Part – 7 ಕನ್ನಡ ವ್ಯಾಕರಣ #Kannada Vyakarana – ಪದ ಪಲ್ಲವಿ. ದೇಶ್ಯ – ಅನ್ಯ ದೇಶ್ಯ ಪದಗಳು, ತತ್ಸಮ – ತದ್ಭವಗಳು.

Kannada Vyakarana
Kannada Vyakarana
Kannada Vyakarana –
Deshiya & Anya Deshiya padagalu –

Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ‌. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. – ದೇಶ್ಯ – ಅನ್ಯ ದೇಶ್ಯ ಪದಗಳು, ತತ್ಸಮ – ತದ್ಭವಗಳು.

ಪದ ಪಲ್ಲವಿ

ಇದರಡಿಯಲ್ಲಿ ನಾವು ಹಲವು ವಿಷಯಗಳನ್ನು ತಿಳಿಯಲಿದ್ದೇವೆ. ಅವು 

* ದೇಶ್ಯ – ಅನ್ಯ ದೇಶ್ಯ ಪದಗಳು

* ತತ್ಸಮ – ತದ್ಭವಗಳು

* ದ್ವಿರುಕ್ತಗಳು

* ಜೋಡು ನುಡಿಗಳು

* ಸಮಾನಾರ್ಥಕ ಪದಗಳು

* ನಾನಾರ್ಥಕ ಪದಗಳು

* ವಿರುದ್ಧಾರ್ಥಕ ಪದಗಳು

* ನುಡಿಗಟ್ಟುಗಳು ಇವುಗಳನ್ನು ಒಟ್ಟಿಗೆ ಅಭ್ಯಸಿಸಲು ಪದ ಪಲ್ಲವಿ ಎಂಬ heading ನ ಕೊಟ್ಟಿದ್ದೇನೆ. ಇದರಡಿಯಲ್ಲಿ ಒಂದೊಂದೆ ವಿಷಯವನ್ನು ಕಲಿಯುತ್ತ ಹೋಗೋಣ

Kannada Vyakarana 1. ದೇಶ್ಯ – ಅನ್ಯ ದೇಶ್ಯಪದಗಳು

ನದಿ ಸ್ವತಂತ್ರವಾಗಿ ಹಳ್ಳ ಕೊಳ್ಳಗಳಿಂದ ನೀರನ್ನು ಸೇರಿಸಿಕೊಂಡು ಸದಾ ಹರಿಯುತ್ತದೋ ಹಾಗೆಯೇ ಭಾಷೆಯೂ ಜೀವಂತವಾಗಿರಬೇಕಾದರೆ ಬೇರೆ ಭಾಷೆಯ ಪದಗಳನ್ನು ಸೇರಿಸಿಕೊಂಡು ತನ್ನದನ್ನಾಗಿ ಮಾಡಿಕೊಳ್ಳುವ ಮೂಲಕ ಶಬ್ಧಕೋಶವನ್ನು ವೃದ್ಧಿಸಿಕೊಳ್ಳಬೇಕು. ಆಗ ಭಾಷಾ ಬಳಕೆ ಹೆಚ್ಚುತ್ತದೆ. ಇವು ವ್ಯಾಪಾರ, ವಹಿವಾಟು, ಸರ್ಜಾರಿ ಕೆಲಸಗಳು, ಪ್ರವಾಸ ಮೊದಲಾದವುಗಳಿಂದ ಪದಗಳು ಬಂದು ಸೇರುತ್ತವೆ‌. 

#ದೇಶ್ಯ ಪದಗಳು

ಇವು ಕನ್ನಡದ್ದೇ ಪದಗಳಾಗಿರುತ್ತವೆ‌ ಅಂದರೆ ಬೇರೆ ಯಾವುದೇ ಭಾಷೆಗಳಿಂದ ಪದಗಳನ್ನು ಎರವಲು ಪಡೆಯದೇ ಕನ್ನಡದಲ್ಲಿಯೇ ಬಳಕೆಯಲ್ಲಿರುವ ಪದಗಳಾಗಿವೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಇವು ದೇಸಿಯ ಪದಗಳು ಎಂದೂ ಹೇಳಬಹುದು ಜೊತೆಗೆ ಯಾವ ಭಾಷೆಯ ಪ್ರಭಾವಕ್ಕೂ ಒಳಗಾಗದೇ ಬಂದಿರುತ್ತವೆ‌.

