Summary of Rashoman – ರಾಶೋಮನ್ ಕಥೆಯ ಸಾರಾಂಶ

Rashoman
Rashoman

Rashoman ರಾಶೋಮನ್

Rashoman ರಾಶೋಮನ್ ಎಂಬ ದಿಡ್ಡಿ ಬಾಗಿಲು ತನ್ನ ಒಳಗೆ ಅಡಗಿಸಿಕೊಂಡಿರುವ ಅಂಶಗಳ ಮೂಲಕ ಖ್ಯಾತಿ ಪಡೆದುಕೊಂಡಿತು.

 ಅಂದರೆ ಮನುಷ್ಯನ ಬದುಕಿನ ಹಸಿವಿನ ಚಿತ್ರಣವನ್ನು ಈ ಕತೆ ಪ್ರಕಾರವಾಗಿ ಬಿಂಬಿಸುತ್ತದೆ, ಕಿಯಾಟೋ ನಗರವು ಹಲವು ಅವಘಡಗಳಿಗೆ ಒಳಗಾಗಿ ದ್ವಂಸವಾಗಿತ್ತು. ಚಿನ್ನ, ಬೆಳ್ಳಿ, ಅರಗಣ ಎಲೆಗಳು, ಕಿತ್ತು ಬಂದಿದ್ದ ಬೌದ್ಧನ ಮೂರ್ತಿಗಳನ್ನು ರಾಶಿಯಾಗಿ ಮಾರಾಟ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ರಾಶೋಮನ್ ಬಾಗಿಲು ದುರಸ್ತಿ ಅಥವಾ ರಿಪೇರಿ ಮಾಡಲಾಗದ ಕಾರ್ಯವಾಗಿತ್ತು. ಇದರಿಂದ ಕಳ್ಳ ಕಾಕರ, ಪ್ರಾಣಿ- ಪಕ್ಷಿಗಳ, ಆವಾಸವಾಗಿ ಬದಲಾಗಿತ್ತು, ನಗರದಲ್ಲಿ ಸತ್ತ ಅನಾಥ ಶವಗಳನ್ನು ಇಲ್ಲಿ ತಂದು ಹಾಕಲಾಗುತ್ತಿತ್ತು. ಇದರಿಂದಾಗಿ ಕತ್ತಲಾದ ಸಂದರ್ಭದಲ್ಲಿ ಇಲ್ಲಿಗೆ ಯಾರೂ ಬರಲು ಹೆದರುತ್ತಿದ್ದರು.

 ಅಲ್ಲಿ ಒಬ್ಬ ಸೇವಕ ಕಿಮೊನೊ  ಧರಿಸಿ ಈ ಬಾಗಿಲ ಪಾವಟಿಗೆಯ ಬಳಿ ನಿಂತು ಮಳೆ ನೋಡುತ್ತಾ ಬಲ ಕೆನ್ನೆ ಮೇಲೆ ಮೂಡಿದ್ದ ಮೊಡವೆಯನ್ನು ತಡವಿ ಗಮನ ಹರಿಸುತ್ತಿದ್ದ. ಇವನು ಕೆಲಸ ಮಾಡುತ್ತಿದ್ದ ಶ್ರೀಮಂತ ತನ್ನ ಶ್ರೀಮಂತಿಕೆ ಕುಸಿಯುತ್ತಿದೆ ಎಂದು ಇವನನ್ನು ಕೆಲಸದಿಂದ ಹೊರಹಾಕಿದ ಆಗ ಇವನಿಗೆ ತನ್ನ ಮುಂದಿನ ಬದುಕು ಹೇಗೆ ಕಟ್ಟಿಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಬಿದ್ದಿದ್ದ. ಇದರಿಂದ ಅಸಹಾಯಕನಾಗಿ ಸುಜಕೂ ರಸ್ತೆಯಲ್ಲಿ ಬೀಳುತ್ತಿದ್ದ ಮಳೆಯ ಶಬ್ದವನ್ನೇ ಆಲಿಸುತ್ತಿದ್ದ. ಈಗ ಅವನ ಮುಂದೆ ಹೆಚ್ಚಿನ ಆಯ್ಕೆಗಳಿರಲಿಲ್ಲ ಅವನು ನ್ಯಾಯ ಅಥವಾ ಅನ್ಯಾಯದ ಮಾರ್ಗ ಹಿಡಿಯಬೇಕಿತ್ತು. ಅಂದರೆ ನ್ಯಾಯದ ದಾರಿಯಲ್ಲಿ ಸಾಗಿದರೆ ಅನಾಥ ಶವವಾಗಿ ಸಾಯಬೇಕು, ಅನ್ಯಾಯದ ಮಾರ್ಗ ನಿರ್ಧರಿಸಿದರೆ ಮನ ಒಪ್ಪುತ್ತಿಲ್ಲ ಆದರೂ ಕಳ್ಳನಾಗುತ್ತೇನೆ ಎಂದು ನಿರ್ಧರಿಸಿದ್ದರು. ಮನಸ್ಸು ಚಂಚಲಕ್ಕೊಳಗಾಯಿತು.

