Dhanyavadagalu poem summary – ಧನ್ಯವಾದಗಳು ಪದ್ಯದ ಭಾವಾರ್ಥ – – 1st BBA – BCU

ಧನ್ಯವಾದಗಳು - Dhanyavadagalu
ಧನ್ಯವಾದಗಳು – Dhanyavadagalu

Dhanyavadagalu – ಲಲಿತಾ ಸಿದ್ದಬಸವಯ್ಯ – ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರು ಬಿ.ಎಸ್ಸಿ.ಪದವೀಧರೆ, 27-02-1955 ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ. ‘ಮೊದಲ ಸಿರಿ, ಇಹದ ಸ್ವರ, ಬಿಡಿಹರಳು (ಹನಿಗವನಗಳು), ಕಬ್ಬಿನೆಲ, ದಾರಿನೆಂಟ, ಇನ್ನೊಂದು ಸಭಾಪರ್ವ’ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ‘ಮಿ. ಛತ್ರಪತಿ ಆನೆಘಟ್ಟ ಪ್ರಶಸ್ತಿ, ರಾಜ್ಯ ಸಾಹಿತ್ಯಅಕಾಡೆಮಿ ಬಹುಮಾನ, ಬಿ.ಎಂ. ಶ್ರೀ. ಕಾವ್ಯ ಪ್ರಶಸ್ತಿ, ಪುತಿನಕಾವ್ಯ ಪ್ರಶಸ್ತಿ, ಮಾಣಿಕಬಾಯಿಕಾವ್ಯ ಪ್ರಶಸ್ತಿ, ಕಾವ್ಯಾನಂದ ಮುಂಬೈ ಹೊರನಾಡು ಪ್ರಶಸ್ತಿ, ಅಂಜೂರ ಪ್ರತಿಷ್ಠಾನದರಾಜ್ಯ ಪ್ರಶಸ್ತಿ’ ಲಭಿಸಿವೆ. ಧನ್ಯವಾದಗಳು ಪದ್ಯವನ್ನುಕೆಬ್ಬೆನೆಲ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

Dhanyavadagalu – Summary

ದೇವರೇ

ನಾವು ನಿನ್ನನ್ನು ಅನುವಾದಿಸುತ್ತಿದ್ದೇವೆ

ಕ್ಷಣಕ್ಷಣವೂ ನೀನು ಅನುವಾದಗೊಳ್ಳುತ್ತೀಯ

ಭೂಮಂಡಲದ ಮೇಲಿರುವ ಅಷ್ಟೂ ಭಾಷೆಗಳಲ್ಲಿ

ಏಕಕಾಲಕ್ಕೆ ಎಲ್ಲೆಡೆಯಲ್ಲಿ

ಎಲ್ಲಾ ತಾಯಂದಿರ ಪ್ರಕಟಿತ ಸಾಹಿತ್ಯದಲ್ಲಿ

ದೇವರೇ ಇಲ್ಲಿ ಕವಿಯತ್ರಿಯು ಹೆಣ್ಣು ತನ್ನ ದೇಹದ ಮೂಲಕ ಇನ್ನೊಂದು ಜೀವಕ್ಕೆ ಸೃಷ್ಟಿ ನೀಡುವುದನ್ನು ಇಲ್ಲಿ ಅನುವಾದ ಎಂದು ಕರೆದಿದ್ದಾರೆ. ಅದನ್ನೇ ಪ್ರಪಂಚದಲ್ಲೆಲ್ಲಾ ಕ್ಷಣ ಕ್ಷಣವು ಸೃಷ್ಟಿ ಕ್ರಿಯೆ  ನಡೆಯುತ್ತಿರುವುದರಿಂದ ಪ್ರತಿದಿನವೂ, ಪ್ರತಿ ಕ್ಷಣವೂ ದೇವರು ಅನುವಾದಗೊಳ್ಳುತ್ತಿದ್ದಾನೆ. ಇದು ಇಡೀ ಭೂಮಂಡಲದ ಯಾವುದೇ ಭಾಷೆ ಸಾಹಿತ್ಯಗಳಲ್ಲ, ಅಪ್ರಕಟಿತವಾದ ಎಲ್ಲಾ ತಾಯಂದಿರ ಅನುವಾದದಲ್ಲಿ ಪ್ರಕಟಗೊಳ್ಳುತ್ತಿದ್ದೀಯಾ ಎಂದು ಹೇಳಿದ್ದಾರೆ.

