Chola Dynasty ಚೋಳ ಸಾಮ್ರಾಜ್ಯವು ಭಾರತದ ಪ್ರಾಚೀನ ಮನೆತನಗಳಲ್ಲಿ ಒಂದಾಗಿ ಪಲ್ಲವರ ನಂತರ ಆಡಳಿತಕ್ಕೆ ಬಂದವರು. 9 ಮತ್ತು 13ನೇ ಶತಮಾನದವರೆಗೆ ತಮ್ಮ ಆಳ್ವಿಕೆ ನಡೆಸಿದವರು ಇವರ ರಾಜಧಾನಿ ಕಾವೇರಿ ನದಿ ದಂಡೆಯ ಮೇಲಿನ ಉರೈಯೂರು.
ಚೋಳ ಸಾಮ್ರಾಜ್ಯ – Chola Dynasty ಇವರ ಮೂಲ
* ಅಶೋಕನ ಶಾಸನದ ಪ್ರಕಾರ ಮೌರ್ಯ ಸಾಮ್ರಾಜ್ಯದ ದಕ್ಷಿಣದಲ್ಲಿ ಇವರು ಆಳ್ವಿಕೆ ನಡೆಸುತ್ತಿದ್ದರು.
* ದಿ ಪೆರಿಪ್ಲಸ್ ಆಫ್ ಎರಿತ್ರಿಯನ್ ಸಿ ನಲ್ಲಿ ಉರೈಯೂರಿನ ಉಲ್ಲೇಖವಿದೆ.
*ಸಾಹಿತ್ಯಾಧಾರಗಳು
* ಸಂಗಮ್ ಸಾಹಿತ್ಯದಲ್ಲಿ ಅನೇಕ ಚೋಳ ರಾಜರ ಹೆಸರುಗಳ ಉಲ್ಲೇಖವಿದೆ.
* ಬುದ ಮಿಶ್ರರ ವೀರಸೋಲಿಯಂ, ಜಯಗೊಂಡರನ – ಕಲಿಂಗತ್ತುಪ್ಪರಣಿ ಕೃತಿಗಳಲ್ಲಿ ಚೋಳರ ವಂಶಾವಳಿ ಮತ್ತು ದಿಗ್ವಿಜಯಗಳನ್ನು ತಿಳಿಸಲಾಗಿದೆ.
* ಉತ್ತರ ಮೆರೂರು ಶಾಸನ ಅವರ ಗ್ರಾಮ ಆಡಳಿತದ ಬಗ್ಗೆ ತಿಳಿಸುತ್ತದೆ.
ಚೋಳ ಸಾಮ್ರಾಜ್ಯದ ರಾಜಕೀಯ ಇತಿಹಾಸ
* ಇಳೈಯಾನ್ ಚೋಳ
– ಸಂಗಂ ಕಾಲದ ಚೋಳ ಸಂತತಿಯ ಸ್ಥಾಪಕನಾಗಿದ್ದಾನೆ.
* ಇವನ ರಾಜಧಾನಿ ಉರೈಯೂರು.
*ಕರಿಕಾಲ ಚೋಳ
* ಚೋಳ ಸಾಮ್ರಾಜ್ಯದಲ್ಲಿ ಉಂಟಾಗಿದ್ದ ಅಶಾಂತಿಗಳನ್ನು ಶಮನ ಮಾಡಿ ಅದನ್ನು ಸುವ್ಯವಸ್ಥೆಗೆ ತಂದನು.
* ಜೇರ ದೊರೆಯಾದ ರಾಜ ಪೆರುಂ ಚೇರಲಾದನ್ ಸೋಲಿಸಿದನು. ನಂತರ ಪಾಂಡ್ಯರನ್ನು ಸೋಲಿಸಿ ತಮಿಳುನಾಡಿನಾದ್ಯಂತ ತನ್ನ ಪ್ರಭುತ್ವ ಸ್ಥಾಪಿಸಿದ.
* ತನ್ನ ನೌಕಾಪಡೆಯ ಮೂಲಕ ಸಿಂಳದ ದೇಶದ ವಶ.
* ಶಿಲಪ್ಪದಿಗಾರಂನಲ್ಲಿ ಹಿಮಾಲಯದವರೆಗೂ ದಂಡಯಾತ್ರೆ ಮಾಡಿದ್ದನೆಂದು ಉಲ್ಲೇಖಿಸಿದೆ.
