ಸಾಮಾನ್ಯವಾಗಿ ಯುಪಿಎಸ್ಸಿ ಎಂದೇ ಕರೆಯುವ ಸಂಸ್ಥೆಯು ಕೇಂದ್ರ ಲೋಕ ಸೇವಾ ಆಯೋಗ ಎಂದು ವಿಸ್ತರಿಸಲಾಗುತ್ತೆ. ಇದು ಮುಖ್ಯವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಗುಂಪು “ಎ”ಗಳ ಕೆಲಸಗಳಿಗೆ ಪರೀಕ್ಷೆ ನಡೆಸಿ ನೇಮಕಾತಿ ನಡೆಸುತ್ತದೆ. ಜೊತೆಗೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಕೇಂದ್ರದ ಸಾರ್ವಜನಿಕ ಉದ್ದಿಮೆಗಳು ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳ ಹುದ್ದೆಗಳಿಗೂ ನೇಮಕಾತಿ ಪರೀಕ್ಷೆಯನ್ನು ನಡೆಸುತ್ತದೆ. ಇದರಿಂದ ಯುಪಿಎಸ್ಸಿಯನ್ನು Premier Recruiting Agency ಎಂತಲೂ ಕರೆಯಬಹುದು. ಯುಪಿಎಸ್ಸಿಗೆ ಸಂವಿಧಾನವೇ ಪರೀಕ್ಷೆ ನಡೆಸಿ, ನೇಮಕಾತಿ ಪ್ರಕ್ರಿಯೆ ಮಾಡುವ ಸನ್ನದ್ದನ್ನು ಸಂವಿಧಾನದ ಭಾಗ14 ರಲ್ಲಿ ನೀಡಿದೆ. ಜೊತೆಗೆ ಕೇಂದ್ರದ ಮತ್ತು ಅಖಿಲ ಭಾರತ ಸೇವೆಗಳ ನೇಮಕಾತಿ ಮಾಡಲು ಸಂವಿಧಾನವೇ ಆದೇಶ ನೀಡಿದೆ. ಇದರೊಂದಿಗೆ ಸರ್ಕಾರಗಳು ಕೂಡ ನೇಮಕಾತಿ, ವರ್ಗಾವಣೆ, ಬಡ್ತಿ, ಶಿಸ್ತಿನ ಕ್ರಮ ಜರುಗಿಸುವಲ್ಲಿಯೂ ಇದರ ಜೊತೆ ಸಮಾಲೋಚನೆ ನಡೆಸುತ್ತವೆ. ಆಯೋಗವು ರಾಷ್ಟ್ರಪತಿಗಳಿಗೆ ವರದಿ ನೀಡುತ್ತದೆ. ಅವರ ಮೂಲಕ ಸರ್ಕಾರಕ್ಕೆ ಸಲಹೆ ನೀಡುತ್ತದೆ. ಭಾರತದ ಸರ್ವೋಚ್ಛ ನ್ಯಾಯಾಲಯ, ಎಲೆಕ್ಷನ್ ಕಮಿಷನ್, ಸಿಎಜಿಯಂತೆ ಯುಪಿಎಸ್ಸಿಯು ಕೂಡ ಸ್ವತಂತ್ರ, ಸ್ವಯತ್ತವಾದ ಕೆಲಸಗಳನ್ನು ನಿರ್ವಹಿಸುತ್ತದೆ.
ಯುಪಿಎಸ್ಸಿಯ ಕೇಂದ್ರ ಕಛೇರಿ ದೆಹಲಿಯ ದೋಲ್‍ಪುರ್ ಹೌಸ್‍ನಲ್ಲಿದೆ. ಆಯೋಗವು 1926 ಅಕ್ಟೋಬರ್ 1 ರಂದು ಸ್ಥಾಪನೆಯಾಗಿ 1935ರ ಭಾರತ ಸರ್ಕಾರ ಕಾಯ್ದೆಯಲ್ಲಿ “ಫೆಡರಲ್ ಪಬ್ಲಿಕ್ ಸರ್ವಿಸ್” ಎಂದು ಮರುನಾಮಕರಣ ಪಡೆಯಿತು. ಸ್ವಾತಂತ್ರ ನಂತರ “ಕೇಂದ್ರ ಲೋಕ ಸೇವಾ ಆಯೋಗವಾಗಿ” ಬದಲಾಗಿದೆ.
ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳು
ಕೇಂದ್ರ ಸರ್ಕಾರದ ಸಿಬ್ಬಂಧಿ ಮತ್ತು ತರಭೇತಿ ಸಂಸ್ಥೆಯ ಅಡಿಯಲ್ಲಿ ಆಯೋಗವು ಪರೀಕ್ಷೆ ನಡೆಸಿ ನೇಮಕಾತಿಗೆ ಶಿಫಾರಸ್ಸು ಮಾಡುತ್ತದೆ. ಇದು ನಡೆಸುವ ಪರೀಕ್ಷೆಯು ಪ್ರಪಂಚದ ಮತ್ತು ದೇಶದ ಅತಿ ಕಷ್ಟಕರವಾದ ಪರೀಕ್ಷೆಗಳಲ್ಲೊಂದಾಗಿದ್ದು, ಇದರಲ್ಲಿ ಹುದ್ದೆಯನ್ನು ಪಡೆಯುವ ಶೇಕಡಾವಾರು ನೋಡಿದರೆ 0.1% ನಷ್ಟು ಮಾತ್ರವೇ ಆಗಿರುವುದರಿಂದ ತಿಳಿಯುತ್ತದೆ. ಇದು ಎಷ್ಟು ಕಷ್ಟಕರವಾದ ಪರೀಕ್ಷೆಯಾಗಿರುತ್ತದೆ ಎಂದು.
ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಚಿಕ್ಕ ವಯಸ್ಸಿಲ್ಲೇ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬ ಆಶಾಭಾವನೆಗಳಿರುತ್ತವೆ. ಅದನ್ನು ಸಾಕಾರಗೊಳಿಸಿಕೊಳ್ಳಲು ಬಹು ಮುಖ್ಯವಾದ ಮಾರ್ಗವೇ ಯುಪಿಎಸ್ಸಿ. ಇಲ್ಲಿ ಹುದ್ದೆ ಪಡೆದವರಿಗೆ ಹೆಸರು, ಅಧಿಕಾರ, ವಿಶೇಷ ಸವಲತ್ತುಗಳೆಲ್ಲಾ ದೊರೆಯುವುದರ ಜೊತೆಗೆ ಬಹು ಮುಖ್ಯವಾಗಿ ಅವಕಾಶ ವಂಚಿತ ಸಮುದಾಯಗಳಿಗೆ ಅವಕಾಶ ಒದಗಿಸುವ ಮತ್ತು ದೇಶದ ವೇಗದ ಅಭಿವೃದ್ಧಿಗೆ ನಮ್ಮ ಕೊಡುಗೆಯನ್ನು ಇದರ ಮೂಲಕ ನೀಡುವ ಸದುಪಯೋಗವು ದೊರೆಯುತ್ತದೆ. ಇಂತಹ ಅವಕಾಶವನ್ನು ಪಡೆಯಬೇಕಾದರೆ ಇದಕ್ಕಾಗಿ ಒಂದು ವರ್ಷದ ಪರೀಕ್ಷಾ ತಯಾರಿಯನ್ನು ನಡೆಸಬೇಕಾಗುತ್ತದೆ. ನಂತರ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದಾಗ ಇವೆಲ್ಲಾ ಸಾಧ್ಯವಾಗುತ್ತದೆ.
ಯುಪಿಎಸ್ಸಿಯು ಪ್ರತಿವರ್ಷ ಖಚಿತವಾಗಿ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳಿಗೆ ನೇಮಕಾತಿಗಾಗಿ ಪರೀಕ್ಷೆಗಳನ್ನು ನಡೆಸಿಕೊಂಡು ಬರುತ್ತಿದೆ. ಇದರಲ್ಲಿ ಬಹು ಮುಖ್ಯವಾದುದು “ನಾಗರೀಕ ಸೇವಾ ಪರೀಕ್ಷೆ”. ಇದರಲ್ಲಿ ಅಖಿಲ ಭಾರತ ಸೇವೆಗಳು ಮತ್ತು ಕೇಂದ್ರ ಸೇವೆಗಳನ್ನು ಒಳಗೊಂಡಿದೆ. ಅಖಿಲ ಭಾರತ ಸೇವೆಗಳೆಂದರೆ ಕೇಂದ್ರವೇ ಪರೀಕ್ಷೆ ನಡೆಸಿ, ತರಭೇತಿ ನೀಡಿ ರಾಜ್ಯಗಳಿಗೆ ನಿಯೋಜನೆ ಮಾಡುವ ಸೇವೆಗಳಾಗಿವೆ.