See the video:https://youtu.be/cOjpADB5YlU

ದೇವರೇ

ನಮಗೆ ಗೊತ್ತಿಲ್ಲ ಇದರ ಲಿಪಿ

ನಮ್ಮ ಅಂಗೈಗಳ ನೇವರಿಕೆಯಲ್ಲಿ

ನಮ್ಮ ತೋಳುಗಳ ಬಿಗಿ ಮಡಿಕೆಯಲ್ಲಿ

ನಮ್ಮ ತೊಡೆಗಳು ರಚಿಸುವತೊಟ್ಟಿಲ ತಗ್ಗಿನಲ್ಲಿ

ನಮ್ಮ ಹಾಲುದುಂಬಿದ ಮೊಲೆಗಳಲ್ಲಿ

ಅದಕ್ಕೂ ಮೊದಲು ಮಾಂಸ ಮಜ್ಜೆಯಗರ್ಭಚೀಲದಲ್ಲಿ

ನಾವು ನಿನ್ನನ್ನು ಅನುವಾದಿಸುತ್ತಿರುತ್ತೇವೆ

ಮೂಲಕ್ಕೆ ಸದಾ ಸನಿಹವಾಗಿ

ನಿನ್ನ ಆಶಯಗಳಿಗೆ ಸದಾ ಬದ್ಧರಾಗಿ

ಅನುವಾದ ಎಂದರೆ ಒಂದು ಪುಸ್ತಕ ಓದಿ ಅದನ್ನು ಅರ್ಥೈಸಿಕೊಂಡು ಅದರ ಭಾಷೆ –  ಲಿಪಿ ತಿಳಿದು ಮೂಲ ಕೆಡಸದಂತೆ ಅನುವಾದ ಮಾಡಲು ನಮಗೆ ಗೊತ್ತಿಲ್ಲ. ಆದರೆ ಅನುವಾದ ಕಾರ್ಯ ಎಂದರೆ ಸೃಷ್ಟಿಯ ಅನುವಾದ ನಮಗೆ ಗೊತ್ತಿದೆ. ಅದು ಸೃಷ್ಟಿಯಿಂದ ಬಂದ ಕಂದನನ್ನು ನಮ್ಮ ಅಂಗೈಗಳಿಂದ ಪ್ರೀತಿ ಕರುಣೆಗಳಿಂದ ಸಾಂತ್ವನ ಗೊಳಿಸಿ, ನಮ್ಮ ತೋಳುಗಳ ಮೇಲೆ ಎತ್ತಿಕೊಂಡು ಬಿಗಿದಪ್ಪಿ ಹಿಡಿದು, ಅವು ಅತ್ತಾಗ ತಮ್ಮ ತೊಡೆಗಳನ್ನೇ ತೊಟ್ಟಿಲಂತೆ ಮಾಡಿ ಪೋಷಿಸುತ್ತೇವೆ. ನಮ್ಮ ಎದೆಯಲ್ಲಿನ ಹಾಲು ತುಂಬಿರುವ ಮೊಲೆಗಳ ಮೂಲಕ ಹಾಲುಣಿಸಿ ಪಾಲನೆ ಪೋಷಣೆ ಮಾಡುವ ಮೊದಲು ನಮ್ಮ ಹೊಟ್ಟೆಯಲ್ಲಿ ಮಾಂಸ ಮಜ್ಜೆ ತುಂಬಿದ ಗರ್ಭಚೀಲದಲ್ಲಿ ಪೋಷಿಸುವುದರೊಂದಿಗೆ ಅದಕ್ಕೆ ಜನ್ಮ ನೀಡುವ ಅನುವಾದವನ್ನು ಮಾಡುತ್ತೇವೆ. ಅದು ಮೂಲಕ್ಕೆ ಎಂದೂ ದಕ್ಕೆ ಬರದ ರೀತಿಯಲ್ಲಿ ಅನುವಾದ ಮಾಡುತ್ತೇವೆ.

