Kannada Sahitya Charitre – ಕನ್ನಡ ಸಾಹಿತ್ಯ ಚರಿತ್ರೆ – ಪಂಪ ಯುಗವನ್ನು ಪಂಪನಿಂದ ಬಸವೇಶ್ವರರ ಕಾಲದ ವರೆಗೆ ಗುರುತಿಸಲಾಗುತ್ತದೆ. ಅಂದರೆ 10 ರಿಂದ 12ನೇ ಶತಮಾನದವರೆಗೆ. ಮುಂದಿನ ಕವಿಗಳ ಬಗೆಗೆ.
Kannada Sahitya Charitre -ಕನ್ನಡ ಸಾಹಿತ್ಯ ಚರಿತ್ರೆ – ನಾಗಚಂದ್ರ
ಈತನು 10 ಮತ್ತು 12ನೇ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದನು.
ವಿಜಾಪುರ ಈತನ ಊರು ಕೃತಿಗಳು
*ಮಲ್ಲಿನಾಥ ಪುರಾಣ
* ರಾಮಚಂದ್ರಚರಿತಪುರಾಣ ಅಥವಾ ಪಂಪ ರಾಮಾಯಣ.
ಮಲ್ಲಿನಾಥ ಪುರಾಣ
ಈತನ ಮೊದಲ ಕೃತಿಯಾಗಿದೆ 19ನೇ ತೀರ್ಥಂಕರನಾದ ಮಲ್ಲಿನಾಥನ ಚರಿತ್ರೆಯನ್ನು ಒಳಗೊಂಡಿದೆ.
14 ಆಶ್ವಾಸಗಳಿಂದ ಈ ಕಾವ್ಯ ರಚಿತವಾಗಿದೆ.
ಇದರ ಕಥೆ ವೈ ಶ್ರವಣನೆಂಬ ಅರಸು ಸಿಡಿಲಿನ ಹೊಡೆತಕ್ಕೆ ಬೇರು ಸಮೇತ ಆಲದ ಮರ ಕೆಳಗೆ ಬಿದ್ದದ್ದನ್ನು ಕಂಡನು ಇದರಿಂದ ಸಂಸಾರದ ಮೇಲೆ ವಿರಾಗ ಮೂಡಿ ಮಗನಿಗೆ ರಾಜ್ಯ ಒಪ್ಪಿಸಿ ನಾಗಯತಿಗಳಿಂದ ಧರ್ಮ ಕೇಳಿ ತಪೋನಿರತನದನು ನಂತರ ಅಹಮಿಂದ್ರನಾದನು. ಎರಡನೇ ಜನ್ಮದಲ್ಲಿ ಮಲ್ಲಿನಾಥನಾಗಿ ಹುಟ್ಟಿ ಪರಿನಿಷ್ಕ್ರಮಣ ಹೊಂದಿ ತೀರ್ಥಂಕರನಾದನು ಕಥೆ ಕಡಿಮೆ ಇದ್ದು ಮಹಾಕಾವ್ಯದ ಮಟ್ಟಕ್ಕೆ ಏರಿರುವ ಕೆಲವೇ ಕೃತಿಗಳಲ್ಲಿ ಇದು ಕೂಡ ಒಂದು.
ರಾಮಚಂದ್ರಚರಿತ ಪುರಾಣ
*ಇದರ ಇನ್ನೊಂದು ಹೆಸರು ಪಂಪ ರಾಮಾಯಣ
*ಕನ್ನಡದಲ್ಲಿ ಲಭ್ಯವಾಗಿರುವ ಮೊದಲ ಜೈನ ರಾಮಾಯಣ ಕೃತಿಯಾಗಿದೆ.
