ಸ್ತ್ರೀ ಎಂದರೆ ಅಷ್ಟೇ ಸಾಕೆ? Stree andare aste sake

Stree Andare aste sake?
Stree Andare aste sake?

ಸ್ತ್ರೀ ಎಂದರೆ ಅಷ್ಟೇ ಸಾಕೆ? Stree andare aste sake – ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡು ಶ್ರೇಷ್ಠ ಹೆಣ್ಣು ಕನಿಷ್ಠ ಎಂಬುದನ್ನು ಪುರುಷ ಮೌಲ್ಯಗಳು ಅದನ್ನು ಇಂದಿಗೂ ಸಾಗಿಸಿಕೊಂಡು ಬರುತ್ತಲೇ ಇದ್ದಾವೆ. ಸಾಮಾಜಿಕ ವ್ಯವಸ್ಥೆಯ ಕಟ್ಟುಪಾಡಿನೊಳಗೆ ಯಾವುದೇ ಶ್ರೇಷ್ಠ ಮತ್ತು ಕನಿಷ್ಠ ಗಳಿಲ್ಲ ಇದೆಲ್ಲವನ್ನು ನಮ್ಮಂತಹ ಮನುಷ್ಯರು ಮಾಡಿಕೊಂಡಿರುವ ವ್ಯವಸ್ಥೆಗಳಷ್ಟೇ. ಆ ವ್ಯವಸ್ಥೆಯೊಳಗೆ ಹೆಣ್ಣನ್ನು ಭೋಗದ ವಸ್ತುವಾಗಿ ನೋಡುವ ಮೂಲಕ ಹಾಗೆಯೇ ನಿರ್ಮಾಣ ಮಾಡಿಕೊಂಡು ಬರಲಾಯಿತು. ಜೊತೆಗೆ ಅವಳು ನಮ್ಮಂತೆ ಅನ್ನ ತಿನ್ನುವ ಮನುಷ್ಯಳು ಎಂಬ ಅಸ್ಮಿತೆಯನ್ನು ಮರೆತು ಸಸ್ಯ ಶಾಮಲೆ, ಭಾಗೀರತಿ, ಭೂಮಾತೆ ಇಂತಹ ಶ್ರೇಷ್ಠ ಮಟ್ಟದ ಹೆಸರುಗಳನ್ನು ನೀಡಿ ಸಾಮಾಜಿಕ ವ್ಯವಸ್ಥೆಯಲ್ಲಿ ಶ್ರೇಷ್ಠತೆ ತೋರಿದರು ನಿಜ ಸ್ಥಿತಿಯಲ್ಲಿ ಅವಳ ಸ್ಥಾನಮಾನ ತೀರಾ ಕೆಳಮಟ್ಟದಲ್ಲಿದೆ. 

ಹೆಣ್ಣು ತಾಯಿಯಾಗಿ ಹೆಂಡತಿಯಾಗಿ ಮಗಳಾಗಿ ಎಲ್ಲಾ ವಿಧದ ಸ್ಥಾನಗಳನ್ನು ಅಲಂಕರಿಸಿ ಕುಟುಂಬದ ಹೇಳಿಕೆಗೆ ದುಡಿದರು ಅವಳ ಸ್ಥಾನ ಇನ್ನೂ ಕನಿಷ್ಠವೆ. ತಿಂಗಳಿಗೆ ಒಂದು ಬಾರಿ ನೈಸರ್ಗಿಕವಾಗಿ ಮುಟ್ಟಾದರೂ ಅವಳನ್ನು ಮೈಲಿಗೆ ಎಂದು ಯಾವುದೇ ಕಾರ್ಯಕ್ರಮಗಳಿಗೂ ಅವಳಿಗೆ ಅವಕಾಶವನ್ನು ನಿರಾಕರಿಸಲಾಗುತ್ತಿದೆ. ಆದರೂ ಅವಳು ನಿರ್ವಹಿಸುವ ಸ್ಥಾನಗಳನ್ನು ನೋಡಿದಾಗಲೂ ನಾವು ಅವಳಿಗೆ ನೀಡುತ್ತಿರುವ ಮತ್ತು ನೋಡಿಕೊಳ್ಳುತ್ತಿರುವ ರೀತಿಯೂ ಅಷ್ಟೇ ಕನಿಷ್ಠ ಮಟ್ಟಕ್ಕಿದೆ ಆದರೂ ಸ್ತ್ರೀ ಎಂದರೆ ತಾಯಿ ದೇವತೆ ಎಂದೆಲ್ಲಾ ಹೊಗಳಿದರು ಅವಳಿಗೆ ಹೆಣ್ಣು ಎಂಬ ಒಂದು ಮಾತು ಸಾಕೆ?

