Talakadina Gangaru – ತಲಕಾಡಿನ ಗಂಗರು – History of Karnataka part – 3 Must read for upcoming exams

ತಲಕಾಡಿನ ಗಂಗರು - Talakadina Gangaru
ತಲಕಾಡಿನ ಗಂಗರು – Talakadina Gangaru

 Talakadina Gangaru ತಲಕಾಡಿನ ಗಂಗರು ಕರ್ನಾಟಕದ ಪ್ರಮುಖ ರಾಜಮನೆತನಗಳಲ್ಲಿ ಗಂಗರೂ ಕೂಡ ಒಬ್ಬರು. ಸುಮಾರು ೬ ಶತಮಾನಗಳವರೆಗೆ ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಂಡು ನಂತರ ರಾಷ್ಟ್ರಕೂಟ ಮುಂತಾದವರ ಸಾಮಂತ ಅಥವಾ ಮಂಡಳಿಕರಾಗಿಯೂ ಅಧಿಕಾರ ನಡೆಸಿದವರು.  ಇಷ್ಟು ವಿಸ್ತೃತವಾದ ಅವಧಿಯಲ್ಲಿ ಆಳಿದ ಗಂಗರು ತಮ್ಮ ಸಾಮ್ರಾಜ್ಯವು ಉತ್ತರಕ್ಕೆ ಮರಂದಲೇ, ಪೂರ್ವಕ್ಕೆ ತೊಂಡೈನಾಡು, ದಕ್ಷಿಣಕ್ಕೆ ಕೊಂಗುನಾಡು, ಪಶ್ಚಿಮಕ್ಕೆ ಅರಬ್ಬಿ ಸಮುದ್ರ ಗಡಿಯಾಗಿರುವ ವಿಸ್ತಾರ ಸಾಮ್ರಾಜ್ಯವನ್ನು ಹೊಂದಿದ್ದರು.

See the Kadambaru Video: https://youtu.be/smGH_8FP3g8?si=wqOSHfw-M_PYG2Nk

* ಇವರು ಆಳಿದ ಪ್ರದೇಶವನ್ನು ಗಂಗವಾಡಿ 96,000 ಎಂದು ಕರೆಯಲಾಗುತ್ತದೆ.

* ಇವರ ಮೂರು ರಾಜಧಾನಿಗಳನ್ನು ಹೊಂದಿದ್ದರು ಅವು ಕುವಲಾಲ, ತಲಕಾಡು, ಮಣ್ಣೆ ಅಥವಾ ಮಾಕುಂದವಾಗಿದ್ದವು.

* ಇವರ ರಾಜ ಲಾಂಛನ ಆನೆಯಾಗಿತ್ತು.

ಗಂಗರ ಮೂಲ ಶಾಸನಾಧಾರಗಳು

* ಕಲ್ಲೂರು ಗುಡ್ಡ ಶಾಸನ – ಇದರಲ್ಲಿ ಇವರು ಅಯೋಧ್ಯೆಯನ್ನು ಆಳುತ್ತಿದ್ದ ಇಕ್ಷಾಕು ಸಂತರಿಗೆ ಸೇರಿದವರು ಎಂದು ಹೇಳಿದೆ. ಭರತನ ಮಡದಿ ವಿಜಯ ಮಹಾದೇವಿಗೆ ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಗಂಡು ಮಗು ಜನಿಸಿತು. ಗಂಗದತ್ತ ಇವನೇ ಇವರ ಮೂಲಪುರುಷ.

* ಕೂಡಲೂರು ಶಾಸನ – ಜೈನ ಮುನಿ ಸಿಂಹ ಮಹಾನಂದಿ ಪದ್ಮಾವತಿ ದೇವಿಯ ಅನುಗ್ರಹದಿಂದ ಗಂಗ ಸಂತತಿ ಸ್ಥಾಪಿತವಾದ ವರ್ಣನೆ ಇದೆ.

