
Karadiya kunitha poem summaryದ.ರಾ. ಬೇಂದ್ರೆ – – ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ನಾಡಿಗೆ ಚಿರಪರಿಚಿತರಾದವರು ದ. ರಾ. ಬೇಂದ್ರೆಯವರು, ಕನ್ನಡಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. ಅವರನ್ನು ಕನ್ನಡದ ವರಕವಿ’ ಎಂದು ಪರಿಗಣಿಸಲಾಗಿದೆ. ಭಾರತೀಯ ಜ್ಞಾನಪೀಠವು 1973 ರ ಸಾಹಿತ್ಯ ಪ್ರಶಸ್ತಿಯನ್ನು ದ. ರಾ. ಬೇಂದ್ರೆಯವರ ‘ನಾಕುತಂತಿ’ ಎಂಬ ಕವನ ಸಂಕಲನಕ್ಕೆ ನೀಡಿ ಗೌರವಿಸಿದೆ. ಗರಿ ಕಾಮಕಸ್ತೂರಿ, ಸೂರ್ಯಪಾನ, ನಾದಲೀಲೆ’, ‘ಮೊದಲಾದ ಕವನ ಸಂಕಲನಗಳನ್ನು ಬೇಂದ್ರೆ ಪ್ರಕಟಿಸಿದರು. ಬೇಂದ್ರೆಯವರು ಕಾವ್ಯ ನಾಟಕ, ಸಣ್ಣಕಥೆ, ಹರಟಿ ವಿಮರ್ಶೆ, ಅನುವಾದ ಕ್ಷೇತ್ರಗಳಲ್ಲಿ ಸಾಹಿತ್ಯ ರಚಿಸಿದವರು. ಮರಾಠಿ ಭಾಷೆಯಲ್ಲಿ ಸಹ ಬೇಂದ್ರೆಯವರು ಸಾಹಿತ್ಯ ರಚನೆ ಮಾಡಿದ್ದಾರೆ.
Also read :https://rvwritting.com/eleyanda-gudi-marana-ragale/
Karadiya kunitha poem summary – Summary
ಕಬ್ಬಿಣ ಕೈ ಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ಯಾಂತ ಬಂದಾನ |
ಗುಣು ಗುಣುಗುಟ್ಟುತ ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ |
ಕರಡಿಯನ್ನು ಕುಣಿಸುವಾತನ ವೇಷಭೂಷಣದ ಬಗೆಗೆ ಹೇಳುತ್ತಿದ್ದಾರೆ. ಅವನ ಕೈಯಲ್ಲಿ ಕಬ್ಬಿಣದಿಂದ ಮಾಡಿದ ಕೈ ಕಡಗ ಹಾಕಿಕೊಂಡಿದ್ದಾನೆ, ಕರಡಿಯನ್ನು ಕುಣಿಸಲು ಕುಣಿಕೋಲು ಹಿಡಿದಿದ್ದಾನೆ, ಅದರ ಕೂದಲಿನಿಂದ ಮಾಡಿದ ತಾಯಿತ ಹಿಡಿದು ಹೆಗಲ ಮೇಲೆ ಕಂಬಳಿ ಒದ್ದು ಬರುತ್ತಿದ್ದಾನೆ, ಬಾಯಲ್ಲಿ ಪದಗಳನ್ನು ಹೇಳಿಕೊಂಡು ಡಮರುಗದ ಮೂಲಕ ಶಬ್ದ ಮಾಡುತ್ತಾ ಕರಡಿಯನ್ನು ಆಡಿಸಿಕೊಂಡು ಧಾನವನ್ನು ಬೇಡಿಕೊಂಡು ನಿಂತಿದ್ದಾನೆ.
ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬವಂತನ ಹಿಡಿದು ತಂದಾನ?
‘ಧಣಿಯರ ಮನಿ ಮಉಂದ ಕಾವಲು ಮಾಡಣ್ಣ
ಧಣಿ ದಾನ ಕೊಡುವನು’ ಅಂದಾನ
Meeyuva ata;https://youtu.be/JWd3uvNQKEw?si=FqnwK_sjwjjR4gA5
ಯಾವುದೋ ಕಾಡಿನಲ್ಲಿ ಸ್ವಚ್ಛಂದವಾಗಿ ವಿಹಾರ ಮಾಡಿಕೊಂಡು ಜೇನು ತಿನ್ನುತ್ತಾ ಬೆಳೆದಿದ್ದ ಕರಡಿಯನ್ನು ತನ್ನ ಹೊಟ್ಟೆಯ ಪಾಡಿಗಾಗಿ ಅದನ್ನು ಹಿಡಿದು ತಂದಿದ್ದಾನೆ, ಹಿಡಿದು ತಂದಿರುವ ಕರಡಿಯನ್ನು ಕುಣಿಸುತ್ತಾ ಕುಣಿಸುತ್ತ, ಇವನನ್ನು ನೋಡಿಕೊಳ್ಳುತ್ತಿದ್ದ ಧಣಿಯನ ಮುಂದೆ ಚೆನ್ನಾಗಿ ಕುಣಿ ಅವರು ನಮಗೆ ಹೆಚ್ಚಿನ ದಾನ ನೀಡುವರು ಎಂದು ಹೇಳಿ ಕುಣಿಸುವನು.
