
Blen Heem Kadana – ಕನ್ನಡದ ಕಣ್ವ ಎಂದೇ ಪ್ರಸಿದ್ಧರಾದ ಬಿ ಎಂ ಶ್ರೀಕಂಠಯ್ಯ ನವರು ಅನುವಾದಿಸಿರುವ ಕವಿತೆಯಾಗಿದೆ. ಮೂಲ ರಚನಕಾರರಾದ ‘ಸದೆ’ ಎಂಬ ಇಂಗ್ಲೀಷ್ ಕವಿ ಬರೆದಿರುವ ಕವಿತೆಯಾಗಿದೆ ಇದನ್ನು ಯುದ್ಧ ವಿರೋಧಿ ನೆಲೆಯಲ್ಲಿ ಕವಿತೆಯನ್ನು ರಚಿಸಿದ್ದಾರೆ.
ಕವಿತೆಯು ಯುದ್ಧದ ನಿಷ್ಕ್ರಿಯತೆ ಅಥವಾ ಯುದ್ಧ ನಿರ್ಮೂಲನ ನೀತಿಯನ್ನು ಹೇಳುವುದರೊಂದಿಗೆ ಬದುಕು ದೊಡ್ಡದು ಎಂಬುದರ ಜೊತೆಗೆ ಮಾನವೀಯವಾಗಿ ಬದುಕುವುದು ಮುಖ್ಯವಾಗಿದೆ ಎಂಬುದು ಈ ಕವಿತೆಯ ಆಶಯವಾಗಿದೆ.
Blen Heem Kadana – Poem Summary
ಬೇಸಗೆಯಲ್ಲಿ ಸಂಜೆಯಾಯಿತು; ಕೆಲಸವ
ಮುತ್ತಜ್ಜ ತೀರಿಸಿಕೊಂಡ,
ಹಟ್ಟಿಯ ಬಾಗಿಲ ಬಳಿಯಲಿ ನೋಡುತ
ಹೊಂಬಿಸಿಲಲಿ ಕುಳಿತುಕೊಂಡ,
ಅಲ್ಲಿಯೆ ಹಸುರಮೇಲಾಡುತಲಿದ್ದಳು
ಅಜ್ಜನ ಮುದ್ದಿನ ಪುಟ್ಟ ಮೊಮ್ಮಗಳು.
ಬೇಸಿಗೆ ಸಮಯದಲ್ಲಿನ ಸಂಜೆಯಲ್ಲಿ ಮುತ್ತ ಜಾತನೆಲ್ಲ ಕೆಲಸವನ್ನು ತೀರಿಸಿಕೊಂಡು ಮನೆಯ ಬಳಿಯ ಹಟ್ಟಿಯ ಬಾಗಿಲಲ್ಲಿ ಕುಳಿತುಕೊಂಡು ಅಲ್ಲೇ ಬೆಳೆದಿದ್ದ ಹಸಿರಿನ ಹುಲ್ಲಿನ ಮೇಲೆ ಅಜ್ಜನ ಮುದ್ದಿನ ಮೊಮ್ಮಗಳು ಆಟವಾಡುತ್ತಿರುವುದನ್ನು ನೋಡುತ್ತಿದ್ದನು.
see video :https://youtu.be/aekz7HCqHxs?si=L4X2BoP77xJ9Pba6
ಕಂಡಳು ಕೂಗಿಕೊಂಡಣ್ಣನು ಬರುವುದ-
ಆಡುತ, ಹೊಳೆಯಂಚಿನಿಂದ
ದಪ್ಪಗೆ, ದುಂಡಗೆ, ಏನನೊ ಒಂದನು
ಉರುಳಿಸಿಕೊಂಡವ ತಂದ.
ದಪ್ಪಗೆ, ನುಣ್ಣಗೆ, ದುಂಡಗೆ ಇರುವುದು
ಅಜ್ಜ ಇದೇನೆಂದು ಕೇಳಲು ಬಂದ.
ಅವಳು ಹೊಳೆಯ ಅಂಚಿನಲ್ಲಿ ಆಡುತ್ತಿದ್ದ ಅಣ್ಣನನ್ನು ಕೂಗಿಕೊಂಡು ಕರೆದಳು. ಅವನು ದಪ್ಪಗಿದ್ದ ದುಂಡಗಿದ್ದ ಏನನ್ನು ಉರುಳಿಸಿಕೊಂಡು ಬಂದು ತಾತನ ಮುಂದೆ ತೋರಿಸಿ ಇದೇನು ಅಜ್ಜ ಎಂದು ಕೇಳಿದ.
