Basic Geography – The Interior of the Earth – ಭೂಮಿಯ ಅಂತರಾಳ – 1

The Interior of the Earth - ಭೂಮಿಯ ಅಂತರಾಳ
The Interior of the Earth – ಭೂಮಿಯ ಅಂತರಾಳ

The Interior of the Earth – ಭೂಮಿಯ ಅಂತರಾಳ

The Interior of the Earth – ಭೂಮಿಯ ಅಂತರಾಳ ಭೂಮಿಯ ಅಂತರಾಳವನ್ನು ಅರ್ಥಮಾಡಿಕೊಳ್ಳುವುದು ಪ್ರತಿಯೊಬ್ಬ ಮಾನವನಿಗೂ ಉಪಯುಕ್ತವಾದುದು. ಅದನ್ನು ಈ ಒಂದು ಅಧ್ಯಾಯದಲ್ಲಿ ತಿಳಿಯೋಣ.

ಭೂ ರಚನೆ 

ಭೂಕಂಪನದ ಅಲೆಗಳು, ವೇಗ, ಸಾಂದ್ರತೆ, ರಾಸಾಯನಿಕ ವಸ್ತುಗಳ ಸಂಯೋಜನೆಯ ಮೇಲೆ 3 ಭಾಗ ಮಾಡಲಾಗಿದೆ.

* ಭೂಕವಚ(Crust)

* ಮ್ಯಾಂಟಲ್(Mantle)

* ಕೇಂದ್ರಗೋಳ(Core)

Read this : https://rvwritting.com/kalyani-chalukyaru/

1. ಭೂಕವಚ – Crust 

ಭೂಮಿಯ ಹೊರಭಾಗಕ್ಕೆ ಭೂ ಕವಚ ಎಂದು ಕರೆಯುತ್ತಾರೆ. ಇದು ಭೂಖಂಡ ಮತ್ತು ಸಾಗರದಿಂದ ಕೂಡಿರುತ್ತದೆ. ಇದು 60ಕಿ.ಮೀ ಗಳಿಂದ ಕೂಡಿದೆ. 

ಇದರಲ್ಲಿ 2 ವಿಧ

೧. ಭೂಖಂಢ ಕವಚ (Continental Crust) – 

* ಇದರ ಸರಾಸರಿ ದಪ್ಪ – 30km

* ಇದು ಪರ್ವತಗಳ ತಳಭಾಗದಲ್ಲಿ 60km   ಹೊಂದಿದೆ. 

* ಇದು SIAL ನಿಂದ ಕೂಡಿದೆ.(Silika & Aluminium)

* ಇದು ಹಗುರವಾಗಿದೆ. 

೨. ಸಾಗರೀಕ ಕವಚ(Oceanic Crust)

* ಇದರ ದಪ್ಪ 5KM 

* ಇದು SIMA ದಿಂದ ಕೂಡಿದೆ(Silika & Magnesium) 

* ಇದು ಅಧಿಕ ಸಾಂದ್ರತೆಯಿಂದ ಕೂಡಿದೆ. 

* ಕಾನ್ರಾಡ್ ಸೀಮಾವಲಯ – ಇದು SIMA & SIAL ನ ವಿಭಾಗಿಸುತ್ತದೆ.

* ಮೆಹರೋವಿಸಿಕ್ ಸೀಮಾ ವಲಯ – ಇದು Crust & Mantleನ ವಿಭಾಗಿಸುತ್ತದೆ.

ಮ್ಯಾಂಟಲ್ – Mantle

* ಇದು ಭೂ ಅಂತರಾಳದ ಮದ್ಯದ ಭಾಗ 

* 60KM ನಿಂದ 2900km ವರೆಗೆ ವಿಸ್ತರಿಸಿದೆ.

* ಇಲ್ಲಿ ಅಧಿಕ ಉಷ್ಣಾಂಶವಿರುವುದರಿಂದ ವಸ್ತುಗಳು ಭಾಗಶಃ ದ್ರವ ರೂಪದಲ್ಲಿ ಶಿಲಾಪಾಕದ ರೀತಿಯಲ್ಲಿವೆ. 

