Eleyanda Gudi Marana Ragale – ಇಳೆಯಾಂಡ ಗುಡಿ ಮಾರನ ರಗಳೆ – ರಗಳೆಯ ಸಾರಾಂಶ
Eleyanda Gudi Marana Ragale – ಇಳೆಯಾಂಡ ಗುಡಿ ಮಾರನ ರಗಳೆ – ನಿನ್ನಲ್ಲಿ ಐಕ್ಯನಾದ ಇಳೆಯಾಂಡ ಗುಡಿಮಾರನ ಚರಿತೆಯನ್ನು ಒಳ್ಳೆಯ ಅಥವಾ ಸುಂದರವಾದ ಮಾತುಗಳಿಂದ ಹೇಳುವೆ ಕೇಳು ಶಿವನೇ ಎಂದು ಹೇಳಿದೆ
ಶಿವನಿಗೆ ಚೋಳ ದೇಶ ಎಂಬುದು ಮಲಗುವ ಮನೆಯಂತಿದೆ. ಅಲ್ಲಿ ಹೊಳೆಯುವ ಒಂದು ಊರಿದೆ ಆ ಊರು ಇಳೆಯಾಂಡ. ಅಲ್ಲಿ ಇಳೆಯಾಂಡ ಗುಡಿ ಮಾರನೆಂಬುವವನು. ಅವನು ಶಿವನಿಗೆ ಶ್ರೇಷ್ಠನಾದ ಭಕ್ತನಾಗಿದ್ದನು, ಹಾಗೆಯೇ ಅವನು ಕೃಷಿಕನಾಗಿದ್ದನು. ಅವನು ಬೇಸಾಯವನ್ನು ಹೇಗೆ ಮಾಡುತ್ತಾನೆಂದರೆ ಸಮಚಿತ್ತದಂತಿರುವ ಭೂಮಿಯನ್ನು ಹಸನು ಮಾಡಿ ನಮ್ಮಲ್ಲಿರುವ ಹರಿಷಡ್ವರ್ಗಗಳನ್ನೇ ಎತ್ತಿನಂತೆ ಹೂಡಿ, ಚಂಚಲದ ಮನಸ್ಸನ್ನು ಹಗ್ಗವನ್ನಾಗಿ ಮಾಡಿ, ಎತ್ತಿಗೆ ಬಿಗಿದು ಎಳೆಯುತ್ತಾನೆ, ಅಹಂಕಾರವನ್ನು ನೇಗಿಲನ್ನಾಗಿ ಮಾಡಿ ಅಲ್ಲಿ ಬೀಜ ಬಿತ್ತನೆಯನ್ನು ಸರ್ವೇಶ ನಿಷ್ಠೆಯಂತೆ ಮಾಡಿ ಬೆಳೆ ಬೇಳೆಯುತ್ತಾನೆ. ಹೀಗೆ ಮಾಡುತ್ತ 95 ವರ್ಷಗಳ ಕಾಲ ಬದುಕಿದ್ದಾನೆ. ಈಗ ಶಿವ ಇಂತಹವನನ್ನು ಪರೀಕ್ಷಿಸಬೇಕು ಎಂದು ಭೂಲೋಕಕ್ಕೆ ಹೊಸತು ಎನಿಸುವ ರೀತಿಯಲ್ಲಿ ಬಟ್ಟೆಯನ್ನು ಧರಿಸಿ ನೂರು ವರ್ಷದ ಮುದುಕನಂತೆ ಇಳೆಯಂಡನ ಊರಿಗೆ ಬರುತ್ತಾನೆ.
