ಕಾಳಿನದಿ #Kali River

Kali River
Kali River

Kali River . ದೇಶದಲ್ಲಿ ಹೆಚ್ಚಿನ ನದಿ ಮೂಲಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವು ಒಂದು. ಇಲ್ಲಿರುವ ನದಿಗಳು ಋತುಕಾಲಿಕವಾಗಿದ್ದು ಅಂದರೆ ಮಳೆಯಾಶ್ರಿತ ದಿಗಳಾಗಿವೆ. ರಾಜ್ಯದ ಬಹುತೇಕ ನದಿಗಳ ಉಗಮ ಸ್ಥಳವು ಪಶ್ಚಿಮ ಘಟ್ಟವಾಗಿದ್ದು, ಜೊತೆಗೆ ನದಿಗಳ ವಭಜಕವಾಗಿಯೂ ಕೆಲಸ ಮಾಡುವ ಜೊತೆಗೆ ಇಲ್ಲಿ ಹುಟ್ಟುವ ನದಿಗಳು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿ ಸೇರುತ್ತವೆ.  ಉದಾಹರಣೆಗೆ ಕೃಷ್ಣ, ಕಾವೇರಿ. ಹಾಗೆಯೇ ಪಶ್ಚಿಮಾಭಿಮುಖವಾಗಿ ಹರಿಯುವ ಹಲವು ನದಿಗಳು ರಾಜ್ಯದಲ್ಲಿವೆ. ಉದಾಹರಣೆಗೆ ಶರಾವತಿ, ಕಾಳಿ. ನಾಡಿನಲ್ಲಿ ಹರಿಯುವ ನದಿಗಳು ರಾಜ್ಯದ ಜನರ ಜೀವಸೆಲೆಯಾಗಿವೆ. ಹಾಗೆಯೇ ಕಾಳಿ ನದಿಯೂ ಕೂಡ ಆಗಿದೆ.

Kali River ಕಾಳಿ ನದಿಯ ಮೂಲ

ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯ,ಜೋಯಿಡಾ ತಾಲೂಕಿನ,, ಕುಶಾವಲಿ ಗ್ರಾಮದಲ್ಲಿ ಹುಟ್ಟುವ ಮೂಲಕ ನದಿ ವ್ಯೂಹವನ್ನು ರಚಿಸಿ ಅರಬ್ಬಿಸಮುದ್ರವನ್ನು ಸೇರುತ್ತದೆ.  ಕಾಳಿ ನದಿಗೆ ಸೂಪಾ ಅಣೆಕಟ್ಟನ್ನು ಕಟ್ಟಲಾಗಿದೆ ಇದಕ್ಕೆ ಪಂಡ್ರಿ ನದಿಯೊಂದಿಗೆ ಅಣೆಕಟ್ಟನ್ನು ಸೇರುತ್ತದೆ. ನಂತರ ಇಲ್ಲಿಂದ ಹರಿದು ದಕ್ಷಿಣ ದಾಂಡೇಲಿ ಮೂಲಕ ಮುಂದೆ ಹರಿದು ಬೊಮ್ಮನಹಳ್ಳಿ ಅಣೆಕಟ್ಟನ್ನು ಸೇರುತ್ತದೆ. ಹಾಗೆಯೇ ಮುಂದೆ ಹರಿದು ಹೋಗುವಾಗ ತಟ್ಟಿಹಳ್ಳ ನದಿ ಸೇರುತ್ತದೆ. ಮುಂದೆ ಸಾತೋಡಿ ಜಲಪಾತದಲ್ಲಿ ಕೊನೆಗೊಳ್ಳುವ ಕಮರಿಯ ಮೂಲಕ ಹರಿದು ಕನೇರಿ ನದಿ ಬಂದು ಇದಕ್ಕೆ ಸೇರುವ ಮೂಲಕ ಕೊಡಸಳ್ಳಿ ಅಣೆಕಟ್ಟನ್ನು ಸೇರುತ್ತದೆ. ನಂತರ ಮುಂದೆ ಹರಿಯುವಾಗ ವುಕ್ಕಿ ಹಳ್ಳ ಸೇರಿ ಕದ್ರ ಅಣೆಕಟ್ಟನ್ನು ಸೇರುತ್ತದೆ. ಇಲ್ಲಿಂದ ಮುಂದೆ ಹರಿದು ಕಾರವಾರದ ಮೂಲಕ  ಒಟ್ಟು 184 ಕಿ.ಮೀನ್ನು ಹರಿದು ಬಂದು ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಸೂಪ ಅಣೆಕಟ್ಟು 

