Kannada Vyakarana, ಕನ್ನಡ ವ್ಯಾಕರಣವು group C, FDA, SDA, CTI ಮುಂತಾದ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಪಠ್ಯವಾಗಿದೆ. ಕನ್ನಡ ವ್ಯಾಕರಣವನ್ನು ತಿಳಿಯುವುದಕ್ಕೆ ಮೊದಲು ಭಾಷೆಯ ಬಗೆಗೆ ತಿಳಿಯೋಣ. – ದೇಶ್ಯ – ಅನ್ಯ ದೇಶ್ಯ ಪದಗಳು, ತತ್ಸಮ – ತದ್ಭವಗಳು.
Kannada Vyakarana-ದ್ವಿರುಕ್ತಿಗಳು
ನಾವು ಭಾಷೆಯ ಪದಗಳು ಬಳಸುವಾಗ ಅನೇಕ ಪದಗಳನ್ನು ಬಳಸುತ್ತಿರುತ್ತೇವೆ. ಆದರೆ ಅವುಗಳ ಅರ್ಥ ಏನು ಎಂದು ನಾವು ತಿಳಿದಿರುವುದಿಲ್ಲ. ಅದರಲ್ಲಿ ಫಳಫಳ, ಸರಸರ ಇಂತಹ ಪದಗಳನ್ನು ನಾವು ಬಳಸುತ್ತೇವೆ ಇದಕ್ಕೆ ಅರ್ಥವಿರುವುದಿಲ್ಲ ಆದರೆ ದ್ವಿರುಕ್ತಿಗಳಿಗೆ ಅರ್ಥವಿರುತ್ತದೆ. ದ್ವಿರುಕ್ತಿಗಳು ಎಂದರೆ ಒಂದು ಪದವನ್ನು ಎರಡು ಸಾರಿ ಉಚ್ಛರಿಸುವುದಕ್ಕೆ ದ್ವಿರುಕ್ತಿ ಎನ್ನುವರು.
ಅಂದರೆ ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸಲು ಒಂದು ಪದ, ಒಂದು ವಾಕ್ಯವನ್ನೋ ಎರಡೆರಡು ಸಲ ಬಳಸುವುದಕ್ಕೆ ದ್ವಿರುಕ್ತಿಗಳು ಎನ್ನುವರು.
ಉದಾ- ನಿಲ್ಲುನಿಲ್ಲು, ಹೌದೌದು, ಬೇಗಬೇಗ, ಕಟ್ಟಕಡೆಗೆ, ಕೆಳಕೆಳಗೆ, ಕುಸಿಕುಸಿದು, ನಟ್ಟನಡುವೆ, ಹೆಚ್ಚೆಚ್ಚು, ತುತ್ತತುದಿ, ಹೊಸಹೊಸದು, ಬನ್ನಿ ಬನ್ನಿ, ಬೇಡಬೇಡ, ನಕ್ಕೂನಕ್ಕೂ, ಚಿಕ್ಕಚಿಕ್ಕ ಮುಂತಾದವು
Kannada Vyakarana- ಜೋಡುನುಡಿಗಳು
ಒಂದು ಪದದ ಜೊತೆಗೆ ಇನ್ನೊಂದು ಪದ ಬಳಸುವುದಕ್ಕೆ ಜೋಡುನುಡಿ ಎನ್ನುವರು.
ಉದಾ- ಹಾದಿಬೀದಿ, ತಳಬುಡ, ಗೆಡ್ಡೆಗೆಣಸು, ರೋಗರುಜಿನ, ಓದುಬರಹ, ಸಾಲಸೋಲ, ಕಲ್ಲುಪಲ್ಲು, ಮರಗಿರ, ಏಳುಬೀಳು, ಬೇವುಬೆಲ್ಲ, ಓದುಬರಹ, ಕಪ್ಪಕಾಣಿಕೆ, ಉಡುಗೆ-ತೊಡುಗೆ, ಏರುಪೇರು. ಮುಂತಾದವು
Kannada Vyakarana – ಸಮಾನಾರ್ಥಕ ಪದಗಳು
ಒಂದು ಭಾಷೆಯ ಮೇಲೆ ಪ್ರಭುತ್ವ ಹೆಚ್ಚಿಸಿಕೊಳ್ಳಬೇಕಾದರೆ ಅಲ್ಲಿ ಪದಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ಹಾಗೆಯೇ ಪದಗಳಿಗೆ ಹಲವು ಅರ್ಥಗಳನ್ನು ಹೊಂದಿರುವ ಪದಗಳಿರುತ್ತವೆ ಅವನ್ನು ನಮ್ಮವನ್ನಾಗಿಸಿಕೊಳ್ಳಬೇಕು.
