1 – Naanondu Maravagiddare Poem summary- 1 – ನಾನೊಂದು ಮರವಾಗಿದ್ದರೆ ಪದ್ಯದ ಭಾವಾರ್ಥ

Naanondu Maravagiddare
Naanondu Maravagiddare

Naanondu Maravagiddare – ಮೂಡ್ನಾಕೂಡು ಚಿನ್ನಸ್ವಾಮಿ:- ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಎರಡನೆಯ ಹಂತದ ಸತ್ವಪೂರ್ಣ ದನಿಯಾಗಿದ್ದಾರೆ.ಚಿನ್ನಸ್ವಾಮಿ ಅವರ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಪುಸ್ತಕಕ್ಕೆ 2022ರ ಕೇಂದ್ರ ಸಾಹಿತ್ಯ ಅಕಾಡೆಮಿ ದೊರೆತಿದೆ. 22 ಸೆಪ್ಟೆಂಬರ್ 1954ರಂದು ಚಾಮರಾಜನಗರದ ಮೂಡ್ನಾಕೂಡುನಲ್ಲಿ ಜನಿಸಿದರು. ವೃತ್ತಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಹಣಕಾಸು ಸಲಹೆಗಾರರಾಗಿದ್ದಾರೆ. ಪ್ರವೃತ್ತಿಯಲ್ಲಿ ಕವಿ ಮತ್ತು ಬರಹಗಾರರಾಗಿದ್ದಾರೆ. ಒ.ಅಂಟ. ಒ.೦.(ಏಚಿಟಿ), ಆ.ಖುಣ ಶೈಕ್ಷಣಿಕ ಗುಣಾರ್ಹತೆಗಳನ್ನು ಹೊಂದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ನಾನೊಂದು ಮರವಾಗಿದ್ದರೆ ಎಂಬ ಕವಿತೆ ಸಮಾಜದ ಚಾತುರ್ವರ್ಣ ವ್ಯವಸ್ಥೆ ಜನಮಾನಸದಲ್ಲಿ ಹೇಗೆ ಬೇರೂರಿದೆ ಎಂಬುದನ್ನು ತಲಸ್ಪರ್ಶಿಯಾಗಿ ಮೂಡಿಸಿ ಕೊಡುವುದರ ಜೊತೆಗೆ ಅಸಮಾನತೆ ತಾಂಡವವಾಡುತ್ತಿರುವಲ್ಲಿ ನಾನು ಮನುಷ್ಯನಾಗಿ ಅದೇ ಅಸಮಾನತೆ ಹೊಂದಿರುವ ಜಗತ್ತಿನಲ್ಲಿ ಮರವಾಗಿದ್ದರೆ ನಾನು ಹೇಗಿರುತ್ತಿದ್ದೆ ಎಂದು ಕವಿಯು ಹೇಳುವ ಮೂಲಕ ಚಾತುರ್ವರ್ಣಕ್ಕೆ ಸವಾಲು ಹಾಕುವ ಮೂಲಕ ಜಾತಿ ಅಸಮಾನತೆಯನ್ನು ಸಮಾಜದಿಂದ ಕಿತ್ತೆಸೆಯಬೇಕು ಎಂಬ ಆಶಯದೊಂದಿಗೆ ಈ ಕವಿತೆಯನ್ನು ರಚಿಸಿದ್ದಾರೆ.

Naanondu Maravagiddare – Summary of the Poem

ನಾನೊಂದು ಮರವಾಗಿದ್ದರೆ

ಹಕ್ಕಿ ಗೂಡು ಕಟ್ಟುವ ಮುನ್ನ

ಕೇಳುತ್ತಿರಲಿಲ್ಲ ನೀನು ಯಾವ ಕುಲ;

ಬಿಸಿಲು ನನ್ನ ಅಪ್ಪಿಕೊಂಡಾಗ ನೆರಳಿಗಾಗುತ್ತಿರಲಿಲ್ಲ.

ಮೈಲಿಗೆ;

ತಂಬೆಲರ ಕೂಡ ಎಲೆಗಳ ಸ್ನೇಹ

ಮಧುರವಾಗಿರುತ್ತಿತ್ತು.

