ಭಾರತೀಯ ನೌಕಾಪಡೆಯ ದಿನ #Indian Navy Day

        ಭಾರತೀಯ ನೌಕಾಪಡೆಯ ಸಾಧನೆ ಮತ್ತು ಅದರ ತ್ಯಾಗದ ಸವಿನೆನಪಿಗಾಗಿ ಡಿಸೆಂಬರ್ 4 ನ್ನು ಭಾರತೀಯ ನೌಕಾಪಡೆಯ ದಿನವನ್ನಾಗಿ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. 1971ರಲ್ಲಿ ಭಾರತ ಪಾಕಿಸ್ತಾನ ನಡುವಿನ ಯುದ್ಧ ಆಪರೇಷನ್ ಟ್ರೇಡೆಂಟ್ ಹೆಸರಿನಲ್ಲಿ ಮಾಡಲಾಗಿತ್ತು. ಇದರಲ್ಲಿ ಭಾರತೀಯ Navy ಪಾಕಿಸ್ತಾನ ಸೇನೆಯ Navy ಹಡಗುಗಳನ್ನು ಮುಳುಗಿಸಿ ಹೆಚ್ಚಿನ ಅನಾಹುತ ಉಂಟು ಮಾಡಿ ಭಾರತ ಯುದ್ಧದಲ್ಲಿ ಗೆಲ್ಲುವಂತೆ ಮಾಡಿದರ ಸವಿನೆನಪಿಗಾಗಿ ಡಿಸೆಂಬರ್ 4 ನ್ನು ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತಿದೆ.

Operation trident


        ಬಾಂಗ್ಲಾ ವಿಮೋಚನಾ ಯುದ್ಧವೆಂದೆ ಗುರುತಿಸಿಕೊಂಡಿರುವ ಭಾರತ ಪಾಕ್  ನಡುವೆ 1971ರಲ್ಲಿ ನಡೆದ ಯುದ್ಧವಾಗಿದೆ. ಪಾಕಿಸ್ತಾನ ತನ್ನ ಸೈನಿಕರಿಂದ ಭಾರತೀಯ ವಾಯು ನೆಲೆಗಳ ಮೇಲೆ ದಾಳಿ ಮಾಡಿಸಿ ಹಾನಿ ಉಂಟು ಮಾಡಿತು. ಇದಕ್ಕೆ ಪ್ರತಿರೋಧವಾಗಿ ಭಾರತ ಆಪರೇಷನ್ Trident ಹೆಸರಿನಲ್ಲಿ ಯುದ್ಧಕ್ಕೆ ಮುಂದಾಗಿ ತನ್ನ ನೌಕಾಪಡೆಯ ಬೆಂಬಲದೊಂದಿಗೆ ಪಾಲ್ಗೊಂಡು ನೌಕಾಪಡೆಯ ಮೂರು ಕ್ಷಿಪಣಿ ದೋಣಿಗಳಾದ 
  1. INS Vir, 
  2. INS Nirghat, 
  3. INS Niphat, 
ವಿದ್ಯುತ್ ದರ್ಜೆಯ ದೋಣಿಗಳನ್ನು ಬಳಸಿಕೊಂಡು ಕರಾಚಿಯತ್ತ ಮುನ್ನುಗ್ಗಿ ಪಾಕಿಸ್ತಾನ ನೌಕಾಪಡೆಯ ಮೂರು ಹಡಗುಗಳನ್ನು ಮುಳುಗಿಸಿತು ಇದರಿಂದ ಭಾರತಕ್ಕೆ ವಿಜಯ ಲಬಿಸಿದ ಹಿನ್ನೆಲೆಯಾಗಿ ದೇಶವೇ ಸಂಭ್ರಮಿಸಿ, ಕಾರ್ಯಾಚರಣೆಗೆ ಇಳಿದ ದಿನವನ್ನು ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರಲ್ಲಿ ಭಾರತದ ಕಡೆಯಿಂದ ಯಾವುದೇ ಸಾವು ನೋವು ಗಳಿಲ್ಲದೆ World War II  ನಂತರದ ಆಧುನಿಕ ನೌಕಾ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಎಂದು ಗುರುತಿಸಿಕೊಂಡಿದೆ.
ಭಾರತೀಯ ನೌಕಾಪಡೆ


