

Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ.
#Kannada Vyakarana – ಕೃದಂತಗಳು ಮತ್ತು ತದ್ದಿತಾಂತಗಳು
ಇದನ್ನು ತಿಳಿಯುವ ಮೊದಲು ನಾವು ನಾಮಪದವನ್ನು ತಿಳಿಯಬೇಕು. ನಾಮಪದ ಎಂದರೆ ಹೆಸರನ್ನು ಸೂಚಿಸುವ ಪದಗಳಿಗೆ ನಾಮಪದಗಳೆನ್ನುವರು, ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಒಂದು ಸ್ಥಳ, ವ್ಯಕ್ತಿ, ವಸ್ತು, ಪ್ರಾಣಿ, ಸಸ್ಯದ ಹೆಸರನ್ನು ಸೂಚಿಸುವ ಪದಗಳಿಗೆ ನಾಮಪದಗಳೆನ್ನುತ್ತಾರೆ.
ನಾಮಪದದಲ್ಲಿ ೨ ವಿಧಗಳಿವೆ
೧. ಸಹಜ ನಾಮಪದ – ಸಹಜವಾಗಿಯೇ ಬಂದಿರುವ ನಾಮಪದಗಳಾಗಿರುತ್ತವೆ.
ಉದಾ- ಕನ್ನಡ, ಮರಠಿ, ರಾಧ, ಸಂಗೀತ
೨. ಸಾಧಿತ ನಾಮಪದ – ನಾಮಪ್ರಕೃತಿಗಳಿಗೆ ಮತ್ತು ಧಾತುಗಳಿಗೆ ಕೆಲವು ಪ್ರತ್ಯಯಗಳು ಸೇರಿ ರಚನೆಯಾಗುವ ಪದಗಳಾಗಿವೆ.
ಉದಾ- ಕನ್ನಡಿಗ, ರಾಧೆಗಿಂತ.
#Kannada Vyakarana – ಕೃದಂತಗಳು
ಕೃತ್ ಪ್ರತ್ಯಯ(ಧಾತುವಿನ) ಮೂಲಕ ನಾಮಪದವಾದರೆ ಅದನ್ನು ಕೃದಂತ ಎನ್ನುವರು.
ಉದಾ- ಕೃತ್ + ಕ್ರಿಯಾಪ್ರಕೃತಿ= ಕೃದಂತಪದ
ನೋಡು + ಟ = ನೋಟ
ಧಾತುಗಳಿಗೆ ಕೃತ್ ಪ್ರತ್ಯಯಗಳು ಸೇರಿ ಆಗುವ ನಾಮಪದಗಳಿಗೆ ಕೃದಂತಗಳು ಎಂದು ಕರೆಯಲಾಗುತ್ತದೆ. ಜೊತೆಗೆ ಇವು ನಡೆಯುತ್ತಿರುವ ಕ್ರಿಯೆಯನ್ನು ಪೂರ್ಣಗೊಳಿಸಲಲ್ಲ ಬದಲಾಗಿ ಅವು ಕ್ರಿಯೆಗೆ ಪೂರಕವಾಗಿರುತ್ತವೆ.
ಕೃದಂತ. – ಕ್ರಿಯಾಪದವಾಗುವುದು.
ಧಾತು + ಅಖ್ಯಾತ ಪ್ರತ್ಯಯ + ಕಾಲಸೂಚಕ ಪ್ರತ್ಯಯ = ಕ್ರಿಯಾ ಪದ
ಓದು + ವ + ಅನು = ಓದುವನು
ಮಾಡು + ವ + ಅನು = ಮಾಡುವನು
ತಿನ್ನು + ವ + ಅನು = ತಿನ್ನುವನು
ಕೃದಂತ – ಕೃದಂತ ಪದವಾಗುವುದು
ಧಾತು + ಕಾಲಸೂಚಕ ಪ್ರತ್ಯಯ + ಕೃತ್ ಪ್ರತ್ಯಯ = ಕೃದಂತ ಪದ
ಓದು + ವ + ಅ = ಓದುವ
ಮಾಡು + ವ + ಅ = ಮಾಡುವ
ಸಾಧಿತವನಾಮಪದಗಳನ್ನು ರಚಿಸುವಾಗ ಕೆಲವು ಧಾತುಗಳಿಗೆ ಅ, ಟ, ಪು, ತ, ಗೆ, ಉತ್ತ, ಅಲಿಕ್ಕೆ ಮೊದಲಾದ ಕೃತ್ ಪ್ರತ್ಯಯಗಳು ಸೇರಿ ಆಗುವ ನಾಮಪದಗಳಿಗೆ ಕರದಂತಗಳೆನ್ನುವರು.
