Saviraru Nadigalu – ಸಾವಿರಾರು ನದಿಗಳು – ಪದ್ಯದ ಭಾವಾರ್ಥ

Saviraru Nadigalu – ಸಾವಿರಾರು ನದಿಗಳು ಕವಿ ಕಾವ್ಯ ಪರಿಚಯ :ಸಿದ್ಧಲಿಂಗಯ್ಯ

Siddalingaiah
Siddalingaiah


ಸಿದ್ಧಲಿಂಗಯ್ಯ (೧೯೫೪.೨೦೨೧) – Saviraru Nadigalu – ಸಾವಿರಾರು ನದಿಗಳುಬಂಡಾಯ ಸಾಹಿತಿ, ದಲಿತ ಕವಿ ಎಂದೇ ಖ್ಯಾತರಾಗಿರುವ ಡಾ|| ಸಿದ್ಧಲಿಂಗಯ್ಯನವರು, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ, ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದರು. ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ‘ಹೊಲೆಮಾದಿಗರ ಹಾಡು’ ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ ಹಾಡು’, ‘ಮೆರವಣಿಗೆ’, ‘ನನ್ನ ಜನಗಳು ಮತ್ತು ಇತರ ಕವಿತೆಗಳು’, ಮುಂತಾದವು ಇವರ ಪ್ರಮುಖ ಸಂಕಲನಗಳು. ಪಂಚಮ ಮತ್ತು ನೆಲಸಮ ಏಕಲವ್ಯ ನಾಟಕಗಳು, ‘ಅವತಾರಗಳು’ ಪ್ರಬಂಧ ‘ಊರು ಕೇರಿ’ ಆತ್ಮಕಥನಗಳನ್ನು ರಚಿಸಿದ್ದಾರೆ.

Saviraru Nadigalu – ಸಾವಿರಾರು ನದಿಗಳು

Saviraru Nadigalu
Saviraru Nadigalu

ಇಂದಿನ ಸಮಾಜದಲ್ಲಿ ಶತಶತಮಾನಗಳಿಂದ ಅನುಭವಿಸಿಕೊಂಡು ಬಂದಂತಹ ಅಸಮಾನತೆಯ ಉದಾಹರಣೆಗೆ ಜಾತಿ ಅಸಮಾನತೆ, ವರ್ಗದ ಅಸಮಾನತೆ, ಬಣ್ಣದ ಅಸಮಾನತೆ ಮುಂತಾದವು. ಇವುಗಳ ಮೂಲಕ ಕೆಲವರ್ಗದವರು ತುಳಿತಕ್ಕೆ ಒಳಗಾದರು, ಸಮಾಜದ ಹಂಚಿಗೆ ತಳ್ಳಲ್ಪಟ್ಟರು. ಇದರಿಂದ ಯಾವುದೇ ಉಪಯೋಗಗಳು ದೊರಕದೆ, ಲಭಿಸದೆ ದೂರ ಉಳಿಯುವಂತಾದರು. ಮುಂದೆ ಇದರ ಅರಿವು ಅವರಿಗಾದ ಮೇಲೆ ಅಂದರೆ ನಾವು ಸಮಾಜದ ಒಂದು ಭಾಗ,  ಮೇಲ್ವರ್ಗದವರಂತೆ ನಾವುಗಳು ಕೂಡ ಎಂದು, ಇಲ್ಲಿಯವರೆಗೆ ಆದ ಅಸಮಾನತೆಯನ್ನು ಪ್ರತಿಭಟಿಸಲು ಜಾಗೃತಗೊಂಡು ಮುಂದೆ ಬಂದರು. ಇದರಿಂದ ಒಂದು ಹೋರಾಟದ ಹಾದಿಯನ್ನೇ ಕಂಡುಕೊಂಡರು ಇದರ ಮೂಲಕ ತಮ್ಮ ಮೇಲಾಗುತ್ತಿದ್ದ ಶೋಷಣೆಯ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸಲು ಮುಂದಾಗಿ ತಮಗಿದ್ದ  ಸಾಮಾಜಿಕ ನ್ಯಾಯವನ್ನು ಪಡೆಯಲು ಮುಂದಾದರು.

