ಐಎಎಸ್, ಕೆಎಎಸ್, ಬ್ಯಾಂಕಿಂಗ್ ಮುಂತಾದ ಪರೀಕ್ಷೆಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ತರಬೇತಿಗೆ – ಅರ್ಜಿ ಆಹ್ವಾನ

       ಕರ್ನಾಟಕದಲ್ಲಿರುವ ಎಸ್‍ಸಿ ಮತ್ತು ಎಸ್‍ಟಿ ಅಭ್ಯರ್ಥಿಗಳಿಗೆ ದೇಶದ ಅತ್ಯುನ್ನತ ತರಬೇತಿ ಸಂಸ್ಥೆಗಳಲ್ಲಿ ಉಚಿತವಾಗಿ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಮುಂತಾದ ವಿವಿಧ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

           2023-24ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯು ಪರೀಕ್ಷಾ ಪೂರ್ವ ತರಬೇತಿಯನ್ನು ತರಬೇತಿ ಕೇಂದ್ರಗಳ ಮೂಲಕ ಎಸ್‍ಸ್ಸಿ ಎಸ್‍ಟಿ ಅಭ್ಯರ್ಥಿಗಳಿಗೆ UPSC/KAS/Group C/ Banking / SSC / RRB /  ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡುವ ಸಲುವಾಗಿ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

      ಅರ್ಹ ಎಸ್‍ಸಿ ಮತ್ತು ಎಸ್‍ಟಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಕೆಇಎ(KEA) ಮೂಲಕ ಪ್ರವೇಶ ಪರೀಕ್ಷೆ ನಡೆಸಿ ಅದರಲ್ಲಿ ಹೆಚ್ಚು ಅಂಕ ಪಡೆದವರನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಂಜೂರಾದ ಶಿಷ್ಯ ವೇತನವನ್ನು ಅವರ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ ಮತ್ತು ತರಬೇತಿಗೆ ತಗಲುವ ಪೂರ್ಣ ವೆಚ್ಚವನ್ನು ಸರ್ಕಾರವೇ ತರಬೇತಿ ಸಂಸ್ಥೆಗಳಿಗೆ ಪಾವತಿ ಮಾಡುತ್ತದೆ. 

ಉಚಿತ ತರಬೇತಿ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಕೆಲವೊಂದು ಸಾಮಾನ್ಯ ಅರ್ಹತೆಗಳಿರಬೇಕು(ಸರ್ಕಾರದ ಅಧಿಸೂಚನೆಯಂತೆ)

ಕರ್ನಾಟಕದ ನಿವಾಸಿಯಾಗಿರಬೇಕು

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು

ದೈಹಿಕ ಅಂಗವಿಕಲತೆ ಹೊಂದಿರುವವರು ಅಂಗವಿಕಲತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ನಿಗಧಿತ ದಿನಾಂಕದೊಳಗೆ ಪಡೆದಿರಬೇಕು.

ಅರ್ಜಿ ಸಲ್ಲಿಸುವವರ ವಾರ್ಷಿಕ ಆದಾಯ 5 ಲಕ್ಷ ಮೀರಿರಬಾರದು.

ಆಯ್ಕೆ ವಿಧಾನ

ಕೆಇಎ (KEA) ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಅದರಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಗಳಿಸಿದ ಅಂಕಗಳ ಮೆರಿಟ್‍ನ ಆಧಾರದ ಮೇಲೆ ಆನ್‍ಲೈನ್ (Online) ಕೌನ್ಸಿಲಿಂಗ್ ಮೂಲಕ ಅಭ್ಯರ್ಥಿಗಳನ್ನು ತರಬೇತಿ ಸಂಸ್ಥೆಗೆ ನಿಯೋಜನೆಯನ್ನು ಸರ್ಕಾರ ಮಾಡುತ್ತದೆ. 

ಸರ್ಕಾರ ನೀಡಲು ಇಚ್ಛಿಸಿರುವ ಕೋರ್ಸ್‍ಗಳ ವಿವರ ಮತ್ತು ತರಬೇತಿ ಅವಧಿ

UPSC – ಪೂರ್ವಭಾವಿ ಪರೀಕ್ಷೆಗೆ 6 ತಿಂಗಳು ಮತ್ತು ಮುಖ್ಯ ಪರೀಕ್ಷೆಗೆ 3 ತಿಂಗಳು ಒಟ್ಟು 9 ತಿಂಗಳ ತರಬೇತಿ.(ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ ಆಯ್ಕೆಯಾದವರಿಗೆ)

KAS/Group C/ Banking / SSC / RRB /ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ – 3 ತಿಂಗಳ ತರಬೇತಿ.

