summary of Khareedi mathu maarata – ಖರೀದಿ ಮತ್ತು ಮಾರಾಟ ಪದ್ಯದ ಸಾರಾಂಶ –

Khareedi mattu marata - ಖರೀದಿ ಮತ್ತು ಮಾರಾಟ
Khareedi mattu marata – ಖರೀದಿ ಮತ್ತು ಮಾರಾಟ

Khareedi mathu maarata – ಕವಿ ಪರಿಚಯ: ಖಲೀಲ್ ಗಿಬ್ರಾನ್

Khaleel Gibran
Khaleel Gibran

Khareedi mathu maarata – ಖಲೀಲ್ ಗಿಬ್ರಾನ್ (1883-1931) : ಲೆಬನಾನಿನಲ್ಲಿ ಜನಿಸಿ ಉತ್ತರಾಮೆರಿಕದಲ್ಲಿ ತನ್ನ ಜೀವನದ ಬಹುಭಾಗವನ್ನು ಕಳೆದ ದಾರ್ಶನಿಕ ಕವಿ, ಚಿತ್ರಕಾರ. ಇಪ್ಪತ್ತಕ್ಕೂ ಹೆಚ್ಚಿನ ಅಪೂರ್ವ ಕೃತಿಗಳಿಂದ, ಸಹಸ್ರಾರು ವಚನ ಕವನಗಳಿಂದ, ನೂರಾರು ಅನುಭಾವಿಕ ಚಿತ್ರಗಳಿಂದ ಪೂರ್ವ ಪಶ್ಚಿಮದವರ ಪ್ರೀತಿ ಗೌರವಗಳಿಗೆ ಪಾತ್ರನಾದವ. ತನ್ನ ಅಮೂರ್ತ ಚಿಂತನೆಗಳಿಗೆ, ಕಾವ್ಯಮಯ 72/116 ಶಬ್ದಶಿಲ್ಪಶೈಲಿಗೆ ಪ್ರಸಿದ್ಧನಾದವ.

Khareedi mathu maarata – ಖರೀದಿ ಮತ್ತು ಮಾರಾಟ – Summary

ಈ ಕವಿತೆಯು ಖಲೀಲ್ ಗಿಬ್ರಾನ್ ರವರು ರಚಿಸಿದ್ದಾರೆ. ಈ ಕವಿತೆಯು ಮಾರುಕಟ್ಟೆಯಲ್ಲಿ ಖರೀದಿ ಮತ್ತು ಮಾರಾಟಗಳ ಮೂಲಕ ದುರಾಸೆ, ಹಸಿವು ಹೇಗೆ ನಿರ್ಮಾಣವಾಗುತ್ತಿವೆ ಎಂಬುದನ್ನು ತಿಳಿಸುವ ಮೂಲಕ ಪ್ರವಾದಿಗಳು ಮಾರುಕಟ್ಟೆ ಹೇಗಿರಬೇಕೆಂದು ತಿಳಿಸುತ್ತಾರೆ.

ವ್ಯಾಪಾರಿಯೊಬ್ಬ,

ಯಾವುದನ್ನು ಮಾರುವುದು ಮತ್ತು

ಏನನ್ನು ಕೊಳ್ಳಬೇಕು

ಎಂದು ಕೇಳಿದ ಪ್ರಶ್ನೆಗೆ

ಅವನು ಉತ್ತರಿಸತೊಡಗಿದ.

