Dyuthada Prasanga – ದ್ಯೂತದ ಪ್ರಸಂಗ
Dyuthada Prasanga – ದ್ಯೂತದ ಪ್ರಸಂಗ – ಕನ್ನಡದ ಮಹಾ ಕವಿಗಳಲ್ಲೊಬ್ಬರಾದ ಕುಮಾರವ್ಯಾಸ ರಚಿಸಿರುವ ಕರ್ನಾಟಕ ಕಥಾಮಂಜರಿ ಎಂಬ ಕಾವ್ಯದಿಂದ ದ್ಯೂತದ ಪ್ರಸಂಗ ಎಂಬ ಭಾಗವನ್ನು ಆರಿಸಿಕೊಳ್ಳಲಾಗಿದೆ. ಪದ್ಯದಲ್ಲಿ ಧರ್ಮರಾಯನು ಸೋತ ರೀತಿಯನ್ನು ಶಕುನಿ ಅವರ ರಾಜ್ಯಸಂಪತ್ತನ್ನೆಲ್ಲ ದುರ್ಯೋಧನನಿಗೆ ಗೆದ್ದು ಕೊಟ್ಟದ್ದನ್ನು ಹೇಳಲಾಗಿದೆ. ಪದ್ಯದಲ್ಲಿ ಅಸ್ತಿನಾಪುರದಿಂದ ಪಾಂಡವರಿಗೆ ಹೊಸ ಅರಮನೆಯನ್ನು ವೀಕ್ಷಿಸುವ ಸಲುವಾಗಿ ದೃತರಾಷ್ಟ್ರನ ಆಹ್ವಾನದ ಮೇರೆಗೆ ಇಂದ್ರಪ್ರಸ್ಥದಿಂದ ಹೊರಡುವ ಮುನ್ನ ಹಲವು ಅಪಶಕುನಗಳು ಉಂಟಾಗುತ್ತವೆ ಅವೆಲ್ಲವನ್ನು ತಿರಸ್ಕರಿಸಿ.
ಧರ್ಮರಾಯನ ಹೋರಟು ಬರುವಾಗ.
ಮರಳಲಹುದೈ ದೈವವಿಕ್ಕಿದ
ಕೊರಳುಗಣ್ಣಿಯ ಕುಣಿಕೆಯಾರಲಿ
ಹರಿವು ಮನ್ನಿಸಿದನೇ ಮೌಹೂರ್ತಕರ ನುಡಿಯ
ಕರೆಸುವನು ಧೃತರಾಷ್ಟ್ರ ನಮಗೀ
ನರಿ ಮೊಲಂಗಳ ಹಕ್ಕಿ ಹರಿಣೆಯ
ಕರಹವೇಗುವವೆಂದು ಜರೆದನು ಶಕುನ ಕೋವಿದರ
ಮರಳುತ್ತಾನೆಯೇ? ದೈವವೇ ಅವರ ಕೊರಳಿಗೆ ಕುಣಿಕೆ ಹಾಕಿ ಕರೆಯುವಾಗ ಹಿಂದಿರುಗುತ್ತಾನೆಯೇ? ಅದರಲ್ಲೂ ದೃತರಾಷ್ಟ್ರನಿಂದ ಬಂದಿರುವ ಆಹ್ವಾನವನ್ನು ತಿರಸ್ಕರಿಸಲಾಗುತ್ತದೆಯೇ? ಅಲ್ಲಿ ನರಿ ಮೊಲ ಜಿಂಕೆಗಳ ಅಪಶಕುನದ ಕರೆಗಳು ಏನು ಮಾಡುವವು ಎಂದು ಶುಭಹಾರೈಸುವವರನ್ನು ಜರೆದು ಮುಂದೆ ನಡೆಯುತ್ತಾನೆ.
ಇಳಿದರಾನೆಯನಮಳ ರತ್ನಾ
ವಳಿಯ ಕಾಣಿಕೆಗಳನ್ನು ಸುರಿದರು.
