ನಾವೆಲ್ಲರು ಒಂದೆ ಜಾತಿ ಪದ್ಯದ  ಭಾವಾರ್ಥ – Navellaru Onde Jaathi Summary

Navellaru Onde Jaathi ನಾವೆಲ್ಲರು ಒಂದೆ ಜಾತಿ
Navellaru Onde Jaathi ನಾವೆಲ್ಲರು ಒಂದೆ ಜಾತಿ

Navellaru Onde Jaathi – ಕವಿ ಪರಿಚಯ
ಎಂ. ಗೋಪಾಲಕೃಷ್ಣಅಡಿಗ

gopala krishna adiga
gopala krishna adiga

Navellaru Onde Jaathi – ಇವರು ಉಡುಪಿ ಜಿಲ್ಲೆಯ ಮೊಗೇರಿ ಎಂಬ ಕರಾವಳಿ ಗ್ರಾಮದಲ್ಲಿ ಜನಿಸಿದರು. ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಅಡಿಗರುಕಾರ್ಯ ನಿರ್ವಹಿಸಿದರು. ನವ್ಯ ಸಾಹಿತ್ಯದ ಪ್ರವರ್ತಕರು. ಕಾವ್ಯ, ಸಣ್ಣಕಥೆ, ಕಾದಂಬರಿ, ಗದ್ಯಸಾಹಿತ್ಯದಲ್ಲಿ ಕೃಷಿ ನಡೆಸಿದರು. ಭಾವತರಂಗ (1946), ಕಟ್ಟುವೆವು ನಾವು (1948). ನಡೆದು ಬಂದದಾರಿ (1952). (1954), 7 (1959), 2 (1972), 2 2໖ (1975), ಮೂಲಕ ಮಹಾಶಯರು (1980), ಬತ್ತಲಾರದ ಗಂಗೆ (1983), ಮಾವೋಕವನಗಳು, ಚಿಂತಾಮಣಿಯಲ್ಲಿಕಂಡ ಮುಖ (1987), ಸುವರ್ಣ ಪುತ್ಥಳಿ (1990), ಬಾ ಇತ್ತ ಇತ್ತ (1993) ಮೊದಲಾದವು ಇವರ ಕವನ ಸಂಕಲನಗಳು.


ಅಡಿಗರಿಗೆ 1974ರಲ್ಲಿ ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ. 1975ರಲ್ಲಿ ‘ವರ್ಧಮಾನ’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1979ರಲ್ಲಿ ಕೇರಳದ ಪ್ರತಿಷ್ಠಿತ ಕುಮಾರ್ ಸಮ್ಮಾನ್ ಪ್ರಶಸ್ತಿ, 1980ರಲ್ಲಿ ಸಮಗ್ರಕಾವ್ಯಕ್ತಿ ಮೂಡಬಿದ್ರೆಯ ವರ್ಧಮಾನ’ ಪ್ರಶಸ್ತಿ, 1982ರಲ್ಲಿ ಪ್ಯಾರಿಸ್, ಯುಗೋಸ್ಲಾವಿಯಗಳಲ್ಲಿ ನಡೆದ ವಿಶ್ವ ಕವಿ ಸಮ್ಮೇಳನದಲ್ಲಿ ಆಹ್ವಾನಿತರಾಗಿ ಭಾಗವಹಿಸಿದರು. 1986ರಲ್ಲಿ ಮಧ್ಯಪ್ರದೇಶ ಸರಕಾರ ಆರಂಭಿಸಿದ ಪ್ರಥಮ ‘ಕಬೀ‌ರ್ ಸನ್ಮಾನ್’ ಪ್ರಶಸ್ತಿ, 1988ರಲ್ಲಿ ಥಾಯ್ಲೆಂಡಿನ ಬ್ಯಾಂಕಾಕ್ ನಗರದಲ್ಲಿ ನಡೆದಜಾಗತಿಕಕವಿ ಸಮ್ಮೇಳನದಲ್ಲಿ ‘ವರ್ಲ್ಡ್ ಅಕಾಡೆಮಿ ಆಫ್ ರ್ಆಎಂಡ್‌ ಕಲ್ವರ್‌’ ಸಂಸ್ಥೆಯ ‘ಡಾಕ್ಟರ್‌ಆಫ್ ಲಿಟರೇಚರ್’ ಪ್ರಶಸ್ತಿ, ‘ರಾಜ್ಯೋತ್ಸವ’ ಪ್ರಶಸ್ತಿ, ‘ಪಂಪ’ ಪ್ರಶಸ್ತಿಯನ್ನು ಪಡೆದಿದ್ದಾರೆ.