ಕೃದಂತದಲ್ಲಿ ೩ ವಿಧಗಳಿವೆ
೧. ಕೃದಂತನಾಮ
ಧಾತುಗಳಿಗೆ ಕರ್ತೃ ಮೊದಲಾದ ಅರ್ಥದಲ್ಲಿ ಸಾಮಾನ್ಯವಾಗಿ ಷಷ್ಠಿ ವಿಭಕ್ತಿ ಪ್ರತ್ಯಯ ‘ಅ’ ಪ್ರತ್ಯಯ ಸೇರಿ ನಾಮಪದವಾದರೆ ಅದು ಕೃದಂತನಾಮಪದವಾಗಿದೆ. ಜೊತೆಗೆ ಧಾತುವಿಗೂ ಮತ್ತು ಕೃತ್ ಪ್ರತ್ಯಯಕ್ಕೂ ಮಧ್ಯದಲ್ಲಿ ಕಾಲಸೂಚಕ ಪ್ರತ್ಯಯಗಳು ಸೇರಿಕೊಂಡು ಕೃದಂತ ನಾಮಗಳಾಗುತ್ತವೆ.
ಉದಾ-
೧. ಕೃದಂತ – ವರ್ತಮಾನ ಕಾಲ
ಧಾತು+ ಕಾಲಸೂಚಕ ಪ್ರತ್ಯಯ+ ಪ್ರತ್ಯಯ = ಕೃದಂತ ವರ್ತಮಾನ ನಾಮಪದ
ಮಾಡು+ ವ+ ಅ = ಮಾಡುವ
ಓದು+ ವ+ ಅ= ಓದುವ
ತಿನ್ನು+ ವ+ ಅ = ತಿನ್ನುವ
೨. ಕೃದಂತ ಭೂತಕಾಲ
ಧಾತು+ ಕಾಲಸೂಚಕ ಪ್ರತ್ಯಯ+ ಪ್ರತ್ಯಯ = ಕೃದಂತ ಭೂತಕಾಲ ನಾಮಪದ
ಮಾಡು+ ದ+ ಅ= ಮಾಡಿದ
ಓದು+ ದ+ ಅ= ಓದಿದ
ಬರೆ+ ದ+ ಅ= ಬರೆದ
೩. ಕೃದಂತ ನಿಷೇಧ
ಧಾತು+ ಕಾಲಸೂಚಕ ಪ್ರತ್ಯಯ+ ಪ್ರತ್ಯಯ = ಕೃದಂತ ನಿಷೇಧ ನಾಮಪದ
ಮಾಡು+ ಅದ+ ಅ= ಮಾಡದ
ಬರೆ+ ಅದ+ ಅ= ಬರೆಯದ.
ನೋಡು+ ಅದ+ ಅ= ನೋಡದ
2. ಕೃದಂತ ಭಾವನಾಮಗಳು
ಧಾತುಗಳಿಗೆ ಭಾವಾರ್ಥದಲ್ಲಿ ಇಕೆ, ಇಗೆ, ಗೆ, ತ, ಟ, ಪು, ವಳಿಕೆ ಮೊದಲಾದ ಕೃತ್ ಪ್ರತ್ಯಯಗಳು ಸೇರಿ ನಾಮಪದವಾದರೆ ಅದನ್ನು ಕೃದಂತ ಭಾವನಾಮಗಳೆನ್ನುವರು.
ಉದಾ-
ಧಾತು+ ಕೃತ್ ಪ್ರತ್ಯಯ = ಕೃದಂತ ಭಾವನಾಮ
ಓಡು + ಟ= ಓಟ
ಅಂಜು+ ಇಕೆ= ಅಂಜಿಕೆ
ಉಡು+ ಗೆ= ಉಡುಗೆ
ಅಡು+ ಗೆ= ಅಡುಗೆ
ಮಾಡು+ ಇಕೆ= ಮಾಡುವಿಕೆ
ನೆನೆ+ ಪು= ನೆನಪು
3. ಕೃದಂತಾವ್ಯಯ
ಧಾತುಗಳಿಗೆ ಉತ್ತ, ಅದೆ, ಅಲಿಕೆ, ಇ, ದು ಮೊದಲಾದ ಪ್ರತ್ಯಯಗಳು ಸೇರಿ ಸಾಧಿತನಾಮ ಪದವಾದರೆ ಅದನ್ನು ಕೃದಂತಾವ್ಯಯ ಎನ್ನುವರು. ಇವು
ಧಾತು+ಕೃತ್ ಪ್ರತ್ಯಯ= ಕೃದಂತಾವ್ಯಯ
ಮಾಡು+ ಉತ್ತ= ಮಾಡುತ್ತ
ಬರೆ+ ದು= ಬರೆದು
ಕೇಳು+ ಅಲಿಕ್ಕೆ = ಕೇಳಲಿಕ್ಕೆ
ಓದು+ ಉತ್ತ= ಓದುತ್ತ
ತದ್ದಿತಾಂತಗಳು
ಸಾಧಿತ ನಾಮಪದಗಳನ್ನು ರಚಿಸುವಾಗ ಕೆಲವು ನಾಮ ಪ್ರಕೃತಿಗಳ ಮೇಲೆ ಬೇರೆ ಬೇರೆ ಅರ್ಥಗಳಲ್ಲಿ ಗಾರ, ಕಾರ, ಇಗ, ಅಡಿಗ ಮುಂತಾದ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತಗಳಾಗುತ್ತವೆ.