ಖಳ ಶಿರೋಮಣಿಗೆರಗಿದರು ಧೃತರಾಷ್ಟ್ರ ಭೂಪತಿಗೆ
ಕುಲತಿಲಕ ಬಾ ಕಂದ ಭರತಾ
ವಳಿ ವನದ ಮಾಕಂದ ಧರ್ಮ ಸ್ಥ
ಳ ಲತಾವಳಿ ಕಂದ ಬಾಯೆಂದಪ್ಪಿದನು ನೃಪನ,
ಇಂದ್ರಪ್ರಸ್ಥದಿಂದ ಹೊರಟು ಬಂದ ಪಾಂಡವರು ಅರಮನೆಯ ಮುಂದೆ ಆನೆಯಿಂದ ಇಳಿದಾಗ ರತ್ನಭರಿತವಾದ ಕಾಣಿಕೆಗಳನ್ನು ಸುರಿದು ಬರಮಾಡಿಕೊಂಡರು. ನಂತರ ಖಳರಲ್ಲೇ ಅಗ್ರನಾದ ಧೃತರಾಷ್ಟ್ರನ ಕಾಲಿಗೆ ಬಿದ್ದರು. ನಂತರ ಅವನು ವಿವಿಧ ಹೆಸರುಗಳಿಂದ ಹೊಗಳಿ ಧರ್ಮರಾಯನನ್ನು ಅಪ್ಪಿದನು.
ಬಾ ಮಗನೆ ರಿಪುರಾಯ ಮನ್ಮಥ
ಬೀಮ ಬಾರೈ ಭೀಮ ರಣ ನಿ
ಸೀಮ ಫಲುಗುಣ ಬಾ ನಕುಲ ಸಹದೇವ ಬಾಯೆನುತ
ಪ್ರೇಮ ರಸದಲಿ ಬೇರೆ ಬೇರು
ದ್ದಾಮ ಭುಜನಪ್ಪಿದನು ಚಿತ್ರದ
ತಾಮಸದ ತನಿ ಬೀಜ ಮುಸುಕಿತು ಹರ್ಷ ರಚನೆಯಲಿ
ಮುಂದುವರೆದು ಶತ್ರುಗಳ ರಾಜನಾದ ಮನ್ಮಥನಾದ ಭೀಮನೇ ಬಾ, ಯುದ್ಧಭೂಮಿಯಲ್ಲಿ ಮಹಾಪರಾಕ್ರಮಿಯಾದ ಅರ್ಜುನ, ನಕುಲ, ಸಹದೇವ ಬನ್ನಿ ಎಂದು ಅವರನ್ನು ಅಪ್ಪಿಕೊಂಡನು. ಅವನ ಮನಸ್ಸಿನಲ್ಲಿದ್ದ ದುಷ್ಟತನ ಅವನ ಹರ್ಷದಲ್ಲಿ ಮುಚ್ಚಿಹೋಯಿತು.
Women Banarasi silk – Budget saree – see once https://amzn.to/3ZA6mLO
ಖಳರ ಹೃದಯದ ಕಾಳ ಕೂಟದ
ಹುಳುಕ ಬಲ್ಲರೆ ಮಾನ್ಯರವದಿರ
ಲಲಿತ ಮಧುರ ವಚೋವಿಳಾಸಕೆ ಮರುಳಗೊಂಡಲಿ
ಅಳುಪಿದರೆ ಮಧುಕರನ ಮರಿ ಬೊ
ಬ್ದುಲಿಯ ವನದೊಳಗೇನಹುದು ನೃಪ
ತಿಲಕರಿದ್ದರು ಬೇರೆ ರಚಿಸಿದ ರಾಜಭವನದಲಿ
ದುಷ್ಟರ ಹೃದಯದಲ್ಲಿ ಭಯಂಕರವಾದ ಹುಳುಕನ್ನುಬಿಂತಹ ಶ್ರೇಷ್ಠರು ತಿಳಿದರೇ? ಅವರ ಮಧುರವಾದ ಮಾತಿಗೆ ಅವರು ಮರುಳಾಗಿಬಿಟ್ಟರು. ಇದು ಹೇಗೆಂದರೆ ದುಂಬಿಯ ಮರಿ ಜಾಲಿ ವನದೊಳಗೆ ಹೋದಾಗ ಏನು ಸಿಗದ ಪರಿಸ್ಥಿತಿ ಉಂಟಾದಂತೆ ಇವರಿಗೂ ಆಗಿ, ಅವರಿಗಾಗಿ ನಿರ್ಮಿಸಿದ್ದ ಬೇರೆಯ ರಾಜಭವನದಲ್ಲಿ ತಂಗಿದರು.
