಹೊರಬಂದು

ವಿಶಾಲ ಸ್ಮøತಿವಲಯದಲಿ ನಿಂತು

ನಾವೆಲ್ಲರೂ ಒಂದೆಂದೂ ಸಾರಲು ಬಂದವಳೂ

             ಪತನದಿಂದ ಸ್ವಸ್ಥ್ಯದೆಡೆಗೆ ಅರಸುತಿರುವಳು

             ಗತದಿಂ ನವೀನವರೆಗೂ ಸೊಂಪಾಗಿರುವಳೇ

             ಕಾಲಘಟ್ಟಗಳಾದಿಯ ನಡುವಲಿ ಬೆಂಡಾಗಿ

              ಗಟ್ಟಿತನವ ಕಾಣಲು ಹಪಹಪಿಸುತಿರುವಳೇ

ಭೂ ಅದಿದೇವತೆಯ ಪುತ್ರಿಯಾಗುಜ್ವಲಿಸಿ

ಅನುರತರ ವಿಶಾಲ ಬಲೆಗೆ ಅಂಜದೆ

ವಿಷದ ಮಂಪರನು ಕಳಪಿ ಬಿಸಾಡಿ

ವ್ಯರ್ಥಾಲಾಪವ ತೊರೆದು ಧೀಶಕ್ತಿಯಾಗಿ ನಲಿ

                                                        ವೆಂಕಿ

Leave a Comment

Your email address will not be published. Required fields are marked *

Scroll to Top