ಅಖಿಲ ಭಾರತ ಸೇವೆಗಳು: 1. ಭಾರತೀಯ ಆಡಳಿತ ಸೇವೆ
2. ಭಾರತೀಯ ಪೋಲಿಸ್ ಸೇವೆ
3. ಭಾರತೀಯ ಅರಣ್ಯ ಸೇವೆ
ಕೇಂದ್ರ ಸೇವೆಗಳು – ಕೇಂದ್ರವೇ ಪರೀಕ್ಷೆ ನಡೆಸಿ, ತರಭೇತಿ ನೀಡಿ ಕೇಂದ್ರ ಸರ್ಕಾರದ ಸೇವೆಗಳಲ್ಲಿ ನಿಯೋಜಿಸಿಕೊಳ್ಳುತ್ತದೆ. ಉದಾಹರಣೆಗೆ – ಭಾರತೀಯ ವಿದೇಶಾಂಗ ಸೇವೆ..ಈ ರೀತಿಯಾಗಿ 24 ರೀತಿಯ ವಿವಿಧ ಇಲಾಖೆಗಳಿಗೆ ಬೇಕಾದ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿ ನೇಮಕಾತಿ ಮಾಡುತ್ತದೆ. ಇಂತಹ ಹುದ್ದೆಗಳಿಗೆ ಆಯ್ಕೆಯಾಗಲು ಆಯೋಗ ನಡೆಸುವ ಪರೀಕ್ಷೆಯೇ ಯುಪಿಎಸ್ಸಿ – ನಾಗರೀಕ ಸೇವಾ ಪರೀಕ್ಷೆಗಳು
ನಾಗರಿಕ ಸೇವಾ ಪರೀಕ್ಷೆಗಳು 3 ಹಂತದಿಂದ ಕೂಡಿರುತ್ತದೆ.
ಅವು 1. ಯುಪಿಎಸ್ಸಿ – ಪೂರ್ವಭಾವಿ ಪರೀಕ್ಷೆ (Pಡಿeಟims)
2. ಯುಪಿಎಸ್ಸಿ – ಮುಖ್ಯ ಪರೀಕ್ಷೆ (ಒಚಿiಟಿs)
3. ಯುಪಿಎಸ್ಸಿ – ವ್ಯಕ್ತಿತ್ವ ಪರೀಕ್ಷೆ(Iಟಿಣeಡಿvieತಿ)
ಪ್ರತಿವರ್ಷ ಯುಪಿಎಸ್ಸಿಯು ತಾನು ನಡೆಸುವ ಪರೀಕ್ಷೆಗಳ ಪರೀಕ್ಷಾ ದಿನಾಂಕಗಳ ಕ್ಯಾಲೆಂಡರ್‍ನ್ನು ಮುಂಚಿತವಾಗಿ ಬಿಡುಗಡೆ ಮಾಡಿ ಅದರಂತೆ ಫೆಬ್ರವರಿಯಲ್ಲಿ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಬಿಡುಗಡೆ ಮಾಡುತ್ತದೆ. ಇದರಲ್ಲಿ ಪರೀಕ್ಷೆಯ ಪೂರ್ಣ ಮಾಹಿತಿಯನ್ನು ಮತ್ತು ಎಷ್ಟು ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತಿದ್ದೇವೆ, ಪರೀಕ್ಷೆಯ ಪಠ್ಯಕ್ರಮ, ಮಾನದಂಡಗಳು, ಅರ್ಹತೆಗಳು ಮುಂತಾದುವೆಲ್ಲವನ್ನು ಒಳಗೊಂಡಿರುತ್ತದೆ. ಅಧಿಸೂಚನೆ ಪ್ರಕಟವಾಗಿ 3 ತಿಂಗಳ ನಂತರ ಅಂದರೆ ಮೇನಲ್ಲಿ ಪೂರ್ವಭಾವಿ ಪರೀಕ್ಷೆಯು ಇದಾದ 3 ತಿಂಗಳಿಗೆ ಮುಖ್ಯಪರೀಕ್ಷೆ ಇದಾದ 2 ಅಥವಾ 3 ತಿಂಗಳಿಗೆ ವ್ಯಕ್ತಿತ್ವ ಪರೀಕ್ಷೆಯನ್ನು ನಡೆಸಿ ಫಲಿತಾಂಶವನ್ನು ನೀಡುವ ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ತರಭೇತಿ ಕೇಂದ್ರಗಳಿಗೆ ತೆರಳುತ್ತಾರೆ.
