ಕೈಬುಲ್ ಲಾಂಮ್ಜೋ ರಾಷ್ಟ್ರೀಯ ಉದ್ಯಾನವನ #Kaibul Lamjo National Park

            ಕೈಬುಲ್ ಲಾಂಮ್ಜೋ ಎಂದರೆ ಏನೆಂದು ಅರ್ಥವಾಗುವುದಿಲ್ಲ. ಯಾವುದೋ ಚೀನಿ ಹೆಸರಿರಬಹುದು ಎಂದು ಅನಿಸುತ್ತದೆ. ಅದರ ಅರ್ಥ ತಿಳಿಯಲು ಮುಂದಾಗಿ Google ನಲ್ಲಿ ಹುಡುಕಿದಾಗ ಈ ಹೆಸರಿನ ಹಿಂದಿನ ಚಿತ್ರ ಭಿತ್ತರವಾಗುತ್ತದೆ. ಆಗ ನಮಗೆ ತಿಳಿಯುತ್ತದೆ. ಇದೊಂದು ತೇಲುವ ಉದ್ಯಾನವನ ಎಂದು. ಇದು ಮಣಿಪುರ ರಾಜ್ಯದ, ಬಿಷ್ಣುಪುರ್ ಜಿಲ್ಲೆಯಲ್ಲಿ ಬರುವ ಲೋಕ್ ಟಕ್(Loktak) ಸರೋವರದಲ್ಲಿ 40ಚದರ ಕಿ.ಮೀ ವಿಸ್ತರಿಸಿರುವ ಈ ಉದ್ಯಾನವನ ಈ ಸರೋವರದ ಮುಖ್ಯವಾದ ಅಂಗವು ಆಗಿದೆ. ಹಾಗೆಯೇ ಪ್ರಪಂಚದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನ ಇದೊಂದೆ. ಇದು ನಮ್ಮ ದೇಶದ ಹೆಮ್ಮೆಯ ಸಂಗತಿ ಜೊತೆಗೆ UNESCO ವಿಶ್ವ ಪರಂಪರೆ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿದೆ. ಇದನ್ನು 1966 ರಲ್ಲಿ ಅಭಯಾರಣ್ಯವಾಗಿ 1977ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಘೋಷಿಸಲಾಗಿದೆ.

Phumdis
ಇದು ಸಸ್ಯ ಮತ್ತು ಪ್ರಾಣಿಗಳಿಗೆ ಆವಾಸ ಸ್ಥಾನವನ್ನು ಒದಗಿಸಿದೆ.  ಈ ಉದ್ಯಾನವನ ಇಷ್ಟೊಂದು ಹೆಸರು ಪಡೆಯಲು ಕಾರಣ ಇಲ್ಲಿನ ಫುಮ್ಡಿಗಳಿಂದ. ಫುಮ್ಡಿಗಳೆಂದರೆ ತೇಲುವ ಜೌಗು ಪ್ರದೇಶವಿದ್ದಂತೆ. ಇವು ಇಲ್ಲಿ ಸತ್ತ ಮತ್ತು ಕೊಳೆಯುತ್ತಿರುವ ಸಸ್ಯವರ್ಗದ ಕಂಬಳಿಯಂತಿದೆ. ಇದು ಸರೋವರದ ಮೇಲ್ಭಾಗದಲ್ಲಿ ತೇಲುತ್ತಿರುತ್ತದೆ. ಇದರ ಮೇಲೆ ಎತ್ತರೆತ್ತರಕ್ಕೆ ಜೊಂಡು ಹುಲ್ಲುಗಳು ಬೆಳೆಯುತ್ತವೆ. ಬೇಸಿಗೆ ಸಮಯದಲ್ಲಿ ಜೊಂಡು ಹುಲ್ಲು ಬೇಕಾಗುತ್ತದೆ. ಆಳವಿಲ್ಲದ ಜಾಗದಲ್ಲಿ ಬೇರನ್ನು ಬಿಡುತ್ತವೆ. ಇವುಗಳಿಗೆ ಫುಮ್ಡೀಸ್ ಪೋಷಕವಾಗಿ ನಿಂತಿದೆ. ಇದರಿಂದ ನೀರು ಹೆಚ್ಚಾದಾಗ ಮುಳುಗಿ, ನೀರು ಕಡಿಮೆಯಾದಾಗ ಮೇಲೆದ್ದು ಕಾಣುತ್ತಿದ್ದವು. 1980ರ ನಂತರ ಇಥಾಯ್ ಹೈಡ್ರೋಪವರ್ ಅಣೆಕಟ್ಟು ಕಟ್ಟಿಸಿದ್ದರಿಂದ ನೀರಿನ ಮಟ್ಟ ಹೇಚ್ಚಾಗಿಯೇ ಇರುತ್ತದೆ. ಇದರಿಂದ ಫುಮ್ಡೀಸ್ ಮುಳುಗುವುದು ಕಡಿಮೆಯಾಗಿದೆ.
ಸಂಗೈ