* ಹೆಬ್ಬೆಟ್ಟ ಶಾಸನ – ದುರ್ವಿನಿತ. ಇದರಲ್ಲಿ ಇವನ ಮತ್ತು ಗಂಗರ ವಂಶದ ಮಾಹಿತಿ ಲಭ್ಯವಿದೆ.

Talakadina Gangaru – ತಲಕಾಡಿನ ಗಂಗರು – ಸಂಶೋಧಕರುಗಳ ಆಧಾರ

 ಕೆ.ಪಿ ಜಯಸ್ವಾಲ್ –  ಇವರನ್ನು ಕಣ್ವ ಗೋತ್ರಕ್ಕೆ ಸೇರಿಸಿದ್ದಾರೆ, ಕಾಲಕ್ರಮೇಣ ವಂಶದ ಹೆಸರಾದ ಗಂಗ ಹೆಸರು ಪಡೆಯಿತು ಎಂದಿದ್ದಾರೆ.

* ಆರೋಕಿಯ ಸ್ವಾಮಿ “ಕೊಂಗುದೇಶ ರಾಜಕ್ಕಳ್” ತಮಿಳು ಗ್ರಂಥದ ಆಧಾರವಾಗಿ ಇವರು ಕೊಯಮತ್ತೂರಿನ ಪೆರೂರಿನವರೆಂದು ಹೇಳಿದ.

* ಡಾಕ್ಟರ್ ಬಿ ಶೇಖ್ ಅಲಿ,  ಎಮ್.ವಿ  ಕೃಷ್ಣರಾವ್ ಮೊದಲಾದವರು ಗಂಗರು ಕನ್ನಡ ನಾಡಿನ ಮೂಲದವರು ಎಂದಿದ್ದಾರೆ.

ಸಾಹಿತ್ಯ ಆಧಾರಗಳು

 ಶ್ರೀ ಪುರುಷನ – ಗಜ ಶಾಸ್ತ್ರ ಚಾವುಂಡರಾಯನ –  ಚಾವುಂಡರಾಯ ಪುರಾಣ ಅಥವಾ ತ್ರಿಶಷ್ಟಿ ಲಕ್ಷಣ ಮಹಾಪುರಾಣ

ಭಾರವಿಯ – ಕಿರಾತರ್ಜನೀಯ.

Read Kadambaru: https://rvwritting.com/%e0%b2%95%e0%b2%a6%e0%b2%82%e0%b2%ac%e0%b2%b0%e0%b3%81-%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%87%e0%b2%a4%e0%b2%bf%e0%b2%b9%e0%b2%be%e0%b2%b8-kadambaru/

Talakadina Gangaru – ತಲಕಾಡಿನ ಗಂಗರು – ರಾಜಕೀಯ ಇತಿಹಾಸ

೧.ದಡಿಗ – 

*ಗಂಗ ವಂಶದ ಸ್ಥಾಪಕ.

*  ಶಾಸನಗಳಲ್ಲಿ ಈತನನ್ನು ಕೊಂಗಣಿವರ್ಮ ಅಥವಾ ಕೊಂಕಣಿವರ್ಮನೆಂದು ಗುರುತಿಸಿದೆ.

*  ಬಾಣರನ್ನು ಸೋಲಿಸಿ ಬಾಣವಂಶವನದಾವಾನಲ ಎಂಬ  ಬಿರುದು ಪಡೆದನು. 