ಪರೀಕ್ಷಾ ವಿಧಾನಗಳು
• ಪೂರ್ವಭಾವಿ ಪರೀಕ್ಷೆ
ಪೂರ್ವಭಾವಿ ಪರೀಕ್ಷೆಯು ಅಗಾಧ ಸಂಖ್ಯೆಯಲ್ಲಿ ಪರೀಕ್ಷೆಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳಲ್ಲಿ ಜಳ್ಳನ್ನು ತೆಗೆದು ಗಟ್ಟಿ ಕಾಳನ್ನು ಮುಖ್ಯ ಪರೀಕ್ಷೆಗೆ ಕಳುಹಿಸುವ ಹಂತವಾಗಿದೆ.
ಇದರಲ್ಲಿ 2 ಪತ್ರಿಕೆಗಳು ಬರುತ್ತವೆ.
1..GS (ಜಿಎಸ್) – ಸಾಮಾನ್ಯ ಅಧ್ಯಯನ ಪತ್ರಿಕೆ
2.CSAT(ಸಿಸ್ಯಾಟ್) – ನಾಗರಿಕ ಸೇವಾ ಸಾಮಥ್ರ್ಯ ಪರೀಕ್ಷೆ.(Civil Service Aptitude Test) ಇವು 2 ಪತ್ರಿಕೆಗಳಲ್ಲಿ ಜಿಎಸ್ – 100 ಪ್ರಶ್ನೆ ಹೊಂದಿದ್ದು 200 ಅಂಕಗಳನ್ನು ಹೊಂದಿರುತ್ತದೆ. ಎರಡನೇ ಪತ್ರಿಕೆ 80 ಪ್ರಶ್ನೆಗಳನ್ನು ಹೊಂದಿದ್ದು 200 ಅಂಕಗಳನ್ನು ಹೊಂದಿರುತ್ತದೆ. ಇಲ್ಲಿ ಬಹುಮುಖ್ಯವಾದ ಅಂಶವೇನೆಂದರೆ ನಕಾರಾತ್ಮಕ ಅಂಕಗಳನ್ನು ಹೊಂದಿರುತ್ತದೆ. ಇದರಿಂದ ನಮ್ಮ ಆಯ್ಕೆ ಸುಸೂತ್ರವಾಗಬೇಕೆಂದರೆ ಪಕ್ಷಿಯ ನೋಟದಂತೆ(ಃiಡಿಜ ಗಿieತಿ ಡಿeಚಿಜiಟಿg) ನಮ್ಮ ಓದುವಿಕೆ ಇರಬೇಕು ಜೊತೆಗೆ ವಿಷಯದ ಸೂಕ್ಷತೆ ತಿಳಿದಿರಬೇಕು.
A. GS ಸಾಮಾನ್ಯ ಅಧ್ಯಯನದ ಪಠ್ಯಕ್ರಮ
1. ಪ್ರಚಲಿತ ವಿದ್ಯಮಾನಗಳು
2. ಭಾರತೀಯ ಇತಿಹಾಸ
3. ಭಾರತ ಮತ್ತು ಪ್ರಪಂಚದ ಭೂಗೋಳ
4. ಭಾರತದ ರಾಜಕೀಯ ಮತ್ತು ಆಡಳಿತ
5. ಸರ್ಕಾರದ ಯೋಜನೆಗಳು
6. ಸಾಮಾನ್ಯ ವಿಜ್ಞಾನ
7. ಪರಿಸರ ಮತ್ತು ಜೀವ ವೈವಿಧ್ಯತೆ……..