           ರಾಷ್ಟ್ರೀಯ ಉದ್ಯಾನವನವು ಅಳಿವಿನಂಚಿನಲ್ಲಿರುವ ಸಂಗೈ ಜಿಂಕೆಗೆ ಆವಾಸ ಸ್ಥಾನವಾಗಿದೆ. ಸಂಗೈ, ಹುಬ್ಬು ಕೊಂಬಿನ ಪ್ರಾಣಿ, Dancing deer ಎಂದು ಕರೆಯುವ ಈ ಪ್ರಾಣಿಯು ಇಲ್ಲಿಗೆ Endemic ಆಗಿದೆ ಮತ್ತು  ಕೈಬುಲ್ ಲಾಂಮ್ಜೋ ರಾಷ್ಟ್ರೀಯ ಉದ್ಯಾನದಲ್ಲಿ ಮಾತ್ರ ಕಂಡು ಬರುತ್ತದೆ. ಹಾಗೆಯೇ ಮಣಿಪುರ ರಾಜ್ಯದ ರಾಜ್ಯ ಪ್ರಾಣಿಯಾಗಿದೆ. 1950ರವರೆಗೆ ಭಾರತದಲ್ಲಿ ಈ ಪ್ರಾಣಿ ಅಳಿದು ಹೋಗಿದೆ ಎಂದು ನಂಬಲಾಗಿತ್ತು. ತದ ನಂತರದಲ್ಲಿ E.P Gee ಎಂಬ ಪರಿಸರವಾದಿಯಿಂದ ಪುನಃ ಈ ಪ್ರಾಣಿಯು ಭಾರತದಲ್ಲಿದೆ ಎಂದು ತೋರಿಸಿದರು. 
            ನಂತರದಿಂದ ಇದರ ಸಂರಕ್ಷಣೆಗೆ ಸರ್ಕಾರಗಳು ಮುಂದಾದವು. ನಂತರ IUCN Red list ನಲ್ಲಿ Endangered ಎಂದು ಮತ್ತು ಭಾರತ ಸರ್ಕಾರದ Wildlife Protection Act – 1972ರ ಅಡಿಯಲ್ಲಿನ Schedule I ಅಡಿಯಲ್ಲಿ ಹೆಚ್ಚಿನ ಸಂರಕ್ಷಣೆ ಒದಗಿಸಲಾಗಿದೆ. ಹಾಗೆಯೇ ಮಣಿಪುರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಸಂಗೈಹೆಸರಿನ ಮೂಲಕ “ಸಂಗೈ ಉತ್ಸವ” ಎಂಬ ಹಬ್ಬ ಆಚರಿಸುವ ಮೂಲಕ ದೇಶಕ್ಕೆ ತನ್ನ ಸಂಸ್ಕೃತಿಯನ್ನು ಬಿಂಬಿಸುವ ಜೊತೆಗೆ ಇದರ ಸಂರಕ್ಷಣೆಯು ನಡೆಯುತ್ತಿದೆ. ಲೋಕ್ ಟಕ್ ಸರೋವರದ ಮೇಲಿರುವ ದೊಡ್ಡ ಫುಮ್ಡೀಯೇ ರಾಷ್ಟ್ರೀಯ ಉದ್ಯಾನವನವಾಗಿರುವುದು. ಇಲ್ಲಿಯೇ ಸಂಗೈಗಳ ವಾಸ. ಈ ಸರೋವರದ ಮೇಲೆಯೇ ಪ್ರಪಂಚದ ಮೊದಲ ಮತ್ತು ಏಕೈಕ ಪ್ರಾಥಮಿಕ ಶಾಲೆಯೂ ಇದೆ.
            ಕೈಬುಲ್ ಲಾಂಮ್ಜೋ ರಾಷ್ಟ್ರೀಯ ಉದ್ಯಾನವನವು 3 ಬೆಟ್ಟಗಳಿಂದ ಕೂಡಿದೆ. ಅವು ಪಬೋಟ್, ತೋಯಾ, ಚಿಂಗ್ಜಾವೋ. ಇಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರಿನ ಮಟ್ಟ ಜಾಸ್ತಿಯಾದಾಗ ಇಲ್ಲಿರುವ ಜನ ಬೆಟ್ಟಗಳ ಮೇಲೆ ವಾಸಿಸುತ್ತಾರೆ. ನೀರಿನ ಮಟ್ಟ ಇಳಿದಾಗ ಉದ್ಯಾನವನದಲ್ಲಿ ವಾಸಿಸುತ್ತಾರೆ.
 ಲೋಕ್ ಟಕ್ ಸರೋವರ – Lok tak Lake

