Ondishtu Hasi Mannu – ಕವಯಿತ್ರಿ ಪರಿಚಯ:
Ondishtu Hasi Mannu -ರೂಪ ಹಾಸನ್ ಅವರು 22-2-1967ರಂದು ಡಾ.ಎಸ್.ಪ್ರಸನ್ನ ಕುಮಾರ್ ಮತ್ತುಹೇಮಲತ ದಂಪತಿಗಳಿಗೆ ಮೈಸೂರಿನಲ್ಲಿ ಜನಿಸಿದರು. ರೂಪ ಹಾಸನ ಅವರುಮೂಲತಃ ಕವಯಿತ್ರಿ, “ಪ್ರೇರಣಾ ವಿಕಾಸ ವೇದಿಕೆ” ಎಂಬ ಮಕ್ಕಳ ದರ ಸ್ಮಯಂ ಸೇವಾ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಅದರಿಂದ ನಿರಂತರವಾಗಿ ಮಕ್ಕಳ ಮಾನಸಿಕ, ಭೌದ್ಧಿಕ ವಿಕಾಸಕ್ಕಾಗಿ ಪ್ರಯೋಗಗಳನ್ನು ನಡೆಸುವುದರೊಂದಿಗೆ ಅವರಲ್ಲಿ ಸಾಹಿತ್ಯಕ ಆಸಕ್ತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸಮಾನ ಶಾಲಾ ಶಿಕ್ಷಣ, ಮಹಿಳೆಯರ ಮೇಲಿನ ದೌರ್ಜನ್ಯ, ಮಕ್ಕಳ ಸಂಕಷ್ಟಗಳು, ಸಾಮಾಜಿಕ ಅಭಿವೃದ್ಧಿ ಇವರ ಆಸಕ್ತಿಯ ಕ್ಷೇತ್ರಗಳು. ಅವರ ಇದುವರೆಗಿನ ಕಾವ್ಯವನ್ನು ಸುರೇಶ್ ನಾಗಲಮಡಿಕೆ ಇಲ್ಲಿ ವಿಮರ್ಶಿಸಿದ್ದಾರೆ. ಇವರ ಕೃತಿಗಳು:-ಒಂದಿಷ್ಟು ಹಸಿಮಣ್ಣು-2000 ಕಾವ್ಯ, ಬಾಗಿಲಾಚೆಯ ಮೌ-2005 ಕಾವ್ಯ. ಲಹರಿ-2003 ಅಂಕಣ ಬರಹ ಸಂಕಲನ, ಹೇಮೆಯೋಡಲಲ್ಲಿ-2008 ಪ್ರಜಾವಾಣಿ ಅಂಕಣ ಬರಹಗಳ ಸಂಕಲನ, ಇವರಿಗೆ ಸಂದ ಪ್ರಶಸ್ತಿಗಳು:- 1]ಡಾ.ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ: 2]ಮಾತೃ ಶ್ರೀ ರತ್ನಮ್ಮ ಹೆಗ್ಗಡೆ ಪುಸ್ತಕ ಪ್ರಶಸ್ತಿ 3]ನೀಲಗಂಗಾದತ್ತಿ ಪ್ರಶಸ್ತಿ 4]ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ 5]ಹರಿಹರ ಶ್ರೀ ಪ್ರಶಸ್ತಿ 6]ಅಮ್ಮ ಪ್ರಶಸ್ತಿ 7]ಡಿ.ವಿ.ಜಿ.ಸಾಹಿತ್ಯ ಪ್ರಶಸ್ತಿ 8]ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ 9]ಸುಶೀಲ ಎಸ್.ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ 10]ಕಾವ್ಯಾನಂದ ಪ್ರಶಸ್ತಿ11]ಡಾ.ಹಾ.ಮಾ.ನಾ ಪ್ರಶಸ್ತಿ ಇತ್ಯಾದಿಗಳಾಗಿವೆ.
