
Badami Chalukyas – ಬಾದಾಮಿ ಚಾಲುಕ್ಯರು – ಕರ್ನಾಟಕ ಬಲಂ ಅಜೇಯಂ ಎಂದು ಕರೆಯಲ್ಪಡುವ ರಾಜಮನೆತನ – ಬಾದಾಮಿ ಚಾಲುಕ್ಯರದು. *ಬಾದಾಮಿ ಅಥವಾ ವಾತಾಪಿಯ ಚಾಲುಕ್ಯರು.
* ಮೊದಲ ಬಾರಿ ಕರ್ನಾಟಕವನ್ನು ಏಕ ಆಡಳಿತಕ್ಕೆ ತಂದವರು.
* ಬಾದಾಮಿ ಇವರ ರಾಜಧಾನಿಯಾಗಿತ್ತು.
* ನರ್ಮದಾ ನದಿಯಿಂದ ಕಾವೇರಿ ಬಯಲಿನವರೆಗೂ ಸಾಮ್ರಾಜ್ಯ ವಿಸ್ತರಣೆಯಾಗಿತ್ತು.
Kadambaru: https://youtu.be/smGH_8FP3g8?si=nLSlcTynQgB0sY1i
ಮೂಲ
೧. ಶಾಸನಾಧಾರಗಳು
* ವೆಂಗಿಯ ಚಾಲುಕ್ಯ ಶಾಸನಗಳು ಇವರ ಮೂಲ ಅಯೋಧ್ಯೆ ಎಂದು ಹೇಳಿದೆ.
* ಐಹೊಳೆ ಶಾಸನ – ರವಿಕೀರ್ತಿ. ಎರಡನೇ ಪುಲಕೇಶಿ ಇವನ ದಿಗ್ವಿಜಯ ಮತ್ತು ಚಾಲುಕ್ಯರ ಸಂತತಿಯ ಪೂರ್ವಾಂಶವನ್ನು ಒಳಗೊಂಡಿದೆ.
೨. ಸಾಹಿತ್ಯಧಾರಗಳು
* ಬಿಲ್ಹಣನ – ವಿಕ್ರಮಾಂಕ ದೇವ ಚರಿತಂ – ಇದರಲ್ಲಿ ಬ್ರಹ್ಮನ ಬೊಗಸೆಯಿಂದ ಹುಟ್ಟಿದವನೇ ಈ ವಂಶದ ಮೊದಲಿಗ ಎಂದು ಹೇಳಿದೆ
* ಚಾಲುಕ್ಯ ಅಥವಾ ಚಲ್ಕಿ ಕನ್ನಡದ ಸಲ್ಕಿ ಎಂದರೆ ಕೃಷಿ ಉಪಕರಣ ಇದರಿಂದ ಇವರನ್ನು ಕನ್ನಡಿಗರು ಎಂದು ಇವರನ್ನು ಹೇಳಲಾಗಿದೆ.
* ಅರಸ ಎಂಬ ಶಬ್ದದೊಡನೆ ಅವರ ಹೆಸರುಗಳ ಉಲ್ಲೇಖವಿದೆ. ಕತ್ತಿಯರಸ ಬೆಟ್ಟಿಯರಸ ಮಂಗಳಾರಸ ಮುಂತಾದವರು.
Badami Chalukyas – ಬಾದಾಮಿ ಚಾಲುಕ್ಯರು-ರಾಜಕೀಯ ಇತಿಹಾಸ
ಜಯಸಿಂಹ
* ಈತನೇ ಬಾದಾಮಿ ಚಾಲುಕ್ಯರ ಸಂತತಿಯ ಸ್ಥಾಪಕನಾಗಿದ್ದಾನೆ.
I ನೇ ಪುಲಕೇಶಿ
* ಇವನು ರಣರಾಗನ ಮಗ * ಮೊದಲ ಸ್ವತಂತ್ರ ರಾಜನಾಗಿದ್ದಾನೆ.
* ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು.
* ಮಂಗಳೇಶನ ಮಹಾಾಕೂಟ ಶಾಸನದಲ್ಲಿ ಈತನನ್ನು ಪ್ರಿಯತನುಜ ಎಂದು ಹೆಸರಿಸಿದೆ.
* ಐಹೊಳೆ ಶಾಸನದಲ್ಲಿ ಶ್ರೀ ವಲ್ಲಭ ಎಂದು ಹೆಸರಿಸಿದೆ.
* ಕದಂಬರನ್ನು ಸೋಲಿಸಿ ಸ್ವತಂತ್ರ ರಾಜನಾದನು.