ಧರಣಿಪತಿ ಕೇಳೊಂದು ಹರಿಯಂ
ತರ ವಿಶಾಲ ಮಹಾಸಭಾ ವಿ
ಸರಣವದರಲಿ ತೆರಹ ಕಾಣೆನು ತೀವಿತವಿನಿಪರು
ಹೊರಗೆ ರಥಿಕರು ರಾಹುತರು ಜೋ
ಧರು ಪದಾತಿಗಳಿದ್ದುದಂದಿನ
ಸಿರಿ ಸುರೇಂದ್ರನ ಪಾಡಿಗೈಮಡಿ ಹತ್ತು ಮಡಿಯೆಂದ
ಆ ಮಹಾಸಭೆಯು ವಿಸ್ತಾರವಾಗಿದ್ದು ಅಷ್ಟು ವಿಶಾಲ ಪ್ರದೇಶದಲ್ಲಿ ಸ್ವಲ್ಪವೂ ಜಾಗವಿಲ್ಲದಂತೆ ರಾಜರು ತುಂಬಿಕೊಂಡಿದ್ದಾರೆ. ಅದರ ಹೊರಗೆ ರಥಿಕರು, ರಾವುತರು, ಸೈನಿಕರು, ಪದಾತಿಗಳ ಗುಂಪು ನೆರೆದಿದೆ. ಅಂದಿನ ಮಹಾಸಭೆಯ ಸಿರಿ ಸುರೇಂದ್ರನ ಸಭೆಗೆ ಐದು ಮಡಿ ಹತ್ತು ಮಡಿಯಂತಿತ್ತು.
ಒಂದು ಕಡೆಯಲಿ ಕವಡಿಕೆಯ ಜೂ
ಜೊಂದು ಕಡೆಯಲಿ ಗದ್ಯಪದ್ಯವ
ದೊಂದು ಕಡೆಯಲಿ ವಾರವಧುಗಳ ಸಾರಸಂಗೀತ
ಒಂದು ಕಡೆಯಲಿ ತರ್ಕ ಗೋಷ್ಠಿಯ
ದೊಂದು ಕಡೆಯಲಿ ಕೌರವೇಂದ್ರನ
ಮುಂದೆ ಜಡಿದುದು ರಭಸ ಹಾಸಂಗಿಗಳ ಸಾರಿಗಳ
ಆ ಮಹಾಸಭೆಯ ಒಂದು ಕಡೆ ಮೋಸದ ಜೂಜು ಒಂದು ಕಡೆಯಲ್ಲಿ ಗದ್ಯಪದ್ಯದ ವಾಚನ, ಒಂದು ಕಡೆ ರಾಜ ನರಸಿಕೆಯರ ಸಂಗೀತ ಒಂದು ಕಡೆಯಲ್ಲಿ ತರ್ಕಗೋಷ್ಠಿಗಳು ಬೇರೊಂದು ಕಡೆ ಕೌರವರಾಯನ ಮುಂದೆ ಪಗಡೆಯ ಜೂಜು ನಡೆಯುತ್ತಿತ್ತು.
ಆಡಲರಿವನು ಗಡ ಯುಧಿಷ್ಠಿರ
ನಾಡುವರೆ ಬರಹೇಳು ಮೇಡ್ತಾ
ನೋಡುತಿರಲಾವಾಡುವೆವು ಸಭೆಯಲಿ ವಿನೋದದಲಿ
ಖೋಡಿಯಿಲ್ಲದ ಸರಸ ನೆತ್ತವ
ನಾಡಲರಿಯದ ನೃಪತಿ ಮೃಗವೆಂ
ದಾಡುತಿಹರರಿದವರು ತಾವಲ್ಲೆಂದಾ ಶಕುನಿ
ಧರ್ಮರಾಯ ಆಡುತ್ತಾನೆ ಆಡುವ ಹಾಗಿದ್ದರೆ ಬಂದು ಹಾಡಲೇ ಇಲ್ಲವಾದರೆ ವಿನೋದದಲ್ಲಿ ನಾವು ಆಡುವುದನ್ನು ಅವರು ನೋಡಲಿ ಮೋಸ ಅಥವಾ ಕೆಡುಕಿಲ್ಲದ ಸರಸವಾದ ಪಗಡೆ ಆಟವನ್ನು ಆಡಲಾರದ ರಾಜನು ‘ಮೃಗ’ ಎಂದು ಹೇಳುತ್ತಾರೆ ತಿಳಿದವರು, ನಾವಲ್ಲ. ಆತರ ಹೇಳಿದ್ದು ಎಂದ ಶಕುನಿ.