Video for https://youtu.be/K2NYuuZsfTQ?si=jR4gGcAJrWIi4OfJ

ನಾವೆಲ್ಲರೂ ಒಂದೇ ಜಾತಿ

ನಾವೆಲ್ಲರೂ ಒಂದೇ ಜಾತಿ ಎಂದು  ಯುವ ಜನಾಂಗವು ಹೊಸತನದ ದಿಕ್ಕಿನಲ್ಲಿ ನಡೆಯುವಂತಾಗಿ ಅದರ ಮೂಲಕ ಹೋರಾಟದ ದನಿಯಾಗಿ ಸಮಾನತೆ,  ಸಮರಸ, ಸಹಬಾಳ್ವೆ ತರುವಂತವರಾಗಿ ನಮ್ಮಲ್ಲಿನ ಸಾಂಪ್ರದಾಯಿಕತೆಯನ್ನು ಹೋಗಲಾಡಿಸಿ ಹೊಸತನವನ್ನು ಮೂಡುವಂತೆ ಮಾಡಬೇಕಾಗಿದೆ ಅದಕ್ಕಾಗಿ ನಾವೆಲ್ಲರೂ ಒಂದಾಗಿ ಭಾರತ ಕಟ್ಟುವ ನವ ಯುವಕರಾಗಬೇಕು.

Also Read this poem summaryhttps://rvwritting.com/hubballiyava/

ಸಾರಾಂಶ
ನಾವೆಲ್ಲರು ಒಂದೆ ಜಾತಿ, ಒಂದೆ ಮತ, ಒಂದೆ ಕುಲ:

ನಾವು ಮನುಜರು:

ನರರ ನಡುವಿನಡ್ಡಗೋಡೆಗಳನು ಕುಟ್ಟಿಕೆಡಹುವೆವು,

ನಾವು ವಿಲಯರುವರು!

ಹೊಸ ಬಾಳಿನ ಹೊಸ ಸಮತೆಯ ಸಮರಸವನು ಸಮೆವೆವು.

ನಾವು ನವವಿಧಾತರು!

ಭಾರತ ಅಭಿವೃದ್ಧಿ ಸಾಕಾರವಾಗಬೇಕಾದರೆ ನಮ್ಮಲ್ಲಿರುವ ಯುವಕರು ಯಾವುದೇ ಜಾತಿ, ಮತ, ಪಂಥ ಕುಲ ಎಲ್ಲವೂ ಒಂದೇ ಅದು ಮನುಜರು ಎಂದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಅಂತ ಮನುಷ್ಯರ ನಡುವೆ ಜಾತಿ ಕುಲ ಎಂಬ ಗೋಡೆಗಳನ್ನು ಕಟ್ಟಿರುವುದನ್ನು ನಾವು ನಾಶ ಮಾಡುವ ರುದ್ರರಾಗಿದ್ದೇವೆ ಅದರಿಂದ ಸಮಾನತೆ, ಸಮರಸ ತರುವ ಹೊಸ ಪೀಳಿಗೆಯವರಾಗಬೇಕು ಎಂದಿದ್ದಾರೆ.