* ದುರ್ಬಲದೇವಿ ಮತ್ತು ಹಿಂದುಕಾಂತಿ ಪತ್ನಿಯರು ಇವರಿಗೆ ಕೀರ್ತಿವರ್ಮ ಮತ್ತು ಮಂಗಳೇಶ ಎಂಬ ಪುತ್ರರಿದ್ದರು.
* ಇವನಿಗಿದ್ದ ಬಿರುದುಗಳು ಸತ್ಯಶ್ರಯ, ರಣವಿಕ್ರಮ, ಶ್ರೀ ಪೃಥ್ವಿ ವಲ್ಲಭ, ಮಹಾರಾಜ
ಒಂದನೇ ಕೀರ್ತಿವರ್ಮ
* ವಂಗ,ಅಂಗ, ಕಳಿಂಗ, ಮಗದ, ಮದ್ರಕ, ಕೇರಳ, ಪಾಂಡ್ಯ
ವೈಜಯಂತಿ ರಾಜರನ್ನು ಸೋಲಿಸಿ ರಾಜ್ಯ ವಿಸ್ತರಿಸಿದ.
* ಐಹೊಳೆ ಶಾಸನ – ನಳರ, ಮೌರ್ಯರ ಕದಂಬರ ಕಾಳರಾತ್ರಿ ಎಂದಿದೆ ಈತನನ್ನು.
ಣ ವಾತಾಪಿಯ ಸ್ಥಾಪಕನಾಗಿದ್ದಾನೆ.
ಮಂಗಳೇಶ
* ಕೀರ್ತಿವರ್ಮನ ನಂತರ ಬಾದಾಮಿ ಚಾಲುಕ್ಯರ ಅಧಿಪತ್ಯದಲ್ಲಿ ಕೂತವನು.
* ಎರಡನೇ ಪುಲಕೇಶಿ ಅಪ್ರಾಪ್ತನಾಗಿದ್ದರಿಂದ ಇವನು ರಾಜ್ಯಭಾರವನ್ನು ನೋಡಿಕೊಳ್ಳುತ್ತಿದ್ದ.
* ಕಳಚೂರಿಯರ ಸೋಲಿಸಿ ಗುಜರಾತ್ ಖಾಂದೇಶ್ ವಶ.
* ರೇವತಿ ದ್ವೀಪ ಸೋಲಿಸಿ, ಅದರ ವಶ.
* ಕಳಚೂರ್ಯರ ಮೇಲಿನ ವಿಜಯದ ಸಂಕೇತವಾಗಿ ಮಹಾಕೂಟೇಶ್ವರ ದೇವಾಲಯದಲ್ಲಿ ಜಯ ಸ್ತಂಭವನ್ನು ನಿರ್ಮಿಸಿದ.
* ಬಿರುದುಗಳು ರಣವಿಕ್ರಾಂತ, ಉರುರಣವಿಕ್ರಾಂತ, ಪೃಥ್ವಿವಲ್ಲಭ.
* ಬಾದಾಮಿಯ ಬೆಟ್ಟದಲ್ಲಿ ವೈಷ್ಣವ ಗುಹೆಯನ್ನು ತನ್ನ ಐದು ವರ್ಷದ ಆಳ್ವಿಕೆಯ ಸವಿನೆನಪಿಗಾಗಿ ನಿರ್ಮಿಸಿದ.
ಎರಡನೇ ಪುಲಕೇಶಿ
* ಬಾದಾಮಿ ಚಾಲುಕ್ಯರಲ್ಲಿ ಪ್ರಸಿದ್ಧನಾಗಿರುವ ದೊರೆಯಾಗಿದ್ದಾನೆ.
* ಇವನ ಬಗ್ಗೆ ತಿಳಿಯಲು ಐಹೊಳೆ ಶಾಸನ ಮತ್ತು ಹುಯೆನ್ ತ್ಸಾಂಗ್ ಬರವಣಿಗೆಗಳು ಸಹಾಯಕವಾಗಿವೆ.
* ಐಹೊಳೆ ಶಾಸನವು ಇವನ ದಿಗ್ವಿಜಯಗಳ ಬಗೆಗೆ ತಿಳಿಸುತ್ತದೆ.
* ರಾಷ್ಟ್ರಕೂಟರ ಗೋವಿಂದ ಮತ್ತು ಅಪ್ಪಯಿಕರನ್ನು ಭೀಮಾನದಿ ಬಳಿ ಸೋಲಿಸಿದ.
* ಕದಂಬರ ಬನವಾಸಿಯ ವಶ
* ಕೋಸಲ, ಕಳಿಂಗ,ವೆಂಗಿ ಗೆದ್ದುಕೊಂಡನು.