ಹಲವು ಮಾತಿನಲೇನು ಭೂಪತಿ
ಕೆಲಕೆ ಸಿಲುಕಿದನವದಿರೊಡ್ಡಿದ
ಬಲೆಗೆ ಬಂದನು ನೆತ್ತ ಸಾರಿಯ ಗುರಿಯ ಗದ್ದುಗೆಗೆ
ಕೆಲದಲನುಜರು ವಾಮದಲಿ ಮಣಿ
ವಳಯ ಮಂಚದಲಂಧನೃಪನಿದಿ
ರಲಿ ಸುಯೋಧನ ಕರ್ಣ ಶಕುನಿ ಜಯದ್ರಥಾದಿಗಳು
ರಾಜನೇ ಕೇಳು ಯುದ್ಧಕ್ಕೂ, ಜೂಜಿಗೂ ಕರೆದಾಗ ವಲ್ಲನೆಂದು ಹಿಂಜರಿದು ಹೋದರೆ ಅವನು ಕ್ಷತ್ರಿಯರಲ್ಲಿ ಅಸಮಾನನೇನು? ಈಗ ನಾವು ಜೂಜಿಗೆ ಕರೆದಿದ್ದೇವೆ, ರಾಜ್ಯವನ್ನು ಆಳುವ ಧರಣಿಪತಿ ನೀನು. ಆಡುವಾಗಿದ್ದರೆ ಬಾ, ರಾಜ ಧರ್ಮವನ್ನು ಹಾಳು ಮಾಡುವಾಗಿದ್ದರೆ ಬರಬೇಡ, ನಿಲ್ಲು ಎಂದು ಅವನನ್ನು ಉಪೇಕ್ಷಿಸಿ ಮಾತನಾಡಿದ.
ಅರಸ ಕೇಳ್ ಕಾಳಗಕೆ ಜೂಜೆಗೆ
ಕರೆದಡೋಸರಿಸಿದೊಡೆ ಬಳಿಕವ
ಗರುವನೇ ಕ್ಷತ್ರಿಯರೊಳಗೆ ನೃಪಧರ್ಮ ನೀನರಿಯ
ಕರೆದೆವಾವ್ ಜೂಜಿಂಗೆ ಬೇಕೇ
ಧರಣಿಪತಿ ಬಾ ರಾಜಧರ್ಮವ
ನೊರಸುವರೆ ನಿಲ್ಲೆಂದುಪೇಕ್ಷಿಸಿ ನುಡಿದನಾ ಶಕುನಿ
ಹೀಗೆ ಹಲವು ಮಾತುಗಳಿಗೆ ಸಿಲುಕಿದ ಧರ್ಮರಾಯನು ಪಗಡೆ ಆಟಕ್ಕೆ ಮೀಸಲಾದ ಜಾಗಕ್ಕೆ ಬಂದನು ಧರ್ಮಜನ ಪಕ್ಕದಲ್ಲಿ ತಮ್ಮಂದಿರು ಅವನ ಎಡಗಡೆಯ ಮಣಿ ಮಂಚದ ಮೇಲೆ ಧೃತರಾಷ್ಟ್ರ, ಎದುರಿಗೆ ದುರ್ಯೋಧನ, ಕರ್ಣ, ಜಯಧ್ರಥ ಮೊದಲಾದವರು ಪಗಡೆ ಆಟದ ರಂಗದಲ್ಲಿ ಬಂದು ಕುಳಿತರು.
