ಕರ್ನಾಟಕದ ಜೌಗು ಪ್ರದೇಶಗಳು #Wetlands of Karnataka – World wetland day – February 2 ನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಈ ಬಾರಿಯೂ ಫೆಬ್ರವರಿ 2 ರಂದು ಆಚರಿಸುವ ಮುನ್ನದಿನ ಭಾರತದ 5 ಪ್ರದೇಶಗಳನ್ನು Ramsar Wetlands ಗಳ ಪಟ್ಟಿಗೆ ಸೇರಿಸಿತು. ಇದರಲ್ಲಿ ಕರ್ನಾಟಕದಿಂದ 3 ಸ್ಥಳಗಳನ್ನು ಮತ್ತು ತಮಿಳುನಾಡಿನ 2 ಸ್ಥಳಗಳನ್ನು ಹೊಸದಾಗಿ ಭಾರತದಿಂದ ಆಯ್ಕೆಯಾಗಿವೆ. ಇದರಿಂದ ಭಾರತದಲ್ಲಿನ ರಾಮ್ಸಾರ್ ಸ್ಥಳಗಳ ಸಂಖ್ಯೆ 80ಕ್ಕೆ ಮುಟ್ಟಿದೆ.
See this video: https://youtu.be/39_yFQASVLY?si=dZHdc3vxhVMRqtTB
ಕರ್ನಾಟಕದಿಂದ ಆಯ್ಕೆಯಾಗಿರುವ ತಾಣಗಳು ಮೂರು.
ಅವು
1. ಮಾಗಡಿವಕೆರೆ ಸಂರಕ್ಷಣಾ ಮೀಸಲು ಪ್ರದೇಶ – ಗದಗ
2. ಅಘನಾಶಿನಿ ಅಳಿವೆ – ಗೋಕರ್ಣ – ಉತ್ತರ ಕನ್ನಡ
3. ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು – ಹಂಪಿ – ವಿಜಯನಗರ
ತಮಿಳುನಾಡಿನಿಂದ ಆಯ್ಕೆಯಾಗಿರುವ 2 ಸ್ಥಳಗಳು
1. ಕರೈವೆಟ್ಟಿ ಪಕ್ಷಿ ಸಂರಕ್ಷಣಾ ಪ್ರದೇಶ
2. ಲಾಂಗ್ ವುಡ್ ಶೋಲಾ ಮೀಸಲು ಅರಣ್ಯ( ಇದು ನೀಲಗಿರಿ ಬೆಟ್ಟಗಳ ಅರಣ್ಯವಿಭಾಗದಲ್ಲಿ ಬರುತ್ತದೆ).
ಇದರ ಮೂಲಕ ದೇಶದಲ್ಲಿ ಅತಿಹೆಚ್ಚು ರಾಮ್ಸಾರ್ ತಾಣಗಳನ್ನು ಹೊಂದಿದ ರಾಜ್ಯವಾಗಿ ತಮಿಳುನಾಡು(16) ಮತ್ತು ಉತ್ತರಪ್ರದೇಶ(10)ಮುಂದಾಗಿವೆ. ಜೊತೆಗೆ ಕರ್ನಾಟಕದಲ್ಲಿ 3 ಹೊಸ ತಾಣಗಳನ್ನು Ramsarಗೆ ಸೇರ್ಪಡೆಗೊಳಿಸುವ ಮೂಲಕ ಒಟ್ಟು ಕರ್ನಾಟಕದಲ್ಲಿ 4 ರಾಮ್ಸಾರ್ ತಾಣಗಳಾಗಿವೆ.
ಕರ್ನಾಟಕದ ಜೌಗು ಪ್ರದೇಶಗಳು Wetlands of Karnataka -ರಂಗನತಿಟ್ಟು ಪಕ್ಷಿಧಾಮ
ದಕ್ಷಿಣ ಭಾರತದಲ್ಲಿ 2022ರವರೆಗೆ Ramsar Sites ಗಳನ್ನೇ ಹೊಂದಿಲ್ಲದ ರಾಜ್ಯವಾಗಿ ಕರ್ನಾಟಕವಿತ್ತು. 2022 ರ ಆಗಸ್ಟ್ ನಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯ, ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮ Ramsar site ಆಗಿ ಆಯ್ಕೆಯಾಯಿತು. ಇದರ ಮೂಲಕ ಹೆಚ್ಚಿನ ಸಂರಕ್ಷಣೆಗೆ ಈ ತಾಣ ಒಳಗಾಯಿತು. ಹಾಗೆಯೇ ಇದನ್ನು ಪಕ್ಷಿಕಾಶಿ ಎಂಬ ಅನ್ವರ್ಥಕನಾಮದಿಂದಲೂ ಕರೆಯುತ್ತಾರೆ. ಇಲ್ಲಿಗೆ ಆಫ್ರಿಕಾ, ಸೈಬೀರಿಯಾಗಳಿಂದ ವಲಸೆ ಹಕ್ಕಿಗಳು ಬಂದು ತಮ್ಮ ಸಂತನೋತ್ಪತ್ತಿಗಾಗಿ ಇಲ್ಲಿ ಗೂಡು ಕಟ್ಟಿ ಮರಿ ಮಾಡಿ ನಂತರ ತಾವು ಎಲ್ಲಿಂದ ಬಂದಿದ್ದವೋ ಅಲ್ಲಿಗೆ ಮತ್ತೆ ಮರಳುತ್ತವೆ. ಈ ಪಕ್ಷಿಧಾಮವು ಕಾವೇರಿ ನದಿಯ ದಡದಲ್ಲಿದೆ.