ಸ್ತ್ರೀ ಎಂದರೆ ಅಷ್ಟೇ ಸಾಕೆ?Stree andare aste sake – ಸಾರಾಂಶ

ಆಕಾಶದಷ್ಟು ಎತ್ತರದ ಸ್ಥಾನ ಹೊಂದಿರುವ ಹೆಣ್ಣು ಅಂತಹ ಆಕಾಶವನ್ನೇ ತೊಟ್ಟಿಲು ಮಾಡಿಕೊಂಡು ಅದರಲ್ಲಿ ಚಂದ್ರ ಮತ್ತು ನಕ್ಷತ್ರಗಳನ್ನು ನೋಡಿ ಅದರಲ್ಲಿ ಬೆಳಕನ್ನು ಇಟ್ಟು ತೂಗಿದಾಕೆ ಅಂದ್ರೆ ಬೆಳಕು ಭೂಮಿಗೆ ಬರಬೇಕಿದ್ದರೆ ಸೂರ್ಯ ಅಥವಾ ಭೂಮಿ ಕಾರಣಕರ್ತ ಗಳಾಗಿರುತ್ತಾರೆ. ಇದನ್ನು  ಪ್ರಕೃತಿಯಲ್ಲಿ ನಾವು ಕಾಣುತ್ತೇವೆ. ಹಾಗೆಯೇ ಮನುಷ್ಯನಲ್ಲಿ ಪ್ರಕೃತಿಯೇ ಹೆಣ್ಣು, ಹೆಣ್ಣು ಸೃಷ್ಟಿಯ ಮೂಲ,  ಮೂಲದೊಂದಿಗೆ ಜನ್ಮ ನೀಡುವ ಮಗುವಿಗೆ ಅವಳು ಆಕಾಶವನ್ನು ತೋರಿ ಅಲ್ಲಿನ ಚಂದ್ರ, ನಕ್ಷತ್ರಗಳನ್ನು ತೋರಿಸಿ ಮಗುವಿಗೆ ಆಹಾರ ತಿನ್ನಿಸುತ್ತಾಳೆ. ಹೇಗೆ ಪ್ರಕೃತಿ ಹೊಸ ಜೀವಕ್ಕೆ ಮೂಲವಾಗಿದೆಯೋ ಹಾಗೆ ಹೆಣ್ಣು ಕೂಡ.  ಅಂತವಳಿಗೆ  ನಾವು ಸ್ತ್ರೀ ಎಂದರೆ ಅಷ್ಟೇ ಸಾಕೆ ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ಅವಳ ಶ್ರೇಷ್ಠತೆಯನ್ನು ನೋಡಬಹುದು.

ಪ್ರಕೃತಿಯನ್ನು ಸ್ತ್ರೀಗೆ ಹೋಲಿಸಿ ಪ್ರಕೃತಿಯು ಹಸಿರುಮಯವಾಗಿದ್ದಾಗ ಮಳೆ ಚೆನ್ನಾಗಿ ಆಗುವ ಮೂಲಕ ಜಲಪಾತ ನದಿಗಳು ತುಂಬಿ ಬಯಲನ್ನು ಹಸಿರುಮಯವನ್ನಾಗಿ ಮಾಡುತ್ತಾಳೆ. ಹಾಗೆಯೇ ಒಬ್ಬ ಸ್ತ್ರೀಯು ಕೂಡ ಒಂದು ಮಗುವಿಗೆ ಜನ್ಮ ನೀಡಿ ಅದು ಬಯಲಿನಂತಿದ್ದಾಗ ಅದಕ್ಕೆ ಹಾಲನ್ನು ನೀಡಿ ಬದುಕನ್ನು ನೀಡುವ ಶಕ್ತಿ ಹೊಂದಿರುವ ಹೆಣ್ಣಿಗೆ ನಾವು ಸ್ತ್ರೀ ಅಂದ್ರೆ ಅಷ್ಟೇ ಸಾಕೆ?

ಪ್ರಕೃತಿಯು ತನ್ನ ತಂಗಾಳಿಯ ಮೂಲಕ ಗಿಡಗಳ ಮುಂಗುರುಳನ್ನು ಸವರಿ ಮುಂದಕ್ಕೆ ಹೋಗುತ್ತೆ ಹಾಗೆಯೇ ಈ ಅರಣ್ಯದ ಭಯಂಕರತೆಯನ್ನ ತಿಳಿಗೊಳಿಸಲು ಪಕ್ಷಿಗಳ ಇಂಪಾದ ಧ್ವನಿ ಮುಖ್ಯವಾಗುತ್ತದೆ ಹಾಗೆಯೇ ತಾಯಿ ತನ್ನ ಮಗುವಿನ ಮುಂಗುರುಳನ್ನು ಸವರುವ ಮೂಲಕ ಅದರ ಅಳು ಜಾಸ್ತಿ ಆದರೆ ಅದನ್ನು ಸಮಾಧಾನಿಸಲು ಗಿಲಕಿ ನೀಡುವ ಮೂಲಕ ಆ ಮಗುವಿನ ಸಾಂತ್ವನಕ್ಕೆ ಕಾರಣವಾಗುತ್ತಾಳೆ ಅಂತವಳಿಗೆ ನಾವು ಸ್ತ್ರೀ ಅಂದ್ರೆ ಅಷ್ಟೇ ಸಾಕೆ?