೨. ಒಂದನೇ ಮಾಧವ

ಹರಿ ವರ್ಮ ಹರಿವರ್ಮನ ಮೂರು ಮಕ್ಕಳಲ್ಲಿ ಇಮ್ಮಡಿ ಮಾಧವ ವಿಷ್ಣು ಗೋಪಾ

ವೀರ ವರ್ಮ

ಇದರಲ್ಲಿ ವಿಷ್ಣು ಗೋಪನ ಮಗ ಮುಮ್ಮಡಿ ಮಾಧವ ಇವನು ಆಳ್ವಿಕೆಯನ್ನು ನಡೆಸಿದನು ಎರಡನೇ ಕೃಷ್ಣ ವರ್ಮ ಕದಂಬರು ಇವನ ಮಗಳ ಜೊತೆ ವಿವಾಹವನ್ನು ಮಾಡಿದರು೩. ಅವನಿತ ಇವನು ಜೈನ ಗುರುಗಳ ಅನುಗ್ರಹದಿಂದ ಜೈನ ಮತ ಸ್ವೀಕಾರ

೪. ದುರ್ವಿನೀತ – 

* ಗಂಗರ ಪ್ರಸಿದ್ಧ ದೊರೆ 

* ಹೆಬ್ಬಟ್ಟ ಶಾಸನ ಹೊರಡಿಸಿದವನು.

*  ಪಲ್ಲವರ ವಿರುದ್ಧ ಹೋರಾಡಿ ಅಂಧೇರಿ, ಕೊಯಮತ್ತೂರು, ಸೇಲಂ, ಚಂಗಲ್ ಪೇಟೆ, ವಶ.

*  ಪುನ್ನಾಟ ತನ್ನ ತಾಯಿಯ ಮೂಲಕ ಸೇರಿತು.

* ಪಲ್ಲವರನ್ನು ಸೋಲಿಸಿ ಚಾಲುಕ್ಯರ ರಾಜ್ಯ ರಕ್ಷಿಸಿದನು. ಇದರಿಂದ ಗಂಗಾ ಚಾಲುಕ್ಯರ ನಡುವೆ ಬಾಂಧವ್ಯ ಬೆಳೆಯಿತು.

*  ಕವಿರಾಜಮಾರ್ಗ ಕೃತಿಯಲ್ಲಿ ದುರ್ವಿನೀತನ ಉಲ್ಲೇಖವಿದೆ.

*  ಭಾರವಿಯ ಕಿರಾತಾರ್ಜುನೀಯದ 15ನೇ ಸರ್ಗಕ್ಕೆ ಭಾಷ್ಯ ಬರೆದಿದ್ದಾನೆ.

* ಪೈಶಾಚಿ ಭಾಷೆಯ ಬೃಹತ್ಕಥ ಸಂಸ್ಕೃತಕ್ಕೆ ಭಾಷಾಂತರ ಮಾಡಿದ್ದಾನೆ.

೫. ಮುಷ್ಕರ

ರಾಜ್ಯವನ್ನು ಉತ್ತರದ ಕಡೆ ವಿಸ್ತರಿಸಿದೆನು ಭೂ ವಿಕ್ರಮ ಇವನ ಕಾಲದಲ್ಲಿ ಮಣ್ಣೇ ಮಾಕೊಂದ ಇವರ ಉಪರಾಜಧಾನಿಯಾಯಿತು ಶಿವಮಾರ

೬.ಭೂವಿಕ್ರಮ – ಇವನ ಕಾಲದಲ್ಲಿ ಮಣ್ಣೆ, ಮಾಕೊಂದ ಇವರ ಉಪ ರಾಜಧಾನಿಯಾಗಿತ್ತು.

೭.  ಶಿವಮಾರ 

* ಜೈನ ಮತ್ತು ಶೈವ ಮತಕ್ಕೆ ಪ್ರೋತ್ಸಾಹ ನೀಡಿದ.

೮.  ಶ್ರೀ ಪುರುಷ

* ಪಲ್ಲವರಿಂದ ಸೋತು ಮತ್ತೆ ಪಲ್ಲವರನ್ನು ಸೋಲಿಸುವ ಮೂಲಕ ಪೆರ್ಮಾಡಿ ಎಂಬ ಬಿರುದನ್ನು ಪಡೆದನು.

