Huttari Hadu -ಪಂಜೆ ಮಂಗೇಶರಾಯ
ಪಂಜೆ ಮಂಗೇಶರಾಯ (೧೮೭೪-೧೯೩೭) Huttari Hadu- ಇವರ ಕಾವ್ಯ ನಾಮ ಕವಿಶಿಷ್ಯ. ಇವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ. ಕೊಡಗಿನ ಮಡಿಕೇರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದವರು. ೧೯೩೪ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನವೋದಯದ ಸಾಹಿತ್ಯ ಚಳುವಳಿಯ ಸಾಹಿತಿಗಳಾಗಿ ಪ್ರಸಿದ್ಧರಾದ ಇವರ ಪ್ರಮುಖ ಕವನಗಳು ‘ಹುತ್ತರಿಯ ಹಾಡು’ ‘ನಾಗರ ಹಾವೆ’ ಕೋಟಿ ಚೆನ್ನಯ, ಗುಡುಗುಡು ಗುಮ್ಮಟ ದೇವರು ಮುಂತಾದವು.
Huttari Hadu -ಹುತ್ತರಿ ಹಾಡು
ಇದು ಕೊಡಗಿನ ಕೊಡವರ ಜೀವನವನ್ನು ಪ್ರತಿಬಿಂಬಿಸುವ ಅಥವಾ ಪ್ರತಿನಿಧಿಸುವ ಕವಿತೆಯಾಗಿದೆ. ಕೊಡಬರ ಸುಗ್ಗಿಯ ಸಂದರ್ಭದಲ್ಲಿ ಹಾಡುವ ಹಾಡಾಗಿದೆ ಇದು ಕೊಡಗಿನ ಪ್ರಾಕೃತಿಕ ಸೌಂದರ್ಯ ಸಂಸ್ಕೃತಿ ಅವರ ವೀರತನವನ್ನು ಸುಗ್ಗಿಯನ್ನು ವರ್ಣಿಸುವುದರ ಜೊತೆ ಜನಪದ ಶೈಲಿಯ ಲೇಪನವನ್ನು ಒಳಗೊಂಡು ರಚಿತವಾಗಿದೆ.
ಹುತ್ತರಿ ಎಂದರೆ ಹೊಸ ಭತ್ತದ ಬೆಳೆ ಎಂಬ ಅರ್ಥ ಹೊಂದಿದೆ. ಬೆಳೆದಿರುವ ಹೊಸ ಬೆಳೆಯನ್ನು ಮನೆಗೆ ತರುವ ಸಮಯದಲ್ಲಿ ಒಂದು ವಾರಗಳ ಕಾಲ ಆಚರಿಸುವ ಹಬ್ಬವಾಗಿದೆ. ಅದು ನಡೆಯುವುದು ನವಂಬರ್ ಡಿಸೆಂಬರ್ ಕಾಲದಲ್ಲಿ ಇದರೊಂದಿಗೆ ಪಂಜೆಯವರು ಇಡೀ ಕೊಡಗಿನ ಪ್ರಕೃತಿ ಸೌಂದರ್ಯ, ಸಂಸ್ಕೃತಿ ವೀರತನ, ಕ್ಷಾತ್ರಗುಣ ಎಲ್ಲವನ್ನು ಈ ಕವಿತೆಯಲ್ಲಿ ವರ್ಣಿಸಿದ್ದಾರೆ.
ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ,
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ.
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ,
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ.
ಅಲ್ಲಿ ಆ ಕಡೆ ನೋಡಲಾ!
ಅಲ್ಲಿ ಕೊಡವರ ನಾಡಲಾ!
ಅಲ್ಲಿ ಕೊಡವರ ಬೀಡಲಾ!
ಭೂದೇವಿ ಕೊಡಗಿನಲ್ಲಿ ಬಂದು ನೆಲೆಸಿದ್ದಾಳೆ. ದೇವಸನ್ನಿಧಿಯೊಳಗೆ ಇರುವ ಭೂದೇವಿ ಕೊಡಗಿನ ಸೌಂದರ್ಯದಲ್ಲಿ ನೆಲೆನಿಂತಿದ್ದಾಳೆ. ಅವಳು ಅಲ್ಲಿ ಹಸಿರಿನಿಂದ ಕೂಡಿರುವ ಬೆಟ್ಟ ಗುಡ್ಡಗಳ ಸೌಂದರ್ಯದಿಂದಲೇ ಬಂದು ನೆಲೆಸಿದಳೋ, ನೆಲೆಸಿರುವ ಜಾಗದಿಂದ ಮಿಂಚಿನಂತೆ ಹುಟ್ಟಿ ಕಾವೇರಿಯು ಹೊಳೆಹೊಳೆಯಾಗಿ ಹರಿದು ಅಲ್ಲಿನ ನೆಲವನ್ನು ತಣಿಸುವುದರೊಂದಿಗೆ ಜನರ ಕಲ್ಮಶ, ಕೊಳಕನ್ನು ಕಳೆಯುತ್ತಿರುವ ಗಂಗೆಯಂತಾಗಿದ್ದಾಳೆ. ಇಂತಹ ಜಾಗದಲ್ಲಿ ಕೊಡವರ ನಾಡು ಮತ್ತು ಜನರಿದ್ದಾರೆ.