Summary – Ondishtu Hasi Mannu
ಮಹಿಳೆಯ ದೇಹ ರಚನೆಯ ಮೇಲೆ ಅವಳನ್ನು ಅಬಲೆಯಾಗಿ ನಿರೂಪಿಸಿ, ಅವಳ ವ್ಯಕ್ತಿತ್ವವನ್ನು ಬೆಳೆಯದಂತೆ ಮಾಡುವ ಮೂಲಕ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಎರಡನೇ ದರ್ಜೆಯವಳಾಗಿಯೇ ಬಂದು ಇಂದಿನ ಕಾಲದಲ್ಲಿ ತಾನು ಕೂಡ ತನ್ನ ಅಸ್ಮಿತೆಯನ್ನು ಸಾಬೀತುಪಡಿಸಿ ಪುರುಷನ ಸಮಕ್ಕೆ ಇದ್ದೇನೆ ಎಂದು ಸಾಧಿಸಲು ಮುಂದಾಗಿದ್ದಾಳೆ. ಅದಕ್ಕಾಗಿ ಆತ್ಮವಿಶ್ವಾಸದಿಂದ ಕೂಡಿ ಎಲ್ಲವನ್ನು ಸಮಾನತೆಯನ್ನು ಸಾಧಿಸುವ ಧ್ವನಿಯನ್ನು ಹೊಂದಿದವಳಾಗಿದ್ದಾಳೆ. ಆದರೂ ನಮ್ಮ ಸಾಮಾಜಿಕ, ಸಾಂಸ್ಕೃತಿಕ ಎಲ್ಲೆಗಳು ಅವಳನ್ನು ಬಂಧಿಸಿಟ್ಟಿವೆ. ಒಂದಿಷ್ಟು ಹಸಿ ಮಣ್ಣು ಅದರಲ್ಲಿ ಬೀಜ ಬಿದ್ದು ಮೊಳಕೆಯಾಗಿ ಗಿಡವಾಗಿ ಹೆಮ್ಮರವಾಗಿ ಬೆಳೆಯುವ ಆತ್ಮ ಶಕ್ತಿಯನ್ನು ಹೊಂದಿದ್ದಾಳೆ ಎಂಬುದನ್ನು ಆಶಯವಾಗಿ ಇಲ್ಲಿ ನೋಡಬಹುದು.
ಒಂದಿಷ್ಟು,
ಒಂದಿಷ್ಟೇ ಇಷ್ಟು
ಹಸಿಮಣ್ಣು ನೀಡು ಗೆಳೆಯ
ನನ್ನದೇ ಕಲ್ಪನೆ ಬೆರೆಸಿ
ಸುಂದರ ಮನೆಯಾಗುತ್ತೇನೆ
ಚಿತ್ರವಿಚಿತ್ರ ಕಲಾಕೃತಿಯಾಗುತ್ತೇನೆ
ಮಡಿಕೆ, ಕುಡಿಕೆ, ಕುಂಡವಾಗುತ್ತೇನೆ
ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣಿನಿಂದ!
ಒಂದೇ ಒಂದಿಷ್ಟು ಹೆಣ್ಣಾಗಿರುವ ನನಗೆ ಅವಕಾಶ ನೀಡು ಗೆಳೆಯ ಎಂದು ಕೇಳುತ್ತಿದ್ದಾಳೆ. ನೀನು ಅವಕಾಶ, ಸ್ವಾತಂತ್ರ್ಯ ನೀಡಿದಾಗ ನಾನು ಏನಾಗಬಲ್ಲೆ ಎಂದು ತೋರಿಸುತ್ತೇನೆ ಎಂದು ಹೇಳುತ್ತಿದ್ದಾಳೆ.
Watch this video:https://youtu.be/jeh2d355YeA?si=dg8WWsPQk1r0qFr8
ನೀನು ಅವಕಾಶ ಅಥವಾ ಸ್ವಾತಂತ್ರ್ಯ ನೀಡಿದರೆ ನನ್ನದೇ ಕಲ್ಪನೆಯಲ್ಲಿ ನೀನು ಊಹಿಸಲಾಗದಿರುವ ಸುಂದರವಾದ ಮನೆಯಾಗುತ್ತೇನೆ ಅದೇ ರೀತಿ ಚಿತ್ರ ವಿಚಿತ್ರವಾದ ಕಲಾಕೃತಿಯಾಗಿ ಬಾಳುತ್ತೇನೆ ಅದಕ್ಕಾಗಿ ಒಂದು ಅವಕಾಶ ನೀಡು ಎಂದು ಕೇಳುತ್ತಿಲ್ಲ ಬದಲಾಗಿ ನೀನು ಹೇಳಿರುವ ನೀಡಿರುವ ಮಡಿಕೆ ಕುಡಿಕೆಗಳಷ್ಟು ಸ್ವಾತಂತ್ರದಲ್ಲೇ ಬದುಕಿ ಬೆಳೆಯುತ್ತೇನೆ ಅದಕ್ಕಾಗಿ ಒಂದಿಷ್ಟು ಅವಕಾಶ ನೀಡು ಎಂದು ಕೇಳುತ್ತಿದ್ದಾಳೆ. ಹೆಣ್ಣೊಂದು ಕಲಿತರೆ ಶಾಲೆಗೆ ಒಂದು ತೆರೆದಂತೆ ಎಂಬ ಗಾದೆಯಂತೆ ಹೆಣ್ಣು ಏನಾದರೂ ಆಗಬಲ್ಲಳು ಆದರೆ ಅವಳಿಗೆ ಅವಕಾಶ ಬೇಕು.