* ಇಲ್ಲಿ ಮ್ಯಾಗ್ನಿಷಿಯಂ ಮತ್ತು ಕಬ್ಬಿಣದಿಂದ ಸಂಯಾಒಜನೆಗೊಂಡಿವೆ‌.

* ಇದರಲ್ಲಿ 2 ವಿಧಗಳಿವೆ

*ಮ್ಯಾಂಟಲ್ ಮೇಲ್ಪದರ –

ಇದು ಹೊರಕವಚವಾಗಿದೆ

* ಇದನ್ನು ಏಸ್ತನೋಸ್ಪಿಯರ್(Aesthanoshpere) ಎಂದು ಕರೆಯಲಾಗುತ್ತದೆ.

* ಇದು Magma Chamber ಆಗಿದೆ. 

* ಇಲ್ಲಿಂದಲೇ ಭೂಕಂಪ ಮತ್ತು ಜ್ವಾಲಾಮುಖಿಗಳು ಜನ್ಮ ಪಡೆಯುತ್ತವೆ.

*ಮ್ಯಾಂಟಲ್ ಕೆಳಪದರ – 

* ಇದು ಕೆಳಪದರವಾಗಿದೆ

* ಇದನ್ನು Mesosphere ಎಂದು ಕರೆಯಲಾಗುತ್ತದೆ. 

* ಇದು ಘನ ರೂಪದಲ್ಲಿದೆ. 

*ರೆಪೆಟ್ಟೆ ಸೀಮಾ ವಲಯ-Repette – ಇದು ಏಸ್ತನೋಸ್ಪಿಯರ್ ಮತ್ತು ಮಿಸೋಸ್ಪಿಯರ್ ವಿಭಾಗಿಸುತ್ತದೆ.

*ಗುಟೆನ್ ಬರ್ಗ್ ಸೀಮಾ ವಲಯ – ಇದು ಮ್ಯಾಂಟಲ್ ಮತ್ತು ಕೋರ್ ವಿಭಾಗಿಸುತ್ತದೆ.

ಕೇಂದ್ರಗೋಳ – Core

* ಭೂಮಿಯ ಅತ್ಯಂತ ಒಳಪದರವಾಗಿದೆ.

* 2900 – 6371km ವರೆಗೆ ವಿಸ್ತರಿಸಿದೆ.

* ಇದರಲ್ಲಿ NIFE – Nickel & Ferrous ನಿಂದ ಕೂಡಿದೆ. 

ಇದರಲ್ಲಿ 2 ವಿಧಗಳಿವೆ

*ಹೊರ ಕೇಂದ್ರಗೋಳ(Outer core) 

* ಕಠಿಣವಾದ ಶಿಲಾಪದರುಗಳಿವೆ.

* ಇಲ್ಲೂ ಮ್ಯಾಗ್ಮ ರೂಪದಲ್ಲಿದೆ.

* 2900 – 4980km ವಿಸ್ತರಿಸಿದೆ.

*ಒಳಕೇಂದ್ರಗೋಳ (Inner Core)

* ಇಲ್ಲಿನ ಅಧಿಕ ಒತ್ತಡ ಮತ್ತು ಉಷ್ಣಾಂಶ ಹೊಂದಿದೆ.

* ಇಲ್ಲಿನ ವಸ್ತುಗಳು ಘನ ರೂಪದಲ್ಲಿವೆ. ಇದರಿಂದ ಘನಗೋಳ ಎಂದೂ ಕರೆಯಲಾಗುತ್ತದೆ.

* 4980 – 6371km ವಿಸ್ತರಿಸಿದೆ. 

