Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU – Summary

ಭೀಮಾಲಾಪ Bheemaalapa
ಭೀಮಾಲಾಪ Bheemaalapa

ಕವಿ-ಕಾವ್ಯ ಪರಿಚಯ: ಜಿ.ಎಸ್.ಶಿವರುದ್ರಪ್ಪ

ಜಿ.ಎಸ್.ಶಿವರುದ್ರಪ್ಪ. G. S Shivarudrappa
ಜಿ.ಎಸ್.ಶಿವರುದ್ರಪ್ಪ. G. S Shivarudrappa

ಜಿ.ಎಸ್.ಎಸ್. ಎಂದೇ ಪ್ರಸಿದ್ದರಾದ ಜಿ.ಎಸ್.ಶಿವರುದ್ರಪ್ಪನವರು ಹುಟ್ಟಿದ ಊರು ಶಿವಮೊಗ್ಗ ಜಿಲ್ಲೆಯ ಈಸೂರು. ೨೦೦೯ ರಲ್ಲಿ ರಾಷ್ಟ್ರ ಕವಿಯಾಗಿ ಗೌರವಿಸಲ್ಪಟ್ಟರು. ಸಮನ್ವಯ ಕವಿಯಾದ ಇವರು ‘ಸಾಮಗಾನ’, ‘ಚೆಲವು ಒಲವು’. ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಕಾರ್ತೀಕ’, ‘ತೆರೆದ ದಾರಿ’ ಮುಂತಾದ ಕವನ ಸಂಕಲನಗಳನ್ನು ರಚಿಸಿದ್ದಾರೆ.

‘ಪರಿಶೀಲನ’ ‘ಗತಿಬಿಂಬ’ ‘ವಿಮರ್ಶೆಯ ಪೂರ್ವ ಪಶ್ಚಿಮ’ ‘ಸೌಂದರ್ಯ ಸಮೀಕ್ಷೆ’ ‘ಕಾವ್ಯಾರ್ಥ ಚಿಂತನ’ ಇವರ ಪ್ರಮುಖ ಸಾಹಿತ್ಯ ವಿಮರ್ಶೆಯ ಗ್ರಂಥಗಳು. ‘ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು’ ಪ್ರಮುಖ ಪ್ರವಾಸ ಗ್ರಂಥ. ‘ಕಾವ್ಯಾರ್ಥ ಚಿಂತನ’ ಗ್ರಂಥಕ್ಕೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

Bheemaalapa ಭೀಮಾಲಾಪ

watch ಭೀಮಾಲಾಪ ಪದ್ಯದ ಸಾರಾಂಶದ ವಿಡಿಯೋ – Video about Bheemalapa https://youtu.be/iGp-pgxKknkpoem

ಭೀಮಾಲಾಪ  ಕವಿತೆಯನ್ನು ಜಿ.ಎಸ್. ಶಿವರುದ್ರಪ್ಪನವರು ಬರೆದಿರುವ ‘ಗೋಡೆ’ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.  ಪ್ರಸ್ತುತ ಕವಿತೆಯಲ್ಲಿ ಭೀಮನು ಅಜ್ಞಾತವಾಸದ ಸಂದರ್ಭದಲ್ಲಿ ತಾವುಗಳು ಅನುಭವಿಸುತ್ತಿದ್ದ ಕಷ್ಟ, ನೋವುಗಳು, ಅವನ ಚಡಪಡಿಕೆ, ವಿಷಾಧಗಳನ್ನು ಚಿತ್ರಿಸುವ ಜೊತೆಗೆ ಮಹಾಭಾರತದ ಘಟನೆಗಳನ್ನು ಸಿಂಹಾವಲೋಕನ ಮಾಡುವ ಕವಿತೆಯಾಗಿಯೂ ಭೀಮಾಲಾಪವನ್ನು ನೋಡಬಹುದಾಗಿದೆ. 