ಶಿವನ ವೇಷಭೂಷಣಗಳನ್ನು ವರ್ಣಿಸಲಾಗಿದ್ದು ಅವನು ಯಾವ ರೀತಿ ಇದ್ದನೆಂದರೆ ತಲೆಯ ಕೂದಲು ನೆರೆದಿದ್ದು, ಕೈಯಲ್ಲಿ ಕೋಲು ಸುಕ್ಕು ಸುಕ್ಕಾಗಿರುವ ದೇಹ, ಬಾಗಿರುವ ಬೆನ್ನು, ಜೋಲು ಬಿದ್ದಿರುವ ಚರ್ಮ, ಇಂತಹ ವೃದ್ಧಾಪ್ಯದಲ್ಲಿರುವ ಶಿವನು ತನ್ನ ಭಕ್ತನ ಮನಸ್ಸನ್ನು ನೋಡಲು ಮನದುಂಬಿ ಬಂದನು. ಶಿವನು ಮಧ್ಯರಾತ್ರಿಯಲ್ಲಿ ಇಳೆಯಾಂಡಗುಡಿಯ ಬಳಿ ಬರಲು ಆಕಾಶದಲ್ಲಿರುವ ಮೋಡಗಳೆಲ್ಲ ಗುಂಪಾಗಿ, ಮಳೆಯ ಮೋಡಗಳಾಗಿ ಮೋಡದಿಂದ ಮಳೆ ಬಂದು ಮಳೆಯ ನೀರಿನಲ್ಲಿ ಭೂಮಿ ತೇಲಾಡುತ್ತಿರುವಂತೆ ಕಂಡಿತು. ಅದರೊಂದಿಗೆ ಕತ್ತಲೆಯೂ ಹೆಚ್ಚಿ ಯಾವ ದಿಕ್ಕುಗಳು ಕಾಣದಂತೆ ಮುಚ್ಚಿ ಹೋಗಿವೆಯಾ ಎಂಬಂತೆ ಭಾಸವಾಗಿರುವಂತೆ, ಅದರ ಮಧ್ಯದಲ್ಲಿ ಗುಡುಗು ಮಿಂಚು ಬರುತ್ತಿವೆ ಅಂತಹ ಸಮಯದಲ್ಲಿ ಮನಸ್ಸಿನಲ್ಲಿ ಯಾವುದನ್ನು ಯೋಚಿಸುವುದು ಜಾಗವಿಲ್ಲದಂತೆ ಇರುವ ಸಮಯದಲ್ಲಿ ಶಿವ ಊರನ್ನು ಸೇರಿದ. ಮನ್ಮಥನನ್ನು ಕೊಂದ ಶಿವ ತುಂತುರು ಮಳೆಯಲ್ಲಿ ನೆನೆಯುತ್ತಾ ಇಳೆಯಾಂಡ ಗುಡಿ ಮಾರನ ಮನೆಯ ಬಳಿಗೆ ಬಂದು ಚಳಿಗೆ ತನ್ನ ಹಲ್ಲುಗಳನ್ನು ಕಡೆಯುತ್ತ, ಅತಿಯಾದ ಶೀತದಿಂದ ನಡುಗುತ್ತ ಅವನ ಮನೆಯ ಬಾಗಿಲ ಬಳಿ ಬಂದು ನಿಂತಿದ್ದಾನೆ.
ಮನೆಯ ಒಳಗೆ ಇಳೆಯಾಂಡ ಗುಡಿ ಮಾರನು ಇರಲು, ಮೂರು ನಾಲ್ಕು ದಿನದಿಂದ ಉಪವಾಸವಿದ್ದು, ಮಲಗಲು ಹಾಸಲಿಕ್ಕೆ ಒದೆಯಲಿಕ್ಕೆ ಶಿವನ ನಾಮವೇ ಆಗಿದೆ. ಅಂತಹ ಭಯಂಕರವಾಗಿರುವ ಚಳಿಯಲ್ಲೂ ಮೂರನೇ ಕಣ್ಣು ಹೊಂದಿರುವ ಶಿವನ ನಾಮವೇ ಅವನಲ್ಲಿ ತುಂಬಿಕೊಂಡಿರುವುದರಿಂದ ಅವನಿಗೆ ಎಂತಹ ಚಳಿಯು ಆಗುತ್ತಿಲ್ಲ.
