ಮಣಿಮಂಜರಿ . #Manimanjari

ಮಣಿಮಂಜರಿ

Manimanjari
Manimanjari

ಹೆಣ್ಣರ್ಸಿ ಪಟ್ಟಣ ಅಲ್ಲಿ ಮಣಿಮಂಜರಿ ಎಂಬ ಬಹಳ ರೂಪವಂತ ಹೆಣ್ಣು ರಾಜಕುಮಾರಿ ಇದ್ದಾಳೆ. ಅವಳಿಗೆ ಮದುವೆಯಾಗೋದಿಲ್ಲವಾ? ಎಂದು ಕೇಳಿದರೆ ನಾನು ಹೇಳುವ ಒಗಟು ಯಾರು ಬಿಡಿಸುತ್ತಾರೋ ಅವರನ್ನು ಮದುವೆಯಾಗುತ್ತೇನೆ. ಒಗಟ್ಟನ್ನು ಬಿಡಿಸಲಾರದವರನ್ನು ಸೆರೆಮನೆಗೆ ಹಾಕುತ್ತೇನೆ ಎಂದು ಹೇಳುತ್ತಾಳೆ. ಹೀಗೆ ಒಗಟು ಬಿಡಿಸಲು ಬಂದವರು ಒಗಟು ಬಿಡಿಸಲಾಗದೆ ಸೆರೆಮನೆ ಸೇರಿದರು. 

ಬೆಂಗ್ಯೂರ ಅಂತ ಒಂದು ಪಟ್ಟಣ. ಅಲ್ಲಿ ಗುಣಶೇಖರ ಎಂಬ ಚೆಲುವ ರಾಜಕುಮಾರ. ಇವನು ಚೆಲುವೆಯಂತೆ ಕಾಣುವ ಹುಡುಗಿಯನ್ನು ಮುದುವೆಯಾಗಬೇಕು ಎಂದು ನಿಶ್ಚಯಿಸಿಕೊಂಡಿದ್ದ. ಮಣಿಮಂಜರಿಯ ವಿಷಯ ತಿಳಿದು, ಈ ವಿಚಾರವನ್ನು ತನ್ನ ಮಂತ್ರಿಗೆ ಹೇಳಿದನು. ಅವನು ರಾಜ್ಯದ ಬಗೆಗೆ ಯೋಚನೆ ಮಾಡಿ ತದನಂತರ ರಾಜನ ಮಾತಿಗೆ ವಿರುದ್ಧ ಮಾತನಾಡಬಾರದೆಂದು ಅವರ ಮಾತನ್ನು ಒಪ್ಪಿಕೊಂಡು ರಾಜಕುಮಾರನ‌ ಜೊತೆಗೆ ಹೊರಡಲು ಮುಂದಾದನು. ಕುದುರೆಯ ಜೊತೆ ಹೋಗ್ತಾ ಹೋಗ್ತಾ ರಾತ್ರಿಯಾಯಿತು. ಬೆಳಗಿನಿಂದ ಕುದುರೆ ಸವಾರಿಯಿಂದ ಆಯಾಸವಾಗಿ ಎಲ್ಲಾದರೂ ತಂಗಬೇಕು ಎಂದು ತಿಳಿದು

ಸುತ್ತ ಮುತ್ತ ನೋಡಿದಾಗ ಅಲ್ಲೇ ದೂರದಲ್ಲೇ ಬಲು ಮಾಂಕಾಳಿ ದೇವಸ್ಥಾನ ಕಂಡಿತು. ಇಲ್ಲೇ ತಂಗಿ ಹೋಗುವುದು ಎಂದು ತೀರ್ಮಾನ ಮಾಡಿಕೊಂಡು ಬಂದು ನೋಡಿದರೆ ಆಗಲೇ ಯಾರೋ ಪೂಜೆ ಮಾಡಿಕೊಂಡು ಹೋಗಿರುವುದನ್ನು ತಿಳಿದು “ನಾವು ಹೋಗುತ್ತಿರುವ ಕೆಲಸ ಶುಭವಾಗಲಿ” ಎಂದು ನಮಸ್ಕಾರ ಮಾಡಿ ಒಂದು ಮೂಲೆಯಲ್ಲಿ ಮಲಕ್ಕೊಂಡ್ರು. ತಕ್ಷಣ ಮಂತ್ರಿಗೆ ನಿದ್ದೆ ಹತ್ತಿತ್ತು. ರಾಜಕುಮಾರನಿಗೆ ಜೊಂಪು ಹತ್ತಿತು. ಆಗ ಯಾರೋ ಮಾತನಾಡುವ ಶಬ್ದ ಕೇಳಿಸಿ, ಹಾಗೆಯೇ ಏನು ಮಾತನಾಡುತ್ತಾರೋ ಎಂದು ಕೇಳಿಸಿಕೊಳ್ಳುತ್ತಾ ಮಲಗಿದ್ದ. ಆ ಶಬ್ದ ಕಂಬದೊಳಗಿರುವ 2 ಗೊಂಬೆಗಳು ಅಕ್ಕ – ತಂಗಿ ಗೊಂಬೆಗಳು ಮಾತಾಡಿಕೊಳ್ಳುತ್ತವೆ. 