*ಹೊರಕೇಂದ್ರ ಗೋಳ ಮತ್ತು ಒಳ ಕೇಂದ್ರಗೋಳವು ಲೇಹ್ಮನ್ ಸೀಮಾವಲಯದಿಂದ ವಿಭಾಗಿಸಲಾಗಿದೆ.

see this video: https://youtu.be/smGH_8FP3g8?si=gqk1pVmP5Istyrcw

ಭೂಕಂಪಗಳು – Earth Quakes

ಭೂಮಿಯ ಅಂತರಾಳದಲ್ಲಿನ ಶಿಲಾಭಾಗಗಳ ಚಲನೆ ಅಥವಾ ಅಡಚಣೆಯಿಂದಾಗಿ ಶಕ್ತಿ ಹೊರಬರಲು ಉಂಟಾಗುವ ಸ್ವಾಭಾವಿಕ ವಿಕೋಪಗಳಿಗೆ ಭೂಕಂಪನಗಳೆನ್ನುವರು.

* ಇದರಿಂದ ಜೀವ ಮತ್ತು ಆಸ್ತಿಗಳ ನಾಶ

* ಇದು ಘಟ್ಟಿ ಶಿಲಾಭಾಗಗಳ ಚಲಿಸುವಿಕೆ, ಚಲನಾ ಶಕ್ತಿಯ ಅಲೆಗಳಿಂದ ಸೃಷ್ಠಿಯಾಗುತ್ತದೆ.

* ಭೂಕಂಪ ಉಂಟಾಗುವ ಸ್ಥಳ ಅಥವಾ ಸೃಷ್ಠಿಯಾಗುವ ಸ್ಥಳ – Focus Point, ಭೂಕಂಪನಾಭಿ, ಭೂಕಂಪನ ಒಳಕೇಂದ್ರ, ಭೂಕಂಪನ ಕೇಂದ್ರ.

* ಇಲ್ಲಿಂದ ಹುಟ್ಟಿರುವ ಭೂಕಂಪನವು ಭೂಮಿಯ ಹೊರಭಾಗಕ್ಕೆ ಲಂಬವಾಗಿ ಬಂದು ತಲುಪುವ ಬಿಂದುವಿಗೆ ಭೂಕಂಪನಾ ಹೊರಕೇಂದ್ರ(Epicenter)

* ಭೂಕಂಪನ ಅಧ್ಯಯನ – Cosmology

* ಭೂಕಂಪನದ ಸ್ಥಳ, ವೇಗ, ಅಲೆ, ದಿಕ್ಕು ಮಾಪನ ಮಾಡಲು ಬಳಸುವ ಸಾಧನ – Cismograph.

* ಭೂಕಂಪನಗಳ ಅಧ್ಯಯನ ಮಾಡುವವರು – Cosmologist

ಭೂಕಂಪನಾ ಅಲೆಗಳು

೧. ಪ್ರಾಥಮಿಕ ಅಲೆಗಳು – Primary Waves or P waves

* ಇವು ಮೊದಲಿಗೆ ಭೂಕವಚ ತಲುಪುತ್ತವೆ. 

* ಇವು ವೇಗವಾಗಿ ಚಲಿಸುತ್ತವೆ

* ಘನ, ದ್ರವ, ಅನಿಲ 3 ರೂಪಗಳಲ್ಲೂ ಚಲಿಸುತ್ತವೆ.

* ಇವನ್ನು ತಳ್ಳುವ, ಊರ್ಧ್ವಮುಖ, ಒತ್ತುವ ಅಲೆಗಳೆನ್ನುವರು

* ಇವು ಪ್ರತಿ ಸೆಕೆಂಡಿಗೆ 4 – 13KM ವೇಗ ಹೊಂದಿವೆ.

೨. ದ್ವಿತೀಯ ಅಲೆಗಳು – Secondary waves

* ಭೂಮಿಯನ್ನುಎರಡನೇ  ಅಲೆಗಳಾಗಿ ಮುಟ್ಟುತ್ತವೆ

* ಅಡ್ಡ ಅಲೆಗಳು ಅಥವಾ ಕುಲುಕು ಅಲೆಗಳನ್ನುತ್ತಾರೆ

* ಇವುಗಳು ದ್ರವ ವಸ್ತುಗಳ ಮೇಲೆ ಚಲಿಸಲಾರವು ಪ್ರತಿ ಸೆಕೆಂಡಿಗೆ ನಾಲ್ಕರಿಂದ ಆರು ಕಿಲೋಮೀಟರ್ ವೇಗವನ್ನು ಹೊಂದಿವೆ.