Also read this poem Parampare Summary:https://rvwritting.com/parampare-poem-summary/
ಅಜ್ಜ ತೆಗೆದುಕೊಂಡ ಕೈಗದ, ಹುಡುಗನು
ನಿಂತ ಹತ್ತಿರ ಕಿವಿಗೊಟ್ಟು,
ನೋಡಿ, ಆ ಮುದುಕನು ತಲೆಯಲ್ಲಾಡಿಸಿ,
ಮರುಗತ ನಿಟ್ಟುಸಿರಿಟ್ಟು,
ಪಾಪ, ಇದಾರದೊ ತಲೆಯೋಡು-ಯಾವನೊ
ಬಿದ್ದವನಾ ದೊಡ್ಡ ಜಯದಲಿ ಎಂದ.
ಮೊಮ್ಮಗ ತೋರಿಸಿದ ವಸ್ತುವನ್ನು ಅಜ್ಜ ಕೈಗೆ ತೆಗೆದುಕೊಂಡು ನೋಡಿದ. ಆಗ ಅವನು ತಾತ ಏನು ಹೇಳುತ್ತಾರೋ ಎಂದು ಕಿವಿಗೊಟ್ಟು ಅಲ್ಲೇ ನಿಂತನು. ಆಗ ಅಜ್ಜ ತಲೆಯಲ್ಲಾಡಿಸಿ ನಿಟ್ಟುಸಿರು ಬಿಟ್ಟು, ಯಾವುದೋ ಒಂದು ದೊಡ್ಡ ಯುದ್ಧ ನಡೆದು ಅದರಲ್ಲಿ ಸತ್ತ ಯಾರದೋ ಒಬ್ಬನ ತಲೆ ಬುರುಡೆ ಎಂದು ಹೇಳಿದನು.
ಎಷ್ಟೊ ನೋಡಿರುವೆನು ನಮ್ಮ ತೋಟದಲೆಲ್ಲ,
ಬಿಸುಡುವೆನೊಕ್ಕಡೆಗಿಕ್ಕಿ.
ಉಳುತ ಹೋದಾಗೆಲ್ಲ ಮೇಲಕೆ ಬರುವುವು
ನೇಗಿಲ ಕುಳದಲಿ ಸಿಕ್ಕಿ.
ಸಾವಿರಗಟ್ಟಳೆ ಜನಗಳು ಕೊಲೆಯಾಗಿ
ಬಿದ್ದವರಾ ದೊಡ್ಡ ಜಯದಲಿ ಎಂದ.
ಅಜ್ಜ ಮತ್ತೆ ಮುಂದುವರೆದು ಹೇಳುತ್ತಾ ತಲೆಬುರುಡೆಗಳು ನಮ್ಮ ತೋಟದಲ್ಲೆಲ್ಲ ತುಂಬಾ ಸಿಕ್ಕಿವೆ. ಅವನ್ನು ಒಂದು ಕಡೆ ಜೋಡಿಸಿ ಇಡುತ್ತಿರುವೆ ನಾನು ಹೊಲದಲ್ಲಿ ಉಳುಮೆ ಮಾಡುವಾಗ ನೇಗಿಲ ಕುಳಕ್ಕೆ ಸಿಕ್ಕಿ, ಮೇಲಕ್ಕೆ ಬರುವವು ಈ ರೀತಿ ನನಗೆ ಸಾವಿರಗಟ್ಟಲೆ ತಲೆ ಬುರುಡೆಗಳು ಸಿಕ್ಕಿವೆ. ಇವೆಲ್ಲವೂ ಯಾವುದೋ ದೊಡ್ಡ ಯುದ್ಧದಲ್ಲಿ ಜಯ ಪಡೆದುದರ ಪರಿಣಾಮವಾಗಿ ಇವು ಸಿಕ್ಕಿವೆ ಎಂದನು
ಆ ಕಥೆ ಏನದು? ನಮಗೆಲ್ಲ ಹೇಳಜ್ಜ.
ಎಂದನು ಪುಟ್ಟ ಮೊಮ್ಮಗನು.
ಅಚ್ಚರಿ ಕಾಯುತ, ಅರಳಿದ ಕಣ್ಣೆತ್ತಿ
ನಿಂದಳು ಪುಟ್ಟ ಮೊಮ್ಮಗಳು.
ಯುದ್ಧದ ಕಥೆಯೇನು ನಮಗೆಲ್ಲ ಹೇಳಜ್ಜ
ಏತಕೆ ಕಾದಾಡಿದರೊ ಅದ ಹೇಳು.