See this part 1 video – ಮಣಿಮಂಜರಿ . Manimanjar ihttps://youtu.be/rNDMOr8OHA8?si=Vp55QurkmW5WxGt6

ತಂಗಿ, ಇವರು ಯಾರು? ಇಲ್ಲಿ ಏಕೆ ಬಂದಿದ್ದಾರೆ? ಎಂದಿದ್ದಕ್ಕೆ, ಅಕ್ಕ ಗೊಂಬೆ ಈ ರಾಜಕುಮಾರ ಗುಣಶೇಖರ, ಇನ್ನೊಬ್ಬ ಇವನ ಮಂತ್ರಿ. ಅವ್ರು ಹೆಣ್ಣರ್ಸಿ ಪಟ್ಟದಲ್ಲಿ ಮಣಿಮಂಜರಿಯನ್ನು ಮದುವೆಯಾಗಲು ಹೋಗುತ್ತಿದ್ದಾರೆ ಎಂದು ಹೇಳಿದಾಗ ಏಕೆ ಎಂದು ತಂಗಿ ಕೇಳಿದಾಗ ಅವಳು ಹೇಳುಚ ಒಗಟನ್ನು ಬಿಡಿಸಬೇಕು ಅವಾಗ ವರಿಸಲು ಸಾಧ್ಯ ಎಂದು ಹೇಳಿದಾಗ ಆ ಒಗಟು ಯಾವುದು ಎಂದು ಕೇಳಿದಾಗ

ಒಬ್ಬುನ್ ಸುಲಿಗೆ ಮಾಡಿ ಕಾಲುಗ್ ಹಾಕೊಂಡು,

ಒಬ್ಬುನ ಸುಲಿಗೆ ಮಾಡಿ ಹೆಗುಲ್ಲಾಕೊಂಡು,

ಒಬ್ಬುನ ಸುಲಿಗೆ ಮಾಡಿ ಕೈಗಾಕೊಂಡು,

ಬೆಳದಿಂಗೃಪ್ಪುನ ತಲೆಮ್ಯಾಲಾಕೊಂಡು,

ಆಕಾಸುದ ಅಡ್ಡೆ

ಮಾತಾಡೋ ಎಲೆ,

ಸೂರಾಪುರದ ಸುಣ್ಣ ತಕೊಂಡು,

ಸೇರೋ ಸಮಸಮ ಹೊತ್ತಲ್ಲಿ ಬರೇಕು.’

ಅಷ್ಟೆ ಅಕ್ಕ ‘ಒಬ್ಬುನ ಸುಲಿಗೆ ಮಾಡಿ ಕಾಲುಗಾಕೊಂಡು ಅಂದ್ರೇನಪ್ಪಾ ಅಂದ್ರೆ ದನದ ಚರ್ಮ ಸುಲ್ಲು, ಆ ಚರ್ಮದಿಂದಲ್ವ ಎಕ್ಕಡ ಮಾಡದು, ಆ ಎಕ್ಕಡಗಳ ಕಾಲಿಗೆ ಹಾಕೊಂಡ್ ಬರೇಕು’ ಅಂತ.

Read this one: https://rvwritting.com/%e0%b2%97%e0%b2%bf%e0%b2%a1%e0%b3%81%e0%b2%97-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%8e%e0%b2%b0%e0%b3%86%e0%b2%b9%e0%b3%81%e0%b2%b3-giduga-mattu-erehula/

‘ಒಬ್ಬುನ ಸುಲಿಗೆ ಮಾಡಿ ಹೆಗುಲ್ಲಾಕೊಂಡು ಅಂದ್ರೆ, ಕುರಿ ತುಪ್ಪಟವ ಕು- ರಿಮೈಯಿಂದ ತಗುದು ಆದ್ರಲ್ ನೇದ ಕಂಬ್ಲಿಯ ಹೆಗುಲ್ ಮ್ಯಾಲಾಕೊಂಡ್ ಬರೇಕು ಅಂತ.