ನಾನು ಮನುಷ್ಯನಾಗಿ ಹುಟ್ಟುವ ಬದಲು ಮರವಾಗಿ ಹುಟ್ಟಿದ್ದರೆ ನನ್ನಲ್ಲಿ ಬಂದು ಗೂಡು ಕಟ್ಟುವ ಹಕ್ಕಿಗಳ ಬಳಿ ನೀನು ಯಾವ ಜಾತಿ? ಯಾವ ಕುಲಕ್ಕೆ ಸೇರಿದೆ? ಎಂದು ಕೇಳದೆ ಅವುಗಳಿಗೆ ಗೂಡು ಕಟ್ಟಲು ಅವಕಾಶ ನೀಡುವ ಮೂಲಕ ಪರಿಸರದಲ್ಲಿ ಯಾವುದೇ ಅಸಮಾನತೆಗಳಿಲ್ಲ ಎಂಬುದನ್ನು ತೋರಿಸುವುದರೊಂದಿಗೆ, ನನ್ನ ಮೇಲೆ ಬೀಳುವ ಬಿಸಿಲಿನಿಂದ ಉಂಟಾಗುವ ನೆರಳಿಗೆ ಯಾವುದೇ ಮೈಲಿಗೆ ಯಾಗುತ್ತಿರಲಿಲ್ಲ, ಮೈಲಿಗೆಯಾಗುತ್ತೆ ಎಂದು ಹೇಳುವವರಿಗೆಯೇ  ಬಿಸಿಲಿನ ಜಳದಿಂದ ನೆರಳಿಗಾಗಿ ನನ್ನ ಬಳಿಯೇ ಬಂದು ನಿಲ್ಲುವವರು, ತಂಗಾಳಿ ಬೀಸುವಾಗ ನನ್ನಲ್ಲಿರುವ ಎಲೆಗಳು ಒಂದಕ್ಕೊಂದು ಸ್ನೇಹ ಬೆಳೆಸಿಕೊಂಡು ಮಧುರವಾಗಿರುತ್ತವೆ ಆದರೆ ಮನುಷ್ಯರು ಸ್ನೇಹ ಬೆಳೆಸಿಕೊಂಡರು ಮನದಲ್ಲಿ ಅಸಮಾನವಾಗಿ ಇರುತ್ತಾರೆ ಎಂಬ ನೋವನ್ನು ಇಲ್ಲಿ ತೋರುತ್ತಿದ್ದಾರೆ.

See the video About Merchant of Venice: https://youtu.be/O_lZ6mz0Bg8?si=1x2ojFsmnaACDffu

ಮಳೆ ಹನಿಗಳು ನಾನು ಶ್ವಪಚನೆಂದು

ಹಿಂದೆ ಸರಿಯುತ್ತಿರಲಿಲ್ಲ ನಾನು

ಬೇರೂರಿ ಕುಡಿಯಿಡುತ್ತಿರುವಾಗ ಭೂದೇವಿ

ಮಡಿ ಮಡಿ ಎಂದು ಓಡುತ್ತಿರಲಿಲ್ಲ

ನಾನು ಮನುಷ್ಯನಾಗಿದ್ದರೆ ಆಕಾಶದಿಂದ ಭೂಮಿಯ ಮೇಲೆ ಬೀಳುವ ಮಳೆಯೂ ನನ್ನನ್ನು ಸ್ವಪಚ (ಅಸ್ಪೃಶ್ಯ) ಎಂದು ನನ್ನನ್ನು ಮುಟ್ಟದೆ ಹಿಂದೆ ಸರಿಯುತ್ತಿದ್ದವು ಆದರೆ ಮರವಾಗಿದ್ದರೆ ನನ್ನ ಮೇಲೆಯೇ ಮಳೆಯ ಹನಿಗಳು ಬಿದ್ದು ಎಲ್ಲರಿಗೂ ಸಮಾನತೆ ತೋರುತ್ತಿದ್ದವು. ನಾನು ಮರವಾಗಿ ಭೂಮಿಗೆ ಬೇರು ಬಿಟ್ಟಾಗ ಅಲ್ಲಿನ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಂಡು ಬೆಳೆಯುವಾಗ ಭೂದೇವಿ ನನ್ನನ್ನು ಮಡಿ ಮಡಿ ಎಂದು ದೂರ ತಳ್ಳುತ್ತಿರಲಿಲ್ಲ. ಮನುಷ್ಯನಾಗಿದ್ದರೆ ಮಡಿ ಮೈಲಿಗೆ ಎಂದು ದೂರ ತಳ್ಳುಬಿಡುತ್ತಿದ್ದರು ಎಂಬ ಕೆಟ್ಟ ಮನಸ್ಥಿತಿಯನ್ನು ಕವಿ ಇಲ್ಲಿ ತೋರಿದ್ದಾರೆ.

Read this article; https://rvwritting.com/2-suggi-barutide-poem-summary-2-%e0%b2%b8%e0%b3%81%e0%b2%97%e0%b3%8d%e0%b2%97%e0%b2%bf-%e0%b2%ac%e0%b2%b0%e0%b3%81%e0%b2%a4%e0%b2%bf%e0%b2%a6%e0%b3%86-%e0%b2%aa%e0%b2%a6%e0%b3%8d%e0%b2%af/

ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈ ಉಜ್ಜಿ

ತುರಿಕೆ ತೀರಿಸಿಕೊಳ್ಳುವಾಗ ಅದರ ಅಂಗಾಗಳಲ್ಲಿ

ಅಡರಿಕೊಂಡ ಮುಕ್ಕೋಟಿ ದೇವತೆಗಳು

ನನ್ನನ್ನು ಮುಟ್ಟಿಸಿಕೊಳ್ಳುತ್ತಿದ್ದರು.