ಮೇಲ್ಮೈ ಅಲೆಗಳು Surface waves

* ಇವು ಮಂದಗತಿ ಅಲೆಗಳಾಗಿವೆ

*  ಕೊನೆಯದಾಗಿ ಭೂಕಂಪನ ಕೇಂದ್ರವನ್ನು ತಲುಪುತ್ತವೆ.

*  ಉದ್ದ ಅಲೆ ಅಥವಾ ದೀರ್ಘ ಅವಧಿಯ ಅಲೆಗಳನ್ನುವರು.

*  ಇವು ಪ್ರತಿ ಸೆಕೆಂಡಿಗೆ ಮೂರರಿಂದ ನಾಲ್ಕು ಕಿಲೋಮೀಟರ್ ವೇಗವನ್ನು ಹೊಂದಿವೆ,

*  ಇವು ಶಿಲಾಗೋಳದ ಮೇಲ್ಪದರಕ್ಕೆ ಸೀಮಿತವಾಗಿವೆ.

*  ಇವುಗಳು ಅಪಾಯವನ್ನು ಉಂಟುಮಾಡುವ ಅಲೆಗಳಾಗಿವೆ- Distructive Waves

* ಇವು ಘನ ದ್ರವ ಅನಿಲ ರೂಪದಲ್ಲೂ ಚಲಿಸುತ್ತವೆ.

* ರಿಕ್ಟರ್ ಸ್ಕೇಲ್ Ricter scale – ಭೂಕಂಪನ ಅಲೆಗಳ ಪರಿಮಾಣವನ್ನು ಅಳೆಯಲು ಬಳಸುವ ಸಾಧನ.

* ಮರ್ಸ್ಸೆಲ್ಲಿ ಮಾಪಕ ಭೂಕಂಪಗಳ ತೀವ್ರತೆ (Intensity)ಯನ್ನು ಅಳೆಯಲು ಬಳಸುತ್ತಾರೆ.

ಭೂಕಂಪನ ದಾಖಲು ಕೇಂದ್ರಗಳು

* ಗೌರಿಬಿದನೂರು- ಕರ್ನಾಟಕ 

* ಕೊಡೈಕೆನಾಲ್ – ತಮಿಳುನಾಡು 

* ಕೊಲಾಬಾ – ಮಹಾರಾಷ್ಟ್ರ

*  ಹೈದರಾಬಾದ್ –  ಆಂಧ್ರಪ್ರದೇಶ

*  ಡೆಹರಾಡೂನ್ – ಉತ್ತರಖಂಡ

ಭೂಕಂಪ ವಲಯಗಳು

  1. ಪೆಸಿಫಿಕ್ ಸಾಗರದ ವಲಯ ಪೆಸಿಫಿಕ್ ಸಾಗರದ ಕರಾವಳಿಯ ಅಂಚುಗಳುದ್ದಕ್ಕೂ ಬರುತ್ತವೆ ಇದನ್ನೇ ರಿಂಗ್ ಆಫ್ ಫಯರ್ (Ring Of Fire) ಎಂದು ಕರೆಯಲಾಗುತ್ತದೆ.