*  ಗಂಗರ ಮತ್ತು ಚಾಲುಕ್ಯರ ಸ್ನೇಹ ಮುರಿಯಲು ರಾಷ್ಟ್ರಕೂಟರುದಾಳಿ ಮಾಡಿದರು, ಇದರಿಂದ ರಾಜಧಾನಿಯನ್ನು ಮಣ್ಣೆ ಅಥವಾ ಮಾಕೊಂದದಿಂದ ಮಾನ್ಯ ಪುರಕ್ಕೆ ವರ್ಗಾಯಿಸಿದ.

* ರಾಷ್ಟ್ರಕೂಟರಿಗೆ ಮಣಿಯದೆ ಸ್ವತಂತ್ರವಾಗಿ ಉಳಿದನು.

*  ಬಿರುದುಗಳು ಕೊಂಗಣಿ ಮತ್ತು ಪೆರ್ಮಾಡಿ, ಶ್ರೀವಲ್ಲಭ ಭೀಮಾಕೋಪ.

* ಗಜ ಶಾಸ್ತ್ರ ಎಂಬ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದ್ದಾನೆ.

೯. ಎರಡನೇ ಶಿವಮಾರ

*  ತಮ್ಮ ದುಗ್ಗಮಾರ ದಂಗೆ ಎದ್ದ ನಂತರ ಶಿವಮಾರ ತನ್ನ ಸಾಮಂತನಾದ ಸಿಂಗಪೋತನ ಸಹಾಯದಿಂದ ಸೋಲಿಸಿದನು.

* ರಾಷ್ಟ್ರಕೂಟರಲ್ಲಿ ದ್ರುವ ಮತ್ತು ಎರಡನೇ ಗೋವಿಂದನ ನಡುವೆ ಸಿಂಹಾಸನಕ್ಕಾಗಿ ಹೋರಾಟ ಇದ್ರಲ್ಲಿ ಎರಡನೇ ಗೋವಿಂದನ ಪರವಹಿಸಿದ ಆದರೂ ಸೋತ ನಂತರ ಧ್ರುವನು ಸೆರೆಗೆ ಹಾಕಿದ. ನಂತರದ ರಾಷ್ಟ್ರಕೂಟ ದೊರೆ ಮೂರನೇ ಗೋವಿಂದ ಶಿವಮಾರನನ್ನು ಬಿಡುಗಡೆ ಮಾಡಿದ.

* ಶ್ರವಣಬೆಳಗೊಳದಲ್ಲಿ ಜೈನಬಸದಿ ನಿರ್ಮಿಸಿದ.

* ಗಜಾಷ್ಟಕ ಎಂಬ ಕೃತಿ ರಚನೆ.

* ಸೈಗುಟ್ಟ ಶಿವಕುಮಾರ ಎಂಬ ಬಿರುದು ಕೂಡ ಇವನಿಗೆ ಇತ್ತು.

* ಇವನ ಕಾಲದಲ್ಲಿ ಗಂಗರು ವಿಭಾಗವಾದರು –  ಇವನ ಮಗ ಮಾರಸಿಂಹ,  ಸಹೋದರ ವಿಜಯವಾದಿತ್ಯ .

೧೦.ನೀತಿಮಾರ್ಗ ಎರೆಗಂಗ-  

* ಒಂದನೇ ರಾಜ ಮಲ್ಲನ ಮಗ

* ಎಲ್ಲಾ ಗಂಗಾ ಪ್ರದೇಶವನ್ನೆಲ್ಲ ಒಂದುಗೂಡಿಸಿದ.

*  ಇವನು ರಾಷ್ಟ್ರಕೂಟರ ಅಮೋಘವರ್ಷನನ್ನು ಸೋಲಿಸಿದ ಇದು ಇವನ ಪ್ರಮುಖವಾಗಿರುವ ಅಂಶ.