ಅಂತಹ ಸಂದರ್ಭದಲ್ಲಿ ಬಾಗಿಲ ಬಳಿ ನಿಂತಿದ್ದವ ಹರ ಹರ ಶಿವ ಎಂಬ ಧ್ವನಿ ಮಾಡಿದನು ಅದನ್ನು ಕೇಳಿದ ಇಳೆಯಾಂಡನು, ಅವನು ಕೂಗಿದಾಗ ಶಿವನ ಭಕ್ತನೇ ಎಂದು ತಿಳಿದು ಇಂತಹ ಕೆಟ್ಟ ಕತ್ತಲ ರಾತ್ರಿಯಲ್ಲಿ, ಮಳೆಯಲ್ಲಿ ಬಂದೆಯಲ್ಲ ಎಂದು, ಬಂದು ಬಾಗಿಲು ತೆರೆದು ನೋಡಿ ಅವನು ಚಳಿಯಿಂದ ನಡುಗಿ, ಹೂ ಹೂ ಎಂದು ನಡುಗುತ್ತಾ ನಿಲ್ಲಲ್ಲಿಕ್ಕೆ ಆಗುವುದಿಲ್ಲ, ಕೈ ಕಾಲುಗಳಲ್ಲಿ ಆಯಾಸ ಹೆಚ್ಚಾಗುತ್ತಿದೆ, ದೇಹವು ಮುರುಟುತ್ತಿದೆ, ಮನಸ್ಸು ಸೀಳುತ್ತಿದೆ ಈ ಚಳಿಗೆ ಎಂದು ಹೇಳಿದನು.
ಇಂತಹ ಸಂದರ್ಭದಲ್ಲಿ ಅವನನ್ನು ಒಳಗೆ ಬರಮಾಡಿಕೊಂಡು ಇಬ್ಬರು ಮಲಗುವ ಜಾಗದಲ್ಲಿ ಜಂತೆಯನ್ನು ಬಿಚ್ಚಿ ಒಬ್ಬನನ್ನು ಕುಳ್ಳಿರಿಸಿ ಅಲ್ಲಿ ಅವನ ಚಳಿ ಹೋಗಲೆಂದು ಬೆಂಕಿ ಹಾಕಿದನು. ಇಲ್ಲಿ ಶಿವ ಹಿಮಾಲಯದಲ್ಲಿರುವವನು ಅವನಿಗೆ ಚಳಿಯಾಗುತ್ತದೆಯೇ? ಬದಲಾಗಿ ಅವನು ಇಲ್ಲಿ ನಟಿಸುತ್ತಿದ್ದಾನೆ, ಆಗ ಇಳೆಯಾಂಡ ಒಂದು ಬಟ್ಟೆ ತೆಗೆದು ಬೆಂಕಿಯ ಶಾಖಕ್ಕೆ ಒಡ್ಡಿ ವೃದ್ಧನ ತೊಡೆ, ತೋಳು, ಎರಡು ಪಾದಗಳು, ಬೆನ್ನು, ಮುಖಕ್ಕೆ ಆ ಶಾಖವನ್ನು ಒತ್ತುತ್ತಿದ್ದಾನೆ. ಚಳಿ ಕಡಿಮೆಯಾಗುತ್ತಾ ಅವನಲ್ಲಿ ಹಸಿವಿನ ತೀವ್ರತೆ ಮೂಡಿ ಹಸಿವು ಹಸಿವು ಎಂದು ಹೇಳುತ್ತಿದ್ದಾನೆ .