ಇದೆಲ್ಲವನ್ನು ಕೇಳಿದ ಮೊಮ್ಮಗ ಅದೇನಾಯ್ತು ಎಂದು ಅದರ ಕಥೆ ಏನು ಎಂದು ನಮಗೂ ಹೇಳು ಅಜ್ಜ ಎಂದು ಕೇಳಿದ. ಅದನ್ನೇ ಕೇಳಿಸಿಕೊಳ್ಳುತ್ತಿದ್ದ ಅಜ್ಜನ ಪ್ರೀತಿಯ ಮೊಮ್ಮಗಳು ಕೂಡ ಅವರೆಲ್ಲ ಯುದ್ಧದಲ್ಲಿ ಏತಕ್ಕೆ ಕಾದಾಡಿದರು ಹೇಳು ಅಜ್ಜ ಎಂದು ಅವಳು ಕೂಡ ಕೇಳಿದಳು.
ಮುತ್ತಜ್ಜ ಹೇಳಿದ-ಇಂಗ್ಲೀಷರಿರುವರೆ.
ಮುರಿದರು ಫ್ರೆಂಚರ ಪಡೆಯ,
ಏತಕೆ ಕಾದಾಡಿದರೂ ಅದ ನಾ ಬೇರೆ
ಕಾಣೆನು ಚೆನ್ನಾಗಿ ಅಡಿಯ.
ಆದರೆ ಯಾರನೆ ಕೇಳವರೆಲ್ಲರು
ಲೋಕಪ್ರಸಿದ್ದಿಯ ಜಯವೆಂಬರೆಂದ.
ಮುತ್ತಜ್ಜ ತನ್ನ ತಾತನ ಕಾಲದಲ್ಲಿ ನಡೆದ ಯುದ್ಧದ ಬಗೆಗೆ ಹೇಳಲು ಮುಂದಾದನು. ಇಂಗ್ಲಿಷರು, ಫ್ರೆಂಚರ ಪಡೆಯನ್ನು ಸೋಲಿಸಿ ನಾಶ ಮಾಡಿದರು, ಅವರು ಏತಕೆ ಯುದ್ಧ ಮಾಡಿದರು ನನಗೆ ತಿಳಿಯದು ಆದರೆ ಇದರ ವಿಚಾರವಾಗಿ ಯಾರ ಬಳಿಯಲ್ಲೂ ಕೇಳಿದರು ಅವರೆಲ್ಲರೂ ಯುದ್ಧದ ಬಗೆಗೆ ವರ್ಣಿಸಿ ಲೋಕ ಪ್ರಸಿದ್ಧವಾದ ಯುದ್ಧ ಎಂದು ಹೇಳುವವರೇ ಆಗಿದ್ದಾರೆ.
ನಮ್ಮಯ್ಯ ಗುಡಿಸಲ ಮಾಡಿಕೊಂಡಿದ್ದನು
ಆ ಹೊಳೆಯಂಚಿನಲಾಗ.
ಸೂರೆ ಹೊಡೆದು ಬೀಡ ನೆಲಸಮಸುಟ್ಟರು;
ತಲೆಯ ತಪ್ಪಿಸಿಕೊಂಡು ಬೇಗ
ಹೆಂಡತಿ ಮಕ್ಕಳ ಕಟ್ಟಿಕೊಂಡೋಡಿದ
ನಿಂತಲ್ಲಿ ನಿಲ್ಲದೆ ನೆಲೆಗಾಣದಲೆದ.
ನಮ್ಮ ತಾತನ ಕಾಲದಲ್ಲಿ ನಡೆದದ್ದು ಎಂದು ಹೇಳುತ್ತಾ, ಹೊಳೆಯ ಹಂಚಿನಲ್ಲಿ ಗುಡಿಸಲು ಕಟ್ಟಿಕೊಂಡು ಸಂಸಾರ ನಡೆಸುವಾಗ ಅಲ್ಲಿಗೆ ಬಂದವರು ನಮ್ಮ ಗುಡಿಸಲುಗಳನ್ನು ಲೂಟಿ ಮಾಡಿದರು, ಗುಡಿಸಲುಗಳಿಗೆ ಬೆಂಕಿ ಇಟ್ಟು ಸುಟ್ಟರು. ಅದರಿಂದ ತಲೆತಪ್ಪಿಸಿಕೊಂಡು ಹೆಂಡತಿ ಮಕ್ಕಳನ್ನು ಜೊತೆಯಲ್ಲಿ ಇಟ್ಟುಕೊಂಡು ಯಾವ ನೆಲೆಯೂ ಇಲ್ಲದೆ ಅದೆಲ್ಲವನ್ನು ಬಿಟ್ಟು ಓಡಬೇಕಾಯ್ತು. ಎಲ್ಲೂ ನೆಲೆಯೂ ಸಿಗಲಿಲ್ಲ ಅಲೆಯಬೇಕಾಯಿತು. ಏಕೆಂದರೆ ಎಲ್ಲಿ ನೋಡಿದರೂ ಕಾಳಗಗಳು, ಯುದ್ಧದ ಭೀಕರತೆಯೇ ನೆಲೆಯೂರಿತ್ತು.
