
Kannada Sahitya Charitre Part – 2. ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮ & ಪಂಪ ಪೂರ್ವ ಯುಗ.
ಕನ್ನಡ ಸಾಹಿತ್ಯ 2000 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವುದರಿಂದ ಅಲ್ಲಿ ಹಲವು ರೂಪದ ಅಥವಾ ತರಹದ ಕೃತಿ ಗ್ರಂಥಗಳನ್ನು ಕಾಣಬಹುದು ಇವನು ನೇರವಾಗಿ ಓದಿದರೆ ಸಹ್ಯವಾಗುವುದಿಲ್ಲ. ಇಲ್ಲಿ ಸರಳವಾಗಿ ಓದಬೇಕಾದರೆ ವಿಭಾಗ ಕ್ರಮ ಅತಿ ಮುಖ್ಯವಾಗುತ್ತದೆ ಇದರಿಂದ ಯಾವುದೇ ಒಂದು ಭಾಷೆಯ ಸಾಹಿತ್ಯ ಪರಿಚಯ ಮಾಡಿಕೊಳ್ಳಬೇಕಾದರೆ ಅಲ್ಲಿ ವಿಭಾಗ ಕ್ರಮ ನಮಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸುತ್ತದೆ ಆ ಭಾಷೆಯ ಸ್ತೂಲ ಪರಿಚಯವನ್ನು ಮಾಡಿಕೊಳ್ಳಲು ಇಲ್ಲಿ ಮುಖ್ಯವಾಗಿ ಕಾಲಘಟ್ಟ ಭಾಷೆ ವೈಶಿಷ್ಟ್ಯತೆಗಳನ್ನು ವಿಭಾಗ ಕ್ರಮದ ಮೂಲಕ ತಿಳಿಯಬಹುದು ಇದರಿಂದ ಸಾಹಿತ್ಯವನ್ನು ಓದುವವರಿಗೆ ಅಥವಾ ಭಾಷೆಯ ಬಗೆಗೆ ತಿಳಿಯುವವರಿಗೆ ವಿಭಾಗ ಕ್ರಮವು ಸೂಕ್ತವಾದ ಒಂದು ಸಂಗತಿಯಾಗಿದೆ
* ಕನ್ನಡ ಸಾಹಿತ್ಯ ಚರಿತ್ರೆKannada Sahitya Charitre -ವಿಭಾಗ ಕ್ರಮಗಳು
ಆರ್ ನರಸಿಂಹಾಚಾರ್ಯರು ತಮ್ಮ ಕರ್ನಾಟಕ ಕವಿ ಚರಿತೆಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮವನ್ನು ಮಾಡಿದ್ದಾರೆ ಇಲ್ಲಿನ ವಿಭಾಗ ಕ್ರಮವು ಧರ್ಮಗಳ ಆಧಾರದ ಮೇಲೆ ವಿಭಾಗಗೊಂಡಿದೆ.
ಅವು ೧. ಜೈನರು
೨. ವೀರಶೈವರು
೩. ವೈಷ್ಣವರು ಇದನ್ನೇ
ಜೈನಯುಗ – ಆರಂಭದಿಂದ – 12ನೇ ಶತಮಾನದವರೆಗೆ
ವೀರಶೈವಯುಗ – 12 ರಿಂದ 15ನೇ ಶತಮಾನದವರೆಗೆ
ಬ್ರಾಹ್ಮಣ ಯುಗ – 15 ರಿಂದ 19ನೇ ಶತಮಾನದವರೆಗೆ
ಇ. ಪಿ. ರೈಸ್
ಇವರು ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದಂತೆ A History of Kannarese Literature ಎಂಬ ಪುಸ್ತಕ ಬರೆದರು. ಇದರಲ್ಲಿ ಸಾಹಿತ್ಯ ರೂಪಗಳ ಮೇಲೆ ವಿಭಾಗ ಕ್ರಮವನ್ನು ಮಾಡಿದ್ದಾರೆ.
ಅವು.