ಇದು ಕಾಳಿ ನದಿಯ ಮೇಲೆ ನಿರ್ಮಿಸಿರುವ ಅಣೆಕಟ್ಟು. ಇದು ಉತ್ತರ ಕನ್ನಡ ಜಿಲ್ಲೆ, ಜೋಯಿಡಾ ತಾಲೂಕಿನ ಸೂಪಾದಲ್ಲಿ ನಿರ್ಮಿಸಲಾಗಿದೆ. ಈ ಅಣೆಕಟ್ಟನ್ನು ವಿದ್ಯುತ್ ಉತ್ಪಾದನೆಗಾಗಿಯೇ ನಿರ್ಮಿಸಲಾಗಿದೆ(Dedicated to Power generation). ಇದನ್ನು ಕಟ್ಟಲು 1973ರಲ್ಲಿ ಪ್ರಾರಂಭಿಸಿ, 1987ರಲ್ಲಿ ಪೂರ್ಣಗೊಳಿಸಲಾಯಿತು. 1985ರಲ್ಲಿ ಇದರ ಉದ್ಘಾಟನೆಯಾಗಿ ನಾಡಿಗೆ ಬೇಕಾದ ವಿದ್ಯುತ್ ಒದಗಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆ ಎಂದು ಹೇಳುವಲ್ಲಿ ಅತಿಶಯೋಕ್ತಿ ಇಲ್ಲ.  ಇದರಲ್ಲಿ 50 ಮೆಗಾವ್ಯಾಟ್ ನಷ್ಟು ವಿದ್ಯುತ್ ಉತ್ಪಾದಿಸಿ ರಾಜ್ಯದ ವಿವಿಧ ಭಾಗಗಳಿಗೆ ಸರಬರಾಜು ಮಾಡಲಾಗುತ್ತದೆ. ಇದರ ಉಸ್ತುವಾರಿಯನ್ನು KPCL (Karnataka Power Corporation Limited) ನೋಡಿಕೊಳ್ಳುತ್ತಿದೆ. ಇದರ ಮತ್ತೊಂದು ಪ್ರಖ್ಯಾತಿ ಎಂದರೆ ರಜ್ಯದ 2ನೇ ಅತಿದೊಡ್ಡ ಅಣೆಕಟ್ಟು ಕೂಡ ಇದೇ ಆಗಿದೆ.

ಕಾಳಿ ನದಿಯ ಮಲಿನತೆ

ಕಾಳಿ ನದಿಯು ದಾಂಡೇಲಿ ಮೂಲಕ ಹರಿಯುವುದರೊಂದಿಗೆ ಅಲ್ಲಿ ನಿರ್ಮಾಣವಾಗಿರುವ ಕಾಗದ(Paper industry)ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯಯುಕ್ತ ನೀರು ನೇರವಾಗಿ ನದಿಯ ಒಡಲಿಗೆ ಸೇರುತ್ತದೆ. ಅಕ್ರಮ ಗಣಿಗಾರಿಕೆ ಮತ್ತೊಂದು ನದಿ ಮಲಿನಗೊಳ್ಳಲು ಕಾರಣವಾಗಿದೆ. ಹಾಗೆಯೇ ಪೆಟ್ರೋಲಿಯಂ ಕಂಪನಿಗಳು ಹೊರಬಿಡುವ ಪಾದರಸದಂತಹ ವಿಷಕಾರಿ ತ್ಯಾಜ್ಯಗಳು ನೀರಿನ ಮಲಿನತೆಗೆ ಕಾರಣವಾಗಿವೆ.

ಕಾಳಿ ನದಿಯ ಪ್ರಖ್ಯಾತಿ

ಕಾಳಿ ನದಿಯು ತನ್ನ ಹರಿವಿನ ಮೂಲಕ ಪ್ರಖ್ಯಾತಿ ಪಡೆದಿದೆ. ಅದರಲ್ಲಿ ಮುಖ್ಯವಾಗಿ ಸಾಹಸ ಪ್ರಧಾನ ಚಟುವಟಿಕೆಗಳಿಗೇ ಪ್ರಖ್ಯಾತಿ ಪಡೆದಿರುವುದು. ರಾಜ್ಯದ ಬೇರಾವ ನದಿಗಳಲ್ಲೂ ಇಲ್ಲಿ ನಡೆಯದಷ್ಟು ಸಾಹಸ ಪ್ರಧಾನ ಚಟುವಟಿಕೆಗಳು ನಡೆಯಲ್ಲ. ಕಾಳಿ ನದಿಯು ಕಾಳಿ ಹುಲಿ ಸಂರಕ್ಷಿತ ಪ್ರದೇಶ, Wildlife Sanctuary ಬಳಿಯಲ್ಲಿಯೇ ಇದೆ. ಇದರೊಂದಿಗೆ ಸಫಾರಿಯನ್ನು ಕೂಡ ಸಂರಕ್ಷಿತ ಪ್ರದೇಶದಲ್ಲಿ ಮಾಡಬಹುದು. ಇಂತಹ ಕಾಳಿ ನದಿಯ ದಡದಲ್ಲಿ ದಾಂಡೇಲಿ ಬರುತ್ತದೆ. ಇದು ಜನಪ್ರಿಯ ಪ್ರವಾಸಿ ತಾಣವನ್ನಾಗಿ ಕಾಳಿ ನದಿ ಮಾರ್ಪಡಿಸಿದೆ. ಅದರಲ್ಲೂ ಮುಖ್ಯವಾಗಿ Booting, River Rafting, Kayaking, River crossing, Grappling, Zip line, ಮತ್ತು ಇನ್ನಿತರ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