Red me Pad pro – useful gadget once u will see: https://amzn.to/4gzXFYd


ಸಾರಾಂಶ

ನೆನ್ನೆ ದಿನ

ನನ್ನ ಜನ

ಬೆಟ್ಟದಂತೆ ಬಂದರು

ಸಾಮಾಜಿಕ ಅಸಮಾನತೆ ಯಾರಿಗೂ ನಮ್ಮ ಜನಕ್ಕೆ ಆಗಿದ್ದು ನಿನ್ನೆ ದಿನ ಅದಕ್ಕಾಗಿ ಅವರೆಲ್ಲ ಬೆಟ್ಟದಂತೆ ಒಟ್ಟಾಗಿ ಸೇರಿ ಅದರ ವಿರುದ್ಧ ಪ್ರತಿಭಟಿಸಲು ಬರುತ್ತಿದ್ದಾರೆ.

ಕಪ್ಪು ಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು

ಹಗಲು ರಾತ್ರಿಗಳನ್ನು ಸೀಳಿ ನಿದ್ದೆಯನ್ನು ಒದ್ದರು

ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ

ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ

ಇರುವೆಯಂತೆ ಹರಿವಸಾಲು, ಹುಲಿಸಿಂಹದ ದನಿಗಳು

ಧಿಕ್ಕಾರ ಧಿಕ್ಕಾರ ಅಸಮಾನತೆಗೆ

ಎಂದೆಂದಿಗು ಧಿಕ್ಕಾರ ಶ್ರೀಮಂತರ ಸೊಕ್ಕಿಗೆ

ಲಕ್ಷಾಂತರ ನಾಗರುಗಳು ಹುತ್ತಬಿಟ್ಟು ಬಂದಂತೆ

ಊರತುಂಬ ಹರಿದರು

ಪಾತಾಳಕೆ ಇಳಿದರು

ಆಕಾಶಕೆ ನೆಗೆದರು

ಸಾವಿರಾರು ನದಿಗಳು ಪದ್ಯದ ಸಾರಾಂಶ – The video about saviraru nadigaluhttps://youtu.be/7d62cpMSq2c

ಇವರು ಜಾತಿಯಲ್ಲಿ ಕೆಳವರ್ಗದವರಾದರೂ ದುಡಿಯುವ ಕುಲಕ್ಕೆ ಸೇರುತ್ತಾರೆ ಅದಕ್ಕೆ ಕಪ್ಪು ಮುಖ ಬಿಳಿ ಗಡ್ಡ ಉರಿಯುತ್ತಿರುವ ಕಣ್ಣುಗಳು ಎಂಬುದು ದುಡಿಮೆಯನ್ನು ಪ್ರತಿನಿಧಿಸುತ್ತದೆ ತಲತಲಾಂತರದಿಂದ ದುಡಿದು, ದುಡಿದು ಅಸಮಾನತೆಯ ಕಾವಿಗೆ ಉರಿದಿದ್ದಾರೆ ಇದರ ವಿರುದ್ಧವಾಗಿ ಹೋರಾಡಬೇಕೆಂದು ಹಗಲು ರಾತ್ರಿಗಳೆನ್ನದೆ ಒಟ್ಟಾಗಿ ಸೇರಿ ನಮ್ಮಲ್ಲಿರುವ ಅಜಾಗ್ರತ ನಿದ್ದೆ ಸ್ವಭಾವವನ್ನು ಕಾಲಿನಿಂದ ಒದ್ದು ಮುಂದೆ ಬರುವ ರೊಚ್ಚಿಗೆ ಅವರ ಕಂಬಳಿಗಳು ಬಾಡಿದವು ಅವರು ನಡೆದುಬರುವುದೇ ಕುಣಿದಂತೆ ಭಾಸವಾಗಿ ಅದರ ರಭಸವು ಭೂಕಂಪನದಂತೆ ಕಾಣುವುದು, ಮುಂದೆ ಅವರು ಇರುವೆಗಳಂತೆ ಸಾಲು ಸಾಲು ಸೇರಿ ಶೋಷಿತರ ವಿರುದ್ಧ ಹುಲಿ ಸಿಂಹದಂತೆ ಗರ್ಜನೆಗಳನ್ನು ಮಾಡಿ ನಿಮ್ಮ ಅಸಮಾನತೆಗೆ ನಮ್ಮ ಧಿಕ್ಕಾರ ಶ್ರೀಮಂತರ ಸೊಪ್ಪಿಗೂ ತಮ್ಮ ಧಿಕ್ಕಾರವಿದೆ ಎಂದು ಕೂಗಲು ಹುತ್ತದಿಂದ ಬರುವ ನಾಗರಹಾವುಗಳು ಬಂದಂತೆ ನನ್ನ ಜನರು ಜಾಗೃತರಾಗಿ ಎಲ್ಲಿ ನೋಡಿದರೂ ನನ್ನ ಜನ ಬಂದರು ಅವರ ಧ್ವನಿ ಪಾತಾಳದಷ್ಟು ಕೆಳಕ್ಕೂ ಆಕಾಶದಷ್ಟು ಎತ್ತರದವರೆಗೂ ಕೇಳಿಸುವಷ್ಟು  ಪರಿಣಾಮಕಾರಿಯಾದ ಹೋರಾಟದ ತೀವ್ರತೆಯನ್ನು ಹೊಂದಿತ್ತು.