ಭೂಮಿ ನಿಮಗಾಗಿ ಫಲ ಬೆಳೆಯುತ್ತದೆಯಾದರೂ,

ನಿಮ್ಮ ಬೊಗಸೆ ತುಂಬಿಕೊಳ್ಳುವುದು

ಹೇಗೆಂದು ನಿಮಗೆ ಗೊತ್ತಿರುವಾಗ

ಬಯಸಲಾರಿರಿ ಎಲ್ಲ ಫಲವನ್ನು ನಿಮಗಾಗಿಯೇ,

ವ್ಯಾಪಾರಿ ಒಬ್ಬ ಪ್ರವಾದಿಗಳ ಬಳಿ ಕೇಳಿಕೊಳ್ಳುತ್ತಿದ್ದಾನೆ ಯಾವುದನ್ನು ಮಾರಬೇಕು ಯಾವುದನ್ನು ಕೊಳ್ಳಬೇಕು ಎಂಬ ಜ್ಞಾನೋದಯವನ್ನು ಕೇಳುತ್ತಿದ್ದಾನೆ ಅದಕ್ಕೆ ಪ್ರವಾದಿ ಒಬ್ಬ ಉತ್ತರಿಸುತ್ತಿದ್ದಾನೆ. ಈ ಭೂಮಿ ತಾಯಿ ನಮಗಾಗಿ ಏನೆಲ್ಲವನ್ನು ಉತ್ಪಾದಿಸಿ ನೀಡುತ್ತಾಳೆ. ಉತ್ಪಾದನೆಯಾಗಿ ಬೆಳೆಯಲಾಗುತ್ತದೆ ಆದರೆ ನಮಗೆ ಕೈತುಂಬ ಕೆಲಸವಿದ್ದಾಗ ನಾವು ಯಾವುದೇ ಅತಿಯಾಸೆಯಿಂದ ಹೆಚ್ಚಿನದನ್ನು ಬಯಸುವುದಿಲ್ಲ ಬದಲಾಗಿ ನಮ್ಮ ದುಡಿಮೆಗೆ ತಕ್ಕಂತೆ ಎಲ್ಲವನ್ನು ಬಯಸದೆ ತಮಗೆ ಬರುವುದನ್ನು ಮಾತ್ರವೇ ಪಡೆಯುತ್ತಾರೆ.

Khareedi mattu maarata poem: https://youtu.be/pYqumbn7LzU?si=920Nl3c3Dpn_NGF_

ಭೂಮಿಯ ಉಡುಗೊರೆಗಳ ವಿನಿಮಯದಲ್ಲಿಯೇ

ನೀವು ಪಡೆದುಕೊಳ್ಳುವಿರಿ ಸಮೃದ್ಧಿಯನ್ನ

ಮತ್ತು ಸಂತೃಪ್ತಿಯನ್ನು.

ಈ ಕೊಡು ಕೊಳ್ಳುವಿಕೆಯಲ್ಲಿ

ಪ್ರೀತಿ, ಅಂತಃಕರಣ ನ್ಯಾಯ ಇಲ್ಲದಿದ್ದಾಗ,

ಕೆಲವರು ಅತಿಯಾಸೆಯಿಂದ ನರಳಿದರೆ

ಇನ್ನೂ ಕೆಲವರು ಬಳಲುತ್ತಾರೆ ಹಸಿವೆಯಿಂದ.

ಭೂಮಿಯ ಮೇಲಿನ ಉತ್ಪಾದನೆಯನ್ನು ಉಡುಗೊರೆಗಳೆಂದು ಕರೆಯಲಾಗಿದ್ದು, ಅವುಗಳ ವಿನಿಮಯವೂ ಅಂದರೆ ಮಾರುವವನಿಗೂ ಕೊಳ್ಳುವವನಿಗೂ ನ್ಯಾಯದ ರೀತಿಯಲ್ಲಿ ಸಲ್ಲಿಕೆಯಾದಾಗ ಸಮೃದ್ಧಿ ಮತ್ತು ಸಂತೃಪ್ತಿ ತುಂಬಿರುತ್ತದೆ. ಇಂತಹ ಕೊಡು ಕೊಳ್ಳುವಿಕೆ ನಡೆಯುವ ಮಾರುಕಟ್ಟೆಯಲ್ಲಿ ಪ್ರೀತಿ ಅಂತಕ್ಕರಣ ನ್ಯಾಯವೆಂಬುದು ಇಲ್ಲವಾದಾಗ ಅತಿಯಾಸೆ ಪಡುವ ಕೆಲವರು ಶ್ರೀಮಂತರಾಗುತ್ತಾರೆ ಶ್ರೀಮಂತತನದಿಂದ ಎಲ್ಲವನ್ನೂ ಪಡೆದದ್ದರಿಂದ ಕೆಲವರಿಗೆ ನಷ್ಟ ಉಂಟಾಗಿ ಹಸಿವಿನ ಶೂಲಕ್ಕೆ ಅಥವಾ ಬಡತನದ ಕೋಪಕ್ಕೆ ಬೀಳುತ್ತಾರೆ ಇದರಿಂದಾಗಿ ಸಮಾಜದಲ್ಲಿ ಅನ್ಯಾಯ ಅಸಮಾನತೆಗಳು ಕಾಡುತ್ತವೆ.