Follow this link: https://youtube.com/@arvivlogsupsc?si=hgYvmQsKGpsnUr_d

Dandeli River Rafting 

ದಾಂಡೇಲಿ ಎಂದರೆ ಕಾಳಿ ನದಿ, ಕಾಳಿ ನದಿ ಎಂದರೆ ನಮಗೆ ವೇಗವಾಗಿ ನೆನಪಾಗುವುದು River Rafting. ನೀವು ಮತ್ತು ನಿಮ್ಮ ಸಹವರ್ತಿಗಳು ಕಾಳಿ ನದಿಯ ಮೇಲೆ ನಡೆಸುವ Rafting ಒಂದು ರೀತಿಯ ಯುದ್ಧದಂತೆ ಭಾಸವಾಗುತ್ತದೆ. ನೀವು ಕುಳಿತಿರುವ ಬೋಟ್ ಅಡಿಯಲ್ಲಿ ಕಾಳಿ ಹರಿಯುತ್ತಿರುತ್ತಾಳೆ. ಅವಳು ಕಲ್ಲು ಬಂಡೆಗಳ ನಡುವೆ ಹರಿಯುವಾಗ ಅದನ್ನು ರಾಪಿಡ್ ಎಂದು ಕರೆಯಲಾಗುತ್ತೆ. ಈ Rapidಗಳಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೆ Rafting ಹೆಚ್ಚಿನ ಆನಂದ ನೀಡುತ್ತದೆ. ಹಾಗೆಯೇ ಎಚ್ಚರಿಕೆಯನ್ನು ನೀಡುತ್ತದೆ.

ಕಾಳಿ ನದಿಯು ಬಂಡೆಗಳ ನಡುವೆ ಹರಿಯುವಾಗ ರಭಸದಿಂದ ಮುನ್ನುಗ್ಗುತ್ತೆ. ಇದರ ನಡುವೆ ನಮ್ಮ ಬೋಟ್ ಗಳು ಸಾಗುವಾಗ ನದಿಯ ನೀರು ಮೇಲೇರಿ ಕೆಳಗಿಳಿದಂತೆ ನಮ್ಮ ಬೋಟ್ ಅದೇ ರೀತಿ ಮೇಲೇರಿ ಕೆಳಗಿಳಿಯುತ್ತದೆ. ಕಲವು ಬಾರಿ ರಭಸವಾಗಿ ಹರಿಯುವ ನೀರನ್ನು ಬೇಧಿಸಿಕೊಂಡು ಬೋಟ್ ಮುಂದುವರಿಯುವಾಗ ಎದೆ ಝಲ್ಲೆನಿಸುತ್ತದೆ. ರಭಸದಲ್ಲಿ ಮುಂದುವರಿಯುವಾಗ ಎದೆ ಝಲ್ಲೆನಿಸಿದರೂ ಅದರಲ್ಲಿ ಸಿಗುವ ರೋಮಾಂಚನದ ಅನುಭವವನ್ನು ಪಡೆದುಕೊಳ್ಳಲು ಮುಂದಾಗಿ ಒಂದು ಕ್ಷಣ ಮೈಮರೆತರೆ ಬೋಟ್ ನಿಂದ ಕೆಳಗೆ ಬೀಳಬೇಕಾಗುತ್ತದೆ. ಇದರ ಎಚ್ಚರವು ನಮಗಿರಬೇಕು. ಹೀಗೆ ಕಾಳಿ ನದಿಯಲ್ಲಿ Rafting ಮಾಡಬೇಕೆಂದರೆ ಅದ್ಭುತ Rafting ಅನುಭವ ಪಡೆಯಬೇಕೆಂದರೆ ಒಂದು Rapid package ಗಿಂತ 5 Rapid package ತೆಗೆದುಕೊಂಡು ಹೋದರೆ ಜೀವನದಲ್ಲಿ ಮರೆಯಲಾರದ ಅನುಭವವಾಗಿ ಸದಾ ನಿಮ್ಮ ನೆನಪಿನಲ್ಲುಳಿಯುತ್ತದೆ.

Leave a Comment

Your email address will not be published. Required fields are marked *

Scroll to Top