* “ವಿಷಯಮೊಪ್ಪದೊಡಾವುದು ಮೊಪ್ಪಲಾರ್ಕುಮೆ” ಎಂಬಲ್ಲಿ ಉದಾತ್ತವಾದ ಕಥೆ ಮತ್ತು ನಾಯಕನ ಮೂಲಕವಾಗಿ ಜಗತ್ತಿಗೆ ಧರ್ಮವನ್ನು ಬೋಧಿಸುವ ವಿಷಯಕ್ಕೆ ಮಹತ್ವ ನೀಡಿದ್ದಾನೆ.
* ಜೈನರಾಯಣ ಕಥೆಯನ್ನು”ಅಪೂರ್ವಮೆನೆ ರಾಮಾಕಥೆಯನಭಿವರ್ಣಿಸುವೆಂ” ಎಂಇದ್ದಾನೆ.
* ಇದರ ಆಕರ ವಿಮಲಸೂರಿಯ “ಪುಮಚರಿಯ” (ಪದ್ಮಪುರಾಣ)
ಪ್ರಾಕೃತದಲ್ಲಿ ರಚನೆಯಾಗಿದೆ ಇದನ್ನೇ ಇವನು ಅನುಸರಿಸಿ ಬರೆದಿದ್ದಾನೆ.
* ಜೈನ ರಾಮಾಯಣವಾದ್ದರಿಂದ ಇಲ್ಲಿ ನಾಯಕನಾದ ಶ್ರೀರಾಮ ಹಿಂಸೆ ಮಾಡುವುದಿಲ್ಲ ಬದಲಿಗೆ ಲಕ್ಷ್ಮಣ ಮಾಡುತ್ತಾನೆ. ಮತ್ತೆ ಕೊನೆಯಲ್ಲಿ ರಾವಣನನ್ನು ಕೊಲ್ಲುವುದು ಕೂಡ ಲಕ್ಷ್ಮಣನೇ.
* ಈ ಕಾವ್ಯದಲ್ಲಿ ರಾವಣನ ಪಾತ್ರ ಉದಾತ್ತವಾಗಿ ಮೂಡಿಬಂದಿದೆ. ಇದು ಮೂಲ ಕೃತಿಯಂತೆ ಮುಂದೆ ಸಾಗಿದ್ದಾನೆ ಜೊತೆಗೆ ಮೂಲದಲ್ಲಿರುವಂತೆ ಇಲ್ಲಿಯೂ ರಾವಣ “ದುರಂತ ನಾಯಕನಾಗಿ” ಕಾಣುತ್ತಾನೆ.
* ನಾಗಚಂದ್ರ ತನ್ನನ್ನು ಅಭಿನವ ಪಂಪ ಎಂದು ಕರೆದುಕೊಂಡಿದ್ದಾನೆ.
* ಪಂಪ ಧಾರ್ಮಿಕ ಮತ್ತು ಲೌಕಿಕ ಎಂಬ ಎರಡು ಗ್ರಂಥಗಳನ್ನು ರಚಿಸಿದ್ದ. ಆದರೆ ಪಂಪನನ್ನು ಅನುಸರಿಸಿರುವ ನಾಗಚಂದ್ರ ಎರಡು ಧಾರ್ಮಿಕ ಗ್ರಂಥಗಳನ್ನೇ ರಚಿಸಿದ್ದಾನೆ.
See this Video: https://youtu.be/JS0hdEdf-K8?si=N_w1FBInWstj9DnC
Kannada Sahitya Charitre -ಕನ್ನಡ ಸಾಹಿತ್ಯ ಚರಿತ್ರೆ – ನಯಸೇನ
* 12ನೇ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದ್ದನು.
* ಇವನ ಗುರು – ನರೇಂದ್ರಸೇನ ಮುನಿಪ.
*ಇವನೊಬ್ಬ ಪಂಡಿತಮುನಿಯಾಗಿದ್ದ.