ಪ್ರಜ್ಞಾವಂತ, ಬುದ್ಧಿವಂತ, ಸತ್ವಶಾಲಿ ವ್ಯಕ್ತಿ ಅನುಭವಿಸುವ ಅಸಹಾಯಕತೆಯನ್ನು ಆಧುನಿಕ ಮನುಷ್ಯ ಅನುಭವಿಸುವ ಸಂಗತಿಗಳನ್ನು ಒಳಗೊಂಡಿರುವ ಅಂಶವನ್ನು ಕವನ ಚಿತ್ರಿಸುತ್ತದೆ.ಇಲ್ಲಿ ಭೀಮ ಸ್ವಗತದ ರೀತಿಯಲ್ಲಿ ಹೇಳಿಕೊಳ್ಳುತ್ತಾ ಯೋಚಿಸುತ್ತಿದ್ದಾನೆ. ಪಗಡೆಯಾಟದ ನಂತರ ಆದ ಒಪ್ಪಂಧದಂತೆ ಪಾಂಡವರು ವನವಾಸ ಮುಗಿಸಿ ಅಜ್ಞಾತವಾಸಕ್ಕೆ ವಿರಾಟರಾಯನ ಅರಮನೆಯನ್ನು ಆಯ್ದುಕೊಂಡು ಒಬ್ಬೊಬ್ಬರು ಒಂದೊಂದು ವೇಷವನ್ನು ಧರಿಸಿ ಅರಮನೆಯನ್ನು ಸೇರಿದ್ದಾರೆ. ಸೇರಿದ ನಂತರ ನಮ್ಮ ಸ್ಥಿತಿಗತಿಯ ಬಗೆಗೆ ಭೀಮನೇ ಯೋಚಿಸುತ್ತಿದ್ದಾನೆ. 

ಸೀರೆ ಉಟ್ಟು ಬಳೆತೊಟ್ಟು ಕಾಲಿಗೆ

ಗೆಜ್ಜೆ ಕಟ್ಟಿದ್ದಾನೆ ಒಬ್ಬ;

ಇನ್ನೊಬ್ಬ ಕಾವಿ ಉಟ್ಟು ಮೂಲೆಗೆ ಕೂತಿದ್ದಾನೆ

ದನದ ಕೊಟ್ಟಿಗೆಯಲ್ಲಿ ಒಬ್ಬ, ಕುದುರೆ ಲಾಯದಲಿ

ಮತ್ತೊಬ್ಬ.

ಮಹಾಭಾರತದಲ್ಲಿ ಪರಾಕ್ರಮಿಯಾದ, ಶ್ರೇಷ್ಠ ಬಿಲ್ವಿದ್ಯಾಗಾರನಾದ ಅರ್ಜುನ ಇಲ್ಲಿ ಕೈಗೆ ಬಳೆತೊಟ್ಟು, ಸೀರೆಯುಟ್ಟು, ಕಾಲಿಗೆ ಗೆಜ್ಜೆ ಕಟ್ಟಿ ಬೃಹನ್ನಳೆ ಎಂಬ ಹೆಸರಿಟ್ಟುಕೊಂಡಿದ್ದಾನೆ. ಅಣ್ಣನಾದ ಧರ್ಮರಾಯ ‘ಕಂಕ’ ಎಂಬ ಹೆಸರಿನಿಂದ ಸನ್ಯಾಸಿಯಾಗಿ ಮೂಲೆ ಸೇರಿದ್ದಾನೆ. ಹಾಗೆಯೇ ನಕುಲ, ಸಹದೇವರಿಬ್ಬರು ಗೋಪಾಲಕ ಮತ್ತು ಅಶ್ವ ಪಾಲಕರಾಗಿದ್ದಾರೆ.

ಇದ್ದಾಳೆ ಇವಳು ಅವರಿವರ ತಲೆಯ

ಹೇನು ಹೆಕ್ಕುತ್ತಾ

ಆಗಾಗ ನಮ್ಮನ್ನೂ ಕುಕ್ಕುತ್ತಾ

ನಾನೂ ಇದ್ದೇನೆ ಅಡುಗೆ ಮನೆಯಲ್ಲಿ

ಉರಿವ ಸೌದೆಗಳ ಜೊತೆಗೆ

ಪಾತ್ರೆಗಳಲ್ಲಿ ಕೊತಕೊತ ಕುದಿದು

ಹಳೆಯ ನೆನಪುಗಳನ್ನು ರುಬ್ಬುತ್ತಾ.

ಮಹಾರಾಣಿಯಾಗಿ ಮೆರೆಯಬೇಕಿದ್ದ ದ್ರೌಪದಿ, ಸೈರಂಧ್ರಿ ಎಂಬ ಹೆಸರಿನೊಂದಿಗೆ ವಿರಾಟರಾಯನ ರಾಣಿಯ ಸೇವಕಿಯಾಗಿ, ಪರಿಚಾರಕಿಯಾಗಿ ಕೆಲಸ ಮಾಡುತ್ತಾ ತನಗೆ ಬಂದ ಸಮಸ್ಯೆಗಳನ್ನು ನಮ್ಮ ಬಳಿ ಹೇಳುತ್ತಾ ನಿವಾರಿಸಲು ಆಗದಿದ್ದಾಗ ನಮ್ಮನ್ನು ಹಿಯಾಳಿಸುತ್ತಾ ಕುಕ್ಕುತ್ತಿದ್ದಾಳೆ. ಇನ್ನು ನಾನು ವಲಲ ಎಂಬ ಹೆಸರಿನಲ್ಲಿ ಅಡಿಗೆ ಭಟ್ಟನಾಗಿ ಕೆಲಸ ಮಾಡುತ್ತಾ, ಪಾತ್ರೆಗಳಲಿ ಹೇಗೆ ಬಿಸಿಯಾಗಿ ಪದಾರ್ಥಗಳು ಕುದಿಯುತ್ತಿದ್ದವೋ ಹಾಗೆಯೇ ನಮ್ಮ ನೆನಪುಗಳು ನಮ್ಮನ್ನು ಕೊತ ಕೊತ ಕುದಿಸುತ್ತಿವೆ.