        
                
 See the video 
        ಈಶಾನ್ಯ ಭಾರತದಲ್ಲಿನ ಮಣಿಪುರ ರಾಜ್ಯದಲ್ಲಿರುವ ಸಿಹಿ ನೀರಿನ ಸರೋವರವಾಗಿದೆ. ದಕ್ಷಿಣ ಏಷ್ಯಾ ಮತ್ತು ಭಾರತದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರವಾಗಿದೆ. ಇದರ ಮೇಲೆ ಫುಮ್ಡೀಗಳ ನಿರ್ಮಾಣವಾಗಿದೆ. ಇದರಲ್ಲಿ ಅತಿದೊಡ್ಡ ಫುಮ್ಡಿ ಮೇಲೆ ಕೈಬುಲ್ ಲಾಂಮ್ಜೋ ರಾಷ್ಟ್ತೀಯ ಉದ್ಯಾನವನ ನೆಲೆಗೊಂಡಿದೆ. ಇದು ಸಾಂಗೈ ಪ್ರಾಣಿಗೆ ಕೊನೆಯ ಆವಾಸಬಾಗಿದೆ. 
          ಈ ಸರೋವರ ಮಣಿಪುರದ ಆರ್ಥಿಕತೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿ ಜಲವಿದ್ಯುತ್, ನೀರಾವರಿ, ಕುಡಿಯುವ ನೀರಿಗೆ ಇದರಮೇಲೆ ಒತ್ತಡವಿದೆ. ಜೊತೆಗೆ ಈ ಸರೋವರದ ಸುತ್ತ ವಾಸಿಸುವ ಮೀನುಗಾರರಿಗೆ ಇದೇ ಜೀವನಾಧಾರವಾಗಿದೆ. ಇದರ ಮೇಲಿನ ಜೀವ ವೈವಿಧ್ಯತೆಯ ಅವಲಂಬನೆಯನ್ನು ಗುರುತಿಸಿ 1990ರಲ್ಲಿ Ramsarಗೆ, 1993ರಲ್ಲಿ Ramsarನ Montriax record ಗೆ ಸೇರಿಸಲಾಗಿದೆ. ಇದು ಸು.230 ಕ್ಕಿಂತ ಹೆಚ್ಚಿನ ಜಾತಿಯ ಜಲಸಸ್ಯಗಳು, 100 ವಿವಿಧ ಪಕ್ಷಿಗಳು, 400ಕ್ಕಿಂತ ಹೆಚ್ಚಿನ ಜಾತಿಯ ಪ್ರಾಣಿಗಳಿಗೆ ಆಶ್ರಯ ನೀಡುತ್ತದೆ.

Leave a Comment

Your email address will not be published. Required fields are marked *

Scroll to Top