ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗಳು -Classical Languages in India

Classical Languages - ಶಾಸ್ತ್ರೀಯ ಸ್ಥಾನಮಾನ
Classical Languages – ಶಾಸ್ತ್ರೀಯ ಸ್ಥಾನಮಾನ

Classical Languages – ಭಾಷೆ ಎಂದರೆ ಯಾದೃಚಿಕ ಧ್ವನಿ ಸಂಕೇತಗಳ ಘಟಕವಾಗಿದೆ. ಇದರಿಂದ ಒಬ್ಬರಿಂದ ಇನ್ನೊಬ್ಬರ ನಡುವೆ ಸಂಪರ್ಕ ಏರ್ಪಡಬೇಕಾದರೆ ಸಂವಹನದ ಮಾಧ್ಯಮ ಅಥವಾ ಸಾಧನವಾಗಿ ಭಾಷೆ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಭಾಷೆ ಎಂಬುದು ಎಲ್ಲರನ್ನೂ ಒಂದೆಡೆ ಸೇರಿಸುವ ಕೊಂಡಿಯೂ ಹೌದು, ನಮ್ಮ ಸುತ್ತಮುತ್ತಲಿನ ವಾತಾವರಣದ ಮೇಲೆ ಪ್ರಭಾವವು ಬೀರುವುದರ ಜೊತೆಗೆ ನಮ್ಮ ಸಂಸ್ಕೃತಿಯ ವಾಹಕವು ಹೌದು. ಇಂಥ ಭಾಷೆಗಳು ಅವರವರ ಧರ್ಮ, ಜನಾಂಗ, ಜಾತಿಗಳ ಮುಖವಾಣಿಯು ಆಗಿರುತ್ತದೆ. ಇಂತಹ ಮುಖವಾಣಿಗಳು ಭಾರತದಲ್ಲಿ ಸಾವಿರಾರು ಭಾಷೆಗಳಿವೆ. ಆದರೆ ಇವೆಲ್ಲವೂ ಸಾಂಸ್ಕೃತಿಕ ಪರಂಪರೆ ಹೊಂದಿರುವುದಿಲ್ಲ, ಅಂತವುಗಳು ಭಾಷೆಯ ಮೂಲ, ವಿಶಿಷ್ಟವಾದ ಸಾಹಿತ್ಯಿಕ ಪರಂಪರೆ ಹೊಂದಿರುವ ಭಾಷೆಗಳಾಗಿರುತ್ತವೆ. ಅಂತವುಗಳನ್ನು ಶಾಸ್ತ್ರೀಯ ಭಾಷೆಗಳೆಂದು ಕರೆಯಲಾಗುತ್ತದೆ.


ಭಾರತ ಸರ್ಕಾರವು 2004ರಲ್ಲಿ ಕೆಲವೊಂದು ಕಠಿಣ ಮಾನದಂಡಗಳನ್ನು ಮಾಡುವುದರ ಮೂಲಕ ಯಾವ ಭಾಷೆಗಳು ಈ ಮಾನದಂಡಗಳನ್ನು  ಪೂರ್ಣವಾಗಿ ಕಾರ್ಯಗತಗೊಳಿಸುತ್ತವೋ ಅವನ್ನು ಶಾಸ್ತ್ರೀಯ ಭಾಷೆಗಳೆಂದು ಘೋಷಣೆ ಮಾಡಿತು. ಇದನ್ನು ಸಾಕಾರಗೊಳಿಸಲು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಭಾಷಾ ತಜ್ಞರ ಸಮಿತಿಯನ್ನು ನೇಮಕ ಮಾಡಿದ್ದು ಅದು ಕೆಲವೊಂದು ಮಾನದಂಡಗಳನ್ನು ರೂಪಿಸಿತು.

Gaming laptop is here, once watch it – HP Victus Gaming laptop: https://amzn.to/4gUFrkk


Classical Languages – 2004 ರಲ್ಲಿನ ಮಾನದಂಡಗಳು

* ಸಾವಿರ ವರ್ಷಗಳ ಇತಿಹಾಸವನ್ನು ದಾಖಲಿಸಬೇಕು

* ಪ್ರಾಚೀನ ಸಾಹಿತ್ಯ ಅಥವಾ ಗ್ರಂಥಗಳು ಇದನ್ನು ಮಾತನಾಡುವ ಪೀಳಿಗೆಯ ಮೌಲ್ಯಯುತವಾದ ಪರಂಪರೆ ಎಂದು ಪರಿಗಣನೆ.