ಆದಿದನು ನೃಪನಾ ಕ್ಷಣಕೆ ಹೋ ‘
ಗಾಡಿದನು ಖೇಚರರ ಖಾಡಾ
ಖಾಡಿಯಲಿ ಝಾಡಿಸಿದ ಹಯವನು ಹತ್ತು ಸಾವಿರವ
ಹೂಡಿದನು ಸಾರಿಗಳ ಮರಳಿ
ನ್ನಾಡುವರೆ ಪಣವಾವುದೈ ಮಾ
ತಾಡಿಯೆನೆ ಮನದಲಿ ಮಹೀಪತಿ ಧನವ ಚಿಂತಿಸಿದ
ಪಣವಾಗಿ ಒಡ್ಡಿ ಆಡುವಾಗ ಗಂಧರ್ವರೊಡನೆ ಖಾಡಖಾಡಡಿಯಲ್ಲಿ ಹೋರಾಡಿ ಜಯಗಳಿಸಿ ತಂದ ಹತ್ತು ಸಾವಿರದ ಕುದುರೆಗಳನ್ನು ಪಣವಾಗಿ ಒಡ್ಡಿದನು. ತಕ್ಷಣವೇ ಸೋತು ಇನ್ನು ಮುಂದೆ ಹಾಡುವಾಗಿದ್ದರೆ ಪಣ ಯಾವುದು? ಎಂದು ಕೇಳಿದ ಶಕುನಿ. ಆಗ ಮುಂದಿನ ಪಣಕ್ಕೆ ಏನೆಂದು ಯೋಚಿಸಿದನು ಧರ್ಮರಾಯ.
ಅಗಣಿತದ ಧನವುಂಟು ಹಾಸಂ
ಗಿಗಳ ಹಾಯಿತಂ ಸೋತ ವಸ್ತುವ
ತೆಗೆವೆನೀಗಳೆ ಶಕುನಿ ನೋಡಾ ತನ್ನ ಕೌಶಲವ
ದುಗುಣ ಹಲಗೆಗೆ ಹತ್ತು ಮಡಿ ರೇ
ಖೆಗೆ ಗಜ್ಜಾಶ್ವನಿಕಾಯ ರಥ ವಾ
ಜಿಗಳು ಸಹಿತಿದೆ ಸಕಲ ಸೈನಿಕವೆಂದನಾ ಭೂಪ
ನನ್ನಲ್ಲಿ ಅಗಾಧವಾದ ಧನ ಸಂಪತ್ತಿದೆ. ನೀನು ಕಾಯಿಗಳನ್ನು ಹಾಕು ನಾನು ಸೋತ ವಸ್ತುಗಳನ್ನು ಈಗಲೇ ಗೆದ್ದು ತೆಗೆದುಕೊಳ್ಳುತ್ತೇನೆ. ಶಕುನಿ ನೋಡುತ್ತಿರುವ ನನ್ನ ಕೌಶಲವನ್ನು ಪಗಡೆಯಾಟದ ಹಲಗೆಗೆ ದ್ವಿಗುಣವಾಗಿ, ರೇಖೆಗೆ ಹತ್ತು ಮಡಿಯಾಗಿ ಆನೆ, ಕುದುರೆ, ರಥಗಳಿಂದ ಕೂಡಿದ ಸಕಲ ಸೈನ್ಯವೂ ಇದೆ. ಅದನ್ನು ಪಣವಾಗಿಡುತ್ತೇನೆ ಎಂದನು.
ಆಯಿತಿದು ಪಣವಹುದಲೇ ನೃಪ
ಹಾಯಿಕಾ ಹಾಸಂಗಿಗಳ ಸಾ
ಹಾಯ ಕುರುಪತಿಗಿಲ್ಲ ಕೃಷ್ಣಾದಿಗಳು ನಿನ್ನವರು
ದಾಯ ಕಂದೆರೆವರೆ ಸುಯೋಧನ
ರಾಯನುಪಚಿತಪುಣ್ಯವಕಟಾ
ದಾಯವೇ ಬಾಯೆಂದು ಮಿಗೆ ಬೊಬ್ಬಿರಿದನಾ ಶಕುನಿ
ಆಯ್ತು, ಇದು ಪಣ ಹೌದು ತಾನೆ? ರಾಜನೇ ಹಾಕು ಪಗಡೆಗಳನ್ನು, ದುರ್ಯೋಧನನಿಗೆ ಯಾರು ಸಹಾಯಕರಿಲ್ಲ ಆದರೆ ನಿನಗೆ ಕೃಷ್ಣಾದಿಗಳೆಲ್ಲರೂ ನಿನ್ನವರೆ, ಇಲ್ಲಿನ ದಾಳಗಳು ಕಣ್ಣು ಬಿಟ್ಟರೆ ದುರ್ಯೋಧನನ ಪೂರ್ವ ಪುಣ್ಯ. ಇಲ್ಲಿಯವರೆಗೂ ರಾಶಿಯಾಗಿರುವ ಪುಣ್ಯ, ಅಯ್ಯೋ! ದಾಳವೇ ಬಾ ಬಾ ಎಂದು ಶಕುನಿ ಬೊಬ್ಬೆರಿದನು.