* ಉರೈಯೂರು ರಾಜಧಾನಿಯಾಗಿತ್ತು. ಕಾವೇರಿ ಪಟ್ಟಣ ಎರಡನೇ ರಾಜಧಾನಿಯನ್ನಾಗಿ ಮಾಡಿ ಕೊಂಡಿದ್ದನು, ಇದು ಪ್ರಸಿದ್ಧ ವ್ಯಾಪಾರ ಕೇಂದ್ರವೂ ಆಗಿತ್ತು.
* ಕಾವೇರಿ ನದಿಗೆ ಕಲ್ಹೆಣೆ ಅಣೆಕಟ್ಟು ನಿರ್ಮಾಣ. ಇದು ಭಾರತದಲ್ಲಿ ಮೊದಲಿಗೆ ನಿರ್ಮಿತವಾದ ನೀರಾವರಿ ಅಣೆಕಟ್ಟು.
* ಇವನ ನಂತರ ಸಂಗಮ್ ಕಾಲದ ಕೊನೆಯ ಅರಸ ಸೆಂಗಣ್ಣನ್.
ವಿಜಯಾಲಚೋಳ
* ಪಲ್ಲವರ ಮೂರು ಶತಮಾನಗಳ ಆಳ್ವಿಕೆಯನ್ನು ಕೊನೆಗಾಣಿಸಿದ ಮೇಲೆ ಮತ್ತೆ ಇವನಿಂದ ಚೋಳ ಸಾಮ್ರಾಜ್ಯ ಸ್ಥಾಪನೆ.
* ಬಿರುದುಗಳು – ವರಕೇಸರಿ, ರಾಜಕೇಸರಿ.
* ಇವನ ಕಾಲದಲ್ಲಿ ತಂಜಾವೂರು ರಾಜಧಾನಿಯಾಯಿತು.
ಒಂದನೇ ಆದಿತ್ಯ
* ತಂದೆಯ ಜೊತೆ ಪಲ್ಲವರ ವಿರುದ್ಧ ಹೋರಾಟದಲ್ಲಿ ಭಾಗಿಯಾಗುತ್ತಿದ್ದನು
* ಪಾಂಡ್ಯ ಅರಸ ವೀರನಾರಾಯಣನನ್ನು ಸೋಲಿಸಿ ಕೊಂಗುದೇಶವನ್ನು ವಶಪಡಿಸಿಕೊಂಡನು.
* ಕೈವಾರದ ಗಂಗರನ್ನು ಸೋಲಿಸಿದ
* ಈತನು ಶಿವ ಭಕ್ತನಾಗಿದ್ದನು
This Geography lesson you all read for your coming competitive exams:https://rvwritting.com/geography-solar-system-sun-2/
ಒಂದನೇ ಪರಾಂತಕ ಚೋಳ
* ಪಾಂಡ್ಯರ ರಾಜನಾದ ಮಾರಸಿಂಹನನ್ನು ಸೋಲಿಸುವ ಮೂಲಕ ಪಾಂಡ್ಯರ ರಾಜಧಾನಿ ‘ಮಧುರೈ’ ವಶ ಇದರಿಂದ ‘ಮಧುರೈಕೊಂಡ’ ಎಂಬ ಬಿರುದನ್ನು ಪಡೆದುಕೊಂಡನು.
* ಇದೇ ಪಾಂಡ್ಯರಾಜ ಸಿಂಹಳ ರಾಜನ ಜೊತೆ ಒಕ್ಕೂಟ ಸೇನೆ ನಿರ್ಮಿಸಿಕೊಂಡು ಮತ್ತೆ ಯುದ್ಧಕ್ಕೆ ಬಂದು ಸೋತನು. ಇದರಿಂದ ಮಾಕ್ಕೊಂಡ ಎಂಬ ಬಿರುದನ್ನು ಪಡೆದುಕೊಂಡನು.
* ರಾಷ್ಟ್ರಕೂಟರ 2ನೇ ಕೃಷ್ಣನನ್ನು ಸೋಲಿಸಿ, ತಮ್ಮ ಸಾಮ್ರಾಜ್ಯಗಳಿಂದ ದೂರವಿರುವಂತೆ ಮಾಡಿದ. ಇಲ್ಲಿಂದ ಚೋಳರು ಮತ್ತು ರಾಷ್ಟ್ರಕೂಟರ ಹಗೆತನ ಏರ್ಪಟ್ಟಿತು.