೧ ಜೈನಯುಗ – ಚಂಪೂರೂಪ
೨. ವೀರಶೈವಯುಗ – ಪದ್ಯ ಹೆಚ್ಚಿದ್ದರು, ಷಟ್ಪಧಿ, ತ್ರಿಪದಿ, ರಗಳೆ ರಚನೆ
೩. ಬ್ರಾಹ್ಮಣಯುಗ – ಇಲ್ಲಿ ಹೆಚ್ಚಿನದಾಗಿ ಷಟ್ಪಧಿ, ಕೀರ್ತನೆಗಳ ರಚನೆ. ಇವರು ಈ ವಿಭಾಗ ಕ್ರಮವನ್ನು ಹೊಳೆ ಅಥವಾ ನದಿಗೆ ಹೋಲಿಸಿ ಮಾಡಿದ್ದಾರೆ. ಮುಖ್ಯವಾದ ನದಿ ಅದಕ್ಕೆ ಕವಲುಗಳು ಬಂದು ಸೇರುವಂತೆ ಇಲ್ಲಿ ಭಾಷಾ ಅಂಶಗಳು ಬಂದು ಸೇರಿವೆ ಎಂಬಂತೆ ವಿಭಾಗ ಕ್ರಮವನ್ನು ಮಾಡಿದ್ದಾರೆ.
ಫರ್ಡಿನೆಂಡ್ ಕಿಟ್ಟೆಲ್
ಇವರು ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮವನ್ನು ಮಾಡಿದ್ದಾರೆ. ತಮ್ಮ ಛಂದೋಂಬುಧಿ ಆವರತ್ತಿಯಲ್ಲಿ ‘ಕನ್ನಡ ಸಾಹಿತ್ಯದ ಮೇಲೆ ನಿಬಂಧ’ ಎಂದು ಬರೆಯುವಲ್ಲಿ ವಿಭಾಗ ಕ್ರಮವನ್ನು ಮಾಡಿದ್ದಾರೆ ಜೊತೆಗೆ ಇವರು ಕೂಡ ಧಾರ್ಮಿಕ ವಿಭಾಗ ಕ್ರಮವನ್ನು ಒಪ್ಪಿದ್ದಾರೆ.
ಇವರ ವಿಭಾಗ ಕ್ರಮ
1. ಜೈನಯುಗ – ಹಳಗನ್ನಡ
2. ವೀರ ಶೈವ ಯುಗ – ನಡುಗನ್ನಡ
3. ಬ್ರಾಹ್ಮಣಯುಗ – ಹೊಸಗನ್ನಡ ಎಂದು ತಮ್ಮ ವಿಭಾಗ ಕ್ರಮವನ್ನು ಹೇಳಿದ್ದಾರೆ.
ಎಂ. ಎ ದೊರೆಸ್ವಾಮಯ್ಯಂಗಾರ್
ಇವರು ಕನ್ನಡ ಸಾಹಿತ್ಯ ಚರಿತ್ರೆಯನ್ನು 5 ವಿಭಾಗಗಳಾಗಿ ಮಾಡಿದ್ದಾರೆ.
ಅವು
1. ಮೂಲಗನ್ನಡ ಕಾಲ – ಕ್ರಿ.ಶ 750 ರವರೆಗೆ
2. ಹಳಗನ್ನಡ ಕಾಲ – ಕ್ರಿ.ಶ 750 ರಿಂದ 1150ರವರೆಗೆ
3. ಮಧ್ಯ ಕನ್ನಡ ಕಾಲ – 1150 ರಿಂದ 1500ರವರೆಗೆ
4. ಹೊಸಗನ್ನಡ ಕಾಲ – 1500 ರಿಂದ 1850
5. ನವಗನ್ನಡ ಕಾಲ – 1850 ರಿಂದ……………
ಕನ್ನಡವಕ್ಕಿ
ಕನ್ನಡವಕ್ಕಿ ಎಂಬ ಅಂಕಿತನಾಮ ಹೊಂದಿರುವ ತಿ.ತಾ ಶರ್ಮರು ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮವನ್ನು ಕವಿ – ಕರ್ಮಕ್ಕೆ ಮೂಲವಕಾರಣವಾದ ಸ್ಪೂರ್ತಿ ವಿಶೇಷವನ್ನು ಗಮನಿಸಿ ಕಾವ್ಯಕ್ಕೆ ರಸವೇ ಮುಖ್ಯ ಎಂದು ಹೇಳುತ್ತಾ ವಿಭಾಗ ಕ್ರಮವನ್ನು ನೀಡಿದ್ದಾರೆ.