ನಾನು ಮರವಾಗಿದ್ದರೆ ಮೂವತ್ಮೂರು ಕೋಟಿ ದೇವತೆಗಳನ್ನು ಒಳಗೊಂಡಿರುವ ಗೋಮಾತೆ ತನಗಾದ ತುರಿಕೆಯನ್ನು ತೀರಿಸಿಕೊಳ್ಳಲು ನನ್ನ ತೊಗಟೆಯನ್ನು ಉಜ್ಜುವಾಗ ಅದರಲ್ಲಿರುವ ಎಲ್ಲಾ ದೇವಾನುದೇವತೆಗಳು ನನ್ನನ್ನು ಸ್ಪರ್ಶಿಸುತ್ತವೆ ಆದರೆ ಮನುಷ್ಯನಾಗಿ ಇದ್ದಿದ್ದರೆ ಅಸ್ಪೃಶ್ಯನನ್ನಾಗಿ ಮುಟ್ಟಿಸಿಕೊಳ್ಳದೆ ದೂರ ತಳ್ಳುತ್ತಿದ್ದರು ಎಂದು ಕವಿ ಇಲ್ಲಿ ಹೇಳಿದ್ದಾರೆ.

ಯಾರಿಗೆ ಗೊತ್ತು

ನನ್ನ ಅಂತ್ಯಕಾಲದಲ್ಲಿ

ಕಡಿದು ತುಂಡಾದ ಒಣ ಸೀಳೊಂದು

ಹೋಮಾಗ್ನಿಯಲ್ಲಿ ಬೆಂದು

ಪಾವನವಾಗುತ್ತಿತ್ತೇನೊ

ಅಥವಾ

ಸತ್ಪುರುಷನೊಬ್ಬನ ಹೆಣಕ್ಕೆ ಚಟ್ಟವಾಗಿ

ನಾಲ್ಕು ಜನ ಸಜ್ಜನರ ಹೆಗಲೇರಬಹುದಿತ್ತೆ?

ನಾನು ಮರವಾಗಿ ನನ್ನ ಅಂತ್ಯಕಾಲದಲ್ಲಿ ನನ್ನಿಂದ ಉಪಯೋಗವಿಲ್ಲವೆಂದು ನನ್ನನ್ನು ಕಡಿದಾಗ ಅದರಲ್ಲಿ ಯಾವುದೋ ಒಂದು ತುಂಡು ಸೀಳು ಹೋಮ ಮಾಡುವಲ್ಲಿ ನನ್ನ ಬಳಕೆಯಾಗಿ ನನಗೆ ಅಗ್ನಿ ಅಥವಾ ಬೆಂಕಿಯ ಸ್ಪರ್ಶವೂ ಆಗುತ್ತಿತ್ತು ಅಥವಾ ಅದೇ ನನ್ನ ಮರದ ಸೇವೆ ಯಾರೋ ಒಬ್ಬ ಒಳ್ಳೆಯ ವ್ಯಕ್ತಿತ್ವದ ಮನುಷ್ಯನಿಗೆ ಚಟ್ಟವಾಗುತ್ತಿತ್ತು. ಅದರೊಂದಿಗೆ ಒಳ್ಳೆಯ ಜನರ ಹೆಗಲನ್ನು ಹೇರುವ ಸೌಭಾಗ್ಯವೂ ನನಗೆ ದೊರೆಯುತ್ತಿತ್ತು ಎಂಬುದರೊಂದಿಗೆ ಈ ಪ್ರಕೃತಿಯು ನಮ್ಮನ್ನು ಸಮಾನವಾಗಿಯೇ ಕಾಣುತ್ತದೆ ಎಂಬುದನ್ನು ಇಲ್ಲಿ ಕವಿ ಹೇಳಿದ್ದಾರೆ.

ಮೇಲಿನ ಕವಿತಾ ಸಮಾಜದಲ್ಲಿನ ಜಾತಿಯ ಅಸಮಾನತೆ ಸ್ಪರ್ಶ ಅಸ್ಪೃಶ್ಯ ಅಸಮಾನತೆಯನ್ನ ಚಿತ್ರಿಸುತ್ತದೆ.

1 thought on “1 – Naanondu Maravagiddare Poem summary- 1 – ನಾನೊಂದು ಮರವಾಗಿದ್ದರೆ ಪದ್ಯದ ಭಾವಾರ್ಥ”

  1. Pingback: %Hendatiya Kaagada% - rvwritting

Leave a Comment

Your email address will not be published. Required fields are marked *

Scroll to Top