Also read : https://rvwritting.com/2-suggi-barutide-poem-summary-2-%e0%b2%b8%e0%b3%81%e0%b2%97%e0%b3%8d%e0%b2%97%e0%b2%bf-%e0%b2%ac%e0%b2%b0%e0%b3%81%e0%b2%a4%e0%b2%bf%e0%b2%a6%e0%b3%86-%e0%b2%aa%e0%b2%a6%e0%b3%8d%e0%b2%af/

ದೇವರೇ

ನಮ್ಮನ್ನು ಆಶೆಬುರುಕಿಗಳಾಗಿಸದಿರು

ಆಕರಕೆಅಪಚಾರವೆಸಗದಂತೆ ಎಚ್ಚರಿಸುತಿರು

ಈ ಅನುವಾದಕ್ಕೆ ನಾವು ರುಸುಮು ಬೇಡದಂತಿರಲಿ

ಎಲ್ಲ ಹಕ್ಕುಗಳೂ ನಿನ್ನ ಸೌಜನ್ಯದಲ್ಲೇ ಇರಲಿ

ದೇವರೇ ನಾವು ಹೆಚ್ಚೆಚ್ಚು ಅನುವಾದ ಮಾಡುತ್ತಾ ಹೋಗಿ ಮೂಲ ಲೇಖಕನನ್ನೇ ಮರೆತು ಬಿಡುವ ಆಸೆ ಬುರುಕಿಗಳಾಗುವಂತೆ ಮಾಡದಿರು. ಸೃಷ್ಟಿಕ್ರಿಯೆ ಬೇಕು ಅಷ್ಟಕ್ಕೇ ನಾವು ಸೀಮಿತವಾಗಿರುವಂತೆ ಮಾಡು ಇಲ್ಲದಿದ್ದರೆ ಎಲ್ಲ ಮೂಲವನ್ನು ನಮ್ಮ ಮೇಲೆ ಹಾಕಿಕೊಂಡು ಆಚಾರಕ್ಕೆ ಅಪಚಾರವೆಸಗುವಂತೆ, ಅಪಚಾರ  ಮಾಡದಿರುವಂತೆ, ಸ್ವಚ್ಛಯಾಗದಂತೆ ತಡೆದು ಎಲ್ಲಾ ಮೂಲ ಕಾರ್ಯ ನಿನ್ನಲ್ಲಿರಲಿ, ನನ್ನಲ್ಲಿ ಅನುವಾದಿಸುವ ಕಾರ್ಯ ಹೊಂದಿದ್ದರೆ ಅದೇ ಸೌಜನ್ಯದಂತಿರುತ್ತದೆ ಎಂದು ಹೇಳಿದ್ದಾರೆ.

ದೇವರೇ

ಧನ್ಯವಾದಗಳು

ನಮ್ಮನ್ನು ಮಾತ್ರ ನಿನ್ನ ಅನುವಾದಕರಾಗಿ

ಆಯ್ದುಕೊಂಡದ್ದಕ್ಕೆ!

ದೇವರೇ ನಿನಗೆ ಧನ್ಯವಾದಗಳು ಎಂಬ ಕೃತಜ್ಞತೆಯನ್ನು ಲೇಖಕಿ ಸಲ್ಲಿಸುತ್ತಿದ್ದಾಳೆ. ಜೈವಿಕವಾಗಿ ಹೆಣ್ಣಿಗೆ ಎಷ್ಟೇ ಸಮಸ್ಯೆಗಳಿದ್ದರೂ ಆ ಸಮಸ್ಯೆಗಳ ನಡುವೆಯೂ ಜಗತ್ತನ್ನು ಮುಂದುವರಿಸುವ ಸೃಷ್ಟಿಕ್ರಿಯೆಗೆ ನನ್ನನ್ನು ಅನುವಾದಕರಾಗಿ ಆಯ್ದುಕೊಂಡಿದ್ದಕ್ಕೆ ನಾನು ನಿನಗೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಈ ಕವಿತೆಯು ಹೆಣ್ಣಿನ ದೇಹದ ಮಾನಸಿಕ ಶಕ್ತಿಯ ಬಗೆಗೆ ತಿಳಿಸುತ್ತಾ ಸೃಷ್ಟಿಕ್ರಿಯೆಯ ಪ್ರಧಾನತೆಯ ಮುಖ್ಯ ಪಾತ್ರ ವಹಿಸಿದ್ದಾಳೆ ಎಂಬುದನ್ನು ತಿಳಿಸುತ್ತದೆ.

Leave a Comment

Your email address will not be published. Required fields are marked *

Scroll to Top