ಉದಾ- ಅಂಗಾಂಗಳು– ಕೈ, ಕಾಲು, ಮೈ, ಮೂಳೆ, ಬೆನ್ನು, ತಲೆ, ಎದೆ, ಹೊಟ್ಟೆ.

ಸಂಬಂಧಾರ್ಥಕಗಳು: ಅಪ್ಪ, ಅಮ್ಮ, ದೊಡ್ಡಪ್ಪ, ದೊಡ್ಡಮ್ಮ, ಮಗ, ಹೆಂಡ್ತಿ, ತಮ್ಮ, ತಂಗಿ, ನಾದಿನಿ, ಮೈದ, ಅತ್ತೆ, ಮಾವ.

ಪ್ರಾಣಿವಾಚಕಗಳು: ನಮ್ಮ ಜೊತೆಯಲ್ಲಿರುವ ಅಥವಾ ನಾವು ಕಂಡಿರುವ ಪ್ರಾಣಿಗಳು – ದನ, ಹುಲಿ, ಇಲಿ, ಹಾವು, ಎತ್ತು, ಆಕಳು, ಎಮ್ಮೆ, 

ದಿನನಿತ್ಯ ಬಳಸುವ ಪದಾರ್ಥಗಳು – ಹಾಲು, ತುಪ್ಪ, ಉಪ್ಪು, ಬಾಗಿಲು, ಮನೆ, ಚಿಲಕ, ಅಗಣಿ, 

ಸರ್ವನಾಮಗಳು – ನಾಮ ಪದಗಳಿಗೆ ಬದಲಾಗಿ ಬಳಸುವಂತಹವು – ನಾನು, ನಾವು, ಅವನು, ಅವಳು, ಅದು, ಇದು, 

ಧಾತುಗಳು – ತಿನ್ನು, ಮಾಡು, ಓದು, ಹೋಗು, ಓಡು, ಕೊಡು,

ಅನ್ಯ ದೇಶ್ಯಪದಗಳು

ನಮ್ಮ ಭಾಷೆಗೆ ಬೇರೆ ಭಾಷೆಯ ಪ್ರಭಾವದಿಂದಾಗಿ ಹಲವಾರು ಪದಗಳು ಬಂದು ಸೇರುತ್ತವೆ. ಅವನ್ನು ಅನ್ಯ ದೇಶ್ಯಪದಗಳು ಎನ್ನುತ್ತೇವೆ.

ಉದಾ- 

* ಅರಬ್ಬಿ ಭಾಷೆಯಿಂದ – ಅಮಲ್ದಾರ್, ಅರ್ಜಿ, ಅಹವಾಲು, ಆಖೈರು, ಇಲಾಖೆ, ಐಬು, ಐಷಾರಾಮ, ದಫ್ತರ್, ದವಾಖಾನೆ, ಮಂಜೂರು, ಮರ್ಜಿ, ಮಾನ್ಸೂನ್, ಮುತ್ಸದ್ಧಿ, ಮುನ್ಸಿಫ್, ರೈತ, ಹಕೀಕತ್, ಹಾಜರಾತಿ, ಹೈರಾಣ ಮುಂತಾದವು

ಫಾರಸಿ ಭಾಷೆಯಿಂದ

ಐನಾತಿ, ಕಾರಭಾರ, ಕಿದ್ವಿ, ಕೊತ್ವಾಲ, ಖಜಾಂಚಿ, ಖುಷ್ಕಿ, ಗುಮಾಸ್ತ, ಜಬರ್ದಸ್ತು, ದಸ್ತಗಿರಿ, ದುಬಾರಿ, ದುರ್ಬೀನು, ರಾಜೀನಾಮೆ, ಮೈದಾನ ಮುಂತಾದವು.