ರಂಗನತಿಟ್ಟು ಪಕ್ಷಿಶಾಸ್ತ್ರಜ್ಞ ಸಲೀಂ ಅಲಿ ಅವರು ಸರ್ವೆ ಮಾಡಿದ ನಂತರ ಇದಕ್ಕೆ ಪಕ್ಷಿಧಾಮ ಎಂಬ ಹೆಸರು ಪಡೆಯಿತು. ಜುಲೈ 1 – 1940ರಲ್ಲಿ ನಾಲ್ವಡಿ ಕರಷ್ಣರಾಜ ಒಡೆಯರ್ ಕಾಲದಲ್ಲಿ ಪಕ್ಷಿಧಾಮವೆಂದು ಘೋಷಿಸಲಾಯಿತು.
ಇಲ್ಲಿ ವಿದೇಶಿ ಪಕ್ಷಿಗಳಾದ ಯುರೇಶಿಯನ್ ಸ್ಪೂನ್ ಬಿಲ್, ಪೆಯಿಂಟೆಡ್ ಸ್ಟೋರ್ಕ್, ನೈಟ್ ಹೇರಾನ್, ಓಪನ್ ಬಿಲ್ ಸ್ಟೋರ್ಕ್, ಬ್ಲಾಕ್ ಹೆಡೆಡ್ ವೈಟ್ ಹೈಬೀಸ್, ಮಾರ್ಷ್ ತಳಿಯ ಮೊಸಳೆಗಳ ಸಂತತಿ, ಮಾಷಿರ್ ತಳಿಯ ಮೀನುಗಳು ಕಾವೇರಿ ನದಿಯಲ್ಲಿವೆ. ಇಲ್ಲಿ ಒಟ್ಟು 188 ಜಾತಿಯ ಸಸ್ಉಗಳು , 225 ಜಾತಿಯ ಪಕ್ಷಿಗಳು, 69 ಜಾತಿಯ ಮೀನುಗಳು, 13ಜಾತಿಯ ಕಪ್ಒಎಗಳು, 30 ಜಾತಿಯ ಚಿಟ್ಟೆಗಳನ್ನು ಒಳಗೊಂಡಿದೆ.
Ramsar ಪಟ್ಟಿಗೆ ಸೇರಿದ ಕರ್ನಾಟಕದ 3 ತಾಣಗಳು
1. ಮಾಗಡಿ ಕೆರೆ –
2024 ಫೆಬ್ರವರಿ 1 ರಂದು ಕರ್ನಾಟಕದಿಂದ Ramsar ಗೆ ಸೇರಿದ ತಾಣ. ಇದು ಗದಗ ಜಿಲ್ಲೆ, ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಬರುತ್ತದೆ. ಜೊತೆಗೆ ಇದು ದಕ್ಷಿಣ ಭಾರತದಲ್ಲಿ ಬಾರ್ ಹೆಡೆಡ್ ಗೂಸ್ ಗೆ ಅತಿದೊಡ್ಡ ಚಳಿಗಾಲದ ಮೈದಾನವನ್ನು ಒದಗಿಸುತ್ತದೆ. ಇದು 54.38ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಮಾಗಡಿ ಕೆರೆಯನ್ನು ಮಾನ್ಸೂನ್ ಮಳೆಯ ನೀರನ್ನು ಸಂಗ್ರಹಿಸಲು ಕಟ್ಟಿದ ಕೆರೆಯಾಗಿದೆ. ಇಲ್ಲಿ 165ಕ್ಕಿಂತ ಹೆಚ್ಚಿನ ಪಕ್ಷಿ ಸಂಕುಲಗಳಿಗೆ ಆವಾಸವಾಗಿದೆ. ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿಯೂ ಇದು ಗುರುತಿಸಿಕೊಂಡಿದೆ. ಇಲ್ಲಿ ಬರುವ ಪಕ್ಷಿಗಳು ಗ್ರೇಲಾಗ್ ಗೂಸ್, ಕಂದು ಬಾತು, ನಾರ್ಥರ್ನ್ ಶಾಲರ್, ಕಾಮನ್ ಪ್ಲಚಾರ್ಡ್, ಹಾಗೆಯೇ ಕೆರೆಯ ಸುತ್ತಲಿನ ಪ್ರದೇಶ ಅಂದರೆ ಅದರ ಸುತ್ತ ಇರುವ ಕೃಷಿ ಭೂಮಿಯು ಇದರ ಮೇಲೆ ಅವಲಂಬಿತವಾಗಿದೆ.
