Devaru ruju madidanu – ದೇವರು ರುಜು ಮಾಡಿದನು – poem summary – 1

ದೇವರು ರುಜು ಮಾಡಿದನು -Devaru Ruju Madidanu
ದೇವರು ರುಜು ಮಾಡಿದನು -Devaru Ruju Madidanu
Kuvempu
Kuvempu

Devaru ruju madidanu – ಕವಿ ಕಾವ್ಯ ಪರಿಚಯ : ಕೆ.ವಿ. ಪುಟ್ಟಪ್ಪ


Devaru ruju Madidanu – ಕುವೆಂಪು ಎಂಬ ಕಾವ್ಯನಾಮದಿಂದ ಹೆಸರಾದವರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. “ಶ್ರೀರಾಮಾಯಣ ದರ್ಶನಂ” ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡದ ಮೊದಲ ಸಾಹಿತಿ ಇವರು ರಾಷ್ಟ್ರಕವಿ, ಹಾಗೂ ಅನೇಕ ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್‌ಗಳಿಗೆ ಭಾಜನರಾಗಿದ್ದಾರೆ.
ಕೊಳಲು, ಪಾಂಚಜನ್ಯ, ಕೋಗಿಲೆ ಮತ್ತು ಸೋವಿಯತ್‌ರಷ್ಯಾ, ಕೃತ್ತಿಕೆ ಮೊದಲಾದ ಕವನ ಸಂಕಲನಗಳು, “ಕಾನೂರು ಸುಬ್ಬಮ್ಮಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಶ್ರೇಷ್ಠ ಕಾದಂಬರಿಗಳು. ಸಣ್ಣಕತೆ, ನಾಟಕ, ಸಾಹಿತ್ಯ ವಿಮರ್ಶೆ, ಆತ್ಮಚರಿತ್ರೆ, ಜೀವನಚರಿತ್ರೆ, ಮಕ್ಕಳ ಸಾಹಿತ್ಯ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿಯೂ ಪ್ರಸಿದ್ದರಾದ ಇವರು ವಿಶ್ವ ಕವಿಯಾಗಿದ್ದಾರೆ.

ದೇವರು ರುಜು ಮಾಡಿದನು:

ರಸವಶನಾಗುತ ಕವಿ ಅದ ನೋಡಿದನು!

See this Video: https://youtu.be/gak19GNKNSo?si=n_QmOb-6zFFTGnlm

ಬಿತ್ತರದಾಗಸ ಹಿನ್ನೆಲೆಯಾಗಿದೆ

ಪರ್ವತದೆತ್ತರ ಸಾಲಾಗೆಸೆದಿರೆ

ಕಿಕ್ಕಿರಿದಡವಿಗಳಂಚಿನ ನಡುವೆ

ಮೆರೆದಿರೆ ಜಲಸುಂದರಿ ತುಂಗೆ

ದೇವರು ರುಜು ಮಾಡಿದನು:

ರಸವಶನಾಗುತ ಕವಿ ಅದ ನೋಡಿದನು!

ನದಿ ಹರಿದಿತ್ತು; ಬನ ನಿಂತಿತ್ತು;

ಬಾನ್ ನೀಲಿಯ ನಗೆ ಬೀರಿತ್ತು.

ನಿರ್ಜನ ದೇಶದ ನೀರವ ಕಾಲಕೆ

ಖಗರವ ಪುಲಕಂ ತೋರಿತ್ತು.

ಹೂಬಿಸಿಲಲಿ ಮಿರುಗಿರೆ ನಿರಿವೊನಲು

ಮೊರೆದಿರೆ ಬಂಡೆಗಳಲ್ಲಿ ನೀರ್ತೊದಲು

ರಂಜಿಸೆ ಇಕ್ಕೆಲದಲಿ ಹೊಮ್ಮಳಲು

ಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತ

ಕವಿಮನ ನಾಕದಿ ನೆಲಸಿತ್ತು;

ಮಧು ಸೌಂದರ್ಯದ ಮಧುರ ಜಗತ್ತು

ಹೃದಯ ಜಿ.ಗೆ ಜೇನಾಗಿತ್ತು!

Also Read this poem summaryhttps://rvwritting.com/blen-heem-kadana/

ದೃಶ್ಯ ದಿಗಂತದಿನೊಮ್ಮೆಯೆ ಹೊಮ್ಮಿ

ಗಿರಿವನ ಪಟದಾಕಾಶದಲಿ

ತೇಲುತ ಬರಲ್ಕೆ ಬಲಾಕಪಂಕ್ತಿ

ಲೇಖನ ರೇಖಾನ್ಯಾಸದಲಿ,

ಅವಾಹ್ಮಯ ಛಂದಃಪ್ರಾಸದಲಿ,

ಸೃಷ್ಟಿಯ ರಚನೆಯ ಕುಶಲಕೆ ಚಂದಕೆ

ಜಗದಚ್ಚರಿಯಂದದ ಒಪ್ಪಂದಕೆ

ಚಿರಚೇತನ ತಾನಿಹೆನೆಂಬಂದದಿ

ಬೆಳ್ಳಕ್ಕಿಯ ಹಂತಿಯ ಆ ನೆವದಿ

ದೇವರು ರುಜು ಮಾಡಿದನು

ರಸವಶನಾಗುತ ಕವಿ ಅದ ನೋಡಿದನು.