ಒಂದಿಷ್ಟೇ ಇಷ್ಟು
ಹಸಿಮಣ್ಣು ನೀಡು ಗೆಳೆಯ
ಬೀಜ ಬಿತ್ತಿ, ಮೊಳಕೆಯೊಡೆದು
ಎತ್ತರೆತ್ತರದ ಮರವಾಗಿ ಬೀಗುತ್ತೇನೆ
ಹಕ್ಕಿ ಪಕ್ಷಿಗಳಿಗೆ ಆಸರೆಯಾಗುತ್ತೇನೆ
ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣಿನಿಂದ!
ಒಂದು ಹೆಣ್ಣು ಜೀವ ತನ್ನ ಗೆಳೆಯನ ಬಳಿ ಒಂದು ಸ್ವಲ್ಪವಾದರೂ ಸ್ವಾತಂತ್ರ್ಯ ಅವಕಾಶ ನೀಡು ಎಂದು ಮತ್ತೆ ಕೇಳುತ್ತಿದ್ದಾಳೆ.
ನೀನು ನೀಡುವ ಒಂದೇ ಒಂದು ಅವಕಾಶದಲ್ಲಿ ನಾನು ಬೀಜ ಬಿತ್ತಿ ಮೊಳಕೆಯಾಗಿ ಎತ್ತರವಾದ ಮರವಾಗಿ ಎಲ್ಲರಿಗೂ ಉಪಯೋಗವಾಗುವಂತೆ ಸಾಧಕಿಯಾಗಿ ಬೆಳೆದು ನಿಲ್ಲುವೆ. ಬೆಳೆದು ನಿಂತು ನನ್ನನ್ನು ನಂಬಿ ಬರುವವರಿಗೆ ಆಸರೆಯಾಗಿ ನಿಲ್ಲುವ ಮೂಲಕ ಹೆಣ್ಣು ಸ್ವಾರ್ಥಿಯಲ್ಲ ಬದಲಿಗೆ ಭೂಮಿತಾಯಿಯ ಮನದಂತೆ ಎಲ್ಲವನ್ನು, ಎಲ್ಲರನ್ನೂ ಒತ್ತೊಟ್ಟಿಗೆ ನಡೆಸಿಕೊಂಡು ಆಸರೆಯಾಗಿ ನಿಲ್ಲುತ್ತೇನೆ. ಅದಕ್ಕಾಗಿ ಒಂದಿಷ್ಟು ಅವಕಾಶ ನೀಡು ಎಂದು ತನ್ನ ಆತ್ಮವಿಶ್ವಾಸವನ್ನು ತೋರುತ್ತಿದ್ದಾಳೆ.
ನೀ ನನ್ನ ಚೆಂದದ ಹಕ್ಕಿ ಮಾಡಿಯೂ
ಹಾರದಂತೆ ರೆಕ್ಕೆ ಕತ್ತರಿಸಿ
ಗುರಿ ಸೇರದಂತೆ ಕಾಲು ಕತ್ತರಿಸಿ
ಹಾಡದಂತೆ ನಾಲಿಗೆ ಕತ್ತರಿಸಿದರೂ
ನಾ ಬೆಳೆವ ಪರಿಗೆ ಬೆರಗಾಗಿ
ನನ್ನ ಕತ್ತು ಕತ್ತರಿಸಿದರೂ ಸರಿಯೇ
ಒಂದಿಷ್ಟೇ ಇಷ್ಟು .