ಕೃತಿಗಳು
ಧರ್ಮಾಮೃತ
* ಜೈನ ಮತಚಾರದಲ್ಲಿ ಸದ್ಗತಿ ಹೊಂದಿದ 14 ಮಹಾಪುರುಷರ ಕಥೆಗಳನ್ನು 14 ಆಶ್ವಾಸಗಳಲ್ಲಿ ಹೇಳಿದ್ದಾನೆ.
* ಚಂಪು – ಜನಸ್ನೇಹಿ, ದೇಸಿ ಸಂಪನ್ನತೆಯಿಂದ ಕೂಡಿದುದು ಮೊದಲ ಬಾರಿ ಇದೇ ಕಾವ್ಯದಲ್ಲಿ.
* ನಾಡಿನ ಸಾಮಾನ್ಯ ಜನರಿಗಾಗಿ ಬರೆದ ಮೊದಲ ಜೈನ ಪುರಾಣ ಎಂಬ ಬಿರುದು ಈ ಕಾವ್ಯಕ್ಕೆ ಇದೆ.
* ಈತನ ಕಾವ್ಯದಲ್ಲಿ ಜಾನಪದ ಕಥೆಗಾರನ ಕಥನ ಕೌಶಲ್ಯ, ವಿಡಂಬಕ ಹಾಸ್ಯ, ಜನಜೀವನ ಪ್ರಜ್ಞೆಯನ್ನು, ಎತ್ತಿ ತೋರುತ್ತದೆ.
* ಇವನ ಶೈಲಿ – “ನಾಣ್ಣುಡಿ ದೇಸಿವೆತ್ತ ಪೊಸನುಡಿ ಮಾರ್ಗಂ” ಎಂಬುದರಿಂದ ತಿಳಿಯುತ್ತದೆ.
* ‘ಮಿಸುಕಿದ ಸಕ್ಕದ’ವನ್ನು ಇಕ್ಕುವವರನ್ನು ಕಡೆಗಣಿಸಿ ಶುದ್ಧ ಕನ್ನಡದಲ್ಲಿ ಹೇಳಬೇಕು ಎಂದು ಹೇಳಿದರು ಅವನೇ ಕೆಲವು ಕಡೆ ಇದರ ಆರೋಪಕ್ಕೂ ಒಳಗಾಗಿದ್ದಾನೆ.
* ರಂ. ಶ್ರೀ. ಮುಗಳಿ – ” ಜನತೆಯ ಕವಿಗಳೆಂದು ಹೆಸರಾದ ಕನ್ನಡ ಕಲೋಪಾಸಕರಲ್ಲಿ ನಯಸೇನನ್ನು ತೀರಾ ಎತ್ತರದಲ್ಲಿ ಅಲ್ಲದಿದ್ದರೂ ಎದ್ದು ಕಾಣುವ ನೆಲೆಯಲ್ಲಿ ಕೂಡಬಲ್ಲ ನಿರೂಪಮ ಸಹಜಕವಿ” ಎಂದಿದ್ದಾರೆ.
Read this – Part 4 of Kannada Sahitya charitre:https://rvwritting.com/kannada-sahitya-charitre-part-4%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%b8%e0%b2%be%e0%b2%b9%e0%b2%bf%e0%b2%a4%e0%b3%8d%e0%b2%af-%e0%b2%9a%e0%b2%b0%e0%b2%bf%e0%b2%a4%e0%b3%8d%e0%b2%b0/
Kannada Sahitya Charitre -ಕನ್ನಡ ಸಾಹಿತ್ಯ ಚರಿತ್ರೆ-ಬ್ರಹ್ಮಶಿವ
* 12ನೇ ಶತಮಾನದ ಮಧ್ಯ ಭಾಗದಲ್ಲಿ ಜೀವಿಸಿದ್ದನು.
