ಮನಾಲಿ ಎಂದಾಕ್ಷಣ ಮಧುಚಂದ್ರಕ್ಕೆ ಅತ್ಯಂತ ಸೂಕ್ತವಾದ ಜಾಗ ಎಂದು ಬಿಂಬಿತವಾಗಿದೆ. ಹಾಗೆಯೇ ಉತ್ತಮ ಪ್ರವಾಸಿ ತಾಣವಾಗಿಯೂ ಪ್ರಕೃತಿ ಸೌಂದರ್ಯವನ್ನು ಸವಿಯಲು, ಬಿಳಿ ಮೋಡಗಳಂತೆ ಕಾಣುವ Snowನಿಂದ ಕೂಡಿರುವ ಬೆಟ್ಟ ಗುಡ್ಡಗಳು, ಸದಾ ಹಿತವೆನಿಸುವ ತಾಪಮಾನ, ಅಲ್ಲಿ ಹರಿಯುವ ಬಿಯಾಸ್ ನದಿಯ ಪಕ್ಕದಲ್ಲಿ ಹೋಟೆಲ್ ಅಥವ ರೂಮುಗಳನ್ನು ಮಾಡಿಕೊಂಡು ಒಂದೆರಡು ದಿನ ಕಳೆದರೆ ಮತ್ತೆ ತಮ್ಮೂರಿಗೆ ವಾಪಸ್ ಆಗುವ ಮನಸ್ಸಿಲ್ಲದಂತೆ ಮಾಡುವ ಒಂದು ಪಟ್ಟಣವಾಗಿದೆ.
ಹಿಮಾಚಲ ಪ್ರದೇಶದ ಒಂದು ಸುಂದರವಾದ ಗಿರಿಧಾಮ ಶೀಮ್ಲಾದಿಂದ 270 ಕಿಲೋಮೀಟರ್ ದೂರದಲ್ಲಿದೆ. ಈ ಮನಾಲಿಗೆ ಮನಾಲಿಎಂಬ ಹೆಸರು “ಮನು”ವಿನಿಂದ ಬಂದಿದೆ. ಮನು-ಆಲಯ ಮುಂದೆ ಮನಾಲಿಯಾಗಿ ಬದಲಾಗಿದೆ. ಇಲ್ಲಿ ಸ್ಥಳೀಯ ಬೇಟೆಗಾರರಾದ ರಕ್ಷಾ ವಿರಳ ಸಂಖ್ಯೆಯಲ್ಲಿದ್ದರು. ನಂತರ ಕಾಂಗ್ರಾ ಕಣಿವೆಯಿಂದ ಕುರಿಗಾಹಿಗಳು ಬಂದು ವಾಸಿಸುತ್ತ ಕೃಷಿಯನ್ನು ಮಾಡಿಕೊಂಡು ನೆಲೆಸಿದ್ದ ಚಿಕ್ಕ ಹಳ್ಳಿ. ಇಂದು ಭಾರತದಾದ್ಯಂತ ಮತ್ತು ವಿಶ್ವದಾದ್ಯಂತ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆದುಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದೆ. 1980 ನಂತರ ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾದ ನಂತರ ಅತ್ತ ಹೋಗುತ್ತಿದ್ದ ಜನ ಇತ್ತ ಬರಲು ಶುರುವಾದರು. ಇದರಿಂದ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿತು ಹಾಗೆಯೇ ಇಲ್ಲಿನ ಹಿತವಾದ ವಾತಾವರಣ ಹೆಚ್ಚಿನ ಕೆಲಸ ಮಾಡಿದೆ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳಲು.