ಅರ್ಜಿ ಸಲ್ಲಿಸುವವರ ವಯಸ್ಸು 18 ರಿಂದ 40 ವರ್ಷವಿರಬೇಕು. ಜೊತೆಗೆ ಪದವಿಯಲ್ಲಿ ಉತ್ತೀರ್ಣರಾಗಿರುವ ಮತ್ತು ಅಂತಿಮ ಸೆಮಿಷ್ಟರ್‍ನಲ್ಲಿ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿದ್ದು, ಆಯ್ಕೆ ಪ್ರಕ್ರಿಯೆ ಹಂತದಲ್ಲಿ ಪದವಿ ವ್ಯಾಸಾಂಗ ಪೂರ್ಣವಾಗಿರುವ ಬಗ್ಗೆ ಅಧಿಕೃತ ದಾಖಲೆಗಳನ್ನು ಹೊಂದಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರ ನೀಡುವ ಶಿಷ್ಯ ವೇತನ(ಮಾಸಿಕವಾಗಿ)

1. UPSC    –  ದೆಹಲಿ                –  10000

                          ಹೈದರಾಬಾದ್  –   8000

                          ಬೆಂಗಳೂರು       –  6000

                          ಇತರ ಸ್ಥಳಗಳು   –  5000

2. KAS  – 5000

3. Group C/ Banking / SSC / RRB  / ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ – 5000

ಈ ಶಿಷ್ಯ ವೇತನ ತರಬೇತಿ ಸಂಸ್ಥೆಗಳು ನೀಡುವ ಬಯೋಮೆಟ್ರಿಕ್ ಹಾಜರಾತಿಯನ್ವಯ ಪಾವತಿಯನ್ನು ಸರ್ಕಾರ ಮಾಡುತ್ತದೆ. ಇದರಲ್ಲಿ ಯಾವುದೇ ವಸತಿ ಸೌಲಭ್ಯವಿರುವುದಿಲ್ಲ.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 29-11-2023

ಉಚಿತ ತರಬೇತಿ ಪಡೆಯಲು ಪರೀಕ್ಷೆಯನ್ನು ತೆಗೆದುಕೊಳ್ಳುವವರಿಗೆ ವಿಶೇಷ ಸೂಚನೆಯೆಂದರೆ – ಒಟ್ಟು ಎಸ್‍ಸಿ 3500 ಮತ್ತು ಎಸ್‍ಟಿ 1350 ಅಭ್ಯರ್ಥಿಗಳನ್ನು ಎಲ್ಲಾ ಪರೀಕ್ಷಾ ತರಬೇತಿಗೆ ಆಯ್ಕೆ ಮಾಡಿಕೊಳ್ಳುತ್ತದೆ. 

ಪರೀಕ್ಷಾ ವಿಧಾನ

UPSC/KASಗೆ 100 ಅಂಕಗಳಿಗೆ 2 ಗಂಟೆಗಳ ಕಾಲಾವಧಿಯ ಪ್ರವೇಶ ಪರೀಕ್ಷೆ – ಪರೀಕ್ಷೆ ಬೆಳಿಗ್ಗಿನ ಸಮಯದಲ್ಲಿ ನಡೆಯುತ್ತದೆ. 

ಉಳಿದ ಪರೀಕ್ಷೆಗಳಿಗೆ 100 ಅಂಕಗಳ 2 ಗಂಟೆಗಳ ಕಾಲಾವಧಿಯ ಪ್ರವೇಶ ಪರೀಕ್ಷೆ – ಪರೀಕ್ಷೆ ಮಧ್ಯಾಹ್ನದ ಸಮಯದಲ್ಲಿ ನಡೆಯುತ್ತದೆ. 

  ವಿಶೇಷ ಮಾಹಿತಿ 

 UPSC/KAS  ತರಬೇತಿಯನ್ನು ಇಲಾಖೆಯಿಂದ ಪಡೆದ ಅಭ್ಯರ್ಥಿಗಳು ಮತ್ತೆ ಅದೇ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲಿ. ಉಳಿದ ಪರೀಕ್ಷಾ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಇದೇ ಸೂಚನೆ ಇನ್ನುಳಿದ ಪರೀಕ್ಷಾ ತರಬೇತಿಗಳ ಅರ್ಜಿಗೂ ಅನ್ವಯವಾಗುತ್ತದೆ. 

ಇಲಾಖೆ ವೆಬ್‍ಸೈಟ್ – www.sw.kar.nic.in

Leave a Comment

Your email address will not be published. Required fields are marked *

Scroll to Top