Now Comes KPSC – KAS – 2024

KPSC - KAS - 2024
KPSC – KAS – 2024

KAS – 2024 – KPSC

KPSC ಒಂದು ಕರ್ನಾಟಕ ಸರ್ಕಾರದ Premier recruiting agency ಆಗಿದೆ. ಗುಂಪು A, B, C, D ಹುದ್ದೆಗಳಿಗೆ ಪರೀಕ್ಷೆ ನಡೆಸಿ ಸರ್ಕಾರಕ್ಕೆ ಶಿಫಾರಸ್ಸನ್ನು ಮಾಡುತ್ತದೆ. ಹಾಗೆಯೇ KAS ಪರೀಕ್ಷೆಯನ್ನು ನಡೆಸುವ ಮೂಲಕ ರಾಜ್ಯಕ್ಕೆ ಬೇಕಾಗಿರುವ ದಕ್ಷ ಮತ್ರು ಪ್ರಾಮಾಣಿಕ, ಶಿಸ್ತು ಬದ್ದ ಅಧಿಕಾರಿಗಳನ್ನು ನೀಡುವ ಮೂಲಕ ರಾಜ್ಯದ ಪ್ರಗತಿಯಲ್ಲೂ ತನ್ನ ಛಾಪನ್ನು ಮೂಡಿಸುತ್ತಿದೆ. 500 ಕ್ಕಿಂತ ಹೆಚ್ಚಿನ ಹುದ್ದೆಗಳು.

ಭಾರತ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಹೊಂದಬೇಕಾದರೆ UPSC ಪರೀಕ್ಷೆಯನ್ನು ಬರೆದು ಉತ್ತಮ ಸ್ಥಾನಗಳನ್ನು ಪಡೆದರೆ ನಾವು ಊಹಿಸದ ಅಧಿಕಾರವನ್ನು ಪಡೆದು ಸಮಾಜ ಸೇವೆಯನ್ನು ಇದರ ಮೂಲಕ ಮಾಡಬಹುದು. ಇಂತಹ ಉನ್ನತ ಹುದ್ದೆಗಳನ್ನು ಪಡೆಯಲು‌ ಇನ್ನೊಂದು ಮಾರ್ಗವಿದೆ ಅದೆ KPSC ಮೂಲಕ ನಡೆಸುವ ಕೆಎಎಸ್ ಪರೀಕ್ಷೆಗಳು ಇದರಲ್ಲಿ ಉತ್ತಮ ಅಂಕಗಳನ್ನು ಪಡೆದರೆ 10ವರ್ಷಗಳ ನಂತರ UPSC ಯ ಹಂತ ತಲುಪಬಹುದು. ಜೊತೆಗೆ ಕರ್ನಾಟಕ ಸರ್ಕಾರದ ಅಡಿಯಲ್ಲಿ ಕೆಲಸ ನಿರ್ವಹಿಸಬಹುದು. ಚಿಕ್ಕ ವಯಸ್ಸಿನಲ್ಲಿ ಉನ್ನತ ಹುದ್ದೆಗಳನ್ನು ಪಡೆಯಬೇಕಾದರೆ ಇಂತಹ ಪರೀಕ್ಷೆಗಳನ್ನು ಬರೆಯಬೇಕು. ಇಂತಹ ಸುವರ್ಣಾವಕಾಶ ಈಗ ಮತ್ತೆ ಒದಗಿ ಬಂದಿದೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಲು ಎಲ್ಲರೂ ಮುಂದಾಗಬೇಕು.

ಕೆಎಎಸ್ ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತದೆ. ಇದೊಂದು ವರ್ಷಪೂರ್ತಿ ನಡೆಯುವ ಪರೀಕ್ಷೆಯಾಗಿದ್ದು, ಇಲ್ಲಿ ತಾಳ್ಮೆ, ಪರಿಶ್ರಮ, ಸತತ ಪ್ರಯತ್ನಗಳು ತುಂಬಾ ಅವಶ್ಯಕವಾಗಿದೆ. 