‘ಒಬ್ಬುನ ಸುಲ್ಲೆ ಮಾಡಿ ಕೈಗಾಕೊಂಡು ಅಂತಾಂದ್ರೆ ಬೆತ್ತುದ ಕೊನೆಗಳೆಲ್ಲ ಸವುರಿ ಆದ ಕೈಲಿಡ್ಕೊಂಡ್ ಬರೋಕು ಅಂತ’ ಬೆಳದಿಂಗೃಪ್ಪುನ ತಲೆಮ್ಯಾಲೆ ಹಾಕೊಂಡು ಅಂದ್ರೆ, ‘ಬೆಳ್ಳಗಿರೋ ಪೇಟವ ತಲೆಗಾಕೊಂಡ್ ಬರೋಕು ಅಂತ’. ಆಕಾಸುದು ಅಡ್ಡೆ ಅಂದ್ರೆ- ‘ಬೇಯಿಸದೇ ಇರೋ ಹಸೀ ಅಡ್ಡೆ.’ ‘ಮಾತಾಡೋ ಎಲೆ ಅಂದ್ರೆ, ಮಳೆ ಹೂದು ನೀರುನ ಹನಿ ಬೀಳ್ತಾ ಇರೋ ಹೊಸ ಎಲೆ ಅಂತ’.

‘ಸೂರಾಪುರದ ಸುಣ್ಣ ಆಂದ್ರೆ ಒಳ್ಳೆ ಕನೆಸುಣ್ಣ. ‘ಸೇರೋ ಸಮಸಮ ಹೊತ್ತು ಅಂದ್ರೆ ಸೂರ್ಯ ಮುಳುಗ್ತಾ ಇದ್ದೇಕು; ಚಂದ್ರ ಮೂಡ್ತಾ ಇದ್ದೇಕು ಅಂತ ಹುಣ್ಣಿಮೆ ದಿನದ ಸಂಜೆ ಹೊತ್ನಲ್ಲಿ ಬರೇಕು ಅಂತ’.

ಅಕ್ಕ ಗೊಂಬೆ ಹೇಳುತ್ತಿದ್ದಾಗ ಇಷ್ಟೇನಾ? ಎಂದು ಆಮ್ಯಾಲೆ ಆಮ್ಯಾಲೆ ಎಂದು ಗುಣಶೇಖರ ಮೇಲೆದ್ದ ಗೊಂಬೆಗಳು ಕಲ್ಲಾಗಿ ಹೋದ್ವು ನಂತರ ನಡೆದ ವಿಷಯವನ್ನು ಮಂತ್ರಿಗೆ ಹೇಳಿ ಹೊರಡುತ್ತಾರೆ. ಅಲ್ಲಿಗೆ ಹೋಗಿ ಒಗಟು ಬಿಡಿಸುತ್ತಾರೆ. ನಂತರ ನಾಳೆ ಬನ್ನಿ‌ಎಂದು ಹೇಳಿ ಕಳುಹಿಸುತ್ತಾಳೆ.

ಬೆಂಡ್ ಮನೆ ಹಿಂದುಕ್ ಮಾಡ್ಕೊಂಡು,

ಬೇಯುದ್ ಮನೆ ಮುಂದುಕ್ ಮಾಡ್ಕೊಂಡು.