*ಆಳುಪರನ್ನು ವಶಪಡಿಸಿಕೊಂಡನು, ಲಾಟರು ಮಾಳ್ವರು, ಗೂರ್ಜರು, ಗುಜರಾತ್ ವಶಪಡಿಸಿಕೊಂಡನು.
* ಉತ್ತರದ ವರ್ಧನ ರಾಜವಂಶದ ಹರ್ಷ ಚಕ್ರವರ್ತಿಯ ವಿರುದ್ಧ ನರ್ಮದಾ ನದಿ ಕಾಳಗದಲ್ಲಿ ಜಯಿಸಿದರು. ಇದರಿಂದ ಪರಮೇಶ್ವರ ಎಂಬ ಬಿರುದು ಧರಿಸುವ ಮೂಲಕ ನರ್ಮದಾ ನದಿಯನ್ನೇ ಎರಡು ರಾಜ್ಯಗಳ ಗಡಿಯಾಗಿ ಮಾಡಿಕೊಳ್ಳಲಾಯಿತು ಎಂದು ಐಹೊಳೆ ಶಾಸನದಲ್ಲಿ ಹೇಳಲಾಗಿದೆ.
* ನಂತರದಲ್ಲಿ 99 ಸಾವಿರ ಹಳ್ಳಿಗಳಿರುವ ತ್ರೈರಾಷ್ಟ್ರ ಗೆದ್ದನೆಂಬ ಉಲ್ಲೇಖವಿದೆ ( ಕರ್ನಾಟಕ, ಮಹಾರಾಷ್ಟ್ರ, ಕೊಂಕಣ)
*ಪಶ್ಚಿಮ ಕರಾವಳಿಯ ಪಿಟ್ಟಾಪುರಂ ದುರ್ಗಾ ವಶ.
* ವೆಂಗಿಯನ್ನು ಗೆದ್ದು ತನ್ನ ತಮ್ಮ ಕುಬ್ಜ ವಿಷ್ಣುವರ್ಧನನನ್ನು ಅಧಿಪತಿಯಾಗಿ ಮಾಡಿದನು. ಇದರಿಂದ ವೆಂಗಿ ಚಾಲುಕ್ಯ ಮನೆತನ ಇಲ್ಲಿಂದ ಶುರುವಾಯಿತು.
* ಪಲ್ಲವರ ಮಹೇಂದ್ರವರ್ಮನನ್ನು ಸೋಲಿಸಿದ.
* ಕಾವೇರಿ ನದಿಯ ಅತ್ತ ದಡದಲ್ಲಿದ್ದ ಚೋಳ, ಕೇರಳ, ಪಾಂಡ್ಯರನ್ನು ಇವನ ಸಾರ್ವಭೌಮತ್ವವನ್ನು ಒಪ್ಪಿದ್ದರು.
* ಪರ್ಷಿಯಾದ ದೊರೆ ಎರಡನೇ ಕುಸ್ರೋ ಈತನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದ್ದ ಇದು ಅಜಂತ ಗುಹೆಯಲ್ಲಿ ಚಿತ್ರತವಾಗಿದೆ.
* ಬಿರುದುಗಳು ಸತ್ಯಶ್ರಯ, ದಕ್ಷಿಣ ಪಥೇಶ್ವರ, ಪರಮೇಶ್ವರ.
* ಎರಡನೇ ಪುಲಕೇಶಿಯು ತನ್ನ ಕೊನೆಯ ದಿನಗಳಲ್ಲಿ ಪಲ್ಲವರ ನರಸಿಂಹವರ್ಮನಿಂದ ಸೋಲು ಅನುಭವಿಸಬೇಕಾಯಿತು.
ಒಂದನೇ ವಿಕ್ರಮಾದಿತ್ಯ *ಬಾದಾಮಿಯನ್ನು ಕಳೆದುಕೊಂಡಿದ್ದ ಚಾಲುಕ್ಯರು ಮತ್ತೆ ಪಲ್ಲವರ ವಿರುದ್ಧ ಸೆಣಸಿ ಮರಳಿ ವಶಪಡಿಸಿಕೊಂಡನು. * ಪಲ್ಲವರ ರಾಜಧಾನಿಯಾದ ಕಂಚಿಯನ್ನು ಪರಮೇಶ್ವರ ವರ್ಮನನ್ನು ಸೋಲಿಸುವ ಮೂಲಕ ಗೆದ್ದುಕೊಂಡನು. * ಗುಜರಾತಿನ ಜಯಸಿಂಹನನ್ನು ಸೋಲಿಸಿದ್ದ.