ಈ ಪರೀಕ್ಷೆ ಬರೆಯಲು ಅರ್ಹರು ಯಾರು?

* ಕನಿಷ್ಠ 21 ವರ್ಷ ಆಗಿರುವವರು ಬರೆಯಬಹುದು

* ಪದವಿಯ ಕೊನೆಯ ಸೆಮ್ ನಲ್ಲಿ ಇರುವವರು

* ವೃತ್ತಿಯಾದಾರಿತ ಕೋರ್ಸ್ಗಳನ್ನು ಮಾಡಿರುವವರು 

Read this one: About UPSC: https://rvwritting.com/upsc/

ಪರೀಕ್ಷೆ ಬರೆಯಲು ವಯೋಮಿತಿ

* 21 ವರ್ಷ ಆಗಿರಬೇಕು

* ಗರಿಷ್ಟ – GM – 35 ವರ್ಷಗಳು

              OBC – 38ವರ್ಷಗಳು

         SC, ST  –  40 ವರ್ಷಗಳು

” ಈ ಬಾರಿ ಪರೀಕ್ಷೆಯನ್ನು ಬರೆಯಲು ಮೂರು ವರ್ಷದ ವಯೋಮಿತಿಯನ್ನು ಸಡಿಸಲಾಗಿದೆ” ಅಂದರೆ GM – 35+3 =38

 OBC 38+3=41

 SC-ST 40+3=43 ಇಷ್ಟು ವರ್ಷ ಇರುವವರು ಕೂಡ ಪರೀಕ್ಷೆ ಬರೆಯಬಹುದಾಗಿದೆ. ಏಕೆಂದರೆ ಕೋವಿಡ್ ಸಂದರ್ಭದಲ್ಲಿ ಯಾವುದೇ ನೇಮಕಾತಿಗಳು ನಡೆಯದ ಕಾರಣವಾಗಿ ವಯೋ ಸಡಿಲಿಕೆಯನ್ನು ನೀಡಲಾಗಿದೆ. 

ಪರೀಕ್ಷೆ  ಹೇಗೆ ನಡೆಯುತ್ತದೆ? 

UPSC ಮಾದರಿಯಲ್ಲೇ ಇಲ್ಲೂ ಕೂಡ 3 ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ. 

* ಪೂರ್ವಭಾವಿ ಪರೀಕ್ಷೆ ( Preliminary exam)

* ಮುಖ್ಯ ಪರೀಕ್ಷೆ ( Main Exam)

* ವ್ಯಕ್ತಿತ್ವ ಪರೀಕ್ಷೆ ( Personality rest)

ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡವರಿಗೆ ಉನ್ನತ ಹುದ್ದೆಗಳು ಅಲಂಕರಿಸುತ್ತವೆ. ಆದ್ದರಿಂದ ವರ್ಷಪೂರ್ತಿ ಈ ಪರೀಕ್ಷೆಗೆ ಓದು ಅವಶ್ಯಕವಾಗಿರುತ್ತದೆ. 

ಮೊದಲ ಹಂತ

1. ಪೂರ್ವಭಾವಿ ಪರೀಕ್ಷೆ( Preliminary Exam)

ಇಲ್ಲಿ 2 ಪತ್ರಿಕೆಗಳಿರುತ್ತವೆ. ಎರಡರಲ್ಲೂ ಬರುವ ಅಂಕಗಳ ಆಧಾರದ ಮೇಲೆ ಮುಖ್ಯ ಪರೀಕ್ಷೆಗೆ ಆಯ್ಕೆಯಾಗುತ್ತಾರೆ. 

* ಪೇಪರ್ 1 – 100 ಅಂಕಗಳು, 2 ಗಂಟೆಗಳು, 

ವಿಷಯಗಳು – 

೧. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಹತ್ವ

೨. ಮಾನವಿಕ ವಿಷಯಗಳು

೩. ಭಾರತೀಯ ಇತಿಹಾಸ

೪. ಭಾರತೀಯ ರಾಜಕೀಯ ಮತ್ತು ಆರ್ಥಿಕತೆ

೫. ಭೂಗೋಳ – ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ.  