ಕಾಪುತಲೆಯು ಈ ನವೀನ ಯುಗದಜಗದಕೇತನ;

ಅದರ ಕೆಳಗೆ ತಿಂತಿಣಿಸಿದೆ ಯೋದ್ಧಗಣ ವಿನೂತನ;

ಎಲ್ಲೆಕಟ್ಟನೆಲ್ಲ ಮೆಟ್ಟಿ ಮುಂದೋಡುವ ಯುವಜನ.

ಎಲ್ಲ ಒಂದೆ’ ಎಂಬುದೊಂದೆ ನಮ್ಮ ಯುದ್ಧಘೋಷಣ!

ಹಳೆಯ ಕೊಳೆಯ ಕಳೆವೆವು.

ನವವ ಶುಭವ ಬೆಳೆವೆವು,

ದಿವವನಿಲ್ಲಿ ಈ ನೆಲಕೇ ಎಳೆದು ಸೆಳೆದು ತರುವೆವು,
ನಾವು ಸದಾತರುಣರು!

ಸಾಂಪ್ರದಾಯಿಕತೆಯನ್ನು ಸೋಲಿಸಲು ಬಂದಿರುವ ಯುವ ಸಮುದಾಯವು ಆಧುನಿಕತೆಯನ್ನು ಹೊದ್ದುಬಂದಿದೆ ಅದು ಹೇಗೆಂದರೆ ತಲೆಯಲ್ಲಿ ಕ್ರಾಪು ಅದು ಈ ಜಗದ ಧ್ವಜದಂತೆ ಕಾಣುತ್ತಿದೆ ಇದರಡಿಯಲ್ಲಿಯೇ ಯೋಧರ ಗುಣವನ್ನು ಹೊಂದಿರುವ ಯುವ ಜನಾಂಗ ಗುಂಪುಗೂಡಿದೆ‌. ತಮ್ಮಲ್ಲಿ  ನೆಲೆನಿಂತಿದ್ದ ಸಾಂಪ್ರದಾಯಿಕತೆಯನ್ನು ಹೊಡೆದೋಡಿಸಲು ಅದರೊಂದಿಗೆ ಘೋಷಣೆಯನ್ನು ಮಾಡಿದ್ದೇವೆ ಅದು ಏನೆಂದರೆ ನಾವೆಲ್ಲರೂ ಒಂದೇ ಎಂಬುದಾಗಿ ನಾವು ಸದಾ ತರುಣರಾಗಿ ನಮ್ಮ ನಡುವೆ ಇರುವ ಜಾತಿ ಕುಲ ಧರ್ಮ ಎಂಬ ಅಂಧಕಾರವನ್ನು ಹೋಗಲಾಡಿಸಿ ಹೊಸತನವನ್ನು ಸ್ವರ್ಗದಂತೆ ಈ ಭೂಮಿಗೆ ತರುತ್ತೇವೆ ಎಂದಿದ್ದಾರೆ.


ತೆರೆಬಾಗಿಲ ಹೊರನೋಟದ ಹೊರೆಹಸುರಿನ ಹಂದರ,

ನಮ್ಮ ಹೃದಯ ಮಂದಿರ:

ಅಲ್ಲಿಎಲ್ಲಜನಕು ಇದೆ ಸ್ವಾಗತವು ನಿರಂತರ,

ಚಿರಉದಾರ ಸುಂದರ!
ಬನ್ನಿರಣ್ಣ ಬನ್ನಿರೆಲ್ಲ ಬಣ್ಣದಣ್ಣತಮ್ಮರು.