2. ಮಧ್ಯ ಭೂಖಂಡ ವಲಯ ಮೆಡಿಟರೇನಿಯನ್ ಅಥವಾ ಆಲ್ ಫೈನ್ ವಲಯವೆಂದು ಕರೆಯಲಾಗಿದೆ

3. ಮಧ್ಯ ಅಟ್ಲಾಂಟಿಕ್ ವಲಯ ಅಟ್ಲಾಂಟಿಕ್ ಸಾಗರ ದ್ವೀಪಗಳಲ್ಲಿ ಇದು ಕಂಡುಬರುತ್ತದೆ

4. ಶಿವಾಲಿಕ್ ವಲಯ ಹಿಮಾಲಯದ ಪಾದ ಬೆಟ್ಟಗಳಲ್ಲಿ ಕಂಡುಬರುತ್ತದೆ

ಜ್ವಾಲಾಮುಖಿಗಳು

ಪ್ರಾಚೀನ ಗ್ರೀಕರ ನಂಬಿಕೆಯ ಪ್ರಕಾರ ವಲ್ಕನ್ ಪರ್ವತದ ತಳಭಾಗದಲ್ಲಿ ನೆಲೆಸಿರುವ ವಲ್ಕನ್ ದೇವತೆ ಕೋಪಗೊಂಡು ಜ್ವಾಲಾಮುಖಿ ವಸ್ತುಗಳನ್ನು ಹೊರಹಾಕುತ್ತಾಳೆ ಎಂದು ನಂಬಿದ್ದಾರೆ

* ಭೂಮಿಯೊಳಗಿನ ಮ್ಯಾಗ್ಮಾವು ನಾಳಗಳ ಮೂಲಕ ಭೂ ಮೇಲ್ಮೈ ಭಾಗಕ್ಕೆ ಬರುವುದನ್ನೇ ಜ್ವಾಲಾಮುಖಿ ಎಂದು ಕರೆಯುವರು.

* ಜ್ವಾಲಾಮುಖಿಯ ವಸ್ತುಗಳು ಹೊರಹರಿಯುವ ರಂದ್ರ ಪ್ರದೇಶಕ್ಕೆ ನಾಳ ಎನ್ನುವರು

* ಜ್ವಾಲಾಮುಖಿ ಪರ್ವತದ ಮೇಲಿನ ಕೊಳವೆ ಆಕಾರದ ತಗ್ಗಾದ ಭಾಗಕ್ಕೆ ಕ್ರೇಟರ್ (ಜ್ವಾಲಾಮುಖಿಯ ಕುಂಡ) ಎಂದು ಕರೆಯುತ್ತಾರೆ.

ಕಾರಣಗಳು

* ಭೂಮಿಯ ಆಳಕ್ಕೆ ಹೋದಂತೆ ಉಷ್ಣಾಂಶ ಹೆಚ್ಚುತ್ತದೆ(32M – 1°c)

* ಉಷ್ಣಾಂಶ ಹೆಚ್ಚಾಗುವುದರಿಂದ ಮತ್ತು ಒತ್ತಡದ ಕಡಿಮೆಯಾಗುವುದರಿಂದ ಶಿಲಾಪಾಕ ರಚನೆ

* ಭೂ ಆಳದಲ್ಲಿ ಬಿಸಿಯಿಂದಾಗಿ ನೀರು ಅನಿಲ ಮತ್ತು ನೀರಾವಿಯಾಗಿ ಪರಿವರ್ತನೆಯಾಗುತ್ತದೆ

* ಒತ್ತಡದಿಂದ ಶಿಲಾಪಾಕ ಮೇಲೆ ಬರುವುದು

ವಿಧಗಳು

ಜ್ವಾಲಾಮುಖಿಯ ಕಾಲಾವಧಿ ಮತ್ತು ಕಾರ್ಯಾಚರಣೆಯ ಮೇಲೆ ವಿಭಾಗ ಮಾಡಲಾಗಿದೆ

೧. ಜಾಗೃತ ಜ್ವಾಲಾಮುಖಿ- Active Volcano- 

ನಿರಂತರವಾಗಿ ಘನ ದ್ರವ ಅನಿಲ ವಸ್ತುಗಳನ್ನು ಹೊರ ಚೆಲ್ಲುವುದಕ್ಕೆ ಜಾಗೃತ ಜ್ವಾಲಾಮುಖಿಯನ್ನುವರುಉದಾ- ಇಟಲಿಯ ಮೌಂಟ್ ಎಟ್ನ