ಪೇಪರ್ – 2

೧. ಪ್ರಚಲಿತ ಘಟನೆಗಳು – ರಾಜ್ಯ ಪ್ರಾಮುಖ್ಯತೆ

೨. ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಅಧ್ಯಯನ, ಸಾಮಾನ್ಯ ವಿಜ್ಞಾನ 

೩. ಮೆಂಟಲ್ ಎಬಿಲಿಟಿ

ಮುಖ್ಯ ಪರೀಕ್ಷೆ 

ಇದು ಲಿಖಿತವಾಗಿ ಬರೆಯುವ ಮೂಲಕ ಪರೀಕ್ಷೆಯನ್ನು ಎದುರಿಸಲಾಗುತ್ತದೆ. 

Read this also: https://rvwrittingblog.blogspot.com/2023/11/blog-post_4.html

ಭಾಷಾ ಪರೀಕ್ಷೆ

೧. ಭಾಷಾ ಪರೀಕ್ಷೆ – 150 ಅಂಕಗಳು 

೨. ಇಂಗ್ಲೀಷ್ ಪರೀಕ್ಷೆ – 150 

ಇವೆರಡೂ ಅರ್ಹತಾ ಪರೀಕ್ಷೆಗಳಾಗಿರುತ್ತವೆ. ಇದರಲ್ಲಿ 35% ನಷ್ಟು ಅಂಕ ಪಡೆಯಬೇಕು ಅಂದರೆ 52.5 ಅಂಕಗಳನ್ನು ಪಡೆಯಬೇಕು‌. 

ಕನ್ನಡ ಭಾಷೆಯ ಪಠ್ಯಕ್ರಮ

* ವಿಷಯದ ಸಮಗ್ರ ಅರ್ಥೈಸುವಿಕೆ – 25 ಅಂಕಗಳು

* ಪದ ಪ್ರಯೋಗ – 25 ಅಂಕಗಳು

* ವಿಷಯದ ಸಂಕ್ಷೇಪಣೆ – 25 ಅಂಕಗಳು

* ಪದ ಜ್ಞಾನ  -25 ಅಂಕಗಳು

* ಲಘು ಪ್ರಬಂಧ – 25 ಅಂಕಗಳು

* ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ – 25 ಅಂಕಗಳು. 

ಇಂಗ್ಲೀಷ್ ಭಾಷೆಯ ಪಠ್ಯಕ್ರಮ

* Comprehension of given passage – 25 Marks

* Precise Writing – 25 Marks

* Usage – 25 Marks

* Vocabulary – 25 Marks

* Short Essay – 25 Marks

* Communication Skills – 25 Marks

ಸಾಮಾನ್ಯ ಅಧ್ಯಯನ ಪತ್ರಿಕೆಗಳು  –  General Studies papers – 5 papers 

* ಪೇಪರ್ 1 – ಪ್ರಬಂಧ –  250 marks

* ಪೇಪರ್ 2 – GS -1 – 250 marks

* ಪೇಪರ್ 3 – GS – 2 – 250 Marks

* ಪೇಪರ್ 4 – GS – 3 – 250 Marks 

* ಪೇಪರ್ 5 – GS – 4 – 250 Marks 

Total –    1250 Marks

Venky: ಪೇಪರ್ – 1 

ಪ್ರಬಂಧ 250marks – 3Hrs

ಇದು 2 ಭಾಗ ಹೊಂದಿರುತ್ತದೆ. 