watch the Video about Carnatic wars in between British and French: https://youtu.be/szzKB3OlQHQ?si=c_ZaEZecoC_fqLAk
ಆಗ ಇಳೆಯಾಂಡನಿಗೆ ದುಃಖದಿಂದ ದಿಕ್ಕು ತೋಚದಂತಾಯಿತು, ಅವರು ಮೂರು ದಿನದಿಂದ ಉಪವಾಸವಿದ್ದಾರೆ ಎಂಬುದು ತಿಳಿದಿದ್ದರೂ, ಇಳೆಯಾಂಡ ತನ್ನ ಹೆಂಡತಿಯ ಮುಖ ನೋಡುತ್ತಾನೆ ಆಗ ಅವಳಿಗೆ ಒಂದು ಉಪಾಯ ಹೊಳೆದು ಈ ಉಪಾಯದಿಂದ ಶಿವನು ಕೂಡ ಮೆಚ್ಚುತ್ತಾನೆ ಎಂದು ತಿಳಿದು ಈಗಾಗಲೇ ಭೂಮಿಗೆ ಬಿತ್ತಿದ್ದ ಕಾಳು ಮೊಳಕೆ ಬಂದಿವೆ ಅವನನ್ನು ತಂದು ಇವನ ಹಸಿವನ್ನು ನೀಗಿಸಬಹುದೆಂದು ಹೆಂಡತಿ ಇಳೆಯಾಂಡನಿಗೆ ಹೇಳಿದಾಗ ಅವನು ಮಧ್ಯರಾತ್ರಿಲಿ ತರಲು ಹೊರಡುತ್ತಾನೆ. ಆಗ ಮಳೆ ಚಳಿ ಮತ್ತೆ ಜಾಸ್ತಿಯಾಗಿ ಕತ್ತಲೆಯೂ ಜಾಸ್ತಿಯಾಗಿತ್ತು, ಆಗ ತರಲು ಹೊರಟಾಗ ಊರಿನವರ ಹೊಲಗಳನ್ನು ದಾಟಿ, ಹಳ್ಳ, ಕೆರೆ, ತೊರೆಗಳನ್ನು ದಾಟಿ ಗದ್ದೆಯಲ್ಲಿ ಬೆಳೆದಿದ್ದ ಮೊಳಕೆಗಳನ್ನು ರಾಗದಿಂದ ಅವನ್ನು ಕಿತ್ತು ತರುತ್ತ, ಇದರಿಂದ ನನ್ನ ಶಿವನ ಹಸಿವೆಯನ್ನು ನೀಗಿಸಬಹುದು ಎಂದು ಅದನ್ನು ತಂದು ತನ್ನ ಹೆಂಡತಿಗೆ ನೀಡಿದ. ಅದನ್ನೇ ಹುರಿದು ಅನ್ನದಂತೆ ಮಾಡಿ ಅದಕ್ಕೆ ಕೀರೆಯ ಸೊಪ್ಪನ್ನು ತಂದು ಮೇಲೋಗರ ಮಾಡಿ ಭಕ್ತನ ಊಟಕ್ಕೆ ಕೂರಿಸಲು ಅದಕ್ಕೆ ಬೇಕಾದ ಬಾಳೆ ಎಲೆಯನ್ನು ತರಲು ಅವನ ಮಗನಿಗೆ ಹೇಳುತ್ತಾನೆ. ಅವನು ಹೋಗಿ ಬಾಳೆ ಕೊಯ್ದು ತರುವಾಗ ಹಾವು ಕಡಿದು ಅಲ್ಲೇ ಬಿದ್ದು ಸತ್ತನು. ಮಗ ಬರುವುದು ತಡವಾಗಿದ್ದರಿಂದ ಅವನೇ ಹೋಗಿ ನೋಡಿದಾಗ ಮಗ ಸತ್ತು ಬಿದ್ದಿದ್ದ. ಆಗ ಅವನಿಗೆ ಮಗನ ಸಾವಿಗಿಂತ ಅತಿಥಿಯ ಉಪಚಾರದ ಕಡೆಗೆ ಗಮನ ಹೆಚ್ಚಾಗುತ್ತದೆ.