ಒಂದೇ ಅರ್ಥವಿರುವ ಬೇರೆ ಬೇರೆ ಪದಗಳನ್ನು ಸಮಾನಾರ್ಥಕ ಪದಗಳೆನ್ನುವರು.
ಉದಾ-
ಚಂದ್ರ- ಶಶಿ, ತಿಂಗಳು, ಇಂದು
ಕಾಡು- ವನ, ಅರಣ್ಯ, ಕಾಂತಾರ
ಕೂಳು- ಅನ್ನ, ಆಹಾರ
ರಾಜ- ರಾಯ, ಅರಸ, ದೊರೆ
ಬೆಂಕಿ- ಅನಲ, ಅಗ್ನಿ, ಅಗಿನಿ
ಇಂಗು- ಬತ್ತು, ವಣಗು
ಅಸಿ- ಖಡ್ಗ
Kannada Vyakarana – ವಿರುದ್ಧಾರ್ಥಕ ಪದಗಳು
ಒಂದು ಪದದ ಅರ್ಥಕ್ಕೆ ವಿರುದ್ಧವಾದ ಅರ್ಥವನ್ನು ನೀಡುವ ಪದಕ್ಕೆ ವಿರುದ್ಧಾರ್ಥಕ ಪದಗಳೆನ್ನುವರು.
ಇಲ್ಲಿ ಅ, ಅನ್, ಅಪ, ನಿ, ನಿರ್, ದುರ್, ನಿಸ್ ಮೊದಲಾದ ಉಪಸರ್ಗಗಳನ್ನು ಸೇರಿಸುವ ಮೂಲಕ ವಿರುದ್ಧಾರ್ಥಕ ಪದಗಳನ್ನು ರಚಿಸಲಾಗುತ್ತದೆ.
ಉದಾ- ಶಾಂತಿಅಶಾಂತಿ
ನಂಬಿಕೆಅಪನಂಬಿಕೆ
ಹಾಸ್ಯ ಅಪಹಾಸ್ಯ
ಆತಂಕ ನಿರಾತಂಕ
ಅಹಂಕಾರ ನಿರಹಾಂಕಾರ
ಪಕ್ಷಪಾತ ನಿಷ್ಪಕ್ಷಪಾತ
ಸ್ವಾರ್ಥ ನಿಸ್ವಾರ್ಥ
ಆಲೋಚನೆ ದುರಾಲೋಚನೆ
ದೆಸೆ ದುರ್ದೆಸೆ
ತೆಂಕಣ ಬಡಗಣ
ಗೆಲ್ಲು ಸೋಲು
ಅಳು ನಗು
ಆಧುನಿಕ ಪೂರ್ವಿಕ
Kannada Vyakarana – ನಾನಾರ್ಥಕ ಪದಗಳು
ಒಂದು ಪದವು ಬೇರೆ ಬೇರೆಯದೇ ಅರ್ಥವನ್ನು ನೀಡುವ ಪದಗಳಾಗಿರುತ್ತವೆ. ಇಲ್ಲಿ ನಾಮಪದಗಳು, ಕ್ರಿಯಾಪದಗಳು ಅರ್ಥವಾಗಿ ಬರುತ್ತವೆ.