See the watch , it is best match to men hands: https://amzn.to/3Z5qeGo

ಕಣ್ಣೆದುರು ತೇಲಿ ಬರುತ್ತವೆ;

ಕಂಡದ್ದು ಕಲಿತದ್ದು; ಬೆಂಕಿಗೆ ಬಿದ್ದು ಪಾರಾದದ್ದು

ಪಗಡೆ ದಾಳದ ಜೊತೆಗೆ ಉರುಳಿ ಬಿದ್ದದ್ದು ಬಿಚ್ಚಿದ

ಜಡೆಯ ನೆರಳಿನ ಕೆಳಗೆ ಭುಸುಗುಟ್ಟಿ ನರಳಿದ್ದು

ಕಾಡುಪಾಲಾಗಿ ಅಲೆದದ್ದು

ನೋಡಿದ್ದು, ಗುರುವಿನಿಂದ ಕಲಿತ ವಿದ್ಯೆ, ಅರಗಿನ ಮನೆಗಡ ಬೆಂಕಿ ಬಿದ್ದದ್ದು, ಪಗಡೆಯಾಟವನ್ನು ಆಡಿ ಅದರಿಂದ ಎಲ್ಲವನ್ನು ಕಳೆದುಕೊಂಡು ಸೋತಿದ್ದು, ಹೆಂಡತಿ ದ್ರೌಪದಿ ಆದ ಅವಮಾನ ಅವಳ ಜಡೆಯ ಅಡಿಯಲ್ಲಿ ಶೂರನಾಗಿದ್ದರೂ, ವೀರಾವೇಶವನ್ನು ಪ್ರದರ್ಶಿಸಿದರು ಅಸಹಾಯಕನಾಗಬೇಕಾಯ್ತು, ಆಶ್ವಾಸನೆಯಂತೆ ಕಾಡುಪಾಲಾಗಿ ಅಲೆಯಬೇಕಾಯ್ತು,

ನಿಟ್ಟುಸಿರಲ್ಲಿ ಪಟಬಿಚ್ಚಿ ತೇಲುತ್ತವೆ; ಊರುಗಳು

ಮಹಾರಣ್ಯಗಳು ಋಷಿಗಳು ರಾಕ್ಷಸರು

ಬೆಳಗು ಬೈಗುಗಳು ಇನ್ನೂ ಏನೇನೋ

ಸುರುಳಿ ಬಿಚ್ಚುತ್ತವೆ

ಜೀವ ಹಿಂಡುತ್ತವೆ

ಅಲ್ಲಿ ಊರಾಚೆ ಮಸಣದಲ್ಲಿ

ಇದ್ದ ಪೌರುಷವನ್ನು ದುಂಡಗೆ ಸುತ್ತಿ

ಹೆಣವಾಗಿ ಮಲಗಿಸಿದ್ದೇವೆ ಮರದ

ಕೊಂಬೆಯ ಮೇಲೆ.

ದುಃಖದಲ್ಲಿ ಮತ್ತೆ ಮತ್ತೆವಾವರ ವನವಾಸದ ಸಂದರ್ಭದಲದಲಿ ಅಲೆದ ದೊಡ್ಡ ದೊಡ್ಡ ಊರುಗಳು, ಅರಣ್ಯಗಳು, ಅರಣ್ಯಗಳಲ್ಲಿ ಸಂಧಿಸಿದ ಋಷಿ ಮುನಿಗಳು, ನಮಗೆ ಎದುರಾದ ರಾಕ್ಷಸರು, ರಾತ್ರಿ-ಹಗಲುಗಳನ್ನು ಕಳೆದಿದ್ದು, ಹೇಗಿರಬೇಕಾದವರು ಹೀಗಾಗಿದ್ದೇವಲ್ಲ ಎಂದು ತಮ್ಮ ಹಳೆಯ ನೆನಪುಗಳು ಮತ್ತೆ ಮತ್ತೆ ಸುರುಳಿ ಬಿಚ್ಚಿಕೊಳ್ಳುವಂತೆ ಬಂದು ಜೀವ ಹಿಂಡುತ್ತಿವೆ. ವಿರಾಟರಾಯನ ಆಸ್ಥಾನಕ್ಕೆ ಬರುವಾಗ ನಮ್ಮ ಪೌರುಷವನ್ನು(ಶಸ್ತ್ರಾಸ್ತ್ರ) ಯಾವುದೋ ಊರಾಚೆಯ ಮಸಣದಲ್ಲಿರುವ ಮರದ ಕೊಂಬೆಯ ಮೇಲೆ ಮಲಗಿಸಿ ಬಂದಿದ್ದೇವೆ.