New type of Refrigerator awaiting for you all, Go and check the offershttps://amzn.to/4evUYWh
ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು
ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು.
ಸವರಿ ಆನೆಯ ಸೊಂಡಲಲಿ ರಣಕೊಂಬನಾರ್ ಭೋರ್ಗರೆದರೋ
ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ.
ಅವರು ಸೋಲ್ ಸಾವರಿಯರು!
ಅವರೆ ಕಡುಗಲಿ ಗರಿಯರು!
ಅವರು ಕೊಡಗಿನ ಹಿರಿಯರು!
ಕೊಡಗಿನ ಜನರ ಪೌರುಷ ವೀರತ್ವದ ಬಗೆಗೆ ಹೇಳಲಾಗಿದೆ. ಕೊಡವರ ಹಿರಿಯರು ಅಥವಾ ಪೂರ್ವಜರು ಹುಲಿ ಹಾಲನ್ನು ಕುಡಿದು ಬೆಳೆದಿದ್ದಾರೆ, ಕಲ್ಲಿನಿಂದ ಬಿಸಿ ಹೊಡೆಯುವುದಕ್ಕೆ ಬಳಸುವ ಹಗ್ಗದ ಬದಲು ಹೆಬ್ಬಾವನ್ನೇ ಹಗ್ಗವಾಗಿ ಬಳಸಿದ ಪೌರುಷವಂತರಾಗಿರುವವರು, ಆನೆಯನ್ನೇ ಕೊಂದು ಅದರ ದಂತಗಳನ್ನು ರಣಕಹಳೆಯನ್ನಾಗಿ ಮಾಡಿಕೊಂಡು ಭೋರ್ಗರೆದ ಯುದ್ಧ ಪ್ರಿಯರು, ಇಂತಹವರು ಎಂದು ಸವೆಯದಂತಹ ಸಾಹಸದ ಬೇಟೆಯನ್ನು ಮೆರೆದಿದ್ದಾರೆ. ಅಂತಹವರನ್ನು ಸಾವರಿಯರು, ಸೋಲದವರು ಕಡು ವೀರರು ಕೊಡಗಿನವರು ಎಂದು ಅವರ ಪರಾಕ್ರಮಗಳನ್ನು ಹೊಗಳಿದ್ದಾರೆ.
ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್,
ಹೆಮ್ಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್,
ಬೊಮ್ಮ ಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳದೀ ದೇಶವು
ಧರ್ಮ ದಾನದ ಕಟ್ಟುಕಟ್ಟಳೆ, ರೀತಿ ನೀತಿಯ ಕೋಶವು!
ನಮ್ಮ ಕೊಡಗಿದು ಜಮ್ಮದು!
ಜಮ್ಮ ಕೊಡಗಿದು ನಮ್ಮದು!
ನಮ್ಮೊಡಲ್ ಬಿಡಲಮ್ಮದು!
ಪರಮ ಸಾಹಸಿಗಳಾದ ಕೊಡವರು ಎಂದೂ ದಾಸ್ಯದ ಭಾರಕ್ಕೆ ಬಗ್ಗಿದವರಲ್ಲ, ಹಾಗೆಯೇ ವೈರಿಗಳಿಗೆ ಹಿರಿಯರು ಹೇಗೆ ಬೆನ್ನು ತಿರುಗಿಸಿ ಹೋಗಲಿಲ್ಲವೋ ಹಾಗೆಯೇ ಅದನ್ನು ಮುಂದುವರಿಸಿಕೊಂಡು ಬಂದವರು, ಇಂಥವರ ನಾಡು ಬ್ರಹ್ಮಗಿರಿಯಿಂದ ಪುಷ್ಪಗಿರಿಯವರಿಗೆ ಹಸಿರನ್ನು ಹೊದ್ದು ಮಲಗಿ ಬೆಳೆದ ದೇಶದಲ್ಲಿನವರು, ದಾನ ಧರ್ಮ ಕಟ್ಟಳೆಯ ರೀತಿ ನೀತಿಗಳಿಗೆ ಯಾವುದೇ ಕೊಂದು ಬಾರದಂತೆ ನಡೆದುಕೊಂಡ ಜನರಾಗಿದ್ದಾರೆ. ರಾಜರಿಂದ ಇನಾಮಾಗಿ ಬಂದ ರಾಜ್ಯವನ್ನು ಪಡೆದ ಜನರು ಹೆಮ್ಮೆಯಿಂದ ನಡೆಸಿಕೊಂಡು ಹೋಗುತ್ತಿದ್ದಾರೆ. ಅಂತಹ ನಾಡನ್ನು ಬಿಡದೆ ದೇಶಪ್ರೇಮದಿಂದ ಒಂದಾಗಿ ಮುನ್ನೆಡೆಸಿದ್ದಾರೆ.