* ಸಾಹಿತ್ಯ ಸಂಪ್ರದಾಯವು ಮೂಲವನ್ನು ಹೊಂದಿರಬೇಕು ಅದು ಎರವಲಾಗಿ ಬಂದಿರಬಾರದು.
2004ರ ಮಾನದಂಡಗಳ ಮೇಲೆ ತಮಿಳಿಗೆ ಮೊದಲ ಬಾರಿ ಭಾರತ ಸರ್ಕಾರ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿತು.


ಇದಾದ ನಂತರ Classical Languages – 2005ರಲ್ಲಿ ಹೊಸ ಮಾನದಂಡಗಳನ್ನು ಭಾರತ ಸರ್ಕಾರ ಮಾಡಿತು.

ಅವು

* 1500 ಅಥವಾ 2000 ವರ್ಷಗಳ ಅವಧಿಯಲ್ಲಿನ ಇತಿಹಾಸವನ್ನು ಆ ಭಾಷೆ ಹೊಂದಿರಬೇಕು.

* ಪ್ರಾಚೀನ ಸಾಹಿತ್ಯ ಅಥವಾ ಗ್ರಂಥಗಳು ಇದನ್ನು ಮಾತನಾಡುವ ಪೀಳಿಗೆಯವರ ಮೌಲ್ಯಯುತವಾದ ಪರಂಪರೆ ಎಂದು ಪರಿಗಣಿಸಿರಬೇಕು

* ಸಾಹಿತ್ಯ ಸಂಪ್ರದಾಯವು ಮೂಲವನ್ನು ಹೊಂದಿರಬೇಕು ಅದು ಎರವಲಾಗಿ ಬಂದಿರಬಾರದು* ಶಾಸ್ತ್ರೀಯ ಭಾಷೆ ಮತ್ತು ಸಾಹಿತ್ಯವು ಆಧುನಿಕ ಭಾಷೆಯಿಂದ ಭಿನ್ನವಾಗಿದೆ. ಶಾಸ್ತ್ರೀಯ ಭಾಷೆ ಮತ್ತು ನಂತರದ ರೂಪಗಳಲ್ಲಿ ಅಸಂಯಮವು ಇರಬಹುದು.

ಈ ಮಾನದಂಡಗಳ ಮೇಲೆ ಸಂಸ್ಕೃತವನ್ನು 2005ರಲ್ಲಿ ಗುರುತಿಸಿ ಶಾಸ್ತ್ರೀಯ ಸ್ಥಾನಮಾನವನ್ನು ಎರಡನೆಯದಾಗಿ ಭಾರತ ಸರ್ಕಾರ ಘೋಷಿಸಿತು.

ಇದೇ ಮಾನದಂಡಗಳ ಆಧಾರದ ಮೇಲೆ 2008ರಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಿಗೆ 2013ರಲ್ಲಿ ಮಲಯಾಳಂ ಭಾಷೆಗೆ 2014ರಲ್ಲಿ ಒಡಿಯಾ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನು ಭಾರತ ಸರ್ಕಾರ ನೀಡಿತು.
ಈಗ ಮತ್ತೆ ಸುದ್ದಿಯಲ್ಲಿರುವ ಶಾಸ್ತ್ರೀಯ ಸ್ಥಾನಮಾನ ಏನಕ್ಕೆ ಎಂದರೆ 2024ರಲ್ಲಿ ಶಾಸ್ತ್ರೀಯ ಸ್ಥಾನಮಾನ ನೀಡಲು ಸಾಹಿತ್ಯ ಅಕಾಡೆಮಿ ಮಾನದಂಡಗಳನ್ನ ಕೊಂಚ ಬದಲಿಸಿ, ನಿಯಮಗಳನ್ನು ನೀಡಿದೆ.


Classical Languages – 2024 ಮಾನದಂಡಗಳು

* 1500 – 2,000 ವರ್ಷಗಳ ಅವಧಿಯಲ್ಲಿನ ಇತಿಹಾಸ ಆ ಭಾಷೆ  ಹೊಂದಿರಬೇಕು

* ಪ್ರಾಚೀನ ಸಾಹಿತ್ಯ ಅಥವಾ ಗ್ರಂಥಗಳು ಇದನ್ನು ಮಾತನಾಡುವ ಪೀಳಿಗೆಯ ಮೌಲ್ಯಯುತವಾದ ಪರಂಪರೆ ಎಂದು ಪರಿಗಣಿಸಿರಬೇಕು.