See the Rashoman Video: https://youtu.be/2HU-0B-9BGk?si=lpYbdhbwS7EtF74b

 ಆ ದಿಡ್ಡಿ  ಬಾಗಿಲಿನ ಬಳಿ ಗಾಳಿ ಬೀಸಿದಾಗ ಅವನಿಗೆ ಚಳಿಯಾದಂತಾಗಿ ತನ್ನ ಕಿಮಾನೊ ಎಳೆದುಕೊಂಡ.ಇಲ್ಲೇ ಎಲ್ಲಾದರೂ ಜಾಗ ದೊರೆತರೆ ಇಲ್ಲೇ ರಾತ್ರಿ ಕಳೆಯಬಹುದೆಂದು ತನ್ನ ಖಡ್ಗ ಜಾರಿ ಬೀಳದಂತೆ ಗೋಪುರದ ಮೇಲೆ ಕಾಲಿರಿಸಿದ, ಹಾಗೆಯೇ ಹೋಗುವಾಗ ಯಾರೋ ಒಳಗೆ ಚಲಿಸಿದಂತಾಗಿ ಇವನಿಗೆ ಭಯವು ಆಯಿತು. ಅವನಲ್ಲಿ ಇಲ್ಲಿ ಹೆಣಗಳು ಮಾತ್ರ ಇರುವುದು ಅದು ಬಿಟ್ಟು ಇನ್ನಾರು ಎಂದು ಯೋಚಿಸತೊಡಗಿದ. ಬೆಂಕಿಯ ಬೆಳಕಿನಲ್ಲಿ  ನಡೆದಾಡಿದವರನ್ನು ಗಮನಿಸಿ ಅದನ್ನು ಯಾರು ಎಂದು ತಿಳಿಯಬೇಕು ಎಂದು ಗೋಪುರದ ಮೇಲೆ ಬಂದು ಗೋಪುರದೊಳಕ್ಕೆ ಇಣುಕಿದ.