* ಈತನ ಹೆಂಡತಿ ಗಂಗಮಹಾದೇವಿಯು ಗಂಗರ ವಂಶಕ್ಕೆ ಸೇರಿದವಳಾದ್ದರಿಂದ ಗಂಗ ಮತ್ತು ಚಾಲುಕ್ಯರ ನಡುವೆ ಉತ್ತಮ ಸಂಬಂಧವೇರ್ಪಟ್ಟಿತ್ತು.
ವಿನಯಾದಿತ್ಯ
* ತಂದೆಯ ಜೊತೆಯಲ್ಲಿಯೇ ಯುದ್ಧದಲ್ಲಿ ತೊಡಗಿಸಿಕೊಂಡಿದ್ದ ಇದರಿಂದ ಚೋಳ, ಪಾಂಡ್ಯ, ಕೇರಳ ರಾಜರು ಮತ್ತು ಪಲ್ಲವರ ಆಕ್ರಮಣಗಳನ್ನು ಹಿಮ್ಮೆಟ್ಟಿಸಿದ್ದ.
* ಪಲ್ಲವ, ಕಳಬ್ರ, ಕೇರಳ, ಮಧ್ಯ ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಕಳಚೂರಿಗಳು ಕಮೇರಾ ಪಾರಸಿಕ, ಸಿಂಹಳರಿಂದ ಕಪ್ಪ ಕಾಣಿಕೆಗಳ ಪಡೆದುಕೊಂಡಿದ್ದ.
* ಉತ್ತರದ ಕನೂಜಿನ ರಾಜ ಯಶೋವರ್ಮನನ್ನು ಸೋಲಿಸಿ ಪಾಲಿಧ್ವಜ ಮತ್ತು ಇನ್ನಿತರ ಶ್ವೇತ ಚ್ಛತ್ರ ಮುಂತಾದವನ್ನು ವಶಪಡಿಸಿಕೊಂಡಿದ್ದ.
*ಇವನ ಸಾಮ್ರಾಜ್ಯ ಗಂಗಾ- ಯಮುನಾ ನದಿಯ ವರೆಗೆ ವಿಸ್ತರಿಸಿತು.
ವಿಜಯಾದಿತ್ಯ
* ಪಲ್ಲವರ ಪರಮೇಶ್ವರ ವರ್ಮನನ್ನು ಸೋಲಿಸಿದ.
* ಪಟ್ಟದಕಲ್ಲಿನ ವಿಜಯೇಶ್ವರ ದೇವಾಲಯ ನಿರ್ಮಾಣ.
ಎರಡನೇ ವಿಕ್ರಮಾದಿತ್ಯ
* ಪಲ್ಲವರನ್ನು ಕಂಚಿಯ ತುಂಡಕ ಪ್ರದೇಶದಲ್ಲಿ ಸೋಲಿಸಿ ಕಂಚಿಯ ವಶವನ್ನು ಮಾಡಿಕೊಂಡ ಇದರ ನೆನಪಿಗಾಗಿ ಇವನ ರಾಣಿಯರಾದ ಲೋಕ ಮಹಾದೇವಿ ಪಟ್ಟದಕಲ್ಲಿನಲ್ಲಿ ಲೋಕೇಶ್ವರ ದೇವಾಲಯ ಅಥವಾ ವಿರುಪಾಕ್ಷ ದೇವಾಲಯ, ತ್ರೈಲೋಕ್ಯ ಮಹಾದೇವಿ ತ್ರೈಲೋಕೇಶ್ವರ ಸ್ವಾಮಿ ದೇವಾಲಯ ನಿರ್ಮಿಸಿದರು.
* ಪಾಂಡ್ಯ, ಚೋಳ, ಕಳಬ್ರರನ್ನು ಸೋಲಿಸಿ, ವಿಜಯ ಸ್ತಂಭ ನಿರ್ಮಾಣ.
* ಗುಜರಾತ್ ಪ್ರದೇಶದಲ್ಲಿ ಅರಬ್ಬರನ್ನು ಸೋಲಿಸಿದ ಇದಕ್ಕೆ ನೆರವಾದವನು ಅವನಿಜನಾಶ್ರಾಯ ಪುಲಕೇಶಿನ್.
ಎರಡನೇ ಕೀರ್ತಿವರ್ಮ
* ಇವರ ಸಾಮಂತರವಾದ ರಾಷ್ಟ್ರಕೂಟರ ದಂತಿದುರ್ಗನು ಇವನನ್ನು ಸೋಲಿಸಿ ರಾಷ್ಟ್ರಕೂಟರ ಮನೆತನವನ್ನು ಸೃಷ್ಟಿಸಿದ.