ಆ ಸಂದೀಲಿ ಹಾದ್ ಬರೇಕು, ಆ ಮ್ಯಾಲೆ

ದಣುವಿಲ್ಲೆ ಮುಲುಕೋನ್ ಮನೆ ಹಿಂದುಕ್ ಮಾಡ್ಕೊಂಡು,

ಕಾಲುಕ್ಕೂ ಕಲ್ ಹೊರೋನ್ ಮನೆ ಮುಂದುಕ್ ಮಾಡ್ಕೊಂಡು,

ಸಂದೀಲ್ ಹಾದ್ ಬರ್ಬೆಕು

ಆ ಮ್ಯಾಲೆ ಕೆಮ್ಮಣ್ ಗ್ವಾಡೆ ಬಿಡೋಕು,

ಸುಣ್ಣುದ್ ಗ್ವಾಡೆ ನಿಲ್ಬೇಕು

ಅಲ್ಲಿ ಮರುಕ್ ಮರ ಕೂಡುವಾಗ,

ತತ್ತಾರೆ ಮಣಿ ಮಂತ್ರಿ ಕೈಕಾಲುಗ್ ನೀರ ಅನ್ಬೇಕು,’ ಅಂತ ಹೇಳಿ ಕಳುಸುದ್ಲು. , ,  

ಇದರ ಅರ್ಥ ತಿಳಿಯಲು ಮತ್ತೆ ದೇವಸ್ಥಾನದ ಬಳಿ ಬರುತ್ತಾರೆ. ಗೊಂಬೆಗಳು ಮಾತನಾಡಬಹುದು ಎಂದು ಕಂಬದ ಅಡಿ ಎಷ್ಟೊತ್ತು ಮಲಗಿದರು. ಅವು ಮಾತಾಡದಿದ್ದಾಗ, ನೇರವಾಗಿ ಬಲುಮಾಂಕಾಳಿ ದೇವಿಗೆ ಕೇಳೋಣ ಅಂತ ಪೂಜೆಗೆ ಕೂತ. ತಾಯಿ ಪ್ರತ್ಯಕ್ಷವಾಗದಿದ್ದರೆ ನನ್ನ ತಲೆ ಕಡ್ಕೋತೀನಿ ಎಂದು ಕುತ್ತಿಗೆಗೆ ಕತ್ತಿ ಮಡ್ಗಬೇಕು ಅಷ್ಟರಲ್ಲಿ ತಾಯಿ ಪ್ರತ್ಯಕ್ಷಳಾಗಿ, ನಿನ್ನ ಭಕ್ತಿಗೆ ಮೆಚ್ಚಿದ್ದೀನಿ. ನಿನಗೇನು ವರ ಬೇಕು ಕೇಳು ಎಂದಾಗ ಕಷ್ಟ ಹೇಳಿಕೊಂಡ. ಆಗ

ನಂತರ ಇನ್ನು ಒಂದು ಒಗಟು ಹೇಳುತ್ತಾಳೆ. ಅದಕ್ಕೂ ಈಗಲೆ ಅರ್ಥ ಹೇಳುತ್ತೇನೆ ಎಂದು ಹೇಳಿದಳು.

ಅದು

ಒಂದ್ ಒಂಟೇಳ್ತಳೆ, ಅದೇನೂ ಅಂದ್ರೆ,

ತಲೆ ಕಡೀಂದ ಬಂದ್ರೆ ಅಣ್ಣ,

ಕಾಲ್ ಕಡೀಂದ ಬಂದ್ರೆ ತಮ್ಮ

ಬಲಮಗ್ಗುಲಲ್ ಬಂದ್ರೆ ತಂದೆ,

ಎಡ ಮಗ್ಗುಲಲ್ ಬಂದ್ರೆ ಮೈದ,

ಮುತ್ತಿನಂತ ಯಜಮಾನ,

ಎತ್ತ ಕಡೀಂದ ಬತ್ತೀಯೋ – ನನ್ನ

ಹೊತ್ನಲ್ಲಿ ಬಂದ ಕೈಕಾಲಿಗೆ ನೀರ್ಕೋಡು ಅಂತ ಕೇಳಬೇಕು.

ಅರ್ಥ

ಆಂತಳೆ. ಅದುಕ್ಕೆ ನೀನು ಬಲಗೈ ತೋರಿ ‘ಇದ್ರಲ್ ಎಷ್ಟೆ ಬೆಳ್ಳವೆ ಹೇಳು?’ ಅನ್ನು. ಅದ್ರೆ ಅವು ‘ಐದು’ ಅಂತಳೆ, ಈಗ ಎಡಗೈ ತೋರ್ಸಿ ‘ಇದ್ರಲೇ ಎಷ್ಟೇ ಬೆಳ್ಳವೆ ಹೇಳು?’ ಅನ್ನು, ‘ಐದು’ ಅಂತಳೆ. ಈಗ ಎರಡು ಕೈಬೆಳ್‌ಗಳನ್ನೂ ತೋರುಸ್ತ ಅವು ಇವೆಲ್ಲ ಸೇರುದ್ರೆ ಎಷ್ಟು?’ ಅನ್ನು. ‘ಹತ್ತು’ ಅಂತಳೆ. ಆಗ ನೀನು ಹಿಂದೂ ಮುಂದೆ ನೋಡ್ಲೆ ಮಂಚ ಹತ್ತು. ಅಂತ ಹೇಳ್ಕೊಟ್ಟು ನಿನ್ನೆ ಮೂರು ಒಗಟಿಗು ಅರ್ಥ ಹೇಳುವ ಮೂಲಕ ಮಣಿಮಂಜರಿಯನ್ನು ಗೆದ್ದು ಸೆರೆವಾಸದಲ್ಲಿರುವ ಎಲ್ಲರನ್ನೂ ಬಿಡಿಸಿ ದಿಮ್ರಂಗವಾಗಿ ಲಗ್ನ ಆಗಿ ಬಂದನು.

Leave a Comment

Your email address will not be published. Required fields are marked *

Scroll to Top