B. CSAT (ಸಿಸ್ಯಾಟ್) ಪತ್ರಿಕೆ – ಇದೊಂದು ಅರ್ಹತಾ(Qualifying in nature) ಪತ್ರಿಕೆಯಾಗಿದ್ದು 33% ಅಂಕಗಳನ್ನು ಪಡೆದರೆ ಸಾಕು.
ಪಠ್ಯಕ್ರಮ
1. Comprehension
2. Communication
Skill
3. Mental Ability
4. Decision Making
and Logical Reasoning
5. Numbers and Data
interpretation
ಕ್ರಮ ಸಂಖ್ಯೆ ಪತ್ರಿಕೆಗಳು ಪ್ರಶ್ನೆಗಳು ಅಂಕಗಳು ನಕಾರಾತ್ಮಕ ಅಂಕಗಳು
1 ಸಾಮಾನ್ಯ ಅಧ್ಯಯನ 100 200 ಎಸ್
2 ಸಿಸ್ಯಾಟ್ 80 200 ಎಸ್
ಮುಖ್ಯ ಪರೀಕ್ಷೆ
ಇದು ಎರಡನೇ ಹಂತವಾಗಿದ್ದು, ಅಭ್ಯರ್ಥಿಗಳ ರ್ಯಾಂಕಿಂಗ್ ನಿರ್ಧರಿಸುವ ಹಂತವೂ ಆಗಿದೆ. ಜೊತೆಗೆ ಅಭ್ಯರ್ಥಿಗಳ ವಿಷಯ ಜ್ಞಾನ, ವಿಷಯದ ಸ್ಪಷ್ಟತೆ, ವಿಷಯದ ವಿಶ್ಲೇಷಣೆಯನ್ನು ಬಯಸುತ್ತದೆ. ಇಲ್ಲಿ ಒಟ್ಟು 9 ಪತ್ರಿಕೆಗಳಿದ್ದು ಬರವಣಿಗೆಯಲ್ಲಿ ಪರೀಕ್ಷೆಯನ್ನು ಎದುರಿಸಬೇಕು.
ಪತ್ರಿಕೆಗಳು
ಕಡ್ಡಾಯ ಪತ್ರಿಕೆಗಳು – ಇಂಗ್ಲೀಷ್
– ಭಾರತೀಯ ಭಾಷೆಗಳಲ್ಲಿ ಒಂದು ಭಾಷಾ ಪತ್ರಿಕೆ
ಪತ್ರಿಕೆ 1 – ಪ್ರಬಂಧ
ಪತ್ರಿಕೆ 2 – ಸಾಮಾನ್ಯ ಅಧ್ಯಯನ 1
ಪತ್ರಿಕೆ 3 – ಸಾಮಾನ್ಯ ಅಧ್ಯಯನ 2
ಪತ್ರಿಕೆ 4 – ಸಾಮಾನ್ಯ ಅಧ್ಯಯನ 3
ಪತ್ರಿಕೆ 5 – ಸಾಮಾನ್ಯ ಅಧ್ಯಯನ 4
ಪತ್ರಿಕೆ 6 – ಐಚ್ಛಿಕ ವಿಷಯ ಪತ್ರಿಕೆ – 1
ಪತ್ರಿಕೆ 7 – ಐಚ್ಛಿಕ ವಿಷಯ ಪತ್ರಿಕೆ – 2
ಕಡ್ಡಾಯ ಪತ್ರಿಕೆಗಳು
ಇಲ್ಲಿ 2 ಪತ್ರಿಕೆಗಳಿಗೆ ಉತ್ತರಿಸಬೇಕು.
ಅವು – ಇಂಗ್ಲೀಷ್
– ಭಾರತೀಯ ಭಾಷೆಗಳಲ್ಲೊಂದು ಪತ್ರಿಕೆ.
ಎರಡು ಪತ್ರಿಕೆಗಳು ತಲಾ 300 ಅಂಕಗಳನ್ನು ಹೊಂದಿರುತ್ತವೆ. 25% ನಷ್ಟು ಅಂಕಗಳನ್ನು ಪ್ರತಿ ಪತ್ರಿಕೆಯಲ್ಲೂ ಪಡೆಯಬೇಕು. ಬಹುಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ ಇವು ಅರ್ಹತಾ ಪತ್ರಿಕೆಗಳಾಗಿರುತ್ತವೆ ಮತ್ತು ರ್ಯಾಂಕಿಂಗ್‍ಗೆ ಇದರಲ್ಲಿ ಬಂದಿರುವ ಅಂಕಗಳನ್ನು ಪರಿಗಣಿಸುವುದಿಲ್ಲ.