ನಡೆಯ ನುಡಿಯ ನೂರುಗೋಡೆಗೋಡೆ ನಿಮಿರಿ ನಿಂತರೂ

ನಾವೆಲ್ಲರು ಒಂದೆ ತಾಯಎದೆಯಾಸೆಯ ಕುಡಿಗಳು;

ಒಂದೆ ಮಹಾ ಪ್ರೇಮಾಗ್ನಿಯ ಹೋಮಾಗ್ನಿಯ ಕಿಡಿಗಳು,

ಇಲ್ಲಿಯವರೆಗೆ ಅಂಧಕಾರದಲ್ಲಿ ನಮ್ಮ ಮನದ ಬಾಗಿಲುಗಳನ್ನು ಮುಚ್ಚಿದ್ದೆವು ಈಗ ಹೊಸ ಹಸುರಿನ ಚಪ್ಪರವ ಹಾಕಿ ಮುಚ್ಚಿರುವ ಬಾಗಿಲುಗಳನ್ನು  ನಮ್ಮ ಹೃದಯದ ಮೂಲಕ ತೆರೆದಿದ್ದೇವೆ. ಏಕೆಂದರೆ ವೈಚಾರಿಕ ಪ್ರಜ್ಞೆ ಬೆಳೆಯುತ್ತಲಿದ್ದರಿಂದ ಇಲ್ಲಿ ಯಾರಿಗೂ ಭೇದ ಭಾವ ಮಾಡದೆ ಎಲ್ಲರಿಗೂ ಒಂದೇ ತರದ ಸ್ವಾಗತವನ್ನು ನಮ್ಮ ಹೃದಯ ಮಂದಿರಕ್ಕೆ ನೀಡುತ್ತಿದ್ದೇವೆ ಇಲ್ಲಿಗೆ ಬನ್ನಿ ನಡೆ-ನುಡಿ ಭಾಷೆ ಎಲ್ಲವೂ ಬೇರೆ ಬೇರೆ ಎಂದು ಹೇಳಿದರೂ ಅವೆಲ್ಲವನ್ನು ಹೊಡೆದಾಕಿ ಒಂದೇ ತಾಯಿಯ ಎದೆ ಹಾಲನ್ನು ಕುಡಿದ ಮಕ್ಕಳಾಗಿ ಪ್ರೀತಿಯಿಂದ ಕೂಡಿ ಬರಬೇಕು.


ಭೂಮವಾವುದನ್ನೂ ಇಲ್ಲಿ ಬೆಳೆಯೆ ಬಂದ ಭೀಮರು,

ಪ್ರೇಮಸಿದ್ಧಿಗಾಗಿ ನೋನುತಿರುವ ಸತ್ಯಕಾಮರು!

ಕೈಕೈಗಳ ಕುಲುಕಿಸಿ,

ಎದೆಗೆದೆಯನು ಹಾಯಿಸಿ.

ಭೇದವೆಲ್ಲ ಸುಟ್ಟುರಿವೊಲುಎದೆಯೊಲವನು ಕೆರಳಿಸಿ,

ತೊಳತೊಳಗುವ ನರತೆಯೆಂಬ ಬಂಗಾರವನರಳಿಸಿ

ಯುವಜನವಿದೆ ನವಜನವಿದ್‌ದುಡುಕುತಿಹುದು ಮುಂದಕೆ,

ಪದಪದಕೂ ಯುಗಯುಗಗಳೆ ಸರಿಯುತಿರಲು ಹಿಂದಕೆ.

ಒಮ್ಮತದೊಗ್ಗಟ್ಟಿನ ಒಬ್ಬಗೆಬಾಳಿನ ಚಂದಕೆ!

ಭೀಮಶಕ್ತಿಯನ್ನು ಹೊಂದಿರುವ ಯುವಜನರು ಎಲ್ಲರ ನಡುವೆ ಪ್ರೀತಿ ಪ್ರೇಮ ಬೆಳೆಸುವ ಸತ್ಯವಂತರಾಗಿ ಎಲ್ಲರೂ ಒಂದಾಗಿ ಸಾಗಬೇಕು, ಸಾಗುವುದರೊಂದಿಗೆ ಭೇದ ಭಾವವನ್ನು ಹೊಡೆದಾಕಿ ಎದೆಯ ಪ್ರೇಮವನ್ನು ಕೆರಳಿಸಿ, ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಅದರ ಮೂಲಕ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ನಾವೆಲ್ಲರೂ ಒಂದೇ ಎಂದು ಯುಗಯುಗಕ್ಕೂ ಒಗ್ಗಟ್ಟಾಗಿ ಒಮ್ಮತದ ಮೂಲಕ ಮುಂದಕ್ಕೆ ಸಾಗಬೇಕು.