ಉದಾ- ನಾಮಪ್ರಕೃತಿ+ ತದ್ದತ ಪ್ರತ್ಯಯ= ತದ್ದಿತಾಂತ
ಕನ್ನಡ+ ಇಗ= ಕನ್ನಡಿಗ
ಜಾಣ+ ತನ= ಜಾಣತನ
ದೊಡ್ಡ+ ತನ= ದೊಡ್ಡತನ
ಇದರಲ್ಲಿ ೩. ವಿಧಗಳಿವೆ
೧. ತದ್ದಿತಾಂತ ನಾಮಪದಗಳು
ನಾಮಪದಗಳಿಗೆ ಗಾರ, ಕಾರ, ಇಗ, ಅಡಿಗ ಮುಂತಾದ ತದ್ದಿತ ಪ್ರತ್ಯಯಗಳು ಸೇರಿ ಆಗುವ ಸಾಧಿತ ನಾಮಪದಗಳನ್ನು ತದ್ಧಿತ ನಾಮಪದಗಳೆನ್ನುವರು. ಹಾಗೆಯೇ ಇವನ್ನು ವ್ಯಕ್ತಿಸೂಚಕಗಳೆಂದು ಕರೆಯಲಾಗುತ್ತದೆ.
ಉದಾ- ನಾಮಪ್ರಕೃತಿ+ ತದ್ದಿತ ಪ್ರತ್ಯಯ= ತದ್ದಿತಾಂತನಾಮ
ಬಳೆ+ ಗಾರ= ಬಳೆಗಾರ
ಹಾಡು+ ಗಾರ= ಹಾಡುಗಾರ
ಓಲೆ+ ಕಾರ= ಓಲೆಕಾರ
೨. ತದ್ದಿತಾಂತ ಭಾವನಾಮ
ಇವು ಸಾಮಾನ್ಯವಾಗಿ ಷಷ್ಠಿ ವಿಭಕ್ತಿ ಪ್ರತ್ಯಯವನ್ನು ಅಂತ್ಯದಲ್ಲಿ ಹೊಂದಿರುವ ನಾಮ ಪದಗಳ ಮುಂದೆ ಭಾವಾರ್ಥದಲ್ಲಿ ತನ, ಇಕೆ, ಪು, ಮೆ, ಇತ್ಯಾದಿ ತದ್ದಿತ ಪ್ರತ್ಯಯಗಳು ಸೇರಿ ಆಗುವ ಪದಗಳು ಇವನ್ನೇ ತದ್ದಿತ ಭಾವನಾಮಗಳು ಎನ್ನುವರು.
ಉದಾ-
ನಾಮ ಪ್ರಕೃತಿ+ ತದ್ದಿತಪ್ರತ್ಯಯ = ತದ್ದಿತಾಂತ ಭಾವನಾಮ
ಜಾಣನ+ ತನ= ಜಾಣತನ
ಚೆಲುವಿನ+ ಇಕೆ= ಚೆಲುವಿಕೆ
3. ತದ್ದಿತಾಂತ ಅವ್ಯಯಗಳು
ನಾಮಪದಗಳ ಮುಂದೆ ಅಂತೆ, ವೊಲ್, ತನಕ, ಓಸುಗ, ಮುಂತಾದ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಪದಗಳೇ ತದ್ಧಿತಾಂತ ಅವ್ಯಯಗಳು. ಇವು ನಾಮಪದಗಳಂತೆ ಲಿಂಗ, ವಚನ, ಕಾಲಗಳಲ್ಲಿ ರೂಪ ಬದಲಾವಣೆ ಹೊಂದದೆ ಬಳಕೆಯಾಗುತ್ತವೆ.
ಉದಾ- ಚಂದ್ರ+ಅಂತೆ=ಚಂದ್ರನಂತೆ
ನಿನಗೆ+ಆಗಿ=ನಿನಗಾಗಿ
ಶಾಲೆಯ+ಒರೆಗೆ==ಶಾಲೆಯವರೆಗೆ