ಕುಲ್ಲು – ಮನಾಲಿ ಎಂದೇ ಕರೆಯಲಾಗುತ್ತದೆ. ಕುಲ್ಲು ಜಿಲ್ಲೆಯಲ್ಲಿ ಬರುವ ಒಂದು ಪಟ್ಟಣ. ಇಲ್ಲಿಗೆ ಬರಲು ಚಂಢೀಗಡ ಅಥವಾ ದೆಹಲಿಗೆ ಬಂದು ಇಲ್ಲಿಗೆ ತಲುಪಬಹುದು. ದೆಹಲಿ ಮತ್ತು ಚಂಡೀಗಢಕ್ಕೆ ರಸ್ತೆ, ರೈಲು, ವಿಮಾನದ ಮೂಲಕ ತಲುಪಬಹುದು. ಅಲ್ಲಿಂದ ಮುಂದಕ್ಕೆ Organized tour ಅಥವಾ unorganized tour ಮೂಲಕವಾಗಿಯೂ ತಲುಪಬಹುದು. ಮೊದಲ ಬಾರಿಗೆ ಹೋಗುತ್ತಿದ್ದರೆ organized tour ಮುಖ್ಯವಾಗುತ್ತದೆ. ಜೊತೆಗೆ budget trip ಮಾಡಿಕೊಂಡು ಹೋಗುವುದು ಉತ್ತಮ.ಇಲ್ಲಿಗೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ನವೆಂಬರ್ ನಿಂದ ಫೆಬ್ರುವರಿ. ಈ ಸಮಯದಲ್ಲಿ ಇಲ್ಲಿ ಹೆಚ್ಚು ಹಿಮ ಬೀಳುತ್ತದೆ. ಆಗ ಎಲ್ಲೆಲ್ಲೂ ಹಿಮ ಬಿದ್ದಿರುವ ದೃಶ್ಯವೇ ಕಾಣುತ್ತಿರುತ್ತದೆ. ಬೇಸಿಗೆ ಸಂದರ್ಭದಲ್ಲಿಯೂ ಹೋದರೂ ಅಲ್ಲಿನ ಹವಾಮಾನ ಹಿತಕರವಾಗಿಯೇ ಇರುತ್ತದೆ. ಇಲ್ಲಿಗೆ ವರ್ಷದ ಯಾವ ಸಂದರ್ಭದಲ್ಲಿಯೂ ಹೋಗಬಹುದಾಗಿದೆ. ಜೊತೆಗೆ ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ನದಿಗಳು ಪ್ರವಾಹವನ್ನುಂಟು ಮಾಡುವುದರಿಂದ ಮಳೆಗಾಲವನ್ನು ಕಳೆದುಕೊಂಡು ಹೋಗುವುದು ಸೂಕ್ತ.
1. ವಸಿಷ್ಠ ದೇವಾಲಯ
ಮನಾಲಿಯಿಂದ ಮೂರು ಕಿಲೋಮೀಟರ್ ದೂರದಲ್ಲಿ ವಸಿಸ್ಟ ಗ್ರಾಮದಲ್ಲಿ ನೆಲೆಗೊಂಡಿದೆ. ರಾಮಾಯಣ ಕಾಲದ ಹಿನ್ನೆಲೆಯನ್ನು ಒಳಗೊಂಡಿದೆ. ದೇವಾಲಯದ ಮುಂದೆ Beas ನದಿಯ ಹರಿವು ಅದರ ಪಕ್ಕದಲ್ಲಿ ಧಿಯೋದರ್ ಮರಗಳ ಸಾಲು ಸಾಲುಗಳು, ಅದರ ಹಿಂದೆ ಬಿಳಿ ಶ್ವೇತ ವರ್ಣದ ಗುಡ್ಡಗಳನ್ನು ದೇವಾಲಯದ ಎದುರಿನಿಂದ ನೋಡಿದಾಗ ಮನಸ್ಸು ಆಹ್ಲಾದಗೊಳ್ಳುತ್ತೆ. ದೇವಾಲಯದ ಪಕ್ಕದಲ್ಲಿ ಗಂಧಕಯುಕ್ತ ನೀರಿನ ಬುಗ್ಗೆಗಳನ್ನು ಕಾಣಬಹುದು. ಇಲ್ಲಿನ ಬುಗ್ಗೆಗಳಲ್ಲಿ ದೇಹಕ್ಕೆ ಅಂಟಿದ ಚರ್ಮರೋಗಗಳನ್ನು ಹೋಗಲಾಡಿಸುವ ಶಕ್ತಿ ಇದೆ ಎಂದು ಇಲ್ಲಿನ ಜನ ನಂಬಿದ್ದಾರೆ ಅದಕ್ಕಾಗಿ ಇಲ್ಲಿ ಬಂದು ಸ್ನಾನ ಮಾಡಿ ದೇವರ ದರ್ಶನ ಮಾಡಿ ಹೋಗುತ್ತಾರೆ.