* ರಾಷ್ಟ್ರಕೂಟರು ಮತ್ತು ಗಂಗರ(ಇಮ್ಮಡಿ ಭೂತುಗ) ನಡುವೆ ವೈವಾಹಿಕ ಸಂಬಂಧವಾಗಿ,ನಂತರ ಒಟ್ಟಾಗಿ ಚೋಳರನ್ನು ಮೂರನೇ ಕೃಷ್ಣ ಎದುರಿಸಿ ಅವರನ್ನು ಸೋಲಿಸಿದ. ಇದರಿಂದ ‘ತಂಜಾವೂರುಕೊಂಡ’ ಎಂಬ ಬಿರುದನ್ನು ಪಡೆದುಕೊಂಡನು.
* ಇವನು ಶೈವ ಭಕ್ತರಾಗಿದ್ದನು.
* ಉತ್ತರ ಮೆರೂರು ಶಾಸನ ಇವನು ಹಾಕಿಸಿದ್ದು(ಸ್ವಯಂ ಆಡಳಿತದ ಬಗೆಗೆ).
ಒಂದನೇ ರಾಜರಾಜ ಚೋಳ(955 – 1015)
* ಚೋಳ ರಾಜರಲ್ಲಿ ಅತ್ಯಂತ ಸಮರ್ಥನಾದವನು
* ಇವನ ಕಾಲದಲ್ಲಿ ಚೋಳ ಸಾಮ್ರಾಜ್ಯ ಸಣ್ಣ ಭಾಗವಾಗಿತ್ತು
* ರಾಜರಾಜನು ಚೇರ, ಪಾಂಡ್ಯ, ಸಿಂಹಳ, ಕೇರಳದ ಮೇಲೆ ದಂಡಯಾತ್ರೆ ಕೈಗೊಂಡು – ಪಾಂಡ್ಯರ ರಾಜನಾದ ಭುಜಂಗನನ್ನು ಸೋಲಿಸಿ ಮದುರೈಯನ್ನು ವಶಪಡಿಸಿಕೊಂಡು ಇವರ ಮೇಲೆ ಚೋಳರ ಸಾರ್ವಭೌಮತ್ವವನ್ನು ಸ್ಥಾಪಸಿದ. ಚೇರರ ಪ್ರಬಲ ನೌಕಾಪಡೆಯನ್ನು ಸೋಲಿಸಿ ಕೇರಳ ವಶ ಇದರಿಂದ ‘ಕಾನ್ದಳೂರ್ಶಾಲೈಕ್ಕಳಮರತ’ ಎಂಬ ಬಿರುದನ್ನು ಪಡೆದುಕೊಂಡ.
* ತನ್ನ ಮಗನ ಮೂಲಕ ಕೊಂಕಣ, ವೆಂಗಿ, ತುಳುವ ಮುಂತಾದ ಪ್ರದೇಶಗಳನ್ನು ವಶಪಡಿಸಿಕೊಂಡನು.
* ಸಿಂಹಳದ ಮೇಲೆ ದಂಡೆತ್ತಿ ಹೋಗಿ ಅಲ್ಲಿನ ರಾಜ 5ನೇ ಮಹಿಂದನನ್ನು ಸೋಲಿಸಿದ. ಅವನ ರಾಜಧಾನಿಯಾದ ಅನುರಾಧಾಪುರವನ್ನು ವಶಪಡಿಸಿಕೊಂಡು, ಹೊಸ ರಾಜಧಾನಿ ಪೊಲೆನ್ನಾರು ನಿರ್ಮಾಣ ಮಾಡಿದ, ಇದನ್ನು ನೋಡಿಕೊಳ್ಳಲು ಒಬ್ಬ ಅಧಿಕಾರಿಯನ್ನು ನೇಮಕ ಮಾಡಿದನು. ಇದರ ಜ್ಞಾಪಕಾರ್ಥವಾಗಿ ಶಿವ ದೇವಾಲಯವನ್ನು ನಿರ್ಮಿಸಿದ.