* ಜ್ಞಾನ ಪಠ್ಯಗಳು ವಿಶೇಷವಾಗಿ ಕಾವ್ಯದ ಜೊತೆಗೆ ಗದ್ಯ ಪಠ್ಯಗಳು ಶಿಲಾ ಶಾಸನದ ಸಾಕ್ಷಿಗಳು.

* ಶಾಸ್ತ್ರೀಯ ಭಾಷೆ ಮತ್ತು ಸಾಹಿತ್ಯವು ಆಧುನಿಕ ಭಾಷೆಯಿಂದ ಭಿನ್ನವಾಗಿದೆ. ಶಾಸ್ತ್ರೀಯ ಭಾಷೆ ಮತ್ತು ನಂತರದ ರೂಪಗಳಲ್ಲಿ ಅಸಮ್ಯಮವು ಇರಬಹುದು.
2024ರಲ್ಲಿ ಭಾರತ ಸರ್ಕಾರ ಈ ಮೇಲಿನ ಮಾನದಂಡಗಳ ಆಧಾರವಾಗಿ ಐದು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನವನ್ನು ಘೋಷಣೆ ಮಾಡಿದ

ಅವು

1. ಮರಾಠಿ

2. ಪಾಲಿ

3. ಪ್ರಾಕೃತ

4. ಅಸ್ಸಾಮಿ

5. ಬಂಗಾಳಿ


ಶಾಸ್ತ್ರೀಯ ಸ್ಥಾನಮಾನದ ಉಪಯೋಗಗಳು

* ಭಾರತೀಯ ಶಾಸ್ತ್ರೀಯ ಭಾಷೆಗಳಲ್ಲಿನ ಶ್ರೇಷ್ಠ ವಿದ್ವಾಂಸರಿಗೆ ಎರಡು ಪ್ರಮುಖ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ

* ಯು.ಜಿ.ಸಿ ಅನುಮತಿಯ ಮೇರೆಗೆ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪೀಠ ಸ್ಥಾಪನೆ

* ಶಾಸ್ತ್ರೀಯ ಭಾಷೆಗಳ ಅಧ್ಯಯನಕ್ಕಾಗಿ ಅಧ್ಯಯನ ಕೇಂದ್ರ ಸ್ಥಾಪನೆ.

ಮರಾಠಿ

ಇಂಡೋ ಆರ್ಯನ್ ಭಾಷಾ ವರ್ಗಕ್ಕೆ ಸೇರಿದ ಪ್ರಮುಖ ಭಾಷೆಗಳಲ್ಲೊಂದು. ಮಹಾರಾಷ್ಟ್ರದ ರಾಜ್ಯ ಮತ್ತು ಪ್ರಮಾಣೀಕೃತ ಭಾಷೆಯಾಗಿದೆ. ಭಾರತ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಈ ಭಾಷೆಯು ಗುರುತಿಸಿಕೊಂಡಿದೆ. ಅದರೊಂದಿಗೆ ಈ ಭಾಷೆಯನ್ನು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಮಧ್ಯಪ್ರದೇಶ ಛತ್ತೀಸ್ಗಡ್, ಗುಜರಾತ್, ಆಂಧ್ರಪ್ರದೇಶ, ದಾದ್ರಾ ಮತ್ತು ನಗರ ಹವೇಲಿ, ದಿಯು ದಾಮನ್ ಕೆಲವು ಪ್ರದೇಶಗಳಲ್ಲಿ ಈ ಭಾಷೆಯನ್ನು ಬಳಸುವ ಜನರನ್ನು ಕಾಣಬಹುದು.


ಪಾಲಿ

ಪಾಲಿಮಾಗದಿಯೆಂತಲೂ ಇದನ್ನು ಕರೆಯಲಾಗುತ್ತದೆ ಇದು ಭಾರತೀಯ ಉಪಖಂಡದ ಶಾಸ್ತ್ರೀಯ ಮಧ್ಯದ ಇಂಡೋ ಆರ್ಯನ್ ಭಾಷೆಗೆ ಸೇರಿದುದಾಗಿದೆ ಇದೊಂದು ತ್ರಿಪಿಟಕಗಳಿಗೆ ಸೇರಿದ ಭಾಷೆಯಾಗಿದೆ. ಒಂದು ಮಾತಿನ ಪ್ರಕಾರ ಬುದ್ಧ ತನ್ನ ಬೋಧನೆಗಳನ್ನು ಪಾಲಿ ಭಾಷೆಯಲ್ಲಿಯೇ ಮಾಡುತ್ತಿದ್ದ ಎಂದು ಹೇಳಲಾಗುತ್ತದೆ.