ಜಾತಿಮತದ ಗುಹೆಗಳಿಂದ ಹೊರಬನ್ನಿರಿ ಬಯಲಿಗೆ.

ಕೃತಕ ತಿಮಿರದಾಳದಿಂದ ವಿಸ್ತಾರದ ಬೆಳಕಿಗೆ:

ಸೇರಿಕೊಳಿ, ಕೂಡಿಕೊಳಿ, ಮುನ್ನುಗ್ಗುವ ಸಾಲಿಗೆ,

ಕತ್ತಲೊಡನೆ ಹೂಡಿದ ಈ ಉತ್ಸಾಹದ ದಾಳಿಗೆ;

ಕೂಡಿಸಿರೆದೆ ಕೊರಲುಗಳನ್ನು ಹೊಸಬಾಳಿನ ಹಾಡಿಗೆ:

ನಾವೆಲ್ಲರು ಒಂದೆ ಜಾತಿ, ಒಂದೆ ಮತ. ಒಂದೆ ಕುಲ:

ನಾವು ಮನುಜರು!

ಹೊಸ ಬಾಳಿನ ಹೊಸ ಸಮತೆಯ ಸಮರಸವನು ಸಮವೆವು.

ನಾವು ನವವಿಧಾತರು!

ಅಸಮಾನತೆಯ ಅಂಧಕಾರದ ಗುಹೆಯಿಂದ ಹೊರಗೆ ಬನ್ನಿ ಕೃತಕದ ಅಂಧಕಾರದಿಂದ ವಿಸ್ತಾರದ ಸಮಾನತೆಯ ಜಗತ್ತಿಗೆ ಬರುವುದರ ಮೂಲಕ ನವನಾಡು ಕಟ್ಟಲು ಸಾಧ್ಯ ಇಂತಹ ಸಾಧ್ಯತೆ ಇದೆ ನಾವೆಲ್ಲರೂ ಅಜ್ಞಾನವನ್ನು ದೂಡಿ ಒಟ್ಟಿಗೆ ಉತ್ಸಾಹದಿಂದ ಸೇರಿದಾಗ ನಮಗೆ ಯಶಸ್ಸು ಎಂಬುದು ದೊರಕುತ್ತದೆ ಅದಕ್ಕಾಗಿ ನಾವೆಲ್ಲರೂ ಒಂದೇ ಧ್ವನಿಯಾಗಿ ಒಂದೇ ಆಶಯದೊಂದಿಗೆ ಸೇರಿದಾಗ ನವನಾಡು ಸೃಷ್ಟಿಯಾಗಲು ಸಾಧ್ಯ.


ಈ ಕವಿತೆಯ ಮೂಲಕ ಸಾಂಪ್ರದಾಯಿಕತೆಯನ್ನು ತೊಡೆದಾಕುವ ಮೂಲಕ ಹೊಸ ನಾಡನ್ನು ಸೃಷ್ಟಿಸುವುದಕ್ಕೆ ವೇದಿಕೆಯನ್ನಾಗಿ ಮಾಡಿಕೊಳ್ಳುವ ಸಂದರ್ಭ ಒದಗಿ ಬಂದಿದೆ ಎಂಬುದನ್ನುಇಲ್ಲಿ  ತಿಳಿಯಬಹುದು. 

Leave a Comment

Your email address will not be published. Required fields are marked *

Scroll to Top