ಮತ್ತೆ ಹೇಳುವುದೇನ ಸೋಲವ
ಬಿತ್ತಿ ಬೆಳೆದನು ಭೂಪನವರಿಗೆ
ತೆತ್ತನೈ ಸರ್ವಸ್ವ ಧನವನು ಸಕಲ ಸೈನಿಕನ
ಮತ್ತೆ ಪಣವೇನೆನಲು ಬಳಿಕರು
ವತ್ತು ಸಾವಿರ ಕರಿಕಳಭವೆಂ
ಬತ್ತು ಸಾವಿರ ತುರಗ ಶಿಶುಗಳನೊಡ್ಡಿದನು ಭೂಪ
ಮತ್ತೆ ಹೇಳುವುದೇನಿದೆ, ಸೋಲುವ ಬೆಳೆಯನ್ನು ಮತ್ತೆ ಬಿತ್ತಿ ಬೆಳೆದನು ಧರ್ಮರಾಯನು, ಅವರಿಗೆ ತನ್ನೆಲ್ಲಾ ಸರ್ವಸ್ವವಾದ ಸಂಪತ್ತು, ಸೈನ್ಯವನ್ನೆಲ್ಲಾ ಸೋತನು. ಆಗ ಶಕುನಿ ಮತ್ತೆ ಪಣವೇನು? ಎಂದಾಗ ಹತ್ತುಸಾವಿರ ಆನೆ, ಒಂಭತ್ತು ಸಾವಿರ ಕುದುರೆ ಮರಿಗಳಿವೆ ಎಂದನು.
ತೀರಿತಿಂದಿಪ್ರಸ್ಥದುರು ಭಂ
ಡಾರ ತನ್ನರಮನೆಯ ಪೈಕದ
ವಾರಕದ ಭಂಗಾರವೊಡ್ಡಿತು ಕೋಟಿ ಸಂಖ್ಯೆಯಲಿ
ಸೇರಿತದು ಕುರುಪತಿಗೆ ರಾಯನ
ನಾರಿಯರ ವಿವಿಧಾಭರಣ ಸಿಂ
ಗಾರವೊಡ್ಡಿತು ಕೊಂಡು ಮುಳುಗಿತು ಖಡ್ಡತನ ನೃಪನ
ಇಂದ್ರಪ್ರಸ್ಥದ ದೊಡ್ಡ ಭಂಡಾರವು ಮುಗಿಯಿತು. ಅರಮನೆಯ ಬಳಗದವರ, ವಾರಕರ(ಕೊಡುಗೆಗಳು) ಬಂಗಾರವು ಕೋಟಿ ಸಂಖ್ಯೆಯಲ್ಲಿ ಒಡ್ಡಿದನು. ಇದು ಕೂಡ ದುರ್ಯೋಧನ ನಿಗೆ ಸೇರಿತು ನಂತರದಲ್ಲಿ ಶ್ರೀರ ವಿವಿಧ ಆಭರಣಗಳನ್ನು ಪಣವಿಟ್ಟು ಸೋತನು. ಇವೆಲ್ಲವನ್ನು ಅವನ ಹಟಮಾರಿತನದಿಂದ ಕಳೆದುಕೊಂಡನು.