೧೧. ಎರಡನೇ ರಾಚಮಲ್ಲ – 

* ಬಾಣರು ವೆಂಗಿ ಚೋಳರ ವಿರುದ್ಧ ಹೋರಾಟ.

* ಕೊಡಗು ಜಿಲ್ಲೆಯ ಜೈನಬಸದಿಗೆ ಗ್ರಾಮಗಳನ್ನು ದತ್ತಿ ನೀಡಿದ.

೧೨. ಬೂತುಗ II

*  ರಾಷ್ಟ್ರಕೂಟರ ಮೂರನೇ ಗೋವಿಂದನ ಸಹಾಯದಿಂದ ಕಂಚಿ ತಂಜಾವೂರು, ನಲ್ಲಿಕೋಟೆ ವಶ.

*ತಕ್ಕೊಳಂ ಯುದ್ಧದಲ್ಲಿ ಚೋಳರ ರಾಜಾದಿತ್ಯ ಸಾವು.

* ಗಂಗಾಗಂಗೆಯ, ನನ್ನಿಯ ಗಂಗೆಯ ಬಿರುದು ಇವನಿಗಿತ್ತು.

೧೩.  ಮಾರಸಿಂಹ 2

* ರಾಷ್ಟ್ರಕೂಟರೊಂದಿಗೆ ಗೂರ್ಜರನ್ನು ಸೋಲಿಸಿದನು, ಇದರಿಂದ ಗೂರ್ಜರಾಜಾಧಿರಾಜ ಎಂಬ ಬಿರುದು.

* ಚೋಳರ ರಾಜಾದಿತ್ಯನ ವಿರುದ್ಧ ಹೋರಾಟ ಮಾಡಿದ.

* ಸಲ್ಲೇಖನ ವ್ರತ ಮಾಡಿ ಸಾವು.

ಚಾವುಂಡರಾಯ

*ಗಂಗರ ದೊರೆ ಎರಡನೇ ಮಾರಸಿಂಹನಲ್ಲಿ ಮಂತ್ರಿಯಾಗಿ ನಾಲ್ಕನೇ ರಾಚಮಲ್ಲನ ಕಾಲದವರೆಗೂ ಇದೇ ಸೇವೆಯನ್ನು ಸಲ್ಲಿಸಿದ.

ಕೃತಿಗಳು 

*ಚರಿತ್ರಸಾರ – ಸಂಸ್ಕೃತದಲ್ಲಿ ರಚನೆ.

* ಚಾವುಂಡರಾಯ ಪುರಾಣ ಅಥವಾ ತ್ರಿಷಷ್ಟಿ ಲಕ್ಷಣ ಮಹಾಪುರಾಣ – ಕನ್ನಡದಲ್ಲಿ ರಚನೆ.

* ನಾಲ್ಕನೇ ರಾಚಮಲ್ಲ ಅವನ ಸಾಮಂತನ ದಂಗೆಯನ್ನು ನಿಗ್ರಹಿಸಿದಕ್ಕಾಗಿ ಸಮರ ಪುರುಶುರಾಮ ಬಿರುದು ಮತ್ತು ಇವನ ದಾನದತ್ತಿಗಳನ್ನು ನೋಡಿ ರಾಯ ಎಂಬ ಬಿರುದನ್ನು ನೀಡಿದರು.

* ನೊಳಂಬ ಜಗದೇಕ ವೀರ ಮತ್ತು ಉಚ್ಚಂಗಿಪಾಂಡ್ಯ ರಾಜರನ್ನು ಸೋಲಿಸಿದಕ್ಕಾಗಿ ವೀರಮಾರ್ಥಾಂಡ ಮತ್ತು ರಣರಂಗ ಸಿಂಹ ಬಿರುದನ್ನು ನೀಡಿದ. 

* ರನ್ನ ಮತ್ತು ಗುಣವರ್ಮನಿಗೆ ಪೋಷಕನಾಗಿದ್ದನು.