2. ಹಡಿಂಬ ದೇವಾಲಯ
ಇದು ದುಂಗಿರಿ ವನ್ ವಿಹಾರ್ ನಲ್ಲಿದೆ. ಹಡಿಂಬಾ ದೇವಾಲಯ ಮನಾಲಿ ಬೆಟ್ಟಗಳ ನಡುವೆ ನೆಲೆಸಿದೆ. ಹಡಿಂಬ ಎಂದರೆ ತಕ್ಷಣ ರಾಮಾಯಣದ ಹಿಡಿಂಬೆ ಪಾತ್ರ ನೆನಪಾಗುತ್ತದೆ. ಹಿಡಿಂಬೆ ರಾಕ್ಷಸಿ, ಭೀಮನ ಪತ್ನಿ. ಆದರೆ ಇಲ್ಲಿ ದೇವತೆ ಎಂದು ಜನ ಪೂಜಿಸುತ್ತಾರೆ. ಮನಾಲಿಗೆ ಬರುವ ಬಹುತೇಕ ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಾರೆ. ಮನಾಲಿ ಮತ್ತು ಕುಲ್ಲು ಪ್ರದೇಶದ ಪೋಷಕ ದೇವತೆ ಎಂದು ಪೂಜಿಸಲ್ಪಡುತ್ತಿದ್ದಾಳೆ. ಈ ದೇವಾಲಯ ಪಗೋಡಾ ಶೈಲಿಯನ್ನು ಅನುಸರಿಸುವ ಭಾರತದ ಕೆಲವೇ ಕೆಲವು ದೇವಾಲಯಗಳಲ್ಲಿ ಇದೊಂದು. ಜೊತೆಗೆ ಮಹಿಳಾ ಆರ್ಚಕರನ್ನು ಹೊಂದಿರುವ ದೇವಾಲಯವಾಗಿದೆ. ದೇವಾಲಯ ನಾಲ್ಕು ಹಂತ ಹೊಂದಿದ್ದು ಗೋಡೆ ಮತ್ತು ಚಾವಣಿಗಳನ್ನು ಮರದಿಂದ ಮಾಡಲಾಗಿದ್ದು ಇದರ ಸುತ್ತ ಕೆತ್ತನೆಗಳು ಕಂಡುಬರುತ್ತವೆ. ತಾಮ್ರದ ಗಂಟೆಗಳನ್ನು ನೇತು ಹಾಕಲಾಗಿದೆ ದೇವಾಲಯದ ಪ್ರವೇಶ ದ್ವಾರ ಸಣ್ಣದಾಗಿದ್ದು, ಒಳಗೆ ದೇವಿಯ ಮೂರ್ತಿಗಳನ್ನು ಇಟ್ಟಿದ್ದಾರೆ ಇದರಿಂದ ಧಾರ್ಮಿಕ ಮತ್ತು ಭಕ್ತಿಯ ಕೇಂದ್ರವಾಗಿ ಮಾರ್ಪಟ್ಟಿದೆ.