* ಇವನು ಶೈವಾದರಕನಾಗಿದ್ದು ನಂತರ ಜೀನ ಧರ್ಮವನ್ನು ಪಡೆದನು. ಇದರಿಂದ ಅನ್ಯ ಮತದ ವಿರೋಧ ಅಥವಾ ದೋಷಣೆ ಇವನಲ್ಲಿ ಹೆಚ್ಚು ಕಾಣಬಹುದು ಏಕೆಂದರೆ ಮತಾಂತರ ಹೊಂದಿದ ಧರ್ಮದ ಅತಿಯಾದ ನಿಷ್ಠೆ ಪ್ರೇಮ ಮೂಡಿರುವ ಸಲುವಾಗಿ ಇದನ್ನು ಕಾಣಬಹುದು.
ಕೃತಿಗಳು
* ತ್ರೈಲೋಕ್ಯಚೂಡಮಣಿ ಎಂಬ ಸ್ತೋತ್ರ
* ಸಮಯ ಪರೀಕ್ಷೆ
ತ್ರೈಲೋಕ್ಯ ಚೂಡಾಮಣಿ
* ಇದು 36 ವೃತ್ತಗಳಿಂದ ಕೂಡಿರುವ ಕಾವ್ಯವಾಗಿದೆ.
* ಇದರ ಇನ್ನೊಂದು ಹೆಸರು ಛತ್ತೀಸರತ್ನಮಾಲೆ.
* ಇದರಲ್ಲಿ ಜನ ಸ್ತುತಿ ಮುಖ್ಯವಾದರೂ ಬೇರೆ ಧರ್ಮದ ವಿಡಂಬನೆ ಹೆಚ್ಚಾಗಿ ಕಂಡುಬಂದಿದೆ.
* ಈ ಕೃತಿ ಭಕ್ತಿ ಪ್ರಧಾನವಾಗಿ ಕಂಡರೂ ಬಿಡಂಬನೆ ಸ್ವರೂಪ ಕಂಡಿದೆ.
* ಮತಿ ನಿಮ್ಮಂ ನೆನೆಗುಂ ವಚಃ ಪ್ರತತಿ ನಿಮ್ಮಂ ಬಣ್ಣಿಕಂ – ಭಕ್ತಿಯ ಬಗೆಗೆ.
ಸಮಯ ಪರೀಕ್ಷೆ
* ಕಂದ ಮತ್ತು ವೃತ್ತಗಳಿಂದ ಕೂಡಿದ ಕಾವ್ಯವಾಗಿದೆ.
* 15 ಅಧಿಕಾರ ಅಥವಾ ಆಶ್ವಾಸಗಳಿಂದ ಕೂಡಿದಾಗಿದೆ.
* ಇದೊಂದು ಮತಪ್ರಚಾರ ಮಾಡುವ ಕಾವ್ಯವಾಗಿದೆ ಅಂದ್ರೆ ಜೈನ ಧರ್ಮವೇ ಶ್ರೇಷ್ಠ ಎಂದು ತೋರುವ ವಿಷಯವೇ ಆಗಿದೆ.
* ಇದು ವಿಡಂಬಕ ಕಾವ್ಯವಾಗಿ ಸಮಕಾಲೀನ ಜನಜೀವನ ಚಿತ್ರವನ್ನು ಕೂಡ ಒಳಗೊಂಡಿದೆ.
ಇಲ್ಲಿನ ವಿಷಯಗಳು
* ಪರಮಾತ್ಮ ಸ್ವರೂಪ
*ಅನಾದ್ಯ ನಿಧನ ಜಿನ ಧರ್ಮ ವರ್ಣನ
*ಪರಾಗಮ ವರ್ಣನ
* ಸಮ್ಯಕ್ತ್ವನಿರೂಪಣ
* ಪರಮಾರ್ಹತವ್ರತವ್ಯಾ ವರ್ಣನ
* ಶೌಚ ವ್ರತ ವರ್ಣನ
*ತಪೋ ಧನ ಸ್ವರೂಪ ವರ್ಣನ * ಆಪ್ತ ಸ್ವರೂಪ ವರ್ಣನ *ದೇವತಾ ಮೂಢ ಸ್ವರೂಪ ವರ್ಣನ
* ಆಗಮ ಸ್ವರೂಪ ವರ್ಣನ
* ವೈದಿಕ ವಿಡಂಬನ
* ಲೋಕಮೋಡ ಸ್ವರೂಪ
* ಕುದೃಷ್ಟಿ ಲಕ್ಷಣ
* ಕುಲಿಂಗಿ ಕುಚಾರಿತ್ರ ನಿರೂಪಣ
*ಜೈನ ಧರ್ಮ ವ್ಯಾವರ್ಣನ.