ಅಲ್ಲಿ ಹಲವು ಹೆಣಗಳು ಅಡ್ಡಾದಿಡ್ಡಿಯಾಗಿ ಬಿದ್ದಿದ್ದವು. ಕೆಲವು ಬಟ್ಟೆ ಬರೆ ಇಲ್ಲದೆ ಬಿದ್ದಿದ್ದವು, ವಿಚಿತ್ರಾಕಾರವಾಗಿ ಬಿದ್ದಿದ್ದವು, ಹೆಣ್ಣು ಮಕ್ಕಳ ದೇಹಗಳು ಅಲ್ಲಿ ಬಿದ್ದಿದ್ದವು. ಅಲ್ಲಿ ದುರ್ವಾಸನೆ ಬರುತ್ತಿತ್ತು ಅಷ್ಟರಲ್ಲೇ ಹೆಣ ತಿನ್ನುವ ಪಿಶಾಚಿಯಂತೆ ಒಬ್ಬ ಮುದುಕಿಯು ಪೈನ್ ಮರದ ದೊಂದಿ ಹಿಡಿದು ಕೆಳಗೆ ಇಟ್ಟು ಹಣದ ತಲೆಗೆ ಹೋಗಿ ಒಂದೊಂದೆ ಕೂದಲನ್ನು ಕೀಳತೊಡಗಿದಳು.  ಇದೆಲ್ಲವನ್ನು ನೋಡಿ ಈ ಹಣ್ಣು ಹಣ್ಣು ಮುದುಕಿ ಹೀಗೇಕೆ ಕೀಳುತ್ತಿದ್ದಾಳೆ ಎಂದು ತನ್ನ ಕಾಲಿಗೆ ಶಕ್ತಿ ತುಂಬಿ ಅವಳ ಮುಂದೆ ಬಂದು ನಿಂತ. ಆಗ ಅವಳು ಹೆದರಿ ಓಡುವಾಗ ಅವಳ ಎದುರಿಗೆ ಬಂದು ನಿಂತ, ತಪ್ಪಿಸಿಕೊಳ್ಳಲು ಮುಂದಾದಾಗ ಇಬ್ಬರೂ ಸೆಣಸಾಡಿದರು. ಹೆಣಗಳ ಮೇಲೆ ಬಿದ್ದರು. ಆಗ ಅವಳನ್ನು ಹಿಡಿದು ಕೆಳಗೆ ಕೂರಿಸಿದ. ತನ್ನ ಕತ್ತಿ ಮುಂದೆ ಇಟ್ಟು ಇಲ್ಲಿ ಏನು ಮಾಡುತ್ತಿದ್ದೆ? ಹೇಳದಿದ್ದರೆ ನಿನ್ನ ಸಾವು ಎಂದು ಹೇಳಿದ. ನಾನು ಉನ್ನತ ಪೊಲೀಸ್ ಅಧಿಕಾರಿ ಅಲ್ಲ. ನಾನು ನಿನ್ನಂತೆ ಒಬ್ಬ ದಾರಿಹೋಕ.  ಇಲ್ಲೇನು ಮಾಡುತ್ತಿದ್ದೆ ಹೇಳು ಎಂದಾಗ ಭಯದಿಂದ “ನಾನು ಕೂದಲನ್ನು…. ಕೂದಲನ್ನು….. ಯಾಕೆ ಕೀಳುತ್ತಿದ್ದೆ ಅಂದ್ರೆ ಚೌರಿ ಮಾಡಲು”. ಇದರಿಂದ ಅವಳು ಪಿಶಾಚಿಯಲ್ಲ ಕೂಳು ಸಂಪಾದನೆಗೆ ಹೆಣದ ಕೂದಲನ್ನು ಕಿತ್ತು ಚೌರಿ ಮಾಡಿ ಮಾರಿ ಬದುಕುವ ಸ್ಥಿತಿ ಅವಳದ್ದಾಗಿತ್ತು.

ನಾನು ಮಾಡುತ್ತಿರುವುದು ನೀಚ ಕಾರ್ಯ ಎಂದು ನಿನಗನಿಸಬಹುದು. ಅಲ್ಲಿ ಬಿದ್ದಿರುವ ಹೆಂಗಸು ಸೈನಿಕರ ಬಳಿ ಒಣಗಿಸಿದ ಹಾವಿನ ಮಾಂಸವನ್ನು ಒಣ ಮೀನು ಎಂದು ಮಾರುತಿದ್ದಳು. ಅದು ಅವಳು ಹಾಗೆ ಮಾಡದಿದ್ದರೆ ಅವಳು ಹಸಿವಿನಿಂದ ಸಾಯಬೇಕಿತ್ತು ಎಂದು ತಿಳಿದಾಗ ನಾನು ಹಸಿವಿನಿಂದ ಸಾಯಬೇಕೆ ಅಥವಾ ಕಳ್ಳನಾಗಬೇಕೇ ಎಂಬ ಗೊಂದಲ ಈಗ ಅವನಲ್ಲಿ ಇರಲಿಲ್ಲ. ಆಗ ಅವಳ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ನಿನ್ನನ್ನು ಸುಲಿಯುವುದೇ ಸರಿ ಎಂದು ಅವಳ ದೇಹದ ಉಡುಪನ್ನು ಹರಿದು ಕಿತ್ತು ಕೊಂಡ. ಅವಳನ್ನು ಒದ್ದು ಪಾವಟಿಗೆ ಇಳಿದು ಮಾಯವಾದ.  ಅವಳು ಅವನ ಹಿಂದೆ ಹೋಡಿ ನೋಡಿದರೆ ಅಲ್ಲಿ ಏನೂ ಕಾಣುತ್ತಿರಲಿಲ್ಲ. ಈ ಕಥೆಯು ಹಸಿವು ಎಂಬುದು ನಮ್ಮನ್ನು ಹೇಗೆ ಬದಲಿಸುತ್ತದೆ ಎಂಬುದನ್ನು ಈ ಕಥೆಯ ಮೂಲಕ ತಿಳಿಯಬಹುದು.

1 thought on “Summary of Rashoman – ರಾಶೋಮನ್ ಕಥೆಯ ಸಾರಾಂಶ”

  1. Pingback: ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು - Nambi Kettavarillavo Mannannu - rvwritting

Leave a Comment

Your email address will not be published. Required fields are marked *

Scroll to Top