*  ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರ ವಿಗ್ರಹ ನಿರ್ಮಾಣ.

 ರಕ್ಕಸಗಂಗನನ್ನು ಚೋಳರ ಅರಸ ರಾಜೇಂದ್ರ ಚೋಳನು 1004 ರಲ್ಲಿ ಸೋಲಿಸಿ ಗಂಗರಾಜ್ಯದ ಅವನತಿ.

ಗಂಗರ ಕಾಲದ ಆಡಳಿತ 

* ಇವರು ಆಳುತ್ತಿದ್ದ ಪ್ರದೇಶವನ್ನು ಗಂಗವಾಡಿ 96,000 ಎಂದು ಕರೆಯಲಾಗುತ್ತಿತ್ತು. 

* ರಾಜನೇ ಎಲ್ಲಾ ಘಟಕಗಳ ನಾಯಕ.

* ರಾಜುಕ, ರಹಸ್ಯಾಧಿಕ,ಲೇಖಕನೆಂಬ ಅಧಿಕಾರಿಗಳು ರಹಸ್ಯವಾಗಿ ರಾಜನಿಗೆ ವಿಷಯ ಮುಟ್ಟಿಸುತ್ತಿದ್ದರು.

* ರಾಜ್ಯ

ವಿಷಯ

 ನಾಡು 

ಕಂಪಣ 

ಗ್ರಾಮ ಎಂಬ ವಿಭಾಗವನ್ನು ಗಂಗರು ಮಾಡಿಕೊಂಡಿದ್ದರು.

ಗಂಗರ ಆರ್ಥಿಕ ಪರಿಸ್ಥಿತಿ 

* ಭೂ ಕಂದಾಯ ಮೂಲ ಆದಾಯದ ವರಮಾನವಾಗಿತ್ತು.

* ಫಲವತ್ತತೆಯ ಮೇಲೆ ವಿಭಾಗ ಮಾಡಲಾಗಿತ್ತು.

 ಕೆಂಪು ಭೂಮಿ, ಕರಿ ಭೂಮಿ, ಗದ್ದೆ, ಚೌಳು ಭೂಮಿ, ಹೊಲ ಎಂದು ವಿಂಗಡಿಸಿ ತೆರಿಗೆಯನ್ನು ಹಾಕಲಾಗುತ್ತಿತ್ತು.

* ಗಂಗರ ಕಾಲದಲ್ಲಿ ಭೂ ಮಾಪನ ದಂಡಗಳು ಗಂಗಕೋಲು, ಬೇರುಂಡ ಕೋಲು.

* ಪ್ರತಿ ಗ್ರಾಮದಲ್ಲಿ ಗಾವುಂಡ, ಕರ್ಣಂ, ತಳಾರ ಎಂಬ ಅಧಿಕಾರಿಗಳು ಇರುತ್ತಿದ್ದರು.

*ಪ್ರಜೆಗಾಮುಂಡರು ಎಂಬ ರೈತ ಸಮಿತಿ ಇತ್ತು.

* ರಾಜನೇ ರಾಜ್ಯದ ಮುಖ್ಯ ನ್ಯಾಯಾಧೀಶನಾಗಿದ್ದನು.

 ಇವನ ಕೆಳಗೆ ನ್ಯಾಯ ದೊರಕಿಸಲು ಧರ್ಮಧ್ಯಕ್ಷ, ರಾಜ್ಯಾಧ್ಯಕ್ಷ ಎಂಬ ನ್ಯಾಯಾಧೀಶರಿದ್ದರು.

ಆದಾಯ ವ್ಯಾಜ್ಯವನ್ನು  ನಿವಾರಿಸಲು ಧರ್ಮ ಕರಾಣಿಕ, ನಾಡು –  ಮಹಾದಂಡನಾಯಕ

 ಗ್ರಾಮ – ಗೌಡ.