ಬೆಂಕಿಯ, ಕತ್ತಿಯ ಬಾಯಿಗೆ ಬಲಿಯಾಗಿ
ದೇಶವೆ ಹಾಳಾಯಿತೆಲ್ಲ.
ತುಂಬುಬಸಿರಿಯರು, ಹಾಲುಮಕ್ಕಳು ಸತ್ತ
ಲೆಕ್ಕವ ದೇವರೆ ಬಲ್ಲ
ಅದರಂತಹುದೆಷ್ಟೋ ಆಗಲೇಬೇಕಲ್ಲ
ಲೋಕಪ್ರಸಿದ್ದಿಯ ಜಯದಲಿ ಎಂದ
ಈ ಯುದ್ಧವು ಬೆಂಕಿಯಿಂದ ಸುಡುವ ಮೂಲಕ, ಕತ್ತಿಯಿಂದ ಜನರನ್ನು ಹಿರಿಯುವ ಮೂಲಕ, ಮನುಷ್ಯರನ್ನು ಸಾಯಿಸುವ ಮೂಲಕ ದೇಶವೇ ಹಾಳಾಯಿತು. ಇದರೊಂದಿಗೆ ತುಂಬು ಗರ್ಭಿಣಿಯರು ಇನ್ನು ಹಾಲು ಕುಡಿಯುತ್ತಿರುವ ಹಸುಳೆಗಳು ಈ ಯುದ್ಧದಲ್ಲಿ ಸತ್ತರು. ಅದೆಷ್ಟು ಸತ್ತಿವೆ ಎಂಬುದು ನಮಗೆ ಲೆಕ್ಕಕ್ಕೆ ಸಿಕ್ಕಿಲ್ಲ, ಆ ಲೆಕ್ಕ ಎಲ್ಲವೂ ಕೂಡ ದೇವರಿಗೆ ತಿಳಿದಿದೆ. ಈ ರೀತಿ ಇನ್ನೂ ಎಷ್ಟು ಆಗಿದೆಯೋ ಈ ರೀತಿ ಆಗಿರುವುದರಿಂದಲೇ ಇದು ಇಷ್ಟೊಂದು ಲೋಕ ಪ್ರಸಿದ್ಧಿಯನ್ನು ಪಡೆದ ಯುದ್ಧವಾಗಿದೆ.
ನೋಡಲುಬಾರದು ಎಂಬರು ಘೋರವ
ಗೆದ್ದ ಮೇಲಾರಣದಲ್ಲಿ.
ಸಾವಿರಗಟ್ಟಲೆ ಹೆಣಗಳು ಕೊಳೆಯುತ
ಬಿಸಿಲಲಿ ಬಿದ್ದಿದ್ದುವಲ್ಲಿ.
ಆದರಂತಹುದೆಷ್ಟೋ ಆಗಲೇಬೇಕಲ್ಲ
ಲೋಕಪ್ರಸಿದ್ದಿಯ ಜಯದಲಿ ಎಂದ.
ಯುದ್ಧ ನಡೆದ ಮೇಲೆ ಮತ್ತೆ ಆ ರಣಾಂಗಣವನ್ನು ನೋಡಲೇಬಾರದು. ಏಕೆಂದರೆ ಅಲ್ಲಿ ಸಾವಿರಾರು ಗಟ್ಟಲೆ ಹೆಣಗಳು ತಮ್ಮ ಗರ್ವ ಮೆರೆಯುವುದಕ್ಕೆಂದೆ ತಿವಿದು ತಿವಿದು ಸಾಯಿಸುತ್ತಾರೆ. ಅವೆಲ್ಲ ಉರಿಯುವ ಬಿಸಿಲಲ್ಲಿ ಬಿದ್ದಿವೆ ಲೋಕ ಪ್ರಸಿದ್ಧಿಯ ಯುದ್ಧಕ್ಕೆ ಇವೆಲ್ಲ ಆಗಲೇಬೇಕಲ್ಲ.
