Covid ರೂಪಾಂತರಿ JN.1

JN.1 Mutated Covid Virus
JN.1

Covid – 19 mutated virus JN.1.

ವಿಶ್ವವನ್ನು ಮೊದಲ ಬಾರಿಗೆ shut downನನ್ನು Covid -19 ಎಂಬ ವೈರಾಣು ಮಾಡಿತು. ಅದರಿಂದ ಇಡೀ ಪ್ರಪಂಚ ಸ್ಥಬ್ಧವಾಗಿ ಮನೆಯೊಳಗೆ ಕೂರುವಂತೆ ಮಾಡಿತು. ಇದಕ್ಕಾಗಿ ಜಗತ್ತು ಹೊಸ ಹೊಸ ಲಸಿಕಾ ಪ್ರಯೋಗಗಳನ್ನು ಮಾಡಿ ಒಂದು ಹಂತಕ್ಕೆ SARS covid – 19ನ ತಹಬದಿಗೆ ತರಲು ಜಗತ್ತಿಗೆ ಸಾಧ್ಯವಾಯಿತು. ಇದರಿಂದ ಜಗತ್ತು ಒಂದು ಹಂತದ ನೆಮ್ಮದಿ ಕಂಡು ಮತ್ತೊಂದು ದಾರಿಗೆ ಹೊರಳಲು ಮುಂದಾದಾಗ ಎದುರಾದದ್ದು  Covid-19 ಉಪತಳಿ ಡೆಲ್ಟಾ, ಒಮಿಕ್ರಾನ್ – ಬಿ.ಎ.2.86. ಇದು ಮತ್ತೊಮ್ಮೆ ಇಡೀ ಪ್ರಪಂಚಕ್ಕೆ ಭಯ ಹುಟ್ಟಿಸಿ ಸುಮ್ಮನಾಯಿತು. ಈಗ ಇದರ ಉಪತಳಿ ಜನ್ಮ ಪಡೆದಿದೆ. ಅದೇ Covid – 19 mutated virus JN.1

JN.1 ಭಾರತದಲ್ಲಿ ಮೊದಲ ಬಾರಿಗೆ ಡಿಸೆಂಬರ್ 6 ರಂದು ಕೇರಳ ರಾಜ್ಯದಲ್ಲಿ ಒಬ್ಬ ವೃದ್ಧೆಯಲ್ಲಿ ಕಂಡುಬಂದುದು ಮೊದಲ ಪ್ರಕರಣವಾಗಿ ಭಾರತದಲ್ಲಿ ದಾಖಲಾಗಿದೆ. ಒಮಿಕ್ರಾನ್ ಉಪತಳಿ ಅಥವಾ ರೂಪಾಂತರಿಯನ್ನು ಮೊದಲು ಲಕ್ಸಂಬರ್ಗನಲ್ಲಿ ಗುರುತಿಸಲಾಗಿದೆ. ಹಾಗೆಯೇ ಅಮೇರಿಕಾದಲ್ಲೂ ಕಂಡುಬಂದಿದೆ. ನಂತರ ಸಿಂಗಾಪುರದಲ್ಲೂ ತೀವ್ರಗತಿಯಲ್ಲಿ ಸೋಂಕು ಹರಡುತ್ತಿದೆ. ಇದರಿಂದ ಕೇರಳದಲ್ಲಿ ಹರಡುತ್ತಾ, ಈಗ ಕರ್ನಾಟಕದಲ್ಲೂ ಹರಡುತ್ತಿದೆ. ಇದರ ಹರಡುವಿಕೆ ತಡೆಯಲು ಈಗಿರುವ ಲಸಿಕೆಗಳು ಪರಿಣಾಮಕಾರಿಯಾಗಿವೆಯೇ ಎಂಬುದನ್ನು ತಿಳಿಯಲು ಅಧ್ಯಯನಗಳು ನಡೆಯಬೇಕಿದೆ.  ಏಕೆಂದರೆ ಮುಖ್ಯವಾಗಿ ಕೋವಿಡ್ – 19ರ ಬಗೆಗೆ ಅಧ್ಯಯನಗಳು ನಡೆಯುತ್ತಿವೆ. ಉಪತಳಿಗಳ ಬಗೆಗೆ ಅಧ್ಯಯನಗಳನ್ನು ಈಗ ಕೈಗೊಳ್ಳಬೇಕಿದೆ. ಇದರಿಂದ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ಇನ್ನು ಅಧ್ಯಯನಗಳು ಮೊದಲ ಹಂತದಲ್ಲಿಯೇ ಇದೆ.

JN.1

JN.1 ತಳಿಯ ಅಧ್ಯಯನವು WHO – World Health organization, ಅಮೆರಿಕಾದ ರೋಗ ನಿಯಂತ್ರಣ ಇವು ಇದರ ಬಗೆಗೆ ಅಧ್ಯಯನ ನಡೆಸುತ್ತಿವೆ. ಈ ತಳಿಯ ಬಗೆಗಿನ ಲಕ್ಷಣಗಳು ಇನ್ನೂ ತಿಳಿಯದೇ ಇರುವುದರಿಂದ ಇದನ್ನು ತಡೆಯುವ ಲಸಿಕೆ ಕುರಿತೂ ಸ್ಪಷ್ಟ ಮಾಹಿತಿಯನ್ನು ಪಡೆಯಲಿಕ್ಕಾಗಿಲ್ಲ.