Read this one: Gangas of Karnatakahttps://rvwritting.com/talakadina-gangaru-%e0%b2%a4%e0%b2%b2%e0%b2%95%e0%b2%be%e0%b2%a1%e0%b2%bf%e0%b2%a8-%e0%b2%97%e0%b2%82%e0%b2%97%e0%b2%b0%e0%b3%81/
ಬಾದಾಮಿ ಚಾಲುಕ್ಯರ ಆಡಳಿತ
* ಇವರು ತಮ್ಮ ಆಡಳಿತ ವ್ಯವಸ್ಥೆಯನ್ನು ಕದಂಬ, ಗುಪ್ತರ ಅಂಶಗಳನ್ನು ಒಳಗೊಂಡು ಆಡಳಿತವನ್ನು ಮಾಡಿದ್ದಾರೆ.
* ರಾಜನು ರಾಜ್ಯದ ಸರ್ವೋಚ್ಛ ನಾಗಿದ್ದನು,
ಆಡಳಿತದ ವಿವಿಧ ಅಂಗಗಳಿಗೆ ಸಚಿವರು, ದಂಡಾಧಿಕಾರಿಗಳು, ಶಾಸನಾಧಿಕಾರಿಗಳು, ಧರ್ಮಾಧಿಕಾರಿಗಳು ಮಹಾಸಂಧಿ ವಿಗ್ರಹಿ, ವಿಷಯಪತಿ, ಲೇಖಕ ಮುಂತಾದವರು ಇದ್ದರು.
* ಹುಯೆನ್ ತ್ಸಾಂಗ್ ಮಾತಿನಂತೆ ರಾಜನು ಬಹುತೇಕ ಸಮಯವನ್ನು ಸೈನಿಕರ ತರಬೇತಿ ಮತ್ತು ಜನರ ಕುಂದು ಕೊರತೆಗಳನ್ನು ಆಲಿಸುವಲ್ಲಿ ಹೆಚ್ಚು ಸಮಯ ವಿನಿಯೋಗಿಸುತ್ತಿದ್ದ ಎಂದು ಹೇಳಿದ್ದಾನೆ.
ಪ್ರಾಂತ್ಯ ಆಡಳಿತ
* ಆಡಳಿತದ ಅನುಕೂಲಕ್ಕಾಗಿ ರಾಜ್ಯ
ವಿಷಯ
ನಾಡು
ಗ್ರಾಮ ಎಂದು ವಿಭಾಗಗಳನ್ನು ಮಾಡಿಕೊಂಡಿದ್ದರು.
ಧರ್ಮ
* ಇವರು ಪುರಾತನ ಬ್ರಾಹ್ಮಣ ಮತಾವಲಂಬಿಗಳಾಗಿದ್ದರು.
* ನಂತರ ಶೈವ ಧರ್ಮಕ್ಕೂ ಪ್ರೋತ್ಸಾಹವನ್ನು ನೀಡಿದರು ಉದಾಹರಣೆಗೆ ೧ನೇ ವಿಕ್ರಮಾದಿತ್ಯ.
* ಜೈನ ಮತಕ್ಕೂ ಪ್ರೋತ್ಸಾಹ ನೀಡಿದ್ದರು ಉದಾಹರಣೆಗೆ ರವಿಕೀರ್ತಿ.
* ಬೌದ್ಧ ಧರ್ಮಕ್ಕೆ ಹೆಚ್ಚು ಪ್ರೋತ್ಸಾಹವಿಲ್ಲದಿದ್ದರೂ ಅಲ್ಲಲ್ಲಿ ಕಂಡುಬರುತ್ತಿತ್ತು.
ಬಾದಾಮಿ ಚಾಲುಕ್ಯರ ಆರ್ಥಿಕ ಪರಿಸ್ಥಿತಿ
* ಕೃಷಿ ಮುಖ್ಯ ಜೀವನಾಧಾರವಾಗಿತ್ತು.
* ಭೂಮಿಯನ್ನು ಫಲವತ್ತತೆಯ ಆಧಾರದ ಮೇಲೆ ನಾಲ್ಕು ರೀತಿ ವಿಭಾಗ ಮಾಡಲಾಗಿತ್ತು.
ಕಪ್ಪು ಮಣ್ಣಿನ ಭೂಮಿ
ಕೆಂಪು ಮಣ್ಣಿನ ಭೂಮಿ ತೋಟದ ಭೂಮಿ ಬಂಜರಭೂಮಿ
*ಭೂಕಂದಾಯ ಇವರ ಮೂಲ ವರಮಾನವಾಗಿತ್ತು
ಇಲ್ಲಿ ಮೂರು ರೀತಿಯ ತೆರಿಗೆಗಳನ್ನು ನೋಡಬಹುದು.