Devaru ruju Madidanu – Summary

ದೇವರು ರುಜು ಮಾಡಿದನು ಕುವೆಂಪುರವರ ಪಕ್ಷಿಕಾಶಿ ಕವನ ಸಂಕಲನದಿಂದ ದೇವರು ರುಜು ಮಾಡಿದನು ಎಂಬ ಪದ್ಯವನ್ನು ಆರಿಸಿಕೊಳ್ಳಲಾಗಿದೆ ಈ ಪದ್ಯವು ಪ್ರಕೃತಿ ಕವಿತೆಗಳಲ್ಲೊಂದಾಗಿದ್ದು ಇದು ಪ್ರಕೃತಿಯ ಸೃಷ್ಟಿಯ ಹಿಂದೆ ನಾನಿದ್ದೇನೆ ಎಂಬುದನ್ನು ಬೆಳ್ಳಕ್ಕಿ ಸಾಲುಗಳ ಮೂಲಕ ತೋರಿಸಿದ್ದಾರೆ

ಪ್ರಕೃತಿಯಲ್ಲಿ ದೇವರನ್ನು ಕಾಣೋ ಎಂಬಂತೆ ಪ್ರಕೃತಿಯ ಸೌಂದರ್ಯಕ್ಕೆ ಬೆರಗಾಗಿ ದೇವರೇ ತನ್ನ ರುಜು ಅಥವಾ ಸಹಿಯನ್ನು ಮಾಡಿದ್ದಾನೆ ಅದನ್ನು ನೋಡುತ್ತಿರುವ ನಾನು ಮೈ ಮರೆತು ನೋಡುತ್ತಿದ್ದೇನೆ. ಇದರ ಮೂಲಕ ನಾನು ಪ್ರಕೃತಿಯಲ್ಲಿದ್ದೇನೆ ಎಂಬುದನ್ನು ತಿಳಿಸುತ್ತದೆ

ಪ್ರಕೃತಿಯ ಸೌಂದರ್ಯದ ವರ್ಣನೆಯ ಹಿನ್ನೆಲೆಯಲ್ಲಿ ಇದನ್ನು ನೋಡಬಹುದು ಪ್ರಕೃತಿಯ ನಡುವಲ್ಲಿ ವಿಸ್ತಾರವಾಗಿ ಹರಡಿರುವ ಆಕಾಶವು ಹಿನ್ನೆಲೆಯಾಗಿದ್ದು ಅದರ ಅಡಿಯಲ್ಲಿ ಎತ್ತರೆತ್ತರದ ಪರ್ವತಗಳು ಸಾಲು ಸಾಲಾಗಿ ನಿಂತಿವೆ ಒತ್ತೊತ್ತಾಗಿ ಬೆಳೆದಿರುವ ಅರಣ್ಯದ ನಡುವಿನಿಂದ ಜಲಸುಂದರಿಯಾದ ತುಂಗೆಯು ವಯ್ಯಾರದಿಂದ ಹರಿಯುತ್ತಿದ್ದಾಳೆ ಅದನ್ನು ನೋಡುತ್ತಿರುವ ಕವಿ ಇಂತಹ ಪ್ರಕೃತಿಯ ಸೊಬಗನ್ನು ಮೈ ಮರೆತು ನೋಡುತ್ತಿದ್ದಾನೆ.

ಕವಿಯ ಮನಸ್ಸು ಹರಿಯುತ್ತಿರುವ ತುಂಗಾ ನದಿ ನೋಡಿ ಅಲ್ಲೇ ಇದ್ದ ದಟ್ಟ ಅರಣ್ಯವನ್ನು ನೋಡುವುದರೊಂದಿಗೆ ವಿಸ್ತಾರವಾಗಿ ನೆಲೆ ನಿಂತಿರುವ ನೀಲಿಯ ಆಕಾಶವು ನಗೆಯನ್ನು ಬೀರುವಾಗ ಯಾರು ಇಲ್ಲದಂತಿರುವ ಸಂದರ್ಭದಲ್ಲಿ ಯಾವುದೇ ಶಬ್ದವು ಕೇಳಿ ಬರುತ್ತಿಲ್ಲ ಅಂತಹ ನಿಶಬ್ದದ ಸಂದರ್ಭದಲ್ಲಿ ಎಲ್ಲಿಂದಲೋ ಆರಿ ಬಂದ ಪಕ್ಷಿಗಳ ಗುಂಪು ತಮ್ಮ ಗಾನಸುದೆಯನ್ನು ಹರಿಸಿ ಮುಂದೊಗುತ್ತಿದ್ದವು.