ನಕುಲ ಸಹದೇವಾರ್ಜುನರ ಮಣಿ
ಮಕುಟ ಕರ್ಣಾಭರಣ ಪದಕಾ
ದಿಕ ಸಮಸ್ತಾಭರಣವೊಡ್ಡಿತಂ ಹಲಗೆಯೊಂದರಲಿ
ವಿಕಟ ಮಾಯಾ ವಿಷಮ ಕರ್ಮವ
ನಕಟ ಬಲ್ಲನೆ ಸಾಧಂಜನ ಸೇ
ವಕನು ಸೋತನು ಸಾಧ್ಯವಹುದೇ ವಿಧಿಯ ಮುಳಿಸಿನಲಿ
ಬಳಿಕ ನಕುಲ, ಸಹದೇವ, ಅರ್ಜುನರ ಮಣಿ ಮಕುಟ, ಕಿವಿ ಆಭರಣಗಳು, ಪದಕಗಳು ಸಮಸ್ತ ಆಭರಣಗಳನ್ನು ಒಂದು ಆಟದಲ್ಲಿ ಒಡ್ಡಿದನು. ವಿಕೃತವಾದ ಮಾಯೆಯ ಮೋಸದ ಕರ್ಮವನ್ನು ಸಾಧು ಜನರಾದವರು ತಿಳಿಯಲಾಗುತ್ತದೆಯೇ? ಆಗಲು ಸೋತನು. ವಿಧಿ ಅವನ ಮೇಲೆ ಕೋಪಿಸಿಕೊಂಡಿರುವಾಗ ಅಥವಾ ಮುನಿಸಿಕೊಂಡಿರುವಾಗ ಯಾವುದು ಸಾಧ್ಯವಾಗುತ್ತದೆ?
ಹೇಳಲೇನದನವರು ರಚಿಸಿದ
ಬೇಳುವೆಯನಾ ಶಕುನಿಯೊಡ್ಡಿದ
ಕಾಲು ಕುಣಿಕೆಯೊಳಾರು ಬೀಳರು ನೃಪತಿ ನಿಮಿಷದಲಿ
ಬೀಳುಗೊಟ್ಟನು ತನ್ನನಾ ಜನ
ಜಾಲವಿದ್ದುದು ಬಿಗಿದ ಬೆರಗಿನೊ
ಳಾಲಿಸುವಿರೇ ಜೀಯ ಪಣವೇನೆಂದನಾ ಶಕುನಿ
ಅವರು ಮಾಡಿದ ಮೋಸ ಅಥವಾ ವಂಚನೆಯನ್ನು ಹೇಳುವುದೇನು? ಶಕುನಿಯು ಒಡ್ಡಿದ ಕುಣಿಕೆಯಲ್ಲಿ ಎಂತವರು ತಾನೆ ಬೀಳುವುದಿಲ್ಲ ಹಾಗೆಯೇ ಧರ್ಮರಾಯನು ನಿಮಿಷದಲ್ಲೇ ಆ ಬಲೆಯೊಳಗೆ ಬಿದ್ದನು. ಆಗ ಅಲ್ಲಿ ಸೇರಿದ್ದ ಜನರೆಲ್ಲ ಮತ್ತೆ ಬಿಗಿದು ಕುಳಿತರು ಶಕುನಿ ಇತ್ತ ಕೇಳುವಿರಾ ಎಂದು ಹೇಳಲು ಪಣವೇನು? ಎಂದನು.
ಎಲವೊ ಸೌಬಲ ಸಾಕಿದೊಂದೇ
ಹಲಗೆ ಸರ್ವಸ್ವಾಪಹಾರವ
ನಿಳುಹುವೆನು ನೀಲಾಳಕೆಯನೊಡ್ಡುವೆನು ಬಾಲಕಿಯ
ಉಳಿದ ಧನವೆಮ್ಮೆವರಿಗೆ ನಿ
ಷ್ಪಲಿತವಿದು ಹೊಡೆನಲು ಹರುಷದ
ಲಳಿಯ ಚೌಪಟಮಲ್ಲ ಸಾರಿಯ ಸಾಲ ಜೋಡಿಸಿದ
ಎಲವೋ ಸೌಬಲ, ಇದೊಂದೇ ಆಟವು ಸಾಕು ನಾನು ಕಳೆದುಕೊಂಡಿದ್ದೆಲ್ಲವನ್ನು ಗೆಲ್ಲಲು ಎಂದು ಹೇಳಿ ನೀಲಾಳಕಿಯನ್ನು ಪಣವಾಗಿ ಒಡ್ಡುತ್ತೇನೆ. ಇದು ನಮ್ಮ ಐದು ಜನರಿಗೂ ಉಳಿದಿರುವ ಸಂಪತ್ತು, ಇದು ನಿಷ್ಕಲಿತವಿದ್ದು, ಇದಕ್ಕೆ ಯಾವುದೇ ಚ್ಯುತಿ ಇಲ್ಲ ಎಂದು ಧರ್ಮರಾಯ ಹೇಳಿದನು. ಇದರ ಖುಷಿಯಲ್ಲಿ ಶಕುನಿ ಪಗಡೆಯ ದಾಳಗಳನ್ನು ಜೋಡಿಸಿದನು.