ತ್ರೇತಾಯುಗದ ರಾಮನ್ನ ದ್ವಾಪರದ ಕೃಷ್ಣನ್ನ
ಕಲಿಯುಗದ ಕಲ್ಕಿನ ಕಂಡಾನ
ಜಾಂಬುನದಿ ದಂಡೆಯ ಜಂಬು ನೇರಳೆ ಹಣ್ಣು
ಕೃತಯುಗದ ಕೊನೆಗಿಂವಾ ಉಂಡಾನ
ತ್ರೇತಾಯುಗ ಅಥವಾ ರಾಮಾಯಣ ಕಾಲದ ರಾಮ, ದ್ವಾಪರಯುಗ ಕೃಷ್ಣ ಇಂದಿನ ಕಲ್ಕಿಯ ಯುಗವನ್ನು ಕಂಡಿದ್ದಾನೆ. ಸತ್ಯಯುಗದಲ್ಲಿ ಜಂಬೂ ನದಿ ದಂಡೆಯ ಮೇಲೆ ಬೆಳೆದಿದ್ದ ನೇರಳೆ ಹಣ್ಣನ್ನು ತಿಂದು ಆ ಯುಗ ಮುಗಿಯುವುದನ್ನು ಕಂಡಿದ್ದಾನೆ.
ಬಂದಾರೆ ಬರ್ರೆವ್ವ ಕಂದನ ತರೆವ್ವ
ಅಂಜೀಕಿ ಗಿಂಜೀಕಿ ಕೊಂದಾನ
ರೋಮ ರೋಮಗಳಲ್ಲಿ ಭೀಮರಕ್ಷೆಯ ಬಲ
ಕೊರಳಾಗ ಕಟ್ಟಿರಿ ಬಂದಾನ
ಬೀದಿ ಬೀದಿಗಳಲ್ಲಿ ಕರಡಿಯನ್ನು ಕುಣಿಸುತ್ತಾ ಬಂದ ಅವನು ಬೀದಿಯಲ್ಲಿ ನಿಂತು ಅಲ್ಲಿದ್ದ ಹೆಣ್ಣು ಮಕ್ಕಳನ್ನು ಕರೆದು ನಿಮ್ಮ ಮನೆಯ ಚಿಕ್ಕ ಮಕ್ಕಳನ್ನು ಕರೆದು ತನ್ನಿ ಅವರಿಗೆ ಇರುವ ಭಯ ಹೆದರಿಕೆ ಹೋಗಿಸುವೆ ಕರಡಿಯ ಕೂದಲಿನಿಂದ ಮಾಡಿದ ತಾಯಿತವನ್ನು ಮಕ್ಕಳ ಕೊರಳಿಗೆ ಕಟ್ಟುವುದರಿಂದ ಭೀಮರಕ್ಷೆಯ ಬಲ ಸಿಗುವಂತಾಗುತ್ತದೆ ಬನ್ನಿರಮ್ಮ ಎಂದು ಕರೆಯುತ್ತಿದ್ದಾನೆ.
ಕುಣಿಯಲೆ ಮಗನ’ ನೀ ಅನ್ನೊದೊಂದೇ ತಡ
ತನ್ನನ ತಾನನ ತಂದಾನ
ಮುದ್ದು ಕೂಸಿನ ಹಾಗೆ ಮುಸು ಮುಸು ಮಾಡುತ್ತ
ಕುಣಿದಾನ ಕುಣಿತವ ಛಂದಾನ
ಕರಡಿಯನ್ನು ಕುಣಿಸುತ್ತಿರುವಾಗ ಅವನು ಕರಡಿ ನೀನು ಕುಣಿಯೋ ಅಂದು ಹೇಳುವುದೇ ತಡ ಚಿಕ್ಕ ಮಕ್ಕಳು ಮುಸುಮುಸು ಮಾಡುತ್ತಾವೋ ಹಾಗೆ ಮಾಡುತ್ತಾ ಕರಡಿ ಅಂದವಾಗಿ ಕುಣಿಯುತ್ತದೆ.
ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು
ನಡೆದಾನ ಪಡೆದಾನ ಬಂದಾನ
ಕುಣಿಸುವವರ ಹೊಟ್ಟೆ ತಣ್ಣಗಾಗಲಿ’ ಎಂದು
ಮುಗಿಲಿಗೆ ಕೈ ಮುಗಿದು ನಿಂದಾನ
ಕರಡಿ ಕುಣಿಸುವವನು ತನ್ನ ಹೊಟ್ಟೆಯ ಪಾಡಿಗಾಗಿ ಕರಡಿ ಕುಣಿಸುತ್ತಿದ್ದಾನೆ. ಕರಡಿ ಕುಣಿಯುವ ಮೂಲಕ ಅವನ ಹೊಟ್ಟೆ ತುಂಬಲಿದೆ ಹಾಗೆ ಕರಡಿಯನ್ನು ಕುಣಿಸುವಂತೆ ಯಾರಾದರೂ ಕರೆದರೆ ನಮ್ಮ ಹೊಟ್ಟೆ ತುಂಬುತ್ತದೆ ಎಂದು ಮುಗಿಲಿನ ಕಡೆಗೆ ಕೈ ಮುಗಿದು ನಿಂತಿದ್ದಾನೆ.
ಮನಬಲ್ಲ ಮಾನವ ಕುಣಿದಾನ ಕುಣಿಸ್ಯಾನ
ಪ್ರಾಣದ ಈ ಪ್ರಾಣಿ ಹಿಂದಾನ
ಕರಡಿಯ ಹೆಸರೇಲೆ ಚರಿತಾರ್ಥನಡಿಸ್ಯಾನ
ಪರಮಾರ್ಥ ಎಂಬಂತೆ ಬಂದಾನ
ಕರಡಿ ಉಳಿಸುವ ತನ್ನ ಜೀವನ ಹೇಗೆ ನಡೆಸುತ್ತಾನೆ ಎಂದರೆ ಮನಸ್ಸಿರುವ ಮಾನವತನ ಹೊಟ್ಟೆ ತುಂಬಿಸಿಕೊಳ್ಳಲು ಕರಡಿಯನ್ನು ಕುಣಿಸುತ್ತಿದ್ದಾನೆ ಅದು ಪ್ರಾಣಿಯ ಮೂಲಕ ಹೊಟ್ಟೆ ತುಂಬಿಸಿಕೊಳ್ಳುವುದರಿಂದ ಅವನಿಗೆ ಕರಡಿಯು ದೇವರಾಗಿ ಕಂಡು ಎಲ್ಲಾ ಸಮಸ್ಯೆಗಳನ್ನು ನೀಗಿಸಿಕೊಳ್ಳುತ್ತಿದ್ದಾನೆ.
ಈ ಮನುಷಾ ಎಂದಿಂದೊ ಕವಲೆತ್ತು ಕೋಡಗ
ತನಗಾಗಿ ಕುಣಿಸುತ್ತ ನಡದಾನ
ಕರಡೀ ಕುಣಿತಕ್ಕಿಂತ ನರರ ಬುದ್ದಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ
ಈ ಮನುಷ್ಯ ಎಂಬುವನು ತನಗಾಗಿ ತನ್ನ ಸ್ವಾರ್ಥದ ಬದುಕಿಗಾಗಿ ನಮ್ಮನ್ನು ಕುಣಿಸುತ್ತಿದ್ದಾನೆ. ಇಲ್ಲಿ ಕರಡಿ ಕುಣಿತಕ್ಕಿಂತ ಮನುಷ್ಯ ಬುದ್ಧಿಯ ಕುಣಿತ ಸ್ವಾರ್ಥದಿಂದ ಕೂಡಿರುವುದಾಗಿದೆ ಎಂದು ಕವಿ ಹೇಳಿದ್ದಾರೆ. ಮನುಷ್ಯ ತನ್ನ ಸ್ವಾರ್ಥ ಬಿಟ್ಟು ಸಕಲ ಜೀವರಾಶಿಗೆಲ್ಲ ಬದುಕುವ ಸ್ವತಂತ್ರ ಹಕ್ಕಿದೆ ಎಂದು ತಿಳಿದು ಬದುಕಬೇಕು ಎಂದಿದ್ದಾರೆ.