ಬೀದಿಯಲ್ಲಿ ಗಲ್ಲಿಯಲ್ಲಿ

ಬೇಲಿಮೆಳೆಯ ಮರೆಗಳಲ್ಲಿ

ಯಜಮಾನರ ಹಟ್ಟಿಯಲ್ಲಿ ಧಣಿಕೂರುವ ಪಟ್ಟದಲ್ಲಿ

ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು

ನನ್ನ ಜನರು ಬೀದಿ ಬೀದಿಗಳಲ್ಲಿ, ದಾರಿ, ಓಣಿಗಳಲ್ಲಿ ರಕ್ಷಣೆಗಾಗಿ ನಿರ್ಮಿಸಿಕೊಳ್ಳುವ ಬೇಲಿಗಳ ಮರೆಯಲ್ಲಾಗಲಿ, ಯಜಮಾನ ಇರುವ ಮನೆ, ಮಠ, ಧನಿಕರು ಇರುವ ಸ್ಥಳಗಳಲ್ಲೂ, ಎಲ್ಲಾ ಕಡೆಯೂ ನನ್ನ ಜನರು ಬಂದಿದ್ದಾರೆ. ರಾಜಕೀಯ ಅಧಿಕಾರದ ಮೂಲಕ ನಮ್ಮ ಸಮಸ್ಯೆ ನಿವಾರಣೆಯಾಗಬಹುದು ಎಂದು ನೀರಿನಂತೆ ಹರಿದು ಬಂದು ಸೇರಿದ್ದಾರೆ.

ಇವರು ಬಾಯಿ ಬಿಟ್ಟೋಡನೆ

ಅವರ ಬಾಯಿ ಕಟ್ಟಿತು

ಇವರ ಕಂಠ ಕೇಳಿದೊಡನೆ

ಅವರ ದನಿ ಇಂಗಿತು

ಕ್ರಾಂತಿಯ ಬಿರುಗಾಳಿಯಲ್ಲಿ ಕೈಬೀಸಿದ ನನ್ನ ಜನ

ಛಡಿಯ ವಿಟು ಹೊಡೆದವರ

ಕುತ್ತಿಗೆಗಳ ಹಿಡಿದರು.