* ಉತ್ತರದ ಕಡೆ ಗಂಗರ ಗಂಗವಾಡಿ, ನೊಳಂಬವಾಡಿ, ತುಳುಗೈವಾಡಿಗಳನ್ನು ಗೆದ್ದ. ಗಂಗರ ರಾಜಧಾನಿಯಾದ ತಲಕಾಡಿಗೆ ರಾಜರಾಜಪುರ ಎಂದು ಹೆಸರಿಸಿದನು. ನಂತರ ರಾಜರಾಜ ಮತ್ತು ಇರಿವಬೆಡಂಗನ ನಡುವೆ ಸತತವಾದ ಯುದ್ಧಗಳು ಮುಂದುವರಿದಿದ್ದವು.
* ವೆಂಗಿಯಲ್ಲಿ ಕೀರ್ತಿವರ್ಮನ ಮಗನಾದ ವಿಮಲಾದಿತ್ಯನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಟ್ಟು, ವೆಂಗಿ ಮತ್ತು ಚೋಳರ ನಡುವೆ ಸ್ನೇಹ ಸಂಬಂಧ ಬೆಳೆಸಿದ.
* ಮಾಲ್ಡೀವ್ಸ್ ದ್ವೀಪಗಳ ಮೇಲೆ ದಂಡೆತ್ತಿ ಹೋಗಿ 12000 ದ್ವೀಪಗಳನ್ನು ವಶಪಡಿಸಿಕೊಂಡನು.
* ಇವನ ಬಿರುದುಗಳು – ಶಿವಪಾದ ಶೇಖರ, ಚೋಳೇಂದ್ರಸಿಂಹ, ಕೇರಳಾಂತಕ
* ಭೂಮಾಪನ ಕಾರ್ಯವನ್ನು ಕೈಗೊಂಡಿದ್ದ.
* ಶೈವ ಮತಾವಲಂಬಿಯಾಗಿದ್ದರಿಂದ ತಂಜಾವೂರಿನಲ್ಲಿ ಬೃಹದೇಶ್ವರ ದೇವಾಲಯವನ್ನು ನಿರ್ಮಿಸಿದನು.
ಒಂದನೇ ರಾಜೇಂದ್ರ ಚೋಳ(1012 – 1044)
* ತಂದೆಯಿಂದ ಈತನು ಪರಾಕ್ರಮಿಯಾಗಿದ್ದ.
* ಪಟ್ಟಕ್ಕೆ ಬಂದೊಡನೆ ಬನವಾಸಿ, ರಾಯಚೂರು ಮಾನ್ಯಖೆಟಾಗಳನ್ನು ಗೆದ್ದುಕೊಂಡನು.
* ಸಿಂಹಳದ ಪೂರ್ಣ ಭಾಗವನ್ನು 5ನೇ ಮಹೀಂದನನ್ನು ಸೋಲಿಸುವ ಮೂಲಕ ವಶಪಡಿಸಿಕೊಂಡನು.
* ಚೇರ, ಪಾಂಡ್ಯರ ಮೇಲೆ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿದನು.
* ವೆಂಗಿಯಲ್ಲಿ ಮತ್ತೊಮ್ಮೆ ಸಿಂಹಾಸನಕ್ಕೆ ಕಲಹ ವೇರ್ಪಟ್ಟಾಗ ನರೇಂದ್ರನನ್ನು ಕೂರಿಸಿ, ಅವನಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡುವ ಮೂಲಕ ಇದನ್ನು ವಿರೋಧಿಸಿದವರನ್ನು ಸೋಲಿಸಿದನು.
* ಉತ್ತರಕ್ಕೆ ದಂಡತ್ತಿ ಹೋಗಿ ಪಂಜು ಹಳ್ಳಿ, ಕಳಿಂಗ, ದಕ್ಷಿಣ ಕೋಸಲ, ಅಂಗ, ವಂಗ ಸೋಲಿಸಿ ಗಂಗೆಯವರೆಗೆ ಯಶಸ್ವಿ ದಂಡಯಾತ್ರೆ ಮಾಡಿದನು. ಇದರ ಜ್ಞಾಪಕಾರ್ಥಕವಾಗಿ ಗಂಗೈಕೊಂಡ ಚೋಳಪುರಂ ಎಂಬ ಬಿರುದು, ಅದೇ ಹೆಸರಿನಲ್ಲಿ ಹೊಸ ರಾಜಧಾನಿ ನಿರ್ಮಾಣ ಮಾಡಿದನು ಮತ್ತು ಒಂದು ಶಿವ ದೇವಾಲಯವನ್ನು ನಿರ್ಮಾಣ ಮಾಡಿದನು.