ಹಸಿಮಣ್ಣು ನೀಡು ಗೆಳೆಯ
ನೀನು ಕೊಟ್ಟ ಅವಕಾಶ ಸ್ವಾತಂತ್ರ್ಯದಿಂದ ನಾನು ಬೆಳೆದು ಹ**** ಹಾರುವಂತೆ ನಾನು ಮೂಡಿದರು ಮತ್ತೆ ಮೇಲಕ್ಕೆ ಹಾರಲು ಬೇಕಾದ ಅವಕಾಶಗಳನ್ನು ಮಟಕುಗೊಳಿಸಿದರು ಅವಳಿಂದ ಕಿತ್ತುಕೊಂಡಿರುವ ಸ್ವಾತಂತ್ರ್ಯ ಅವಳಿಂದ ಎಲ್ಲವೂ ಸಾಧ್ಯವಾಗುತ್ತೆ ಎಂದ ಕಿತ್ತುಕೊಂಡಿದ್ದೇವೆ ನಾನು ಬೆಳೆಯುವ ರೀತಿಗೆ ಸ್ಪೂರ್ತಿವ ರೀತಿಗೂ ನೀನು ಸ್ವಾತಂತ್ರ್ಯ ನೀಡಿಲ್ಲದಿದ್ದರೂ ಒಂದಿಷ್ಟು ಅವಕಾಶ ಕೊಡು.
See apple iPod, Best price for buying:https://amzn.to/4iietUh
ನಾ ಅದರಲ್ಲೇ ಹೂತು
ಪರಿಪಕ್ವವಾಗಿ ಮಾಗಿ,
ತ್ರಿವಿಕ್ರಮನಂತೆ ಬೆಳೆದು
ಕಲ್ಪವೃಕ್ಷವಾಗಿ ಹೊರಹೊಮ್ಮುತ್ತೇನೆ
ಯೋಚಿಸು ಗೆಳೆಯಾ ದಯಮಾಡಿ
ಎಲ್ಲಾ ಒಂದಿಷ್ಟೇ ಇಷ್ಟು
ಹಸಿಮಣ್ಣಿನ ಪ್ರಶ್ನೆಯಷ್ಟೇ !
ಒಂದೇ ಒಂದು ಸಣ್ಣ ಅವಕಾಶವನ್ನು ಮಾಡಿ ಕೊಡುವ ಗೆಳೆಯ ನಾನು ಕೊಟ್ಟಿರುವ ಅವಕಾಶವನ್ನು ಹಿಡಿದು ಯಾವುದೇ ಅವಿವೇಕ ತಪ್ಪುಗಳು ನಡೆಯದಂತೆ ಪ್ರಕಟಗೊಂಡು ಕೆಲಸದಿಂದ ತಿಳುವಳಿಕೆಯಿಂದ ಬೃಹದಾಕಾರವಾಗಿ ಬೆಳೆದು ಇತರರ ಒಳಿತಿಗಾಗಿ ಬೆಳೆಯುವ ಕಲ್ಪವೃಕ್ಷದಂತೆ ಬೆಳೆಯುವ ದಯಮಾಡಿ ಯೋಚಿಸಿ ಒಂದೇ ಒಂದು ಸಣ್ಣ ಅವಕಾಶ ನೀಡಿ ಇಲ್ಲಿ ಹೆಣ್ಣು ಬೇಡುವ ಸ್ಥಿತಿಗೆ ಬಂದಿರುವುದು ಗಂಡಿನಿಂದ. ಗಂಡಾಗಲಿ ಹೆಣ್ಣಾಗಲಿ ಈ ಸಮಾಜದ ಎರಡು ಬೇರುಗಳಾಗಿ ಇರಬೇಕು.
ಸೃಷ್ಟಿಯಲ್ಲಿ ಎಲ್ಲರೂ ಸಮಾನರೆ ಯಾರು ಶ್ರೇಷ್ಠ ಕನಿಷ್ಠರಲ್ಲವೆಂದು ತಿಳಿದು ಅವಳ ಆಬಲತೆ ಅಧೀನತೆಯನ್ನು ಹೋಗಲಾಡಿಸಿ ಅವಳು ಸಮಾನಳು ಎಂದು ತೋರಬೇಕು ಹಾಗೆ ನಡೆದುಕೊಳ್ಳಬೇಕು ಎಂದು ಈ ಕವಿತೆಯು ತಿಳಿಸುತ್ತದೆ.