ನ್ಯಾಯವೆಮ್ಮದು ಮುನ್ನ ಸೋತಿರಿ
ಜೀಯ ನಿಮ್ಮೊಡ ಹುಟ್ಟಿದರು ಸಹಿ
ತಾಯತಾಕ್ಷಿಯ ಬಳಿಕ ಸೋತಿರಿ ಬಲುಹ ಮಾಡೆವೆಲೆ
ರಾಯನೊಲಿದುದ ಮಾಡಲಾವ
ನ್ಯಾಯವರ್ತಿಗಳಲ್ಲಲೇ ಬೆಸ
ಸಾ ಯುಧಿಷ್ಠಿರಯೆನುತ ಕೈಗಳ ಮುಗಿದನಾ ಶಕುನಿ
ನ್ಯಾಯವು ನಮ್ಮದು ನೀವು ನಿಮ್ಮ ಸಹೋದರರ ಜೊತೆ ಸೇರಿ ಮೊದಲು ಸೋತಿರಿ, ನಂತರ ದ್ರೌಪದಿಯನ್ನು ಪಣವಿಟ್ಟು ಸೋತಿರಿ. ನಾವು ನಿಮಗೆ ಬಲವಂತ ಮಾಡಲಿಲ್ಲ ಹೌದೇ, ಕುರುರಾಯನು ಬಯಸಿದಂತೆ ಮಾಡಿದ್ದಿದ್ದರೆ ನ್ಯಾಯ ಅನ್ಯಾಯಗಳಾಗುತ್ತಿರಲಿಲ್ಲವೇ ಬೆಸಸು ಯುಧಿಷ್ಠಿರ ಎಂದು ಶಕುನಿ ಕೈಮುಗಿದನು.
ಗೆಲಿದು ಕೊಟ್ಟೆನು ಸಕಲ ಚಾತು
ರ್ಬಲವನಾ ಭಂಡಾರ ಸಹಿತ
ಗೃಳೆಯರೈವರ ಕಮಲಮುಖಿಯನು ರಾಜ್ಯ ಸಿರಿಸಹಿತ
ಕಲಶವಿಟ್ಟೆನು ಕೊಟ್ಟ ಭಾಷೆಗೆ
ಎಲೆ ಸುಯೋಧನಯೆಂದು ನಯನಾಂ
ಗುಲಿಯ ಸಂಕೇತದಲಿ ಸನ್ನೆಯ ಮಾಡಿದನು ಶಕುನಿ
ಶಕುನಿ ಕುರುರಾಯನ ಕಡೆ ತಿರುಗಿ ಧರ್ಮರಾಯನ ಸಕಲವಾದ ಸೈನ್ಯ, ಅವನ ಸಂಪತ್ತನ್ನು ಜೊತೆಗೆ ದ್ರೌಪದಿಯನ್ನು ಗೆಲೆದು ಕೊಟ್ಟೆನು. ಎಲೆ ದುರ್ಯೋಧನ ಕೊಟ್ಟ ಮಾತಿನಂತೆ ನಾನು ನಡೆದುಕೊಂಡೆನು ಎಂದು ಎಂದು ಹೇಳುತ್ತಾ ಕಣ್ಣು ಮತ್ತು ಬೆರಳುಗಳ ಮೂಲಕ ಸನ್ನೆ ಮಾಡಿ ತೋರಿದನು.
Pingback: %Eleyanda Gudi Marana Ragale% - rvwritting