* ಈ ಕಾವ್ಯದಲ್ಲಿ ಜನಸಾಮಾನ್ಯರ ಮೂಢನಂಬಿಕೆಗಳು ಮತ್ತು ಅವರ ಆಚಾರ ಪದ್ಧತಿಗಳ ವರ್ಣನೆಗಳು ಬಂದಿವೆ.
ಉದಾಹರಣೆಗೆ: ಮಾರಜ್ಜಿ, ಮಸಣವಾಸಿನಿ, ಬೀರ, ಬೆನಕನಿಗೆ ಸಿಕ್ಕಿದರೆ.
*”ಉತ್ತಮಚಾರಿತ್ರ ಮೆಲ್ಲಿತಲ್ಲಿಯೆ ಧರ್ಮಂ” ಎಂಬ ಸತ್ಯವನ್ನು ಸಾರಿದ್ದಾನೆ.
* ಮಹಾಕವಿ ಬ್ರಹ್ಮ ಶಿವ ಎಂದು ಆತ್ಮಪ್ರಶಂಸೆ ಮಾಡಿಕೊಂಡಿದ್ದಾನೆ.
Kannada Sahitya Charitre -ಕನ್ನಡ ಸಾಹಿತ್ಯ ಚರಿತ್ರೆ – ಕರ್ಣಪಾರ್ಯ.
ಕೃತಿಗಳು
ನೇಮಿನಾಥ ಪುರಾಣ
* ವಿಜಯದಿತ್ಯ ರಾಜನ ಮಂತ್ರಿ ಲಕ್ಷ್ಮಣ ಇದನ್ನು ಬರೆಸಿದನು.
* ಹರಿವಂಶ ಕುರುವಂಷ ನೇಮಿನಾಥ ಮೂವರನ್ನು ಒಳಗೊಂಡಿರುವ ಕಥೆಯಾಗಿದೆ.
* ಆಕರ ಗ್ರಂಥ – ಗುಣಭದ್ರನ “ಉತ್ತರ ಪುರಾಣ” “ಚಾವುಂಡರಾಯ ಪುರಾಣ”ವನ್ನು ಈತ ಅನುಸರಿಸಿರಬೇಕು.
* ಸರಳ ಚಂಪೂವಿನಲ್ಲಿ ರಚನೆಯಾಗಿದೆ.
* ಇದರಲ್ಲಿ ಕೃಷ್ಣ ಕೌರವರು ಪಾಂಡವರ ಜೊತೆಯಲ್ಲಿ ಒಬ್ಬ ತೀರ್ಥಂಕರನ ಕಥೆ ಇದೆ.
ಎರಡನೇ ನಾಗವರ್ಮ
* 12ನೇ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದವನು.
* ಚಾಲುಕ್ಯ ರಾಜನಲ್ಲಿ ಕಟಕೋಪಾಧ್ಯಾಯನಾಗಿದ್ದನು.
* ಕವಿ ಜನ್ನನಿಗೆ ಉಪಾಧ್ಯಾಯನಾಗಿದ್ದನು.