ಪಣ್ಣಾಯ (ವೀಳ್ಯದೆಲೆ ಮೇಲೆ ಸುಂಕ)
ಹೇರ್ಜುಂಕ ( ಹೇರುಗಳ ಮೇಲಣ ಸುಂಕ)
ವೃತ್ತಿ ತೆರಿಗೆಗಳು.
* ಇವರ ಕಾಲದ ಮುಖ್ಯ ಬಂದರುಗಳು ಕಲ್ಯಾಣ, ಮಾಂಗರೂತ್( ಮಂಗಳೂರು) ಮಲೆ, ಠಾಣಾ, ಸೋಪಾರಾ.
* ಇವರ ಕಾಲದ ನಾಣ್ಯಗಳು – ಗದ್ಯಾಣ, ವರಾಹ – ಚಿನ್ನದ ನಾಣ್ಯಗಳು.
* ಚೀನಾ, ಮಲಯ, ಆಫ್ರಿಕಾ ಮುಂತಾದ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ಉತ್ತಮವಾಗಿಟ್ಟುಕೊಂಡಿದ್ದರು.
ವೃತ್ತಿ ಸಂಘಗಳು
* ಬಾದಾಮಿ ಅಗ್ರಹಾರ 2000 ಮಹಾಜನರಿಂದ ಕೂಡಿತ್ತು.
* ಐಯ್ಯಹೊಳೆ 500
* ಮೋಚಿ, ಹೂವಾಡಿಗ, ಮಾಲಂಕಾರ, ಒಡ್ಡ ಮುಂತಾದ ವೃತ್ತಿ ಶ್ರೇಣಿಗಳು ಇದ್ದವು.
ಬಾದಾಮಿ ಚಾಲುಕ್ಯರ ಕಲೆ ಮತ್ತು ವಾಸ್ತು ಶಿಲ್ಪ
* ಬಾದಾಮಿ ಚಾಲುಕ್ಯರ ಬಹುಮುಖ್ಯ ಉಲ್ಲೇಖನೀಯ ಕೆಲಸವೆಂದರೆ ಅವರ ವಾಸ್ತುಶಿಲ್ಪದ ರಚನೆಗಳು
* ಇವು ಮುಂದೆ ಬರುವ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳ, ವಿಜಯನಗರದ ಅರಸರ ಮೇಲು ಪ್ರಭಾವ ಬೀರಿದೆ.
* ಇವರ ಕಾಲದಲ್ಲಿ ಚಾಲುಕ್ಯ ಶೈಲಿ ಎಂಬ ಹೊಸ ವಾಸ್ತುಶಿಲ್ಪ ಶೈಲಿಯನ್ನು ಹುಟ್ಟು ಹಾಕಿದ್ದಾರೆ.
* ಇವರು ಉತ್ತರದ ನಾಗರ ಶೈಲಿ ಮತ್ತು ದಕ್ಷಿಣದ ದ್ರಾವಿಡ ಶೈಲಿಗಳನ್ನು ಬೆರೆಸಿ ನಿರ್ಮಾಣವನ್ನು ಮಾಡಿದ್ದಾರೆ.
ಇದರ ಲಕ್ಷಣಗಳು
*ತಳಭಾಗ ಚಿಕ್ಕದು
* ಚೌಕಾಕಾರದ ಗರ್ಭಗೃಹ ಸುತ್ತಲೂ ಪ್ರದಕ್ಷಿಣ ಪತವಿರುತ್ತದೆ
*ಸಭಾಮಂಟಪ, ಮುಖಮಂಟಪ, ಸುಕನಾಸಿಗಳು ಇರುತ್ತವೆ.
* ದೇವಾಲಯ ಮೂರು ಅಥವಾ ನಾಲ್ಕು ಅಡಿ ಎತ್ತರದ ಪೀಠದ ಮೇಲೆ ನಿರ್ಮಾಣವಾಗಿರುತ್ತದೆ.
ವಾಸ್ತುಶಿಲ್ಪವನ್ನು ಎರಡು ರೀತಿಯಲ್ಲಿ ವಿಭಾಗಿಸಬಹುದು
೧. ಗುಹಾಲಯಗಳು
೨. ದೇವಾಲಯಗಳು
೧. ಗುಹಾಲಯಗಳು
* ಬಾದಾಮಿ ಮತ್ತು ಐಹೊಳೆಗಳಲ್ಲಿ ಕಾಣಬಹುದು.
* ಇಲ್ಲಿ ಮೂರು ಅಂಶಗಳಿವೆ ೧.ಮೊಗಸಾಲೆ (ಮುಖ ಮಂಟಪ)
೨.ಕಂಬಗಳ ಭವನ
೩ ಕಿರಿದಾದ ಗರ್ಭಗೃಹವನ್ನು ಗುಹಾಲಯಗಳಲ್ಲಿ ಕಾಣಬಹುದು.