ಗಂಗರ ಸಾಂಸ್ಕೃತಿಕ ಸಾಧನೆ

೧.ಧರ್ಮ 

* ಜೈನ ಮತ್ತು ವೈದಿಕ ಮತಾವಲಂಬಿಗಳಾಗಿದ್ದರು.

* ಇಲ್ಲಿನ ಹೆಚ್ಚು ರಾಜರು ಜೈನ ಮತಾವಲಂಬಿಗಳು.

* ಪೂಜ್ಯಪಾದನು ಜೈನ ವಿದ್ವಾಂಸ 

* ಎರಡನೇ ಶಿವಮಾರ ಜೈನ ಮತ ಸ್ವೀಕಾರ ಮಾಡಿದ ಮೊದಲ ರಾಜನಾಗಿದ್ದಾನೆ. * ಚಾವುಂಡರಾಯ ಜೈನ ಮತೀಯ ಗೊಮ್ಮಟೇಶ್ವರ ಮೂರ್ತಿಯನ್ನು ನಿರ್ಮಾಣ ಮಾಡಿಸಿದ.

೨. ಸಾಹಿತ್ಯ 

*ಕನ್ನಡ, ಸಂಸ್ಕೃತ, ಪ್ರಾಕೃತ ಭಾಷೆಗಳು ಇವರ ಕಾಲದಲ್ಲಿ ಪ್ರಚಲಿತದಲ್ಲಿದ್ದವು.

* ದುರ್ವಿನಿತ 

ಭಾರವಿಯ ಗ್ರಂಥದ 15ನೇ ಸರ್ಗಕ್ಕೆ ಟೀಕೆಯನ್ನು ಬರೆದಿದ್ದಾನೆ.

* ಗುಣಾಡ್ಯನ ಬೃಹತ್ಕಥೆಯನ್ನು  ಸಂಸ್ಕೃತಕ್ಕೆ ಭಾಷಾಂತರ ಮಾಡಿದ್ದಾನೆ.

* ಪೂಜ್ಯಪಾದರು –  ಶಬ್ದಾವತಾರ ವ್ಯಾಖ್ಯಾನ ಪಾಣಿನೀಯ ವ್ಯಾಕರಣ ಗ್ರಂಥಕ್ಕೆ ಬರೆದಿದ್ದಾರೆ.

* ಸರ್ವಾಣ ಸಿದ್ದಿ, ಜಿನೇಂದ್ರ ವ್ಯಾಕರಣ.

*  ಎರಡನೇ ಶಿವಮಾರ –  ಗಜ ಶತಕ, ಸೇತುಬಂಧ.

* ಚಾವುಂಡರಾಯ ಚಾಮುಂಡರಾಯ ಪುರಾಣ.

* ಶ್ರೀ ಪುರುಷ  – ಗಜ ಶಾಸ್ತ್ರ 

* ನಯಸೇನ ಛಂದೋಂಬುದಿ *ಎರಡನೇ ಮಾಧವ – ದತ್ತಕ ಸೂತ್ರವೃತ್ತಿ 

* ವಿದ್ಯಾ ಧನಂಜಯ (ಹೇಮ ಸೇನ) ರಾಘವ ಮಾಂಡವೀಯ ಅಥವಾ ದ್ವಿಸಂಧಾನ ಕಾವ್ಯ * ವೀರನಂದಿ –  ಚಂದ್ರಪ್ರಭ ಪುರಾಣ.

ಗಂಗರ ಕಾಲದ ಶಿಕ್ಷಣ

* ದೇವಾಲಯಗಳು, ಅಗ್ರಹಾರ, ಧಾರ್ಮಿಕ ಮಠಗಳು, ಜೈನರ ಚೈತ್ಯಗಳು ಇವರ ವಿದ್ಯಾ ಕೇಂದ್ರಗಳಾಗಿದ್ದವು. 