ಉದಾ- ಸೂಳ್ – ಅನ್ನ, ಕಾಲ
ಕರ – ಕೈ, ತೆರಿಗೆ
ರಾಗ- ಸ್ವರ, ಪ್ರೀತಿ
ಬಗೆ- ವಿಧ, ಯೋಚಿಸು
ಅರಿ – ತಿಳಿ, ಶತ್ರು
ತೆರ- ರೀತಿ, ದಕ್ಷಿಣೆ
ಮುನಿ- ಕೋಪ, ಋಷಿ
ಅಡಿ – ಅಳತೆ, ಪಾದ
Kannada Vyakarana – ನುಡಿಗಟ್ಟುಗಳು
ಇವು ಒಂದು ಭಾಷೆಗೆ ಸತ್ವವನ್ನು ಒದಗಿಸಬಲ್ಲಂತಹವು, ನಾವು ಮಾತನಾಡುವಾಗ ವಿಶೇಷ ಅರ್ಥಗಳನ್ನು ಹೊರಹೊಮ್ಮಿಸಲು ಬಳಸುವ ಪದಗಳಾಗಿವೆ. ಜೊತೆಗೆ ನಮ್ಮ ಮಾತಿನ ಅರ್ಥದ ವ್ಯಾಪ್ತಿಯನ್ನು ವಿಸ್ತರಿಸುವ ಶಕ್ತಿಯನ್ನು ನುಡಿಗಟ್ಟುಗಳು ಹೊಂದಿರುತ್ತವೆ.
ವಿಶೇಷಾರ್ಥವನ್ನು ಕೊಡುವ, ಅರ್ಥವ್ಯಾಪ್ತಿಯನ್ನು ವಿಸ್ತರಿಸುವ, ವಿಶೇಷ ಬಗೆಯ ಪದ ಸಮುಚ್ಛಯಗಳನ್ನು ನುಡಿಗಟ್ಟುಗಳು ಅಥವಾ ಪಡೆನುಡಿಗಳು ಎಂದು ಕರೆಯಲಾಗುತ್ತದೆ.
ಇಲ್ಲಿ ನಾಮಪ್ರಕೃತಿ ಮತ್ತು ಕ್ರಿಯಾವಿಶೇಷಣಗಳನ್ನು ಬಳಸಿ ಸಮಯಕ್ಕೆ ಅನುಗುಣವಾಗಿ ವಿಶೇಷವಾದ ಅರ್ಥವನ್ನು ಇವು ನೀಡುತ್ತವೆ.
ಉದಾ- ಕಾಲುಕೀಳು- ಪಲಾಯನ ಮಾಡು
ಅನ್ನಕ್ಕೆ ಕಲ್ಲುಹಾಕು- ಜೀವನಮಾರ್ಗ ಕೆಡಿಸು
* ಎರಡು ಬಗೆ – ದ್ರೋಹವನ್ನು ಚಿಂತಿಸು
ಕೈಕೊಡು – ಮೋಸಮಾಡು
ಗಾಳಿಸುದ್ಧಿ – ಖಚಿತವಲ್ಲದ ವಾರ್ತೆ
ಟೋಪಿಹಾಕು – ಮೋಸಮಾಡು
ಅಗ್ರತಂಬೂಲ – ಮೊದಲ ಮರ್ಯಾದೆ
ಅಜ್ಜಿಕತೆ – ಕಟ್ಟುಕತಟ
ಉಕ್ಕಿನ ಕಡಲೆ – ಕಠಿಣವಾದ ಸಂಗತಿ
ಎಮ್ಮೆ ತಮ್ಮಣ್ಣ – ಮಂಧಬುದ್ಧಿಯವನು
ಒಣಜಂಬ- ವ್ಯರ್ಥ ಅಹಂಕಾರ
ಕತ್ತಿಮಸೆ – ಹಗೆಸಾಧಿಸು
ಗತಿಕಾಣಿಸು – ಮುಗಿಸು
ದಾರಿದೀಪ – ಮಾರ್ಗದರ್ಶಿ
ಬೇರೂರು- ಬಲವಾಗಿ ನೆಲಗೊಳ್ಳು
ರೈಲುಬಿಡು – ಸುಳ್ಳುಹೇಳು