ಕೃತಿಗಳು
* ಶಬ್ದಸ್ಮ್ರತಿ
* ಭಾಷಾಭೂಷಣ
* ಕಾವ್ಯಾವಲೋಕನ
* ವಸ್ತುಕೋಶ
* ಛಂದೋವಿಚಿತಿ
* ವ್ಯುತ್ಪತ್ತಿ ಸಾಧಕವಾದ ಸಮಗ್ರ ಗ್ರಂಥಗಳನ್ನು ಕನ್ನಡಕ್ಕೆ ತಂದಿದ್ದಾನೆ.
* ಕನ್ನಡ ವ್ಯಾಕರಣಕ್ಕೆ ಇವನೇ ಮೊದಲಿಗನಾಗಿದ್ದಾನೆ.
* ಜನ್ನ ಇವನನ್ನು ಜಿನೇಂದ್ರ ಪುರಾಣ ಕರ್ತೃ ಎಂದು ಹೆಸರಿಸಿದ್ದಾನೆ.
ಮೌಕ್ತಿಕ ಕವಿ
* ಕನ್ನಡದ ಮೊದಲಷ್ಟಕ – “ಚಂದ್ರನಾಥಾಷ್ಟಕ” ಕಾವ್ಯವನ್ನು ಬರೆದಿದ್ದಾನೆ.
ಕೀರ್ತಿವರ್ಮ
ಕನ್ನಡದ ಮೊದಲ ಗೋ ವೈದ್ಯ ಗ್ರಂಥ ಬರೆದಿದ್ದಾನೆ.
ಪಂಪ ಯುಗವು ಪಂಪನ ಕಥಾವಸ್ತು, ಕಾವ್ಯ ಭಾವ, ದೇಸಿ ಮಾರ್ಗಗಳ ಸಂಗಮ ಇದರ ಮೂಲಕ ಸ್ಪೂರ್ತಿ ಪಡೆದರು ಮುಂದಿನ ಕವಿಗಳು. ಇಲ್ಲಿ ಚಂಪೂ ಶೈಲಿ, ಜೈನ ಪುರಾಣಗಳು, ಕನ್ನಡಕ್ಕೆ ವಿಶಿಷ್ಟವಾದ ಶಾಂತರಸ ಪ್ರಸಾದನವಾದ ಸ್ವರೂಪವನ್ನು ಪಡೆಯಿತು. ಅದರೊಂದಿಗೆ ಇಲ್ಲಿ ವೀರರಸವೂ ಅತಿ ಮುಖ್ಯವಾಗಿ ಕಾಣಿಸಿಕೊಂಡು, ಸಂಸ್ಕೃತದ ಪ್ರಭಾವವು ಅತಿ ಹೆಚ್ಚು ಪಡೆದಿರುವುದನ್ನು ಈ ಕಾಲದಲ್ಲಿನ ಕಾವ್ಯಗಳಲ್ಲಿ ನಾವು ನೋಡಬಹುದಾಗಿದೆ. ಇಲ್ಲಿ ರಚಿತವಾಗಿರುವ ಕಾವ್ಯಗಳು ಹೆಚ್ಚಾಗಿ ಪಂಡಿತರಿಗೆ ಸೀಮಿತವಾಗಿರುವುದನ್ನು ನಾವು ನೋಡಬಹುದಾಗಿದೆ.
ಸರ್ ನೀವು ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದಂತೆ ಕಳುಹಿಸುತ್ತಿರುವ ಮಾಹಿತಿಗಳು ಓದುಗರಿಗೆ ಸುಲಭ ಹಾಗೂ ಉಪಯುಕ್ತವಾದುದು.
ಧನ್ಯವಾದಗಳು ಸರ್
Pingback: Read all of you - Kannada Sahitya Charitre Part - 6. ಕನ್ನಡ ಸಾಹಿತ್ಯ ಚರಿತ್ರೆ. ಬಸವಯುಗ: ದೇವರ ದಾಸಿಮಯ್ಯ, ಅಲ್ಲಮ ಪ್ರಭು - rvwritting