        ಹವಾಯಿ – ಮೌನಲೋವ       ಮೌನಕೀಯ 

       ಫಿಲಿಫೈನ್ಸ್ – ಪಿನಟೋಬಾ      ಈಕ್ವೆಡರ್ ಕೋಟಪಾಕ್ಷಿ

* ಸ್ಟ್ರಾಂಬೋಲಿಯನ್ನು ಮೆಡಿಟರೇನಿಯನ್ ಸಮುದ್ರದ ಬೆಳಕಿನ ಮನೆ ಎನ್ನುವರು.

* ಇಜಾಲ್ಕೊವನ್ನು ಮದ್ಯ ಅಮೆರಿಕಾದ ಬೆಳಕಿನ ಮನೆ ಎನ್ನುವರು.

೨. ಸೂಪ್ತ ಜ್ವಾಲಾಮುಖಿ

 ಇಲ್ಲಿ ಹಲವು ವರ್ಷಗಳವರೆಗೆ ತಮ್ಮ ಕಾರ್ಯಾಚರಣೆ ನಿಲ್ಲಿಸಿ ಮತ್ತೆ ತನ್ನಲ್ಲಿರುವ ಯಾವುದೇ ವಸ್ತುಗಳನ್ನು ಹೊರ ಹಾಕುವುದನ್ನೇ ಸೂಕ್ತ ಜ್ವಾಲಾಮುಖಿ ಎನ್ನುವರು. 

* ಇವು ಮಾನವನ ಪ್ರಾಣ ಮತ್ತು ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯನ್ನು ಉಂಟುಮಾಡುತ್ತದೆ

* ಉದಾ – ಇಟಲಿಯ – ವೆಸೂವಿಯಸ್      ಜಪಾನಿನ – ಪ್ಯೂಜಿಯಾಮ

* ಮೌಂಟ್ ವೆಸುವಿಯಸ್, ಮೌಂಟ್ ಕ್ರಕಟೊವ, ಮೌಂಟ್ ಪೀಲಿಯನ್ ಜ್ವಾಲಾಮುಖಿಗಳನ್ನು ಸೂಪರ್ ಜ್ವಾಲಾಮುಖಿಗಳನ್ನುವರು

೩. ನಂಧಿದ ಜ್ವಾಲಾಮುಖಿಗಳು 

ಬಹಳ ದೀರ್ಘಾವಧಿಯವರೆಗೆ ಕಾರ್ಯಾಚರಣೆಗೊಳ್ಳದ ಜ್ವಾಲಾಮುಖಿಗಳನ್ನು ನಂದಿದ ಜ್ವಾಲಾಮುಖಿಗಳನ್ನುವರು.

* ಯಾವುದನ್ನು ಮೃತ ಜ್ವಾಲಾಮುಖಿ ಎಂದು ಪ್ರಮಾಣಿಕರಿಸಿಲ್ಲ

* ಉದಾ – ನಾರ್ಕೊಂಡಂ – ಅಂಡಮಾನ್ ಮತ್ತು ನಕೋಬಾರ್ ಅಕಾಂಕಗುವಾ – ಅರ್ಜೆಂಟೈನ

ಜ್ವಾಲಾಮುಖಿಯ ವಸ್ತುಗಳು

೧. ದ್ರವರೂಪದ ವಸ್ತುಗಳು ಜ್ವಾಲಾಮುಖಿ ಉಂಟಾದಾಗ ಹೊರಹರಿಯುವ ದ್ರವರೂಪದ ಶಿಲಾರಸವನ್ನು ಲಾವರಸ ಎನ್ನುವರು

a. ಆಮ್ಲಿಯ ಲಾವಾರಸ – ಹೆಚ್ಚಿನ ಸಿಲಿಕಾಂಶವನ್ನು ಹೊಂದಿರುತ್ತದೆ.