3. ನ್ಯಿಂಗ್ಮಾಪೋ ದೇವಾಲಯ
ಈ ದೇವಾಲಯ ಮನಾಲಿಯಲ್ಲಿದೆ. ಉತ್ತರ ಭಾರತದಲ್ಲಿ ನೆಲೆಯಾಗಿರುವ ಒಂದು ಪ್ರಮುಖ ಬೌದ್ಧ ಧಾರ್ಮಿಕ ಕೇಂದ್ರ. ಇಲ್ಲಿ ಬುದ್ಧ ಕುಳಿತ ಧ್ಯಾನಸ್ಥ ಸ್ಥಿತಿಯಲ್ಲಿರುವ ಭವ್ಯ ಮೂರ್ತಿಯನ್ನು ಹೊಂದಿದೆ. ಜೊತೆಗೆ ವರ್ಣ ಚಿತ್ರಗಳು ಅಲಂಕಾರಗಳು ಇದರ ಸೌಂದರ್ಯವನ್ನು ಹೆಚ್ಚಿಸಿವೆ ಈ ದೇವಾಲಯ ಮನಾಲಿಯ ಜನನಿಬಿಡ ಜಾಗವಾದ ಮಲ್ ರೋಡ್ ಬಳಿ ಇರುವುದರಿಂದ ಶಬ್ದ ಮಾಲಿನ್ಯ ಹೆಚ್ಚಿದೆ ಅನಿಸಿದರು ದೇವಾಲಯದ ಒಳಗೆ ಹೋದರೆ ಪ್ರಶಾಂತದ ನೆಲೆಸಿದೆ.
4. ಮಲ್ ರೋಡ್
ಮನಾಲಿಯ ಹೃದಯ ಭಾಗ ಮತ್ತು ಶಾಪಿಂಗ್ ಮಾಡುವವರಿಗೆ ಪ್ರಮುಖವಾದ ಸ್ಥಳವಾಗಿದೆ ಇದು ಮನಾಲಿಯ ಬಸ್ ಸ್ಟ್ಯಾಂಡ್ ನಿಂದ 200 ಮೀಟರ್ ದೂರದಲ್ಲಿದೆ ಇಲ್ಲಿ ಬ್ರಾಂಡೆಡ್ ವಸ್ತುಗಳು, ಷೋ-ರೂಮ್ ಬಟ್ಟೆಗಳ ಅಂಗಡಿ, ತಿಂಡಿ ತಿನಿಸುಗಳ ಅಂಗಡಿಗಳು, ಯಥೇಚ್ಛವಾಗಿವೆ. ಕುಲು ಕ್ಯಾಪ್ಸ್, ಬೌದ್ದ ವರ್ಣ ಚಿತ್ರಗಳು, ಜಾಕೆಟ್ಗಳು,ಕುಂಕುಮ, ಕೇಸರಿ ಮೊದಲಾದ ಮರದ ಕರಕುಶಲ ವಸ್ತುಗಳು ಇಲ್ಲಿ ಲಭ್ಯ ಜೊತೆಗೆ ಎಲ್ಲಿ ಅಡ್ಡಾಡುವುದು ಕೂಡ ಒಂದು ರೀತಿಯ ಅನುಭವವನ್ನು ನೀಡುತ್ತದೆ.
5. ರೋಹ್ಟಾಂಗ್ ಪಾಸ್
ಇದನ್ನು ಟಿಬೆಟಿಯನ್ ಭಾಷೆಯಲ್ಲಿ Heap of Skeletons ಅಂದರೆ Dead body ಎಂದು ಕರೆಯಲಾಗುತ್ತದೆ. ಮನಾಲಿದ 57 ಕಿಲೋಮೀಟರ್ ದೂರದಲ್ಲಿದೆ. ಇದು ಕುಲು ಕಣಿವೆ ಮತ್ತು ಲಾಹುಲ್ ಸ್ಥಿತಿಯನ್ನು ಸಂಪರ್ಕಿಸುವ. ಹಾಗೆ ಲೇಗೂ ಸಂಪರ್ಕಿಸುವ ಜಾಗವಾಗಿದೆ. ಇಲ್ಲಿಗೆ ತಲುಪಲು ರಸ್ತೆ ಮಾರ್ಗ ತುಂಬಾ ಚೆನ್ನಾಗಿದೆ ಇದರ ಪ್ರಕೃತಿ ವೈಭವ ನಮ್ಮ ಕಣ್ಣಿಗೆ ಮೋಹ ಗೊಳಿಸುತ್ತದೆ. ಇದು ಸಮುದ್ರ ಮಟ್ಟದಿಂದ 3979 ಮೀಟರ್ (13054 ಅಡಿ) ಎತ್ತರದಲ್ಲಿದೆ. Pir Panjal ಶ್ರೇಣಿಯ ಪೂರ್ವ ಭಾಗದಲ್ಲಿದೆ. ಜೊತೆಗೆ ಭಾರತಕ್ಕೆ ಸಂಬಂಧಿಸಿದಂತೆ ಆಯಕಟ್ಟಿನ ಜಾಗ(Strategic Point) ಆಗಿದೆ. ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಮೇ ಇಂದ ಅಕ್ಟೋಬರ್. ನಂತರದ ತಿಂಗಳುಗಳಲ್ಲಿ Snow ಬೀಳುವುದು ಹೆಚ್ಚಾಗುವುದರಿಂದ ರೊಹ್ಟಾಂಗ್ ಹೋಗಲು ಅನುಮತಿ ಸಿಗುವುದಿಲ್ಲ. ಇದರಿಂದಾಗಿ Snow ಹೆಚ್ಚು ಬೀಳದೆ ಇರುವ ಸಂದರ್ಭದಲ್ಲಿ ಹೋದರೆ ಅದರ ಸವಿಯನ್ನು ಸವಿಯಬಹುದು. ಹಾಗೆಯೇ ಅಲ್ಲಿ ಕೆಲವು Activityಗಳನ್ನು ಮಾಡುವ ಮೂಲಕ Snow ಮೇಲೆ ಆಟವಾಡುವ ಸೊಬಗು ಜೀವನಪರ್ಯಂತ ಸವಿಯುವ ಅನುಭವವನ್ನು ನೀಡುತ್ತದೆ.
6. ಸೋಲಾಂಗ್ ಕಣಿವೆ
ಸೋಲಾಂಗ್ ಕಣಿವೆ ಬಿಯಾಸ್ ನದಿ ಮತ್ತು ಸೋಲಾಂಗ್ರಾಮದ ನಡುವೆ ಬರುತ್ತದೆ. ಇಲ್ಲಿ ಹಿಮಚ್ಚಾದಿತ ಬೆಟ್ಟಗಳನ್ನು ನೋಡುವುದೇ ಆಶ್ಚರ್ಯವನ್ನುಂಟು ಮಾಡುತ್ತದೆ. ಇಲ್ಲಿ ಕ್ಯಾಂಪಿಂಗ್, ಕ್ವಾಡ್ ಬೈಕಿಂಗ್, ಜೋರ್ಬಿಂಗ್, ಸ್ಕೀಯಿಂಗ್, ಪ್ಯಾರಾಗ್ಲೈಡಿಂಗ್, ಟ್ರೆಕ್ಕಿಂಗ್, ಮುಂತಾದ ಚಟುವಟಿಕಿಗಳಿಗೆ ಹೇಳಿ ಮಾಡಿಸಿದ ಜಾಗವಾಗಿದೆ.
7. ಜೋಗಿನಿ ಜಲಪಾತ
ಇದು ವಶಿಷ್ಟ ದೇವಾಲಯದಿಂದ ಎರಡು ಕಿಲೋಮೀಟರ್ ದೂರದಲ್ಲಿದೆ ಇಲ್ಲಿಗೆ ಹೋಗುವಾಗ ಸುಂದರವಾದ ತೋಟಗಳು ಮತ್ತು ಪೈನ್ ಮರಗಳಿಂದ ಆವೃತ್ತವಾಗಿದೆ 160 ಅಡಿ ಎತ್ತರದಿಂದ ನೀರು ದುಮುಕುತ್ತದೆ. ಇದನ್ನು ನೋಡುವುದೇ ಕಣ್ಣಿಗೆ ಮುದ ನೀಡುತ್ತದೆ.
ಮನಾಲಿ ಬಳಿ ಇನ್ನು ಹತ್ತು ಹಲವು ನೋಡುವಂತಹ ಜಾಗಗಳಿವೆ ಅದರಲ್ಲಿ ಇವು ಮುಖ್ಯವಾಗಿರುವಂತಹವು. ಮನಾಲಿಯ ಪ್ರವಾಸ ನಮ್ಮ ಜೀವನದಲ್ಲಿ ಮರೆಯಲಾಗದ ಪ್ರವಾಸವಾಗಿ ನೆಲೆಸಿಬಿಡುತ್ತದೆ.