ಅಂಕಗಳನ್ನು ಪರಿಗಣಿಸುವ ಪತ್ರಿಕೆಗಳು – 7
• ಪತ್ರಿಕೆ – 1 – ಪ್ರಬಂಧ ಬರವಣಿಗೆ
ಇದು 2 ಭಾಗಗಳನ್ನು ಹೊಂದಿರುತ್ತದೆ. ಸೈದ್ಧಾಂತಿಕವಾದ ಮತ್ತು ಪ್ರಚಲಿತ ವಿದ್ಯಮಾನ ಮೇಲಿನ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಒಟ್ಟು 250 ಅಂಕಗಳಿಗೆ 3 ಗಂಟೆಗಳ ಕಾಲಾವಧಿಯಲ್ಲಿ ಭಾಗ – 1 ಮತ್ತು ಭಾಗ – 2 ಎಂದು ವಿಭಾಗಿಸಲಾಗಿರುತ್ತೆ ಪ್ರತಿ ಭಾಗಕ್ಕೂ 125 ಅಂಕಗಳ ಹಂಚಿಕೆಯಾಗಿರುತ್ತದೆ. ಪ್ರಬಂಧ ಪತ್ರಿಕೆಯು ಅಭ್ಯರ್ಥಿಗಳ ರ್ಯಾಂಕಿಂಗ್‍ನಲ್ಲಿ ಮುಖ್ಯ ಪಾತ್ರ ವಹಿಸುವ ಪತ್ರಿಕೆಯಾಗಿರುತ್ತದೆ.
• ಪತ್ರಿಕೆ – 2 ಸಾಮಾನ್ಯ ಅಧ್ಯಯನ 1
ಈ ಪತ್ರಿಕೆಯು “ಭಾರತೀಯ ಪರಂಪರೆ ಮತ್ತು ಸಂಸ್ಕøತಿ, ಇತಿಹಾಸ, ಪ್ರಪಂಚದ ಭೂಗೋಳ ಮತ್ತು ಸಮಾಜ” ಎಂಬ ವಿಷಯಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಒಟ್ಟು 250 ಅಂಕಗಳಿಗೆ 3 ಗಂಟೆಗಳ ಕಾಲಾವಧಿಯಲ್ಲಿ ಪರೀಕ್ಷೆಯನ್ನು ಬರೆಯಬೇಕು ಜೊತೆಗೆ ಪ್ರಮುಖವಾಗಿ ಭಾರತವನ್ನು ಪರಿಗಣಿಸಿ ಓದಬೇಕು.
• ಪತ್ರಿಕೆ – 3 ಸಾಮಾನ್ಯ ಅಧ್ಯಯನ 2
ಇದರಲ್ಲಿ “ಆಡಳಿತ, ಸಂವಿಧಾನ, ರಾಜ್ಯಾಡಳಿತ, ಸಾಮಾಜಿಕ ನ್ಯಾಯ ಮತ್ತು ಅಂತರಾಷ್ಟ್ರೀಯ ಸಂಬಂಧಗಳನು”್ನ ಒಳಗೊಂಡಿರುವ ಪತ್ರಿಕೆಯಾಗಿರುತ್ತದೆ. ಒಟ್ಟು 250 ಅಂಕಗಳಿಗೆ 3 ಗಂಟೆಗಳ ಕಾಲಾವಧಿಯಲ್ಲಿ ಪರೀಕ್ಷೆಯನ್ನು ಬರೆಯಬೇಕು.
• ಪತ್ರಿಕೆ – 4 ಸಾಮಾನ್ಯ ಅಧ್ಯಯನ 3
ಇದರಲ್ಲಿ “ತಂತ್ರಜ್ಞಾನ, ಆರ್ಥಿಕಾಭಿವೃದ್ಧಿ, ಜೀವವೈವಿಧ್ಯತೆ, ಪರಿಸರ, ರಕ್ಷಣೆ ಮತ್ತು ವಿಪತ್ತು ನಿರ್ವಹಣೆ” ಎಂಬ ವಿಷಯಗಳನ್ನು ಒಳಗೊಂಡಿದೆ. ಒಟ್ಟು 250 ಅಂಕಗಳಿಗೆ 3 ಗಂಟೆಗಳ ಕಾಲಾವಧಿಯಲ್ಲಿ ಪರೀಕ್ಷೆಯನ್ನು ಬರೆಯಬೇಕು.