ಅತಿಥಿಗೆ ವಿಷಯ ತಿಳಿದರೆ ಊಟ ಮಾಡುವುದಿಲ್ಲ ಎಂದು ತಿಳಿದು ಅವನಿಗೆ ವಿಷಯ ತಿಳಿಸದೆ ಊಟ ಮಾಡಿಸುವೆನು ಎಂದು ಸಂತಸದಿಂದ ಎಲೆಗಳನ್ನು ಕೊಯ್ದು ತಂದು ಭಕ್ತನ ಮುಂದೆ ಚೆಂದವಾಗಿ ಎಲೆಯನ್ನು ಹಾಸಿ ಅದರ ಮೇಲೆ ನೀರು ಚಿಮುಕಿಸಿ ಹೊಳೆಯುವ ಅನ್ನವನ್ನು ಹಾಕಿ ಅದರ ಮೇಲೆ ಮೇಲೋಗರವನ್ನು ಹಾಕಿ ಊಟ ಮಾಡಿ ಎಂದು ಕೇಳಿದಾಗ ಹರನ ಭಕ್ತರಾಗಿರುವವರು ಯಾವತ್ತಿಗೂ ಒಬ್ಬರೇ ಊಟ ಮಾಡುವುದಿಲ್ಲ ಬದಲಾಗಿ ಸಹಪಂಕ್ತಿಯಲ್ಲಿ ಭೋಜನವನ್ನು ಸೇವಿಸುವವರು ಹಾಗಾಗಿ ತಂದೆ ತಾಯಿ ಮಕ್ಕಳು ಎಲ್ಲರೂ ಸೇರಿ ಊಟ ಮಾಡಬೇಕು ಎಂದು ನನ್ನ ಪಕ್ಕ ಸಾಲಾಗಿ ಬಂದು ಕುಳಿತುಕೊಳ್ಳಿ ಎಂದನು.
ಇವನು ಊಟ ಮಾಡುವುದಿಲ್ಲ ಮಗ ಸತ್ತಿರುವುದನ್ನು ಹೇಳಿದರೆ ಎಂದು ನೊಂದುಕೊಂಡು ಮಗನಿಲ್ಲದಿದ್ದರೆ ಇವರು ಊಟ ಮಾಡುವುದಿಲ್ಲ ಇದರಿಂದ ಮಗನ ಬಳಿ ಹೋಗಿ ಅವನನ್ನು ಕರೆಯುತ್ತೇನೆ ಬರದಿದ್ದರೆ ನನ್ನ ತಲೆಯನ್ನೇ ಅವನಿಗೆ ತಂದು ಒಪ್ಪಿಸುತ್ತೇನೆ ಎಂದು ಹೇಳಿ ತನ್ನ ಮಗನ ಬಳಿ ಬಂದು ಹೇಳು ಮಗನೇ ಶಿವನು ಊಟ ಮಾಡಲು ಒಳ್ಳೆಯತಿದ್ದಾನೆ ಎಂದು ಹೇಳಿದಾಗ ಮಗ ನಿದ್ದೆಯಿಂದ ಎದ್ದೇಳುವಂತೆ ಎದ್ದ ಮಗನನ್ನು ಮನೆಗೆ ಕರೆದು ತಂದ. ಆಗ ಶಿವನು ತನ್ನ ನಿಜ ರೂಪಕ್ಕೆ ಬರುತ್ತಾನೆ. ಇವನು ಜಡೆ, ತಲೆಯ ಮೇಲೆ ಚಂದ್ರ, ಹಣೆಯಲ್ಲಿ ಕಣ್ಣು, ಕಿವಿಯಲ್ಲಿ ಹಾವಿನ ಆಭರಣ, ಸೊಂಟಕ್ಕೂ ಹಾವು ಸುತ್ತಿಕೊಂಡಿದೆ, ಕುತ್ತಿಗೆ ಕಪ್ಪುಗಿದೆ, ಮುಖ ಹೊಳೆಯುತ್ತಿದೆ, ಹತ್ತು ಭುಜ, ಕೈಯಲ್ಲಿ ಡಮರುಗ, ತ್ರಿಶೂಲ, ಆನೆಯ ಚರ್ಮ, ದಿಕ್ಕು ದಿಕ್ಕುಗಳಲ್ಲೂ ಹೊಳೆಯುವುದು, ಹುಲಿ ಚರ್ಮ ಹಾಸಲು ಅಥವಾ ದೇಹಕ್ಕೆ ಸುತ್ತಲು, ಐದು ಮುಖಗಳು, ಕೋಟಿ ಸಂಖ್ಯೆಯ ಸೂರ್ಯರ ತೇಜಸ್ಸನ್ನು ಕಡಿಮೆ ಮಾಡುವಂತೆ ಸುಧಾಕರ ನಾಗಿ ನಿಂತ.