ಬಾದಾಮಿ ಗುಹಾಂತರ ದೇವಾಲಯಗಳು
* ಇಲ್ಲಿ ನಾಲ್ಕು ಗುಹಾಲಯಗಳಿವೆ
* ಒಂದು ಶೈವ ಗುಹಾಲಯ – ಶಿವನಿಗಾಗಿ.
* ಎರಡು ವೈಷ್ಣವ ದೇವಾಲಯಗಳಿವೆ- ವಿಷ್ಣುವಿಗಾಗಿ.
* ಒಂದು ಜೈನ ಗುಹಾಲಯವಿದೆ.
೧. ವಿಷ್ಣು ಗುಹಾ ದೇವಾಲಯ
*ಇದು ಮೂರನೇ ಗುಹಾಲಯ.
* ಇದು ಮಂಗಳೇಶನಿಂದ ರಚಿತವಾಗಿದೆ.
* ಇಲ್ಲಿ 12 ಕಂಬಗಳಿಂದ ಕೂಡಿದೆ.
* ವಿಷ್ಣುವಿನ ಬೃಹದಾಕಾರ ಮೂರ್ತಿ ಇಲ್ಲಿದೆ.
* ವರಾಹಮೂರ್ತಿ ಇದರ ಮೇಲೆ ಎರಡು ವಿದ್ಯಾದರ ಮೂರ್ತಿಗಳು ಕೂಡ ಕೆತ್ತಿಸಲಾಗಿದೆ.
೨. ಶೈವ ಗುಹೆ
* ಅರ್ಧನಾರೀಶ್ವರನ ಚಿತ್ರವಿದೆ
* ತಾಂಡವ ನೃತ್ಯದ ಈಶ್ವರನ ಮೂರ್ತಿಯು ಇದೆ.
* ಮಹಿಶಾಸುರ ಮರ್ದಿನಿ, ಹರಿಹರ, ಅರ್ಧನಾರೀಶ್ವರ, ದ್ವಾರಪಾಲಕರ ಮೂರ್ತಿ ವಿಗ್ರಹಗಳಿವೆ.
* 18 ಕೈಗಳ ನಟರಾಜನ ಉಬ್ಬಿದ ಬಿತ್ತಿ ಶಿಲ್ಪವು ಇದೆ.
೩. ವೈಷ್ಣವ ಗುಹೆ
* ಇಲ್ಲು ವರಾಹಮೂರ್ತಿ ಇದೆ.
* ಸ್ತ್ರೀ ದೇವತೆಗಳ ಚಿತ್ರವೂ ಇದೆ.
೪. ಜೈನ ಗುಹೆ
*ಇದು ಅತ್ಯಂತ ಚಿಕ್ಕ ಗುಹಾಲಯ.
೨. ದೇವಾಲಯಗಳು
ಐಹೊಳೆಯನ್ನು ಭಾರತೀಯ ದೇಗುಲಗಳ ತೊಟ್ಟಿಲು ಎಂದು ಪಸ್ರಿಬ್ರೌನ್ ಹೇಳಿದ್ದಾರೆ.
೧. ಲಾಡ್ ಖಾನ್ ದೇವಾಲಯ
* ಚೌಕಾಕಾರವಾಗಿದೆ.
* ಕಂಬಗಳ ಸಾಲು ಇದೆ.
* ಮಧ್ಯದ ಕಿರು ಚೌಕದಲ್ಲಿ ನಂದಿ ವಿಗ್ರಹವಿದೆ.
* ಮುಖ ಮಂಟಪದ ಕಂಬಗಳ ಮೇಲೆ ಚಿತ್ರ ಬಿಡಿಸಲಾಗಿದೆ.
* ಗುಪ್ತರ ಕಾಲದ ಪ್ರಭಾವವಾಗಿರಬೇಕು ಇದರ ಮೇಲೆ.
* ಮುಸಲ್ಮಾನ ಇಲ್ಲಿ ವಾಸಿಸುತ್ತಿದ್ದರಿಂದ ಅವನ ಹೆಸರನ್ನೇ ಈ ದೇವಾಲಯಕ್ಕೆ ಇಡಲಾಗಿದೆ.
೨. ದುರ್ಗಾ ದೇವಾಲಯ
* ಇದರ ತಳವಿನ್ಯಾಸ ಕುದುರೆ ಲಾಳಕಾರದಲ್ಲಿದೆ.
* ಗರ್ಭಗೃಹ, ಅಂತರಾಳ ಮಂಟಪ, ಸಭಾ ಮಂಟಪವನ್ನು ಒಳಗೊಂಡಿದೆ.
