ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಕೊನೆಯ ಒಂದು ಗ್ಯಾರಂಟಿ ಯೋಜನೆಯಾಗಿದೆ. ಈ ಯೋಜನೆ ಜಾರಿಗೆ ಬಂದ ಮೇಲೆ 2023ರಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳಿಗೆ 3000, ಡಿಪ್ಲೊಮಾ ಪಾಸಾಗಿರುವ ನಿರುದ್ಯೋಗಿಗಳಿಗೆ 1500ರೂ ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ 2 ವರ್ಷಗಳ ಅವಧಿಗೆ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ
ಅರ್ಹತಾ ಮಾನದಂಡಗಳು
* ಪದವಿ ಅಥವಾ ಡಿಪ್ಲೊಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ದೊರೆಯದ ಕನ್ನಡಿಗರಿಗೆ ಮಾತ್ರ ಅನ್ವಯ.
* ಇದು 2 ವರ್ಷಗಳ ಅವಧಿಗೆ ಚಾಲ್ತಿಯಲ್ಲಿರುತ್ತದೆ. ಉದ್ಯೋಗ ದೊರೆತ ನಂತರ ಸ್ಥಗಿತವಾಗುತ್ತದೆ.
* DBT ಮೂಲಕ ಬ್ಯಾಂಕ್ ಖಾತೆಗೆ ವರ್ಗಾವಣೆ – ಅದಕ್ಕಾಗಿ ಸೇವಾ ಸಿಂಧುವಿನಲ್ಲಿ ಅರ್ಜಿಹಾಕುವುದು.
* ನಿರುದ್ಯೋಗ ಅಥವಾ ಉದ್ಯೋಗ ದೊರೆತ ನಂತರವಸ್ವಯಂ ಘೋಷಣೆ ಮಾಡಬೇಕು. ಇಲ್ಲವಾದರೆ ದಂಡ ವಿಧಿಸಲಾಗುತ್ತದೆ.
ಅನರ್ಹತಾ ಮಾನದಂಡಗಳು
* ಉನ್ನತ ವ್ಯಾಸಂಗಕ್ಕೆ ಹೋಗಿರುವವರು ಅರ್ಜಿಹಾಕುವಂತಿಲ್ಲ
* ಅಪ್ರೆಂಟಿಸಶಿಪ್ ಮಾಡುತ್ತಿರುವವರು ಹಾಕುವಂತಿಲ್ಲ
* ಖಾನಗಿ/ಸರ್ಕಾರಿ ಉದ್ಯೋಗದಲ್ಲಿರುವವರು ಹಾಕುವಂತಿಲ್ಲ
* ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಸಾಲ ಪಡೆದು ಸ್ವಯಂ ಉದ್ಯೋಗ ಮಾಡುತ್ತಿರುವವರು ಅರ್ಜಿ ಹಾಕುವಂತಿಲ್ಲ.
ಅರ್ಜಿ ಹಾಕಲು ಬೇಕಾಗಿರುವ ದಾಖಲೆಗಳು
* ಪದವಿ ಅಥವಾ ಡಿಪ್ಲೊಮಾ ಪ್ರಮಾಣಪತ್ರ
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ಫೋಟೊ
* ನಿವಾಸ ಪ್ರಮಾಣ ಪತ್ರ
*ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಇತರೆ
ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಜಾರಿಗೊಳಿಸಲಾಗಿರುವ ಈ ಯೋಜನೆಗೆ ಡಿಸೆಂಬರ್ 26- 2023ರಿಂದ ನೋಂದಣಿ ಶುರುವಾಗಲಿದೆ. ಅರ್ಹತೆ ಹೊಂದಿರುವವರು ಬೇಗ ಅರ್ಜಿ ಹಾಕಿ ಫಲಾನುಭವವನ್ನು ಪಡೆಯಿರಿ