WHO – ” ಯಾವ ಉಪತಳಿಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಎಂಥ ಪರಿಣಾಮ ಬೀರುತ್ತೆ ಎಂಬುದು ತಿಳಿದಿಲ್ಲ. ವೈರಾಣುವಿನ ಹೊಸ ಹೊಸ ಉಪತಳಿಗಳು ಪರಿಣಾಮ ಬೀರಬಹುದು ಮತ್ತು ಲಸಿಜೆ ಪ್ರಭಾವವನ್ನೂ ಮೀರಬಲ್ಲ ಶಕ್ತಿ ಹೊಂದಿದೆ” ಎಂದು ತಿಳಿಸಿದೆ‌ ಇದರಿಂದ JN.1 ರೂಪಾಂತರಿ ಯಾವ ರೀತಿಯ ಪ್ರಭಾವ ಮತ್ತು ಪರಿಣಾಮ ಯಾವ ರೀತಿ ಬೀರುತ್ತೆ ಎಂಬುದು ಅಧ್ಯಯನ ಮಾಡುವುದರಿಂದಲೇ ತಿಳಿಯಬೇಕಿದೆ.

ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಹಲವು ದೇಶಗಳು ಕೋವಿಡ್ ಸಂಬಂಧಿಸಿದಂತೆ ಲಸಿಕೆಗಳನ್ನು ಕಂಡುಹಿಡಿಯಲು ಮುಂದಾಗಿವೆ. ಕೆಲವು ದೇಶಗಳಲ್ಲಿ ಲಸಿಕೆಗಳನ್ನು ಕಂಡುಹಿಡಿಯಲಾಗಿದೆ. ಭಾರತದಲ್ಲಿ Covaxin, Covishield ನಂತಹ ಲಸಿಕೆಗಳು ಬಳಕೆಗೆ ಬಂದ ನಂತರ ಭಾರತದಲ್ಲಿ ಮೊದಲ ಡೋಸ್, ಎರಡನೇ ಡೋಸ್ ನೀಡಿದ ನಂತರ ಇತ್ತೀಚೆಗೆ ಬೂಸ್ಟರ್ ಡೋಸ್ ಅನ್ನು ನೀಡಲಾಯ್ತು. ಈ ಡೋಸ್ಗಳೇ ಉಪತಳಿಗಳ ಮೇಲೆ ಪರಿಣಾಮ ಬೀರುತ್ತವೆಯೇ ಎಂಬುದನ್ನು ಅಧ್ಯಯನದ ಮೂಲಕ ತಿಳಿಯಬೇಕಿದೆ.  ವಿಶ್ವ ಆರೋಗ್ಯ ಸಂಸ್ಥೆ JN.1 ಕೋವಿಡನ್ನು “ಆಸಕ್ತಿಯ ರೂಪಾಂತರಿ” ಎಂದು ವರ್ಗೀಕರಿಸಿದೆ. ಇದರೊಂದಿಗೆ ಇದರ ಅಪಾಯ ಕಡಿಮೆ ಎಂದು WHO ಹೇಳಿದೆ.

See this one: https://amzn.to/3NKTaNo

ಇದರ ರೋಗ ಲಕ್ಷಣಗಳು

ಹೆಚ್ಚಿನ ಅಧ್ಯಯನಗಳು ಇದರ ಮೇಲೆ ಆಗದಿರುವುದರಿಂದ ಕೋವಿಡ್ನ ವೈರಾಣುಗಳಂತೆಯೇ ಇದರ ಲಕ್ಷಣಗಳು ಎಂದು ಹೇಳಿದೆ ಇದರೊಂದಿಗೆ ಭಾರತ ಸರ್ಕಾರವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 

ಲಕ್ಷಣಗಳು

1 ತೀವ್ರಜ್ವರ

2 ಒಣಕೆಮ್ಮು

3 ಗಂಟಲು ಕೆರೆತ

4 ಉಸಿರಾಟದ ತೊಂದರೆ ಇವು ಸಾಮಾನ್ಯ ಲಕ್ಷಣಗಳಾಗಿವೆ.

ರೋಗ ಹರಡುವಿಕೆ ಒಂದು ಸೀನುವುದರಿಂದ ಹರಡುತ್ತದೆ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವಿಕೆ ಸೋಂಕಿತರಿಂದ ಮುಟ್ಟಿದ ವಸ್ತು ಬಳಕೆಯಿಂದ, ಸೋಂಕು ತಡೆಯುವಿಕೆ ಪದೇ ಪದೇ ಕೈ ತೊಳೆಯುವುದು  ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಸೋಂಕು ತಗುಲಿದ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವುದು ತಮ್ಮ ಜವಾಬ್ದಾರಿಯರಿತು ಮುನ್ನಡೆಯುವುದು.  ಮುಂತಾದವುಗಳನ್ನು ಮಾಡುವ ಮೂಲಕ ದೇಶದೊಳಗೆ ಅಥವಾ ರಾಜ್ಯದೊಳಗೆ ಹರಡುವಿಕೆಯನ್ನು ಕಡಿಮೆ ಮಾಡಬಹುದು ಹಾಗೆಯೇ ತಡೆಯಲುಬಹುದು

ReplyForwardAdd reaction

Leave a Comment

Your email address will not be published. Required fields are marked *

Scroll to Top