ಲ್ಯಾಟಿನ್ ಭಾಷೆಯಿಂದ

ಅಲಿಯಾಸ್, ಅಡ್ವೊಕೇಟ್, ಇಸ್ಪೀಟ್, ಕೋರಂ, ಲಾಂಡ್ರಿ, ಸೆಮಿಸ್ಟರ್ ಮುಂತಾದವು.

ಪೋರ್ಚುಗೀಸ್ ಭಾಷೆಯಿಂದ

ಸಾಬೂನು, ಮೇಜು, ಆಲೂಗಡ್ಡೆ, ಪಾದ್ರಿ 

ಮರಾಠಿ ಭಾಷೆಯಿಂದ

ಆಸುಪಾಸು, ಕಛೇರಿ, ಕಿಚಾಯಿಸು, ಕಿತಾಪತಿ, ಕಿರಾಣಿ, ಖಾನಾವಳಿ, ಠಾಕೂಠೀಕು, ತರಾವರಿ, ದರೋಡೆ, ದಢೂತಿ, ನೋಂದಾಯಿಸು, ಫಟಿಂಗ, ಲಾವಣಿ ಮುಂತಾದವು

ಹಿಂದೂಸ್ಥಾನಿ

ಅಂಗನವಾಡಿ, ಅಚಾನಕ್, ಆಸಾಮಿ, ಗಾದಿ, ಚಕ್ಕರ್, ಚಮಚ, ಜುಜುಬಿ, ಡಾಂಬರು, ಡೋಂಗಿ, ದಂಧೆ, ನಮೂನೆ, ಲಕೋಟೆ, ಭರವಸೆ, ಮುಜರಾಯಿ, ಲೇವಡಿ, ಹಲಾಲ್ ಟೋಪಿ, ಕಾಗದ, ನೌಕರಿ, ಕಾನೂನು, ಕುಸ್ತಿ ಮುಂತಾದವು.

ಸಂಸ್ಕ್ರತ ಭಾಷೆಯಿಂದ

ವೇತ್ರ, ವೇಗ, ವೈಶಾಖ, ಋಷಿ, ಮೃಗ, ಶೃಂಗ, ಋಣ, ಔಷದ, ವೇಷ, ಗ್ರಂಥಿ, ಘೂಕ, ಘಟಿಕಾ, ಘೋಷ್ಠಿ, ಬ್ರಹ್ಮ, ಪ್ರಲಾಪ, ಶ್ರೇಣಿ, ತಂತ್ರಿ, ಸ್ವರ್ಗ, ಪಕ್ಷಿ, ನಿತ್ಯ ಮುಂತಾದವು.

: ತತ್ಸಮ – ತದ್ಭವಗಳು

Tatsama - Tadbhava padagalu
Tatsama – Tadbhava padagalu

ತತ್ಸಮ ಪದಗಳು

ಸಂಸ್ಕ್ರತ ಭಾಷೆಯಲ್ಲಿರುವಂತೆಯೇ ಯಾವ ಬದಲಾವಣೆಯನ್ನೂ ಹೊಂದದೆ ಕನ್ನಡ ಭಾಷೆಯಲ್ಲಿ ಬಳಸುತ್ತಿರುವ ಶಬ್ದಗಳನ್ನು ತತ್ಸಮಗಳೆನ್ನುವರು. 

ಇಲ್ಲಿ ತತ್ ಎಂದರೆ ಅದಕ್ಕೆ 

ಸಮ ಎಂದರೆ ಸಮವಾಗಿರುವುದು.

ತದ್ಭವ ಪದಗಳು

ಸಂಸ್ಕ್ರತ ಭಾಷೆಯ ಪದಗಳು ಕನ್ನಡದಲ್ಲಿ ಬಳಕೆಯಾಗುವಾಗ ಅಲ್ಪಸ್ವಲ್ಪ ಅಥವಾ ಪೂರ್ಣ ವ್ಯತ್ಯಾಸ ಹೊಂದಿ ಬಳಕೆಯಾಗುತ್ತಿರುವ ಪದಗಳಿಗೆ ತದ್ಭವಗಳೆನ್ನುವರು. 