Part – 1  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಹತ್ವ ಹೊಂದಿರುವ ವಿಷಯಗಳು – 125 marks

Part – 2 ರಾಜ್ಯ ಮತ್ತು ಸ್ಥಳೀಯ ಮಹತ್ವ ಹೊಂದಿರುವ ವಿಷಯ – 125 Marks

ಸಾಮಾನ್ಯ ಅಧ್ಯಯನ ಪತ್ರಿಕೆಗಳು

ಪೇಪರ್ – 2 General Studies – 1 – 205 Marks – 3Hrs

* ಇತಿಹಾಸ ಮತ್ತು ಸಾಂಸ್ಕ್ರತಿಕ ಪರಂಪರೆ ( ಭಾರತ ಮತ್ತು ಕರ್ನಾಟಕ)

* ಸಾಮಾಜಿಕ ಮತ್ತು ರಾಜಕೀಯ

* ಭಾರತೀಯ ಆರ್ಥಿಕತೆ, ಯೋಜನೆಗಳು, ಗ್ರಾಮೀಣಾಭಿವೃದ್ಧಿ, ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ.

ಪೇಪರ್ – 3. General studies – 2 – 205 Marks – 3Hrs

* ಭೌಗೋಳಿಕ ಲಕ್ಷಣಗಳು, ನೈಸರ್ಗಿಕ ಸಂಪನ್ಮೂಲಗಳು (ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ)

* ಭಾರತೀಯ ಸಂವಿಧಾನ

* ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ

* ಅಂತರಾಷ್ಟ್ರೀಯ ಸಂಬಂಧಗಳು

ಪೇಪರ್ – 4 General Studies – 3 – 205 Marks – 3Hrs

* ವಿಜ್ಞಾನ ಮತ್ತು ತಂತ್ರಜ್ಞಾನ

* ನೈಸರ್ಗಿಕ ವಿಜ್ಞಾನ, ಜೀವ ವಿಜ್ಞಾನ, ಕೃಷಿ, ವಿಜ್ಞಾನ, ಆರೋಗ್ಯ ಮತ್ತು ನೈರ್ಮಲ್ಯ

* ಪರಿಸರ, ವಿಪತ್ತು ನಿರ್ವಹಣೆ

ಪೇಪರ್ 5, General Studies 4 – 205 Marks – 3Hrs

* Ethics

* Integrity

* Aptitude

3. ವ್ಯಕ್ತಿತ್ವ ಪರೀಕ್ಷೆ – 50 ಅಂಕಗಳು

ಒಟ್ಟು 1300 ಅಂಕಗಳು

ಪುಸ್ತಕಗಳು

* NCERT / DSERT, PUC ಪುಸ್ತಕಗಳು – Social Science   & Science

* GK Books

* ಇತಿಹಾಸ – ಕೆಎನ್ಎ

                ಸದಾಶಿವ

                ಬಿಪಿನ್ ಚಂದ್ರ, ಸ್ಪೆಕ್ಟ್ರಮ್

* ಅರ್ಥಶಾಸ್ತ್ರ – ಎಚ್ಆರ್ ಕೆ

                    ಗರಣಿ ಕೃಷ್ಣಮೂರ್ತಿ

ರಮೇಶ್ ಸಿಂಗ್

* ಭಾರತೀಯ ಸಂವಿಧಾನ – P. s ಗಂಗಾಧರ್

Laxmikanth

* ಭೂಗೋಳಶಾಸ್ತ್ರ – ರಂಗನಾಥ್ (International, National, State)

Mazid Hussain

* ವಿಜ್ಞಾನ – ವೆಂಕಟರಮಣ ಸ್ವಾಮಿ

4G ರವಿ

  Ravi P Agrahari

* ಸಾರ್ವಜನಿಕ ಆಡಳಿತ – Laxmikanth

* ಸಮಾಜಶಾಸ್ತ್ರ – ಚ.ನ. ಶಂಕರರಾವ್ 

* ನೈತಿಕತೆ – D.K ಬಾಲಾಜಿ

2 thoughts on “Now Comes KPSC – KAS – 2024”

  1. Pingback: ಕನ್ನಡ ಸಾಹಿತ್ಯ ಚರಿತ್ರೆ - Kannada Sahitya Charitre - rvwritting

Leave a Comment

Your email address will not be published. Required fields are marked *

Scroll to Top