ಮೇಲಿನ ಮೂರು ಪದ್ಯಗಳು ಪ್ರಕೃತಿಯ ಜೊತೆ ಸ್ತ್ರೀಯನ್ನು ಹೋಲಿಸಿ ಹೇಳಿದ್ದಾರೆ ಆದರೆ ಕೊನೆಯ ಸಾಲಿನಲ್ಲಿ ಸ್ತ್ರೀಯ ಬಗೆಗೆ ಹೇಳಲಾಗಿದೆ ಪ್ರತಿಯೊಂದು ಮನೆಯಲ್ಲಿನ ಅಂಧಕಾರ ಹೋಗಲಾಡಿಸಲು ಜ್ಯೋತಿ ಅಥವಾ ಜ್ಞಾನ ಎಂಬ ದೀಪವನ್ನು ಹೆಣ್ಣು ಹಚ್ಚುತ್ತಾಳೆ. ಹಾಗೆಯೇ ಮನೆಯಲ್ಲಿರುವವರ ಹೊಟ್ಟೆಯನ್ನು ತುಂಬಿಸುವ ಕೆಲಸವನ್ನು ಸ್ತ್ರೀ ಮಾಡುತ್ತಾಳೆ. ಗಂಡ ಮಕ್ಕಳ ಯೋಗ ಕ್ಷೇಮವನ್ನು ನೋಡಿಕೊಳ್ಳುವವಳು ಸ್ತ್ರೀಯೇ ಆಗಿದ್ದಾಳೆ. ಅಂತವರಿಗೆ ಸ್ತ್ರೀ ಎಂದರೆ ಅಷ್ಟೇ ಸಾಕೆ ಎಂಬ ಪ್ರಶ್ನೆಯ ಮೂಲಕ ಕವಿಗಳು ಪ್ರಶ್ನೇ ಸಮಂಜಸವಾಗಿದೆ.

ಇಲ್ಲಿ ಪತಿಯ ಸ್ತ್ರೀಯ ಸಮಾನತೆಯ ಬಗೆಗೆ ನಮ್ಮ ಯುವ ಜನಾಂಗಕ್ಕೆ ಬೇಕಾಗಿರತಕ್ಕಂತಹ Gender Sensitization  ಲಿಂಗ ಸಂವೇಧನಾಶೀಲತೆ ಇದರ ಬಗ್ಗೆಯೂ ಕೂಡ ಈ ಒಂದು ಕವಿತೆ ಮಾತನಾಡುತ್ತಾ ಹೋಗುತ್ತೆ. ಇದರ ಮೂಲಕ ನಮ್ಮಲ್ಲಿ ಜಾತಿ ಅಸಮಾನತೆ ಹೇಗಿದೆಯೋ ಹಾಗೆ ಲಿಂಗ ಅಸಮಾನತೆಯು ಕೂಡ ಇದೆ ಇದನ್ನ ಹೋಗಲಾಡಿಸುವಲ್ಲಿ ಯುವ ಜನಾಂಗದ ಪಾತ್ರ ಬಹಳ ಮುಖ್ಯವಾಗಿದೆ. ಹಾಗೆಯೇ ಇಲ್ಲಿರುವ ಸಮಾಜವು ಇದನ್ನು ಅರ್ಥಮಾಡಿಕೊಳ್ಳುವ ದೇಶದ ಪ್ರಗತಿಯನ್ನು ಸಾಧಿಸಬಹುದು.

ReplyForwardAdd reaction
See this link: https://youtu.be/MEU6WLXGdFg?si=0Wm_vnkDzLNHc7Yb

1 thought on “ಸ್ತ್ರೀ ಎಂದರೆ ಅಷ್ಟೇ ಸಾಕೆ? Stree andare aste sake”

  1. Pingback: Part - 10 ಕನ್ನಡ ವ್ಯಾಕರಣ #Kannada Vyakarana -  ಛಂದಸ್ಸು, Chandhassu - rvwritting

Leave a Comment

Your email address will not be published. Required fields are marked *

Scroll to Top