ಉದಾ- 

ತತ್ಸಮ           ತದ್ಭವ

ದಯಾ        ದಯೆ

ಲಕ್ಷ್ಮೀ          ಲಕ್ಷ್ಮಿ

ಭಿಕ್ಷಾ            ಭಿಕ್ಷೆ

ಬಾಲಾ          ಬಾಲೆ

ಸಂಸ್ಥಾ          ಸಂಸ್ಥೆ

ನಿದ್ರಾ           ನಿದ್ರೆ

ತತ್ಸಮ ಮತ್ತು ತದ್ಭವಗಳನ್ನು ಗುರುತಿಸಲು ಇರುವ ಹಲವು ಆಯಾಮಗಳು

* ‘ನ್’ ಕಾರ ಲೋಪವಾದಾಗ ಅಥವಾ ಹೋರಟುಹೋದಾಗ 

ತತ್ಸಮ.       ತದ್ಭವ

ರಾಜನ್     ರಾಜ

ಯುವನ್   ಯುವ

ಬ್ರಹ್ಮನ್      ಬ್ರಹ್ಮ

ಆತ್ಮನ್       ಆತ್ಮ

* ಮಹಾಪ್ರಾಣಗಳು ಅಲ್ಪಪ್ರಾಣಗಳಾಗುತ್ತವೆ 

ತತ್ಸಮ.      ತದ್ಭವ

ಸ್ತಂಭ.        ಕಂಭ

ಶುಂಠಿ          ಸುಂಠಿ

ಛಂದ.         ಚಂದ

ಘಂಟಾ        ಗಂಟೆ

ರಘಟಾ        ರಗಳೆ

* ‘ಯ’ ಕಾರ – ‘ಜ’ಕಾರವಾಗಿ ಬದಲಾಗುತ್ತದೆ.

ತತ್ಸಮ.       ತದ್ಭವ

ಕಾರ್ಯ.      ಕಜ್ಜ

ಯತ್ನ.          ಜತುನ

ಉದ್ಯೋಗ.  ಉಜ್ಜುಗ

ವಿದ್ಯಾ          ಬಿಜ್ಜೆ

ಯುದ್ಧ.        ಜುದ್ಧ

* ಪ್ರಥಮ ವರ್ಗಾಕ್ಷರಕ್ಕೆ ಅದೇ ವರ್ಗದ ತೃತೀಯಾಕ್ಷರ ಬರುತ್ತದೆ.

ತತ್ಸಮ.          ತದ್ಭವ

ಆಕಾಶ.         ಆಗಸ

ಅಟವೀ        ಅಡವಿ

ವಸತಿ           ಬಸದಿ

ಝಕಟ.        ಜಗಳ

* ‘ವ’ ಕಾರ. – ‘ಜ’ಕಾರವಾಗಿ ಬದಲಾಗುವುದು

ತತ್ಸಮ.        ತದ್ಭವ

ವಲ್ಲಿ     ಬಳ್ಳಿ

ಕರ್ವು      ಕಬ್ಬು

ವಾಪಿ       ಬಾವಿ

ವರ್ಣ.     ಬಣ್ಣ

* ‘ಪ’ಕಾರ – ‘ಹ’ಕಾರವಾಗಿ ಬದಲಾಗುವುದು

ತತ್ಸಮ.     ತದ್ಭವ

ಪಳ್ಳಿ          ಹಳ್ಳಿ

ಪಾಲು       ಹಾಲು

ಪಾವು        ಹಾವು

ಪಂಕ್ತಿ         ಹಂತಿ

ಪಳ್ಳ.         ಹಳ್ಳ

Also see this.

Leave a Comment

Your email address will not be published. Required fields are marked *

Scroll to Top