* ಆಗ್ನೇಯ ಏಷ್ಯಾದ ಕಡೆ ದಂಡತ್ತಿ ಹೋಗಿ ಅಲ್ಲಿ ಶೈಲೇಂದ್ರನನ್ನು ಸೋಲಿಸಿ, ಜಾವಾ, ಸುಮಾತ್ರ ಗಳನ್ನು ವಶಪಡಿಸಿಕೊಂಡನು.
* ಇವನ ಬಿರುದುಗಳು ಮುದಿಕೊಂಡಚೋಳ, ಗಂಗೈಕೊಂಡ ಚೋಳ, ಕೇದಾರಂಕೊಂಡ, ಪಂಡಿತಚೋಳ.
ಒಂದನೇ ರಾಜಾಧಿರಾಜ( 1044 – 54)
* ಇವರ ಕಾಲದಲ್ಲಿ ಮತ್ತೆ ಸಾಮಂತರಗಳು ಸ್ವತಂತ್ರರಾಗಲು ಅವಣಿಸಿದಾಗ ಮತ್ತೆ ಅವರನ್ನು ಅಧೀರನ್ನಾಗಿ ಮಾಡಿದನು.
* ಕಲ್ಯಾಣಿ ಚಾಲುಕ್ಯರ ಮೇಲೆ ದಂಡಕ್ಕೆ ಹೋದನು ಮೂರನೇ ಸೋಮೇಶ್ವರನನ್ನು ಸೋಲಿಸಿ ವೆಂಗಿಮಂಡಲ ಮೇಲೆ ಇವರ ಅಧಿಪತ್ಯವನ್ನು ಕೊನೆಗಾಣಿಸಿದ.
ವೀರರಾಜೇಂದ್ರ(1064 – 69)
* ಇವನು ಕಲ್ಯಾಣಿ ಚಾಲುಕ್ಯರ ಎರಡನೇ ಸೋಮೇಶ್ವರನ ಮೇಲೆ ವಿಜಯ ಸಾಧಿಸಿ ಚಾಳುಕ್ಯ ವಿಕ್ರಮಾದಿತ್ಯನಿಗೆ ಮಗಳನ್ನು ಕೊಟ್ಟು ಚಾಲುಕ್ಯ ಮತ್ತು ಚೋಳರ ನಡುವಿನ ಹಗೆತನವನ್ನು ನಿವಾರಿಸಿದ.
* ನಂತರ ಮತ್ತೊಂದು ಮೂಲದ ಚೋಳ ಸಂತತಿ ಅಸ್ತಿತ್ವಕ್ಕೆ ಬಂದಿತು
ಒಂದನೇ ಕುಲೋತ್ತುಂಗ(1070-1120)
* ಇವನು ಒಂದನೇ ರಾಜೇಂದ್ರನ ಮಗಳಾದ ಕುಂದವ್ವೆ, ವೆಂಗಿ ಚಾಲುಕ್ಯರ ವಿಮಲಾದಿತ್ಯರ ಮಗ
* ಸಿಂಹದ ರಾಜ ಸ್ವತಂತ್ರ ಘೋಷಿಸಿಕೊಂಡಿದ್ದ ಇಬ್ಬರ ನಡುವೆ ಶಾಂತಿ ಒಪ್ಪಂದವಾಗಿ ತನ್ನ ಮಗಳಾದ ಸೂರ್ಯವಳ್ಳಿಯನ್ನು ಕೊಟ್ಟು ವಿವಾಹ ಮಾಡಿದ.
* ವೆಂಗಿಯಲ್ಲಿ ರಾಜ ಪ್ರತಿನಿಧಿಯಾಗಿ ತನ್ನ ಮಗನನ್ನು ನೇಮಕ ಮಾಡಿದ.
* ಚೇರ, ಪಾಂಡ್ಯರ ಮೇಲೆ ಆಕ್ರಮಣ.