        ಭಾರತೀಯ ನೌಕಾಪಡೆಯ ಪಿತಾಮಹ ಶಿವಾಜಿ ಮಹಾರಾಜ್. ಭಾರತದ ರಕ್ಷಣಾ ಪಡೆಗಳಲ್ಲಿ ನೌಕಾಪಡೆ ಒಂದು ಅಂಗವಾಗಿದೆ. ಇದು ಜಗತ್ತಿನ ಐದನೇ ದೊಡ್ಡ ನೌಕಾಪಡೆಯಾಗಿದೆ. ಇದರ ಸರ್ವೋಚ್ಚ ಕಮಾಂಡರ್ ರಾಷ್ಟ್ರಪತಿಗಳಾಗಿದ್ದು, ನೌಕಾಪಡೆಯ ಮುಖ್ಯಸ್ಥರನ್ನು ಅಡ್ಮಿರಲ್ ಎನ್ನಲಾಗುತ್ತದೆ. ಭಾರತದ ನೌಕಾ ಇತಿಹಾಸ ಸಿಂಧೂ ನಾಗರಿಕತೆಯಿಂದ ಬಹಳ ಹಿಂದಕ್ಕೆ  ಹೋಗುತ್ತದೆ. ಆದರೆ ಮೊದಲಿಗೆ ಈಸ್ಟ್ ಇಂಡಿಯಾ ಕಂಪನಿಯು 1612 ರಲ್ಲಿ ಗುಜರಾತ್ ನ ಸೂರತ್ ಬಳಿ ಮೊದಲಿಗೆ ನೌಕಾಪಡೆಯನ್ನು ರಚಿಸಿತು ಏಕೆಂದರೆ ವಿದೇಶಿ ವಿರೋಧಿಗಳು ಮತ್ತು ಕಡಲಗಳ್ಳರಿಂದ ಹಡಗುಗಳನ್ನು ರಕ್ಷಿಸಿಕೊಳ್ಳಲು ಮುಖ್ಯವಾಗಿರುವುದರಿಂದಾಗಿ ರಚಿಸಿತು. 1945 ರ World War II ಅಂತ್ಯದ ವೇಳೆಗೆ ರಾಯಲ್ ಇಂಡಿಯನ್ ನೇವಿ ನಲ್ಲಿ 25,000ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದರು. 1950 ರ ನಂತರ ರಾಯಲ್ ಎಂಬ ಪದವನ್ನು ತೆಗೆದು ಭಾರತೀಯ ನೌಕಾಪಡೆಯಾಯಿತು ಅಂದಿನಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ
ನೌಕಾಪಡೆಯ ಉದ್ದೇಶ 
        ದೇಶದ ಕಡಲತೀರ ಅಥವಾ ಗಡಿಗಳನ್ನು ರಕ್ಷಿಸುವುದಾಗಿದೆ. ಇತರ ರಕ್ಷಣಾ ಪಡೆಗಳ ಜೊತೆ ಸೇರಿ ಭಾರತದ ಭೂ ಪ್ರದೇಶ ಮತ್ತು ಜಲ ಪ್ರದೇಶದ ಶಾಂತಿ ಕಾಪಾಡುವುದು, ದೇಶದ ಹಿತಾಸಕ್ತಿಗೆ ಅಥವಾ ಆಕ್ರಮಣಗಳಿಗೆ ವಿರುದ್ಧವಾಗಿರುವುದನ್ನು ತಡೆಯುವುದು, ವಿಪತ್ತು ನಿರ್ವಹಣೆ ಜೊತೆಗೆ ಇತರ ದೇಶಗಳ ನಡುವೆ ಸಂಬಂಧ ವೃದ್ಧಿಸುವ ಕೆಲಸವನ್ನು ಮಾಡುತ್ತದೆ.
ನೌಕಾಪಡೆಯ ಸಾಮರ್ಥ್ಯ 
        ಭಾರತೀಯ ನೌಕಾಪಡೆಯಲ್ಲಿ 67252 ಸಿಬ್ಬಂದಿ, 75,000 ಮೀಸಲು ಸಿಬ್ಬಂದಿ, 150 ಶಿಪ್ ಹೊಂದಿದೆ. ಎರಡು ವಿಮಾನ ವಾಹಕಗಳು, ಎಂಟು ಲ್ಯಾಂಡಿಂಗ್ ಶಿಪ್ ಟ್ಯಾಂಕಗಳು, 11 ನಿರ್ದೇಶಿತ ವಿಧ್ವಂಸಕ ಕ್ಷಿಪಣಿಗಳು, 19 ಕಾರ್ವೆಟ್ಗಳು, 19 ಸಾಂಪ್ರದಾಯಿಕ ಜಲಾಂತರ್ಗಾಮಿಗಳು, ಎರಡು ಪರಮಾಣು ದಾಳಿಯ ಜಲಾಂತರ್ಗಾಮಿಗಳು, 30 ಗಸ್ತು ಹಡಗುಗಳು, ಐದು ಫ್ಲೀಟ್ ಟ್ಯಾಂಕರ್ಸ್ಗಳು, ಇನ್ನೂ ಅನೇಕ ನೌಕಾ ವಾಹನಗಳಿವೆ.

* ನೌಕಾಪಡೆಯ ಸರ್ವೋಚ್ಚ ನಾಯಕರು – ರಾಷ್ಟ್ರಪತಿಗಳು
* ನೌಕಾಪಡೆಯ ಮುಖ್ಯಸ್ಥರು – ಅಡ್ಮಿರಲ್ ಆರ್ ಹರಿ ಕುಮಾರ್

* ನೌಕಾಪಡೆಯ ಕಮಾಂಡ್ ಗಳು
  1. Western Naval Command – Mumbai
  2. Eastern Naval Command – Vishakhapatnam
  3. Southern Naval Command – Kochi 
2023 Navy Day theme: “Operation Efficiency, Readiness, and Mission Accomplishment in the Maritime Domain”. 
ReplyForward

Leave a Comment

Your email address will not be published. Required fields are marked *

Scroll to Top