* ಜ್ವಾಲಾಮುಖಿ ಶಂಕುಗಳು ಇದರಿಂದ ನಿರ್ಮಾಣವಾಗುತ್ತದೆ

b. ಕ್ವಾರಿಯ ಲಾವಾರಸ –

*  ಕಡಿಮೆ ಪ್ರಮಾಣದ ಸಿಲಿಕಾಂಶವನ್ನು ಹೊಂದಿರುತ್ತದೆ

*  ಸಮತಟ್ಟಾದ ಗುರಾಣಿ ಆಕೃತಿಗಳು ನಿರ್ಮಾಣವಾಗುತ್ತವೆ 

೨. ಘನ ರೂಪದ ವಸ್ತುಗಳು–  ಗುಂಡು, ಧೂಳು, ಲವಣದಿಂದಾದ ಕಲ್ಲು, ಬೂದಿ, ಕಿಟ್ಟ 

3. ಅನಿಲಗಳು – ಸಲ್ಫರ್, ಜಲಜನಕ, ಇಂಗಾಲದ ಡೈಯಾಕ್ಸೈಡ್, ನೀರಾವಿ.

ಜ್ವಾಲಾಮುಖಿಯಿಂದ ಆಗುವ ಭೂ ಸ್ವರೂಪಗಳು

೧. ಬಾಹ್ಯ ಸ್ವರೂಪಗಳು Extrusive Rocks–  ಲಾವ ಹೊರಬಂದು ಘನೀಕರಣ ಕ್ರಿಯೆಯಿಂದ ಉಂಟಾಗುತ್ತದೆ.

*  ಉದಾಹರಣೆಗೆ-  ಜ್ವಾಲಾಮುಖಿ ಶಂಕುಗಳು, ಜ್ವಾಲಾಮುಖಿ ಕುಂಡ, ಕಾಲ್ಡೆರಾ, ಲಾವಾ ಶಂಕು, ಲಾವಾ ಗುಮ್ಮಟ.

೨. ಅಂತಸ್ಸರಣ ಭೂ ಸ್ವರೂಪಗಳು Intrusive Rocks

* ಭೂಕವಚದ ಒಳಗಡೆ ಘನೀಕರಣಗೊಂಡು ರಚನೆಯಾಗುತ್ತವೆ.

*  ಉದಾಹರಣೆಗೆ ಡೈಕ್, ಸಿಲ್, ಬ್ಯಾತೋಲಿಕ್, ಲ್ಯಾಕೋಲಿತ್, ಲಾಪೋಲಿತ್, ಮುಂತಾದವು.

ಜ್ವಾಲಾಮುಖಿಗಳ ಹಂಚಿಕೆ

೧. ಫೆಸಿಫಿಕ್ ಸಾಗರದ ಸುತ್ತಲಿನ ವಲಯ ರಿಂಗ್ ಆಫ್ ಫಯರ್ ಎಂದು ಕರೆಯುವರು.

2.  ಭೂಖಂಡಾಂತರ ಮಧ್ಯವಲಯ – 

ಆಲ್ಫೈನ್ಸ್, ಮೆಡಿಟರೇನಿಯನ್, ಯೂರೋಪ್, ನಾರ್ತ್ ಆಫ್ರಿಕಾ,

೩.  ಅಟ್ಲಾಂಟಿಕ್ ಮಧ್ಯವಲಯ-  ಅಟ್ಲಾಂಟಿಕ್ ನ ಜಲಾಂತರ್ಗತ ಪರ್ವತ, ಐಸ್ ಲ್ಯಾಂಡ್, ಕೆರಿಬಿಯನ್ ದ್ವೀಪ.

2 thoughts on “Basic Geography – The Interior of the Earth – ಭೂಮಿಯ ಅಂತರಾಳ – 1”

  1. Pingback: ಭಾರತ - India - Basic Information - 1 - rvwritting

  2. Pingback: Geography - Solar system - Sun - 2 - rvwritting

Leave a Comment

Your email address will not be published. Required fields are marked *

Scroll to Top