2. ಅಘನಾಶಿನಿ ಅಳಿವೆ
ಉತ್ತರ ಕನ್ನಡದ ಕುಮಟಾದಲ್ಲಿ ಅರಬ್ಬೀ ಸಮುದ್ರ ಸೇರುವ ಅಘನಾಶಿನಿ ನದಿ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಇದು ಸಮದ್ರ ಸೇರುವಾಗ 4801 ಹೆಕ್ಟೇರ್ ನಷ್ಟು ವ್ಯಾಪ್ತಿಯ ಅಳಿವೆಯನ್ನು ಸೃಷ್ಠಿಸುತ್ತದೆ. ಇದರೊಂದಿಗೆ 66ವಿಧಧ ನೀರು ಪಕ್ಷಿಗಳಿಗೆ, ವಿವಿಧ ಜಾತಿಯ ಜಲಚರಗಳು ಮತ್ತು 6500 ರಿಂದ 7000ದವರೆಗಿನ ಕುಟುಂಬಗಳಿಗೆ ಜೀವನಾಧಾರವನ್ನು ಒದಗಿಸಿದೆ ಇದರೊಂದಿಗೆ ಅಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆ ಮತ್ತು ಪರಿಸರಕ್ಕೆ ಧಕ್ಕೆ ತರುವ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿದೆ. ಇಲ್ಲಿನ ಕಾಡಿನ ಸಂರಕ್ಷಣೆಯು ಸಾಧ್ಯವಾಗಲಿದೆ. ಅಘನಾಶಿನಿ ಇದನ್ನು ತಡ್ರಿ ನದಿ ಎಂದೂ ಕರೆಯಲಾಗುತ್ತದೆ. ಇದರೊಂದಿಗೆ ದಕ್ಷಿಣ ಭಾರತದಲ್ಲಿ ಅಣೆಕಟ್ಟುಗಳನ್ನು ಕಟ್ಟದೆ ಹಾಗೆ ಹರಿಯುತ್ತಿರುವ ನದಿಗಳಲ್ಲಿ ಇದು ಒಂದಾಗಿದೆ. ಇದರೊಂದಿಗೆ ಇಲ್ಲಿನ ಕೃಷಿ, ಮೀನು ಹಿಡಿಯುವವರು, ಭೇಸಾಯಗಾರರು ಮುಂತಾದವರ ಜೋವನೋಪಾಯಕ್ಕೆ ಸಹಾಯಕವಾಗಿದೆ.
ಇಲ್ಲಿ ಬರುವ ಪಕ್ಷಿಗಳು ರಿವರ್ ಟರ್ನ್, ಓರಿಯಂಟಲ್ ಡಾಟರರ್, ಉಣ್ಣೆಯ ಜಯತ್ತಿಗೆಯ ಕೊಕ್ಕರೆ, ಯುರೇಷಿಯನ್ ಸಿಂಪಿ ಕ್ಯಾಚರ್ ಮುಂತಾದವು.
3. ಅಂಕ ಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು
ಇದೊಂದು ಮಾನವ ನಿರ್ಮಿತ ಕೆರೆ. ಇದು ನೀರಾವರಿಗಾಗಿ ನಿರ್ಮಿಸಲಾಗಿದ್ದು, 98.76ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ 210ಕ್ಕೂ ಹೆಚ್ಚಿನ ಜಾತಿಯ ಸಸ್ಯಗಳು, 8 ಜಾತಿಯ ಸಸ್ತನಿಗಳು , 25 ಜಾತಿಯ ಸರೀಸೃಪಗಳು, 240 ಜಾತಿಯ ಪಕ್ಷಿಗಳು, 41 ಜಾತಿಯ ಮೀನುಗಳು, 3 ಜಾತಿಯ ಕಪ್ಪೆಗಳು, 27 ಜಾತಿಯ ಚಿಟ್ಟೆಗಳು.