ಸೂರ್ಯೋದಯದ ಬೆಳಕಿನಲ್ಲಿ ಹರಿಯುವ ನದಿಯು ಬೋರ್ಗರಿಯುತ್ತ ಬಂಡೆ ಬಂಡೆಗಳನ್ನು ತಾಗಿ ಹರಿಯುವ ನದಿಯ ಜುಳು ಜುಳು ಶಬ್ದವು ಕಿವಿಯನ್ನು ರಂಜಿಸುತ್ತ ಹರಿಯುವಾಗ ಎರಡು ದಂಡೆಗಳಲ್ಲಿ ಹಳದಿಯ ಮರಳು ಕಾಣಿಸುವುದರೊಂದಿಗೆ ಸೂರ್ಯನ ಬೆಳಕು ಅದರ ಮೇಲೆ ಬಿದ್ದು ಅದರ ವೈಭವವನ್ನು ಅದರ ಬಣ್ಣವನ್ನು ಹೆಚ್ಚಿಸುವ ಇಂತಹ ಹೊಳೆಯು ಹರಿಯುವ ಸಿಬ್ಬಲುಗುಡ್ಡೆಯಲಿ ಮಿಯುವುದರೊಂದಿಗೆ ಕವಿಯ ಮನಸ್ಸು ಎಂಬುದು ಸ್ವರ್ಗದಲ್ಲಿ ನೆಲೆಸಿದ್ದೇನೋ ಎಂಬಂತೆ ಭಾವವನ್ನು ಪಡೆಯಿತು.

ಪ್ರಕೃತಿಯ ಸೌಂದರ್ಯ ಎಂಬುದು ಕವಿಯ ಮನಸ್ಸಿಗೆ ಆನಂದವನ್ನು ಉಂಟುಮಾಡುವುದರೊಂದಿಗೆ ಹೃದಯದ ನಾಲಿಗೆಗೆ ಆಸ್ವಾಧನೆಗೆ ಸಂತೋಷವನ್ನುಂಟು ಮಾಡುತ್ತಿದೆ.

ಆಕಾಶ ಮತ್ತು ಪ್ರಕೃತಿ ಎರಡು ಸಂಧಿಸುವ ಜಾಗದಲ್ಲಿ ಬೆಳ್ಳಕ್ಕಿಯ ಹಿಂಡುಗಳು ಸಾಲಾಗಿ ಬರುತ್ತಿವೆ. ಆ ಸಾಲುಗಳು ಹೇಗೆ ಕಾಣುತ್ತಿದೆ ಎಂದರೆ ಬರವಣಿಗೆಯ ವಿನ್ಯಾಸದಲ್ಲಿರುವಂತೆ ಯಾವ ಚಂದೂ ನಿಯಮಗಳು ಇಲ್ಲದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹಾರುತ್ತಾ ಬರುತ್ತಿವೆ ಇಂತಹ ಸೃಷ್ಟಿಯ ಕೌಶಲ್ಯಕ್ಕೆ ಚಂದಕ್ಕೆ ಈ ಜಗತ್ತಿನ ಅಚ್ಚರಿಯ ಸೊಬಗಿಗೆ ಒಳಗಾಗಿದ್ದೇನೆ. ಇಂತಹ ಪ್ರಕೃತಿಯ ಸೊಬಗನ್ನು ಹೊಂದಿರುವಲ್ಲಿ ನಾನು ಇದ್ದೇನೆ ಎಂದು ಬೆಳ್ಳಕ್ಕಿಯ ಸಾಲಿನ ನೆವದಿಂದ ದೇವರು ಪ್ರಕೃತಿಯಲ್ಲಿ ತನ್ನ ಇರುವಿಕೆಯನ್ನು ಬೆಳ್ಳಕ್ಕಿಯ ಇಂಡನ್ನೇ ತನ್ನ ಸಹಿ ಎಂಬಂತೆ ತನ್ನ ಅಸ್ತಿತ್ವವನ್ನು ಇಲ್ಲಿ ತೋರಿಸುತ್ತಿದ್ದಾನೆ ಇಂತಹ ಪ್ರಕೃತಿಯ ವಿಸ್ಮಯಕ್ಕೆ ಕವಿ ಮೈ ಮರೆಯುತ್ತಿದ್ದಾನೆ.

ಈ ಕವಿತೆಯು ಪ್ರಕೃತಿಯ ವೈಭವ ಸೌಂದರ್ಯ ವೈಚಿತ್ರಗಳಿಂದ ಕೂಡಿರುವುದನ್ನು ತೋರುವ ಮೂಲಕ ಪ್ರಕೃತಿಯೇ ದೇವರು ಎಂಬುದನ್ನು ಕವಿತೆಯು ಸಾರುತ್ತದೆ.

Leave a Comment

Your email address will not be published. Required fields are marked *

Scroll to Top