• ಪತ್ರಿಕೆ – 5 ಸಾಮಾನ್ಯ ಅಧ್ಯಯನ 4
ಇದರಲ್ಲಿ “ನೈತಿಕತೆ, ಸಮಗ್ರತೆ ಮತ್ತು ಅಭಿಕ್ಷಮತೆ” ಎಂಬ ವಿಷಯಗಳನ್ನು ಒಳಗೊಂಡಿದ್ದು, ಅಭ್ಯರ್ಥಿಯ ನೈತಿಕತೆಯನ್ನು ತಿಳಿಯಲು ಸಾಧ್ಯವಾಗುತ್ತದೆ. ಒಟ್ಟು 250 ಅಂಕಗಳಿಗೆ 3 ಗಂಟೆಗಳ ಕಾಲಾವಧಿಯಲ್ಲಿ ಪರೀಕ್ಷೆಯನ್ನು ಬರೆಯಬೇಕು. ಈ ಪತ್ರಿಕೆ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಕೊಳ್ಳುವಲ್ಲಿಯೂ ಹೆಚ್ಚು ಸಹಾಯಕವಾಗಿರುತ್ತದೆ.
ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯಗಳು
ಇಲ್ಲಿ 25ಕ್ಕಿಂತ ಹೆಚ್ಚಿನ ವಿಷಯಗಳಿದ್ದು ಅದರಲ್ಲಿ ನಿಮಗೆ ಇಷ್ಟವಾದ, ಆಸಕ್ತಿಯನ್ನು ಹುಟ್ಟಿಸುವ, ಹಿಂದಿನ ವರ್ಷಗಳಲ್ಲಿ ಹೆಚ್ಚಿನ ಅಂಕಗಳು ಬಂದಿರುವ, ಟಾಪರ್ಸ್ ಫೀಡ್‍ಬ್ಯಾಕ್ ಪಡೆದು ಒಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ ಸಾಹಿತ್ಯವನ್ನು ಐಚ್ಛಿಕವಾಗಿ ತೆಗೆದುಕೊಳ್ಳಲು ಇಚ್ಛಿಸುವವರಿಗೂ ಅವಕಾಶವಿದೆ. ಇಲ್ಲೂ 23 ಭಾಷಾ ಸಾಹಿತ್ಯಗಳಿವೆ ಅವುಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಂಡು ಉತ್ತಮ ಅಂಕ ಪಡೆಯಬಹುದು. ಐಚ್ಛಿಕ ವಿಷಯವು 500 ಅಂಕಗಳನ್ನು ಒಳಗೊಂಡಿದೆ. ಒಂದೆ ವಿಷಯವನ್ನು ಎರಡು ಪತ್ರಿಕೆಗಳಾಗಿ ವಿಭಾಗಿಸಲಾಗಿ ತಲಾ 250 ಅಂಕಗಳ ವಿಭಾಗವನ್ನು ಮಾಡಲಾಗಿದೆ.
• ಪತ್ರಿಕೆ – 6 ಐಚ್ಛಿಕ ವಿಷಯ ಪತ್ರಿಕೆ – 1
ನೀವು ಆಯ್ಕೆ ಮಾಡಿಕೊಂಡಿರುವ ವಿಷಯದಲ್ಲಿನ ಪತ್ರಿಕೆ 1. 250 ಅಂಕಗಳಿಗೆ 3 ಗಂಟೆಗಳ ಕಾಲಾವಧಿಯಲ್ಲಿ ಪರೀಕ್ಷೆಯನ್ನು ಬರೆಯಬೇಕು.
• ಪತ್ರಿಕೆ – 7 ಐಚ್ಛಿಕ ವಿಷಯ ಪತ್ರಿಕೆ – 2
ನೀವು ಆಯ್ಕೆ ಮಾಡಿಕೊಂಡಿರುವ ವಿಷಯದಲ್ಲಿನ ಪತ್ರಿಕೆ 2. 250 ಅಂಕಗಳಿಗೆ 3 ಗಂಟೆಗಳ ಕಾಲಾವಧಿಯಲ್ಲಿ ಪರೀಕ್ಷೆಯನ್ನು ಬರೆಯಬೇಕು.