1. ಕ್ಷಾತ್ರಯುಗ – 10 – 12ನೇ ಶತಮಾನದವರೆಗೆ
2. ಮತ ಪ್ರಚಾರಕ ಯುಗ – 12 – 16ನೇ ಶತಮಾನದವರೆಗೆ
3. ಸಾರ್ವಜನಿಕ ಯುಗ – 16 – 19ನೇ ಶತಮಾನದವರೆಗೆ
4. ಆಧುನಿಕ ಯುಗ – 19 ನೇ ಶತಮಾನದಿಂದ……….
ಕೆ. ವೆಂಕಟರಾಮಪ್ಪ
ಇವರು ತಮ್ಮ ಕನ್ನಡ ಸಾಹಿತ್ಯದಲ್ಲಿ ವಿಭಾಗ ಕ್ರಮವನ್ನು ಮಾಡಿದ್ದಾರೆ. ಇಲ್ಲಿ ಆಯಾ ಕಾಲದಲ್ಲಿ ಪ್ರಸಿದ್ಧರಾದ ಕವಿ ಅಥವಾ ಕಾವ್ಯದ ವೈಶಿಷ್ಟ್ಯತೆಯ ಮೇಲೆ ವಿಭಾಗ ಕ್ರಮ ಮಾಡಿದ್ದಾರೆ. ಅವು
1. ಆರಂಭಕಾಲ – ಕ್ರಿ.ಶ 900 ರವರೆಗೆ
2. ಪಂಪಯುಗ ಅಥವಾ ಚಂಪೂಯುಗ
3. ಸ್ವಾತಂತ್ರಯುಗ
4. ಚಿಕ್ಕದೇವರಾಯರ ಕಾಲ
5. ಸಂಧಿಕಾಲ
ಬಿ.ಎಂ.ಶ್ರೀಕಂಠಯ್ಯ
ಬೆ.ಎಂ.ಶ್ರೀ ಎಂದೇ ಖ್ಯಾತರಾಗಿರುವ ಇವರು, ಕನ್ನಡದ ಕಣ್ವ ಎಂದೇ ಪ್ರಸಿದ್ಧರಾಗಿದ್ದಾರೆ. ಕನ್ನಡ ಕೈಪಿಡಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮವನ್ನು ನಾಡಿನ ಜೀವನದಿಯಾದ ಕಾವೇರಿಗೆ ಹೋಲಿಸಿ ವಿಭಾಗ ಕ್ರಮ ಮಾಡಿದ್ದಾರೆ.
ಅವು –
1. ಆರಂಭ ಕಾಲ – 10ನೇ ಶತಮಾನದವರೆಗೆ
2. ಮತ ಪ್ರಾಬಲ್ಯ ಕಾಲ – 10 ರಿಂದ 19ನೇ ಶತಮಾನದವರೆಗೆ.
* ಜೈನ ಕವಿಗಳು – 10 ನೇ ಶತಮಾನದವರೆಗೆ
* ವೀರ ಶೈವ ಕವಿಗಳು – 12 ಶತಮಾನ
* ಬ್ರಾಹ್ಮಣ ಕವಿಗಳು – 15 ನೇ ಶತಮಾನ
3. ನವೀನ ಕಾಲ – 19ನೇ ಶತಮಾನ.
ರಂ ಶ್ರೀ ಮುಗಳಿ
ಕನ್ನಡ ಸಾಹಿತ್ಯ ಚರಿತ್ರೆಯ ವಿಭಾಗ ಕ್ರಮವನ್ನು ತಮ್ಮ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕೃತಿಯಲ್ಲಿ ಮಾಡಿದ್ದಾರೆ. ಇಲ್ಲಿ
1. ಪಂಪ ಯುಗ
2. ಬಸವ ಯುಗ
3. ಕುಮಾರವ್ಯಾಸ ಯುಗ ಎಂದು 3 ವಿಭಾಗಗಳನ್ನು ಮಾಡಿದ್ದಾರೆ.