ಪ್ರಾಕೃತ

ಭಾರತೀಯ ಉಪಖಂಡದಲ್ಲಿ ಸುಮಾರು 3 ರಿಂದ 8ನೇ ಶತಮಾನದ ವರೆಗೆ ಗುರುತಿಸಿಕೊಂಡಿದ್ದ ಮಧ್ಯ ಇಂಡೋ ಆರ್ಯನ್ ಭಾಷೆಗಳ ಒಂದು ಭಾಗವಾಗಿದೆ ಇದರ ಪ್ರಮುಖ ರೂಪ ಅರ್ಧಮಾಗದಿ ಭಾಷೆ. ಹಾಗೆ ಇದು ಮೌರ್ಯ ಸಾಮ್ರಾಜ್ಯದ ಹಂತದಲ್ಲಿ ಬಾಳಿಕೆಯಲ್ಲಿತ್ತು. ಮಹಾವೀರನು ತನ್ನ ಬೋಧನೆಗಳಿಗೆ ಬಳಸಿದ ಭಾಷೆಯಾಗಿದೆ ತದನಂತರದಲ್ಲಿ ಆರಂಭಿಕ ಜೈನ ಪಠ್ಯಗಳು ಇದರಲ್ಲೇ ರಚಿತವಾಗಿವೆ.


ಅಸ್ಸಾಮಿ

ಅಸ್ಸಾಂ ರಾಜ್ಯದ ಅಧಿಕೃತ ಭಾಷೆಯಾಗಿದೆ ಜೊತೆಗೆ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಬರುವ 22 ಭಾಷೆಗಳಲ್ಲಿ ಇದು ಒಂದಾಗಿದೆ ಇದು ಇಂಡೋ ಆರ್ಯನ್ ಭಾಷಾ ಗುಂಪಿಗೆ ಸೇರಿದ ಭಾಷೆಯಾಗಿದ್ದು ಇದರ ಮೂಲ ಎರಡನೇ ಶತಮಾನದಿಂದ ಇಂಡೋ ಆರ್ಯನ್ ಮಾಗಡಿ ಪ್ರಾಕೃತದಿಂದ ವಿಕಸಿತವಾಗಿದೆ ಎಂದು ಹೇಳಲಾಗಿದೆ.


ಬಂಗಾಳಿ

ಇದು ಭಾರತದ ಬಂಗಾಳ ಪ್ರಾಂತ್ಯಕ್ಕೆ ಸಂಬಂಧಿಸಿದ ಭಾಷೆಯಾಗಿದೆ. ಇಂಡೋ ಆರ್ಯನ್ ಭಾಷಾ ವರ್ಗಕ್ಕೆ ಸೇರಿದ ಭಾಷೆಯಾಗಿದ್ದು ದೇಶದಲ್ಲಿ ಅತಿ ಹೆಚ್ಚು ಜನರು ಬಳಸುವ ಭಾಷೆಯ ಜೊತೆಗೆ ಬಾಂಗ್ಲಾದೇಶದಲ್ಲಿ ಅಧಿಕೃತ ಭಾಷೆಯು ಆಗಿದೆ ಇದು ಕೂಡ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಗುರುತಿಸಿಕೊಂಡಿರುವ ಭಾಷೆಯಾಗಿದೆ.


ಹಾಗಾದರೆ ಭಾರತ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಗುರುತಿಸಿಕೊಂಡಿರುವ ಭಾಷೆಗಳಾವುವು?

1. ಅಸ್ಸಾಮಿ

2. ಬಂಗಾಳಿ

3. ಗುಜರಾತಿ

4. ಹಿಂದಿ

5. ಕನ್ನಡ

6. ಕಾಶ್ಮೀರಿ

7. ಕೊಂಕಣಿ

8. ಮಲಯಾಳಂ

9. ಮಣಿಪುರಿ

10. ಮರಾಠಿ

11. ನೇಪಾಳಿ

12. ಒರಿಯಾ

13. ಪಂಜಾಬಿ

14. ಸಂಸ್ಕ್ರತ

15. ಸಿಂಧಿ

16. ತಮಿಳು

17. ತೆಲುಗು

18. ಉರ್ದು

19. ಬೋಡೋ

 20. ಸಂತಾಲಿ

21. ಮೈಥಿಲಿ

22. ಡೋಗ್ರಿ

some of the languages are waiting for this classical language status. they are waiting for the approval.

Leave a Comment

Your email address will not be published. Required fields are marked *

Scroll to Top