ಸಮುದ್ರ, ಹೊಲ ಮತ್ತು ದ್ರಾಕ್ಷಿಯ ತೋಟಗಳಲ್ಲಿ

ಬೆವರು ಸುರಿಸುವ ನೀವು,

ಮಾರುಕಟ್ಟೆಯಲ್ಲಿ

ನೇಕಾರರನ್ನು, ಕುಂಬಾರರನ್ನು,

ಮಸಾಲೆ ಜಿನಿಸುಗಳನ್ನು ಸಂಗ್ರಹಿಸುವವರನ್ನು

ಭೇಟಿಮಾಡಿದರೆ,

ಭೂಮಿಯ ಪರಿಪಕ್ವ ಚೈತನ್ಯವನ್ನು

ಆಹ್ವಾನಿಸಿ ನಿಮ್

ನಿಮ್ಮ ತಕ್ಕಡಿಗಳನ್ನು ಶುದ್ದೀಕರಿಸಿ

ಮತ್ತು ಮೌಲ್ಯಗಳಿಗೆ ಬೆಲೆ ಕಟ್ಟುವ

ನಿಮ್ಮ ಲೆಕ್ಕಾಚಾರವನ್ನು ನಿಕಟಕ್ಕೆ ಒಡ್ಡಿ.

ತುಂಬಾ ಕಷ್ಟಪಟ್ಟು ಕೆಲಸ ಮಾಡಿ ಬೆವರು ಸುರಿಸುವಂತಹ ಕೆಲಸಗಳಾದ ಸಮುದ್ರದಲ್ಲಿ ಮೀನು ಹಿಡಿಯುವ ಹೊಲದಲ್ಲಿ ಕೆಲಸ ಮಾಡುವ ರೈತನಾಗಲಿ ದ್ರಾಕ್ಷಿ ತೋಟಗಳಲ್ಲಿ ಕೆಲಸ ಮಾಡುವವನಾಗಲಿ ತಾನು ಬೆಳೆದದ್ದನ್ನು ಮಾರುಕಟ್ಟೆಗೆ ಸಾಗಿಸುತ್ತಾನೆ ಅದೇ ರೀತಿಯಾಗಿ ನೇಕಾರ ಕುಂಬಾರ ಮಸಾಲೆ ಪದಾರ್ಥ ಸಂಗ್ರಹಿಸಿ ಮಾರುವವರು ಅದೇ ಮಾರುಕಟ್ಟೆಯಲ್ಲಿ ಸಂಧಿಸಿದಾಗ ಅಲ್ಲಿ ವ್ಯಾಪಾರ ಎಂಬುದು ನಡೆಯುತ್ತದೆ ಆಗ ನಿಮ್ಮಲ್ಲಿ ಈ ಭೂಮಿಯ ಚೇತನವಾದ ನ್ಯಾಯ ಎಂಬ ಚೈತನ್ಯ ನಿಮ್ಮ ನಡುವೆ ಬರಬೇಕು ಆಗ ನಿಮ್ಮ ವಸ್ತುಗಳಿಗೆ ತೂಕ  ಹಾಕಬೇಕಾದ ತಕ್ಕಡಿಗಳನ್ನು ಶುದ್ಧೀಕರಿಸಿ ವಸ್ತುಗಳಿಗೆ ಮೌಲ್ಯಯುತವಾದ ನಿಖರವಾದ ಲೆಕ್ಕಾಚಾರದ ಬೆಲೆಯನ್ನು ಕಟ್ಟಿ ನ್ಯಾಯಯುತವಾದ ಮೌಲ್ಯಯುತವಾದ ಕೊಡುಕೊಳುವಿಕೆಯನ್ನು ನಡೆಸಬಹುದು.

ನಿಮ್ಮ ಶ್ರಮಕ್ಕೆ ಬದಲಾಗಿ

ಕೇವಲ ಮಾತುಗಳನ್ನು ಮಾರಬಯಸುವ

ಖಾಲಿ ಕೈಗಳೊಂದಿಗೆ ವ್ಯವಹಾರ ಮಾಡಿ

ಸಿಕ್ಕಿಹಾಕಿಕೊಳ್ಳದಿರಿ ತೊಂದೆಗೆ.