ಒಟ್ಟು 7 ಪತ್ರಿಕೆಗಳಿಂದ ನಮಗೆ ರ್ಯಾಂಕಿಂಗ್ ನೀಡಲು ಇಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸಲಾಗುತ್ತದೆ. ನಮಗೆ ಅತ್ಯುತ್ತಮ ರ್ಯಾಂಕ್ ಬರುವಲ್ಲಿ ಐಚ್ಛಿಕ ವಿಷಯಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಇದರಿಂದಾಗಿ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಜೊತೆಗೆ ಆಸಕ್ತಿ ಇರುವ ವಿಷಯಗಳನ್ನು ಆರಿಸಿಕೊಂಡರೆ ನಮಗೂ ಒಂದು ಸ್ಥಾನ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.
ಏಳು ಪತ್ರಿಕೆಗಳಿಂದ ಒಟ್ಟು 1750 ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ. ಇಲ್ಲಿ ಬಹುಮುಖ್ಯವಾದ ವಿಷಯವೇನೆಂದರೆ ಮೂರು ಗಂಟೆಗಳ ಕಾಲಾವಧಿಯಲ್ಲಿ 250 ಅಂಕಗಳಿಗೆ ಪರೀಕ್ಷೆ ಬರೆಯುವುದೇ ಕ್ಲಿಷ್ಟಕರ. ಆದರೆ ಅಭ್ಯಾಸ ನಿರತರಾದರೆ ಕ್ಲಿಷ್ಟಕರವೂ ಹೂವಿನ ಪಕಳೆಯಾಗಿರುತ್ತದೆ.
ಸಂದರ್ಶನ
ನಾಗರಿಕ ಸೇವಾ ಪರೀಕ್ಷೆಯ ಕೊನೆಯ ಘಟ್ಟ – ಸಂದರ್ಶನ. ಇಲ್ಲಿ ನಮ್ಮ ವ್ಯಕ್ತಿತ್ವ ಅನಾವರಣವಾಗುತ್ತದೆ. ಇಲ್ಲಿ 275 ಅಂಕಗಳಿಗೆ ಸಂದರ್ಶನವಿರುತ್ತದೆ. ನಮ್ಮ ವ್ಯಕ್ತಿತ್ವ ಮತ್ತು ನಮ್ಮ ವಿಷಯದ ಸ್ಪಷ್ಟತೆ ಇಲ್ಲಿನ ಮಾನದಂಡವಾಗಿರುತ್ತದೆ.
ಕ್ರಮ ಸಂಖ್ಯೆ ಪತ್ರಿಕೆಗಳು ಅಂಕಗಳು ಸಮಯ ಪರೀಕ್ಷಾ ವಿಧಾನ ಕ್ರಮ
1 ಪ್ರಬಂಧ 250 3 ಗಂಟೆಗಳು ಬರವಣಿಗೆ
2 ಸಾಮಾನ್ಯ ಅಧ್ಯಯನ – 1 250 3 ಗಂಟೆಗಳು ಬರವಣಿಗೆ
3 ಸಾಮಾನ್ಯ ಅಧ್ಯಯನ – 2 250 3 ಗಂಟೆಗಳು ಬರವಣಿಗೆ
4 ಸಾಮಾನ್ಯ ಅಧ್ಯಯನ – 3 250 3 ಗಂಟೆಗಳು ಬರವಣಿಗೆ
5 ಸಾಮಾನ್ಯ ಅಧ್ಯಯನ – 4 250 3 ಗಂಟೆಗಳು ಬರವಣಿಗೆ
6 ಐಚ್ಛಿಕ ಪತ್ರಿಕೆ – 1 250 3 ಗಂಟೆಗಳು ಬರವಣಿಗೆ
7 ಐಚ್ಛಿಕ ಪತ್ರಿಕೆ – 2 250 3 ಗಂಟೆಗಳು ಬರವಣಿಗೆ
ಒಟ್ಟು 1750
1 ಸಂದರ್ಶನ 275
ಒಟ್ಟು 2025
ಈ ಒಟ್ಟು ಅಂಕದಲ್ಲಿ ಅರ್ಧದಷ್ಟು ಅಂಕವನ್ನು ಪಡೆದುಕೊಂಡರೆ ಅತ್ಯುನ್ನತವಾದ ರ್ಯಾಂಕ್ ಪಡೆಯುವ ಮೂಲಕ ದೇಶದ ಸೇವೆಗೆ ನಾವು ತೆರಳಬಹುದು. ಇದನ್ನು ಸಾಧಿಸಲು ನಮಗಿರುವ ಒಂದೇ ಮಾರ್ಗವೆಂದರೆ ಸತತವಾದ ಪ್ರಯತ್ನವಷ್ಟೆ.