ತ.ಸು ಶಾಮರಾಯ
ಇವರು ತಮ್ಮ ಕೃತಿಯಲ್ಲಿ
1. ಪಂಪ ಪೂರ್ವಯುಗ
2. ಪಂಪಯುಗ
3. ಹರಿಹರ ಯುಗ
4. ಕುಮಾರವ್ಯಾಸ ಯುಗ ಎಂದು ವಿಭಾಗ ಕ್ರಮವನ್ನು ಹೇಳಿದ್ದಾರೆ.
See this video: https://youtu.be/qvO2FXr3x78?si=dbChpn5-oJSGueo6
Kannada Sahitya Charitre – ಪಂಪ ಪೂರ್ವ ಯುಗ
ಇದು 5ನೇ ಶತಮಾನದಿಂದ ಕವಿರಾಜಮಾರ್ಗದವರೆಗಿನ ಕಾಲಘಟ್ಟವೆಂದು ಹೇಳಬಹುದು. ಸಕಾಲದಲ್ಲಿ ಕಂಡು ಬರುವ ಕವಿಗಳು.
1. ಅಸಗ:
ಇವನನ್ನು ಪೊನ್ನ ಹೊಗಳಿದ್ದಾನೆ. “ಕನ್ನಡ ಕವಿತೆಯೊಳ್ ಅಸಗಂಗಂ ನೂರ್ಮಡಿ” ಇದರ ಜೊತೆಗೆ ದುರ್ಗಸಿಂಹ, ನಯಸೇನರು ಇವನನ್ನು ಹೊಗಳಿದ್ದಾರೆ.
ಕೃತಿಗಳು:
*ಕರ್ನಾಟ ಕುಮಾರ ಸಂಭಾವ ಕಾವ್ಯಂ
* ವರ್ಧಮಾನ ಚರಿತೆ
* ಶಾಂತಿಪುರಾಣ
2. ಗುಣನಂದಿ
ಇವನ ಬಿರುದುಗಳು
* ಚಾರಿತ್ರ ಚಕ್ರೇಶ್ವರ
* ತರ್ಕವ್ಯಾಕರಣಾದಿಶಾಸ್ತ್ರ ನಿಪುಣ
* ಸಾಹಿತ್ಯ ವಿದ್ಯಾಪತಿ
ಕೃತಿಗಳು:
1. ಪೂಜ್ಯಪಾದನ ‘ಜೈನೇಂದ್ರ ವ್ಯಾಕರಣಕ್ಕೆ ಪ್ರಕ್ರಿಯಾವತಾರವೆಂಬ ವ್ಯಾಖ್ಯಾನ ಬರೆದಿದ್ದಾರೆ.
2. ಭಟ್ಟಾಕಳಂಕ : “ಭಗವಾನ್ ಗುಣನಂದಿ ಎಂದಿದ್ದಾನೆ
ಗುಣವರ್ಮ – 1
ಇವನ ಕೃತಿಗಳು
೧. ಶೂದ್ರಕ
೨. ಹರಿವಂಶ.
ಇವೆರಡೂ ಚಂಪೂ ಕಾವ್ಯಗಳಿರಬಹುದೆಂದು ಊಹಿಸಲಾಗಿದೆ.
| ReplyForwardAdd reaction |
| ReplyForwardAdd reaction |

Pingback: ಕರ್ನಾಟಕದ ಜೌಗು ಪ್ರದೇಶಗಳು #Wetlands of Karnataka -Karnataka Placed new 3 wetlands - rvwritting
Pingback: All of you Read - Kannada Sahitya Charitre Part - 3. ಕನ್ನಡ ಸಾಹಿತ್ಯ ಚರಿತ್ರೆ. ಪಂಪ ಯುಗ - ಪಂಪ - rvwritting
Pingback: KAS - 2024, ಕರ್ನಾಟಕ ಇತಿಹಾಸದ ಸಂಕ್ಷಿಪ್ರ ಪರಿಚಯ- Karnataka History - rvwritting