ಆಗ ಇಳೆಯಾಂಡ ಶಿವನ ಕಾಲಿಗೆ ಬಿದ್ದು ದೇವನೇ ವೃದ್ಧ ವೇಶ ಧರಿಸಿ ಬಂದಿದ್ದೀರಾ, ಈ ಚಳಿ ಮಳೆಯಲ್ಲಿ ಬರುವುದೇ ಅದರಲ್ಲೂ ಇಂತಹ ದಟ್ಟ ರಾತ್ರಿಯಲ್ಲಿ ಬಂದಿದ್ದೀಯಾ, ನನ್ನ ಭಕ್ತಿ ಹಿಡಿಸಿತೆ ಪಾರ್ವತಿಯ ಅರಸನೇ, ನಿನಗೆ ಚಳಿ ಹತ್ತಿತೆ, ಮಳೆಯಿಂದ ಕೊರಗಿದೆಯಾ ಶಿವನೇ…. ಹೇಳು ಎಂದು ಭಕ್ತಿಯಿಂದ ಕೇಳಿದ.
Also read – Dhyuthada Prasanga: https://rvwritting.com/mahabharatha-dyuthada-prasanga-%e0%b2%ae%e0%b2%b9%e0%b2%be%e0%b2%ad%e0%b2%be%e0%b2%b0%e0%b2%a4-%e0%b2%a6%e0%b3%8d%e0%b2%af%e0%b3%82%e0%b2%a4%e0%b2%a6-%e0%b2%aa%e0%b3%8d%e0%b2%b0%e0%b2%b8/
ಶಿವನನ್ನು ಹುಡುಕುತ್ತಿದ್ದ ಗಣೇಶ್ವರರು ಹುಡುಕಿ ಬಂದರು, ನಂದೀಶ ವೀರಭದ್ರ ಗಣ ಸಂಕುಲದ ಎಲ್ಲರೂ ಶಿವನನ್ನು ಕಂಡು ಅವನ ಕಾಲಿಗೆ ಬಿದ್ದರು. ಆಗ ಶಿವನು ನಂದೀಶ ಕೇಳು, ಕಂಡೆನು ಇಲ್ಲಿಯ ಹೊಸತನದ ಪ್ರೀತಿ ಇಂತಹ ಚಳಿ ಮಳೆಯಲ್ಲಿ ಯಾರಾದರೂ ಹೊರಗೆ ಹೋಗುತ್ತಾರೋ, ಹೋಗಿ ಮೊಳಕೆ ಕಾಳುಗಳನ್ನು ತರುತ್ತಾರೋ, ಮಗನ ಸಾವಾಗಿದ್ದರೂ ಊಟ ಮಾಡಲು ಇಟ್ಟವರು ಉಂಟೇ, ಜಗದಲ್ಲಿ ಆಸೆಯನ್ನು ಬಿಟ್ಟವರುಂಟೆ ಎಂದು ಇಳೆಯಾಂಡನ ಬಗೆಗೆ ಕೊಂಡಾಡುವಾಗ ಅವನ ಮೇಲೆ ಹೂ ಮಳೆಗೆರೆದವು.