Bheemalapa poem Summary; https://rvwritting.com/bheemaalapa-%e0%b2%ad%e0%b3%80%e0%b2%ae%e0%b2%be%e0%b2%b2%e0%b2%be%e0%b2%aa-%e0%b2%ac%e0%b2%bf-%e0%b2%95%e0%b2%be%e0%b2%82-%e0%b2%ae%e0%b3%8a%e0%b2%a6%e0%b2%b2%e0%b2%a8%e0%b3%86%e0%b2%af-%e0%b2%b8/
ಇದು ಆಗಸ್ತ್ರನ ತಪದ ಮಣೆ, ಕಾವೇರಿ ತಾಯ ತವರ್ಮನೆ
ಕದನಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ!
ಇದಕೊ! ಚೆಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು!
ಇದೊ! ಇದೊ! ಇಲ್ಲುರುಳ ಹಾಲೇರಿಯರ ಬಲಗಿರಿ ಶೃಂಗವು!
ವಿಧಿಯ ಮಾಟದ ಕೊಡಗಿದು!
ಮೊದಲೆ ನಮ್ಮದು. ಕಡೆಗಿದು!
ಕದಲದೆಮ್ಮನು, ಬೆಡಗಿದು!
ಅಗಸ್ತ್ಯರು ತಪಸ್ಸನ್ನಾಚರಿಸಿದ ನೆಲ, ನಾಡಿನ ಗಂಗೆಯಾದ ಕಾವೇರಿ ಹುಟ್ಟಿ ಹರಿದ ನಾಡಿದು, ಕದಂಬರ ಚಂದ್ರವರ್ಮನು ಆಳಿದ ನಾಡು, ಚಂಗಾಳ್ವ ವಂಶದ ಅರಸರಾದ ಹಾವೇರಿ ವಂಶದವರು ಕಟ್ಟಿ ಆಳಿ ಮೆರೆದ ಪ್ರದೇಶವು ಇದಾಗಿದೆ. ಕೊಡಗಿನವರು ವಿಧಿಯ ಮಾಟದಿಂದ ಕೂಡಿದರೋ ಹಾಗೆಯೇ, ಈಗಿನಿಂದ ಕೊನೆಯವರೆಗೂ ನಮ್ಮದೇ ಇದನ್ನು ಬಿಡಲೊಲ್ಲೆವು, ಇಂತಹ ಬೆಳಗಿನ ಕೊಡಗನು ಎಂದಿದ್ದಾರೆ.
ಒಮ್ಮತವು, ಒಗ್ಗಟ್ಟು, ಒಂದೇ ಮನವು ಎಲ್ಲಿದೆ ಹೇಳಿರಿ!
ಸುಮ್ಮನಿತ್ತರೊ ದಟ್ಟಿ ಕುಪ್ಪಸ? ಹಾಡು ಹುತ್ತರಿಗೇಳಿರಿ!
ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪದ ಹೊರಹೊಮ್ಮಲಿ.
ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!
ನೆಮ್ಮದಿಯನಿದು ತಾಳಲಿ!
ಅಮ್ಮೆಯಾ ಬಲ ತೋಳಲಿ!
ನಮ್ಮ ಕೊಡಗಿದು ಬಾಳಲಿ!
ಕೊಡಗಿನ ಜನರಲ್ಲಿ ಒಮ್ಮತವಾದ ಒಗ್ಗಟ್ಟಿದೆ. ಒಂದೇ ಮನಸ್ಸಿನಿಂದ ಕೂಡಿದವರಾಗಿ ತಮ್ಮದೇ ಆದ ವೇಷಭೂಷಣಗಳನ್ನು ಹಾಕಿಕೊಂಡು ಹುತ್ತರಿ ಹಬ್ಬದಲ್ಲಿ ಒಂದಾಗಿ ಆಡಿ ಕುಣಿದು ಕುಪ್ಪಳಿಸಿ ಹಾಡುತ್ತಾ ಪಾತುರೆ ಕೋಲುಗಳನ್ನು ಬೀಸುತ್ತಾ, ನರ್ತಿಸುವ ಇವರ ರೀತಿ ನೀತಿಗಳು ಒಂದೇ. ಕಾವೇರಿ ನದಿಯ ಅಥವಾ ಮಾತೆಯ ಆಶೀರ್ವಾದ ನಿರಂತರವಾಗಿರುವುದರಿಂದ ಅವಳು ನಮ್ಮನ್ನು ಸದಾ ರಕ್ಷಿಸುವಂತೆ, ಅವಳ ಬಲ ಎಂದೆಂದಿಗೂ ಇರುವುದರಿಂದ ಇದು ನೆಮ್ಮದಿಯ ತಾಣವಾಗಿಯೂ, ಸದಾ ಶಾಂತಿ ಸುಖದಿಂದ ಕೂಡಿರುವ ತಾಣವಾಗಿ ಉಳಿಯಲಿ, ಬೆಳೆಯಲಿ ಎಂದು ಕವಿಯು ಕವಿತೆಯ ಮೂಲಕ ಹಾರೈಸಿದ್ದಾರೆ.