ಶೋಷಿತರು, ದುಡಿಮೆಗಾರರು ಹೋರಾಟದ ಮೂಲಕ ತಮ್ಮ ಪರವಾಗಿ ಸಮಾಜದ ಪರವಾಗಿ ಬಾಯಿ ಬಿಟ್ಟಾಗ ಶೋಷಕರ, ಯಜಮಾನರ ಬಾಯಿ ಕಟ್ಟಿತು. ಇವರ ಹೋರಾಟದ ದನಿ ಕೇಳಿದಾಗ ಅಬ್ಬರಿಸುತ್ತಿದ್ದ ಶೋಷಕರ ಧನಿ ಅಡಗಿತು. ಇಂತಹ ಕ್ರಾಂತಿಯನ್ನು ಉಂಟು ಮಾಡಿದ ಜನ ಹಿಂದೆ ನಮಗೆ ಶಿಕ್ಷೆ ನೀಡುತ್ತಿದ್ದ, ಛಡಿ ಏಟು ನೀಡುತ್ತಿದ್ದ, ಶೋಷಕರ ಕುತ್ತಿಗೆಗಳನ್ನು ಹಿಡಿದು ಕೇಳುತ್ತಿದ್ದಾರೆ ಅಸಮಾನತೆ ಹೋಗಲಾಡಿಸಿ ಸಮಾನತೆ ಎಂಬ ನ್ಯಾಯವನ್ನು ಕೇಳುತ್ತಿದ್ದಾರೆ.

ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು

ವೇದಶಾಸ್ತ್ರ ಪುರಾಣ ಬಂದೂಕದ ಗುಡಾಣ

ತರಗೆಲೆಕಸಕಡ್ಡಿಯಾಗಿ

ತೇಲಿತೇಲಿ ಹರಿದವು

ಹೋರಾಟದ ಸಾಗರಕ್ಕೆ

ಸಾವಿರಾರು ನದಿಗಳು.

ಇವರ ಹೋರಾಟವನ್ನು ತಡೆಯಲು  ಬಂದ ಪೋಲೀಸರ ಶಿಕ್ಷೆಯ ದೊಣ್ಣೆಗಳು, ಯಾರದೋ ಮಾತು ಕೇಳಿ ಬಂದಂತಹ ಏಜೆಂಟರುಗಳ ಕತ್ತಿಗಳು, ವೇದಗಳ ಕಾಲದಿಂದಲೂ ಶೋಷಣೆ ಮಾಡಿಕೊಂಡು ಬಂದಂತಹ ಪುರಾಣಗಳ ಗುಂಪು, ಶಸ್ತ್ರಾಸ್ತ್ರಗಳ ಗುಂಪು ಇವೆಲ್ಲವೂ ಅವರ ಹೋರಾಟಕ್ಕೆ ತರಲೆಗಳಂತೆ ಚೂರು ಚೂರಾಗಿ ಚದುರು ಹೋಗಿ ಹಾಗೂ ಹೋರಾಟದ ಸಾಗರಕ್ಕೆ ನದಿಯಂತೆ ಬಂದು ಸೇರಿದವು. ಅಷ್ಟೊಂದು ತೀವ್ರತೆಯ ಹೋರಾಟವನ್ನು  ಈ ನನ್ನ ಜನರು ಮಾಡಿದರು ಎಂಬುದನ್ನು ಕವಿತೆಯಲ್ಲಿ ನೋಡಬಹುದು.

ಕವಿತೆಯಲ್ಲಿ ದಮನೆತರ ಅಸಮಾನತೆಗೆ ಒಳಗಾದ ಜನರ ಹೋರಾಟದ ತೀವ್ರತೆಯನ್ನು ಪಡೆದು ಅದರ ಎದುರಿಗೆ ಯಾರು ನಿಲ್ಲದೆ ತರಗಿಲೆಗಳಾಗಿ ಚದುರಿಹೋಗಿ  ಸಮ ಸಮಾಜದ ನಿರ್ಮಾಣಕ್ಕೆ ಮುಂದಾದರು ಎಂಬುದನ್ನು ಕವಿತೆ ತಿಳಿಸುತ್ತದೆ.

Leave a Comment

Your email address will not be published. Required fields are marked *

Scroll to Top