* ಕಳಿಂಗದ ಮೇಲೆ ಎರಡು ಬಾರಿ ದಂಡಯಾತ್ರೆ ಕೈಗೊಂಡಿದ್ದ
* ಇವನ ಕಾಲದಲ್ಲಿ ಚೋಳ ಸಾಮ್ರಾಜ್ಯ ವಿಸ್ತಾರತೆಯನ್ನು ಕಳೆದುಕೊಂಡಿತು ಏಕೆಂದರೆ ವಿಷ್ಣುವರ್ಧನ ಗಂಗವಾಡಿ, ಕೊಂಗನಾಡು, ನೊಳಂಬವಾಡಿಯನ್ನು ವಶಪಡಿಸಿಕೊಂಡ.
* ಇವನ ಕಾಲದಲ್ಲಿ ರಾಮಾನುಜಾಚಾರ್ಯರು ದ್ವಾರಸಮುದ್ರಕ್ಕೆ ಬಂದರು
* ಪ್ರಜೆಗಳ ಮೇಲಿದ್ದ ಹಲವು ತೆರಿಗೆಗಳನ್ನು ತೆಗೆದಿದ್ದಕ್ಕೆ ‘ ಸುಗಂಧವೃತ್ತ’ ಎಂಬ ಬಿರುದನ್ನು ಪಡೆದುಕೊಂಡನು.
* ಮೂರನೇ ರಾಜೇಂದ್ರನು ಚೋಳರ ಕೊನೆಯ ರಾಜನಾಗಿದ್ದಾನೆ.
Sony Camera: Visit the site in this given link –https://amzn.to/3UfYLiJ
ಚೋಳರ ಆಡಳಿತ
* ಇವರ ಆಡಳಿತ ವಿಕೇಂದ್ರೀಕರಣಕ್ಕೆ ಒಳಪಟ್ಟಿತ್ತು
* ರಾಜತ್ವ ವಂಶಪಾರಂಪರ್ಯವಾಗಿತ್ತು.
* ರಾಜನಾಗುವವನಿಗೆ ಶಿಕ್ಷಣ ಮತ್ತು ಅರ್ಹತೆಯನ್ನು ನಿಗದಿಪಡಿಸಲಾಗಿತ್ತು
* ರಾಜನ ಆಪ್ತ ಅಧಿಕಾರ ವರ್ಗ ಉದನಕುಟಂ ಎಂದು, ಇದು ರಾಜನಾಗ್ನೆಗಳನ್ನು ಕಾರ್ಯಗತಗೊಳಿಸುತ್ತಿತ್ತು.
* ಭೂ ಸೈನ್ಯ ಮತ್ತು ನೌಕಾಪಡೆಯನ್ನು ಹೊಂದಿದ್ದರು
ಪ್ರಾಂತೀಯ ಆಡಳಿತ
ಸಾಮ್ರಾಜ್ಯ
ಮಂಡಲಂ
ನಾಡು
ಒಳನಾಡು
ಕೊಟ್ರಂ – ಎಂದು ವಿಭಾಗಿಸಲಾಗಿತ್ತು.
ಆರ್ಥಿಕ ವ್ಯವಸ್ಥೆ ಮತ್ತು ವ್ಯಾಪಾರ
* ಭೂ ಕಂದಾಯ ರಾಜ್ಯದ ವರಮಾನವಾಗಿತ್ತು
* ಸುಂಕ, ವೃತ್ತಿತೆರಿಗೆ, ಉಪ್ಪಿನ ಮತ್ತು ನೀರಿನ ತೆರಿಗೆಯಗಳಿದ್ದವು.
* ಭೂ ಅಳತೆ ಮಾಡಿ ಭೂ ಫಲವತ್ತತೆ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು
* ವ್ಯಾಪಾರಿ ಕೇಂದ್ರಗಳು ಮಹಾಬಲಿಪುರಂ ಕಾವೇರಿ ಪಟ್ಟಣಂ ಶಾಲೆ ಮಾರ್ಗ ಮತ್ತು ಕೊರ್ಕೈ ಕ್ವಿಲಾನ್.
* ವ್ಯಾಪಾರಿವರ್ತಕ ಸಂಘಗಳು ಮಣಿ ಗ್ರಾಮಂ ವಾಲಂಜಿಯಾರ್ ನಗರಂ.
ಚೋಳರ ಸಾಮಾಜಿಕ ಜೀವನ
* ಚತುರ್ವರ್ಣಯ ಪದ್ಧತಿ ಆಧಾರದ ಮೇಲಿತ್ತು.