ಇದು ವಿಜಯ ನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರದಲ್ಲಿ ಬರುತ್ತದೆ. ಇಲ್ಲಿ 150ಕ್ಕಿಂತ ಹೆಚ್ಚು ಜಾತಿಯ ಪಕ್ಷಿಗಳಿವೆ. ಇಲ್ಲಿ ಸ್ಥಳೀಯ ಮತ್ತು ವಲಸೆ ಜಾತಿಯ ಪಕ್ಷಿಗಳನ್ನು ಕಾಣಬಹುದಾಗಿದೆ. ಇಲ್ಲಿ ಕೊಕ್ಕರೆ, ಸ್ಪಾಟ್-ಬಿಲ್ಡ್-ಪೆಲಿಕನ, ನವಿಲು, ಬೂದು ತಲೆಯ ಮೀನು ಹದ್ದು ಜೆತೆಗೆ ತೇವ ಪ್ರದೇಶ, ಕುರುಚಲು ಕಾಡು ಮತ್ತು ಕೃಷಿ ಕ್ಷೇತ್ರಗಳನ್ನು ಒಳಗೊಂಡಿದೆ.
Ramsar Sites
ಇರಾನ್ ನಲ್ಲಿ 1971 ರಲ್ಲಿ ತೇವ ಭೂಮಿಗಳ ಸಂರಕ್ಷಣೆಗಾಗಿ ಒಪ್ಪಂದ ಮಾಡಿಕೊಳ್ಳಲಾಯ್ತು. 2ನೇ ಫೆಬ್ರವರಿ 1971 ರಲ್ಲಿ ಸಹಿ ಮಾಡಿದ್ದರ ಸವಿ ನೆನಪೊಗಾಗಿ World wetlands Day ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. ಭಾರತವು ಫೆಬ್ರವರಿ 1 1982ರಲ್ಲಿ ಸಹಿ ಹಾಕುವ ಮೂಲಕ ಈ ಗುಂಪಿಗೆ ಸೇರಿತು. ಇದರೊಂದಿಗೆ WWD – 2024 theme – ವಿಷಯ “Wetland and H human and W ellbeing” – ಇದು ನಮ್ಮ ಜೀವನವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದಾಗಿದೆ ಇಂತಹ ಜೌಗು ಪ್ರದೇಶಗಳು ಮಾನವರ ಆರೋಗ್ಯ ಮತ್ತು ಅವನ ಸಮೃದ್ಧಿಯನ್ನು ಹೆಚ್ಚಿಸಲು ಸಹಾಯಕವಾಗಿರುತ್ತವೆ. ಇದರಿಂದಾಗಿ ಇದರ ಹೆಚ್ಚಿನ ಸಂರಕ್ಷಣೆಯನ್ನು ಮಾಡಲು ಮುಂದಾಗಬಹುದಾಗಿದೆ.
ಆಯ್ಕೆಯ ಮಾನದಂಡ
ರಾಮ್ಸರ್ ಸೈಟ್ ಟ್ಯಾಗ್ ಅನ್ನು ಸ್ವೀಕರಿಸಲು ಆರ್ದ್ರಭೂಮಿಗೆ ಒಂದು ಮಾನದಂಡವೆಂದರೆ ಅದು ದುರ್ಬಲವಾದ, ವಿಮರ್ಶಾತ್ಮಕವಾಗಿ-ಅಳಿವಿನಂಚಿನಲ್ಲಿರುವ ಜಾತಿಗಳನ್ನು ಬೆಂಬಲಿಸಬೇಕು; ತಮ್ಮ ಜೀವನಚಕ್ರದ ನಿರ್ಣಾಯಕ ಹಂತದಲ್ಲಿ ಜಾತಿಗಳ ಜನಸಂಖ್ಯೆಯನ್ನು ಆಶ್ರಯಿಸುವುದು ಅಥವಾ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಆಶ್ರಯವನ್ನು ಒದಗಿಸುವುದು, ನಿಯಮಿತವಾಗಿ 20,000 ಅಥವಾ ಹೆಚ್ಚಿನ ನೀರಿನ ಪಕ್ಷಿಗಳನ್ನು ಬೆಂಬಲಿಸುವುದು; ಅಥವಾ ಇದು ಸಸ್ಯ ಮತ್ತು ಪ್ರಾಣಿಗಳನ್ನು ಬೆಂಬಲಿಸಿದರೆ, ನಿರ್ದಿಷ್ಟ ಜೈವಿಕ ಭೌಗೋಳಿಕ ಪ್ರದೇಶದ ಜೈವಿಕ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.
ReplyForwardAdd reaction |
Pingback: ವಚನಗಳು - Vachanagalu - rvwritting