ಯುವನಿಧಿ ಯೋಜನೆ #Yuva Nidhi Scheme

ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಕೊನೆಯ ಒಂದು ಗ್ಯಾರಂಟಿ ಯೋಜನೆಯಾಗಿದೆ. ಈ ಯೋಜನೆ ಜಾರಿಗೆ ಬಂದ ಮೇಲೆ 2023ರಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳಿಗೆ 3000, ಡಿಪ್ಲೊಮಾ ಪಾಸಾಗಿರುವ ನಿರುದ್ಯೋಗಿಗಳಿಗೆ 1500ರೂ ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ 2 ವರ್ಷಗಳ ಅವಧಿಗೆ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ

ಅರ್ಹತಾ ಮಾನದಂಡಗಳು

* ಪದವಿ ಅಥವಾ ಡಿಪ್ಲೊಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ದೊರೆಯದ ಕನ್ನಡಿಗರಿಗೆ ಮಾತ್ರ ಅನ್ವಯ.

* ಇದು 2 ವರ್ಷಗಳ ಅವಧಿಗೆ ಚಾಲ್ತಿಯಲ್ಲಿರುತ್ತದೆ. ಉದ್ಯೋಗ ದೊರೆತ ನಂತರ ಸ್ಥಗಿತವಾಗುತ್ತದೆ.

* DBT ಮೂಲಕ ಬ್ಯಾಂಕ್ ಖಾತೆಗೆ ವರ್ಗಾವಣೆ – ಅದಕ್ಕಾಗಿ ಸೇವಾ ಸಿಂಧುವಿನಲ್ಲಿ ಅರ್ಜಿಹಾಕುವುದು. 

* ನಿರುದ್ಯೋಗ ಅಥವಾ ಉದ್ಯೋಗ ದೊರೆತ ನಂತರವಸ್ವಯಂ ಘೋಷಣೆ ಮಾಡಬೇಕು. ಇಲ್ಲವಾದರೆ ದಂಡ ವಿಧಿಸಲಾಗುತ್ತದೆ.

ಅನರ್ಹತಾ ಮಾನದಂಡಗಳು

* ಉನ್ನತ ವ್ಯಾಸಂಗಕ್ಕೆ ಹೋಗಿರುವವರು ಅರ್ಜಿಹಾಕುವಂತಿಲ್ಲ 

* ಅಪ್ರೆಂಟಿಸಶಿಪ್ ಮಾಡುತ್ತಿರುವವರು ಹಾಕುವಂತಿಲ್ಲ

* ಖಾನಗಿ/ಸರ್ಕಾರಿ ಉದ್ಯೋಗದಲ್ಲಿರುವವರು ಹಾಕುವಂತಿಲ್ಲ

* ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಸಾಲ ಪಡೆದು ಸ್ವಯಂ ಉದ್ಯೋಗ ಮಾಡುತ್ತಿರುವವರು ಅರ್ಜಿ ಹಾಕುವಂತಿಲ್ಲ. 

ಅರ್ಜಿ ಹಾಕಲು ಬೇಕಾಗಿರುವ ದಾಖಲೆಗಳು

* ಪದವಿ ಅಥವಾ ಡಿಪ್ಲೊಮಾ ಪ್ರಮಾಣಪತ್ರ

* ಆಧಾರ್ ಕಾರ್ಡ್

* ಬ್ಯಾಂಕ್ ಪಾಸ್ ಬುಕ್

* ಫೋಟೊ

* ನಿವಾಸ ಪ್ರಮಾಣ ಪತ್ರ

*ಜಾತಿ ಮತ್ತು ಆದಾಯ      ಪ್ರಮಾಣ ಪತ್ರ

* ಇತರೆ

ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಜಾರಿಗೊಳಿಸಲಾಗಿರುವ ಈ ಯೋಜನೆಗೆ ಡಿಸೆಂಬರ್ 26- 2023ರಿಂದ ನೋಂದಣಿ ಶುರುವಾಗಲಿದೆ. ಅರ್ಹತೆ ಹೊಂದಿರುವವರು ಬೇಗ ಅರ್ಜಿ ಹಾಕಿ ಫಲಾನುಭವವನ್ನು ಪಡೆಯಿರಿ.

Leave a Comment

Your email address will not be published. Required fields are marked *

Scroll to Top