* ಅವಿಭಕ್ತ ಕುಟುಂಬ ಜಾರಿಯಲ್ಲಿತ್ತು
* ಬಾಲ್ಯ ವಿವಾಹ ಸತಿ ಸಹಗಮನ ರೂಢಿಯಲ್ಲಿತ್ತು
* ಗುಲಾಮಗಿರಿ ಸಾಮಾನ್ಯವಾಗಿತ್ತು
ಧರ್ಮ
* ಶೈವ ಮತ್ತು ವೈಷ್ಣವ ಧರ್ಮಗಳು ಪ್ರಚಲಿತದಲ್ಲಿದ್ದವು.
* ಶಿವನಾಯನ್ನರು ಮತ್ತು ಆಳ್ವಾರರು ಇದ್ದರು
* ಜೈನ ಮತ್ತು ಬೌದ್ಧ ಧರ್ಮವು ಇತ್ತು
ಕಲೆ ಮತ್ತು ವಾಸ್ತು ಶಿಲ್ಪ
* ಚೋಳರ ಕಲೆ ಎಂದೇ ಪ್ರಸಿದ್ಧಿಯಾಗಿದೆ
* ಆರಂಭದಲ್ಲಿ ಪಲ್ಲವರ ಶೈಲಿಯ ಅನುಕರಣೆ
* ಪಲ್ಲವರ ಕಾಲದಲ್ಲಿ ಗರ್ಭಗೃಹ ಮತ್ತು ಅಂತರಾಳಗಳ ಮೇಲೆ ವಿಮಾನ ಆದರೆ ಇವರ ಕಾಲದಲ್ಲಿ ಗರ್ಭಗುಡಿಗಳ ಮೇಲೆ ವಿಮಾನ ನಿರ್ಮಾಣವನ್ನು ಮಾಡಿದರು.
*ತಂಜಾವೂರಿನ ಬೃಹದೇಶ್ವರ
* ರಾಜ ರಾಜನ ಕಾಲದಲ್ಲಿ ನಿರ್ಮಾಣ 1009.
* 108 ಅಡಿ ಉದ್ದ ವಿಮಾನ 190 ಅಡಿ ಎತ್ತರ 13 ಅಂತಸ್ತುಗಳಿಂದ ಕೂಡಿದೆ.
* ಇದು ಭಾರತದ ಅತ್ಯಂತ ಎತ್ತರದ ವಿಮಾನವಾಗಿದೆ
* ಇದರಲ್ಲಿ ಅರ್ಧ ಮಂಟಪ ಮಹಾಮಂಟಪ ನಂದಿ ಮಂಟಪಗಳಿವೆ
* ಗರ್ಭಗುಡಿಯಲ್ಲಿ ಶಿವಲಿಂಗ ಎದುರಿಗೆ ನಂದಿಯ ಬೃಹತ್ ವಿಗ್ರಹವಿದೆ.
* ಭಾರತದ ದೇವಾಲಯದಲ್ಲಿ ಅತ್ಯಂತ ವಿಸ್ತಾರ ಮತ್ತು ಅತ್ಯಂತ ಎತ್ತರವಾದ ದೇವಾಲಯವಾಗಿದೆ
*ಗಂಗೈಕೊಂಡ ಚೋಳಾಪುರ
* ೧೩ರಲ್ಲಿ ರಾಜೇಂದ್ರ ಚೋಳ ನಿರ್ಮಿಸಿದ
ಸಾಹಿತ್ಯ
* ತಮಿಳು ಭಾಷೆ ಬೆಳವಣಿಗೆ ಪಡೆಯಿತು
* ಕಂಬ ಕವಿಯ ರಾಮಾಯಣ
* ಜಯಗೊಂಡರ್ – ಕಳಿಂಗತ್ತು ಪೆಪರಣಿಗಳ್(ಒಂದನೇ ಕುಲೋತ್ತುಂಗನ ೨ನೇ ಕಳಿಂಗ ಯುದ್ಧದ ವರ್ಣನೆ)
* ಸೆಕ್ಕಿಲಾರ – ಪೆರಿಯಪುರಾಣ(ಇದರಲ್ಲಿ 63 ಪುರಾತನ ಶೈವ ಸಂತರ ಜೀವನ).
Pingback: Hoysalaru - ಹೊಯ್ಸಳರು - One of the major dynasty of Karnataka For ur upcoming exams - 8 - rvwritting