* ಇದರ ಶಿಖರ ನಾಗರ ಶೈಲಿಯಲ್ಲಿದೆ.
* ಇದು ಮೂಲತಃ ಸೂರ್ಯ ಮಂದಿರವಾಗಿದೆ.
೩. ಹುಚ್ಚಿ ಮಲ್ಲಿಗುಡಿ
* ಇದರಲ್ಲಿ ಗರ್ಭಗೃಹ, ಸುಖನಾಸಿ, ಮುಖಮಂಟಪವನ್ನು ಒಳಗೊಂಡಿದೆ.
* ಗರ್ಭಗೃಹ ಮತ್ತು ಮಹಾಮಂಟಪದ ನಡುವೆ ಸುಖನಾಸಿ ಅಥವಾ ಅಂತರಾಳ ಮೊದಲ ಬಾರಿಗೆ ಇಲ್ಲಿ ಬಂದಿದೆ.
* ಇದರ ಶಿಖರವು ನಾಗರ ಶೈಲಿಯಲ್ಲಿದೆ.
೪.ಮೇಗುತಿ ದೇವಾಲಯ
* ಇದರ ನಿರ್ಮಾತೃ ರವಿಕೀರ್ತಿ.
* ಗರ್ಭಗೃಹ, ರಂಗಮಂಟಪ, ಮುಖಮಂಟಪವನ್ನು ಒಳಗೊಂಡಿದೆ.
* ರಂಗಮಂಟಪ ಮತ್ತು ಮುಖ ಮಂಟಪ ದ್ರಾವಿಡ ಶೈಲಿಯಲ್ಲಿ ರಚನೆಯಾಗಿದೆ.
* ಇಲ್ಲಿಯೇ ರವಿಕೀರ್ತಿಯ ಐಹೊಳೆ ಶಾಸನವಿರುವುದು.
೫. ವಿರೋಪಾಕ್ಷ ದೇವಾಲಯ
* ಪಟ್ಟದಕಲ್ಲಿನಲ್ಲಿರುವ ಪ್ರಮುಖವಾದ ದೇವಾಲಯಗಳಲ್ಲಿ ಇದು ಒಂದು.
* ಎರಡನೇ ವಿಕ್ರಮಾದಿತ್ಯನು ಪಲ್ಲವರ ಮೇಲೆ ಗಳಿಸಿದ ಜಯದ ನೆನಪಿಗೆ ಲೋಕ ಮಹಾದೇವಿ ಈ ದೇವಾಲಯವನ್ನು ನಿರ್ಮಿಸಿದಳು.
* ಎರಡು ಭಾಗಗಳಲ್ಲಿ ಎರಡು ಗರ್ಭಗೃಹ, ಶಿವಲಿಂಗದ ಗರ್ಭಗೃಹ ಹೊಂದಿದೆ.
* ಗೋಪುರ ದ್ರಾವಿಡ ಶೈಲಿಯಲ್ಲಿದೆ.
* ಪಟ್ಟದಕಲ್ಲಿನಲ್ಲಿರುವ ಮತ್ತಿತರ ದೇವಾಲಯಗಳೆಂದರೆ ಸಂಗಮೇಶ್ವರ, ಮಲ್ಲಿಕಾರ್ಜುನ ಮುಂತಾದವು.
೩. ಚಿತ್ರಕಲೆ
* ಅಜಂತಾದ ಮೊದಲ ಗುಹೆ ಇವರ ಕಾಲದ ಚಿತ್ರಕಲೆಗೆ ಸಾಕ್ಷಿ ಇದರಲ್ಲಿ ಬುದ್ಧನ ಪ್ರಲೋಭನೆ ಮತ್ತು ಪುಲಕೇಶಿ ಮತ್ತು ಪರ್ಶಿಯರಾಜನ ರಾಯಭಾರಿಯ ಸ್ವಾಗತವನ್ನು ಚಿತ್ರಿಸಲಾಗಿದೆ.
*ಎರಡನೇ ಗುಹೆ ಸಾಮಾನ್ಯ ಗೆರೆಗಳ ಚಿತ್ರಗಳಿವೆ
* ಮೂರನೇ ಗುಹೆ ವೈಷ್ಣವ, ಶಿವ ಪಾರ್ವತಿಯ ವಿವಾಹ ನಿಶ್ಚಿತಾರ್ಥದ ದೃಶ್ಯವಿದೆ.
Pingback: ರಾಷ್ಟ್ರಕೂಟರು - Rastrakutas - History of Karnataka. One of the great Dynasty in Karnataka history. Part - 5 - rvwritting