ದೇಶವೆ ಹೊಗಳಿತು ಗೆದ್ದ ನಾಯಕರನು
ಸುರಿದವು ಹೂವು ಮಳೆಗಳು-
ಛೀ, ತೆಗೆ, ಏನದು, ಬಲು ಕೆಟ್ಟ ಕೆಲಸವು!
ಎಂದಳು ಪುಟ್ಟ ಮೊಮ್ಮಗಳು.
ಅಲ್ಲವೆ, ಅಲ್ಲವೆ ಪುಟ್ಟ ಹುಡುಗಿ, ಕೇಳು.
ಲೋಕಪ್ರಸಿದ್ಧಿಯ ಜಯವದು ಎಂದ.
ಯುದ್ಧ ಮುಗಿದ ಮೇಲೆ ಯುದ್ಧ ಗೆದ್ದ ನಾಯಕರನ್ನು ದೇಶವೇ ಹೊಗಳಿ, ಅವರ ಮೇಲೆ ಹೂಗಳನ್ನು ಸುರಿಯುವ ಮೂಲಕ ಗೌರವ ತೋರಿದರು. ಆಗ ಅಲ್ಲಿದ್ದ ಮೊಮ್ಮಗಳು ಇದೆಂತಹ ಕೆಟ್ಟ ಕೆಲಸ ಎಂದಳು ಅದಕ್ಕೆ ಅಜ್ಜ ಹೌದಲ್ಲವೇ ಎಂದು ಹೇಳಿ ಇದು ಲೋಕ ಪ್ರಸಿದ್ಧಿಯ ಜಯ ಅಲ್ಲವೇ ಅದಕ್ಕೆ ಇವೆಲ್ಲವೂ ಆಗಿವೆ ಎಂದನು.
ಎಲ್ಲರೂ ಹೊಗಳಿದರಾ ದೊಡ್ಡ ಯುದ್ಧವ
ಗೆದ್ದವರನು ಶೂರರನ್ನು –
ಒಳ್ಳೆಯದದರಿಂದ ಕಡೆಗಾದುದೇನಜ್ಜ?
ಎಂದನು ಪುಟ್ಟ ಮೊಮ್ಮಗನು.
ಅದು ನಾನು ಬಲ್ಲೆನೆ? ಯಾರನೆ ಕೇಳದು
ಲೋಕಪ್ರಸಿದ್ದಿಯ ಜಯವೆಂಬರೆಂದ.
ಈ ಯುದ್ಧದಲ್ಲಿ ಯುದ್ಧ ಗೆದ್ದ ಶೂರರನ್ನು, ಗೆದ್ದವರನ್ನು ಎಲ್ಲರೂ ಹೊಗಳಿದರು. ಅದು ಒಳ್ಳೆಯದೆ, ಆದರೆ ಅದರಿಂದ ನಂತರ ಆದುದೇನು? ಎಂದು ಮೊಮ್ಮಗನು ತನ್ನ ಅಜ್ಜನ ಬಳಿ ಕೇಳಿದನು. ಅದಕ್ಕೆ ಅಜ್ಜ ಅದು ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದ. ಇದರ ಬಗೆಗೆ ಯಾರ ಬಳಿ ಕೇಳಿದರು ಲೋಕ ಪ್ರಸಿದ್ಧಿಯ ಯುದ್ಧ ಎಂದಷ್ಟೇ ಹೇಳಿದರು. ಅದು ಬಿಟ್ಟು ಏತಕ್ಕೆ ಈ ಯುದ್ಧವಾಯಿತು ಎಂಬುದರ ಬಗೆಗೆ ಯಾರು ಕೂಡ ಹೇಳಿಲ್ಲ ಎಂದನು.
ಈ ಪದ್ಯದ ಮೂಲಕ ಯುದ್ಧ ಎಂಬುದು ನಾಶವೇ ಹೊರತು ಯಾವುದೇ ಪ್ರಯೋಜನವಿಲ್ಲ ಒಬ್ಬರ ಹಿತಾಸಕ್ತಿಗಾಗಿ ಎಲ್ಲರನ್ನು ಸಂಹರಿಸುವ ಪ್ರವೃತ್ತಿ ಇದು ದೇಶದ ಮಾನವನಲ್ಲಿ ಸಮಾನತೆ, ಶಾಂತಿ ಮೂಡಬೇಕು. ಇದನ್ನು ನಮ್ಮ ಯುವ ಜನಾಂಗಕ್ಕೆ ತಿಳಿಸಬೇಕಾಗಿದೆ.

Pingback: varu ruju madidanu% - rvwritting