ನಿಮ್ಮ ಶ್ರಮದಿಂದ ಬಂದಿರುವ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಮಾರ ಬಯಸುವಾಗ ಒಳ್ಳೊಳ್ಳೆ ಮಾತುಗಳನ್ನು ಬಳಸಿ ಮಾರಾಟ ಮಾಡುತ್ತಿರುತ್ತೇವೆ ಅಂತಹ ಸಂದರ್ಭದಲ್ಲಿ ಯಾವುದೇ ಕೆಲಸವಿಲ್ಲದ ನಿರುದ್ಯೋಗಿ ನಿಮ್ಮ ಬಳಿ ಬಂದಾಗ ಅವನಿಗೆ ಏನಾದರೂ ಹೇಳಿ ಕಳುಹಿಸಬೇಡಿ ಅದಕ್ಕೆ ಬದಲಾಗಿ ಅಂತವರಿಗೆ ಹೇಳಿ

ಅಂಥವರಿಗೆ ಹೇಳಿ:

ಬನ್ನಿ ನಮ್ಮೊಂದಿಗೆ ಹೊಲಗಳಿಗೆ ಅಥವಾ

ನಮ್ಮ ಗೆಳೆಯರೊಂದಿಗೆ

ಸಮುದ್ರಕ್ಕೆ ಹೋಗಿ ಬಲೆ ಬೀಸಿ:

ಭೂಮಿ ತಾಯಿ ಮತ್ತು ಸಮುದ್ರ ದೇವತೆಯರು

ನಮ್ಮನ್ನು ಹರಸಿದಂತೆ ನಿಮ್ಮನ್ನೂ

ಆಶೀರ್ವದಿಸುತ್ತಾಎ ಧಾರಾಳವಾಗಿ”

ಬಾರಪ್ಪ ನನ್ನೊಂದಿಗೆ ಎಂದು ಉದ್ಯೋಗ ಮಾಡುವಂತ ಸ್ಥಿತಿಯನ್ನು ನಿರ್ಮಾಣ ಮಾಡಿ ನಿಮ್ಮ ಬಳಿಯೇ ಹೊಲದಲ್ಲಿ ಕೆಲಸ ಮಾಡಲು ಕರೆಯಿರಿ ಒಲ್ಲೆ ಎಂದರೆ ಸ್ನೇಹಿತರ ಬಳಿ ಕಳುಹಿಸಿ ಅವರ ಜೊತೆ ಸಮುದ್ರಕ್ಕೆ ಹೋಗಿ ಬಲೆಯನ್ನು ಹಾಕಲಿ ಇದರಿಂದಾಗಿ ನಮಗೆ ಹೇಗೆ ಈ ಭೂಮಿ ತಾಯಿ ಮತ್ತು ಸಮುದ್ರ ದೇವತೆಯರು ಉದ್ಯೋಗ ಒದಗಿಸಿ, ಹೊಟ್ಟೆ ತುಂಬಿಸಿ ಹರಸುತ್ತಿದ್ದಾರೋ ಅವನಿಗೂ ನಮ್ಮಂತೆ ಹರಸುತ್ತಾಳೆ. ಏಕೆಂದರೆ ಎಲ್ಲರಿಗೂ ಫಲವನ್ನು ನೀಡುವವಳು ಆಗಿದ್ದಾಳೆ.

ಸಂಗೀತಗಾರರು, ನೃತ್ಯಪಟುಗಳು ಮತ್ತು

ಕೊಳಲು ವಾದಕರು ಎದುರಾದರೆ

ಕೊಂಡುಕೊಳ್ಳಿ ಅವರ ಉಡುಗೊರೆಗಳನ್ನೂ

ಅವರಾದರೂ ಹೂವು, ಹಣ್ಣು, ಸುಗಂಧಗಳ

ಬೆನ್ನು ಹತ್ತಿದವರೇ.

ಅವರು ವಿನಿಮಯಕ್ಕೆ ತಂದಿರುವುದು

ಕಲ್ಪನೆಯ ಕನಸುಗಳಾದರೂ

ಅವು ನಿಮ್ಮ ಆತ್ಮದ ಹೊಟ್ಟೆ ತುಂಬಿಸುತ್ತವೆ

ಮಾನ ಮುಚ್ಚುತ್ತವೆ.