Also read this; Kattuvevu Navu ಕಟ್ಟುವೆವು ನಾವು: this link include your Kattavevu nadu Summary and youtube video also https://rvwritting.com/kattuvevu-navu/

ನೋಡುತ್ತಿದ್ದೇನೆ ಸುತ್ತಲೂ ಎಂತೆಂಥವೋ

ವಿಜೃಂಭಿಸಿ ಮೀಸೆ ತಿರುವುತ್ತವೆ

ಏರಬಾರದ ಕಡೆಗೆ ಏರಿ ಇಳಿಯಬಾರದ ಕಡೆಗೆ

ಇಳಿದು ಕೆಡಿಸಿ ಹೊಲಸೆಬ್ಬಿಸಿವೆ

ಭೀಮನ ಪರಾಕ್ರಮದ ಮುಂದೆ ವಿರಾಟರಾಯನ ಆಸ್ಥಾನದಲ್ಲಿದ್ದವರು ಅವನಿಗೆ ಏನೇನೂ ಅಲ್ಲ. ಆದರೂ ಪೌರುಷ/ಪರಾಕ್ರಮ ತೋರಲು ಮುಂದಾಗುತ್ತಿದ್ದಾರೆ. ಜೊತೆಗೆ ತಾವು ರಾಜರು, ಪರಾಕ್ರಮಿಗಳು ಎಂದಾಗಿದ್ದರೂ ಹೀನ ಕೆಲಸಕ್ಕೆ ಕೈ ಹಾಕಿ ಅರಮನೆಯ ಅಥವಾ ತಮ್ಮ ಘನತೆಯನ್ನೇ ಕೆಡಿಸಿಕೊಳ್ಳುತ್ತಿದ್ದಾರೆ.

ಗೆರೆದಾಟಬಾರದ ನಾನು ಕಾಯುತ್ತಿದ್ದೇನೆ.

ಉರಿವ ಸೌದೆಗಳ ಜೊತೆಗೆ

ಪಾತ್ರೆಗಳಲ್ಲಿ ಕೊತಕೊತ ಕುದಿದು ಕಾಯುತ್ತಿದ್ದೇನೆ.

ಅಣ್ಣನ ಆಜ್ಞೆಯಂತೆ ನಾನು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇನೆ. ಹಾಗೆಯೇ ಪಾತ್ರೆಗಳು ಬೆಂಕಿಯ ಉರಿಗೆ ಸಿಕ್ಕಿ ಹೇಗೆ ಕೊತ ಕೊತ ಕುದಿಯುತ್ತಿವೆಯೋ ಹಾಗೆಯೇ ನಾನು ಕೊತ ಕೊತ ಕುದಿಯುತ್ತಾ ನಮ್ಮ ಸಮಯ ಬರಲಿ ಎಂದು ಕಾಯುತ್ತಿದ್ದೇನೆ. 

ಕವಿತೆಯ ಮೂಲಕ ಸಾರುವ ಸಂದೇಶವೇನೆಂದರೆ ನಾವು ಎಷ್ಟೇ ಸತ್ವಶಾಲಿಗಳಾದರೂ, ಪರಾಕ್ರಮಿಗಳಾಗಿದ್ದರೂ ನಾವು ಅಸಹಾಯಕ ಸ್ಥಿತಿಗೆ ತಲುಪಿಬಿಡುತ್ತೇವೆ. ಅಂತಹ ಪರಿಸ್ಥಿಗಳಿಗೆ ಎದುರಾಗದೆ ಬೇರೆ ಬೇರೆ ಅವಘಡಗಳನ್ನು ಮಾಡಿಕೊಳ್ಳದೆ ಇದ್ದರೆ ನೀವು ನಿಮ್ಮ ಬದುಕಿನಲ್ಲಿ ಯಶ ಕಾಣುತ್ತೀರ ಎಂದು ಹೇಳಬಹುದಾಗಿದೆ‌.

Bheema
Bheema

1 thought on “Bheemaalapa ಭೀಮಾಲಾಪ ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ BCU – Summary”

  1. Pingback: Huttari Hadu - ಹುತ್ತರಿ ಹಾಡು ಪದ್ಯದ ಭಾವಾರ್ಥ - rvwrittingHuttari Hadu

Leave a Comment

Your email address will not be published. Required fields are marked *

Scroll to Top