*ಬ್ರಹ್ಮಪುರಿ ಮತ್ತು ಘಟಿಕ ಕೇಂದ್ರಗಳು ಉನ್ನತ ಶಿಕ್ಷಣ ಕೇಂದ್ರಗಳಾಗಿದ್ದವು. 

* ತಲಕಾಡು, ಶ್ರೀರಂಗಪಟ್ಟಣ, ಮೇಲುಕೋಟೆ, ಶ್ರವಣಬೆಳಗೊಳ, ಬಂಕಾಪುರ ಪ್ರಮುಖ ವಿದ್ಯಾರ್ಜನೆ ಕೇಂದ್ರಗಳಾಗಿದ್ದವು.

ಗಂಗರ ಕಾಲದ ಕಲೆ ಮತ್ತು ವಾಸ್ತು ಶಿಲ್ಪ

* ಗಂಗರು ಆರಂಭದಲ್ಲಿ ಮರ, ಗಾರೆ, ಇಟ್ಟಿಗೆಗಳಿಂದ ತಮ್ಮ ರಚನೆಗಳನ್ನು ಮಾಡಿದ್ದಾರೆ.

* ಪಲ್ಲವರ ಶೈಲಿ ಪ್ರಭಾವಿತವಾಗಿದೆ.

* ಇವರ ಕಾಲದ ರಚನೆಗಳು   @ತಲಕಾಡಿನ ಅರ್ಕೇಶ್ವರ, ಪಾತಾಳೇಶ್ವರ, ಮರುಳೇಶ್ವರ, ನೀಮಾರ್ಗೇಶ್ವರ.

@ ಮಣ್ಣೆಯ ಕಪಿಲೇಶ್ವರ, ಸೋಮೇಶ್ವರ 

*ಕೋಲಾರಮ್ಮನ ದೇವಾಲಯ *ನಂದಿಯ ಭೋಗ ನಂದೀಶ್ವರ * ಇವರ ಕಾಲದ ಬಸದಿಗಳ ವಿಮಾನಗಳು ಕಿರಿದಾಗುತ್ತಾ ಸಾಗಿವೆ ಅವುಗಳಲ್ಲಿ ಚಂದ್ರಪ್ರಭಾ ಬಸದಿ.

* ಚಾವುಂಡರಾಯ ಬಸದಿ –  ದ್ರಾವಿಡ ಶೈಲಿಯ ವಿಮಾನ ಹೊಂದಿದೆ.

* ಗೊಮ್ಮಟೇಶ್ವರ 57 ಅಡಿ ಹೊಂದಿದೆ. ಬೆಣಚು ಕಲ್ಲಿನಲ್ಲಿ ನಿರ್ಮಾಣವಾಗಿದೆ.

* ಇವರ ಕಾಲದ ಮಾನಸ್ತಂಬ ಬ್ರಹ್ಮಸ್ಥಂಭಗಳು ಆಧಾರವಿಲ್ಲದೆ ನಿಂತಿವೆ. 

* ಬೆಳಗೊಳದಲ್ಲಿ ಒಂದು ಯಕ್ಷೀಯ ಉಬ್ಬು ಶಿಲ್ಪ ಇವರ ಸಾಧನೆ.

* ಉಬ್ಬು ಶಿಲ್ಪದ ವೀರ ಗಲ್ಲುಗಳು ಕೂಡ ಇವರ ಕಾಲದ್ದು ದೊರಕಿವೆ.

1 thought on “Talakadina Gangaru – ತಲಕಾಡಿನ ಗಂಗರು – History of Karnataka part – 3 Must read for upcoming exams”

  1. Pingback: ಬಾದಾಮಿ ಚಾಲುಕ್ಯರು - Badami Chalukyas - History of Karnataka - ಕರ್ನಾಟಕ ಬಲಂ ಅಜೇಯಂ - Part - 4 - rvwritting

Leave a Comment

Your email address will not be published. Required fields are marked *

Scroll to Top