ಸೃಜನಾತ್ಮಕ ಕಲೆಯನ್ನು ಅಥವಾ ಸೌಂದರ್ಯ ಪ್ರಜ್ಞೆಯನ್ನು ಪ್ರತಿನಿಧಿಸುವವರಾದ ಸಂಗೀತಗಾರರು ನೃತ್ಯಪಟುಗಳು ಕೊಳಲು ವಾದಕರು ಇವರು ತಮ್ಮ ಹೊಟ್ಟೆಪಾಡಿಗೆ ತಮ್ಮ ಕಲೆಯನ್ನು ಉಡುಗೊರೆಗಳನ್ನು ಪ್ರದರ್ಶಿಸುತ್ತಾರೆ ಅಂತಹ ಉಡುಗೊರೆಗಳನ್ನಾದರೂ ಕೊಂಡುಕೊಳ್ಳಿ ಏಕೆಂದರೆ ಅವರು ಕೂಡ ನಮ್ಮಂತ ಹೂವು ಹಣ್ಣು ಸುಗಂಧಗಳನ್ನು ಬೇಡುವವರೆಯಾಗಿದ್ದಾರೆ ಅವರಿಂದ ನಮ್ಮ ಆತ್ಮಕ್ಕೆ ಮನೋರಂಜನೆ ಸಿಗುತ್ತದೆ ಆ ಮನರಂಜನೆಯನ್ನು ಬರಿಗೈಯಲ್ಲಿ ತೆಗೆದುಕೊಳ್ಳಬೇಡಿ ಪ್ರತಿಯಾಗಿ ಹಣ ನೀಡಿ ಪಡೆಯಿರಿ.

ನೀವು ಮಾರುಕಟ್ಟೆ ಬಿಡುವ ಮುಂಚೆ

ಖಾತ್ರಿ ಮಾಡಿಕೊಳ್ಳಿ ಯಾರೂ

ಖಾಲೀ ಕೈಯಲ್ಲಿ ವಾಪಸ್ಸಾಗಿಲ್ಲ ಎನ್ನುವುದನ್ನ

ತನ್ನ ಕಟ್ಟ ಕಡೆಯ ಸಂತಾನವೂ

ಹಾಯಾಗಿ ನಿದ್ರಿಸುವ ತನಕ

ಭೂಮಿಯ ಪರಿಪೂರ್ಣ ಆತ್ಮಕ್ಕೆ ನಿದ್ದೆಯಿಲ್ಲ.

ನಾವು ಮಾರುಕಟ್ಟೆ ಪ್ರವೇಶಿಸಿ ನಮಗೆ ಬೇಕಾದ ವಸ್ತುಗಳನ್ನು ಕೊಂಡು ಮಾರುಕಟ್ಟೆ ಬಿಟ್ಟು ಹೊರಡುವ ಮೊದಲು ಇಲ್ಲಿ ಬಂದು ಯಾರಾದರೂ ಬರೀ ಕೈಯಲ್ಲಿ ಹೊರಹೋಗಿಲ್ಲ ಎಂಬುದನ್ನು ಸಾಬೀತು ಮಾಡಿಕೊಳ್ಳಿ ಏಕೆಂದರೆ ನ್ಯಾಯಯುತ ಬೆಲೆಯಲ್ಲಿ ಎಲ್ಲರಿಗೂ ಎಲ್ಲವೂ ದೊರಕಬೇಕು ಹಾಗೆಯೇ ಈ ಸಮಾಜದ ಕಟ್ಟ ಕಡೆಯ ಮನುಷ್ಯನಾಗಿದ್ದವನು ನ್ಯಾಯಯುತ ಬೆಲೆಯಿಂದಲೇ ಎಲ್ಲವನ್ನು ಪಡೆದಿದ್ದಾನೆ ಎಂಬತೃಪ್ತಿಯ ಭಾವ ನಮ್ಮಲ್ಲಿ ಬರಬೇಕು ಇಲ್ಲವಾದಲ್ಲಿ ಭೂಮಿ ತಾಯಿಯ ಆತ್ಮಕ್ಕೆ ಪರಿಪೂರ್ಣವಾದ ನೆಮ್ಮದಿ ಸಿಗುವುದಿಲ್ಲದಂತಾಗುತ್ತದೆ ಏಕೆಂದರೆ ಅತಿಯಾಸೆ ದುರಾಸೆಯಿಂದ ಇರುವವರೇ ಎಲ್ಲವನ್ನು ಪಡೆದಾಗ ಇನ್ನಿತರರಿಗೆ ಏನು ದೊರಕುವುದಿಲ್ಲ.

ಮೇಲಿನ ಕವಿತೆಯು ಮಾರುಕಟ್ಟೆ ಎಂಬುದು ನ್ಯಾಯಯುತ ಬೆಲೆಯ ಮೇಲೆ ನಿಂತಿದ್ದಾಗ ಎಲ್ಲರಿಗೂ ಸಮಪಾಲು ದೊರೆಯಲು ಸಾಧ್ಯವಾಗುತ್ತದೆ ಎಂಬುದನ್ನು ತಿಳಿಸುತ್ತದೆ.

Leave a Comment

Your email address will not be published. Required fields are marked *

Scroll to Top